ಬೆಂಗಳೂರಿನ್ಯಾಗ ಅದೇನ್ ಆಟೋ ತ್ರಾಸೈತೋ ಮಾರಾಯ ..

To prevent automated spam submissions leave this field empty.

ಒಂದ ದಿವಸ ನಾನು ರಾಜಾಜಿನಗರದಿಂದ ಆಫೀಸಿಗೆ cunningham ರೋಡಿಗೆ ಬರಬೇಕಾಗಿತ್ತ್ರಿ. ನಾನ್ usually  ಬಸ್ಸಿಗೆ ಬರತೇನ್ರಿ. ಆದ್ರ ಅವತ್ತ ಭಾಳ್ ತಡಾ ಆಗೇತಿ ಅಂತ  ರಿಕ್ಷಾಕ್ಕ ಕೈ ಮಾಡಿದೆ. ಆ ಡ್ರೈವರ್ ಮಾರಾಯ ಭಾರೀ fast ಹೊಂಟಾವ, sudden ಆಗಿ ನಿಂದ್ರಿಸಿದ. ಆಟೋ ಹಿಂದ ಬರೋ ಬೈಕೂ, ಕಾರೂ, ಬಸ್ಸನ್ಯಾಗ ಇರೋ ಎಲ್ಲಾ ಮಂದಿ ಸೇರಿ ನನಗ ಬೈದಿರಬೇಕ್ರಿ ಅವತ್ತ. ನಾನ ಕೆಳಗ ಮಾರಿ ಹಾಕ್ಕೊಂಡ ಡ್ರೈವರ್ ಗ ಕೇಳಿದೆ "cunningham ರೋಡ್" ಅಂತ .. ಆ ಮನಿಶ್ಯಾ ಎಸ್ಟ fast  ನಿಂದಿರ್ಸಿದ್ನೋ ಅಸ್ಟೆ fast  ಆಗಿ ಹೋಗಿಬಿಟ್ಟ.  ನನಗ ಫುಲ್ ಆಶ್ಚ್ಯರ್ಯ ಆತು; ಕೇಳೂ ಬೇಕಾದ್ರ ಏನರ ತಪ್ಪ ಮಾಡಿದ್ನೆನಪ ಅಂತ. ಆಮ್ಯಲಿಂದ ಸುರೂ ಆಟ ನೋಡ್ರಿ ... ಬುದ್ಧಗ ಯಾದ ಗಿಡದ ಕೆಳಗ enlightenment ಆಗಿತ್ತಂತ .. ನನಗ ಈ ಆಟೋದವರು ರೋಡನ್ಯಾಗ enlightenment ಮಾಡಸಿಬಿಟ್ರ ....

ಒಂದ ಅರ್ಧ ತ್ರಾಸ ಆದ ಮ್ಯಾಲ ಒಬ್ಬಂವ ಪುಣ್ಯಾತ್ಮ ಯಾಕೋ ನಾನೂ ಅತ್ತಾಗ ಹೊಂಟೇನಿ ...  ಬರ್ತೇನಿ ಬರ್ರಿ ಅಂದ .. ನನಗ ಆವಾಗ ಸ್ವರ್ಗನ ಸಿಕ್ಕತಿ ಅನ್ನೂವಸ್ಟ ಖುಷಿ ಆತ್ರಿ. ನೀವ್ ಅನ್ಕೊಂಡಿರಬೇಕ ಆ ಅರ್ಧ ತಾಸಿನ್ಯಾಗ ಯಾದರ ಬಸ್ಸಿಗೆ ಹೋಗಬಾರದಾ ಅಂತ. ಆದ್ರ ನಾನೂ ಗಂಡ ಮಗಾರೀ .. ಅವತ್ತ ಎಸ್ಟ ತ್ರಾಸಾಗ್ಲೀ ಇಲ್ಲಾ ಎಸ್ಟ ಲೇಟ್ ಆಗ್ಲೀ ಆಟೋಕ್ಕ ಹೋಗಬೇಕಂತ "ಭೀಷ್ಮ ಪ್ರತಿಜ್ಞೆ" ಮಾಡೇಬಿಟ್ಟಿದ್ನಿರಿ. ನಾವ್ ಹುಬ್ಬಳ್ಳಿ ಮಂದಿ ಇಂಥಾ ಒಣ ಪ್ರತಿಜ್ಞೆ ಮಾಡಾಕ ಒಟ್ಟ ಹಿಂದ ಬೀಳುದಿಲ್ರಿ. ನಾನ ಆಟೋದೊಳಗ ಕುಂತಿದ್ದ ನೋಡಿದ್ರ ನಿಮಗ ಮೈಸೂರಿನ ದಸರಾ ಒಳಗಾ ಒಡೆಯರ್ ಆನಿ ಮ್ಯಾಲ ಕುಂತಿದ್ದ ನೆನಪ ಬರಬೇಕ್ರಿ.

ಒಂದ ಇಪ್ಪತ್ತ ನಿಮಿಷದಾಗ ನಮ್ಮ ಅಂಬಾರಿ cunningham ರೋಡಿಗೆ ಬಂತ್ರಿ. ಆಟೋ ಮೀಟರ್ ಬರಬ್ಬರಿ ೨೭ ರೂಪಾಯಿ ಅಂತ ಹೊಡ್ಕಂಡ ಹೇಳಕ ಹತ್ತಿತ್ರಿ. ನಾನ್ ಅಂವಗ ೧೦ ರೂಪಾಯಿದ್ದ ೩ ನೋಟ್ ಕೊಟ್ಟ್ನಿರಿ. ಆ ಮಾರಾಯ ನೋಟ್ ಕಿಸೆದಾಗ ಇಟ್ಕೊಂಡು ಇನ್ನೇನ ಹೊಂಟಬಿಟ್ಟಿದ್ದ .. ನಾನ್ ಕರದ "ತಮ್ಮಾ .. ಇನ್ನ ೩ ರೂಪಾಯಿ ವಾಪಸ್ ಕೊಡೋ" ಅಂತ ಕೇಳಿದೆ. ಅಂವ ನನ್ನ ಕಡೆ ಒಂದ ಸಲ ಕ್ಯಾಕರಿಸಿ ಉಗಿವೊಂಗ ನೋಡಿ, ಭಿಕ್ಷೆ ಬೇಡಾವ್ರಿಗಿ ಅನ್ನ ಮ್ಯಾಲಿಂದ ಹಾಕಾವ್ರಗತೆ, ಮ್ಯಾಲಿಂದ ೩ ರೂಪಾಯಿ ಹಾಕಿ ಹೋದಾ.

ನಾನ್ ಅವತ್ತ ಒಂದ ಏನ್ ಯುದ್ಧ ಗೆದ್ದಾವ್ರಗತೆ ಆಫೀಸ್ ಕಡೆ ನಡದ್ಯಾ ....

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಬೆಂಗಳೂರಲ್ಲಿ ನಾವ್ ಎಲ್ಲಿ ಕರಿತಿವೋ ಅಲ್ಲಿಗೆ ಆಟೋದವರು ಬರೋಲ್ಲ, ಅವರೆಲ್ಲಿ ಹೋಗ್ತಾ ಇರ್ತಾರೋ ಅಲ್ಲಿಗೆ ನಾವ್ ಹೋಗ್ಬೇಕು :) ಮಂಜು, ನಿಮ್ಮ ಬರಹದ ಶೈಲಿ ಮತ್ತೆ ಭಾಷೆ ಹಿಡಿಸ್ತು, ಹಿಂಗ ಬರಿತಿರ್ರಿ :)

ಭಯಂಕರ ಕರೆಕ್ಟ್ ಆಗಿ ಹೇಳಿದ್ರಿ ರಾಕೇಶ್ ಮತ್ತು ತುಂಬಾ ಥ್ಯಾಂಕ್ಸ್ ರೀ. ನಿಮ್ಮ ಉತ್ತರ ನೋಡಿ ಖುಷಿ ಆತು .. ಮುಂದ ಹಿಂಗ ಬರ್ಯಕ try ಮಾಡ್ತಿನ್ರಿ !

ನಮಸ್ಕಾರ್ರಿ ಗೋಪಾಲ್ ! ನೀವು ಧಾರವಾಡದವರು ಅಂತ ಕೇಳಿ ಸಿಕ್ಕಾಪಟ್ಟೆ ಖುಷಿ ಆತು. ನಾನ ನವನಗರದಿಂದ ಬಂದಿದ್ರಿ :-) ನೋಡುನಂತ ಯಾವುದರ ಚುಲೋ subject ಸಿಕ್ತಂದ್ರ ಬರಿತಿರ್ತೆನಂತ ... ಥ್ಯಾಂಕ್ಸ್ ರೀ ..

ಮಂಜು, ಬೆಂಗುಳೂರ್ನಾಗೆ ಆಟೋ ಹಿಡಿಯೋದು ಬಾಳ ಕಷ್ಟ ಐತಪ್ಪಾ. ನಿನ್ ಪುಣ್ಯ ನೋಡು ಅಂತೂ ಆಟೋ ಸಿಕ್ಕೈತೆ. ಅಂತೂ ಮಗಾ ರೊಕ್ಕ ವಾಪಸ್ ಕೊಟ್ನಲ್ಲಾ, ಅದೇ ಸಂತೋಷ ನೋಡ್ರೀಪಾ. ಇನ್ ಮುಂದ ಕಾರು ತಗೊಂಡು ಓಡಾಡೋದೆ ಛಲೋ ಅನ್ನಿಸ್ತದೆ. ಹೆಂಗತ್ಯಪ್ಪಾ. ನೋಡ್ ಮತ್ತಾ.

ಮಂಜು, ಈ ಆಟೋದಾವ್ರು ಭಾರೀ ಮರ್ಸಿಡಸ್ ಇಟ್ಕೊಂಡೇವಿ ಅಂತ ತಿಳ್ಕೊಂಡಿರ್ತಾರ..ಇಡೀ ದಿವ್ಸ ಖಾಲಿ ಅಡ್ಯಾ ಡ್ತಾರ ಆದ್ರ ಕರ್ದಲ್ಲೆ ಮಾತ್ರ ಬರೂದಿಲ್ಲ.. ಇದು ಬರೇ ಬೆಂಗಳೂರ್ನ್ಯಾಗ ಅಷ್ಟ ಅಲ್ಲ..ಎಲ್ಲಾ ಕಡೆನೂ ಇದೇ ನಾಟಕ..