ಇಸ್ಮಾಯಿಲ್ ಪೆಸೆಲ್ ಬಸ್- ಹಾಸ್ಯ

To prevent automated spam submissions leave this field empty.

 ಅಣ್ಣಾ, ನಮ್ದೂ ಈಗ ಹೊಸಾ ಬಸ್ಗೆ ಮಾಡಿದೀವಿ ನಿಮಗೆ ಗೊತ್ತು. ಏನ್ಲಾ ಇಸ್ಮಾಯಿಲ್ ಹೊಸಾ ಬಸ್ ಏನ್ಲಾ, ಅದರಾಗೆ ಏನೈತೆ ಅಂತಾ ಪೆಸೆಲ್.

ಗಾಡಿಗೆ ಹಾರ್ನ್ಗೆ ಇಲ್ಲ. ಬಸ್ಸಿನ ಸವಂಡ್ಗೆ ಜನಾ ಜಾಗ ಬಿಡ್ಬೇಕು. ಆಮೇಲೆ ಗೇರ್ಗೆ ಇಲ್ಲಾ. ಅದು ಬ್ರೇಕ್ ಹಾಕಿದ್ರೆ ತಾನಾಗೇ ಮುಂದೆ ಬತ್ತದೆ. ಅಂದ್ರೆ ಅದಕ್ಕೆ ಮರದ ಕೋಲು ಮಡಿಗಿದೀವಿ. ಇನ್ನೂ ಸೈಡ್ ಗ್ಲಾಸ್ ಗೆ ಇಲ್ಲಾ. ಹಿಂದಿಂದ ಯಾರು ಬಂದ್ರೂ ಅವರೇ ಸೈಡ್ನಾಗೆ ಹೋಗ್ಬೇಕು. ಯಾಕೇಂದ್ರೆ ನಮಗೆ ಕಾಣಕ್ಕಿಲ್ಲಾ. ಆಮೇಲೆ ಮುದುಕರಿಗೆ ಎಲ್ಲಾ ಕಡ್ಯಾಗೆ ಸೀಟು ಮಡಗಿದೀವಿ. ಆಕ್ಸಿಡೆಂಟ್ಗೆ ಆದ್ರೆ. ಅಂಗೇ ಹಿಂದಿಂದ ಹಾರ್ಕಳ್ಳಿ ಅಂತಾ. ದೇಸದ ಹಿರಿಯ ಪ್ರಜೆಗಳು ಅಂತಾ. ಇನ್ನೂ ಬ್ರೇಕ್ ಅವಾಗ ಅವಾಗ ಹಿಡಿತದೆ. ಅದೂ ಅಲ್ಲಾನ ನೆನಸಿ ಕೊಂಡ್ರೆ. ಅದಕ್ಕೆ ಸೀಟ್ಗೆ ಮುಂದೆ ಎಲ್ಲಾ ದಿಂಬು ಮಡಿಗಿದೀವಿ. ಡಿಕ್ಕಿ ಹೊಡೆದ್ರೆ ಜೀವ ಹೊದ್ರು ಅವರ ಸಂಬಂಧಿಕರಿಗೆ ಮುಖ ಗುರುತು ಸಿಗಲಿ ಅಂತಾ.

ಗಾಡಿ ಪಕ್ಕಾ ಯಾರು ಬರಂಗಿಲ್ಲಾ ಅಣ್ಣಾ, ಯಾಕೇಂದ್ರ ನಮ್ದೂ ಬಸ್ಗೆ ಹೊಗೆ ಇದೆಯೆಲ್ಲಾ ಇದ್ದಿಲುಗಿಂತ ಕಪ್ಪು. ಹಂಗಾಗಿ ನಮ್ದೂ ಬಸ್ ಬತ್ತದೆ ಅಂದ್ರೆ ಐಕ್ಳು ಚೆರಂಡಿ ಹಾರಿ ಆಕಡೆ ಹೋಗಿ ನಿಂತ್ಕಂತಾವೆ ಅಣ್ಣಾ ಅಂದ. ಅಲ್ಲಾ ಕಲಾ. ನಿನ್ನ ಬಸ್ಸಿಗೆ ಅದ್ಯಾವ ಗ್ಯಾರಂಟಿ ಮೇಲೆ ಜನ ಹತ್ತುತಾರ್ಲಾ. ನೋಡ್ ಭಯ್ಯಾ. ಯಾರ್ಗೆ ಮನೇಲಿ ಜಿಗುಪ್ಸೆ ಐತೆ. ಆತ್ಮಹತ್ಯೆ ಮಾಡ್ಕಬೇಕು ಅಂತರ್ವೆ ಜಾಸ್ತಿ. ಇನ್ನೊಂದು ಇಸ್ಯಾ ನಿಮಗೆ ಗೊತ್ತು. ಅವರು ಹತ್ತಿದಿನಾನೇ ಆಕ್ಸಿಡೆಂಟ್ಗೆ ಆಗಕ್ಕಿಲ್ಲ. ಏ ಥೂ ಅಂತಾ ಬೈದು ಬೆಂಗಳೂರ್ನಾಗೆ ಪಿಚ್ಚರ್ ನೋಡಕ್ಕೆ ಹೋಯ್ತಾವೆ.

ಭಯ್ಯಾ ನಮ್ದೂಗೆ ಷಾದಿ ಆಗಿ ಮೂರು ವರ್ಸ ಆದ್ ಮ್ಯಾಕೆ. ನಮ್ದು ಎರಡನೇ ಬೇಗಂ ಖೈರುನ್ನಿಸ್ಸಾ, ತುಜೆ ಮಾಲೂಂ, ಅವರದು ಅಪ್ಪ, ಅಮ್ಮ ಎಲ್ಲಾ ನನ್ನ ಬಸ್ನಾಗೆ ಬರ್ಬೇಕು ಅಂತಾ ಹಠ ಹಿಡಿದು ಬಂದ್ವು. ಬೇಡ ಅಂದ್ರು ಕೇಳಕ್ಕಿಲ್ಲಾ ಅಂತಾ ಮುಂದ್ಗಡೆ ಬಂದು ಕುಂತ್ವು. ಬಿಡದಿ ನಿಮಗೆ ಗೊತ್ತು. ಮುಂದೆ ಹೇಳಲಾ. ಅಲ್ಲಿ ದೊಡ್ಡ ಮರ ಐತೆ ನಿಮಗೆ ಗೊತ್ತು. ಅದಕ್ಕೆ ಡಿಕ್ಕಿ ಹೊಡೆದೆಯಾ. ಇಲ್ಲಾ ಭಯ್ಯಾ. ಅಂಗೇ ಪಕ್ಕಕ್ಕೇ ಹೋಗಿ, ಅಲ್ಲೊಂದು ಇಸ್ಕೂಲ್ ಐತೆ ನಿಮಗೆ ಗೊತ್ತು. ಅದರ ಪಕ್ಕದಾಗೆ ಬೀಡಾಗೆ ದುಖಾನ್ ಐತೆ ಅದು ನಿಮಗೆ ಗೊತ್ತು. ಅದಕ್ಕೆ ಹೊಡೆದೆ. ನಮ್ದೂ ಬೇಗಂ, ಬೀಡಾ ದುಖಾನ್ ಮಾಲೀಕನ ಮೇಲೆ ಅಂಗೇ ಬಿದ್ಲು. ಅವರದು ಅಪ್ಪ ಅಮ್ಮ ಎಲ್ಲಾ ಅಲ್ಲಾನ ಪಾದ ಸೇರಿದ್ರು. ಔರ್ ಏಕ್ ಇಸ್ಯಾ ಹುವಾ, ಕ್ಯಾ ಮಾಲೂಮ್. ಬೀಡಾ ಮಾಲೀಕಂಗೆ ನಮ್ದೂ ಬೇಗಂ ಕೊಟ್ಟು ಷಾದಿಗೆ ಮಾಡಿದ್ವಿ. ಅರೇ ಇಸ್ಕಿ. ಇಂಗೆ ಆಗೋಯ್ತಲ್ಲಾ ಅಂತಾ ಮೂರು ದಿನಾ ಫುಲ್ಗೆ ಟೈಟ್ ಆಗಿ. ಈಗ ಇನ್ನೊಂದು ಷಾದಿಗೆ ಆಗಿದೀನಿ. ಮಮ್ತಾಜ್. ನಾನು ಬಸ್ಗೆ ಬತ್ತೀನಿ ಅಂದ್ಲು. ಬೇಡ ಮತ್ತೆ ಯಾವ ದುಖಾನ್ ಮದುವೆಗೆ ಮಾಡ್ಬೇಕು. ಅಂತಾ. ನಾನು ಷಾದಿಗೆ ಬ್ರೋಕರ್  ಅಂದಾ ಇಸ್ಮಾಯಿಲ್. ಹೌದು. ಫಿರ್ ಕ್ಯಾ ಹುವಾರೆ. ಅಣ್ಣಾ ಈಗ ಬಸ್ನಾಗೆ ಯಾರೂ ಸಂಬಂಧಿಕರು ಬಂದ್ರು ಬೇರೆ ಬಸ್ಗೆ ನಾನೇ ಟಿಕೆಟ್ಗೆ ಮಾಡಿ ಕಳಿಸ್ತೀನಿ. ಅಣ್ಣಾ ಬೆಂಗಳೂರು ಹೋಯ್ತಾ ಇದೀನಿ ಬರ್ತಿಯಾ. ಲೇ ಇವತ್ತುವರೆಗೂ ನಿನಗೆ ಏನೂ ಆಗಿಲ್ಲಲಾ ಅದು ಹೆಂಗಲಾ. ಅದು ನಮ್ದೂ ಸಿಕ್ರೇಟ್ ಭಯ್ಯಾ. ಅದಕ್ಕೆ ನಮ್ಮ ಪಕ್ಕದಾಗೆ ಬಾಗಲೇ ಮಡಗಕ್ಕಿಲ್ಲಾ. ಎಂಗೈತೆ ಐಡೀರಿಯಾ.

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು