ಮಿರಿಂಡಾಗೆ ಕನ್ನಡ ಗ್ರಾಹಕರು ಬೇಡವಾ?

To prevent automated spam submissions leave this field empty.

ನಮಗೆಲ್ಲರಿಗೂ ತಿಳಿದಿರೋ ಹಾಗೆ ಕೋಕೋಕೋಲಾ ಮತ್ತೆ ಪೆಪ್ಸಿಕೋ ಎರಡು  ಕಂಪನಿಗಳು ಸುಮಾರು ೧೦-೧೫ ವರ್ಷಗಳಿಂದ ಕರ್ನಾಟಕದಲ್ಲಿ ಬೇರೆ ಬೇರೆ ರೀತಿಯ ತಂಪಾದ ಪಾನಿಯಗಳ್ನ ಮಾರಾಟ ಮಾಡ್ತಿದ್ದಾರೆ. 

ಕೊಕೊಕೋಲಾ ಕಂಪನಿಯ "ಫ್ಯಾಂಟ" ಜಾಹಿರಾತುಗಳಲ್ಲಿ ಸಂಪೂರ್ಣ ಕನ್ನಡವಿದ್ದರೆ, ಪೆಪ್ಸಿಕೋ ಕಂಪನಿಯ "ಮಿರಿಂಡಾ" ಜಾಹಿರಾತುಗಳು ನಾಡಿನ ಜನರಿಗರಿಯದ ಭಾಷೆಯಲ್ಲಿದೆ.

ಕೆಳಗಿನ ಎರಡು ಚಿತ್ರಗಳನ ನೋಡಿದರೆ ನಿಮಗೆ ವ್ಯತ್ಯಾಸ ಕಾಣ್ಸತ್ತೆ.


 

 

ಯಾವುದೇ ಸ್ವಾಭಿಮಾನಿ ಕನ್ನಡಿಗರನ್ನು ನಿದ್ದೆಯಿಂದ ಎಬ್ಬಿಸಿ ಕೇಳಿದರೂ "ಫ್ಯಾಂಟ" ಜಾಹಿರಾತು ಮನಸ್ಸಿಗೆ ಹತ್ತಿರವಾದದ್ದು ಅಂತ ಹೇಳ್ತಾರೆ.

ಕೊಕೊಕೋಲಾ(ಫ್ಯಾಂಟ) ಕಂಪನಿಯವರ ಸರಿಯಾದ ಮಾರುಕಟ್ಟೆಯನ್ನ ಅರ್ಥ ಮಾಡ್ಕೊಂಡು ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದರೆ, ಪೆಪ್ಸಿಕೋ(ಮಿರಿಂಡಾ) ಕಂಪನಿಯವರು ಯಾವುದೋ ಬೇರೆಯ ರಾಜ್ಯಕ್ಕೆ ತಯಾರಾದ ಜಾಹಿರಾತುಗಳನ್ನು ಕರ್ನಾಟಕದಲ್ಲಿ ಹಾಕುತ್ತಿದ್ದಾರೆ.  

ಕನ್ನಡ ನೆಲದಲ್ಲಿ ಎಲ್ಲಾ ಜಾಹಿರಾತುಗಳು ಕನ್ನಡದಲ್ಲೇ ಇರಬೇಕು ಎನ್ನುವುದು ಸ್ವಾಭಾವಿಕ. ಹಾಗಾಗಿ ಪೆಪ್ಸಿಕೋ ಕಂಪನಿಯವರಿಗೆ ಅವರ ತಪ್ಪನ್ನು ಅರಿವು ಮಾಡಿಸಿಕೊಡೋಣ.

ಅವರಿಗೆ ಮಿಂಚೆ ಬರೆದು "ಮಿರಿಂಡಾ ಪಾನೀಯವನ್ನು ಕನ್ನಡಿಗರು ಕೊಂಡ್ಕೊಬಾರ್ದು ಅನ್ನೋದು ನಿಮ್ಮ ಉದ್ದೇಶಾನಾ" ಅಂತ ಪ್ರಶ್ನಿಸೋಣ. ಕನ್ನಡ ಬಳಸದಿದ್ದರೆ ತಮ್ಮ ಮಾರುಕಟ್ಟೆಯನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು ಇದೆ ಎಂದು ಅವರಿಗೆ ಹೇಳಬೇಕಾಗಿದೆ.


ಮಿಂಚೆ ಬರೆಯಬೇಕಾದ ವಿಳಾಸ - consumer.feedback@intl.pepsico.com 

ಲೇಖನ ವರ್ಗ (Category):