ದುಬಾರಿ ಜೀವನ

To prevent automated spam submissions leave this field empty.

ದುಬಾರಿ ಜೀವನ

ಎರಡು ವಾರಗಳ ಹಿಂದೆ ನಾನು ತರಕಾರಿ ಕೊಳ್ಳಲು ಹೋಗಿದ್ದೆ .ಎಲ್ಲ ತರಕಾರಿಗಳ ಬೆಲೆ
ದುಬಾರಿಯಾಗಿದೆ ಹುರಳಿಕಾಯಿ 60 , ಕ್ಯಾರೆಟ್ 40 ಹೀಗೆ. ಆದರು ಪರವಾಗಿಲ್ಲ
ಎಲ್ಲವನ್ನು ಕೊಂಡೆ, ಮಾರ್ಗದಲ್ಲಿ ಬರುವಾಗ ಕೆಲವರು ಚೌಕಾಸಿ ಮಾಡುತಿದ್ದನ್ನು ನೋಡಿ ಏಕೆ ಇವರೆಲ್ಲ
ಹೀಗೆ ಮಾಡ್ತಿದ್ದಾರೆ, ಪಾಪ ಮಾರುವವನಿಗೆ ಲಾಭ ಸಿಗಿವುದು ಅಲ್ಪ ಅಂದುಕೊಂಡೆ.

ಗಾಡಿಯವನು "ಬೇಕಾದ್ರೆ ತೊಗೊಳ್ಳಿ  ಇಲ್ಲ್ದಇದ್ರೆ ಬಿಡಿ , ಕಮ್ಮಿ ಇಲ್ಲ "ಅನ್ನುತಿದ್ದ. ಆಗ ನನಗೆ ಜ್ಞಾನೋದಯವಾಯಿತು.
ಈ ದುಬಾರಿಕರಣಕ್ಕೆ ನನ್ನ contribution ಕೂಡ ಇದೆ ಎಂದು ನನಗೆ ಅರ್ಥ ವಾಯಿತು, ನಾನು ಸಾಫ್ಟ್ವೇರ್ ಉದ್ಯಮದಲ್ಲಿದ್ದು
ಸಂಬಳ ಸಾಮಾನ್ಯರಿಗೆ ಹೋಲಿಸಿದರೆ ಸ್ವಲ್ಪ ಜ್ಯಾಸ್ತಿ , ಹೀಗಾಗಿ ಮಾರುವವನು ಏನು ಬೆಲೆ ಹೇಳುತ್ತಾನೋ ಅದನ್ನೇ ಕೊಳ್ಳುತ್ತೇನೆ.

ಚೌಕಾಸಿ ಮಾಡುವುದು a bit embarrassment, ಈ  ನನ್ನ ತಪ್ಪು ತಿಳುವಳಿಕೆ ಇಂದ ನಷ್ಟ ವಾಗುತ್ತಿರುವುದು ಸಾಮಾನ್ಯನಿಗೆ ಎಂದು
ನನಗೆ ಅರಿವಾಯಿತು. ಮಾರುವನಿಗೆ ನನ್ನಂತಹವರು 10 ಜನ ಸಿಕ್ಕರ ಅವನ ಲಾಭ ಇಮ್ಮಡಿ ಆಗುತ್ತದೆ. ಹಾಗಿದ್ದರೆ  ಸಾಮಾನ್ಯನು
ಏನು ಮಾಡುತ್ತಾನೆ , ಎಲ್ಲಿ ಪೌಷ್ಟಿಕ ಆಹಾರ ?

ಆಗಿಂದ ನನ್ನಲಿ ಒಂದು ಬದಲಾವಣೆ ಮಾಡಿಕೊಂಡೆ , ನಾನು ಹಣ್ಣನ್ನು ಕೊಂಡರೆ ನನ್ನ ಫ್ಲಾಟ್ ನ ಸೆಕ್ಯೂರಿಟಿ ಗೆ ಒಂದನ್ನು ಕೊಡುತ್ತೇನೆ
ಅವನ ಸಂತೋಷವನ್ನು ಕಂಡು ನಾನು ಆನಂದ ಪಡುತ್ತೇನೆ. ಸಮಾಜವನ್ನು ಬದಲಿಸುವ ಶಕ್ತಿ ನನಗಿಲ್ಲ ಆದರೆ ನನ್ನನು ಬದಲಾಯಿಸಿಕೊಳ್ಳುವ ಚೈತನ್ಯ ವಂತೂ ಖಂಡಿತ ಇದೆ ?  ಹಾಗೆ ನಿಮಗೂ ಇರಬೇಕಲ್ಲವೇ ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

[quote]ನಾನು ಹಣ್ಣನ್ನು ಕೊಂಡರೆ ನನ್ನ ಫ್ಲಾಟ್ ನ ಸೆಕ್ಯೂರಿಟಿ ಗೆ ಒಂದನ್ನು ಕೊಡುತ್ತೇನೆ[/quote]

ಇದರಿಂದ ಸೆಕ್ಯೂರಿಟಿಗೆ ಖುಷಿ ಆಗುತ್ತೆ. ಆದರೆ ನೀವು ಚೌಕಾಸಿ ಮಾಡಿ ಸರಿಯಾದ ಬೆಲೆಗೆ ತಗೊಂಡ್ರೆ ಸಾಮಾನ್ಯರಿಗೆ ನಷ್ಟವಾಗುವುದು ತಪ್ಪುತ್ತದೆ ಅಲ್ವಾ?

