ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು !

To prevent automated spam submissions leave this field empty.

ಮೇ ತಿ೦ಗಳ ಒಂಬತ್ತನೇ ತಾರೀಖು 'ಅಮ್ಮಂದಿರ ದಿನ' ...


ಅಮ್ಮ'ನ ಬಗ್ಗೆ ಎಷ್ಟು ಬರೆದರೂ ಸಾಲದು ನಿಜ, ಅದಕ್ಕೆ, ಮತ್ತೆ ಚಲನ ಚಿತ್ರಗಳ ಹಾಡಿಗೆ ಮೊರೆಹೋಗುತ್ತಿರುವೆ ನನ್ನ ಮನದಲ್ಲಿ ಸುಳಿದ ಹಲವು ಹಾಡುಗಳು ಹೀಗಿವೆ …..


ಈ ಸಾರಿ ನಾನು ಈ ಹಾಡು ಯಾವ ಚಿತ್ರದ್ದು ಅಂತ ಕೇಳುವುದಿಲ್ಲ. ಬದಲಿಗೆ ಯಾವ ನಟ/ನಟಿಯರ ಮೇಲೆ ಚಿತ್ರಿತವಾಗಿದೆ ಎಂದು ಹೇಳಿ


ಮುಖ್ಯವಾಗಿ 'ಅಮ್ಮ'ನ ಹಾಡಿನ ಈ ಸರಣಿಗೆ ನಿಮಗೆ ಗೊತ್ತಿರುವ ಹಾಡುಗಳನ್ನು ಸೇರಿಸಿ :


೧ ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು, ನಿನ್ನ ಸಂಗ ಆಡಲೆಂದು ಬಂದೆ ನಾನು ....


೨ ಅಮ್ಮ ನೀನು ನಕ್ಕರೆ, ನಮ್ಮಾ ಬಾಳೆ ಸಕ್ಕರೆ ...


೩ ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ ?


೪ ಅಮ್ಮಾ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ, ಬಾಳಲೇ ಬೇಕು ಈ ಮನೆ ಬೆಳಕಾಗಿ


೫ ಅಮ್ಮಾ ಎಂದರೆ ಏನೋ ಹರುಷವು, ನಮ್ಮಾ ಬಾಳಿಗೆ ಅವಳೇ ದೈವವು


೬ ತಾಯಿ ತಾಯಿ ಲಾಲಿ ಹಾಡು ಭೂಮಿ ತಾಯಿಗೆ, ಲಾಲಿ ಹಾಡು ಹೆತ್ತ ತಾಯಿಗೆ


೭ ಅಮ್ಮಾ, ಅಮ್ಮಾ ಎಂದು ಕೂಗಿದರೆ ಮೈ ನವಿರೇಳುವುದೂ, ಅಮ್ಮಾ ಎಂದು ಹಾಡಿದರೆ ಜಗವೇ


೮ ನಿಜ ಹೇಳುವೆನು ಅಮ್ಮ ನಿನ್ನ ಕಂಡರೆ ಪ್ರೀತಿ


೯ ಕೈ ತುತ್ತು ಕೊಟ್ಟವಳೇ ಐಯ್ ಲವ್ ಯು ಮಯ್ ಮದರ್ ಇಂಡಿಯಾ


 


ಅಮ್ಮಂದಿರ ದಿನದ ಅಂಗವಾಗಿ ಎಲ್ಲ ಅಮ್ಮಂದಿರಿಗೆ ಹಾರ್ದಿಕ ಶುಭಾಶಯಗಳು. ಭಗವಂತ ಎಲ್ಲೆಡೆ ತಾನೇ ಇರಲು ಸಾಧ್ಯವಿಲ್ಲ ಎಂದು ಸೃಷ್ಟಿ ಮಾಡಿದ ಜೀವಿ ಎಂದರೆ 'ಅಮ್ಮ' ಎಂದು ಹೇಳುತ್ತಾರೆ.


