ವಿ.ಆರ್.ಎಲ್ ನಲ್ಲಿ ಮಾಯವಾದ ಕನ್ನಡ

To prevent automated spam submissions leave this field empty.

ಗೆಳೆಯರೇ,

 

ವಿಜಯಾನಂದ್ ರೋಡ್ ಲೈನ್ಸ್ (VRL) ಪ್ರತಿಯೊಬ್ಬ ಕನ್ನಡಿಗನಿಗೂ ತಿಳಿದಿರುವ ಸಂಸ್ಥೆ. ಕರ್ನಾಟಕದ ನೂರಾರು ಊರುಗಳಿಗೆ ಬಸ್ ಸಂಚಾರ ಕಲ್ಪಿಸಿರುವ ಹೆಮ್ಮೆಯ ಸಂಸ್ಥೆ ವಿಜಯಾನಂದ್ ರೋಡ್ ಲೈನ್ಸ್. ಸರ್ಕಾರಿ ಬಸ್ ಸೌಲಭ್ಯ ಇಲ್ಲದಿರುವ ಚಿಕ್ಕ ಪ್ರದೇಶಗಳಿಗೂ ಸಹ ವಿ.ಆರ್.ಎಲ್  ಬಸ್ ಗಳು ಇರುವುದು ಮೆಚ್ಚುಗೆಯ ಸಂಗತಿ. ಲಕ್ಷಾಂತರ ಕನ್ನಡಿಗರು ಪ್ರಯಾಣಿಸುವ ಕನ್ನಡಿಗರದ್ದೇ ಮಾಲಿಕತ್ವವಿರುವ  ಸಂಸ್ತೆಯ ಬಸ್ ಚೀಟಿಗಳಲ್ಲಿ ಕನ್ನಡ ಇರಲೆಂದು ಅಪೇಕ್ಷಿಸುವುದು ಸಹಜವಲ್ಲವೇ? ಇತ್ತೀಚಿಗೆ ಗೆಳೆಯ ವಸಂತ್ ವಿ.ಆರ್.ಎಲ್ ಬಸ್ಸಿನಲ್ಲಿ ಪ್ರವಾಸ ಹೋಗಿದ್ದ .ಕೆಳಗಿನ ಚಿತ್ರವನ್ನು ನೋಡಿ :

ಗದಗದಲ್ಲಿ ಸಂಕೇಶ್ವರ್ ಪ್ರಿಂಟರ್ಸ್ ಮೂಲಕ ಕನ್ನಡಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿರುವ ವಿ.ಆರ್.ಎಲ್ ಸಂಸ್ಥೆಯಿಂದಲೇ ಕೇವಲ ಇಂಗ್ಲಿಷ್ ಚೀಟಿ ಮುದ್ರಿಸುತ್ತಿರುವುದನ್ನು ನೋಡಿ ಬೇಸರವಾಯಿತು. 

ಕರ್ನಾಟಕದಲ್ಲಿ ಬೃಹದಾಕಾರವಾಗಿ ಬೆಳೆದಿರುವ ವಿ.ಆರ್.ಎಲ್ ಸಂಸ್ಥೆಯವರಿಗೆ ತಿಳಿ ಹೇಳೋಣ ಬನ್ನಿ. ಕರ್ನಾಟಕದಲ್ಲೇ ಬೀಡು ಬಿಟ್ಟಿರುವ, ಕನ್ನಡಿಗರೇ ಹೆಚ್ಚಾಗಿ ಬಳಸುವ, ಕನ್ನಡಿಗರದ್ದೇ ಮಾಲಿಕತ್ವವಿರುವ ವಿ.ಆರ್.ಎಲ್ ಸಂಸ್ತೆಯ ಚೀಟಿಗಳು ಕನ್ನಡದಲ್ಲಿ ಮುದ್ರಣವಾಗಬೇಕು. ಎಲ್ಲರು ಪತ್ರ ಬರೆದು ನಮ್ಮ ಬೇಡಿಕೆಯನ್ನು ತಿಳಿಸೋಣ.

