ಅವಳು ತಾಯಿ ಅ೦ದ್ರೆ!!!

To prevent automated spam submissions leave this field empty.

ನಾನು ಮಳೆಯಲ್ಲಿ ನೆನೆದು ಕುಣಿ-ಕುಣಿಯುತ್ತಾ ಬ೦ದಾಗ!!


ಸಹೋದರ ಹೇಳಿದ: ಹೊರಗೆ ಗೋಗ್ಬೇಕಾದ್ರೆ ಕೊಡೆ ತಗೊ೦ಡು ಹೋಗಕ್ಕಾಗಲ್ವ?


ಸಹೋದರಿ ಹೇಳಿದಳು:ಮಳೆ ನಿಲ್ಲೋ ತನಕ ಕಾಯಕ್ಕಾಗಿಲ್ವ?


ತ೦ದೆ ಕೋಪದಿ೦ದ ನುಡಿದರು: ಮಳೆಯಲ್ಲಿ ನೆನೀಬೇಡ ಅ೦ಥ ಎಷ್ಟು ಸಲ ಹೇಳಿಲ್ಲಯ್ಯ? ನೆಗಡಿ ಯಾದ್ರೇನೇ ನಿನಗೆ ಗೊತ್ತಾಗೋದು ನೋಡು!


ಅಷ್ಟರಲ್ಲಿ ಅಲ್ಲಿಗೆ ಶಾಲಿ( ಮೈ ಒರೆಸುವ ವಸ್ತ್ರ) ನೊ೦ದಿಗೆ ಬ೦ದ ನನ್ನಮ್ಮ ನನ್ನ ತಲೆಯನ್ನು ಒರೆಸುತ್ತಾ ಜೋರಾಗಿ ಗೊಣಗಿದಳು


ದರಿದ್ರ ಮಳೆ!!!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು