ಬಿರ್ಲಾ ಸನ್-ಲೈಫ್ ನಲ್ಲಿ ಕಾಣದ ಬೆಳಕು

To prevent automated spam submissions leave this field empty.

ಗೆಳೆಯರೇ,

 

ಆದಿತ್ಯ ಬಿರ್ಲಾ ಸಂಸ್ಥೆಯವರು ತಮ್ಮ ಬಿರ್ಲಾ ಸನ್-ಲೈಫ್ ಅಂಗಸಂಸ್ಥೆಯಡಿ Life Insurance, Mutual Funds, ULIP ಮುಂತಾದವುಗಳನ್ನು ಮಾರುಕಟ್ಟೆಯಲ್ಲಿಟ್ಟಿದ್ದಾರೆ. 
ಬೆಂಗಳೂರಿನ ಜಯನಗರದ ಬಿರ್ಲಾ ಸನ್-ಲೈಫ್ ಕಛೇರಿಗೆ ಗೆಳೆಯರೊಬ್ಬರು ಭೇಟಿಕೊಟ್ಟಾಗ ಗ್ರಾಹಕನಿಗೆ ಸಿಗಬೇಕಾದ ಸರಿಯಾದ ಮಾಹಿತಿಯಿಂದ ವಂಚಿತರಾದರು. ಕನ್ನಡದಲ್ಲಿ ವಿವರಿಸಲು ಯಾರೊಬ್ಬರೂ ತಯಾರಿರಲಿಲ್ಲ, ಅಲ್ಲಿನ ಒಬ್ಬ ಅಧಿಕಾರಿಗೂ ಕನ್ನಡ ತಿಳಿದಿಲ್ಲ.

ಈ ಮ್ಯೂಚುಯಲ್ ಫಂಡ್‍ಗಳು ಹೆಂಗೆ ಕೆಲಸ ಮಾಡುತ್ತದೆ, ಅದರಲ್ಲಿ ಅಡಗಿರೋ ಲಾಭ-ನಷ್ಟದ ಪದ್ದತಿಗಳೇನು, ಲಾಭ ಮಾಡಿಕೊಳ್ಳಲು ಏನು ಮಾಡಬೇಕು, ನಷ್ಟ ತಡೆಯಲು ಅನುಸರಿಸಬೇಕಾದ ಪದ್ಧತಿಗಳು ಯಾವುವು ಎಂಬೆಲ್ಲಾ ವಿವರಗಳನ್ನು, ಹಣ ತೊಡಗಿಸುವ ಪ್ರತಿಯೊಬ್ಬನಿಗೂ ತಿಳಿಸಿ ಹೇಳಬೇಕಾದುದು ಕಂಪನಿಯ ಕರ್ತವ್ಯ.

ಸರಿಯಾದ ರಿಸ್ಕ್ ಅಂಶಗಳನ್ನು ತಿಳಿಯದೆ ಜನ ಮೋಸ ಹೋದರೆ ಗತಿ ಏನು?

"ಕನ್ನಡದಲ್ಲಿ ಮಾತನಾಡಿ ತಿಳಿಹೇಳಲು ಬರುವಂತಾ ಅಧಿಕಾರಿಗಳನ್ನು ನಿಮ್ಮ ಕಚೇರಿಯಲ್ಲಿ ಕೆಲಸಕ್ಕೆ ತೆಗೆದುಕೊಳ್ಳಿ" ಎಂದು ಬಿರ್ಲಾ ಸನ್‍ಲೈಫ್‍ನೋರಿಗೆ ಹೇಳಬೇಕಾಗಿದೆ.  

ಇದು ಬಹಳ ಗಂಭೀರವಾದ ವಿಷಯವಾಗಿರುವುದರಿಂದ ನಾವೆಲ್ಲರು ಅವರಿಗೆ ಮಿಂಚೆ ಬರೆದು ತಿಳಿ ಹೇಳೋಣ.

ಮಾರುಕಟ್ಟೆಯಲ್ಲಿ ಬಹಳಷ್ಟು ಕಂಪನಿಗಳ ವಿಮೆ, ಮ್ಯೂಚುಯಲ್ ಫಂಡ್ಗಳು ಇದ್ದು ಕನ್ನಡದಲ್ಲಿ ಗ್ರಾಹಕ ಸೇವೆ ಕೊಟ್ಟರೆ ಮಾತ್ರ ಮಾರುಕಟ್ಟೆಯಲ್ಲಿ ಬೇಡಿಕೆ ಉಳಿಸಿಕೊಳ್ಳಬಹುದು ಎಂಬುದನ್ನು ಅವರಿಗೆ ಮಿಂಚೆ ಬರೆದು ಮನವರಿಕೆ ಮಾಡಿ ಕೊಡೋಣ.

 

ಅವರಿಗೆ ಮಿಂಚೆ ಬರೆಯಬೇಕಾದ ವಿಳಾಸ - connect@birlasunlife.com,customerservice@birlasunlife.com

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಮ್ಮ ಮಾತು ಸರಿ. ಮಿಂಚೆ ನಾನು ಕೊಡ ಕಳುಹಿಸುತಿನಿ ಅವರು ಈ ರೀತಿ ಮಾಡೋದು ಕನ್ನಡ ವಿರೋದಿ ತನ ನಮ್ಮ ಕನ್ನಡ ನಾಡಿನಲ್ಲಿ ಕನ್ನಡಕೆ ಬೆಲೆ ಕೊಡಬೇಕು -- ಇಂತಿ ನಿಮ್ಮವ, ನಂದಿ ಜೆ.ಹೂವಿನಹೊಳೆ