ಸಮ್ಮಿಲನದ ಸವಿನೆನಪು

To prevent automated spam submissions leave this field empty.

೩ ವಾರ ಬೆಂಗಳೂರಿನಲ್ಲಿಲ್ಲದ ಕಾರಣ, ಮೊನ್ನೆ ಶನಿವಾರ ಬಟ್ಟೆಗಳ ರಾಶಿಯೇ ನನ್ನ ಮುಂದಿತ್ತು, ರಾತ್ರಿಗೆ ಎಲ್ಲ ಬಟ್ಟೆ ಮುಗಿದು ಸುಸ್ತಾಗಿ ಹಾಸಿಗೆ ಮೇಲೆ ಬಿದ್ದೆ, ಅಲಾರಂ ಹೊಡೆದುಕೊಂಡಾಗ ಭಾನುವಾರ ಬೆಳಗ್ಗೆ ೭.೩೦, ಕಣ್ತುಂಬಾ ನಿದ್ರೆ, ಹಾಸಿಗೆಯಲ್ಲೇ ಹೊರಳಾಡಿದೆ ಹೋಗಲೋ ಬೇಡವೋ ಅಂತ, ಈ ಚಳಿಯಲ್ಲಿ ಇಂಥ ನಿದ್ರೆ ಹೇಗಪ್ಪ ಬಿಟ್ಟು ಹೋಗೋದು ಅಂದ್ಕೊಂಡು ಸ್ವಲ್ಪ ಹೊತ್ತು ಹೊರಳಾಡಿದೆ.

 

ಛೆ ಇಲ್ಲೇ ಇದ್ದರೂ ಹೋಗಲಿಲ್ಲ ಅಂದ್ರೆ, ಅಲ್ಲದೆ ಸಂಪದದಲ್ಲಿ ಬರುತ್ತೇನೆಂದು ಬೇರೆ ಹೇಳಿದ್ದೇನೆ, ಜೊತೆಗೆ ಇನ್ನೂ ಹುಡುಗ, ಅಲ್ಲದೆ ಅಷ್ಟೊಂದು ಆಸಕ್ತಿಯಿಂದ ಜಾಗ ಹುಡುಕಿ ಕಾರ್ಯಕ್ರಮದ ದಿನ, ಸಮಯ ತಿಳಿಸಿದ್ದಾರೆ, ಕೆಲವರು ಬರುತ್ತೇವೆ ಅಂದಿದ್ದಾರೆ, ಹೋಗದಿದ್ದರೆ ಕೊಟ್ಟ ಮಾತಿಗೆ ದ್ರೋಹ, ಏನನ್ನೋ ಕಳೆದುಕೊಂಡ ಭಾವ.

 

ಅಂತೂ ಎದ್ದೆ, ಅವಲಕ್ಕಿ ಮಾಡಿ ತಿಂಡಿ ತಿಂದು ನವರಂಗ್ ಕಡೆ ಹೆಜ್ಜೆ ಹಾಕಿದೆ, ಬಸ್ ಹತ್ತಿ ಕುಳಿತೆ. ಟ್ರಾಫಿಕ್ಕಿಲ್ಲ ಜೊತೆಗೆ ಸುಂದರ ವಾತಾವರಣ. ಮೆಜೆಸ್ಟಿಕ್ನಲ್ಲಿ  ಕೇವಲ 15 ನಿಮಿಷದಲ್ಲಿದ್ದೆ, ಅಲ್ಲಿಂದ ೩೩೫ ಬಸ್ ಹತ್ತಿದೆ, ೨೦ ನಿಮಿಷದಲ್ಲಿ ದೊಮ್ಮಲೂರಿನ ವಾಟರ್ ಟ್ಯಾಂಕ್ಗೆ ಬಂದು ಬಿದ್ದಿದ್ದೆ.


ಅಲ್ಲಿಂದ ಶುರುವಾಯಿತು ಜಾಗ ಹುಡುಕುವ ಕಥೆ, ೨೦ ನಿಮಿಷ ಇಡೀ ದೊಮ್ಮಲೂರಿನ ೨ನೇ ಹಂತವನ್ನು ಸುತ್ತು ಹಾಕಿದ್ದೆ, ಆಟೋದವನನ್ನ, ಅಂಗಡಿಯವನನ್ನ, ರಸ್ತೆಯಲ್ಲಿ ಹೋಗುವವನನ್ನ, ರಸ್ತೆ ಗುಡಿಸುವವರನ್ನ, ಉಹೂಂ ಯಾರಿಗೂ ಗೊತ್ತಿಲ್ಲ. ಆ ಚಳಿಯಲ್ಲೂ ಬೆವರಿ ಹೋಗಿದ್ದೆ, ವಿಳಾಸ ಹುಡುಕಿ ಹುಡುಕಿ ಸುಸ್ತಾಗಿ ಹೋದ ನಾನು ಒಂದು ಹಂತಕ್ಕೆ ವಾಪಸ್ ಹೋಗುವ ಅಂತ ಅಂದ್ಕೊಂಡೆ, ಇಲ್ಲಿವರೆಗೂ ಬಂದು ಯಾಕೆ ಸೋಲಬೇಕು ಅಂತ ಮತ್ತೆ ಹುಡುಕಲು ಪ್ರಯತ್ನಿಸಿದೆ.


ಕಡೆಗೂ ಯಾರೋ ಒಬ್ಬರು ದೊಮ್ಮಲೂರಿನ ಕ್ಲಬ್ ಹತ್ತಿರ ಇದೆ ಹೋಗಿ ಅಂದರು, ಅಲ್ಲಿ ಹೋದಾಗ ಕಡೆಗೂ ಸಿಕ್ತು. ಹರೀಶ್ ಮೊದಲಿರುತ್ತಾರೆ ಅಂದುಕೊಂಡಿದ್ರೆ ಮಿಕ್ಕಿದವರನ್ನು ಸ್ವಾಗತಿಸುತ್ತಾರೆ ಅಂದ್ರೆ ಗೋಪಿಯವ್ರೆ ಹರೀಶ್ರನ್ನು ಸ್ವಾಗತಿಸಿದ್ದರು.


ನಾನು ಒಳಗೆ ಹೋದಾಗ ಪರಿಚಯವಾಗಿದ್ದು ಮಂಜು, ನನ್ನನ್ನು ಹೆಗಡೆಯವರಿಗೆ ತೋರಿಸಿ ಚಿಕ್ಕು ನೋಡಿ ಅಂದ್ರು, ಯಾವ ಚಿಕ್ಕು ಅಂತ ನೋಡಿದ ಹೆಗಡೆಯವರು ಹೈಸ್ಕೂಲ್ ಮಾಸ್ಟರ್ ತರ ಕಂಡ್ರು. ಹಾಗೆ ಗೋಪಿನಾಥ್ ಮತ್ತವರ ಕುಟುಂಬ, ಮಂಜು ಕುಟುಂಬ, ಹರೀಶ್, ತೇಜಸ್ವಿ, ನಾಗರಾಜ್, ಕವಿ ನಾಗರಾಜರು, ಶ್ಯಾಮಲಾ ಜನಾರ್ಧನನ್, ಅ೦ಜನ್ ಕುಮಾರ್,ರೂಪ ರಾವ್ ಎಲ್ಲರ ಪರಿಚಯವಾದ ಮೇಲೆ ಕಾರ್ಯಕ್ರಮ ಶುರುವಾಯ್ತು.


