ಸುಬ್ಬಿ ಹಲ್ಲು ಉಬ್ಬಿ.........

To prevent automated spam submissions leave this field empty.

ಮೊದಲನೆ ಬಾರಿ ನಾನು ಹುಡುಗಿ ನೋಡೋಕೆ ಅಂತಾ ಹೋಗಿದ್ದೆ. ಈಗಿನ ನನ್ನ ಹೆಂಡರು ಪಕ್ಕದಾಗೆ ತಂಗಿ. ಬಾಯಿಗೆ ಕರ್ಚೀಫ್ ಹಿಡಿಕೊಂಡು ನಿಂತಿದ್ಲು. ತುಂಬಾ ವೈನಾಗೆ ಕಾಣ್ತಾ ಇದ್ಲು. ಅವ್ವಾ ಹುಡುಗಿ ಪಕ್ಕದಾಗೆ, ಅವಳ್ಯಾರು....(ನುಲಿತಾ). ಅದಾ ಅವಳ ತಂಗಿ ಕನ್ಲಾ, ಹೆಸರು ಸುಬ್ಬಿ ಅಂತಾ. ಹುಡುಗೀಗಿಂತ ಅವಳ ತಂಗಿನೇ ಸಂದಗಾವ್ಳೆ ಅಂದೆ. ಮೂದೇವಿ, ಅದಾ ಬಾಯಿ ಬಿಟ್ಟರೆ ಬಂಡಗೇಡು ಕನ್ಲಾ ಅಂದ್ಲು . ನಂಗೇನೂ ಅರ್ಥಾನೇ ಆಗ್ಲಿಲ್ಲ. ಮದುವೆ ಆದ್ ಮ್ಯಾಕೇನೇ ಗೊತ್ತಾಗಿದ್ದು. ಸುಬ್ಬಿ ಹಲ್ಲು ಉಬ್ಬಿ ಅಂತಾ.

ಎಲ್ಲರ ಉಬ್ಬು ಹಲ್ಲು, ಸಾಮಾನ್ಯವಾಗಿ ಕೆಳ ತುಟಿಗಿಂತ ಮುಂದೆ ಇದ್ದರೆ, ನಮ್ಮ ಸುಬ್ಬೀದೂ ಪೆಸೆಲ್ ಎಫೆಕ್ಟ್ ಮೇಲ್ ತುಟಿಗಿಂತ ವಸಿ ಜಾಸ್ತೀನೇಯಾ. ಆಲ್ ಮೋಸ್ಟ್ ಒಂದು 85ಡಿಗ್ರಿ ಇರಬಹುದು. ಕೋನಮಾಪಕ ಇಟ್ಟೆರೆ, ಹೂಂ 85ಡಿಗ್ರಿನೇ. ಅವ್ಳು ನಗ್ತಾವ್ಳೆ ಅನ್ನೋದನ್ನ ತುಟಿಯ ಚಲನೆಯಿಂದ ಹಾಗೇ ಅಳ್ತಾವ್ಳೆ ಅನ್ನೋದನ್ನ ಕಣ್ಣೀರಿನಿಂದ ತಿಳ್ಕೊಬೇಕು. ಹಲ್ಲು ಉಬ್ಬು ಇರೋದ್ರಿಂದ "ಬಾವ ಅಂದರೆ ಬಾಮಾ" ಅಂತಾ ಕೇಳ್ಸೋತ್ತೆ. ಮೇಲ್ಗಡೆ ಹಲ್ಲಿಗೆ ನಾಲಿಗೆ ತಾಕಿ ಹೇಳೋ ಅಂತಹ ಸುಮಾರಷ್ಟು ಪದಗಳು ಗಾಳಿಯಲ್ಲಿ ಹೋಗಿ ಹೀಗೆ ಆಗೋತ್ತೆ. ನಮ್ಗೆ ಸ್ಯಾನೆ ಅಭ್ಯಾಸ ಆಗೈತೆ ಬಿಡಿ.

