"ಅಯ್ಯೋ ನಾವ್ಯಾಕ್ ಹೀಗೆ, ನಮಗೆಂದ್ಬುದ್ಧೀಬರೋದು" !

To prevent automated spam submissions leave this field empty.

"ಅಯ್ಯೋ ನಾವ್ಯಾಕ್ ಹೀಗೆ, ನಮಗೆಂದ್ಬುದ್ಧೀಬರೋದು" !
ಪ್ರತಿದಿನದ ಸುದ್ದಿ ಸಮಾಚಾರಗಳ್ನ ಓದಿದ್ಮೇಲೆ ನಮಗೆ ಹೀಗ್ ಅನ್ಸೊದ್ ಸ್ವಾಭಾವಿಕವಾಗ್ ಹೋಗಿದೆ. ಎಲ್ಲರ ಬಾಯ್ನಲ್ಲೂ ಇದೇ ಉದ್ಗಾರ. ವಿಶ್ವದ ಮೋಸಗಾರರ ಗುಂಪಿಗೆ ಭಾರತ ಸೇರ್ತಲ್ಲಾ. ವಿಶ್ವದ ದುರಾಶೆಯ ಮಿ. ಡೆತ್ ಅನ್ನೊ ವೈದ್ಯ ನಮ್ಮದೇಶದವನೆ ಆಗ್ಬಿಟ್ಟಿರೊವಾಗ ಏನ್ತಾನೆ ಮಾಡ್ಬೇಕು ?
ಸರಿ ; ಇವತ್ತಿನ ವಿಷಯಕ್ಕೆ ಬರೋಣ. "ಮುಂಬೈನ ಮಿರರ್" ಅಂತ ಒಂದು ಒಳ್ಳೆಯ ಪತ್ರಿಕೆಯೆಂದು ಇಂದಿನವರೆಗೂ (ನಾನು  ಟೈಪ್ ಮಾಡುತ್ತಿರುವ ವರೆಗೆ) ಕರೆಸಿಕೊಳ್ಳಬಹುದಾದ ಪತ್ರಿಕೆ ಇದೆ. ಇದು "ಟೈಮ್ಸ್ ಆಫ್ ಇಂಡಿಯ ಪತ್ರಿಕೆ" ಯ ಒಂದು "ಉಪ ಪತ್ರಿಕೆ", ಅದರ ಜೊತೆಯಲ್ಲೇ ಬರುತ್ತೆ. ಬೆಂಗಳೂರಿನ ಟೈಮ್ಸ್ ಪತ್ರಿಕೆ ಜೊತೆ ಯಲ್ಲೂ ಮಿರರ್ ಬರುತ್ತೆ. ಬೆಂಗಳೂರು ವಲಯದ ನ್ಯೂಸ್ ಸಹಜವಾಗಿ ಅದರಲ್ಲಿರುತ್ತೆ.
"ಟಾಯ್ಲೆಟ್ ಚೀಟ್ " ಶೀರ್ಶಿಕೆಯಡಿಯಲ್ಲಿ ಬಂದ ಲೇಖನವಿದು. "ರಾಜಿಮೆನನ್" ಎಂಬ ಓದುಗ, ಒಮ್ಮೆ ರೈಲ್ವೆ ಸ್ಟೇಷನ್ ಒಂದರ, "ರೈಲ್ವೆ ಟಾಯಿಲೆಟ್ "ಉಪಯೋಗಿಸಲು ಹೋದಾಗ, ಅಲ್ಲಿ ಮೂತ್ರಿಗಳ ಉಪಯೋಗಮಾಡಲು ೨ ರೂ. ಶುಲ್ಕದ ಬದಲು ರೂ. ೫ ವಿಧಿಸಿದ್ದರಿಂದ ಅವರು ಮೊದಲು ಅಲ್ಲಿನ "ಸ್ಟೇಷನ್ ಮಾಸ್ಟರ್" ಗೆ ದೂರು ತಿಳಿಸಿ ಅರ್ಜಿಸಲ್ಲಿಸಿದರು. ಹೀಗೆ ಮುಂಬೈನಂತಹ ಜನನಿಬಿಡ ಪ್ರದೇಶದ ರೈಲ್ವೆ ನಿಲ್ದಾಣಗಳಲ್ಲಿ  ಹೆಚ್ಚುಹಣದಿಂದ ದಿನದ ಕೊನೆಯಲ್ಲಿ,, ಕಂಟ್ರಾಕ್ಟರ್ ಗಳಿಗೆ ಸಿಗುವ ಹಣದ ಮೊತ್ತ ಸುಮಾರು ೧.೨ ಕೋಟಿರೂಪಾಯಿಗಳವರೆಗೆ.