ಏನೆಂದಿರಿ ಟೆಕ್ಕಿಗಳೇ? ಔಟ್ ಸೋರ್ಸ್ ಅಂದಿರಾ? ಒಂಥರಾ ಅಂಗೇಯಾ ....

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

೧-ಕಲ್ಪನಾ ೩-ಬಿ ಸರೋಜಾ ದೇವಿ,ಪುನಿತ್ ೫-ವಿಷ್ಣು- ದ್ವಾರಕೀಶ ೮-ಅಂಬಿಕ, ಮಾ.ಹೆಸರು ಗೊತ್ತಿಲ್ಲ ೯-ಪ್ರಭಾಕರ ,ಪಂಡರೀಬಾಯಿ ಎಲ್ಲ ಅಮ್ಮಂದಿರಿಗೆ ಹಾರ್ದಿಕ ಶುಭಾಶಯಗಳು..

ನನಗೆ ಒಂದು ಹಾಡು ನೆನಪಿಗೆ ಬರುತಿದೆ.. "ಅಮ್ಮ ಎಂದರೆ ಮೈ ಮನವೆಲ್ಲ ಹೂ ವಾಗುವುದಮ್ಮ ಎರಡಕ್ಷರದಲಿ ಏನಿದೆ ಶಕ್ತಿ ತಿಳಿದವರಾರಮ್ಮ..." ಜಾನಕಿಅವರ ಸುಮಧುರಗಾನ..ಹೆಸರು "ತಾಯಿಗಿಂತ ದೇವರಿಲ್ಲ" ಬಹುಷಃ ಮಂಜುಳಾ ಮೇಲೆ ಚಿತ್ರಿತವಾಗಿತ್ತು...

ಸಕ್ಕತ್ ಹಾಡು... ಈ ಹಾಡ್ನ ಹೇಳ್ಕೊಳ್ಲೋಕೇ ಒಂತರಾ ಖುಶಿ... ಎರಡಕ್ಷರದಲಿ ಏನಿದೆ ಶಕ್ತಿ, ಹೋಲಿಕೆ ಯಾರಮ್ಮ....ಹೋಲಿಕೆ ಯಾರಮ್ಮ ಅಮ್ಮ..... ಅಮ್ಮಾ.... ಮತ್ತೆ.. ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು.... ಮಿಡುಕಾಡುತಿರುವೆ ನಾನು ಕೂಡ ಚನ್ನಗಿದೆ....

ಮಿ|| ಭಲ್ಲೇ ಯವರೇ, ಏನೆಂದಿರಿ ಟೆಕ್ಕಿಗಳೇ? ಔಟ್ ಸೋರ್ಸ್ ಅಂದಿರಾ? ಒಂಥರಾ ಅಂಗೇಯಾ .... ನಿಮ್ಮ ಈ ಪ್ರಶ್ನೆಗಳು ಟೆಕ್ಕಿಗಳಿಗೆ ಮಾತ್ರವೇ? ನಮಗಲ್ಲವಲ್ಲ! ವ೦ದನೆಗಳು, ಆದರೂ ನನ್ನ ನೆನಪಿನಲ್ಲಿಯ ಒ೦ದು ಹಾಡು ನಾ ಅಮ್ಮಾ ಎ೦ದಾಗ ಏನು ಸ೦ತೋಷವೋ,ಅಮ್ಮಾ, ಅಮ್ಮಾ, ಅಮ್ಮಾ, ನನ್ನಮ್ಮ. ಚಿತ್ರದ ಹೆಸರು ಗೊತ್ತಿಲ್ಲ.

