ಮೆಟ್ರೊ ರೈಲು - ಕನ್ನಡವಿಲ್ಲದೇ ಫೇಲು !

To prevent automated spam submissions leave this field empty.

ಗೆಳೆಯರೇ,


ಬೆಂಗಳೂರಿನ ಹಲವಾರು ಪ್ರಮುಖ ರಸ್ತೆಗಳಲ್ಲಿ ಮೆಟ್ರೋ ರೈಲು ಕಾಮಗಾರಿ ನಡೀತಿದೆ. ಎಲ್ಲ ಕಡೆ "ನಮ್ಮ ಮೆಟ್ರೋ" ಅಂತ ನಾಮ ಫಲಕಗಳನ್ನು ನೋಡಿ ಹೆಮ್ಮೆ ಪಡುತ್ತಿದ್ದೆ. ಆದರೆ ಮೊನ್ನೆ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ನಮ್ ಬೆಂಗಳೂರಿಗೆ ಬರಲಿರುವ ಮೆಟ್ರೋ ಭೋಗಿಯ ನಮೂನೆಯನ್ನು ವೀಕ್ಷಣೆಗೆ ಇಟ್ಟಿದ್ದರು. ಅದನ್ನ ಕಂಡು ನನಗೆ ಅಚ್ಚರಿಯಾಯಿತು. ಅದರ ಒಳಗಿರುವ ನಾಮಫಲಕಗಳು, ಸೂಚನೆ ಫಲಕಗಳು ಎಲ್ಲವೂ ಸಂಪೂರ್ಣ ಹಿಂದಿ ಹಾಗು ಇಂಗ್ಲಿಷ್ ಮಯ !! ಒಂದು ಕ್ಷಣ ಇದೇನು ದೆಹಲಿ ಮೆಟ್ರೋದ ಬೋಗಿಯೊಂದನ್ನು ಕದ್ದು ತಂದು ಇಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರಾ ಅನ್ನೋ ಹಾಗಾಯ್ತು ! ಯಾಕೆಂದ್ರೆ ದೆಹಲಿಯಲ್ಲಿರೋ ಹಾಗೇ ಹಿಂದಿ, ಇಂಗ್ಲಿಷ್ ಅಲ್ಲಿ ಎಲ್ಲ ಸೂಚನೆಗಳು, ಬೋರ್ಡ್ ಗಳು ಇದ್ದವು. ದೆಹಲಿಯಲ್ಲೆನೋ ಹಿಂದಿ ಹಾಕೋದು ಸರಿಯಾದ ನಡೆ, ಆದ್ರೆ ಅಲ್ಲಿಂದ 2000 ಕಿ.ಮೀ ದೂರ ಇರೋ ಕನ್ನಡಿಗರ ಊರಾದ ಬೆಂಗಳೂರಲ್ಲಿ ಕನ್ನಡ ಬಿಟ್ಟು ಹಿಂದಿ ಹಾಕಿರೋದ್ಯಾಕೆ? ಯಾವುದೇ ಊರಿನಲ್ಲದರೂ ಸರಿ, ಸಾರ್ವಜನಿಕ ಸಂಚಾರ ವ್ಯವಸ್ಥೆ ಅಲ್ಲಿನ ಸ್ಥಳೀಯ ಬಹುಸಂಖ್ಯಾತರಿಗೆ ಬಳಸಲು ಅನುಕೂಲವಾಗುವಂತೆ ಆಯಾ ನಾಡಿನ ಸ್ಥಳೀಯ ಭಾಷೆಯಲ್ಲಿರಬೇಕು. ಬಿ.ಎಂ.ಟಿ.ಸಿ, ಟ್ಯಾಕ್ಸಿ ಗಳು, ಆಟೋಗಳು ಅಚ್ಚುಕಟ್ಟಾಗಿ ಕನ್ನಡ ಬಳಸ್ತಾ ಇರೋದನ್ನ ನೋಡಾದ್ರೂ ಇವರು ಕಲಿಬಾರದಾ?  ಯಾರ ಅನುಕೂಲಕ್ಕಾಗಿ ಈ ಸಂಚಾರಿ ವ್ಯವಸ್ತೆಯನ್ನು ನಿರ್ಮಿಸುತ್ತಿದ್ದಾರೋ, ಆ ಜನರ ಭಾಷೆಯಲ್ಲೇ ಸೂಚನೆಗಳು, ನಾಮಫಲಕಗಳು ಇರದಿದ್ದರೆ, ಕೋಟ್ಯಾಂತರ ರೂಪಾಯಿಗಳು ಖರ್ಚು ಮಾಡಿದ್ದೆಲ್ಲ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗಲ್ವಾ? ಅದು ಅಲ್ಲದೇ, ಇದರಲ್ಲಿ ನಮ್ ರಾಜ್ಯ ಸರ್ಕಾರದ ದುಡ್ಡು ಸಾಕಷ್ಟು ಖರ್ಚು ಮಾಡಿದ್ದಾರೆ, ಹಾಗಿದ್ದ ಮೇಲೆ ರಾಜ್ಯ ಸರ್ಕಾರದ ಕಾನೂನಿನಂತೆ ಇಲ್ಲೆಲ್ಲ ಕನ್ನಡ ಬಳಕೆ ಸರಿಯಾಗಿ ಆಗಬೇಕಲ್ವ?


