ಒಂದು ದಿನದ ಸಕಲೇಶಪುರ ಟ್ರೆಕ್....ಮುಕ್ತಾಯ

To prevent automated spam submissions leave this field empty.

ಇಲ್ಲಿಂದ

 

 

 

 

 

http://sampada.net/article/16725

http://sampada.net/blog/chikku123/18/06/2009/21643

ಆಗ ನಾನು, ವೆಂಕ ನೀನು ಇಲ್ಲೇ ಇರು ನಾನು ಆ ಸೇತುವೆ ಮ‌ತ್ತೆ ಸುರಂಗ ದಾಟಿ ಜೀಪ್ ನೋಡ್ಕೊಂಡು ಬೇಗ ಓಡಿ ಬರ್ತೀನಿ ಅಂದೆ, ಸರಿ ಹಾಗೇ ಮಾಡು ಆದ್ರೆ ಎಲ್ಲಾ ಬೇಗ ಆಗ್ಬೇಕು ಅಂದ, ಅಂದ್ರೆ ಆ ಟೈಮಲ್ಲಿ ಸೇತುವೆ ಮ‌ತ್ತೆ ಸುರಂಗ ದಾಟಿ ಜೀಪ್ ನೋಡಿ ಮತ್ತೆ ವಾಪಸ್ ಬಂದು ರೈಲ್ ನಿಂತ್ರೆ ಹತ್ತಬೇಕಾದಂತ ಪರಿಸ್ಥಿತಿ.

 

ಸರಿ ಓಡಿದೆ, ಹೋಗಿ ನೋಡಿದ್ರೆ ಆಗಿನ್ನೂ ಜೀಪ್ ಹೋದ ಸದ್ದು ಕೇಳಿಸ್ತು. ವಿಧಿಯಿಲ್ಲದೆ ಮತ್ತೆ ವಾಪಸ್ ಆಗ್ಬೇಕು, ರೈಲ್ ಬರೋದು ಕಾಣ್ತಿತ್ತು, ನಾನು ಓಡಲೇಬೇಕಿತ್ತು, ಅಂತೂ ಸೇತುವೆ ದಾಟಿ ವೆಂಕ ಇರೋ ಜಾಗ ತಲುಪಿದೆ. ಇನ್ನೇನು ಈ ಕಾರ್ಮಿಕರು ರೈಲ್ ನಿಲ್ಲಿಸ್ತಾರೆ ನಮ್ಮನ್ನೂ ಹತ್ತಿಸಿಕೊಂಡು ಹೋಗ್ತಾರೆ ಅಂತ ಸ್ವಲ್ಪ ಧೈರ್ಯ ಬಂತು (ಯಾಕಂದ್ರೆ ವೆಂಕ,ನಾನು ಅವರೊಟ್ಟಿಗೆ ಮಾತಾಡಿ ಚೆನ್ನಾಗಿ ಪರಿಚಯ ಮಾಡಿಕೊಂಡಿದ್ವಿ).

 

 

ರೈಲ್ ಬಂತು ಅವ್ರು ಅಡ್ಡ ಹಾಕಿದ್ರು ಆದ್ರೆ ಉಹುಂ ನಿಲ್ಲಿಸ್ಲಿಲ್ಲ....

ಮುಂದೆ....ತಲೆ ಮೇಲೆ ಕೈ ಹೊತ್ಕೊಂಡು ಕೂತ್ವಿ, ಕಾಡಿನ ಮಧ್ಯೆ, ಕಗ್ಗತ್ತಲು. ವಾಪಸ್ ತಲುಪ್ತೀವೋ ಇಲ್ವೋ ಅನ್ನೋ ಅನುಮಾನ....ನಮ್ಮಿಬ್ಬರ ಮುಖದಲ್ಲಿ ಹತ್ತಾರು ಪ್ರಶ್ನೆಗಳು ಹಾದುಹೋದವು.....

 



ನಾನು,ವೆಂಕ ಜೊತೆಗೆ ಆ ಕಾರ್ಮಿಕರು, ಬ್ಯಾಗ್ನಲ್ಲಿ ತಿನ್ನೋದಕ್ಕೆ ಏನೂ ಇಲ್ಲ, ವೆಂಕ ಟ್ರಿಪ್ನಲ್ಲಿ ದುಡ್ಡು ಕೊಟ್ಟು ಪರ್ಸ್ ಖಾಲಿ ಮಾಡ್ಕೊಂಡಿದ್ದ, ನಾನು ಆ ತಿಂಗಳು ಬರ್ಬಾದ್ ಆಗಿಹೋಗಿದ್ದೆ.

ಚಿಕ್ಕು ಎಷ್ಟಿದೆಯೋ ದುಡ್ಡು ಅಂದ, ತೆಗೆದು ನೋಡಿದೆ 100 ಇತ್ತು, ತೋರ್ಸಿದೆ.

