ನೀರಸ ಸಂಪದ

To prevent automated spam submissions leave this field empty.

ಸೋಮವಾರದಿಂದ ಶುಕ್ರವಾರದವೆರೆಗೆ ಸಂತೆಯಂತೆ ಗಿಜಿಗುಡುತ್ತಿದ್ದ ಸಂಪದ ಶನಿವಾರ, ಭಾನುವಾರ ಬಂತೆಂದೆರೆ ನೀರಸವಾಗಿ ಬಿಡುತ್ತದೆ. ಧೋ ಎಂದು ಮಳೆ ಸುರೆಯುವಂತೆ ವಾರದ 5ದಿನಗಳಲ್ಲಿ ಕವನ,ಲೇಖನಹಾಸ್ಯ ಅಂತಾ ದಬ ದಬ ಎಂದು ಬ್ಲಾಗ್,ಲೇಖನಕ್ಕೆ ಬಿದ್ದಿದ್ದೇ ಬಿದ್ದದ್ದು. ಬಿಸಿ ಬಿಸಿ ಚರ್ಚೆ. ಒಬ್ಬರು ಮೇಲೆ ಒಬ್ಬರು ಗುದ್ದಾಡಿದ್ದೇ ಗುದ್ದಾಡಿದ್ದು. ಅಕ್ಷರಗಳಲ್ಲಿ. ಅದೇ ಕಡೆಯ ಎರಡು ದಿನಗಳಲ್ಲಿ ಮಳೆ ನಿಂತ ಮೇಲೆ ಎಲೆಯಿಂದ ಆಗೊಂದು ಈಗೊಂದು ಬೀಳುವ ಹನಿಯಂತೆ ಬರಹಗಳು ಬಂದು ಬೀಳುತ್ತಿರುತ್ತದೆ. ಈ ದಿನಗಳಲ್ಲಿ ಪ್ರತಿಕ್ರಿಯೆ ಕೂಡ ಗಂಟೆಗೊಂದು ಕೆಲವೊಮ್ಮೆ ಅರ್ಧದಿನಕ್ಕೆ ಒಂದು ಬಂದರೆ ಹೆಚ್ಚು ಅನ್ನುವಂತಿರುತ್ತದೆ.

ವಾರದ 5ದಿನಗಳು  ಸಂಪದಿಗರು ಕೆಲಸದಲ್ಲಿ ನಿರತರಾಗಿರುವುದರಿಂದ ಬಿಡುವು ಇದ್ದಾಗಲೆಲ್ಲಾ ಸಂಪದಕ್ಕೆ ಒಂದು ಕಣ್ಣು ಹಾಯಿಸುತ್ತಾರೆ. ಹಾಗಾಗಿ ಪ್ರತಿಕ್ರಿಯೆಗಳ ಭರಾಟೆ ಜೋರಾಗಿ ಇರುತ್ತೆ. ಕಡೆಯ ಎರಡು ದಿನಗಳು ಹಾಯಾಗಿ ಇರೋಣ, ಯಾವನಿಗೆ ಬೇಕು ಕಂಪ್ಯೂಟರ್ ಸಹವಾಸ ಎಂದುಕೊಂಡು ಕುಟುಂಬದೊಂದಿಗೆ ಕಾಲ ಕಳೆಯುವ ನಿರ್ಧಾರ ಮಾಡುವ ಕಾರಣ ಈ ರೀತಿಯಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಆದರೆ ನಾವು ಎಲ್ಲಾ ದಿನಾನೂ ಗಂಟೆ ಗಟ್ಟಲೆ ಕೂರಲೇಬೇಕು. ಒಂದು ಪದ ತಪ್ಪಾಗಿ ಬಂದರೆ ಬೆಳಗ್ಗೆ ನಾವು ಏಳಕ್ಕಿಂತ ಮುಂಚೆ ಆತ್ಮೀಯ ಓದುಗರೇ ಎಬ್ಬಿಸಿರುತ್ತಾರೆ. ಯಾಕಣ್ಣಾ, ಹಿಂಗೆ ಬರೆದಿದ್ದೀಯಾ ಅಂತಾ ಸುಪ್ರಭಾತ. ವಾರದ ಕಡೆಯ ದಿನಗಳಲ್ಲಿ ಜನ ಫ್ರೀಯಾಗಿ ಇರುತ್ತಾರೆ. ಹಾಗಾಗಿ ಅಂದು ವಿಶೇಷ ಲೇಖನಗಳನ್ನು ಓದುತ್ತಾರೆ ಎನ್ನುವ ಕಾರಣ ಕೆಲವು ವರದಿಗಾರರು ಶನಿವಾರ ಮತ್ತು ಭಾನುವಾರ ಪತ್ರಿಕೆಗಳಲ್ಲಿ ತಮ್ಮ ಸುದ್ದಿ ಪ್ರಕಟವಾಗುವಂತೆ ನೋಡಿಕೊಳ್ಳುತ್ತಾರೆ. ಹಾಗೇ ಸಂಪದದಲ್ಲಿ ಕೂಡ ವಿಶೇಷ ಬರಹಗಳು ಈ ದಿನಗಳಲ್ಲಿ ಬಂದರೆ ಓದುವುದಕ್ಕೆ ಸಮಯ ಇರುತ್ತದೆ. ಸ್ವಾರ್ಥ ಅಂತಾ ಅಲ್ಲ. ಈ ದಿನಗಳಲ್ಲೂ ಬಂದು ಭಾಗವಹಸಿ, ಸಂಜೆಯ ನಂತರ ಷಾಪಿಂಗ್ ಹೋಗಿ ಇಲ್ಲಾಂದ್ರೆ ಸಂಪದ ನೀರಸ.

