ಚುರ್ಮುರಿ ೫

To prevent automated spam submissions leave this field empty.

೧೩) ಹೆಲ್ಮೆಟ್ ಹಾಕದೆ ಹೋಗುತ್ತಿದ್ದ ಅವನನ್ನು ಟ್ರಾಫಿಕ್ ಪೋಲಿಸ್ ತನ್ನ ಬೈಕ್ನಲ್ಲಿ ಹಿಂಬಾಲಿಸಿ ಧಮಕಿ ಹಾಕಲು ಶುರುಮಾಡಿದ ಆದರೆ ಸ್ವತಃ ಹೆಲ್ಮೆಟ್ ಹಾಕುವುದನ್ನು ಮರೆತಿದ್ದ.

 

೧೪) ಅಮ್ಮ ಸೆಕೆ ಅಂದರೂ ಏ.ಸಿ ಹಾಕದ ಮಗ ತನ್ನ ಗೆಳತಿ ಸೆಕೆ ಅಂದ ಕೂಡಲೇ ಏ.ಸಿಯ ಸ್ವಿಚ್ಚನ್ನು ೫ಕ್ಕೆ ತಿರುಗಿಸಿದ್ದ.

 

೧೫) ಸರ್ಕಾರಿ ಶಾಲೆಯಲ್ಲಿ ಓದಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಅವನು ಕೇವಲ ಸಾವಿರಗಳಲ್ಲಿ ತನ್ನ ವಿಧ್ಯಾಭ್ಯಾಸ ಮುಗಿದಾಗ ಉಬ್ಬಿಹೊಗಿದ್ದ, ತನ್ನ ಮಗನನ್ನು ಯು.ಕೆ.ಜಿಗೆ ಸೇರಿಸುವಾಗ ಕೇಳಿದ ಲಕ್ಷಕ್ಕೆ ಕೂತಲ್ಲೇ ಕುಗ್ಗಿಹೋಗಿದ್ದ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಚುರುಮುರಿ ಕೇಳಿದ ತಕ್ಷಣ ಸಿಕ್ಕಿತು! ಅದೂ ರುಚಿ ರುಚಿಯಾಗಿ! ಚಿಕ್ಕೂ, ಮುಂದೆ ಮರಿಚಿಕ್ಕೂವನ್ನು ಯುಕೆಜಿಗೆ ಸೇರಿಸುವ ವಿಚಾರದಲ್ಲಿ ಈಗಲೇ ತಯಾರಿ ನಡೆಸಿದ ಹಾಗಿದೆ!

ಭಾಗ್ವತವ್ರೆ, ನಾವಡವ್ರೆ, ಗೋಪಿಯವ್ರೆ,ಗೋಪಾಲವ್ರೆ ,ನಾಗರಾಜವ್ರೆ, ಮಂಜುವ್ರೆ ನಿಮ್ಮೆಲ್ಲರ ಪ್ರತಿಕ್ರಿಯೆಗೆ ಧನ್ಯವಾದಗಳು. <ಚಿಕ್ಕೂ, ಮುಂದೆ ಮರಿಚಿಕ್ಕೂವನ್ನು ಯುಕೆಜಿಗೆ ಸೇರಿಸುವ ವಿಚಾರದಲ್ಲಿ ಈಗಲೇ ತಯಾರಿ ನಡೆಸಿದ ಹಾಗಿದೆ> ಇಲ್ಲ ನಾಗರಾಜವ್ರೆ ಅದಿನ್ನೂ ತುಂಬಾ ದೂರ ಇದೆ :)