 


ರಾತ್ರಿ 7:30, ಜೇಬ‌ಲ್ಲಿ ದುಡ್ಡಿಲ್ಲ, ತಿನ್ನೋದ‌ಕ್ಕೆ ಏನಿಲ್ಲ, ಮೊಬೈಲ್ ಸಿಗ್ನಲ್ ಇಲ್ಲ, ವೆಂಕ‌ನ‌ ಮೊಬೈಲ್ ಚಾರ್ಜಿಲ್ಲದೆ ಬೇಸ‌ತ್ತು ನಿದ್ರೆ ಮಾಡ್ತಿತ್ತು, ನ‌ನ್ನ ಮೊಬೈಲ್ ಎಲ್ಲೋ ಸ್ವಲ್ಪ ಜೀವ‌ ಇಟ್ಕೊಂಡಿತ್ತು, ಅದಕ್ಕೂ ಸುಸ್ತಾಗಿ ಹೋಗಿತ್ತು, 2 ದಿನ‌ ಚಾರ್ಜಿಲ್ಲದೆ.

ಈಗೇನು ಮಾಡ್ಬೇಕು ಅಂತ‌ ಗೊತ್ತಾಗ‌ದೆ ಸ್ವಲ್ಪ ಹೊತ್ತು ಹಾಗೆ ಕೂತ್ಕೊಂಡ್ವಿ
ವೆಂಕ‌, ಮುಂದೆ ಹೋಗಿ ಸಿಗ್ನಲ್ ಸಿಗ‌ತ್ತೇನು ಅಂತ‌ ನೋಡ್ಕೊಂಡು ಬ‌ರ್ತೀನಿ ಇಲ್ಲೇ ಇರು ಅಂದೆ, ಸ‌ರಿ ಅಂದ‌. ತುಂಬಾ ಕ‌ತ್ತಲು, ಕ್ಷಣ ಕ್ಷಣ‌ ಮೊಬೈಲ್ ಚಾರ್ಜ್ ಕ‌ಡಿಮೆಯಾಗ್ತಿತ್ತು.

 

 

ಸ್ವಲ್ಪ ಮುಂದೆ ಹೋದ ತಕ್ಷಣ ೧ ಸಿಗ್ನಲ್ ಬಂತು, ಆ ಖುಷಿಗೆ ವೆಂಕ ಸಿಗ್ನಲ್ ಸಿಕ್ತು ಕಣೋ ಅಂದೆ.
ಸೌಜನ್ಗೋ ಪಕ್ಯನ್ಗೋ ಕಾಲ್ ಮಾಡು ಅಂದ.

 

 

ಪಕ್ಯಂಗೆ ಕಾಲ್ ಹೋಯ್ತು, ಲೇ ಗೂಡ್ಸ್ ಟ್ರೈನ್ ಹೋಯ್ತು ಅದ್ರಲ್ಲಿ ಇದೀರಾ ಅಥವ ಯಡಕಮುರಿಯಲ್ಲೇ ಇದೀರಾ ಅಂದೆ.

ಇಲ್ಲಪ್ಪ ಗೂಡ್ಸ್ ಟ್ರೈನ್ ನಿಲ್ಲಿಸ್ಲೇ ಇಲ್ಲ, ನೀವು ವಾಪಸ್ ಬನ್ನಿ.

ಸರಿ ಅಂತ್ಹೇಳಿ ವೆಂಕಂಗೆ ಹೇಳಿ ಅಲ್ಲಿಂದ ಹೊರಟೆವು.

ಆಗಲೇ ರಾತ್ರಿ ೭.೪೫, ಎಲ್ಲೆಲ್ಲೂ ಕತ್ತಲೆ, ನನ್ನ ಮೊಬೈಲ್ನಲ್ಲಿದ್ದ ಟಾರ್ಚನ್ನು ಹಾಕಿಕೊಂಡು ಹೊರಟೆವು, ಮೊದಲೇ ಚಾರ್ಜ್ ಕಡಿಮೆ ಇತ್ತು ಇನ್ನು ಟಾರ್ಚ್ ಉಪಯೋಗಿಸುತ್ತಿದ್ದುದ್ದರಿಂದ ಇನ್ನೂ ಕಡಿಮೆ ಆಗುತ್ತಿತ್ತು. ೩ ಕಿ.ಮೀ ಹೋಗಬೇಕಿತ್ತು, ಅಲ್ಲಿವರೆಗೆ ಬಂದರೆ ಸಾಕಪ್ಪಾ ಎಂದು ಬೇಗ ಬೇಗ ಹೆಜ್ಜೆ ಹಾಕಿದೆವು.

ಸುತ್ತಲೂ ಕಾಡು, ಅಲ್ಲಲ್ಲಿ ಕಾಡು ಪ್ರಾಣಿಗಳ ಸದ್ದು, ಆನೆ ಕಾಡೆಮ್ಮೆಗಳ ಕೂಗು ನಮ್ಮ ಹೆಜ್ಜೆಯ ವೇಗವನ್ನು ಜಾಸ್ತಿ ಮಾಡುತ್ತಿದ್ದವು. ನಡುನಡುವೆ ಸೇತುವೆಗಳು, ಅಕಸ್ಮಾತ್ ಮಧ್ಯೆ ಇದ್ದಾಗ ಯಾವುದಾದರೂ ರೈಲ್ ಬರಬಹುದು ಎಂದು ಒಂದೇ ಸಮನೆ ಓಡಿಬಿಡುತ್ತಿದ್ದೆವು. ಅಂತೂ ೮.೩೦ಕ್ಕೆ ಯಡಕಮುರಿ ಸ್ಟೇಶನ್ ತಲುಪಿದೆವು.