ಬರೋ ಡಿಸೆಂಬರ್ ಹೊತ್ತಿಗೆ ಮೆಟ್ರೊ ರೈಲು ಬೆಂಗಳೂರಿನಲ್ಲಿ ಚುಕುಬುಕು ಶುರು ಮಾಡಲಿದೆ. ಬಿ.ಎಂ.ಆರ್.ಸಿ.ಎಲ್ ಗೆ ಈಗಲೇ ಮಿಂಚೆ ಬರೆದು ಕನ್ನಡದಲ್ಲಿ ಎಲ್ಲ ರೀತಿಯ ಸೂಚನೆ, ಫಲಕ ಹಾಕಲು ಒತ್ತಾಯಿಸೋಣ. ನೆನಪಿರಲಿ, ಇದನ್ನ ಈಗಲೇ ಮಾಡದಿದ್ದರೆ, ನಮ್ಮ ಭಾಷೆಗೆ ಅರ್ಹವಾಗಿ ಅಲ್ಲಿ ಸಿಗಬೇಕಾದ ಸ್ಥಾನ ಎಂದಿಗೂ ಸಿಗದು !


 
ಅವರಿಗೆ ಮಿಂಚೆ ಬರೆಯಬೇಕಾದ ವಿಳಾಸ - bmrcl@dataone.in , vasanthrao@bmrc.co.in , sivasailam@bmrc.co.in , sudhirchandra@bmrc.co.in
ಹೆಚ್ಚಿನ ವಿವರಗಳು ಈ ಕೊಂಡಿಯಲ್ಲಿದೆ - http://www.bmrc.co.in/contact.html