ಹೊರಗೆ ಹಕ್ಕಿಗಳ ಕಲರವ, ಒಳಗೆ ಸಂಪದಿಗರ ಕಲರವ. ಶ್ರೀಮತಿ ಗೋಪಿನಾಥ್ರವರ ಪ್ರಾರ್ಥನೆಯಿಂದ ಶುರುವಾದ ಕಾರ್ಯಕ್ರಮ ಹರೀಶ್ರವರ ನಿರೂಪಣೆಯೊಂದಿಗೆ ಮುಂದುವರೆಯಿತು, ಕಾರ್ಯಕ್ರಮಕ್ಕೆ ಚೆನ್ನಾಗಿಯೇ ತಯಾರಾಗಿ ಬಂದಿದ್ದ ಹರೀಶ್ರವರು ಪ್ರತಿಯೊಬ್ಬರನ್ನೂ ಚೆನ್ನಾಗಿ ಪರಿಚಯಿಸಿದರು. ೩ ಗಂಟೆಗಳ ಕಾಲ ಯಾವುದೇ ಅಡೆ ತಡೆಯಿಲ್ಲದೆ ಕಾವ್ಯ, ಕಥೆ, ಸಣ್ಣ ಕಥೆ, ವಿಮರ್ಶೆಗಳಲ್ಲಿ ಮುಂದುವರೆಯಿತು. ತೇಜಸ್ವಿಯವರ ಕವನಗಳು, ಮಂಜುರವರ ಅಪಘಾತದ ಕಥೆ ಮತ್ತೆ ಅವರು ಹೇಳುವ ಪರಿ ಮತ್ತು ಪದಗಳ ಸಂಯೋಜನೆ, ಗೋಪಿಯವರ ಅನುಭವ, ಆಸುಮನದ ಸಾಲುಗಳು, ಶ್ಯಾಮಲಾ ಜನಾರ್ಧನನ್ರವವರ ವಿಮರ್ಶೆ, ರೂಪಾರಾವ್ರವರ ಸಣ್ಣ ಕಥೆ, ಕವಿ ನಾಗರಾಜರ ಹಿತನುಡಿಗಳು, ಶ್ರೀಮತಿ ಶಾಂತೀ ಗೋಪಿನಾಥವರ ಪ್ರಾರ್ಥನೆ, ಅಂಜನ್ ಕುಮಾರರ ಅನುಭವ, ಆತ್ಮೀಯರವರ ಸುಂದರ ಸಾಲುಗಳು. ೩ ಗಂಟೆ ಕೇವಲ ೩ ನಿಮಿಷಗಳಲ್ಲಿ ಮುಗಿದುಹೋದ ಅನುಭವ. ಆಮೇಲೆ ಸಣ್ಣ ವಿರಾಮ.


ಗೋಪಿನಾಥ್ ಮತ್ತವರ ಕುಟುಂಬ, ಮಂಜು ಕುಟುಂಬ ಜೊತೆಗೆ ಶ್ಯಾಮಲಾ ಜನಾರ್ಧನನ್ರವರು ಸೇರಿ ಮಾಡಿದ ಕೋಲ್ಡ್ ಕಾಫಿ ಚೆನ್ನಾಗಿತ್ತು.
ಆಮೇಲೆ ಕೊನೆಯ ಹಂತ ವಂದನಾರ್ಪಣೆ. ಎಲ್ಲ ಮುಗಿದಾಗ ೨ ಗಂಟೆ.


ಅಂತೂ ಭಾನುವಾರವನ್ನು ಸಾರ್ಥಕಪಡಿಸಿಕೊಂಡ ಭಾವ ಬಸ್ಸಿನಲ್ಲಿ ಹತ್ತಿ ಕುಳಿತಾಗ ನನ್ನಲ್ಲಿ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

<<ಅಂತೂ ಭಾನುವಾರವನ್ನು ಸಾರ್ಥಕಪಡಿಸಿಕೊಂಡ ಭಾವ ಬಸ್ಸಿನಲ್ಲಿ ಹತ್ತಿ ಕುಳಿತಾಗ ನನ್ನಲ್ಲಿ.>> ಚೇತನ್ ನನ್ನ ಸಹಮತವಿದೆ ನಿಮ್ಮೀ ಸಾರ್ಥಕತೆಯ ಮಾತುಗಳಿಗೆ ನನ್ನಲ್ಲೂ ಇದೇ ಭಾವ ಇತ್ತು ಬಸ್ಸಲ್ಲಿ ಕೂತಾಗ ನಾ ಮಾರತಹಳ್ಳಿಗೆ :)

ಆತ್ಮೀಯ ಚಿಕ್ಕು, ಯಾವ್ದಾದ್ರೂ ಫ೦ಕ್ಶನ್ನಿಗೆ ಹೋಗಿಬ೦ದ್ರೆ (ಮದುವೆ ಮು೦ಜಿ ಹೀಗೆ) ಒ೦ದೆರಡು ವಾರ ಅದೇ ಗು೦ಗಿರುತ್ತೆ ಹಾಗೆ . ಇವತ್ತು ಆಫೀಸಿನಲ್ಲೂ ನಿನ್ನ ಚುರ್ಮುರಿ ಎಲ್ಲರಿಗೂ ತಿನ್ನಿಸ್ತಾ ಇದ್ದೀನಿ. ಎಲ್ಲರ ಪರಿಚಯವಾದದ್ದು ತು೦ಬಾನೇ ಖುಷಿ ಕೊಡ್ತು ಹರಿ

ನಿಜಕ್ಕೂ ಈ ಭಾನುವಾರ ನನ್ನ ನೆನಪಿನಾಳದಲ್ಲಿ ಅಚ್ಚಳಿಯದೆ ಕುಳಿತುಬಿಟ್ಟಿತು. ಭಾಗವಹಿಸಿದ ಎಲ್ಲರಿಗು ವ೦ದನೆಗಳು. ಬಿಡುವಾದಾಗ ಮತ್ತೊಮ್ಮೆ ಸಿಕ್ಕೆ ಚೇತನ್, ಬಿಸಿ ಬಿಸಿ ಕಾಫಿಕುಡಿಯೋಣ.

ಚೇತೂ ಕೊನೆಯಲ್ಲಿ ಗೊತ್ತಾ ನಮಗೆಲ್ಲಾ ಸ್ಪೆಷೆಲ್ ಗರಮಾ ಗರಮ್ ಕಾಫಿ ಸಿಕ್ಕಿತ್ತು ಅನಂತರದ ಶಾಂತಿ ಸಾಗರದ ಊಟ ಬೇರೆ

ಚೇತೂ ಇದಕ್ಕೆ ನಿಮಗೆ ನಾನು ಒಂದು ಸಲಹೆ ಕೊಡುತ್ತೇನೆ ನೀವು ಆ ಸಲಹೆ ಅಳವಡಿಸಿಕೊಂಡರೆ ಇಂತಹ ತಪ್ಪು ಜೀವನದಲ್ಲೇ ಆಗಲಿಕ್ಕಿಲ್ಲ

ಚಿಕ್ಕುನ ನೋಡ್ಬೇಕು ಅ೦ಥ ಭಾರೀ ಆಸೆ ಇಟ್ಟುಕೊ೦ಡಿದ್ದೆ. ಆಗಲಿಲ್ಲ. ಬೇಸರವಿಲ್ಲ. ಮತ್ತೊಮ್ಮೆ ಬೆ೦ಗಳೂರಿಗೆ ಬ೦ದಾಗ ಖುದ್ದಾಗಿ ಭೇಟಿಯಾಗಿಯೇ ತೀರುವೆ.

ನಾವಡವ್ರೆ ನಿಮಗೆ ಕಾಯ್ತಿದ್ವಿ ಬರ್ತೀರಾ ಅಂತ, ಆಮೇಲೆ ರಜೆ ಇಲ್ಲ ಅಂತ ತಿಳೀತು. ಹಾಗೆ ಆಗ್ಲಿ, ನೋಡುವ ಬೇಟಿ ಬೆಂಗಳೂರಲ್ಲೋ ಹೊರನಾಡಲ್ಲೋ ಅಂತ.