ಸೌಜ ಇದ್ದವನು ೧೧.೩೦ಕ್ಕೆ ಗೂಡ್ಸ್ ಟ್ರೈನ್ ಇದೆಯಂತೆ, ಅಕಸ್ಮಾತ್ ನಿಲ್ಸಿದ್ರೆ ಅದ್ರಲ್ಲಿ ಹತ್ಕೊಂಡು ಹೋಗಿ ಅಂತ ಸ್ಟೇಶನ್ ಮಾಸ್ಟರ್ ಹೇಳ್ದ ಅಂದ.

ನಿಲ್ಲಿಸ್ದೆ ಇದ್ರೆ??

ನೀವೇ ನಿಲ್ಸಿ ಅಂತ ಅಂದೆ, ಆಸಾಮಿ ಯಾಕೋ ಒಪ್ಲಿಲ್ಲ.

ಸರಿ ಬಿಡು ಇನ್ನೇನ್ಮಾಡೋದು ಅಲ್ಲಿ

ವರೆಗೆ ಕಾಯೋಣ ಅಂತ ಕೇಕ್, ಬನ್, ಬ್ರೆಡ್ ತಿಂದು ಪ್ಲಾಟ್ಫಾರ್ಮ್ ಮೇಲೆ ಮಲಗಿಕೊಂಡ್ವಿ. ಪಕ್ಯ ಸೌಜ ಎಚ್ಚರ ಇದ್ರು. ಸುಮಾರು ೧೧.೪೦ಕ್ಕೆ ಗೂಡ್ಸ್ ಟ್ರೈನ್ ಸದ್ದಾಯ್ತು, ಎಲ್ಲ ಎದ್ದು ನಿಂತೆವು. ಬಂದ ಸ್ಪೀಡಿನಲ್ಲೇ ಹತ್ತಿ ಹೋಯಿತು (ಹಗಲು ಹೊತ್ತಾಗಿದ್ರೆ ಓಡಿ ಹೋಗಿ ಹತ್ತುತಿದ್ವೇ

ನೋ ಆದ್ರೆ ರಾತ್ರಿ).

ಥತ್ತೇರಿಕೆ  ಅಂದು ಮತ್ತೆ ಪ್ಲಾಟ್ಫಾರ್ಮ್ ಮೇಲೆ ಬಿದ್ವಿ, ಸೌಜ ಹೋಗಿ ಮತ್ತೆ ಕೇಳ್ಕೊಂಡು ಬಂದ.

ರಾತ್ರಿ ೧.೩೦ಕ್ಕೆ ಮತ್ತೊಂದು ಗೂಡ್ಸ್ ಟ್ರೈನ್ ಇದೆ ಅಂದ.ನಮಗೆ ಸುಸ್ತಾಗಿದ್ದಿದ್ರಿಂದ ನಾವು ಪಾಚ್ಕೊಂಡ್ವಿ, ಸೌಜ ಪಕ್ಯ ಜಾಗರಣೆ ಮಾಡ್ತಿದ್ರು.

೧.೩೦ಕ್ಕೆ ಬಂತು, ಆಗ್ಲೂ ನಿಲ್ಲಿಸ್ಲಿಲ್ಲ.

ಸ್ಟೇಶನ್ ಮಾಸ್ಟರ್ಗೆ ನಮ್ಮನ್ನ ನೋಡಿ ಸ್ವಲ್ಪ ಕರುಣೆ ಬಂತು ಅನ್ಸತ್ತೆ. ೩.೩೦ ಸುಮಾರಿಗೆ ಪ್ಯಾಸೆಂಜರ್ ಗಾಡಿ ಬರತ್ತೆ, ನಿಲ್ಲಿಸ್ತೀನಿ ಹತ್ಕೊಂಡು ಹೋಗಿ ಅಂದ.

ಅಂತೂ ತಲುಪ್ತೀವಿ ಅನ್ನೋ ಸಮಾಧಾನ ಆಯ್ತು.೪ಕ್ಕೆ ಬಂತು ಟ್ರೈನ್, ಹತ್ತಿದೆವು, ಟ್ರೈನ್ ತುಂಬಿ ಹೋಗಿತ್ತು, ಹೆಂಗೋ ಜಾಗ ಮಾಡ್ಕಂಡು ಕೆಳಗೆ ಕೂತ್ವಿ. ೫.೩೦ರ ಸುಮಾರಿಗೆ ಸಕಲೇಶಪುರಕ್ಕೆ ಬಂದ್ವಿ.

ಸರಿಯಾಗಿ ನಿದ್ರೆ ಇಲ್ಲದೆ ಎಲ್ಲರೂ ಸುಸ್ತಾಗಿದ್ವಿ.ಈಗ ಮತ್ತೊಂದು ಸಮಸ್ಯೆ ಶುರುವಾಯಿತು.

 

ವ್ಯಾನ್ ಡ್ರೈವರ್ಗೆ ಸುಬ್ರಮಣ್ಯಕ್ಕೆ ಹೋಗೋಕೆ ಹೇಳಿದ್ವಿ (ಟ್ರೆಕ್ ಮಾಡಿ ಅಲ್ಲಿಗೆ ಹೋಗಿ ಅಲ್ಲಿಂದ ವ್ಯಾನ್ ಹತ್ತಿ ಬೆಂಗಳೂರಿನ ಹಾದಿ ಹಿಡ್ಯಣ ಅಂತ).