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಮಸ್ಕಾರಗಳು "ಕನ್ನಡಿಗ" ಅವರಿಗೆ. ಕನ್ನಡ ಬಳಕೆಯಲ್ಲಿ ಅಸಡ್ಡೆಯ ಬಗ್ಗೆ ನೀವು ಪುನಃ ಒಂದು ಉತ್ತಮ ಎಚ್ಹರಿಕೆಯ ಲೇಖನ ಬರೆದಿದ್ದೀರಿ. ನಮ್ಮ ರಾಜ್ಯದಲ್ಲಿ ನಮ್ಮ ಭಾಷೆ ಬಳಕೆ ಮಾಡದೆ ಪರದೇಶಗಳಲ್ಲಿ ಮಾಡಲು ಸಾಧ್ಯವೇ? ಮೊದಲು ಕನ್ನಡವನ್ನು ಸೇರಿಸುವ ಪ್ರಯತ್ನವಾಗಬೇಕು. ಆನಂತರ ಹಿಂದಿಯನ್ನು ಅಳಿಸಿ ಹಾಕುವ ಕೆಲಸವಾಗಬೇಕು. ಏನು ಉಪಯೋಗ ಇದೆ ಹಿಂದಿಯಿಂದ, ಯಾ ಹಿಂದಿ ಭಾಷಿಕರಿಂದ ನಮಗೆ? ಭಾರತದ ಜನಸಂಖ್ಯೆಗೆ ಪ್ರತಿ ವರ್ಷವೂ ಮಿಲಿಯಗಟ್ಟಲೆ ಜನರನ್ನು ಸೇರಿಸುವುದನ್ನು ಬಿಟ್ಟು ಹಿಂದಿ ಭಾಷಿಕರಿಂದ ಏನಾದರೂ ಸಾಧನೆ ಆಗಿದೆಯೇ? ರಾಷ್ಟ್ರ ಭಾಷೆ ಎಂಬ ಹೆಸರಿನಲ್ಲಿ ಇಲ್ಲಿಯವರೆಗೂ ಇವರ ದಬ್ಬಾಳಿಕೆ ಸಹಿಸಿಯಾಗಿದೆ. ಆದರೆ ಇದಂತೂ ತೀರ ಅತಿಯಾಯಿತು. ಇಲ್ಲಿಯವರೆಗೆ ಹಿಂದಿಯ ಪರೋಕ್ಷ ಹೇರಿಕೆ ಆಗುತ್ತಿದ್ದರೆ ಇಲ್ಲಿ ನೇರವಾಗಿಯೇ ಹೇರಲಾಗುತ್ತಿದೆ. ಯಾವುದೇ ಕಾರಣಕ್ಕೂ ಹಿಂದಿ ಬಳಕೆಯನ್ನು ಮಾಡಲು ಬಿಡಬಾರದು. ಮುಂಬೈ ಟ್ರೈನುಗಳಲ್ಲಿ ಹಿಂದಿ ಕಾನಸಿಗುತ್ತದೋ? ಇಲ್ಲವಲ್ಲ, ಹಾಗಿದ್ದಲ್ಲಿ ಬೆಂಗಳೂರಿನಲ್ಲಿ ಏಕೆ? ಇದೆಲ್ಲವೂ ನಮ್ಮ ಅಸಡ್ಡೆಯಿಂದ, ನಮ್ಮನ್ನು ಆಳುವವರ ನಿರ್ಲಕ್ಷ್ಯದಿಂದ. ಹೀಗಾಗಿ ಸಂಪದಿಗರೆಲ್ಲರೂ ಈ ಕೆಳಗಿನ ಕೆಲಸಗಳನ್ನು ಮಾಡಲು ಕೋರುತ್ತಿದ್ದೇನೆ. ೧. ಮೊದಲನೆಯದಾಗಿ ಇದನ್ನು ಸಂಬಂಧಪಟ್ಟ ಸಂಷ್ಟೇಯವರ ಗಮನಕ್ಕೆ ತರಬೇಕು. ಅಂದರೆ ಮೆಟ್ರೋ ರೈಲ್ ಕಾರ್ಪೋರೇಶನ್-ನ ಅಧಿಕಾರಿಗಳಿಗೆ ನೀವು ಈ ಮೇಲೆ ಕೊಟ್ಟ ಫೋನ್ ನಂಬರ್ಗಳಿಗಾಗಲೀ ಇಮೇಲ್ ವಿಲಾಸಕ್ಕಗಲಿ ಮಾಹಿತಿ ನೀಡಬೇಕು. ೨. ಸಂಬಂಧಪಟ್ಟ ಇಲಾಖೆ (ನಗರಾಭಿವೃದ್ಧಿ ಇಲಾಖೆ?)