ಇಂತಿ

ತಮ್ಮ ವಿಶ್ವಾಸಿ

ಸುರೇಶ್ ನಾಡಿಗ್

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಮಗೆ ಹೇಗ್ ಸಾರ್ ಗೊತ್ತಾಗಬೇಕು ನಮ್ಮಂತ ಬ್ಯಾಚುಲರ್ ಕಷ್ಟ.. ಬೆಳ್ಗೆ ಎದ್ದು ನಿತ್ಯ ಕರ್ಮ ಮುಗ್ಸಿ, ತಿಂಡಿ ಮಾಡ್ಕೊಂಡು, ಅದ್ನ ನಮ್ ಕೈಯಾರೆ ಬಾಯಿಕೆ ತುರ್ಕಿ ತಿಂದು ಹಾಗೆ ಕೈ ತೊಳಿಯೋಣ ಅಂತ ಸಿಂಕಿಗೆ ಬಂದ್ರೆ ಹಿಂದಿನ ೫ ದಿನದ ಪಾತ್ರೆ ರಾಶಿ.. ಅದನ್ನೆಲ್ಲಾ ತೊಳ್ದು, ಒರ್ಸಿ ಪಕ್ಕಕ್ಕಿಟ್ರೆ, ಕೆಳಗಡೆ ಇರೋ ಡಸ್ಟ್ ಬಿನ್ನಲ್ಲಿ ನುಸಿ, ಜಿರಳೆಯಾಡ್ತಾ ಇರೋ ಒಂದು ವಾರದ ಕಸ.. ಇರೋ ಬರೋ ಜಿರಳೆನೆಲ್ಲಾ ಪೊರಕೆ ತಗೊಂಡು ಹೊಡೆದು ಸಾಯಿಸಿ, ಕಸ ವಿಲೇವಾರಿ ಮಾಡಿ, ಗುಡ್ಸಿ ಮನೆ ಒರ್ಸೋ ಟೈಮಲ್ಲಿ ೧೧-೧೧:೩೦ ಆಗಿರುತ್ತೆ.. ಇವತ್ತಂತೂ ಸಿಕ್ಕಾಪಟ್ಟೆ ಜಿರಳೆ ಇದ್ದು ಪೊರಕೆಯಲ್ಲಾಗದೆ ಹಿಟ್ ತಂದ್ ಎಲ್ಲಾ ಸಾಯಿಸಿದ್ದಾಯ್ತು (ಪುಣ್ಯಾತ್ಮರು ಕೊಂದು ಪಾಪ, ತಿಂದು ಪರಿಹಾರ ಅಂತ ಮಾತ್ರ ಹೇಳ್ಬೇಡಿ).. ಮತ್ತೆ ಅಂಗಡಿಗೆ ಹೋಗಿ ಅಡ್ಗೆಗೆ ಸಾಮಾನು ತಂದು ಊಟಕ್ಕೆ ತಯ್ಯಾರು ಮಾಡ್ಬೇಕು. ಇವತ್ತಂತೂ ಅರ್ಧಕ್ಕೆ ಗ್ಯಾಸ್ ಖಾಲಿ.. ನಂದು ಪ್ರೈವೇಟ್ ಗ್ಯಾಸ್, ಅವ್ನ ಹತ್ರ ಹೊಸ ಗ್ಯಾಸ್ ಕೇಳೋಕೆ ಅಂತ ಹೋದ್ರೆ ಅಂಗಡಿ ಬಾಗಿಲು. ರೇಟ್ ಬೇರೆ ಗೌರ್ಮೆಂಟ್ ಗ್ಯಾಸಿಗಿಂತ ದುಪ್ಪಟ್ಟು.. ಸಾಯ್ಲಿ ಅಂತ ೧.೫ ಕಿ.ಮೀ ದೂರ ಇರೋ ಇಂಡೇನ್ ಅಂಗಡಿಗೆ ಹೋದ್ರೆ.. ಮ್ಯಾನೇಜರ್ ಇಲ್ಲಾ ಆಮೇಲ್ ಬನ್ನಿ ಅಂತ.. ಮನೆಗೆ ಬಂದು ಇರೋ ಹಳೇ ಕರೆಂಟ್ ಒಲೇಲಿ ಇಟ್ಟಿದ್ದೇ ಅದ್ರ ವಯರ್ ಸುಟ್ಟೋಯ್ತು.. ಮತ್ತೆ ಅದ್ನೆಲ್ಲಾ ಬಿಚ್ಚಿ ಕನೆಕ್ಟ್ ಮಾಡಿದ್ರೆ ರೆಗ್ಯುಲೇಟರ್ ಕೈ ಕೊಟ್ಟೂ ಶಾಖಾನೇ ಹೊರ್ಡಾ ಇಲ್ಲ.. ಸಾಯ್ಲಿ ಅಂತ ೨:೩೦ ವರೆಗೂ ಆ ಕಮ್ಮಿ ಶಾಕದಲ್ಲಿಟ್ಟಿದ್ದಾಯ್ತು.. ಹಸಿವು ತಾಳಲಾರದೇ ಅರೆಬೆಂದಿದ್ದನ್ನೇ ತಿಂದೆ.. ಈಗ ಹಾಗೇ ಒಂದು ಅರ್ಧ ಗಂಟೆ ನಿದ್ರೆ ಮಾಡೋಣಾಂತ.. ಆದ್ರೆ ಮತ್ತೆ ಈಗ ಗ್ಯಾಸ್ ಅಂಗಡಿಗೆ ಹೋಗಬೇಕು.. ರೇಶನ್ ಕಾರ್ಡೆನಾದ್ರೂ ಅಲ್ಲಿ ಕೇಳಿದ್ರೆ ಮತ್ತೆ ೨ ವಾರ ಅದಕ್ಕೆ ಓಡಾಡಬೇಕು.. ಏನ್ ಮಾಡೋದ್ ಸಾರ್.. ಆಫೀಸಲ್ಲಾದ್ರೆ ಹಂಗಲ್ಲ.. ಏನೋ ತೊಂದ್ರೆ ಇದೆ ಇವತ್ತು ನಾಳೆ ಮಾಡ್ಕೊಡ್ತೀನಿ ಅಂತ ಸಂಪದ ಓದ್ಕೊಂಡ್ ಕಾಮೆಂಟ್ ಹಾಕೊಂಡ್ ಇರ್ಬಹುದು..

ಪಾಲ, ನೀವು ಹೂ೦ ಅನ್ನಿ, ಹೆಣ್ಣು ನೋಡಿ, ಮದುವೆ ಮಾಡ್ಸೋ ಜವಾಬ್ದಾರಿ ನ೦ದು!ಹೂ೦ ನಾ ಹು೦..ಹು೦.. ನಾ? ನಮಸ್ಕಾರಗಳು.

ನಾವಡರೇ.. ಇದು ಪಾಲರಿಗೆ ಮಾತ್ರ "ಆಫರೋ".. ...ಅಥವಾ ಬೇರೆಯವರಿಗೂ "ಎಕ್ಸ್‌ಟೆಂಡ್" ಆಗಬಹುದೋ.. !!! :) ನಿಮ್ಮೊಲವಿನ, ಸತ್ಯ..

ಮೊದಲು ಜಾತಕ ಕಳಿಸಿ ಆಮೇಲೆ ನಾನು ನಾವಡರು ಡಿಸ್ಕಸ್ ಮಾಡಿ ಒಂದು ನಿರ್ಧಾರಕ್ಕೆ ಬರ್ತೀವಿ. ಹಂಗೇ ಎಲ್ಲಾರಿಗೂ ಹೆಣ್ಣು ನೋಡಕ್ಕಾಗೋಲ್ಲ. ಜನಾ ಬೇರೆ ಅರ್ಥ ತಿಳ್ಕೊಂತಾರೆ. ಸತ್ಯ ಜಾತಕನ ಬೇಗ ಕಳಿಸಿ.