ಶ್ರೀನಾಥ್ ಅವರೇ..... ’ಅಮ್ಮಂದಿರ ದಿನ’ಕ್ಕಾಗಿ... ಒಂದು ದಿನ ಮೊದಲೇ ಹಾರ್ದಿಕ ಶುಭಾಶಯ ಹೇಳಿರುವ ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು....... ಇನ್ನೊಂದು ಭಾವಗೀತೆ ಇದೆ ಪಲ್ಲವಿ ಹಾಡಿರುವುದು... "ಅಮ್ಮಾ... ಹಚ್ಚಿದೊಂದು ಹಣತೆ... ಇನ್ನೂ ಬೆಳಗಿದೆ.... ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ.......". ನನಗೆ ಅತ್ಯಂತ ಇಷ್ಟವಾದ ಗೀತೆ ಇದು.... ಅದೇನೋ ಅಮ್ಮಾ ಎಂದು ಬಿಟ್ಟರೇ ಸಾಕು, ಮನಸು ಕರಗಿ ಬಿಡುತ್ತಲ್ಲವೇ....?

ಸಕಲ ಪ್ರತಿಕ್ರಿಯೆಗೂ ಧನ್ಯವಾದಗಳು ಒಂದಂತೂ ಈಗಲೇ ಒಪ್ಪಿಕೊಂಡು ಬಿಡುತ್ತೇನೆ ... ಒಂದು ಹಾಡಿಗೆ ನನ್ನಲ್ಲಿ ಉತ್ತರವಿಲ್ಲ ! ಕ್ಷಮಿಸಿ ... ಹೇಳದೆ ಹೋದ ಉತ್ತರಗಳಿಗೆ ಸುಳಿವು ಕೊಡಲೇ? ೨. ಅಬ್ಬಾಯಿನಾಯ್ಡು ಚಿತ್ರ ೭. ರವೀ ಯವರ ಸಂಗೀತದ ಚಿತ್ರ ಶ್ರೀಕಾಂತ್: ಕೊಟ್ಟಿರುವ ಉತ್ತರಗಳಮ್ತೂ ಸರಿಯಾಗಿವೆ. ’ಹೆಸರು ಗೊತ್ತಿಲ್ಲ’ ಎಮ್ದಿರುವ ಉತ್ತರ - ಮಾ|ಅರ್ಜುನ್ (ಚಿತ್ರ ಚಕ್ರವ್ಯೂಹ) - ತಪ್ಪಿದ್ದರೆ ತಿದ್ದಿ, ಒಪ್ಪಿಕೊಳ್ಳುತ್ತೇನೆ ರಾಜಿ: ’ತಾಯಿ ತಾಯಿ’ - ಈ ಹಾಡನ್ನು ಡಾ|ರಾಜ್ ಹಾಡಿದ್ದಾರೆ. ನನಗೆ ತಿಳಿದ ಮಟ್ಟಿಗೆ ’ರಾಮಾಚಾರಿ’ ಚಿತ್ರದ ಹಾಡು ಅಲ್ಲ ... ತಿಳಿದವರು ದಯವಿಟ್ಟು ಹೇಳಿ ಕೌಶಿಕ್: ನಿಜ. ಹಾಡು ಒಂಥರಾ ಮಜ ಇದೆ. ಉಮೇಶ್, ಕೌಶಿಕ್: ಹಾಡುಗಳನ್ನು ಸೇರಿಸಿದ್ದಕ್ಕೆ ಧನ್ಯವಾದಗಳು ರಾಘವೇಂದ್ರ: ಕೊನೇ ಪ್ರಶ್ನೆ ಮಾತ್ರ ’ಟೆಕ್ಕಿ’ ರೀತಿ ಯೋಚನೆ ಮಾಡುವವರಿಗೆ ... ಸುಮ್ಮನೆ ಅಂದೆ:-) ... ಲೇಖನ ಖಂಡಿತ ಸಕಲರಿಗೂ ... ’ನಾ ಅಮ್ಮಾ ಎಂದಾಗ ಏನೋ ’ - ವಾಹ್.. ಪಿ.ಬಿ ಯವರ ಹಾಡು ... ಸೊಗಸಾಗಿದೆ ಶಾಮಲ: ’ಅಮ್ಮ’ ಎಂಬ ಆ ಎರಡಕ್ಷರದ ಮಹಿಮೆ ಅದು ... ಭಾವಗೀತೆ ಸೊಗಸಾಗಿದೆ .. ಧನ್ಯವಾದಗಳು