ಇವ್ಳು ಎಷ್ಟು ಉಸಾರು ಅಂದ್ರೆ ಉಬ್ಬು ಹಲ್ಲಿನ ನೆವ ಇಟ್ಕೊಂಡು ಹೊರಗಿನಾ ಕ್ಯಾಮೆ ಎಲ್ಲಾ ಬೇರೆಯವರಿಗೆ ಹಚ್ಚಿ ಮಜಾ ತಗ್ಗೋತ್ತಾಳೆ.  ಬುದ್ದಿವಂತೆ . ಇವ್ರ ಊರ್ನಾಗೆ ಯಾರರ್ಗೋ ಕರೆಂಟ್ ಹಿಡ್ಕೊಂಡಿತ್ತಂತೆ, ಆಗ ಸುಬ್ಬಿ ಹೋಗಿ ಅವನ ಕೈಗೆ ಒಂದು ದೊಣ್ಣೆ ತೊಗೊಂಡು ಬಿಟ್ಲೂ ನೋಡಿ.ಕರೆಂಟ್ ಏನೋ ಬಿಡ್ತು. ಆದ್ರೆ ಕೈ ಮುರ್ಕೊಂಡ  ಪೇಸೆಂಟ್ ಒಂದು ತಿಂಗ್ಳು ಆಸ್ಪತ್ರೆಯಾಗೆ ಇದ್ನಂತೆ. ಇವ್ಳು ತೊಗಳೋ ಬ್ರಸ್ ಒಂದ್ ತಿಂಗಳ್ ಮ್ಯಾಕೆ ಬರಕ್ಕಿಲ್ಲಂತೆ. ಏನ್ ತಂತ್ಯಾಗೆ ಮಾಡ್ಸಬೇಕ್ ಏನೋ. ಇದು ಆಡೋ ರೀತಿ ಕಂಡು ಅವ್ರ ಅವ್ವ ,ಅದ್ಯಾವ ಮುಂಡೇ ಮಗ ಇವಳನ್ನ ಕಟ್ಕೋತ್ತಾನೋ ಅಂತಾ ಬೈಯ್ತಾವ್ರೆ. ಅಲ್ವೇ ಇವಳಿಗೆ ಕ್ಲಿಪ್ ಹಾಕ್ಸ್ಬೋದಿತ್ತಲ್ಲಾ ಅಂದೆ. ಅದು ಅದೃಷ್ಟದ ಹಲ್ಲಂತೆ ಅದಕ್ಕೆ ಅವ್ವಾ ಅಂಗೆ ಇರ್ಲಿ ಅಂದ್ಲು.  ಅದೇನು ಅದೃಷ್ಟನೋ, ಹೊಡ್ಕೊ ಬೇಕು. ಯಾದ್ರಾಗೆ. ಕಟ್ಕೊಂಡೋನು ಕಷ್ಟ ಏಳೇ. ಸಾಣೆ ಹಿಡ್ಸು. ತರಕಾರಿ ಹೆಚ್ಚಕ್ಕೆ ಆಗ್ತತೆ.

  ಹೀಗೆ ಒಂದ್ಸಾರಿ ಬೆಂಗಳೂರಿಗೆ ಬಂದ್ಲು. ಏನೇ ಸುಬ್ಬಿ ಯಾವಾಗೇ ಬಂದೆ. ಮನೇಲೆಲ್ಲಾ ಸಂದಾಗ್ ಅವ್ರಾ. ಹೂಂ ಬಾಮಾ ಅಂದ್ಲು. ನನ್ನ ಹೆಂಡರಿಗೆ ತಮಾಷೆ ಮಾಡ್ತಿತ್ತಿದ್ದೆ. ಎಂಗಿದ್ರೂ ನಿನ್ನ ತಂಗಿ ಬಂದವ್ಳೆ, ಮನೇಲ್ಲಿ ತುರೇಮಣೆ ಇಲ್ಲಾ ಅಂದ್ರೆ ನಿಮ್ಮ ತಂಗಿ ಬಾಯನ್ನ ಪಿನಾಯಲ್ ಹಾಕಿ ತೊಳೆದು ಕಾಯಿನಾ ತುರಿದು ಬಿಡು, ಆಮೇಲೆ ಸಣ್ ಸೌಟು ಹಾಕಿ ಎತ್ಕಂಡ್ರೆ ಆಯ್ತದೆ ಅಂತಾ. ನೀವೇನ್ ಬೋ ಸುರಸುಂದರಾಂಗ ಅಂತಾ ಹೆಂಡರು. ಇವಳನ್ನ ನೋಡಿದಾಗಲೆಲ್ಲಾ ನನಗೊಂದು ಯೋಸನೆ. ಅಕಸ್ಮಾತ್ ಇವಳು ಮದುವೆ ಆಗಿ, ಗಂಡನಿಗೆ ಏನಾದ್ರೂ ಕಿಸ್ ಹೊಡದ್ರೆ, ಅವನ ಕೆನ್ನೆ,ಗದ್ದ,ತುಟಿ...... ಎಲ್ಲಾ ಕಡೆ ರಕ್ತ ಬಂದು, ಮಾರನೆಯ ದಿನ ಅವನು ಸೆಪ್ಟಿಕ್ ಇಂಜೆಕ್ಸನ್ ಏನಾದ್ರೂ ತೊಗಬೇಕಾಗುತ್ತಾ . ಡಾಕ್ಟ್ರುನ್ನ ಮದುವೆ ಮಾಡ್ಸೋದೆ ಒಳ್ಳೇದು. ಇಲ್ಲಾ ಅಂದ್ರೆ ಹೆಲ್ಮೆಟ್ ಹಾಕ್ಸಿದ್ರೆ ಎಂಗೆ, ಅನ್ನೋದು ನನ್ನ ಯೋಸನೆ. 