ಡ್ರೈವರ್ಗೆ ಕಾಲ್ ಮಾಡಿದ್ರೆ ನಾಟ್ ರೀಚಬಲ್. ೧

೦ ನಿಮಿಷ ಪ್ರಯತ್ನ ಮಾಡಿದ್ವಿ ಆದ್ರೆ ಸಿಗ್ಲೇ ಇಲ್ಲ.ಅಯ್ಯೋ ಶಿವನೆ, ಈಗ ಮತ್ತೆ ಸುಬ್ರಮಣ್ಯಕ್ಕೆ ಹೋಗ್ಬೇಕು :(.

ಮತ್ತೆ ನಾನು ವೆಂಕ ಸಕಲೇಶಪುರ ಬಸ್ ನಿಲ್ದಾಣಕ್ಕೆ ಹೊರಟೆವು. ಬೆಳಗ್ಗೆ ೫.೪೫, ಇಬ್ರೂ ತೂಕಡಿಸುತ್ತಿದ್ವಿ.

ಬಸ್ ಹತ್ತಿ ೨ ಸೀಟ್ ಮುಂದೆ ಹೋದ ತಕ್ಷಣ ಇಬ್ಬರು ಆಸಾಮಿಗಳು ಕಂಠಪೂರ್ತಿ ಕುಡಿದು ಸೀಟ್ ಕೆಳಗೆ ಅಡ್ಡಡ್ಡ ಬಿದ್ದಿದ್ರು, ಅವರನ್ನ ದಾಟಿಕೊಂಡು ಹೋಗಿ ಹಿಂದ್ಗಡೆ ಸೀಟಲ್ಲಿ ಕೂತ್ವಿ.

ಶಿರಾಡಿ ಘಾಟ್ ಬರೋತಂಕ ಆರಾಮಾಗಿ ಹೋಗ್ತಿದ್ವಿ. ಆಮೇಲೆ ನೋಡಿ ಶುರುವಾಯ್ತು, ಕೆಳಗೆ ಕುಡಿದು ಬಿದ್ದವರಿಗೂ ನಮಗೂ ವ್ಯತ್ಯಾಸ ಇಲ್ಲವೇನೋ ಅನ್ನೋ ಹಾಗೆ ತೂರಾಡೋಕೆ ಶುರು ಮಾಡಿದ್ವಿ, ಕಾರಣ ರಸ್ತೆಯಲ್ಲಿದ್ದ ಗುಂಡಿಗಳು (ರಸ್ತೆಯಲ್ಲಿ ಗುಂಡಿ ಅನ್ನೋದ್ರ ಬದ್ಲು ಗುಂಡಿನೇ ರಸ್ತೆ ಆಗಿತ್ತು), ಪಾಪ ಬಸ್ಸಿನಲ್ಲಿದ್ದ ಹೆಂಗಸರು ಮಕ್ಕಳಪಾಡನ್ಥೂ ಹೇಳತೀರದು.

ನಾವಂತೂ ಗುಂಡ್ಯ ಹತ್ರ ಬರೋ ಹೊತ್ತಿಗೆ ಹಣ್ಣುಗಾಯಿ ನೀರುಗಾಯಿ ಆಗಿದ್ವಿ. ಆಮೇಲೆ ಯೋಚನೆ ಮಾಡಿದಾಗ ಗೊತ್ತಾಯ್ತು ಬಸ್ಸಿನಲ್ಲಿದ್ದ ಇಬ್ಬರು ಯಾಕೆ ಕುಡಿದಿದ್ರು ಅಂತ.

ಸುಬ್ರಮಣ್ಯಕ್ಕೆ ಹೋಗೋ ಯಾವ್ದಾದ್ರೂ ಬಸ್ ಬರತ್ತಾ ಅಂತ ಕಾಯ್ತಾ ಅಲ್ಲೇ ಸುತ್ತಾಡ್ತಿದ್ವಿ, ಸುಬ್ರಮಣ್ಯ ರಸ್ತೆ ಹಾದಿಯಲ್ಲಿ ಒಂದು ವ್ಯಾನ್ ಕಾಣಿಸ್ತು, ನಮ್ದೆ ಇರ್ಬೇಕು ಅಂದ್ಕೊಂಡು ಹೋಗಿ ನೋಡಿದ್ರೆ

ಅದೇ.

ಅಬ್ಬ ಅಂತೂ ನಮ್ಮ ಹುಡುಕಾಟ ಮುಗಿಯಿತಲ್ಲ ಇನ್ನು ಬೆಂಗಳೂರಿಗೆ ಆರಾಮಾಗಿ ಹೋಗಬಹುದು ಅಂತ ವ್ಯಾನ್ ಹತ್ತಿ ಕೂತ್ವಿ. ನಮಗೆ ನಿದ್ರೆ ಎಷ್ಟು ಬಂತು ಅಂದ್ರೆ ಶಿರಾಡಿ ಘಾಟ್ನ ಗುಂಡಿಗಳು ನಿದ್ರಾದೇವಿಯ ಮುಂದೆ ಸೋತು ಶರಣಾಗಿದ್ದವು.

 

ಸಕಲೇಶಪುರದಲ್ಲಿ ಉಳಿದವರನ್ನು ಹತ್ತಿಸಿಕೊಂಡು ಬೆಂಗಳೂರಿಗೆ ಬಂದಾಗ ಸದ್ಯ ತಲುಪಿದೆವಲ್ಲ ಅನ್ನೋ ಸಮಾಧಾನ

 

 

 

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಮ್ಮ ಸಕಲೇಶ್ ಪುರ ಟ್ರೆಕ್ ....ಓದಿ ನನಗೂ ಒ೦ದು ರೀತಿಯ ಸ೦ತೋಶ ವಾಯಿತು ಏಕೆ೦ದರೆ ನಾನು ಕೂಡ ೨ ದಿನದ ಟ್ರೆಕ್ ಮಾಡಿದ್ದೆ ಮತ್ತೆ ನಾನು ಅಲ್ಲಿಗೆ ಹೋಗಿ ಬ೦ದ೦ತೆ ಆಯಿತು..... ಸುಮಧುರ ಅನುಭವ ವಾಯಿತು . ಧನ್ಯವಾದಗಳು ರವಿ

ಚೇತನ್, ಬೋ ಸಂದಾಗೈತೆ ಗುರುಗಳೆ. ನಾವು ಒಂದ್ ಕಿತ ಹೋಗ್ ಬರಬೇಕು ಅನ್ನಿಸ್ತದೆ. ಆದ್ರೆ ನಮ್ಮ ಗೌಡಪ್ಪ ಒಪ್ಪಕ್ಕಿಲ್ಲ. ಮಗಂಗೆ ಡಯಾಬಿಟೀಸ್ ಐತೆ. ಉಸ್ ಅಂತಾ ಕೂತ್ಕಂಡ್ರೆ ಆ ಬಡ್ಡೆ ಹೈದನ್ನ ಎಂಗೆ ಕರ್ಕೊಂಡು ಹೋಗೋದು ಅಂತಾ. ಧನ್ಯವಾದಗಳು.

<ಚಿಕ್ಕೂ, ಇನ್ನು ಟ್ರೆಕಿಂಗ್ ಅಂತ ಹೊರಟರೆ ನೋಡು> ಅಯ್ಯೋ ಹೇಳ್ತಾರೆ ಕಣ್ರೀ, ಅವ್ರ ಮಾತು ಕೇಳಿದ್ರೆ ಒಂದೂ ಟ್ರೆಕ್ ಮಾಡಲ್ಲ. ಸದ್ಯ ಅವ್ರು ಊರಲ್ಲಿ ಇದ್ದಾರೆ ಹಾಗಾಗಿ ಬಚಾವ್. ಇಲ್ಲೇ ತೋಟ ಗದ್ದೆಯಲ್ಲಿ ತುಂಬಾ ಕೆಲಸ ಇದೆ ಬಾ ಅದೇನು ಬೆಟ್ಟ ಹತ್ತೋದು ಅಂತಾರೆ. ಪ್ರತಿಕ್ರಿಯೆಗೆ ಧನ್ಯವಾದ ಗಣೇಶವ್ರೆ

ಗೌಡನ್ನ ಬಿಟ್ಟು ಹೋಗು ಕೋಮಲ್, ಆದ್ರೆ ಬೇರೆ ಕಡೆ ಟ್ರೆಕ್ ಹೋಗು ಅಲ್ಲೆಲ್ಲ ಈಗ ಟ್ರೈನ್ ಬಿಟ್ಟು ಹೋಗ್ದೆ ಇರೋಹಾಗಿದೆ. ಪ್ರತಿಕ್ರಿಯೆಗೆ ಧನ್ಯವಾದ ಕೋಮಲ್.

ಒಂದೇ ಸಲ ಬರೆದು ಮುಗಿಸಬಹುದು, ಸ್ವಲ್ಪ ಗ್ಯಾಪ್ ಕೊಟ್ರೆ ಲಾಂಗ್ ಗ್ಯಾಪಾಗತ್ತೆ ಗೋಪಿಯವ್ರೆ, ಅಂತೂ ಲೆಕ್ಕ ಹಾಕಿಬಿಟ್ರಲ್ಲ :) <ಚೇತೋಹಾರಿಯಾಗಿ ಕುತೂಹಲಭರಿತವಾಗಿತ್ತು> ನಮಗೂ ಕುತೂಹಲ, ಜಾಗ ತಲುಪಬೇಕೆಂಬ ಹಂಬಲ, ಹೆದರಿಕೆ....... ಪ್ರತಿಕ್ರಿಯೆಗೆ ಧನ್ಯವಾದ ಗೋಪಿಯವ್ರೆ.

ನಮಸ್ಕಾರ ಚಿಕ್ಕೂ, 35 ವರ್ಷಗಳ ಹಿಂದೆ ನಾನೂ ನನ್ನ ಸ್ನೇಹಿತರೂ ಇದೇ ಸ್ಥಳಕ್ಕೆ ಟ್ರೆಕ್ಕಿಂಗ್ ಹೋಗಿದ್ದ ನೆನಪು ಮರುಕಳಿಸಿತು. ಆಗಿನ್ನೂ ಸುರಂಗಗಳು, ಸೇತುವೆಗಳನ್ನು ನಿರ್ಮಿಸುತ್ತಿದ್ದರು. ಈಗಿನಷ್ಟೂ ಸರಾಗ ಟ್ರೆಕಿಂಗ್ ಆಗ ಸಾಧ್ಯವಿರಲಿಲ್ಲ. ನಡೆಯಲೂ ಕಷ್ಟವಾಗಿದ್ದ ಅಲ್ಲಿ ಕೆಲಸ ಮಾಡುತ್ತಿದ್ವವರು ನಿಜಕ್ಕೂ ಧೈರ್ಯಶಾಲಿಗಳೇ ಸರಿ.

ನಮಸ್ಕಾರ ನಾಗರಾಜವ್ರೆ, <ಅಲ್ಲಿ ಕೆಲಸ ಮಾಡುತ್ತಿದ್ವವರು ನಿಜಕ್ಕೂ ಧೈರ್ಯಶಾಲಿಗಳೇ ಸರಿ> ಹೌದು, ಆ ಜಾಗನ ಸಮ ಮಾಡಿ ಟ್ರ್ಯಾಕ್ ಮಾಡೋಕೆ ಪಾಪ ಬಹಳ ಕಷ್ಟಪಟ್ಟಿದ್ದಾರೆ ಪ್ರತಿಕ್ರಿಯೆಗೆ ಧನ್ಯವಾದ ನಾಗರಾಜವ್ರೆ.

ಅಬ್ದುಲ್, ಪ್ರತಿಕ್ರಿಯೆಗೆ ನನ್ನಿ. ನನಗೂ ಚಿತ್ರಗಳನ್ನು ಸೇರಿಸುವುದು ಗೊತ್ತೇ ಇರಲಿಲ್ಲ. ಸಂಪದ ಮಿತ್ರರು (ಅನಿಲ್,ಮಂಜು..)ಗ ಗಾ ಗಿ ಗೀ ಹೇಳಿಕೊಟ್ಟರು. ನಿಮಗೂ ಇತರ ಹೊಸಬರಿಗೂ ಗೊತ್ತಾಗಲಿ ಎಂದು ನಾನು ಚಿತ್ರ ಸೇರಿಸುವ ರೀತಿ ತಿಳಿಸುವೆ.(ಇತರ ರೀತಿಯೂ ಇರಬಹುದು.ನನಗೆ ಗೊತ್ತಿಲ್ಲ :) ) -ಮೊದಲು gmail ನಲ್ಲಿ (google account) ಸೇರಿದೆ (ಮಂಸೋರೆ ಒತ್ತಾಯಕ್ಕೆ:) ) -user name, password ಹಾಕಿ gmail ಎಂಟರ್ ಆದೆ. -ಅದರಲ್ಲಿ orkut gmail calender...more ಎಂದಿದೆ. ಈ more ಅನ್ನು ಒತ್ತಿದರೆ even more ಸಿಗುವುದು. ಅದನ್ನು ಒತ್ತಿದಾಗ picasa ಸಿಗುವುದು. ಅದನ್ನು ಡೌನ್‌ಲೋಡ್ ಮಾಡಿಕೊಂಡೆ. - ಈ picasa ದಿಂದ ಮೊಬೈಲ್/ಕ್ಯಾಮರದಲ್ಲಿ ತೆಗೆದ ಚಿತ್ರಗಳನ್ನು ಕಂಪ್ಯೂಟರ್‌ಗೆ ಕನೆಕ್ಟ್ ಮಾಡಿ import ಮಾಡಿಕೊಂಡೆ. -picasa ದ ಕೆಳಗಿನ ಪಟ್ಟಿಯಲ್ಲಿ upload ಎಂದಿದೆ. ನನಗೆ ಬೇಕಾದ ಚಿತ್ರದ ಮೇಲೆ ಕ್ಲಿಕ್ ಮಾಡಿ upload ಒತ್ತುವೆ. -ಹಿಂದೆ ಹೇಳಿದ more ಒತ್ತಿದಾಗ reader photos..ಎಂದು ಬರುತ್ತದೆ. ಆ photos ನ ಒತ್ತುವೆ. -picasa web album ಬರುವುದು. ಅದರಲ್ಲಿ ನಾನು upload ಮಾಡಿದ ಚಿತ್ರಗಳು ಬಂದಿರುವುದು. -ಆ ಚಿತ್ರದ ಮೇಲೆ rt.ಕ್ಲಿಕ್ ಮಾಡಿದಾಗ ಕೆಳಗೆ properties ಎಂದಿರುತ್ತದೆ. - ಅದನ್ನು rt. ಕ್ಲಿಕ್ ಮಾಡಿದಾಗ address url ಎಂದು ಬರುವುದು. -ಅದನ್ನು copy ಮಾಡಿ, ಬ್ಲಾಗ್ ಬರೆಯುವ ಮೇಲಿನ ಪಟ್ಟಿಯ ಮರದ ಚಿತ್ರ ಕ್ಲಿಕ್ ಮಾಡಿ, url ಎಂದಿರುವಲ್ಲಿಗೆ ಪೇಸ್ಟ್ ಮಾಡುವೆ. ಎಲ್ಲಿ ಚಿತ್ರ ಸೇರಿಸ ಬೇಕೋ ಅಲ್ಲಿ ಕ್ಲಿಕ್ ಮಾಡಿ insert ಕೊಡುವೆ. -ಬಾಕಿ ಸಬ್ ಆಪ್‌ಕೆ ಸ್ಕ್ರೀನ್ ಪರ್.. -ಗಣೇಶ.

ಕವಿ ನಾಗರಾಜ್ ಅವರಿಗೆ ನಮಸ್ಕಾರ.ನಿಮ್ಮ 35ವರ್ಷಗಳ ಹಿಂದಿನ ಟ್ರಕಿಂಗ್ ಅನುಭವವನ್ನು ಏಕೆ ಪ್ರಕಟಿಸಾಬಾರದು.ಆಗಿನ ಅನುಭವಗಳ ಸರಮಾಲೆಯನ್ನು ಒಮ್ಮೆ ನಮಗೂ ತಿಳಿಸುವಿರಾ. ವಂದನೆಗಳು

ಟ್ರಕಿ೦ಗ್ ಬರಹ ಖುಷಿ ನೀಡಿತು. ಚಿತ್ರಗಳು ಸೊಗಸಾಗಿವೆ. ಚಿಕ್ಕು ಕಾಫಿ ಕುಡಿಯೋ ಫೋಟೋ ಮಾತ್ರ ನೋಡಿದ್ದೆ. ಇವತ್ತು ಚೆ೦ದದ ಚಿಕ್ಕುವಿನ ಚೆ೦ದದ ಚಿತ್ರ ನೋಡಿದೆ. ಧನ್ಯವಾದಗಳು.

ಚೇತನ್- ಮೊದಲಿಗೆ ಈ ಬರಹವನ್ನೆ ನಾ ಓದಿದ್ದರೋ, ಕ್ರಮ ಸಂಖ್ಯೆ ಪ್ರಕಾರ ಪ್ರತಿಕ್ರಿಯಿಸುವ ಅಂತ(ಕಾರಣ ಇದನ್ನು ಇತ್ತ್ತೀಚಿನ ಪ್ರತಿಕ್ರಿಯೆಗಳಲ್ಲಿ ಓದುವವರು ಸಹಾ ಕೊನೆಯದನ್ನೇ ಮೊದಲು ಓದಿದರೆ..!!) ಈಗ ಕೊನೆಯದಾಗಿ ಪ್ರತಿಕ್ರಿಯಿಸಿದೆ...!! ಚಿತ್ರಗಳು ಸ್ಪುಸ್ತವಾಗಿವೆ... ಆ ಎಲ್ಲ ಸ್ಥಳಗಳಿಗೆ ನಾವ್ ಭೇಟಿ ಕೊಟ್ಟಿದ್ದೆವು, ಅಲ್ಲಾಳಿ ನಿಂತು ಕುಳಿತು ಚಿತ್ರ ತೆಗೆದಿದ್ದೆವು, ಅದನ್ನು ಇಲ್ಲಿ ಹಾಕಬಹುದಿತ್ತು ,ಆದರೆ ಆ ಟ್ರಿಪ್ ಚಿತ್ರಗಳು ನಮ್ ಸ್ನೇಹಿತರ ಆರ್ಕುಟ್ ಅಕೌಂತಲ್ಲಿ ಇದ್ದು ಆಮೇಲೆ ಅದರ ಲಿಂಕ್ ಹಾಕುವೆ.. ಈಗ ನಾ ನನ್ನ ಬರಹದ ಜೊತೆ ಸೇರಿಸಿದ ಚಿತ್ರಗಳು ಬೇರೆಯವರು ತೆಗೆದದ್ದು,... ಅಂದ್ ಹಾಗೆ ನಾವ್ ಟ್ರಿಪ್ ಹೋದಾಗ ನಮ್ಮ ಹಿಂದೆ ಮುಂದೆ ಹಲವು ಪ್ರಾವಾಸಿಗರ ಗುಂಪು ಹೋಗುತ್ತಿದ್ದವು, ಅವುಗಳಲ್ಲಿ ಹುಡುಗಿಯರೂ ಇದ್ದರು, ನಿಮ್ಮ ಗುಂಪಲ್ಲಿಯೂ ಹುಡುಗಿಯ ಕಂಡು ಅಪ್ಪಿ ತಪ್ಪಿ ನಾವ್ ನೀವ್ ಎದುರು ಬದುರು ಆಗಿದ್ದೆವಾ ಅನ್ನಿಸುತ್ತಿದೆ... ಅಂದ ಹಾಗೆ ಕೆಲವೊಮ್ಮೆ ೩-೪ ಜನ ಇದ್ದ ಗುಂಪು ಸಹಾ ನಮ್ ಹಿಂದೆ ಮುಂದೆ ಇತ್ತು, ಮತ್ತು ನೀವ್ ಹೇಳಿದ ಹಾಗೆ ನೋಡಿದರೆ ನಿಮ್ಮಲ್ಲಿಯ ಯಾರನ್ನೋ ನಾವ್ ನೋಡಿರಬೇಕು, ಮುಖಗಳು ಸ್ಪೂಸ್ತವಾಗಿ ನೆನಪಿಗೆ ಬರುತ್ತಿಲ್ಲ, ಆದರೆ ನನಗೆ ನೆನಪಿದ್ದಂತೆ, ನಮ್ ಹಿಂದೆ ಒಬ್ಬ ಶಾರ್ಟ್ ಹಾಕಿದ ಫ್ರೆಂಚ್ ಗಡ್ಡ ಬಿಟ್ಟ ಕೈನಲ್ಲಿ ಕ್ಯಾಮೆರಾ ಹಿಡಿದು ಸಿಗರೇಟು ಸೇದುತ್ತಿದ್ದ ಒಬ್ಬ ಮತ್ತು ಆತನ ಜೊತೆಗಾತಿ ಕಾಣಿಸಿದ್ದಳು, ಇಬ್ಬರೂ ಮರ ಗಿಡ ಹುಳು- ಕ್ರೀಮಿ ಕೀಟ ಎಲ್ಲವನ್ನು ಅಸ್ಥೆಯಿಂದ ಸೆರೆ ಹಿಡಿಯುತ್ತಿದ್ದರು.... ಆರು ಹೆಚ್ಚು ಕಡಿಮೆ ನಾವ್ ಕೊನೆಗೊಳಿಸಿದ ಸ್ಥಳದ ವರೆಗೆ ಬಂದರು.. ಆಮೇಲೆ ಮುಂದೆ ಹೋದರೋ ಇಲ್ಲವೋ ಗೊತ್ತಿಲ್ಲ, ಆದರೆ ಅವರನ್ನು ಮತ್ತೆ ನಾವು ಕುಕ್ಕೆಯಲ್ಲಿ ಮಾರನೆ ದಿನ ನೋಡಿದೆವು... ನಿಮ್ಮ ಬರ್ಹ ಸ್ಥಳ-ಸಮಯ-ಊರು ಇತ್ಯಾದಿ ವಿಷ್ಯದಲ್ಲಿ ಕ್ಲಿಯರ್ ಆಗಿದೆ, ಆದರೆ ನಾ ಬಹುತೇಕ ಮರೆತಿರುವೆ... :(( ಅದ್ಕೆ ಮತ್ತೊಮ್ಮೆ ಅಲ್ಲಿಗೆ ಹೋಗಬೇಕು ಎಲ್ಲವನ್ನು ಅಚ್ಚುಕಟ್ಟಾಗಿ ಬರೆಯಬೇಕು - ದೃಶ್ಯ ಸೆರೆ ಹಿಡಿಯಬೇಕು, ಅನ್ನಿಸುತ್ತಿದೆ..!! ಬನ್ನಿ ಮಾತೊಮ್ಮೆ ಹೋಗೋಣ....(ಮದುವೆ ಆಗಿದೆ ಸಾಧ್ಯವಿಲ್ಲ ಅನ್ನುವಿರೇನೋ? ನಿಜ- ಆ ತರಹದ ಟ್ರಿಪ್ ಅವಿವಾಹಿತರು ಹೋಗಲೇ ಸೂಕ್ತ- ಗೆಳೆಯರೊಂದಿಗೆ..!!)... >>>ಅಂದ್ ಹಾಗೆ ಪ್ರವಾಸ್ಡ ಮೊದಲಲ್ಲಿಯೇ ಯಡಕಮುರಿ ಎಂಬ ಬೋರ್ಡ್ ಮೇಲೆ ಕೈ ಇಟ್ಟೂ ಭಾರ ಹಾಕಿ ಅದರ ಯಡಕುಮುರಿಯುವ ಹಾಗೆ ನಿಂತದ್ದು ಸಖತ್.....!! ಯಡಕು(ಉತ್ತರ ಕರ್ನಾಟಕ ಭಾಷೆಯಲ್ಲಿ ಅರ್ಥ)= ಹೆಗಲು...!! ಶುಭವಾಗಲಿ.. ಅತ್ಯುತ್ತಮ ಮಾಹಿತಿಪೂರ್ಣ-ಚಿತ್ರ ಸಹಿತ ಬರಹಕ್ಕಾಗಿ ನನ್ನಿ \|/

ನಾವು ಟ್ರೆಕ್ ಮಾಡೋವಾಗ ಯಾವ ಗ್ರೂಪ್ ಸಹ ಇರ್ಲಿಲ್ಲ ಸಗಿಯವ್ರೆ ಬಹುಷಃ ೧-೨ ವಾರ ಹೆಚ್ಚು ಕಡಿಮೆ ಇರಬಹುದು <ಬನ್ನಿ ಮಾತೊಮ್ಮೆ ಹೋಗೋಣ....(ಮದುವೆ ಆಗಿದೆ ಸಾಧ್ಯವಿಲ್ಲ ಅನ್ನುವಿರೇನೋ? ನಿಜ- ಆ ತರಹದ ಟ್ರಿಪ್ ಅವಿವಾಹಿತರು ಹೋಗಲೇ ಸೂಕ್ತ- ಗೆಳೆಯರೊಂದಿಗೆ..!!)...> ಹಾಗೇನಿಲ್ಲ, ಬರಬಹುದು. ಹೋಗಿರೋದಕ್ಕೆ ಮತ್ತೆ ಮತ್ತೆ ಹೋಗೋದ್ರ ಬದ್ಲು ಹೊಸ ಜಾಗಕ್ಕೆ ಹೋಗಬಹುದು. ಆಮೇಲೆ ಇದು ಒಂಥರಾ ಫ್ಲಾಟ್ ಜಾಗ ಟ್ರೆಕ್ ಅನ್ಸೋಕೆ ಇಲ್ಲ