ರೈಲ್ವೆ ಆಡಳಿತ ವರ್ಗ ಸ್ಪಷ್ಟವಾಗಿ ನಮೂದಿಸಿರುವುದು, ೨ ರೂ. ಆದರೆ ಅಲ್ಲಿನ ಅಟೆಂಡೆಂಟ್ಸ್ ವಿಧಿಸುವ ಹಣ ೩ ರಿಂದ ೫ ರವರೆಗೆ, ಸಾಮಾನ್ಯವಾಗಿ ಮುಂಬೈಕರ್ ಗಳಿಗೆ, "ಸಾಬ್ ಅಭಿ ಪಾಂಚ್ ರುಪಯಾ ಹೋಗಯ "ಅಂದರೆ, "ಐಸಾ ಹೈ ಕ್ಯಾ. ಲೇಲೊ ಭಯ್ಯ,"  ಎಂದು ಹೆಚ್ಚಿನ ಹಣತೆತ್ತು, ಅಲ್ಲಿಂದ  ತೆರಳುವ ಜನವೇ ನೂರಕ್ಕೆ ೯೯. ೯ ಶೇಕಡದಷ್ಟು. ಆದರೆ ನಮ್ಮ "ರಾಜಿಮೆನನ್"  ಯೋಚಿಸಿದ್ದು ಆ ತರಹವಲ್ಲ. ಅದು ಹೊಗಳುವಂತಹದು ಸಹಿತ !
ದಿನಪ್ರತಿ, ೨ ಲಕ್ಷಕ್ಕೂ ಹೆಚ್ಚು ಮಂದಿ ಬಳಸುವ ಶೌಚಾಲಯದಲ್ಲಿ, ಈ ಹೆಚ್ಚುವರಿ ಮೊಬಲಿಗಿಂದ, ಜಮಾಯಿಸುವ ಒಟ್ಟು ಹಣ ೧.೫ ಕೋಟಿಯಾಗುವುದು ಅತಿ ಸುಲಭ.
ಆಸಮಯದಲ್ಲಿ ಮೆನನ್ ಜೊತೆ ಮುಂಬೈ ಮಿರರ್ ಸಂಪಾದಕ ವರ್ಗದ ಕಾರ್ಯಕರ್ತರು ಜೊತೆಯಲ್ಲಿ ಬಂದು ಕಣ್ಣಾರೆ ಕಂಡು ಚಿತ್ರಗಳನ್ನೂ ತೆಗೆದಿದ್ದಾರೆ. ಅವನ್ನು ನಾವು ಪತ್ರಿಕೆಯಲ್ಲಿ ಕಾಣಬಹುದು. "ಮೆನನ್" ಪಟ್ಟ ಶ್ರಮವನ್ನು ಇಲ್ಲಿ ದಾಖಲು ಮಾಡುವುದು ಯೋಗ್ಯವಾದದ್ದು.
೧. ಮೊದಲು ಹೆಚ್ಚು ಹಣ ಕೊಟ್ಟಕೂಡಲೆ ಅಲ್ಲಿನ "ಸ್ಟೇಷನ್ ಮಾಸ್ಟರ್ "ಗಮನಕ್ಕೆ ತಂದಿ ದೂರುದಾಖಲಿಸಿದರು. ಸ್ಟೇಷನ್ ಮಾಸ್ತರ್ ಭರವಸೆ ನೀಡಿ "ಕಂಟ್ರಾಕ್ಟರ್" ಗೆ ೧೦೦ ರೂ ಜುಲ್ಮಾನೆ ವಿಧಿಸಿರುವುದಾಗಿ ತಿಳಿಸಿ ಸಮಾಧಾನ ಮಾಡಿದರು. ಆದರೆ ಮಾರನೆಯದಿನವೂ ಅದೇ ತರಹ ಮೆನನ್ ಹೆಚ್ಚು ಹಣ ತೆರಬೇಕೇಯಿತು. ಆಗ ಮೆನನ್ ಮಿರರ್ ಮ್ಯಾಗಝೈನ್ ಮೊರೆಹೊಕ್ಕರು. ಪಶ್ವಿಮ ಮತ್ತು ಮಧ್ಯ ರೈಲ್ವೆಯ ಹಲವಾರು ಸ್ಟೇಷನ್ ಗಳ ಟಾಯಿಲೆಟ್ ಗಳ ಆಚಾರ ವ್ಯವಹಾರಗಳನ್ನು ಗಮನಿಸಿದಾಗ ಮೆನನ್ ಹೇಳಿದ್ದು ನಿಜವೆಂದು ಸಾಬೀತ್ ಆಯಿತು. "ಸಿಎಸ್.ಟಿ, "ದಾದರ್ [ಪ]", "ಕುರ್ಲಾ", "ಕಲ್ಯಾಣ್", "ಖಾರ್ ರೈಲ್ವೆ ನಿಲ್ದಾಣ" ಗಳಲ್ಲೂ ಇದೇ ತರಹದ ವ್ಯವಹಾರ ಎದುರಿಗೆ ಬಂತು.
ಈಗ ಉನ್ನತ ಅಧಿಕಾರಿಗಳು, ಹೇಳಿಕೆ ಕೊಟ್ಟು, "ಚೀಫ್ ಪಬ್ಲಿಕ್ ರಿಲೇಶನ್ ಆಫಿಸರ್", "ಶ್ರೀನಿವಾಸ ಮುಡ್ಗೇರಿಕರ್", ಸಾರ್ವಜನಿಕರಿಗೆ  ಈ ತರಹದ ಹಣಕೊಟ್ಟು ಉಪಯೋಗಿಸುವ ವ್ಯವಸ್ಥೆಯುಳ್ಳ ಟಾಯ್ಲೆಟ್ ಗಳ ಕೆಲಸಗಾರರು ಹೆಚ್ಚು ಹಣ ಕೇಳಿದರೆ, ತಕ್ಷಣ ದೂರು ದರ್ಜ್ ಮಾಡಿ. ನಾವು ಅವರಿಗೆ ದಂಡ ವಿಧಿಸುತ್ತೇವೆ. ಅದೇ ತರಹ ಮುಂದುವರೆದರೆ, ಕಂಟ್ರಾಕ್ಟರ್ ಗಳನ್ನು ರದ್ದುಗೊಳಿಸುತ್ತೇವೆ ಎಂದರು.
ಪಶ್ಚಿಮ ರೈಲ್ವೆಯ "ಚೀಫ್ ಪಬ್ಲಿಕ್ ರಿಲೇಶನ್ ಆಫಿಸರ್", "ಎಸ್.ಎಸ್.ಗುಪ್ತಾ" ರವರೂ ಇದೇ ಮಾತನ್ನು ಅನುಮೋದಿಸಿದರು. ಇನ್ನು ಮುಂದೆ ದಪ್ಪ ಹಾಗೂ ಸ್ಪಷ್ಟವಾಗಿ ಬರೆದ ತಿಳುವಳಿಕೆ-ಫಲಕಗಳನ್ನು ಶೌಚಾಲಯದಲ್ಲಿ ಎಲ್ಲೆಡೆ, ತೋರಿಸಲಾಗುವುದು, ಎಂದು. ಇಷ್ಟು ಹಂಗಾಮ ಆದಮೇಲೆ ಸ್ವಲ್ಪವಾದರೂ ಮನುಷ್ಯತ್ವ ತೋರಿಸಬೇಡವೆ ?
ಒಟ್ಟಿನಲ್ಲಿ ಆದ ಪ್ರಗತಿಯೆಂದರೆ, "ಟೈಮ್ಸ್ ಆಫ್ ಇಂಡಿಯ ಪತ್ರಿಕೆ" ಯಲ್ಲಿ ಪ್ರಕಟವಾಗಿದ್ದರಿಂದ ಲಕ್ಷಗಟ್ಟಲೆ ಜನರಿಗೆ ಈ ವಿಷಯ ತಿಳಿಯಿತು. ಇದರಿಂದ ಪಾಠಕಲಿತರೆ ಒಳ್ಳೆಯದು. ಇನ್ನೂ ಮಂಡರಾಗಿ, "ಎಮ್ಮೆ ಚರ್ಮ" ದವರಾದರೆ, ಮಾಡುವುದೇನು ?