ವಾವ್.. ಒಳ್ಳೆ ಆಫರ‍್ ಈಗ.. ಖಂಡಿತ.. ನೀವು ಹುಡುಗಿ ಹುಡುಕಕ್ಕೆ ಆಗದಿದ್ರೂ(ನಿಮ್ಮ ಪ್ರಯತ್ನದ ಮೇಲೆ ಅಪನಂಬಿಕೆ ಇಲ್ಲ, ಯೋಚಿಸಬೇಡಿ..!!) ಈ ಭರವಸೆ ತುಂಬಾ ಸಂತೋಷ ತಂತು.. ಜಾತಕ ಸದ್ಯ ನನ್ನ ಕೈನಲ್ಲಿ ಇಲ್ಲ.. ಊರಲ್ಲಿ ಅಮ್ಮನ ಹತ್ರ ಇದೆ.. ನಾನ್ಯಾವತ್ತೂ ಅದರ ಬಗ್ಗೆ ಯೋಚನೆ ಮಾಡಲೇ ಇಲ್ಲ.. ಇನ್ನೂ ನೀವು ಹೇಳಿದ ಮೇಲೆ ಅನ್ನಿಸ್ತಾ ಇದೆ..ನನ್ನ ಹತ್ತಿರ ಜಾತಕದ ನಕಲೊಂದು ಇಟ್ಟುಕೊಳ್ಳಬೇಕಿತ್ತು ಅಂತ.. :) ಧನ್ಯವಾದಗಳು.. ನಿಮ್ಮೊಲವಿನ, ಸತ್ಯ..

ನಾವಡರೆ ನಮ್ಮ ಕಡೆ ಒಬ್ಬ ಹುಡುಗ ಇದಾನೆ. ಬಿ.ಎ ಓದಿದಾನೆ. ಬ್ರಾಹ್ಮಣ. ತುಂಬಾ ಚೆನ್ನಾಗಿದಾನೆ. ಎರಡು ಎಕರೆ ಅಡಿಕೆ ತೋಟ ಇದೆ. ಒಂದು 20 ಲಕ್ಷ ಸಾಲ ಇದೆ. ಚಟ ಏನೂ ಇಲ್ಲ. ಊಟ ಆದ್ಮೇಲೆ ಗುಟ್ಕಾ ಹಾಕ್ತಾನೆ ಅಷ್ಟೆ. ಯಾವಾಗದ್ರೂ ಬೇಜಾರಾದ್ರೆ ಇಸ್ಪೀಟ್. ಅಲ್ಲಿ ಟೈಂ ಪಾಸ್ಗೆ ಅಂತಾ ಜಾಸ್ತಿ ಏನಿಲ್ಲ ಒಂದು ಕ್ವಾಟರ್ ಎಣ್ಣೆ. ನೆಂಚಕೊಳ್ಳೋಕೆ ಅಂತಾ ಚಿಕನ್ ಅಷ್ಟೆ. ಇಸ್ಪೀಟ್ ನಲ್ಲಿ ಜಾಸ್ತಿ ಸೋತರೆ ತಲೆ ನೋವು ಬರಬಾರದು ಅಂತಾ ಏನು ಒಂದು ಪ್ಯಾಕ್ ಸಿಗೇಟ್ ಅಷ್ಟೆ. ಇದರ ವಾಸನೆ ಹೋಗಲಿ ಅಂತಾ ಮತ್ತೆ ಗುಟ್ಕಾ. ನಾವಡರೆ ಯಾವುದಾದರೂ ಹೆಣ್ಣು ಇದೆಯಾ.

ವಾವ್.. ಎಂತಾ ಒಳ್ಳೆ ಹುಡುಗರೀ.. ರೀ ನಾಡಿಗ್ರೆ.. ನನಗೆ ಜಾತಕ ಕೇಳಿ ಅದು ನಾವಡ್ರ ಹತ್ತಿರ ಡಿಸ್ಕಸ್ ಬೇರೇ ಮಾಡಿ.. ಎಂತಾ ಹುಡುಗಿ ಹುಡುಕಬಹುದು ನೀವು ಅಂತ ನಾನೀಗ.. ಅಂತ ಯೋಚನೆ ಮಾಡ್ತಾ ಇದೀನಿ... :? ಏಕೆಂದರೆ.. ನಾನು ನೀವು ಮೇಲೆ ಹೇಳಿರೋ ಹುಡುಗನಷ್ಟು ಒಳ್ಳೆಯವನಲ್ಲ..!! ನಿಮ್ಮೊಲವಿನ, ಸತ್ಯ.. :)