 

ಚೌಕಾಸಿ ಮಾಡುವು ಒಂದು ಕಲೆ ಎಲ್ಲರಿಗೂ ಸಾಧ್ಯವಾಗದ ಮಾತು ತುಂಬಾ ಸಲಿ ಪ್ರಯತ್ನಿಸಿ ವಿಫಲನಾಗಿದ್ದೇನೆ, ನಿಮ್ಮ ಸಲಹೆಯೇ ಸ್ಪೂರ್ತಿಯಂದು ತಿಳಿದು ಇನ್ನೊಮ್ಮೆ ಪ್ರಯತ್ನಿಸುವೆ. ಧನ್ಯವಾದಗಳು

ಸುನಿಲರೇ, ಐದು ರೂಪಾಯಿಗೆ ಎಲ್ರೀ?, ನಿನ್ನೆ ನಮ್ಮ ಹೊರನಾಡಲ್ಲಿ ತರಕಾರಿ ಮಾರುವ ವ್ಯಾನ್ ನವನ ಹತ್ತಿರ ಒ೦ದು ಕಟ್ಟು ಕೊತ್ತ೦ಬರಿ ( ಮುಕ್ಕಾಲು ಹಿಡಿಯಷ್ಟು ದಪ್ಪದ) ಸೊಪ್ಪಿಗೆ ೮ ರೂಪಾಯಿ! ಅದೇ ಕಟ್ಟಿಗೆ ಕಳಸದಲ್ಲಿ ೧೦ ರೂಪಾಯಿ!

ಸಾಮಾಜಿಕ ಕಳಕಳಿ ಚೆನ್ನಾಗಿದೆ. "ಮಾರುವನಿಗೆ ನನ್ನಂತಹವರು 10 ಜನ ಸಿಕ್ಕರ ಅವನ ಲಾಭ ಇಮ್ಮಡಿ ಆಗುತ್ತದೆ. ಹಾಗಿದ್ದರೆ ಸಾಮಾನ್ಯನು ಏನು ಮಾಡುತ್ತಾನೆ , ಎಲ್ಲಿ ಪೌಷ್ಟಿಕ ಆಹಾರ ?" ಆದರೆ ಲಾಭಕ್ಕೂ ಪೌಷ್ಠಿಕ ಆಹಾರಕ್ಕೂ ಯಾಕೆ ಲಿಂಕ್ ತಂದ್ರಿ ಅಂತ ಗೊತ್ತಾಗಲಿಲ್ಲಾ.

ಸಾಮಾನ್ಯನಿಗೆ ಕೊಳ್ಳಲು ದುಬಾರಿ ಆದರೆ ಅವನು ಏನು ತಿನ್ನುತ್ತಾನೆ, ಅವನ ಸಂಸಾರದಲ್ಲಿ ಬೆಳೆಯುವ ಮಕ್ಕಳಿದ್ದರೆ ಅವರಿಗೆ ಪೌಷ್ಠಿಕ ಆಹಾರ ಎಲ್ಲಿ ಸಿಗುತ್ತದೆ? ಬಹಳಷ್ಟು ಸರ್ಕಾರಿ ಜಾಹಿರಾತು ನೋಡಿರಬಹುದು, ಗರ್ಭಿಣಿ ಸ್ತ್ರೀಯರಿಗೆ ಪೌಷ್ಠಿಕ ಆಹಾರ ಅಗತ್ಯವೆಂದು, ಈ ದುಬಾರಿ ಬೆಲೆ ಇಂದ ಸಾಮಾನ್ಯನು ಕೊಳ್ಳಲು ಅಶಕ್ತನಾಗುತ್ತಾನೆ. ನಾನಂದುಕೊಂಡ ಬಗೆ ಹೀಗೆ . ಈಗ ಲಿಂಕ್ ಸರಿಯೇ? :) ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ, ಹೀಗೆ ನನ್ನ ಲೇಖನಗಳಬಗ್ಗೆ ನಿಮ್ಮ ಅನಿಸಿಕೆ ತಿಳಿಸುತ್ತಿರಿ.

ಮಿಸ್ಸೂ ಇಲ್ಲ! ಗಿಸ್ಸೂ ಇಲ್ಲ! ನಮ್ಮಲ್ಲಿ ಕೊತ್ತ೦ಬರಿ ಸೊಪ್ಪು ಕಾಸ್ಟ್ಲಿ, ನಿಮ್ಮಲ್ಲಿ ಬಾಳೆ ಹಣ್ಣಿನ ಚಿಪ್ಪು ಕಾಸ್ಟ್ಲಿ! ಅಷ್ಟೇಯಾ! ಟೆನ್ಶನ್ ಮಾಡ್ಕಾಬೇಡಿ!