ಗೆ ಮಾಹಿತಿ ನೀಡಬೇಕು. ಸಂಪದದಲ್ಲಿ ಇರುವ ಪತ್ರಕರ್ತರಾಗಲೀ ಯಾ ಇತರೆ ಸಮೂಹ ಮಾಧ್ಯಮಗಳವರಾಗಲೀ ಈ ಕೆಲಸ ಮಾಡಬಹುದು. ೩. ಸಾಧ್ಯವಾದಲ್ಲಿ ಮುಖ್ಯಮಂತ್ರಿಯವರಿಗೂ ಈ ಬಗ್ಗೆ ವಿವರ ನೀಡಬೇಕು. ೪. ಅತ್ಯಂತ ಸುಲಭದ ಮಾರ್ಗವೆಂದರೆ facebook. ಇದರಲ್ಲಿ ಅನೇಕ ಕನ್ನಡಿಗ ಜನಪ್ರಿಯ ವ್ಯಕ್ತಿಗಳು ಸದಸ್ಯರು. ಉದಾಹರಣೆಗೆ ವಿಜಯ ಕರ್ನಾಟಕದ ಸಂಪಾದಕರಾದ ವಿಶ್ವೇಶ್ವರ ಭಟ್, ಶಾಸಕಿ ಶೋಭಾ ಕರಂದ್ಲಾಜೆ, ಸಚಿವ ಸುರೇಶ ಕುಮಾರ್.. ಹೀಗೆ ಸಂಪದಿಗರನೇಕರು ಇಂಥಾ ವ್ಯಕ್ತಿಗಳ ಸಂಪರ್ಕದಲ್ಲಿರಬಹುದು. ದಯಮಾಡಿ ಸಂಪದಿಗರೆಲ್ಲರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ಕೈಯ್ಯಲ್ಲಾಗುವ ಸೇವೆ ಮಾಡಲು ಕೋರುತ್ತಿದ್ದೇನೆ. ೫. ಕೊನೆಯ ಹೆಜ್ಜೆಯಾಗಿ ಕನ್ನಡ ರಕ್ಷಣಾ ವೇದಿಕೆಯಂತ ಸಂಸ್ಥೆಗಳ ಗಮನಕ್ಕೆ ಇದನ್ನು ತರಬೇಕು. ಬೆಂಗಳೂರು ತೀವ್ರ ರೂಪದಲ್ಲಿ ಬದಲಾವಣೆ ಕಾಣುತ್ತಿರುವ ಈ ಸಂದರ್ಭದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಜನರು ಬರುವುದು ಸಹಜವೇ. ಆದರೆ ಇದರಿಂದ ನಮ್ಮತನವನ್ನು ನಮ್ಮ ಭಾಷೆಯನ್ನು ನಮ್ಮ ನೆಲದಲ್ಲಿಯೇ ನಾವು ಬೇರೆಯದಕ್ಕಿಂತ ಕೀಳಾಗಲು ಅವಕಾಶ ನೀಡಬಾರದು. ಹೀಗೆ ನಡೆಯುತ್ತಿದ್ದಲ್ಲಿ ಮುಂದೊಂದು ದಿನ ಬೆಂಗಳೂರಿನಲ್ಲಿ ಕನ್ನಡವೇ ಕಾಣೆಯಾಗಲಿದೆ. ಎಚ್ಚರ!! ಹೀಗಾಗದಂತೆ ತಡೆಯಲು ಸಂಪದ ಒಂದು ವೇದಿಕೆಯಾಗಲಿ. ಜೈ ಕರ್ನಾಟಕ. ಜೈ ಕನ್ನಡ.

