ಪೊಲೀಸ್ ತರಬೇತಿಯ ಒಂದು ಕಥೆ

To prevent automated spam submissions leave this field empty.

ನಾನು, ಸುಬ್ಬ ಮತ್ತು ನಿಂಗ ಪೊಲೀಸ್ ಕೆಲಸಕ್ಕೆ ಅಂತಾ ಅರ್ಜಿ ಗುಜರಾಯಿಸಿದ್ವಿ. ಮೂರು ಜನಕ್ಕೂ ಮಂಡ್ಯದಾಗೆ ಇಂಟರ್ ವ್ಯೂ ಐತೆ ಬರಬೇಕು ಅಂತಾ ಲೆಟರ್ ಬಂದಿತ್ತು. ಎಲ್ಲರಿಗೂ ಖುಸಿ. ಆ ಲೆಟರ್ ಇಟ್ಕಂಡ್ ಹಳ್ಳಿ ತುಂಬಾ ಓಡಾಡಿದ್ದೇಯಾ. ಸುಬ್ಬ ಅನ್ನೋನು ನಾವು ಪೊಲೀಸ್ ಆದ್ ಮ್ಯಾಕೆ ಗೌಡಪ್ಪಂಗೆ ಏರೋಪ್ಲೇನ್ ಹತ್ಸಿ, ಸಾನೆ ಹೊಡಿಬೇಕು ಅಂತಾ ಇದೀನ್ಲಾ. ಏರೋಪ್ಲೇನ್ ಏನ್ ಬೇಡ ಬುಡ್ಲಾ. ನಮ್ಮ ಇಸ್ಮಾಯಿಲ್ ಬಸ್ ಹತ್ಸಿದ್ರೆ ಸಾಕು ಬುಡಲಾ. ನಿಂಗ ತನ್ನ ಮದುವೆ ಪತ್ರದಾಗೆ ಆಗಲೇ "ಪೊಲೀಸ್ ನಿಂಗ" ಅಂತಾ ಹಾಕ್ಕೊಂಡಿದ್ದ.

ಸರಿ ಟ್ರೇನಿಂಗ್ ನಾಗೆ ಸಾನೆ ಆಟ ಆಡಿಸ್ತಾರೆ ಅಂತಾ ಪ್ರಾಕ್ಟೀಸ್ ಸುರು ಹಚ್ಕಂಡ್ವಿ. ಬೆಳಗ್ಗೆ 5ಕ್ಕೆ ಎದ್ದು ಪಕ್ಕದ ಗುಡ್ಡ ಹತ್ತುತಿದ್ವಿ. ವಾಪಸ್ಸು ಬರೋಬೇಕಾದ್ರೆ ನಾನೊಬ್ಬನೆಯಾ. ಬಡ್ಡೆ ಹತ್ತಾವು ಆ ಕಡೆಯಿಂದ ಇಳಿದು ಸಂಬಂಧಿಕರ ಮನೆಗೆ ಹೋಗಿ ತಿಂದು, ಮಕ್ಕಂಡು ಸಂಜೆತಾವ ಬರೋವು. ನೇತಾಡ್ ಬೇಕು ಅಂತಾ ಆಲದ ಮರದ ರೆಂಭೆ ಹಿಡ್ಕಂಡ್ ನೇತಾಡ್ತಿತಿದ್ವಿ. ಒಂದು ಸಾರಿ ಜೋರಾಗಿ ನಿಂಗನ ನೂಕಿದ್ರೆ. ಮಗ ಮುಂದಿನ ಮರಕ್ಕೆ ಡಿಕ್ಕಿ ಹೊಡೆದು ಕಿಸ್ಕಂಡಿದ್ದ. ಸೊಂಟಕ್ಕೆ ಒಂದು ಬಾಟ್ಲ್ ಅಮೃತಾಂಜನ ಬಳಿದಿದ್ವಿ. ಮುಖ ಅನ್ನೋದು ಗಾಳಿ ತೆಗದ ಪೂರಿ ಆದಂಗೆ ಆಗಿತ್ತು.