ಕೃಪೆ : "ಮುಂಬೈ ಮಿರರ್ ಪತ್ರಿಕೆ" ಯಿಂದ

 

ಪ್ರತಿದಿನದ ಸುದ್ದಿ ಸಮಾಚಾರಗಳ್ನ ಓದಿದ್ಮೇಲೆ ನಮಗೆ ಹೀಗ್ ಅನ್ಸೊದ್ ಸ್ವಾಭಾವಿಕವಾಗ್ ಹೋಗಿದೆ. ಎಲ್ಲರ ಬಾಯ್ನಲ್ಲೂ ಇದೇ ಉದ್ಗಾರ. ವಿಶ್ವದ ಮೋಸಗಾರರ ಗುಂಪಿಗೆ ಭಾರತ ಸೇರ್ತಲ್ಲಾ. ವಿಶ್ವದ ದುರಾಶೆಯ 'ಮಿ. ಡೆತ್ '  ಅನ್ನೊ ವೈದ್ಯ ನಮ್ಮದೇಶದವನೆ ಆಗ್ಬಿಟ್ಟಿರೊವಾಗ ಏನ್ತಾನೆ ಮಾಡ್ಬೇಕು  ?  ’ನಾರಾಯಣಮೂರ್ತಿ ’,”ಸರ್. ಎಂ.  ವಿಶ್ವೇಶ್ವರಯ್ಯ’, ಮುಂತಾದ ಮಹಾನ್ ವ್ಯಕ್ತಿಗಳ ನಾಡಿನಲ್ಲಿ ಎಂಥೆಂಥಾ ಧೂರ್ತರಿದ್ದಾರಲ್ಲ ಎಂದು ಮೈ ಉರಿಯುತ್ತದೆ. 

 

ಸರಿ ; ಇವತ್ತಿನ ವಿಷಯಕ್ಕೆ ಬರೋಣ. "ಮುಂಬೈನ ಮಿರರ್" ಅಂತ ಒಂದು ಒಳ್ಳೆಯ ಪತ್ರಿಕೆಯೆಂದು ಇಂದಿನವರೆಗೂ (ನಾನು  ಟೈಪ್ ಮಾಡುತ್ತಿರುವ ವರೆಗೆ) ಕರೆಸಿಕೊಳ್ಳಬಹುದಾದ ಪತ್ರಿಕೆ ಇದೆ. ಇದು "ಟೈಮ್ಸ್ ಆಫ್ ಇಂಡಿಯ ಪತ್ರಿಕೆ" ಯ ಒಂದು "ಉಪ ಪತ್ರಿಕೆ", ಅದರ ಜೊತೆಯಲ್ಲೇ ಬರುತ್ತೆ. ಬೆಂಗಳೂರಿನ ಟೈಮ್ಸ್ ಪತ್ರಿಕೆ ಜೊತೆ ಯಲ್ಲೂ ಮಿರರ್ ಬರುತ್ತೆ. ಬೆಂಗಳೂರು ವಲಯದ ನ್ಯೂಸ್ ಸಹಜವಾಗಿ ಅದರಲ್ಲಿರುತ್ತೆ.

 

ಮಿರರ್ ಪತ್ರಿಕೆಯ ಮುಖಪುಟದಲ್ಲಿ, "ಟಾಯ್ಲೆಟ್ ಚೀಟ್ " ಶೀರ್ಶಿಕೆಯಡಿಯಲ್ಲಿ ಬಂದ ಇಂದಿನ  ಲೇಖನವಿದು.

 

"ರಾಜಿಮೆನನ್" ಎಂಬ ಓದುಗ, ಒಮ್ಮೆ ರೈಲ್ವೆ ಸ್ಟೇಷನ್ ಒಂದರ, "ರೈಲ್ವೆ ಟಾಯಿಲೆಟ್ "ಉಪಯೋಗಿಸಲು ಹೋದಾಗ, ಅಲ್ಲಿ ಮೂತ್ರಿಗಳ ಉಪಯೋಗಮಾಡಲು  ೨ ರೂ. ಶುಲ್ಕದ ಬದಲು ರೂ. ೫ ವಿಧಿಸಿದ್ದರಿಂದ ಅವರು ಮೊದಲು ಅಲ್ಲಿನ "ಸ್ಟೇಷನ್ ಮಾಸ್ಟರ್" ಗೆ ದೂರು ತಿಳಿಸಿ ಅರ್ಜಿಸಲ್ಲಿಸಿದರು. ಹೀಗೆ ಮುಂಬೈನಂತಹ ಜನನಿಬಿಡ ಪ್ರದೇಶದ ರೈಲ್ವೆ ನಿಲ್ದಾಣಗಳಲ್ಲಿ  ಹೆಚ್ಚುಹಣದಿಂದ ದಿನದ ಕೊನೆಯಲ್ಲಿ,  ಕಂಟ್ರಾಕ್ಟರ್ ಗಳಿಗೆ ಸಿಗುವ ಹಣದ ಮೊತ್ತ, ಸುಮಾರು ೧.೨ ಕೋಟಿರೂಪಾಯಿಗಳವರೆಗೆ.