ರಾತ್ರಿ ಹೊತ್ತು ಅವಳು ಬಚ್ಚಲು ಮನೆಗೆ ಹೋಗಬೇಕಾದ್ರೆ ಉಸಾರೇ ಸುಬ್ಬಿ.  ಹಲ್ಲನ್ನ ಬಾಗಿಲಿಗೆ ಬಡಿಸಿಕೊಂಡಾಳು ಅಂತಾ ಚಿಂತೆನಾ,  ನನ್ನ ಹೆಂಡರು. ಅಂಗಲ್ಲಾ ಕತ್ತಲಾಗೆ ಅಕಸ್ಮಾತ್ ಬಿದ್ರೆ, ಮಕ್ಳು ಹಾಲ್ನಾಗೆ ಮಕ್ಕೋಂಡವೆ. ಇವಳ ಹಲ್ಲು ಹೋಗಿ ಮಕ್ಕಳ ಮುಖಕ್ಕೋ, ಬೆನ್ನಿಗೋ ನೆಟ್ಟಕಳವಾ, ಇನ್ನು ರಾತ್ರಿ ನಾ ಎಲ್ಲಿ ಹೋಗ್ಲಿ ಅನ್ನೋದು ನನ್ನ ಚಿಂತೆ ಎಂದೆ. ಥೂ ಮೂದೇವಿ ಬರೀ ನಿಂದು ಇಂತದೆಯಾ. ಸುಬ್ಬಿಗೆ ಆಗ್ಲೇ 25 ವರ್ಸ ಆಗಿತ್ತು. ಅವಳನ್ನ ಧರ್ಮಸ್ಥಳಕ್ಕೆ ಕರ್ಕೊಂಡು ಹೋದ್ರೆ ಬೇಗ ಮದುವೆ ಆಗ್ತದೆ ಅಂತಾ ಯಾವನೋ ದರ್ಬೇಸಿ ಜೋತಿಸಿ ಏಳಿದ್ನಂತೆ.