ಇದನ್ನೆಲ್ಲಾ ನೋಡಿದ ನಮ್ಮ ಗೌಡಪ್ಪ ನಾನು ಹೇಳ್ ಕೊಡ್ತೀನಿ ಬಾರ್ರಲಾ ಅಂದ. ನೋಡ್ರಲಾ ಈಗ ಹೈ ಜಂಪ್ ಮಾಡಬೇಕು ಅಂತಾ 6 ಅಡಿ ಎತ್ತರದಾಗೆ ದಪ್ಪನೆ ಬಡ್ಡೆ ಮಡಗಿದ್ದ. ನಿಂಗ ಓಡಿ ಬಂದು ಜಂಪ್ ಮಾಡಿದ್ರೆ ಎರಡು ಕಾಲು ಹಾಕಿ ಕಿಸ್ಕಂಡು. ಅಮ್ಮಾ ಅಂದ ನಿಂಗ. ನೋಡ್ರಲಾ ಏನಾದರೂ ಡಾಮೇಜ್ ಆಗೈತಾ.  ಸುಬ್ಬ ನೀ ಹಾರ್ರಲಾ ಅಂದ ಗೌಡಪ್ಪ. ಸುಬ್ಬ ಹಾರಿ ಜಂಪ್ ಮಾಡಕ್ಕೆ ಆಗದೆ ಬಡ್ಡೆ ಸಮೇತ ಗೌಡಪ್ಪನ ಮುಖಕ್ಕೆ ಗುದ್ದಿದ್ದ. ಹಚ್ರಲಾ ಅರಿಸಿನ. ಲೇ ಬಂದರೆ ಅಟೆಯಾ ಅಂದ ಗೌಡಪ್ಪ. ಸರಿ ಈಗ ಲಾಂಗ್ ಜಂಪ್, ಪಟ್ಟಿಯಿಂದ ಒಂದು 3 ಅಡಿಗೆ ಮಾತ್ರ ಮರಳು ಹಾಕಿಸಿದ್ದ. ನಿಂಗ ರೆಡಿ ಅಂದಾ. ನಿಂಗಾ ಯಾಕಲಾ ನಿಂದು ಕೈ ಸುಟ್ಟೇತೆ. ಲೇ ಲಾಂಗ್ ಜಂಪ್ಗೆ ಅಂತಾ ಸುಣ್ಣದ ಪಟ್ಟೆ ಹಾಕ್ತಿದ್ದೆ. ಕೈನಾಗೆ ಹೊಸಾ ಸುಣ್ಣ ಇತ್ತು. ಗೌಡಪ್ಪ ಬಂದು ಕೈ ತೊಳಕಾ ಅಂತಾ ನೀರು ಹುಯ್ದ, ಹಿಂಗಾಗದೆ ನೋಡಲಾ ಅಂದ. ಬರ್ನಾಲ್ ಹಚ್ಚಿದ್ವಿ. ಸರಿ ನಿಂಗ ಓಡಿ ಬಂದು ಹಾರಿದ. ಮರಳು ಬಿಟ್ಟು ಸಾನೆ ದೂರ ಹಾರಿದ್ದ. ಮಂಡಿ, ಕಾಲು ಗಾಯ. ಅರಿಸಿನ ಬದ್ಲು ಈಗ ಡಿಡಿಟಿ. ಅರಿಸಿನ ಬೆಲೆ ಸಾನೇ ಜಾಸ್ತಿ ಆಗೈತೆ ಅಂತಾ.