ನೀವು ಈ ಮೇಲೆ ಕೊಟ್ಟ ಇಮೇಲ್ ವಿಳಾಸಕ್ಕೆ ಕಳಿಸಿದ ಮೇಲ್-ಗೆ ಬಂದ ಪ್ರತಿಕ್ರಿಯೆ ನೋಡಿ. Your message cannot be delivered to the following recipients: Recipient address: mgrprotocol@bmrc.co.in Original address: bmrcl@dataone.in Reason: Remote SMTP server has rejected address Diagnostic code: smtp;550 sorry, no mailbox here by that name (#5.1.1 - chkusr) Remote system: dns;mail12.scepterhost.com (mail12.hsphere.cc ESMTP) ಇದು ನಮ್ಮ ಸರಕಾರೀ ಸಂಸ್ಥೆಗಳು ಕಾರ್ಯ ನಿರ್ವಹಿಸುವ ರೀತಿ.

N. Sivasailam, IAS, (1985 Karnataka Cadre) Managing Director, from GoK ಇವರಿಗೆ ತಪ್ಪದೇ ಮಿಂಚೆ ಹಾಕಿ. ಅವರ ವಿಳಾಸ: sivasailam@bmrc.co.in ಮತ್ತು: B. S. Sudhir Chandra , Director (Project & Planning), Functional Director ಅವರಿಗೂ ಸಿಸಿ ಮಾಡಿ. ಅವರ ವಿಳಾಸ: sudhirchandra@bmrc.c...

ಮಿಂಚೆ ಬರೆದ ಎಲ್ಲ ಗೆಳೆಯರಿಗೂ ಧನ್ಯವಾದಗಳು. ವ್ಯವಸ್ತೆ ಕಟ್ಟುವ ಸಮಯದಲ್ಲೇ ಅವರನ್ನು ಸರಿ ಮಾಡಬೇಕು. ಅದು ಶುರುವಾಗಲೆಂದು ಕಾದರೆ, ಮುಂದೆ ಬರಿ ಕಥೆ ಹೇಳಿ ಕನ್ನಡದ ಕಡೆಗಣನೆ ಮಾಡುತ್ತಾರೆ.

<<ಯಾರ ಅನುಕೂಲಕ್ಕಾಗಿ ಈ ಸಂಚಾರಿ ವ್ಯವಸ್ತೆಯನ್ನು ನಿರ್ಮಿಸುತ್ತಿದ್ದಾರೋ, ಆ ಜನರ ಭಾಷೆಯಲ್ಲೇ ಸೂಚನೆಗಳು, ನಾಮಫಲಕಗಳು ಇರದಿದ್ದರೆ, ಕೋಟ್ಯಾಂತರ ರೂಪಾಯಿಗಳು ಖರ್ಚು ಮಾಡಿದ್ದೆಲ್ಲ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗಲ್ವಾ?>> ಕನ್ನಡಿಗರವರೆ, ಈ ಹಿಂದಿ ಮತ್ತು ಆಂಗ್ಲ ಭಾಷೆಯ ಫಲಕಗಳೆಲ್ಲ ನಮ್ಮ ಸಿಲಿಕಾನ್ ಸಿಟಿಗೆ ವಲಸೆ ಬರುವ ನಮ್ಮೆ ನೆರೆ ಹೊರೆಯ ಮತ್ತು ಇತರ ರಾಜ್ಯಗಳಿಂದ ಬರುವ ಸತ್ಪ್ರಜೆಗಳಿಗೆ ಅನುಕೂಲವಾಗಲೆಂದು. ಕರ್ನಾಟಕದವರೇ ಆದ ನಾವು ಆಟಕ್ಕುಂಟು ಲೆಕ್ಖಕ್ಕಿಲ್ಲ. ಏಕೆಂದರೆ ನಾವೆಲ್ಲ locals ಅವರೆಲ್ಲ imported !!!!! ವಲಸೆ ಬರುವ ಪ್ರಜೆಗಳಿಗೆ ನಾವು ಎಲ್ಲ ಅನುಕೂಲವನ್ನೂ ಮಾಡಿಕೊಟ್ಟರೂ ಅವರು ಮಾತ್ರ ಹಿಂದಿ, ಇಂಗ್ಲಿಷ್ ಕಲಿಯುವುದಕ್ಕೆ ಕೊಡುವ ಪ್ರಾಮುಖ್ಯತೆಯನ್ನು ಕನ್ನಡಕ್ಕೆಂದೂ ಕೊಡಲಾರರು!! ಕರ್ನಾಟಕದಲ್ಲಿ ಮಾತ್ರ ಕನ್ನಡ ಭಾಷೆ ಒಂದನ್ನು ಬಿಟ್ಟು ಬೇರೆ ಎಲ್ಲ ಭಾಷಾಪ್ರಯೋಗದ ಸಮ್ಮತಿ, ಒಪ್ಪುಗೆ, ಎಲ್ಲುವೂ... ಏಕೆಂದರೆ ವೀ are ವೆರಿ ಓಪನ್ ಅಂಡ್ broad minded ಅಟ್ ದಿ ಕಾಸ್ಟ್ ಆಫ್ ಕನ್ನಡ. ಎಂಥಹ ವಿಪರ್ಯಾಸ!