ನಾವಡ ರವರೆ, ನೀವು ಖಂಡಿತ ಬಂದಿರುತೀರಿ ಎಂದೇ ತಿಳಿದಿದ್ದೆ ಆದರೆ ನೀವು ಅಲ್ಲಿರದಿದ್ದನ್ನ ನೊಡಿ ನನಗೆ ಸ್ವಲ್ಪ ಬೇಸರವಾಯಿತು. ಒಳ್ಳೆಯ ಅವಕಾಶ ಕಳಕೊಂಡ್ರಿ ಅಂತ ಅನ್ನಿಸಿತು. ನಮ್ಮ ಕಾರ್ಯಕ್ರಮ ಅದ್ಭುತವಾಗಿ ನಡೆಯಿತು.

ತೇಜೂ, ವಿಧಿ ವಿಪರೀತ...ವಿಧಿ ಆಘಾತ... ವಿಧಿ ವಿಲಾಸವೆನೆ ಇದೇನ ಹಾ.... ನನಗೂ ಹಾಗೇ ಅನ್ನಿಸ್ತಿದೆ! ಮು೦ದಿನ ಬಾರಿ ನಿಮ್ಮನ್ನೆಲ್ಲಾ ನಮ್ಮಲ್ಲಿ ಒ೦ದೇ ಹಗ್ಗದಲ್ಲಿ ಕಟ್ಟಿ ಹಾಕದ ವರೆಗೆ ನಾ ವಿರಮಿಸುವುದಿಲ್ಲ.. ಇದು ನನ್ನ ಪ್ರತಿಜ್ಞೆ!!

ಹ.ಹ.ಹ ಕಾಲೆಳೆಯೋದು ಅ೦ದ್ರೆ ಹೀಗೆನೇ... ಒ೦ದು ವೇಳೆ ಗೆದ್ದರೆ? ಸ೦ತೋಷ ಸ೦ಭ್ರಮ.. ಒ೦ದು ವೇಳೆ ಸೋತರೆ... ಫುಲ್ ಟೆನ್ಶನ್ ನಿ೦ದ ಎರಡು ಕಪ್ಪು ಬಿಸಿ ಕಾಫಿ ಕುಡಿತೇನೆ!!!

<ಕಾಲೆಳೆಯೋದು ಅ೦ದ್ರೆ ಹೀಗೆನೇ> ಅಲ್ವೇ ಮತ್ತೆ... <ಫುಲ್ ಟೆನ್ಶನ್ ನಿ೦ದ ಎರಡು ಕಪ್ಪು ಬಿಸಿ ಕಾಫಿ ಕುಡಿತೇನೆ> ಹಾಲು, ಸಕ್ರೆ ಅಥವಾ ಬೆಲ್ಲ ಇರ್ಬಾರ್ದು

<<<ಮು೦ದಿನ ಬಾರಿ ನಿಮ್ಮನ್ನೆಲ್ಲಾ ನಮ್ಮಲ್ಲಿ ಒ೦ದೇ ಹಗ್ಗದಲ್ಲಿ ಕಟ್ಟಿ ಹಾಕದ ವರೆಗೆ <<(ಹಾಕುವವರೆಗೆ)>>ನಾ ವಿರಮಿಸುವುದಿಲ್ಲ.. ಇದು ನನ್ನ ಪ್ರತಿಜ್ಞೆ!!>>> ಕಷ್ಟ ಕಣ್ರೀ ನಾವಡರೆ, ನೀವು ಅಲ್ಲಿ ಹಗ್ಗ ತೊಗೊ೦ಡು ಕಟ್ಟಿ ಹಾಕ್ಬಿಟ್ರೆ ನಾನು ದುಬೈಗೆ ವಾಪಸ್ ಹೋಗೋದು ಹೆಂಗೆ? :)

ನಿಮ್ಮನ್ನು ದುಬ್ವೈಗೆ ತಾತ್ಕಾಲಿಕವಾಗಿ ಕಳುಹಿಸುತ್ತೇವೆ. ದೀಪಾವಳಿ ಹಬ್ಬದ ಸ೦ದರ್ಭದಲ್ಲಿ ಪುನ: ಹಗ್ಗದೊಳಗೆ ನಿಮ್ಮನ್ನು ಅರೆಸ್ಟ್ ಮಾಡ್ತೇವೆ. ಹೇಗೆ ತಪ್ಪಿಸಿಕೊಳ್ಳುವಿರೋ ನಾನೂ ನೋಡ್ತೇನೆ! ಇದು ನನ್ನ ಎರಡನೇ ಪ್ರತಿಜ್ಞೆ!!!!

ಚೇತನ್ ಒಟ್ಟಿನಲ್ಲಿ ೧೩-೦೬-೨೦೧೦ ಭಾನುವಾರ ಒಂದು ಸುಂದರ ನೆನಪಾಗಿ ದಾಖಲಾಗಬಹುದು ನಮ್ಮೆಲ್ಲರ ಮನಸಿನ ಡೈರಿಯಲ್ಲಿ ಧನ್ಯವಾದಗಳು

ಚೇತನ್.... ನಿಮ್ಮ ಅನುಭವ ಸುಂದರವಾಗಿ ಬರೆದಿದ್ದೀರಿ. ನಿಮ್ಮ ಕವಿತಾ ವಾಚನ ಕೂಡ ಚೆನ್ನಾಗಿತ್ತು. ನಾನು ಕಾಫಿಯನ್ನು ಬರೀ ಸರಬರಾಜು ಮಾಡುವ ಕೆಲಸ ಮಾಡಿದೆ ಕಣ್ರೀ..... ನಂಗೂ ಸೇರಿಸಿ ಕ್ರೆಡಿಟ್ ಕೊಟ್ಟು ಬಿಟ್ಟಿದ್ದೀರಿ. ಪಾಪ ಮಾಡಿದವರು.... ಗೋಪಿನಥ್ ಮತ್ತು ಪತ್ನಿ, ಮಂಜುನಾಥ್ ಅವರ ಪತ್ನಿ ರೀ... ನಾನು ನನ್ನ ಪಾಲಿಗೆ ಬಂದ ಕ್ರೆಡಿಟ್ ಅವರಿಗೆ ರವಾನಿಸಿಬಿಟ್ಟಿದ್ದೇನೆ. ಒಟ್ಟಿನಲ್ಲಿ ನೀವು ಹೇಳಿದಂತೆ ಒಂದು ಭಾನುವಾರ ಸುಂದರವಾಗಿ ಕಳೆಯಿತು. ಇದಕ್ಕೆಲ್ಲಾ ಅವಕಾಶ ಕಲ್ಪಿಸಿದ ನಮ್ಮ "ಆತ್ಮೀಯ" ಹರಿಗೆ ಧನ್ಯವಾದಗಳು..... ಶ್ಯಾಮಲ

ಶ್ಯಾಮಲವ್ರೆ, ನನ್ನ ಬರಹ ಮತ್ತು ಕವನ ಮೆಚ್ಚಿದಕ್ಕೆ ಧನ್ಯವಾದಗಳು. ಅಡಿಗೆ ಮಾಡಿ ಊಟ ಚೆನ್ನಾಗಿ ಬಡಿಸದೆ ಇದ್ರೆ ಹೆಂಗೆ ಅದೇ ತರ ನಿಮ್ಮ ಕಾಫಿ ಸರಬರಾಜು ಸಹ....

ಯಾಕ್ರೀ ಮಲ್ಲೇಶ್ ಹೀಗಂತೀರಾ ಎಷ್ಟೊಂದು ಸಲ ಸಂಪದದಲ್ಲಿ ಇದರ ಬಗ್ಗೆ ಹಾಕಿದ್ದಾರೆ, ಹೋಗಲಿ ಬಿಡಿ ಮುಂದಿನಸಲವಾದರೂ ಸಿಗುವ