 

ರೈಲ್ವೆ ಆಡಳಿತ ವರ್ಗ ಸ್ಪಷ್ಟವಾಗಿ ನಮೂದಿಸಿರುವುದು, ೨ ರೂ. ಆದರೆ ಅಲ್ಲಿನ ಅಟೆಂಡೆಂಟ್ಸ್ ವಿಧಿಸುವ ಹಣ ೩ ರಿಂದ ೫ ರವರೆಗೆ, ಸಾಮಾನ್ಯವಾಗಿ ಮುಂಬೈಕರ್ ಗಳಿಗೆ, "ಸಾಬ್ ಅಭಿ ಪಾಂಚ್ ರುಪಯಾ ಹೋಗಯ "ಅಂದರೆ, "ಐಸಾ ಹೈ ಕ್ಯಾ. ಲೇಲೊ ಭಯ್ಯ,"  ಎಂದು ಹೆಚ್ಚಿನ ಹಣತೆತ್ತು, ಅಲ್ಲಿಂದ  ತೆರಳುವ ಜನವೇ ನೂರಕ್ಕೆ ೯೯. ೯ ಶೇಕಡದಷ್ಟು.

 

ಆದರೆ ನಮ್ಮ "ರಾಜಿಮೆನನ್"  ಯೋಚಿಸಿದ್ದು ಆ ತರಹವಲ್ಲ. ಅದು ಹೊಗಳುವಂತಹದು ಸಹಿತ !ದಿನಪ್ರತಿ, ೨ ಲಕ್ಷಕ್ಕೂ ಹೆಚ್ಚು ಮಂದಿ ಬಳಸುವ ಶೌಚಾಲಯದಲ್ಲಿ, ಈ ಹೆಚ್ಚುವರಿ ಮೊಬಲಿಗಿಂದ, ಜಮಾಯಿಸುವ ಒಟ್ಟು ಹಣ ೧.೫ ಕೋಟಿಯಾಗುವುದು ಅತಿ ಸುಲಭ. ಅದು ಕಂಟ್ರಾಕ್ಟರ್ ಗಳಿಗೇಕೆ ಹೋಗಬೇಕು ?

 

ಆಸಮಯದಲ್ಲಿ ಮೆನನ್ ಜೊತೆ ಮುಂಬೈ ಮಿರರ್ ಸಂಪಾದಕ ವರ್ಗದ ಕಾರ್ಯಕರ್ತರು ಜೊತೆಯಲ್ಲಿ ಬಂದು ಕಣ್ಣಾರೆ ಕಂಡು ಚಿತ್ರಗಳನ್ನೂ ತೆಗೆದಿದ್ದಾರೆ. ಅವನ್ನು ನಾವು ಪತ್ರಿಕೆಯಲ್ಲಿ ಕಾಣಬಹುದು. "ಮೆನನ್" ಪಟ್ಟ ಶ್ರಮವನ್ನು ಇಲ್ಲಿ ದಾಖಲು ಮಾಡುವುದು ಯೋಗ್ಯವಾದದ್ದು.