ನಾನೂ ಮಿಂಚಂಚೆ ಕಳುಹಿಸಿದೆ ಮೆಟ್ರೋ ರೈಲಿನಲ್ಲಿ ಕನ್ನಡ ಫಲಕ ಮತ್ತು ಬಳಸುವ ಬಗ್ಗೆ ಮಾನ್ಯರೇ ’ನಮ್ಮ ಮೆಟ್ರೋ' ದ ಮಾದರಿ ಬೋಗಿಯಲ್ಲಿ ಸೂಚನಾ ಫಲಕಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಇದ್ದು ಕನ್ನಡದಲ್ಲಿ ಇಲ್ಲದೇ ಇರುವುದು ನಮಗೆ ತುಂಬಾ ಆಘಾತ ಉಂಟು ಮಾಡಿದೆ. ಹೆಸರಿನಲ್ಲಿ 'ನಮ್ಮ' ಇದ್ದರೂ ಇದು ಪರಕೀಯವಾಗುವುದು ಯಾಕೆ? ಕನ್ನಡ ನಾಡಿನಲ್ಲಿ ನಮ್ಮ ಭಾಷೆಯನ್ನ ನಾವೇ ಪರಕೀಯವನ್ನಾಗಿ ಮಾಡಿದರೆ ಹೇಗೆ? ದಯವಿಟ್ಟು ಹಿಂದೀ ಮತ್ತು ಇಂಗ್ಲೀಷ್ ಜತೆಗೆ ಕನ್ನಡವನ್ನೂ ಖಡ್ಡಾಯವಾಗಿ ಬಳಸಿ ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ. ತಮ್ಮ ವಿಶ್ವಾಸಿ ಬೆಳ್ಳಾಲ ಗೋಪಿನಾಥ ರಾವ್

ನಮ್ಮ ಮೆಟ್ರೋ ಅಂತ ಲಕ್ಷಣವಾಗಿ ಹಾಕಬಾರದೇನ್ರಿ, ಸ್ವಾಮಿ ಯಾರ್ರಿ ನೀವು ಕನ್ನಡದೋರಲ್ವ ? ಹಾಗೇ ಕಾಣ್ಸತ್ತೆ. ಮೊದ್ಲು ಕಿತ್ತಾಹ್ಕ್ರಿ. ಸ್ವಾಮಿ..... ಮೊದಲು ಕನ್ನಡನಾಡಿನಲ್ಲಿ ಎಲ್ಲಾ ಫಲಕಗಳ್ನೂ ಕನ್ನಡದಲ್ಲೇ ಹಾಕ್ವೇಕು. ತಿಳ್ಕೊಳ್ಳಿ. ಅದರ ಜೊತೆಗೆ, ಹಿಂದಿ, ಮತ್ತು ಇಂಗ್ಲೀಷ್ ನಲ್ಲಿ ಇರಬೇಕು. ತಿಳೀತಾ... ಸ್ವಲ್ಪ ಕಲ್ತುಕೊಳ್ಳಿ ? ಇಲ್ಲಿ ಮಹಾರಾಷ್ಟ್ರಕ್ಕೆ ಬನ್ನಿ ನೋಡಿ ಕಲ್ತ್ಕೊಳ್ಳಿ. ಮದ್ರಾಸ್ ಗೆ ಹೋಗಿ ನಿಮಗೆ ಗೊತ್ತಾಗತ್ತೆ. ಯಾವಾಗ್ ಕಲ್ತೊತಿವೋ ನಾವು. ಕನ್ನಡ ನಾಡಿನಲ್ಲಿ ನಾವು ಪರದೇಶಿಗಳ ತರಹ, ಇಂಗೀಷ್ ನಲ್ಲಿ ಓದಕ್ಕೆ ನಾಚಿಕೆ ಆಗಲ್ವೇನ್ರಿ. ಯಾರ್ರಿ. ಬರ್ದೊರ್ ಅದನ್ನ ಕಿತ್ತಾಕ್ರಿ ಮೊದ್ಲು. ಎಲ್ಲಕಿಂತ ಮೇಲೆ ಕನ್ನಡದಲ್ಲಿ ಬರೀರಿ. ಮೆಟ್ರೊ ರೈಲ್ ಒಳಗೂ ಹಾಗೆ ಕನ್ನಡದಲ್ಲಿ ಬರೀರಿ. ಮೊದ್ಲು ಮಾಡಿ ಈ ಕೆಲಸ. ಮೂರ್ಖರ ಸಹವಾಸ ಎಲ್ಲೊ !!!

Hii vasant... nimm lekhanada merege naanoo BMRCL ge patra baredidde... heege... Dear Sir, We are welcoming our Metro Rail this year end.. that is very appreciated. But you are failed to give it to the local touch.. Almost 90 percent of bengaluru people will use this service I am damn sure. it will be a huge success where we can reduce traffic and environmental pollution. As you know Bengaluru is the capital of karnataka adn the KANNADA is the administrative language. but in the metro coach u revealed for demo purpose, have NO KANNADA language naration and put written only in english and hindi.. I dont knw why hindi is necessary here and why you are imposing hindi on us. I hereby request you to put completely the metro coaches written in KANNADA so that it will help improve the KANNADA and moreover that is for karnataka people only no.. Note: You never see the hindi in tamilnadu metro project, not even hindi in maharashtra local train. Every language has its own history and culture..please protect it. and interact with Kannada people and be one of us. Dhanyavadagalu. -- Nimma Kannadiga Girish Rajanal. adakke reply bandiddu heege... Dear Mr Girish Rajanal, Like you we are all Kannadigas. This is a mock-up coach developed in South Korea. Therefore, it is in English. The company policy on signages adequately addresses the issue that you have raised and correctly. We respect and admire your love for kannada like all of us in BMRCL. Please wait for the signages in the train that will run on the line and you will appreciate that we are second to none in promoting the local language which will be commuter friendly. Besides Kannada, we also have signages in Hindi under the three language formula. I wish to inform you that we are 50% owned by the Central Government and we are constitutionally bound to follow the language policy of the Union. Yes, we are also a business organization and we understand the importance of communicating to people correctly and in a friendly manner. Here we understand the importance of expressions in the Local language that will help us communicate better with the local population most of whom will obviously be more familiar with Kannada than with any other language. Anyway, thanks for your interest in namma metro and KANNADA. N Sivasailam MD Namma Metro Vasant... Nimma kalakaliya mail ge dhanyavadagalu... :)