ಮಿಂಚೆ ಬರೆಯಬೇಕಾದ ವಿಳಾಸಗಳು:- headoffice@vrllogistics.com,varurho@vrllogistics.com,sbcmo@vrllogistics.com

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಮ್ಮ ಭಾಷಾಪ್ರೇಮಕ್ಕೆ, ಕಾಳಜಿಗೆ ಅಭಿನಂದನೆಗಳು "ಕನ್ನಡಿಗ"ರವರೆ. ನಮ್ಮಲ್ಲಿ (ಸಂಪದಿಗರು) ಎಷ್ಟು ಜನ ನೀವು ಕೊಡುವ ವಿಳಾಸಗಳಿಗೆ ಇಮೇಲ್ ಮಾಡುತ್ತೇವೋ ಗೊತ್ತಿಲ್ಲ. ನಾನಂತೂ ಮಾಡಿದ್ದೇನೆ. ಧನ್ಯವಾದಗಳು.

ಹೌದು ಪ್ರಸನ್ನ ಅವರೇ, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆ ಸಾರ್ವಭೌಮತ್ವವನ್ನು ಸ್ಥಾಪಿಸುವಲ್ಲಿ ಪ್ರತಿಯೊಬ್ಬ ಕನ್ನಡಿಗನು ಕೆಲಸ ಮಾಡಬೇಕು.

--ಇದು ನನ್ನ ಅಂಚೆಯ ಪ್ರತಿ-- subjectಸಂಸ್ಥೆಯ ಚೀಟಿಗಳು ಕನ್ನಡದಲ್ಲೂ ಮುದ್ರಿಸಿ ಕರ್ನಾಟಕದಲ್ಲೇ ಬೀಡು ಬಿಟ್ಟಿರುವ, ಕನ್ನಡಿಗರೇ ಹೆಚ್ಚಾಗಿ ಬಳಸುವ, ಕನ್ನಡಿಗರದ್ದೇ ಮಾಲಿಕತ್ವವಿರುವ ವಿ.ಆರ್.ಎಲ್ ಸಂಸ್ಥೆಯ ಚೀಟಿಗಳು ಕನ್ನಡದಲ್ಲೂ ಮುದ್ರಣವಾಗಬೇಕು. ನಿಮ್ಮ ಸಂಸ್ಥೆ ರಾಷ್ಟ್ರ ಮಟ್ಟದಲ್ಲಿ ಬೆಳೆಯಬೇಕೆಂಬ ಅಭಿಮಾನ ನಮ್ಮಲ್ಲೂ ಇದೆ ಆದರೆ ಅದು ನಮ್ಮದು ಅನ್ನೋ ಭಾವನೆ ಇರುವವರೆಗೆ ಮಾತ್ರ. ಈ ರೀತಿ ಅಪರಾಧ ಸಲ್ಲದು. ದಯವಿಟ್ಟು ಪರಿಗಣಿಸಿ ಇಂತಿ ಮನು

ಇದೇ ಯಥಾವತ್ತಾದ ಉತ್ತರ ವಿ ಆರ್ ಎಲ್ ನಿಂದ ನನಗೂ ಬಂತು. ಅದಕ್ಕೆ ಪ್ರತ್ಯುತ್ತರವಾಗಿ ನಾನು ಬರೆದದ್ದು... ನಿಮ್ಮ ಪ್ರತಿಕ್ರಿಯೆಗೆ ನಮಗೆ ಖುಷಿ ಕೊಟ್ಟಿತು. ವಂದನೆಗಳು. ಕನ್ನಡದಲ್ಲೂ ಮುದ್ರಣವಾಗಬೇಕು ಎಂಬುದು ನಮ್ಮ ಕೋರಿಕೆ ಹಾಗೂ ಕಳಕಳಿಯಾಗಿತ್ತು. ನಿಮ್ಮ ಆಶ್ವಾಸನೆ ಕಾರ್ಯರೂಪಕ್ಕೆ ತರುವಿರೆಂದು ನಂಬಿರುತ್ತೇನೆ ಹಾಗೂ ಎದುರು ನೋಡುತ್ತಿರುತ್ತೇನೆ. ನಿಮ್ಮ ಮೇಲೆ ನಾವಿಟ್ಟಿರುವ ಗೌರವ ಹಾಗೂ ವಿಶ್ವಾಸ ಸಹ ಉಳಿಸಿಕೊಳ್ಳುವಿರೆಂದು ನಂಬಿರುತ್ತೇನೆ. ಅಲ್ಲಿಯವರೆಗೂ ವಿದಾಯ ಹೇಳುವ ಇಂತಿ ಮನು --ಮನು

ಶ್ರೀಕಾಂತ್, ಇವರ ಉತ್ತರ ನಿಜಕ್ಕೂ ಒಳ್ಳೆಯ ಬೆಳವಣಿಗೆ ಆದ್ರೆ ಇಲ್ಲೊಂದು ಪ್ರಶ್ನೆ ಇದೆ. ಕೆ.ಎಸ್.ಆರ್.ಟಿ.ಸಿ ಕೂಡ ವಿ.ಆರ್.ಆಲ್ ಗಿಂತಲೂ ದೊಡ್ಡ ಸಂಖ್ಯೆಯಲ್ಲಿ ಪರ ರಾಜ್ಯಗಳಿಗೆ ಬಸ್ಸು ಬಿಡುತ್ತೆ. ಅದರ ಬೋರ್ಡ್ ಗಳಲ್ಲಿ ಕನ್ನಡದ ಜೊತೆ ಆಯಾ ರಾಜ್ಯದ ಭಾಷೆ ಕಾಣಿಸುತ್ತೆ. ಅಲ್ಲೆಲ್ಲೂ ಕನ್ನಡವನ್ನು ಕೈ ಬಿಟ್ಟಿಲ್ಲ. ಹಾಗೇ, ಅವರ ಟಿಕೇಟ್ ಇತ್ಯಾದಿಗಳಲ್ಲೂ ಕನ್ನಡವಿದೆ. ವಿ.ಆರ್.ಎಲ್ ಗೆ ಇದನ್ನು ತಿಳಿಸಿ ಹೇಳಬೇಕು. ಗದಗಿನಲ್ಲಿ ಸಂಕೇಶ್ವರ ಪ್ರಿಂಟರ್ಸ್ ಅಂದರೆ ಅಪಾರ ಮರ್ಯಾದೆ ಇದೆ. ಕರ್ನಾಟಕ ಏಕೀಕರಣದ ಸಮಯದಲ್ಲೂ ಈ ಊರಿನಲ್ಲಿ ಸಾಕಷ್ಟು ಕನ್ನಡ ಪರ ಹೋರಾಟ ನಡೆದಿದೆ. ಇನ್ನೊಂದು ಮಿಂಚೆ ಕಳಿಸಿ. ಕೆ.ಎಸ್.ಆರ್.ಟಿ.ಸಿ ಯಂತೆ ಇಲ್ಲೂ ಕನ್ನಡಕ್ಕೆ ಸ್ಥಾನ ಕಲ್ಪಿಸಿಕೊಡಿ ಎಂದು ಕೇಳಬೇಕು.

ವಿ.ಆರ್.ಎಲ್ ಇಂದ ಒಳ್ಳೆಯ ಉತ್ತರ ಬಂದಿದೆ. ಬಹಳಷ್ಟು ವರ್ಷಗಳಿಂದ ಕನ್ನಡ ಪರವಾದ ಕೆಲಸಗಳನ್ನು ಮಾಡುತಿದ್ದ ಸಂಸ್ಥೆ ಈ ಕ್ಷೇತ್ರದಲ್ಲೂ ಕನ್ನಡದ ಸಾರ್ವಭೌಮತ್ವ ಸ್ಥಾಪಿಸುವತ್ತ ಕೆಲಸ ಮಾಡುತ್ತಾರೆಂದು ಆಶಿಸೋಣ ಕಾಡು ನೋಡೋಣ. ಸ್ವಲ್ಪ ಸಮಯದ ನಂತರ ಮತ್ತೆ ಪ್ರಶಿಸೋಣ.