೧. ಮೊದಲು ಹೆಚ್ಚು ಹಣ ಕೊಟ್ಟಕೂಡಲೆ ಅಲ್ಲಿನ "ಸ್ಟೇಷನ್ ಮಾಸ್ಟರ್ "ಗಮನಕ್ಕೆ ತಂದು, ದೂರು ಸಲ್ಲಿಸಿದರು. ಸ್ಟೇಷನ್ ಮಾಸ್ತರ್ ಭರವಸೆ ನೀಡಿ "ಕಂಟ್ರಾಕ್ಟರ್" ಗೆ ೧೦೦ ರೂ ಜುಲ್ಮಾನೆ ವಿಧಿಸುವುದಾಗಿ ಭರವಸೆಕೊಟ್ಟು ಅವರನ್ನು ಸಮಾಧಾನ ಮಾಡಿ ಕಳಿಸಿದರು. ಆದರೆ ಮಾರನೆಯದಿನವೂ ಅದೇ ತರಹ ಮೆನನ್ ಹೆಚ್ಚು ಹಣ ತೆರಬೇಕಾಯಿತು. ಆಗ ಮೆನನ್ ಮಿರರ್ ಮ್ಯಾಗಝೈನ್ ಮೊರೆಹೊಕ್ಕರು. ಪಶ್ವಿಮ ಮತ್ತು ಮಧ್ಯ ರೈಲ್ವೆಯ ಹಲವಾರು ಸ್ಟೇಷನ್ ಗಳ ಟಾಯಿಲೆಟ್ ಗಳ ಆಚಾರ ವ್ಯವಹಾರಗಳನ್ನು ಗಮನಿಸಿದಾಗ ಮೆನನ್ ಹೇಳಿದ್ದು ನಿಜವೆಂದು ಸಾಬೀತ್ ಆಯಿತು. "ಸಿ.ಎಸ್.ಟಿ, "ದಾದರ್ [ಪ]", "ಕುರ್ಲಾ", "ಕಲ್ಯಾಣ್", "ಖಾರ್ ರೈಲ್ವೆ ನಿಲ್ದಾಣ" ಗಳಲ್ಲೂ ಇದೇ ತರಹದ  ಅವ್ಯವಹಾರ ಎದುರಿಗೆ ಬಂತು.


ಈಗ ಉನ್ನತ ಅಧಿಕಾರಿಗಳು, ಹೇಳಿಕೆ ಕೊಟ್ಟು, "ಚೀಫ್ ಪಬ್ಲಿಕ್ ರಿಲೇಶನ್ ಆಫಿಸರ್", "ಶ್ರೀನಿವಾಸ ಮುಡ್ಗೇರಿಕರ್", ಸಾರ್ವಜನಿಕರಿಗೆ  ಈ ತರಹದ ಹಣಕೊಟ್ಟು ಉಪಯೋಗಿಸುವ ವ್ಯವಸ್ಥೆಯುಳ್ಳ ಟಾಯ್ಲೆಟ್ ಗಳ ಕೆಲಸಗಾರರು ಹೆಚ್ಚು ಹಣ ಕೇಳಿದರೆ, ತಕ್ಷಣ ದೂರು ದರ್ಜ್ ಮಾಡಿ. ನಾವು ಅವರಿಗೆ ದಂಡ ವಿಧಿಸುತ್ತೇವೆ. ಅದೇ ತರಹ ಮುಂದುವರೆದರೆ, ಕಂಟ್ರಾಕ್ಟರ್ ಗಳ ಕಂಟ್ರಾಕ್ಟನ್ನು ರದ್ದುಗೊಳಿಸುತ್ತೇವೆ ಎಂದರು.


ಪಶ್ಚಿಮ ರೈಲ್ವೆಯ "ಚೀಫ್ ಪಬ್ಲಿಕ್ ರಿಲೇಶನ್ ಆಫಿಸರ್", "ಎಸ್.ಎಸ್.ಗುಪ್ತಾ" ರವರೂ ಇದೇ ಮಾತನ್ನು ಅನುಮೋದಿಸಿದರು. ಇನ್ನು ಮುಂದೆ ದಪ್ಪ ಹಾಗೂ ಸ್ಪಷ್ಟವಾಗಿ ಬರೆದ ತಿಳುವಳಿಕೆ-ಫಲಕಗಳನ್ನು ಶೌಚಾಲಯದಲ್ಲಿ ಎಲ್ಲೆಡೆ, ತೋರಿಸಲಾಗುವುದು, ಎಂದು. ಇಷ್ಟು ಹಂಗಾಮ ಆದಮೇಲೆ ಸ್ವಲ್ಪವಾದರೂ ಮನುಷ್ಯತ್ವ ತೋರಿಸಬೇಡವೆ ?


ಒಟ್ಟಿನಲ್ಲಿ ಆದ ಪ್ರಗತಿಯೆಂದರೆ, "ಟೈಮ್ಸ್ ಆಫ್ ಇಂಡಿಯ ಪತ್ರಿಕೆ" ಯಲ್ಲಿ ಪ್ರಕಟವಾಗಿದ್ದರಿಂದ ಲಕ್ಷಗಟ್ಟಲೆ ಜನರಿಗೆ ಈ ವಿಷಯ ತಿಳಿಯಿತು. ಇದರಿಂದ ಪಾಠಕಲಿತರೆ ಒಳ್ಳೆಯದು. ಇನ್ನೂ ಮಂಡರಾಗಿ, "ಎಮ್ಮೆ ಚರ್ಮ" ದವರಾದರೆ, ಮಾಡುವುದೇನು ?

 

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸ್ವಾಮಿ, ಕೋಟಿ ಕೋಟಿ ಲಾಭವಾಗುವಾಗ 100 ರೂ. ದಂಡ ಕಟ್ಟಲು ಅವರಿಗೆ ಕಷ್ಟವಿಲ್ಲ. ದಂಡ ಹೆಚ್ಚಾಗಬೇಕು/ಲೈಸೆನ್ಸ್ ರದ್ದು ಮಾಡಬೇಕು. ಮೇಲಾಗಿ ಜನ ತಿರುಗಿ ಬೀಳಬೇಕು.

ನನಗೂ ಇದೇ ತರದ ಅನುಭವ ಬಿ ಎಂ ಟಿ ಸಿ ಶೌಚಾಲಯದಲ್ಲಿ ತುಂಬಾ ಸಲ ಆಗಿದೆ. ಅಲ್ಲಿ ಮೂತ್ರಾಲಯಕ್ಕೆ ೨ ರೂ ಅಂತಿದೆ ಆದ್ರೆ ಶೌಚಾಲಯಕ್ಕೆ ಯಾವ ಬೋರ್ಡ್ ಸಹ ಹಾಕಿಲ್ಲ, ಅಲ್ಲಿ ಕೂತಿರುವವನು ನನ್ನನ್ನ ೧ ರೂ ಕೇಳಿದ, ನನ್ನ ಮುಂದೆ ಹೋದವರು ೧ ರೂ ಕೊಟ್ಟು ಹೋಗ್ತಿದ್ರು. ನಾನು ಕೊಡಲ್ಲ ಅಂದೆ. ಏಯ್ ಕೊಡಯ್ಯ ಕ್ಲೀನ್ ಯಾರು ನಿಮ್ಮ ಮಾವ ಮಾಡ್ತಾನ ಅಂದ. ಕೊಡಲ್ಲ, ಬಿ ಎಂ ಟಿ ಸಿಯವರು ನಿಂಗೇನು ಇಲ್ಲಿ ಬಿಟ್ಟಿ ಕೂರ್ಸಿಲ್ಲ, ಬೋರ್ಡ್ ತೋರಿಸು ಆಮೇಲೆ ಕೊಡ್ತೀನಿ ಅಂದೆ. ನಾನು ಕೊಡದೆ ಇರೋದು ನೋಡಿ ನನ್ನ ಹಿಂದೆ ಬಂದ ಇಬ್ರು ಅವನಿಗೆ ದುಡ್ಡು ಕೊಡಲಿಲ್ಲ

ಭೇಷ್ ಸರಿಯಾಗಿ ಮಾಡಿದಿರ. ಕೆಲವರಿಗೆ, ಹೇಗಪ್ಪ ಕಕ್ಕಸ್ಸು, ಹೇಸಿಗೆ, ಮಲಮೂತ್ರಗಳ ಸ್ಥಾನದಲ್ಲಿ ಸದ್ಯ ತಪ್ಪಿಸ್ಕೊಂಡ್ ಹೋದ್ರೆ ಸಾಕಪ್ಪ ಅಂತ ಮೂಗ್ ಮುಚ್ಕೊಂಡು ಅವನು ಎಷ್ಟ್ ಕೇಳಿದ್ರೆ ಅಷ್ಟ್ ತೆತ್ತು ಹೋಗ್ಬಿಡ್ತಾರೆ. ಇದು ಸುತರಾಂ ಮಾಡಬಾರದ್ದು. ನೋಡಿ ನಾವು ನೀವು ಯಾವಾಗ್ಲಾದೃ ಒಂದ್ಸರಿ ಅಥವಾ ಎರಡ್ಸರಿ ಹೋಗ್ತಿವಿ. ಹೆಚ್ಚುಜನ ಬಡವರು ಚಾಲ್ ನಲ್ಲಿ ಇರ್ತಾರೆ. ಅವರು ಬೆಳಿಗ್ಯೆ ಕೆಲಸಕ್ಕೆ ಹೋಗಬೇಕು. ಲೇಟಾಗಿ ಎದ್ರೆ ಆಯ್ತು, ಲೈನ್ ನಲ್ಲಿ ನಿಂತ ಅವರ ಮನೆಯ ಚಾಲ್ ಶೌಚಾಲಯಕ್ಕೆ ಹೋಗಲು ಸಾಧ್ಯವೇ ಇಲ್ಲ. ಅವರಿಗೆ ಈ ರೈಲ್ವೆ ಶೌಚಾಲಯಗಳು ಅತ್ಯಂತ ಬೇಡಿಕೆಯ ತಾಣಗಳು. ಅಂತಹವರ ಸಂಖ್ಯೆ, ಸಾವಿರಾರು. ದಿನಕ್ಕೆ ೨ ಲಕ್ಷ ಜನ ಈ ಶೌಚಾಲಯಗಳ ಉಪಯೋಗ ಪಡೆಯುತ್ತಿದ್ದಾರೆ. ಆದ್ದರಿಂದ ಇದನ್ನು ನಾವು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಇದಕ್ಕೆ ನಾವು ಸರಿಯಾಗಿ ಸ್ಪಂದಿಸಿ, ಕೆಟ್ಟ ಕಂಟ್ರಾಕ್ಟರ್ ಗಳಿಗೆ ಬುದ್ಧಿಕಲಿಸಲೇ ಬೇಕು. ಅವರ ಜೊತೆ ಅನೇಕ ರೈಲ್ವೆ ಅಧಿಕಾರಿಗಳೂ ಸೇರಿದ್ದಾರೆ. ದಯಮಾಡಿ ಲೈಟ್ ಆಗಿ ತೆಗೆದುಕೊಳ್ಳಬೇಡಿ. ಬಡವರು ೫ ರೂ ಕೊಟ್ಟು ಹೋಗುವ ಅನಿಶ್ಟವನ್ನು ನಾವು ನಿಲ್ಲಿಸಬೇಕು. ಅದು ನಮ್ಮ ಧ್ಯೇಯ !

ನಾನು ಹೋಗಿ ಬಿ ಎಂ ಟಿ ಸಿ ಅಧಿಕಾರಿಗಳಿಗೆ ದೂರು ಕೊಡೋಣ ಅಂತಿದ್ದೀನಿ ಸಿಗ್ಲಿಲ್ಲ ಅಂದ್ರೆ ೧ ಮೈಲ್ ಹಾಕ್ತೀನಿ. ಎಷ್ಟೊಂದು ಜನ ಅಲ್ಲಿ ಓಡಾಡಬಹುದು ಅವರಿಂದ ಎಷ್ಟು ವಸೂಲಿ ಆಗಬಹುದು ಅಬ್ಬ.

ವೆಂಕಟೇಶ್ ತುಂಬಾ ಉಪಯುಕ್ತ ಲೇಖನ. ಇಂತಹ ಕಾಂಟ್ರಾಕ್ಟರ್ಗಳನ್ನು ಅಲ್ಲಿನ ಅಧಿಕಾರಿಗಳು ಹೊರ ಹಾಕಭೇಕು. ಆದರೆ ಅದು ಆಗುವುದಿಲ್ಲ. ಕಾರಣ ಅವರಿಗೆ ಸಿಗುವ ಹಣ. ಮಾಧ್ಯಮಗಳು ಎಷ್ಟೇ ಬಹಿರಂಗ ಪಡಿಸಿದರೂ ವ್ಯವಸ್ಥೆ ಮಾತ್ರ ಬದಲಾಗುವುದಿಲ್ಲ. ಅಲ್ಲಿಗೆ ಯಾರೇ ಹೋದಾಗಲೂ ಸಾರ್ವಜನಿಕ ಎನ್ನುವುದಕ್ಕಿಂತ ಹೆಚ್ಚಾಗಿ ಸ್ವಾರ್ಥ ಬರುತ್ತದೆ. ಧನ್ಯವಾದಗಳು