ಮೂಢ ಉವಾಚ - 8

To prevent automated spam submissions leave this field empty.

             ಮೂಢ ಉವಾಚ - 8 


ನಿಂದನೆಯ ನುಡಿಗಳು ಅಡಿಯನೆಳೆಯುವುವು|


ಮೆಚ್ಚುಗೆಯ ಸವಿಮಾತು ಪುಟಿದೆಬ್ಬಿಸುವುದು||


ಪರರ ನಿಂದಿಪರ ಜಗವು ಹಿಂದಿಕ್ಕುವುದು|


ವಂದಿತನಾಗು ನಲ್ನುಡಿಯೊಡೆಯನಾಗು ಮೂಢ||


 


ಸೋತೆನೆಂದೆನಬೇಡ ಸೋಲು ನೀನರಿತೆ|


ಬಿದ್ದೆನೆಂದೆನಬೇಡ ನೋವು ನೀನರಿತೆ||


ಸೋಲರಿತು ನೋವರಿತು ಹಸಿವರಿತು|


ಜಗವರಿಯೆ ನೀನೇ ಗೆಲುವೆ ಮೂಢ||


**************


-ಕವಿನಾಗರಾಜ್.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾಗರಾಜ್ ರವರೇ ಮೂಢ ಉವಾಚ-೮ ಚೆನ್ನಾಗಿದೆ.. ನನ್ನಿ

ಅತ್ಮೀಯ ಗೋಪಿನಾಥ್, ವೆಂಕಟೇಶಮೂರ್ತಿ ಮತ್ತು ಶ್ರೀನಾಥ್ ಭಲ್ಲೆರವರೇ, ನಿಮ್ಮ ಮೆಚ್ಚುಗೆ ನನಗೆ ಸ್ಪೂರ್ತಿದಾಯಕ. ವಂದನೆಗಳು.