ಕೊನೆಗೆ ಒಂದಿನ ನಮ್ಮ ಸಂಸಾರ ಮತ್ತು ಸುಬ್ಬಿ ಧರ್ಮಸ್ಥಳಕ್ಕೆ ಹೋದ್ವಿ. ಬೋ ಕ್ಯೂ ಇತ್ತು. ತಲೆ ಮ್ಯಾಕೆ ಒಂದು ಟವಲ್ ಹಾಕಕ್ಕೊಂಡು ಕ್ಯೂನಾಗೆ ನಿಂತಿದ್ದೆ. ಸಲ್ಟಿಂದ ಮನೆ ಬೀಗ  ಇದ್ದಕ್ಕಿದ್ದಂತೆ  ಸುಬ್ಬಿ ಕಾಲು ಕೆಳಗೆ ಬಿದ್ದೋಯ್ತು. ನಾನೇ ತೆಕ್ಕೊಡ್ತೀನಿ ಬಾಮಾ. ಅಂದು ಸ್ವಲ್ಪ ಹೊತ್ತಿಗೆ " ಠಣ್ " ಅಂತಾ ಸಬ್ದ ಬಂತು. ಏನೋ ಬೀಗ ತೆಗೆಯೋ ಬೇಕಾದ್ರೆ ಕಂಬಿಗೆ ತಗಲಿರ ಬೇಕು ಅಂದ್ಕೊಂಡು ಹಿಂತಿರುಗಿದ್ರೆ, ಸುಬ್ಬಿ ಬಾಯಿಗೆ ಕರ್ಚೀಫ್ ಹಿಡ್ಕೊಂಡು ನಿಂತಿದ್ಲು. ಏ ಥೂ ನೋಡ್ಕಂಡು ಬೀಗ ತೆಕ್ಕೋಳ್ಳೋದು ಅಲ್ವಾ ಅಂದೆ. ಈ ಕಾರಿಗೆ ಎಂಗೆ ಎಕ್ಸ್ ಟ್ರಾ ಫಿಟ್ಟಿಂಗ್ ಮಾಡಿಸಿದಾಗ  ಉಸಾರಾಗಿ ಓಡಿಸ್ತೀವಿ. ನೀನೂ ಅಂಗೇ ಇರ್ಬೇಕು ಅಂದೆ. ಅಷ್ಟೊತ್ತಿಗಾಗಲೆ ಅಲ್ಲಿನ ಕೆಲ ಐಕ್ಲು ನೋಡ್ಲಾ ಎಂಗೈತೆ ಫಿಗರು . ಕರ್ಚೀಫ್ ತೆಗೀತಿದ್ದಾಗನೇ ಅಯ್ಯಯ್ಯಪ್ಪಾ ಅನ್ನೋವು.

ಅಂತೂ ದರ್ಸನ ಆಯ್ತು. ಬೆಳಗ್ಗೆ ಡ್ಯೂಟಿಗೆ ಹೋಗಬೇಕು ಅಂತಾ ರಾತ್ರಿ ಬಸ್ಗೆ ಬೆಂಗ್ಳೂರಿಗೆ ಹೊಂಟ್ವಿ. ನಮ್ಮ ಮುಂದಗಡೆ ಸೀಟ್ನಾಗೆ, ಎಲ್ಲಾ ಮಿರಿಂಡಾಗಳು, (ಅಂದರೆ ಧರ್ಮಸ್ಥಳದಾಗೆ ಮುಡಿ ಕೊಟ್ಟು ಬಂದಿರೋರು), ನಮ್ಮೆಲ್ಲರಿಗೂ ಸುಸ್ತಾಗಿತ್ತಾ. ಅಂಗೇ ನಿದ್ದೆ. ಹೊಂಟು ಎಷ್ಟೋ ಹೊತ್ತು ಆದ ಮ್ಯಾಕೆ. ಡ್ರೈವರ್ ಧಿಡೀರ್ ಬ್ರೇಕ್ ಹಾಕ್ದ ನೋಡಿ. ನಾವೆಲ್ಲಾ ಒಂದ್ಸಾರಿ ಮುಂದೆ ಹೋಗಿ ಹಿಂದೆ ಬಂದ್ವಿ. ಆದ್ರೆ ಸುಬ್ಬಿ ಮುಂದೆ ಹೋದಳೂ ಹಿಂದೆ ಬರ್ಲೇ ಇಲ್ಲಾ. ಸ್ಟಾಂಡಿಂಗ್ ಪೊಸಿಸನ್. ಅಲ್ಲೇ ನಿಂತಿದ್ಲು.  ಯಾಕೋ ಡೌಟು ಬಂದು ಕಣ್ಣು ಬಿಡ್ತೀನಿ. ಸುಬ್ಬಿ ಹಲ್ಲು ಮದ್ಯದ ಮಿರಿಂಡಾ ತಲೆಗೆ ನೆಟ್ಕೊಂಡು ಬಿಟ್ಟೈತೆ. ಹಸೀ ಮರಕ್ಕೆ ಉಳಿ ತೊಗಂಡು ಹೊಡದಂಗೆ ಆಗ್ಬಿಟ್ಟೈತೆ.

ಇಬ್ಬರೂ ಕಸರತ್ತು ಮಾಡೇ ಮಾಡ್ತಾವ್ರೆ ಹಲ್ಲು ಆಚೇನೇ ಬತ್ತಾ ಇಲ್ಲ. ಯೋ ಕಂಡಕ್ಟರ್ ಬಸ್ ನಿಲ್ಸಯ್ಯಾ ಅಂದು ಲೈಟ್ ಹಾಕ್ಸಿ. ನೋಡಿದ್ರೆ, ಸುಬ್ಬಿ ಹಲ್ಲು ಬೋಳು ತಲೆಗೆ ಬರಾಬರಿ ಸಿಕ್ಕಾಕಂಡೈತೆ. ಇಬ್ಬರನ್ನೂ ಹಾಗೇ ಕೆಳಕ್ಕಿಳಿಸಿದ್ಚಿ. ಏ ಥೂ, ಇಬ್ಬರೂ ನೆಲದ ಮೇಲೆ ಮಕ್ಕೊಳ್ರಿ ಅಂದು. ಮಿರಿಂಡಾ ತಲೆಗೆ ಕಾಲುಕೊಟ್ಟು ಸುಬ್ಬಿ ತಲೇನಾ ಹಿಡ್ಕೊಂಡು ಎಳ್ದೆ ನೋಡಿ. ಹಂಗೆ ಹಂಗೆ ಸುಬ್ಬಿ ಮೇಲ್ ಬಂದಿದ್ಲು. ಮಿರಿಂಡಾ ತೆಲಯೆಲ್ಲಾ ರಕ್ತ. ಪ್ರಸಾದದ ಅರಿಸಿನ ಇತ್ತು. ಅದನ್ನೇ ಬೋಳು ಬುಲ್ಡೆಗೆ ಹೆಂಡರು ಬಳಿದ್ಲು. ರಕ್ತ ನಿಲ್ತು. ಇದೋಳ್ಳೆ ಕಾಟಾ ಆಯ್ತಲ್ಲಾ ಅಂತಾ ಕಂಡಕ್ಟರ್. ಸುಬ್ಬಿ ನಿನ್ನ ಹಲ್ಲು ಏನಾದರೂ ಆಗೈತಾ ಅಂದೆ. ಏ ಕಬ್ಬು ತಿನ್ನೋ ಹಲ್ಲು. ಅವನ ಬುಲ್ಡೆ ಏನಾಗೈತೆ ಅನ್ತಾ ಮೊದ್ಲು ನೋಡಿ. ಅಯ್ಯೂ ನಿನ್ ಮನೆ ಕಾಯ್ವೋಗ. ಇಂಜೆಕ್ಸನ್ಗೆ ಅಂತಾ500ರೂಪಾಯಿ ಬೇರೆ ಕೊಟ್ಟೆ. ಮಕ್ಳು ಏನಾದ್ರೂ ಕೇಳಿದ್ರೆ ದುಡ್ಡು ಇಲ್ಲಾ ಅಂತ್ಯಾ. ಈಗ ಎಂಗೆ. ಗುರುವೇ ಸಿದ್ದೇಸ ಈ ಸುಬ್ಬಿ ಗಂಡ ಆಗೋನ್ನ ನೀನೇ ಕಾಪಾಡಪ್ಪ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಯಾಕೋ ಡೌಟು ಬಂದು ಕಣ್ಣು ಬಿಡ್ತೀನಿ. ಸುಬ್ಬಿ ಹಲ್ಲು ಮದ್ಯದ ಮಿರಿಂಡಾ ತಲೆಗೆ ನೆಟ್ಕೊಂಡು ಬಿಟ್ಟೈತೆ. ಹಸೀ ಮರಕ್ಕೆ ಉಳಿ ತೊಗಂಡು ಹೊಡದಂಗೆ ಆಗ್ಬಿಟ್ಟೈತೆ. ಇಲ್ಲಿಂದ ಕೊನೆಯ ತನಕ ನಗು ತಡೆಯೋದಕ್ಕೆ ಆಗಲಿಲ್ಲ ಸಕ್ಕತ್ ನಗು ಕಣ್ರಿ ಕೋಮಲ್............... ನಾಗರಾಜ್