ಇಲ್ಲಿ ಒಂದೆರಡು ಸೂಕ್ಷ್ಮ ವಿಚಾರವಿದೆ. ಅವನ್ನು ಗಮನಿಸೋಣ. ೧ - ಮೆಟ್ರೋ ರೈಲಿನ ಮಾದರಿ ಮ.ಗಾಂಧಿ ರಸ್ತೆಯಲ್ಲಿ ಪ್ರದರ್ಶನಕ್ಕೆ ಇಟ್ಟರು. ಇದು ಕೊರಿಯಾ ದೇಶದಿಂದ ಆಮದು ಮಾಡಲಾದ ಮಾದರಿ ಬಂಡಿ, ಆದ್ರಿಂದ ಇದ್ರಲ್ಲಿ ಇಂಗ್ಲಿಶ್ ಇದೆ ಅಂತಾರೆ. ಆದರೆ ಇದರಲ್ಲಿ ಹಿಂದಿ ಹೇಗೆ ಬಂತು? ಕನ್ನಡ ಬಿಟ್ಟು ಹಿಂದಿ ಹೇಗೆ ಮತ್ತು ಏಕೆ ಬಂತು? ಇವರ ಪ್ರಕಾರ ಮೂರು ಭಾಷೆ ಇರ್ಬೇಕು ಅಂದರೆ ಕನ್ನಡ ಎಲ್ಲಿ?? ಹಿಂದಿ ಬರಿಸುವುದಕ್ಕಾಯ್ತು, ಕನ್ನಡ ಬರೆಸಲಾಗಲಿಲ್ವಾ?? ೨ - ಮಾದರಿ ಬಂಡಿ ತರಿಸುವಾಗಲೇ ಈ ರೀತಿಯ ತಪ್ಪು ಮಾಡಿ, ಮುಂದೆ ಸರಿ ಮಾಡುತ್ತಾರೆ ಎಂದು ಗ್ರಾಹಕರಾಗಿ ನಾವು ನಂಬಲು ಕಷ್ಟ. ನಂಬೋಣವೆಂದು ಅಂದುಕೊಂಡರೂ, ಇವರು ಮುಂದೆಯೂ ಹಿಂದಿ ಹಾಕೇ ಹಾಕುತ್ತೇವೆ ಎಂದು ಹೇಳ್ತಿರೋದು ನೋಡಿದ್ರೆ ಅಲ್ಲಿ ಕನ್ನಡ ಮೂಲೆಗುಂಪು ಆಗುವ ಸಾಧ್ಯತೆ ಇದೆ. ಹೀಗಿರುವಾಗ ಕಾದು ನೋಡುವ ಮನಸ್ಥಿತಿ ಬದಲು ನಮ್ಮ ಹಾಗೆಯೇ ಇನ್ನೂ ಸಾವಿರಾರು ಕನ್ನಡಿಗರು ಮೆಟ್ರೋ ಅಧಿಕಾರಿಗಳಿಗೆ ಪ್ರಶ್ನೆ ಕೇಳಿ ಮಿಂಚೆ ಹಾಕುವ ಹಾಗೆ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳೋಣ. ಇವತ್ತು ಆವು ಇದ್ರಿಂದಲೇ ತಣ್ಣಗಾದರೆ ನಾಳೆ ಒಳಗೆ ಹಿಂದಿ ಹಾಡೂ ಹಾಕ್ತೀವಿ, ಕೇಂದ್ರ ಸರ್ಕಾರ ದುಡ್ಡು ಕೊಟ್ಟಿದೆ ಅಂತ ಉತ್ತರಗಳೇ ಸಿಗೋದು. ಬನ್ನಿ. ನಮ್ಮ ಸಂಪರ್ಕದಲ್ಲಿ ಇರೋ ಎಲ್ಲಾ ಕನ್ನಡಿಗರೂ ಈ ರೀತಿ ಮೆಟ್ರೋ ಕುರಿತು ಮಿಂಚೆ ಹಾಕುವ ಹಾಗೆ ಮಾಡಿಸೋಣ. ಇದು ನಮ್ಮೆಲ್ಲರ ಹೊಣೆ.

ನಂಗೂ ಇದೆ ಉತ್ತರ ಬಂದಿದೆ.ವಸಂತ್, ಈಗ ಅವರ ಉತ್ತರಕ್ಕೆ ಪ್ರತಿಯಾಗಿ ನೀವು ಹೇಳಿರುವ ವಿಷಯಗಳನ್ನೇ ಕೇಳಬೇಕು.ಮೆಟ್ರೋಗಾಗಿ ಮನೆ,ಆಸ್ತಿ ಪಾಸ್ತಿ ಕಳೆದುಕೊಂಡವರು ಕನ್ನಡಿಗರು, ಈಗ ಅಲ್ಲಿ ಕನ್ನಡಕ್ಕೆ ಜಾಗವಿಲ್ಲ ಅನ್ನುವುದನ್ನ ಸಹಿಸಬಾರದು. ಕೇವಲ ಮನಸಿನಲ್ಲಿ ಕನ್ನಡ ಕನ್ನಡ ಅಂದು ಕೊಳ್ಳದೆ ಅವರಿಗೆ ಎಲ್ಲರೂ ಇನ್ನಷ್ಟು ಮಿಂಚೆಗಳನ್ನ ಬರೆಯೋಣ. ರಾಕೇಶ್ ಶೆಟ್ಟಿ :)