ಗೌಡಪ್ಪ ಬಂದು ನಮಗೆ ಏನು ಹೇಳಿಕೊಟ್ಟಿದ್ದು ಅಂದರೆ ಬರೀ ಬೀಳ್ಸಿ ಗಾಯ ಮಾಡೋದು.ಸರಿ ಟ್ರೇನಿಂಗ್ ಬಂತು. ಮೈದಾನದಾಗೆ ಟೇಪು ಹಿಡ್ಕಂಡು ಎಲ್ಲರ ಎದೆ, ಎತ್ತರ ಪರೀಕ್ಸೆ ಮಾಡ್ತಾ ಇದ್ರು. ಸುಬ್ಬ. ಬಂದೇ ಸಾರ್. ಅಂತಾ ಬನೀನ್ ತೆಗೆದ. ಕ್ಸಯಾ ಐತಾ ಅಂದ್ರು. ಯಾಕ್ ಸಾ. ಎದೆ ಅನ್ನೋದು ನಾಯಿ ನಾಲಗೆ ಇದ್ದಂಗೆ ಐತೆ. ನೆಕ್ಸ್ಟ್, ನಿಂಗ, ಬಂದೆ ಸಾ. ಏನ್ಲಾ ನಿನ್ ಎದೆ ಅನ್ನೋದು ಬಡಕಲು ನಾಯಿ ಸೊಂಟ ಇದ್ದಂಗೆ ಐತೆ. ನೆಕ್ಸ್ಟ್ ಕೋಮಲ್, ಬಂದೆ ಸಾ. ಏನ್ಲಾ ನಿನ್ನ ಎದೆ ಅನ್ನೋದು ಸತ್ತ ನಾಯಿ ರೋಡಿ ಅಂಟ್ಕಂಡ್ ಇರಂಗೆ ಐತಲ್ಲಾ ಅಂದ. ಲೇ ಇವನು ಹೋದ್ ಜನ್ಮದಾಗೆ ನಾಯಿ ಆಗಿರಬೇಕು ಕಲಾ ಅಂದ ಸುಬ್ಬ. ಸರಿ ಈಗ ನೀವೆಲ್ಲಾ 1000ಮೀ ಓಡಬೇಕು ಅಂದ್ರು. ಬೆಳಗ್ಗೆ ಬೈಟು ಚಾ ಕುಡಿದು ಬಂದಿದ್ವಿ. ಓಡ್ರಲಾ ಅಂತಿದ್ದಾಗೆನೇ ಸುಬ್ಬ ರೊಯ್ ಅಂತಾ ಓಡೋನು, ಸ್ವಲ್ಪ ಹೊತ್ತು ಫಿಲ್ಡಾನಾಗೆ ಮಲಗೋನು. ಪೊಲೀಸ್ನೋರು ಇವನಿಗೆ ಉಸಾರಿಲ್ಲ ಅಂತಾ ಔಸಧಿ ತರೋದ್ರೊಳಗೆ ಮತ್ತೆ ಓಡಿ ಹೋಗಿರೋನು. ಹಿಂಗೆ ರೆಸ್ಟ್ ತಗೊಂಡು ಫಸ್ಟ್ ಬಂದ. ನಿಂಗ ನಮ್ದೆಲ್ಲಾ ತಿಂಡಿ ಮುಗಿಸೋ ಸಮಯಕ್ಕೆ ಮುಗಿಸಿ ಬಂದು ಟೇಬಲ್ ಮ್ಯಾಕೆ ಬಿದ್ದ. ಏಳಲಾ ನಿಂಗ. ಯಾವನೋ ದರ್ಬೇಸಿ ತಿಂಡಿ ತಿಂದು ಹೋಗಿರೋ ಪ್ಲೇಟ್ ಮ್ಯಾಗೆ ಮಲ್ಕಂಡಿದೀಯಾ. ಹೂ ಕಲಾ. ಸಾಂಬಾರ್ ವಾಸನೆ ಬಂದಾಗಲೇ ಅನುಮಾನ ಬಂತು.

