ಚುರ್ಮುರಿ ೪

To prevent automated spam submissions leave this field empty.

ಇದನ್ನು ಸಂಮಿಲನದಲ್ಲಿ ವಾಚಿಸಿದ್ದೆ, ಈಗ ನಿಮ್ಮ ಮುಂದೆ...

೧೦)  'ಗ್ಲೋಬಲ್ ವಾರ್ಮಿಂಗ್ ಅಂದ್ರೇನು ಗೊತ್ತಮ್ಮ??' ಎಂದು ಕೇಳಿದ ಮಗನಿಗೆ 'ನನಗೆ ಅದೆಲ್ಲ ಗೊತ್ತಿಲ್ಲ, ನಿಮ್ಮ ಇಂಗ್ಲಿಷ್ ಅರ್ಥ ಆಗಲ್ಲ, ಅದೆಲ್ಲ ಇರ್ಲಿ ಅದೇನು ಅಷ್ಟೊಂದು ಬೆಳಕು ಇದ್ರೂ ಲೈಟ್ ಹಾಕ್ಕೊಂಡು ಪೇಪರ್ ಓದ್ತಿದೀಯ, ಮೊದ್ಲು ಆರಿಸು' ಎಂದಳು ಅವಳಮ್ಮ.

೧೧) ಅವಳು ಅರ್ಧ ಗಂಟೆ ಮೇಕಪ್ ಮಾಡಿಕೊಂಡಾದ ಮೇಲೆ ಬುರ್ಖಾ ಹಾಕಿಕೊಂಡು ಕೆಲಸಕ್ಕೆ ಹೊರಟಳು.

೧೨) ತನ್ನ ಜೀವನವೇ ಛಿದ್ರ ಛಿದ್ರವಾಗಿರುವಾಗ ತನ್ನ ಮನೆಯಲ್ಲಿರುವ ಒಡೆದ ಕನ್ನಡಿಯಿಂದ ಮುಖವನ್ನು ನೋಡದೆ ಇರುವುದರಿಂದ ಆಗುವ ಲಾಭವಾದರೂ ಏನೆಂದು ಅವನು ಹೊಸ ಕನ್ನಡಿಯನ್ನು ತೆಗೆದುಕೊಳ್ಳಲಿಲ್ಲ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

>>ಅವಳು ಅರ್ಧ ಗಂಟೆ ಮೇಕಪ್ ಮಾಡಿಕೊಂಡಾದ ಮೇಲೆ ಬುರ್ಖಾ ಹಾಕಿಕೊಂಡು ಕೆಲಸಕ್ಕೆ ಹೊರಟಳು<< ಇದು ಸೂಪರ್ಬ್ ಚಿಕ್ಕು.. ಮುಂಜಾನೆ ಎದ್ದು ಹಲ್ಲುಜ್ಜಲು ಹೋದಾಗ ಹಲ್ಲೇ ಇರಲಿಲ್ಲ !! ಇದಕ್ಕೂ ಚುರುಮುರಿ ಅನಬಹುದಾ?

ಧನ್ಯವಾದ ಶ್ರೀಕಾಂತ್. <ಮುಂಜಾನೆ ಎದ್ದು ಹಲ್ಲುಜ್ಜಲು ಹೋದಾಗ ಹಲ್ಲೇ ಇರಲಿಲ್ಲ> ಅದಕ್ಕೆ ವಾಸ್ತವ ಅನ್ನಬಹುದೇನೋ :) ಸಕತ್ತಾಗಿದೆ

ಸ೦ಜೆ ಹೊತ್ತಿಗೆ ಓದ್ತಾ ಇದ್ದೀನಿ ನಿಮ್ಮ ಚುರ್ಮುರಿ...ಚೆನ್ನಾಗಿದೆ..ಚೇತನ್.....ಉಪ್ಪು ಹುಳಿ ಕಾರ ಹದವಾಗಿ ಬೆರೆಸಿದ್ದೀರಿ....

ಚಿಕ್ಕು ೧ ಮತ್ತು ೨ ಸೂಪರ್... ಮೂರನೆಯದರ ಮರ್ಮಾರ್ಥ ಸಕತ್ತಾಗಿದೆ. ಎ೦ದಿನ೦ತೆ ಚುರ್ಮುರಿ ಸೊಗಸಾಗಿದೆ. ಆದರೆ ಸ್ವಲ್ಪವೆ೦ದೇ ಬೇಸರವಾಯಿತು. ನಮಸ್ಕಾರಗಳು.

ಚುರ್ಮುರಿ ಸ್ವಲ್ಪ ಇದ್ರೆ ಚೆಂದ ಅಲ್ವ ನಾವಡವ್ರೆ?? ಪ್ರತಿಕ್ರಿಯೆಗೆ ಧನ್ಯವಾದ

ನಾನೂ ಬಾಕಿ ಇಟ್ಟಿದ್ದೆ ನಿಮ್ಮ ಈ ಚುರ್ಮುರಿಯನ್ನು ಸಂಜೆಗಾಗಿ ಹೀಗೇ ಬರೆಯುತ್ತಿರಿ ಓದುತ್ತೇವೆ ನಾವು ನಿಮ್ಮಭಿಮಾನಿಗಳಾಗಿ - ಆಸು

ನಿಮ್ಮ ಸಂಜೆಗೆ ಚುರ್ಮುರಿಯನ್ನು ತಯಾರಿಸಲು ನಾನೂ ಪ್ರಯತ್ನಪಡುತ್ತೇನೆ :)