`ಬಚ್ಚಿಟ್ಟಿದ್ದು ಪರರಿಗೆ'

To prevent automated spam submissions leave this field empty.

ನಾನು ಅಂತರಜಾಲಾಡುತ್ತಿದ್ದಾಗ ಇಲ್ಲಿ ವಿಲಕ್ಷಣ ಬಚ್ಚಿಡುವ ತಾಣಗಳನ್ನು ನೋಡಿದೆ. ತಕ್ಷಣ ನನ್ನ ಮಡದಿಯನ್ನು ಕರೆದು ಅದನ್ನು ತೋರಿಸಿದೆ. ಅದನ್ನು ಮೆಚ್ಚುವುದರ ಜೊತೆಗೆ ಒಂದು ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡರು. ಯಾರದೋ ಮನೆಯಲ್ಲಿ ಒಂದು ಸಮಾರಂಭ. ಅಡಿಗೆಯವರು ಮೊದಲೇ ಕೊಟ್ಟಿದ್ದ ಅಕ್ಕಿ ಸಾಲಲಿಲ್ಲ ಅಂತ ಮತ್ತೊಂದಷ್ಟು ಅಕ್ಕಿ ಕೇಳಿದರು. ಅಂಗಡಿಯಿದ ತರಿಸಿಕೊಡುವಷ್ಟು ಸಮಯವಿರಲಿಲ್ಲ. ಮನೆಯಲ್ಲಿದ್ದ ಅಕ್ಕಿಡಬ್ಬವನ್ನೇ ಕೊಟ್ಟು ಅಡಿಗೆ ಮುಂದುವರಿಸಲು ಹೇಳಿದರು. ಮನೆಯ ಒಡತಿ ಅಕ್ಕಿ ಡಬ್ಬದಲ್ಲಿ ಒಡವೆಗಳನ್ನು ಬಚ್ಚಿಡುವ ಪದ್ಧತಿ ಇಟ್ಟುಕೊಂಡಿದ್ದಳು. ಇದು ಯಾರಿಗೂ ಗೊತ್ತಿರಲಿಲ್ಲ. ಹಾಗೇ ಅಡಿಗೆಮಾಡುತ್ತಿದ್ದ ಜಾಗಕ್ಕೆ ಹೋಗಿದ್ದ ಒಡತಿಗೆ ಅಕ್ಕಿ ಡಬ್ಬ ಅಲ್ಲಿದ್ದು ನೋಡಿ ಗಾಬರಿ ಆಯಿತು. ತಕ್ಷಣ ತಪಾಸಣೆ ಪ್ರಾರಂಭಿಸಿದರು. ಭಂಡಾರ ಸಿಕ್ಕ ಅಡಿಗೆಯವರು ಬಿಟ್ಟುಕೊಡುತ್ತರೆಯೇ? `ತಾರಮ್ಮಯ್ಯ' ಅಂದುಬಿಟ್ಟರಂತೆ.

ವಿಲಕ್ಷಣ ಬಚ್ಚಿಡುವ ತಾಣಗಳಿಗೆ ಮೊರೆಹೋಗುವವರು `ಬಚ್ಚಿಟ್ಟಿದ್ದು ಪರರಿಗೆ' ಎಂಬ ಗಾದೆ ನೆನಪಿಟ್ಟುಕೊಂಡಿರಲಿ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಈ ಮಾತು ಕೇಳಿದಾಗೆಲ್ಲ ನನಗೆ ಬ್ಯಾಂಕ್ ನೆನಪಾಗುತ್ತದೆ. ಬ್ಯಾಂಕ್ ನಲ್ಲಿ ಇಟ್ಟ ದುಡ್ಡು ನಮ್ಮದ? ಅಥವ ಬ್ಯಾಂಕ್ ದ? ನಮ್ಮದು ಅಂತ ಆದ್ರೆ ಬ್ಯಾಂಕು ಅದನ್ನ ಉಪ್ಯೋಗಿಸುತ್ತದಲ್ಲ! ಆದ್ದರಿಂದ ಅದು ಬ್ಯಾಂಕಿನದು ಕೂಡ. :-) So ಬಚ್ಚಿಟ್ಟದ್ದು ನಮಗೂ, ಪರರಿಗೂ... 2 ಇನ್ 1... :-)