ಸಂಪದಿಗರ ’ಸಂಮಿಲನ’ : ಆನಂದನ ದುಃಖ

To prevent automated spam submissions leave this field empty.

 
ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಂ
ವ್ಯಸನೇನ ತು ಮೂರ್ಖಾಣಾಂ ನಿದ್ರಯಾ ಕಲಹೇನ ವಾ
(ಹಿತೋಪದೇಶ)

ಕಾವ್ಯ-ಶಾಸ್ತ್ರಗಳೋದಿ ಸಂತೋಷಪಡುವಲ್ಲಿ
ಕಳೆಯುವುದು ಧೀಮಂತ ಜನರ ಸಮಯ;
ದುಶ್ಚಟಗಳಲ್ಲಿ ಮೇಣ್ ನಿದ್ರೆ-ಕಲಹಗಳಲ್ಲಿ
ಮೂರ್ಖರಾ ಸಮಯವದು ವ್ಯಯವು ಅಯ್ಯ.
(ಆನಂದರಾಮಾನುವಾದ)

ಸಾಹಿತ್ಯ-ಸಂಸ್ಕೃತಿಯ ಚರ್ಚೆ-ಪ್ರಸ್ತುತಿಗಳಲಿ
ಸಂಪದಿಗ ಸಂಮಿಲನ ಸಂಪನ್ನವು;
ಹಲವು ಮಿತ್ರರಿಗೆ ಈ ಅವಕಾಶ ಸಿಗದಾಯ್ತು
ನನ್ನಂಥ ನತದೃಷ್ಟಗದುವೆ ನೋವು
(ಆನಂದನ ದುಃಖ)  

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಶಾಸ್ತ್ರಿಗಳೇ ನಿಮಗಾದಷ್ಟೇ ದುಖ ನಿಮ್ಮ ಗೈರು ಹಾಜರಿಯಲ್ಲಿ ನಮಗೂ ಆಗಿದೆ ( ಸಂದದದ ಎಲ್ಲರು ಸೇರಿದ್ದರೆ ಚೆನ್ನಾಗಿತ್ತಲ್ಲ !!!!....ಅಂತ ) ಸಮಾನ ಶೀಲ ..... ಅಂದಂತೆ

ಆನಂದ ನಾಮಧೇಯನ ಮನದೊಳಗೂ ನೋವೆಂಬ ಮಾತೇ ರಾಮ ನಾಮವ ಜಪಿಸಿ ಕಳೆದುದನು ಇಲ್ಲೇ ಬಿಟ್ಟುಬಿಡಿ ಮರೆತೇ ಮಾಗುತ್ತಿರುವ ಘಾಯವನು ಕೆರೆಕೆರೆದು ಉಪ್ಪುನೀರನ್ನು ಹುಯ್ಯಬೇಡಿ ಮುಂದಿನ ಬಾರಿ ನೀವು ಬಾರದಿದ್ದರೆ ನಮ್ಮನ್ನು ಬರಿದೆ ಬೈಯ್ಯಬೇಡಿ ಈ ಬಾರಿ ಬಾರದವರೇ ವಹಿಸಿಕೊಳ್ಳುವುದೊಳ್ಳೆಯದು ನೇತ್ರತ್ವವನು ಅದರಿಂದ ಖಾತ್ರಿಪಡಿಸಿದಂತಾಗುತ್ತೆ ಗೈರಾಗುವವರ ಹಾಜರಿಯನು! :)