ಸರಿ ಈಗ ಗೋಡೆ ಜಂಪ್ ಮಾಡೋ ಸ್ಪರ್ಧೆ. ನೈಸ್ ಗೋಡೆ. ಓಡಿ ಬಂದು ಹಾರಿದ್ರೆ ಹಂಗೇ ಜಾರೋದು. ಎಲ್ರೂ ಮುಖದಲ್ಲೂ ವೈಟ್ ವಾಸ್. ಗೋಡೆಗೆ ಹಚ್ಚಿದ್ದು. ಸರಿ ಈಗ ತಂತಿ ಬೇಲಿ ಕೆಳಗೆ ಹೋಗೋ ಸ್ಪರ್ಧೆ. ಇದರಾಗಂತು ಎಲ್ಲರ ಬೆನ್ನ ಮ್ಯಾಕೆ ಚಿರತೆ ಉಗರಿನಿಂದ ಗೀರ್ದಂಗೆ ಆಗಿತ್ತು. ಗುಂಡು ಹೊಡೆಯೋ ಸ್ಪರ್ಧೆಯಲ್ಲಿ ದೊಡ್ಡ ಬಂದೂಕು ಎತ್ತಿ ಎತ್ತಿ ಸಾಕಾಗೋಗಿತ್ತು. ಢಂ ಅಂದರೆ ಅಂಗೇ ಎದೆಗೆ ಬಂದು ಹೊಡೆಯೋದು. ನಿಂಗ ಹಾಲ್ಟ್ ಅಟಾಕ್ ಆಗಿ ಎಲ್ಲಿ ಸತ್ತು ಹೋಗ್ತಾನೋ ಅನ್ಸಿತ್ತು. ಸುಬ್ಬ ಮಗ ಪಕ್ಕದೋನು ಎದೆಗೆ ಅಡ್ಜಸ್ಟ್ ಮಾಡಿದ್ದ. ಇಲ್ಲಿ ಢಂ ಅಂದರೆ ಅವನು ಅಯ್ಯೋ ಅನ್ನೋನು. ಸರಿ ಜೈಲರ್ ನಮ್ಮ ಮೂರು ಜನನ್ನ ಕೊಂಡಾಡಿ ಆಯ್ಕೆ ಮಾಡ್ದ. ಸುಬ್ಬನ್ನ ನೋಡಿ ಅದೇನು ಪ್ರೀತಿ ಬಂತೋ ಏನೋ ಸಾನೆ ತಬ್ಗಂಡ. ಸ್ವಲ್ಪ ಹೊತ್ತು ಆದ್ ಮ್ಯಾಕೆ ಸೀನ ಸೀನಕ್ಕೆ ಸುರು ಮಾಡ್ದ. ಯಾಕಲಾ. ಲೇ ಜೈಲರ್ ಮೀಸೆ ಮೂಗನಾಗೆ ಹೋಗಿತ್ತಲಾ. ಗೌಡಂಗಿಂತ ಗಬ್ಬು ವಾಸ್ನೆ ಕನ್ಲಾ ಅಂದ. ಸರಿ ಊರಿಗೆ ಬಂದರೆ ಗೌಡಪ್ಪ ಏನ್ರಲಾ ಪೇಸೆಂಟ್ ಆದಂಗೆ ಆಗೀದಿರಲಾ ಏನ್ರಲಾ ಅಂದ. ಮತ್ತೆ ಬೈಟು ಚಾ ಕುಡಿಸ್ದ. ಜೈಲರ್ ಸಾನೆ ಕೆಲಸ ಮಾಡ್ಸಿದ್ನಾ ಅಂದಾ ಗೌಡಪ್ಪ. ನಿಮಗೆ ಹೆಂಗೆ ಗೊತ್ತು ಗೌಡ್ರೆ. ಲೇ ಅವನು ನಮ್ಮ ಚಿಕ್ಕಪ್ಪನ ಮಗಾ ಕನ್ಲಾ ಅಂದ. ಹಳಸೋದು ಫಲಾವು ವಾಸನೆ ಬತ್ತಿದ್ದಾಗೆನೇ ನಂಗೆ ಡೌಟು ಇತ್ತು ಈಗ ಕ್ಲಿಯರ್ ಆತು ಅಂದ ಸುಬ್ಬ,.     

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು