ಡಬ್ಬಿಂಗ್ ನಿಷೇಧ ಅವೈಜ್ಞಾನಿಕ

To prevent automated spam submissions leave this field empty.

ಇತ್ತೀಚಿಗೆ ಕರ್ನಾಟಕ ಚಲನಚಿತ್ರ ಅಕ್ಯಾಡಮಿ ಕನ್ನಡ ಚಲನಚಿತ್ರಗಳ ಸಮೀಕ್ಷೆ ವರದಿಯನ್ನು ಹೊರತಂದಿದ್ದರು. ಆ ವರದಿಯಲ್ಲಿ ಹೇಳಿದ್ದ ಡಬ್ಬಿಂಗ್ ಪರವಾದ ನಿಲುವಿನ ಬಗ್ಗೆ ಹಲವರಿಗೆ ಪ್ರಶ್ನೆ ಇದ್ದಂತಿದೆ. ಒಬ್ಬ ಗ್ರಾಹಕನ ದೃಷ್ಟಿಯಲ್ಲಿ ನನಗೆ ಅನ್ನಿಸುವ ಅಭಿಪ್ರಾಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಕರ್ನಾಟಕದಲ್ಲಿ ಡಬ್ಬಿಂಗ್ ನಿಷೇಧಿಸಿರುವ ಕನ್ನಡ ಚಿತ್ರರಂಗದ ನಿಲುವನ್ನು ನಾವು ವಿಮರ್ಶಿಸಬೇಕಿದೆ. ಅವತಾರ್, 2012, ಮೇಟ್ರಿಕ್ಷ್ , ಜುರ್ರಸ್ಸಿಕ್ ಪಾರ್ಕ್ ಮುಂತಾದ ಹಲವು ಇಂಗ್ಲಿಷ್ ಚಿತ್ರಗಳನ್ನು ಕನ್ನಡದಲ್ಲಿ ಮಾಡುವುದು ಇಂದಿನ ಮಟ್ಟಿಗೆ ಅಸಾಧ್ಯವಾದ ಕೆಲಸ. ಅದಕ್ಕೆ ಬೇಕಾಗಿರುವ ತಂತ್ರಜ್ಞಾನ, ತಗಲುವ ವೆಚ್ಚವನ್ನು ಭಾರಿಸಿವ ಶಕ್ತಿ ಎರಡೂ ಕನ್ನಡ ಚಿತ್ರರಂಗಕ್ಕೆ ಇಂದಿಲ್ಲ ಅನ್ನುವುದು ವಾಸ್ತವ. ಆ ಕಾರಣಕ್ಕಾಗಿ ಈ ಉತ್ತಮ ಚಿತ್ರಗಳನ್ನು ಡಬ್ ಮಾಡಲು ಅವಕಾಶ ಕೊಟ್ಟರೆ ಪ್ರತಿಯೊಬ್ಬ ಕನ್ನಡ ಪ್ರೇಕ್ಷಕನೂ ಈ ಚಿತ್ರಗಳನ್ನು ನೋಡಬಹುದು. ಪ್ರಪಂಚದ ಆಗುಹೋಗುಗಳನ್ನು ಕೂತಲ್ಲೇ ಕನ್ನಡದಲ್ಲಿ ನೋಡಬಹುದು. ಹಾಸನ, ಶಿವಮೊಗ್ಗ ಜಿಲ್ಲೆಗಳ ಹಳ್ಳಿಗಳಲ್ಲಿ  ವಾಸವಿರುವ ನಮ್ಮ ನೆಂಟರು ಇಂಗ್ಲಿಷ್ ಬಾರದ ಕಾರಣ ಈ ಉತ್ತಮ ಚಿತ್ರಗಳನ್ನು ನೋಡುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಜನರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಅನ್ನುವುದು ಡಬ್ಬಿಂಗ್ ವಿರೋಧಿಸುವವರಿಗೆ ಅರಿವಾಗಬೇಕಿದೆ. ನನ್ನ ಮಕ್ಕಳು ಕನ್ನಡದಲ್ಲಿ ಕಾರ್ಟೂನ್ ಕಾರ್ಯಕ್ರಮಗಳು, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಕಾರ್ಟೂನ್ ನೆಟ್ವರ್ಕ್,ಡಿಸ್ಕವರಿ ಚ್ಯಾನಲಗಳಲ್ಲಿ ನೋಡಬಯಸಿದರೆ, ಅದು ಕನ್ನಡದಲ್ಲಿಲದ ಕಾರಣ ಇಂಗ್ಲಿಷ್ನಲ್ಲಿಯೇ ನೋಡಬೇಕಿರುವ ಅನಿವಾರ್ಯತೆ ಇವತ್ತಿನ ಮಟ್ಟಿಗೆ ಇದೆ. ಜನ ತಮ್ಮ ಭಾಷೆಯಲ್ಲಿ ಕಾರ್ಯಕ್ರಮಗಳನ್ನು ನೋಡುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಅಧಿಕಾರ ಕನ್ನಡ ಚಿತ್ರರಂಗದ ಗಣ್ಯರಿಗೆ ಕೊಟ್ಟವರು ಯಾರು? ಕಡೆಯದಾಗಿ ಒಂದು ಮಾತು. ಡಬ್ಬಿಂಗ್ ಮಾಡಬಾರದೆಂದು ಯಾವ ಕಾನೂನು ಇಲ್ಲ. ಸಾಮಾಜಿಕ ಕಳಕಳಿಯನ್ನು ಹೊಂದಿರುವ ಯಾರಾದರು ಡಬ್ಬಿಂಗ್ ನಿಷೇಧವನ್ನು ಕಾನೂನಿನಡಿ ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ, ಡಬ್ಬಿಂಗ್ ನಿಷೇಧ ಅವೈಜ್ಞಾನಿಕ ಎಂದು ಸಾಬೀತಾಗುವುದು ಶತಸಿದ್ಧ. ಇನ್ನಾದರು ತಮ್ಮ ಸ್ವಾರ್ಥಕ್ಕಾಗಿ ಡಬ್ಬಿಂಗ್ ಅಸ್ತ್ರವನ್ನು ಉಪಯೋಗಿಸುವುದನ್ನು ನಿಲ್ಲಿಸಿ ಕನ್ನಡ ಚಿತ್ರರಂಗದ, ಕನ್ನಡ ಸಮಾಜದ ಒಳಿತಿನತ್ತ ಎಲ್ಲರು ಚಿಂತಿಸಬೇಕಿದೆ. 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಬೆರಳು ಕೊಟ್ಟರೆ ಕೈ ನುಂಗಬಹುದೆಂಬ ಮಾತು ನೆನಪಿಗೆ ಬಂತು. ಈಗ ಆಂಗ್ಲದ ಒಳ್ಳೊಳ್ಳೆ ಚಿತ್ರಗಳನ್ನ ಡಬ್ ಮಾಡಿ ಆಂಗ್ಲ ಬಾರದ ಕನ್ನಡಿಗರಿಗೆ ತೋರಿಸ್ತೆವಿ ಅಂದು ಆಮೇಲೆ ಸುತ್ತಮುತ್ತಲ ರಾಜ್ಯದ ಭಾಷೇನೂ ಬರಲ್ಲ ಅವನ್ನೂ ಡಬ್ ಮಾಡ್ತೆವಿ ಅಂದ್ರೂ ಅಂದ್ರೆ.ಆಮೇಲೆ ಎಲ್ಲಾ ಧಾರಾವಾಹಿ,ವಾರ್ತೆಗಳಿಗೂ ಇದೆ ರೀತಿ ಆದರೆ ಆ ಕಾರ್ಯಗಳಲ್ಲಿ ಕೆಲಸ ಮಾಡುವ ಕನ್ನಡದ ಜನ ಹೊಟ್ಟೆಗೆ ಹಿಟ್ಟು,ನೀರು ಬಿಟ್ಟುಕೊಳ್ಳಬೇಕೇ..? ಹೊಸ ಹೊಸದಾದ ಒಳ್ಳೆ ಕಥೆ ಹೆಣೆದು ಖರ್ಚು ಮಾಡಿ,ಶ್ರಮವಹಿಸಿ ಒಳ್ಳೆ ಚಿತ್ರ ಮಾಡಲಿ.ಸರ್ವ ಪ್ರಕಾರಗಳಲ್ಲಿ ತಮ್ಮಲ್ಲಿ ಅಡಗಿರುವ ಕಲೆಯನ್ನು ಬಿಂಬಿಸಲಿ,ಒಂದಲ್ಲ ಹತ್ತು ಸರ್ತೆ ಖುಷಿ ಇಂದ ನೋಡ್ತೀವಿ.ಅದು ಬಿಟ್ಟು ಕೊಂಡು ತಂದು ಹೆಸರು ಬದಲಿಸಿ ಕೊಡುವುದು ಏತಕೋ..? ಡಬ್ಬಿಂಗ್ ಗೆ ನನ್ನ ವಿರೋಧವಿದೆ..

ಡಬ್ಬಿಂಗ್ ಬಂದ್ರೆ ಉದ್ಯಮ ಸಾಯುತ್ತೆ, ಉದ್ಯಮ ಸಾಯುತ್ತೆ ಅನ್ನುವವರು ಉದ್ಯಮದ ಅಡಿಪಾಯವಾಗಿರುವ ಭಾಷೆಯ ಬುನಾದಿಯೇ ಅಲುಗಾಡುತ್ತಿರುವ ಬಗ್ಗೆ ಗಮನ ಹರಿಸಿದ್ದಾರೆಯೇ? ಇವತ್ತು ಕರ್ನಾಟಕದ ಚಿಕ್ಕ ಚಿಕ್ಕ ಊರುಗಳಲ್ಲಿಯೂ ತೆಲುಗು, ತಮಿಳು, ಹಿಂದಿ ಚಿತ್ರಗಳು ಮುನ್ನುಗ್ಗುತ್ತಿವೆ. ಹುಡುಗ್ರು, ಮಕ್ಕಳು ಮುಗಿಬಿದ್ದು ನೋಡ್ತಾನೂ ಇದ್ದಾರೆ. ಅವೆಲ್ಲ ಸಿನೆಮಾ ನೋಡ್ತಾ ಅಲ್ಲೆಲ್ಲ ಕನ್ನಡಿಗರು ಕನ್ನಡ ಬಿಟ್ಟು ಇನ್ನೊಂದು ಭಾಷೆ ಕಲಿತಾ ಇದ್ದಾರೆ. ಜೊತೆಗೆ, ಕನ್ನಡದಲ್ಲಿ ಏನಿಲ್ಲ, ಕನ್ನಡಕ್ಕೆ ಯೋಗ್ಯತೆ ಇಲ್ಲ ಅನ್ನೋ ಕೀಳರಿಮೆನೂ ಅವರನ್ನ ಆವರಿಸಿಕೊಳ್ತಾ ಇದೆ. ಇದು ಮುಂದುವರೆದ್ರೆ ಕನ್ನಡ ಚಿತ್ರೋದ್ಯಮ ಬಿಡಿ, ಕನ್ನಡ ಭಾಷೆನೂ ಉಳಿಯಲ್ಲ. ಭಾಷೆ ಸತ್ತ ಮೇಲೆ ಇವರೆಲ್ಲ ಯಾರಿಗೆ ಸಿನೆಮಾ ಮಾಡ್ತಾರೆ?

ಡಬ್ಬಿಂಗ್ ಮಾಡಿದ್ರೆ ಭಾಷೆ ಖಂಡಿತ ಉಳಿಯುತ್ತೆ,ಎಲ್ಲಾರೂ ಮುಗಿಬಿದ್ದು ಕನ್ನಡ ಚಿತ್ರವನ್ನೇ ನೋಡ್ತಾರೆ.ಎಂದು ಹೇಳುವುದು ಸತ್ಯಕ್ಕೆ ದೂರ. ಉತ್ತಮ ಹೊಸ ಚಿತ್ರ ಮಾಡಿದ್ರೆ ಭಾಷೆ ಉಳಿದು ಬೆಳೆಯುತ್ತೆ ಅಷ್ಟೇ ಅಲ್ಲ ಉದ್ಯಮನೂ ಬೆಳೆಯುತ್ತೆ.ಎಷ್ಟೋ ಜನರ ಹಸಿದ ಹೊಟ್ಟೆ ತುಂಬುತ್ತೆ. ಯಾರೋ ವಿಚಾರ ಮಾಡಿ,ಯಾರೋ ಬರೆದ ಸಂಭಾಷಣೆಗೆ,ಯಾವುದೋ ನಟರ 'ತುಟಿಗಳಿ'ಗೆ ನಮ್ಮ ಮಾತೃಭಾಷೆಯ'ಲೇಪನ'ಹಚ್ಚಿದರೆ ಭಾಷೆ ಬೆಳೆಯುತ್ತೆ,ಭಾಷಾ ಪ್ರೇಮ ಬೆಳೆಯುತ್ತೆ ಅನ್ನುವುದು ನಿಜಕ್ಕೂ ಹಾಸ್ಯಾಸ್ಪದ.ಅದರಲ್ಲಿ ನಮ್ಮತನ ಅನ್ನೋದು ಏನು ಉಳಿಯುತ್ತೆ ?ನಮ್ಮ ಮಣ್ಣಿನಲ್ಲೇ ಮಣ್ಣಾಗಿ ಹೋಗುತ್ತೆ. ಅವು ಉತ್ತಮ ಚಿತ್ರಗಳೇ ಅಂತಾದರೆ ಅವುಗಳಿಗಿಂತಲೂ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸ್ವಂತ ವಿಚಾರದ ಚಿತ್ರ ಮಾಡುವುದರ ಬಗ್ಗೆ ಯೋಚಿಸೋಣಾ.ನಮ್ಮಲ್ಲಿ ಪ್ರತಿಭೆಗಳಿಗೆ ಏನೂ ಕಮ್ಮಿ ಇಲ್ಲ.ಈ ರೀತಿ ಅವಕಾಶಾನೂ ಕಸಿದುಕೊಂಡರೆ ನೀವು ಹೇಳಿದ ಆ ಅಳಿಗಾಲ ನಿಜಕ್ಕೂ ದೂರವಿಲ್ಲ. ಇನ್ನೊಂದು ವಿಚಾರ ಏನೆಂದರೆ ಆಯಾ ಪ್ರದೇಶಗಳಲ್ಲಿ ಆಗುವ ಚಿತ್ರಗಳು ಅಲ್ಲಿನ ಪರಿಸರ,ಅಲ್ಲಿನ ಜನಜೀವನ ,ಜನರ ಮನಸ್ಥಿತಿ,ಅಭಿರುಚಿ,ಆಗು ಹೋಗುಗಳು ಇವುಗಳ ಮೇಲೆ ಜಾಸ್ತಿ ಅವಲಂಬಿಸಿರುತ್ತವೆ.ಅಷ್ಟೇ ಅಲ್ಲ,ಅಲ್ಲಿನ ಎಷ್ಟೋ ಉತ್ತಮ ನೈಸರ್ಗಿಕ ತಾಣಗಳಲ್ಲಿ ಚಿತ್ರೀಕರಣ ಆಗಿರುತ್ತೆ.ನಾವು ಇಲ್ಲಿನ ರೀತಿಯ ಚಿತ್ರಗಳನ್ನು ಇಲ್ಲಿ ನ ತಾಣಗಳಲ್ಲಿ ಚಿತ್ರಿಸಿದರೆ ಕನ್ನಡನಾಡಿನ ಬಗ್ಗೆ ಹೆಮ್ಮೆ ಇನ್ನೂ ಹೆಚ್ಚಿಗೆ ಆಗುತ್ತೆ.ಅವು ನಮಗೆ ಹತ್ತಿರವೂ ಅನಿಸುತ್ತೆ. ನಮ್ಮೂರ ಮಂದಾರ ಹೂವೆ,ಮುಂಗಾರು ಮಳೆ,ಗಾಳಿಪಟ ಚಿತ್ರ ಬಂದಮೇಲೆ ಯಾಣ, ಜೋಗ,ಮಡಿಕೇರಿ ಕೊಡಗು ಗಳಿಗೆ ಹೋಗುವ ಪ್ರವಾಸಿಗಳು 'ಇನ್ನೂ ಹೆಚ್ಚಿಗೆ' ಆಗಿದ್ದಾರೆ ಎಂಬುದು ಒಪ್ಪಲೇ ಬೇಕಾದ ಸತ್ಯ.ಈಗೀಗ ಬರುತ್ತಿರುವ ಕೆಲ ಉತ್ತಮ ಚಿತ್ರಗಳಿಂದ ಕನ್ನಡದ ಹುಡುಗರೂ ಕನ್ನಡ ಚಿತ್ರ ಮುಗಿಬಿದ್ದು ನೋಡುತ್ತಿದ್ದಾರೆ.

ಡಬ್ಬಿಂಗ್ ಬಿಟ್ರೆ ಬರೀ ಡಬ್ ಆದ ಚಿತ್ರಗಳನ್ನೇ ನೋಡೋ ಹಾಗೆ ಆಗುತ್ತೆ ಅಂತ ಯಾಕ್ ಅಂದುಕೋತಿರಾ ? ಡಬ್ಬಿಂಗ್ ಇರೋ ತೆಲುಗು, ತಮಿಳು ಉದ್ಯಮಗಳೆಲ್ಲ ಸತ್ತು ಹೋಗಿದ್ಯ? ಒಬ್ಬ ತೆಲುಗನಿಗೆ ರಜನಿಕಾಂತ್ ದೊಡ್ಡ ಹೀರೋ ನ? ಇಲ್ಲ ಚಿರಂಜೀವಿ ನ? ಒಬ್ಬ ತಮಿಳನಿಗೆ ಸೂರ್ಯ ದೊಡ್ಡ ಹೀರೋ ನ ? ಇಲ್ಲ ಮಹೇಶ್ ಬಾಬು ನ? ಡಬ್ಬಿಂಗ್ ಬಿಟ್ಟು ಕೊಂಡರು ಆಯಾ ಜನ ಯಾಕೆ ತಮ್ಮ ಭಾಷೆಯ ಹಿರೋಗಳನ್ನೇ ಆರಾಧಿಸುತ್ತಾರೆ ಅಂದರೆ ಅದಕ್ಕೆ ಕಾರಣವೇ ಡಬ್ ಮಾಡಿರೋ ಚಿತ್ರಗಳು ಏನೇ ತಿಪ್ಪರಲಾಗ ಹಾಕಿದರು ನಮ್ಮತನವನ್ನು ತೋರಿಸಲು ಸಾಧ್ಯವಿಲ್ಲ,, ಕನ್ನಡದ ನೇಟಿವಿಟಿ ತೋರಿಸಲು ಕನ್ನಡ ಚಿತ್ರಗಳಿಗಷ್ಟೇ ಸಾಧ್ಯ ,, ಅಂತಹ ಸಿನಿಮಾ ಮಾಡಿದಾಗಲೆಲ್ಲ ಕನ್ನಡಿಗರು ಬೆನ್ನು ತಟ್ಟಿದ್ದಾರೆ.. ಹಾಗಿದ್ದಾಗ ಅಂತ ಚಿತ್ರ ಮಾಡಿ ಮುನ್ನುಗ್ಗೋದು ಬಿಟ್ಟು,, ಡಬ್ಬಿಂಗ್ ಭೂತದ ಬಗ್ಗೆ ಮಾತಾಡೋದು ಯಾರು? ರಿಮೇಕ್ ಮಾಡ್ಕೊಂಡು ಹೊಟ್ಟೆ ತುಮ್ಬಿಸಿಕೊಲ್ಲೋ ಕೆಲವರಿಗೆ ಮಾತ್ರ ಇದು ಕಷ್ಟ ಕೊಡೋದು ,,

>ಡಬ್ಬಿಂಗ್ ಬಿಟ್ರೆ ಬರೀ ಡಬ್ ಆದ ಚಿತ್ರಗಳನ್ನೇ ನೋಡೋ ಹಾಗೆ ಆಗುತ್ತೆ ಅಂತ ಯಾಕ್ ಅಂದುಕೋತಿರಾ ?< ನನ್ನ ಉತ್ತರ ಇರೋದು,ಡಬ್ಬಿಂಗ ಮಾಡಿದ್ರೆ ಜನ ಕನ್ನಡ ಚಿತ್ರವನ್ನೂ ಮುಗಿಬಿದ್ದು ನೋಡ್ತಾರೆ ಕನ್ನಡ ಅಭಿಮಾನ ಬರುತ್ತೆ ಕನ್ನಡ ಭಾಷೆ ಉಳಿಯುತ್ತೆ ಅಂತ ಹೇಳಿರೋ 'ಕನ್ನಡಿಗ'ರ ಮಾತುಗಳಿಗೆ.ಡಬ್ಬಿಂಗ್ ಮಾಡಿ ಕನ್ನಡತನ ಉಳಿಸಿಕೊಳ್ಳುವ ಕೆಟ್ಟಕಾಲ ಏನು ಬಂದದ ಇನ್ನೂ ತಿಳೀತ ಇಲ್ಲ. ವಸಂತ್, ಇಲ್ಲಿನ ನಿಮ್ಮ ಎಲ್ಲಾ ಪ್ರತಿಕ್ರಿಯೆಗಳಿಂದ ನೀವು ಡಬ್ಬಿಂಗ್ ವಿರೋಧಿಸ್ತಿದ್ದೀರೋ?ಪರವಾಗಿದ್ದೀರೋ?ಇಲ್ಲ ಎರಡೂ ಕಡೆಗೋ?ನನಗಂತೂ ತಿಳಿತಾ ಇಲ್ಲ.

ನಾನು ನಮ್ಮ ಉದ್ಯಮದ ಉಳಿವನ್ನು ಗಮನದಲ್ಲಿಟ್ಟುಕೊಂಡು ಡಬ್ಬಿಂಗ್ ಗೆ ಅನುಮತಿ ಕೊಡಬೇಕು ಅನ್ನುವವನು. ನಿಮಗೊಂದು ಕತೆ ಹೇಳುವೆ. ಕಳೆದ ತಿಂಗಳು ಗೆಳೆಯನೊಬ್ಬನ ಮದುವೆಗೆ ಬಿಜಾಪುರದಿಂದ ಅಥಣಿಗೆ ಬಸ್ಸಿನಲ್ಲಿ ಪಯಣಿಸುತ್ತಿದ್ದೆ. ನಡು ನಡುವೆ ಬಸ್ ಹತ್ತುತ್ತಿದ್ದ ಶಾಲೆ-ಕಾಲೇಜು ಮಕ್ಕಳ ಕೈಯಲ್ಲೆಲ್ಲ ಈ ಚೀನಾ ಮಾದರಿಯ ಫೋನ್ ಗಳು. ಬಸ್ ಅಲ್ಲಿ ಸ್ಪರ್ಧೆಗೆ ಬಿದ್ದವರಂತೆ ಎಲ್ಲರೂ ಹಾಡು ಹಾಕಿ ಬಸ್ಸಿಡಿ ಒಂದು ಮಿನಿ ಸಂಗೀತ ಕಚೇರಿ ಮಾಡಿದ್ರು. ಆದ್ರೆ ಹಾಕಿರೋ ಹಾಡೆಲ್ಲ ಯಾವುದು ಗೊತ್ತೆ? ಎಲ್ಲ ತೆಲುಗು ಹಾಡುಗಳು.. ! ಹುಡುಕಿದರೂ ಒಬ್ಬೇ ಒಬ್ಬ ತೆಲುಗ ಸಿಗದ ಈ ಭಾಗದಲ್ಲಿ ಇದೆಲ್ಲ ಹೇಗೆ ಸಾಧ್ಯವಾಯ್ತು? ಚಿತ್ರ ರಂಗದ ಒಬ್ಬ ಹಿರಿಯರನ್ನು ಮಾತನಾಡಿಸಿದ್ದಾಗ ಅವರು ಹೇಳಿದ್ದು.. ಇವತ್ತು ಉತ್ತರ ಕರ್ನಾಟಕ ಅನ್ನುವುದು ತೆಲುಗು ಚಿತ್ರಗಳಿಗೆ ಅತಿ ದೊಡ್ಡ ಮಾರುಕಟ್ಟೆಯಾಗಿ ಬದಲಾಗುತ್ತಿದೆ. ನನ್ನೂರು ಹುಬ್ಬಳ್ಳಿ ಹನ್ನೆರಡು ಚಿತ್ರಮಂದಿರಗಳಲ್ಲಿ ೪ ರಲ್ಲಿ ತೆಲುಗು, ೨-೩ ರಲ್ಲಿ ಹಿಂದಿ, ಇನ್ನುಳಿದ ೪-೫ ರಲ್ಲಿ ಕನ್ನಡ ಬರುತ್ತಿದೆ. ಹುಬ್ಬಳ್ಳಿಯಲ್ಲಿ ತೆಲುಗು = ಕನ್ನಡವೇ? ಇದೆಲ್ಲ ಹೇಗಾಯ್ತು? ಡಬ್ಬಿಂಗ್ ಮೇಲಿನ ಬ್ಯಾನ್ ಇರದೇ ಇದ್ದಿದ್ದಲ್ಲಿ ಕೊನೆ ಪಕ್ಷ ಈ ಹುಡುಗರು, ಯುವಕರು ತಮ್ಮ ಭಾಷೆಯನ್ನೇ ಮರೆತು ಇನ್ನೊಂದು ಭಾಷೆಯಲ್ಲಿ ಮನರಂಜನೆ ಹುಡುಕುವ ದಯನೀಯ ಸ್ಥಿತಿ ನಮ್ಮ ನುಡಿಗೆ ಬರುತ್ತಿರಲಿಲ್ಲವೆನೋ ! ಡಬ್ಬಿಂಗ್ ಬಂದ್ರೆ ಉದ್ಯಮ ಸಾಯುತ್ತೆ, ಉದ್ಯಮ ಸಾಯುತ್ತೆ ಅನ್ನುವವರು ಉದ್ಯಮದ ಅಡಿಪಾಯವಾಗಿರುವ ಭಾಷೆಯ ಬುನಾದಿಯೇ ಅಲುಗಾಡುತ್ತಿರುವ ಬಗ್ಗೆ ಗಮನ ಹರಿಸಿದ್ದಾರೆಯೇ? ಇವತ್ತು ಕರ್ನಾಟಕದ ಚಿಕ್ಕ ಚಿಕ್ಕ ಊರುಗಳಲ್ಲಿಯೂ ತೆಲುಗು, ತಮಿಳು, ಹಿಂದಿ ಚಿತ್ರಗಳು ಮುನ್ನುಗ್ಗುತ್ತಿವೆ. ಹುಡುಗ್ರು, ಮಕ್ಕಳು ಮುಗಿಬಿದ್ದು ನೋಡ್ತಾನೂ ಇದ್ದಾರೆ. ಅವೆಲ್ಲ ಸಿನೆಮಾ ನೋಡ್ತಾ ಅಲ್ಲೆಲ್ಲ ಕನ್ನಡಿಗರು ಕನ್ನಡ ಬಿಟ್ಟು ಇನ್ನೊಂದು ಭಾಷೆ ಕಲಿತಾ ಇದ್ದಾರೆ. ಜೊತೆಗೆ, ಕನ್ನಡದಲ್ಲಿ ಏನಿಲ್ಲ, ಕನ್ನಡಕ್ಕೆ ಯೋಗ್ಯತೆ ಇಲ್ಲ ಅನ್ನೋ ಕೀಳರಿಮೆನೂ ಅವರನ್ನ ಆವರಿಸಿಕೊಳ್ತಾ ಇದೆ. ಇದು ಮುಂದುವರೆದ್ರೆ ಕನ್ನಡ ಚಿತ್ರೋದ್ಯಮ ಬಿಡಿ, ಕನ್ನಡ ಭಾಷೆನೂ ಉಳಿಯಲ್ಲ. ಭಾಷೆ ಸತ್ತ ಮೇಲೆ ಇವರೆಲ್ಲ ಯಾರಿಗೆ ಸಿನೆಮಾ ಮಾಡ್ತಾರೆ? ನನ್ ಮಾತಲ್ಲಿ ನಿಮಗೆ ಪೂರ್ತಿ ನಂಬಿಕೆ ಬಂದಿಲ್ಲ ಅಂದ್ರೆ ಸುಮ್ನೆ ಒಂದ್ ಸಲಿ ಬೀದರ್ ನಿಂದ ಬೆಂಗಳೂರಿನವರೆಗಿನ ಯಾವುದಾದ್ರೂ ಕಾಲೇಜಿಗೆ ಹೋಗಿ, ಆ ಹುಡುಗ್ರು ನೋಡ್ತಾ ಇರೋ ಸಿನೆಮಾ ಯಾವುದು, ಕೇಳ್ತಾ ಇರೋ ಹಾಡು ಯಾವ ಭಾಷೆದು ಅಂತ ಒಮ್ಮೆ ಚೆಕ್ ಮಾಡಿ, ಸತ್ಯ ಏನೆಂಬುದು ನಿಮ್ಮ ಅರಿವಿಗೂ ಬಂದೀತು ಸರ್.. ಒಂದು ನುಡಿ, ಆ ನುಡಿಯ ಭವಿಷ್ಯವಾದ ಯುವಕರ ಮನಸ್ಸಿಂದ ನಿಧಾನಕ್ಕೆ ಮರೆಯಾಗಲು ಶುರುವಾದರೇ ಆ ನುಡಿಗೆ ಭವಿಷ್ಯವಿದೆಯಾ ಅನ್ನುವ ಗಾಬರಿ ನನ್ನದು.

ನಾನು ನಮ್ಮ ಉದ್ಯಮದ ಉಳಿವನ್ನು ಗಮನದಲ್ಲಿಟ್ಟುಕೊಂಡು ಡಬ್ಬಿಂಗ್ ಗೆ ಅನುಮತಿ ಕೊಡಬೇಕು ಅನ್ನುವವನು. ನಿಮಗೊಂದು ಕತೆ ಹೇಳುವೆ. ಕಳೆದ ತಿಂಗಳು ಗೆಳೆಯನೊಬ್ಬನ ಮದುವೆಗೆ ಬಿಜಾಪುರದಿಂದ ಅಥಣಿಗೆ ಬಸ್ಸಿನಲ್ಲಿ ಪಯಣಿಸುತ್ತಿದ್ದೆ. ನಡು ನಡುವೆ ಬಸ್ ಹತ್ತುತ್ತಿದ್ದ ಶಾಲೆ-ಕಾಲೇಜು ಮಕ್ಕಳ ಕೈಯಲ್ಲೆಲ್ಲ ಈ ಚೀನಾ ಮಾದರಿಯ ಫೋನ್ ಗಳು. ಬಸ್ ಅಲ್ಲಿ ಸ್ಪರ್ಧೆಗೆ ಬಿದ್ದವರಂತೆ ಎಲ್ಲರೂ ಹಾಡು ಹಾಕಿ ಬಸ್ಸಿಡಿ ಒಂದು ಮಿನಿ ಸಂಗೀತ ಕಚೇರಿ ಮಾಡಿದ್ರು. ಆದ್ರೆ ಹಾಕಿರೋ ಹಾಡೆಲ್ಲ ಯಾವುದು ಗೊತ್ತೆ? ಎಲ್ಲ ತೆಲುಗು ಹಾಡುಗಳು.. ! ಹುಡುಕಿದರೂ ಒಬ್ಬೇ ಒಬ್ಬ ತೆಲುಗ ಸಿಗದ ಈ ಭಾಗದಲ್ಲಿ ಇದೆಲ್ಲ ಹೇಗೆ ಸಾಧ್ಯವಾಯ್ತು? ಚಿತ್ರ ರಂಗದ ಒಬ್ಬ ಹಿರಿಯರನ್ನು ಮಾತನಾಡಿಸಿದ್ದಾಗ ಅವರು ಹೇಳಿದ್ದು.. ಇವತ್ತು ಉತ್ತರ ಕರ್ನಾಟಕ ಅನ್ನುವುದು ತೆಲುಗು ಚಿತ್ರಗಳಿಗೆ ಅತಿ ದೊಡ್ಡ ಮಾರುಕಟ್ಟೆಯಾಗಿ ಬದಲಾಗುತ್ತಿದೆ. ನನ್ನೂರು ಹುಬ್ಬಳ್ಳಿ ಹನ್ನೆರಡು ಚಿತ್ರಮಂದಿರಗಳಲ್ಲಿ ೪ ರಲ್ಲಿ ತೆಲುಗು, ೨-೩ ರಲ್ಲಿ ಹಿಂದಿ, ಇನ್ನುಳಿದ ೪-೫ ರಲ್ಲಿ ಕನ್ನಡ ಬರುತ್ತಿದೆ. ಹುಬ್ಬಳ್ಳಿಯಲ್ಲಿ ತೆಲುಗು = ಕನ್ನಡವೇ? ಇದೆಲ್ಲ ಹೇಗಾಯ್ತು? ಡಬ್ಬಿಂಗ್ ಮೇಲಿನ ಬ್ಯಾನ್ ಇರದೇ ಇದ್ದಿದ್ದಲ್ಲಿ ಕೊನೆ ಪಕ್ಷ ಈ ಹುಡುಗರು, ಯುವಕರು ತಮ್ಮ ಭಾಷೆಯನ್ನೇ ಮರೆತು ಇನ್ನೊಂದು ಭಾಷೆಯಲ್ಲಿ ಮನರಂಜನೆ ಹುಡುಕುವ ದಯನೀಯ ಸ್ಥಿತಿ ನಮ್ಮ ನುಡಿಗೆ ಬರುತ್ತಿರಲಿಲ್ಲವೆನೋ ! ಡಬ್ಬಿಂಗ್ ಬಂದ್ರೆ ಉದ್ಯಮ ಸಾಯುತ್ತೆ, ಉದ್ಯಮ ಸಾಯುತ್ತೆ ಅನ್ನುವವರು ಉದ್ಯಮದ ಅಡಿಪಾಯವಾಗಿರುವ ಭಾಷೆಯ ಬುನಾದಿಯೇ ಅಲುಗಾಡುತ್ತಿರುವ ಬಗ್ಗೆ ಗಮನ ಹರಿಸಿದ್ದಾರೆಯೇ? ಇವತ್ತು ಕರ್ನಾಟಕದ ಚಿಕ್ಕ ಚಿಕ್ಕ ಊರುಗಳಲ್ಲಿಯೂ ತೆಲುಗು, ತಮಿಳು, ಹಿಂದಿ ಚಿತ್ರಗಳು ಮುನ್ನುಗ್ಗುತ್ತಿವೆ. ಹುಡುಗ್ರು, ಮಕ್ಕಳು ಮುಗಿಬಿದ್ದು ನೋಡ್ತಾನೂ ಇದ್ದಾರೆ. ಅವೆಲ್ಲ ಸಿನೆಮಾ ನೋಡ್ತಾ ಅಲ್ಲೆಲ್ಲ ಕನ್ನಡಿಗರು ಕನ್ನಡ ಬಿಟ್ಟು ಇನ್ನೊಂದು ಭಾಷೆ ಕಲಿತಾ ಇದ್ದಾರೆ. ಜೊತೆಗೆ, ಕನ್ನಡದಲ್ಲಿ ಏನಿಲ್ಲ, ಕನ್ನಡಕ್ಕೆ ಯೋಗ್ಯತೆ ಇಲ್ಲ ಅನ್ನೋ ಕೀಳರಿಮೆನೂ ಅವರನ್ನ ಆವರಿಸಿಕೊಳ್ತಾ ಇದೆ. ಇದು ಮುಂದುವರೆದ್ರೆ ಕನ್ನಡ ಚಿತ್ರೋದ್ಯಮ ಬಿಡಿ, ಕನ್ನಡ ಭಾಷೆನೂ ಉಳಿಯಲ್ಲ. ಭಾಷೆ ಸತ್ತ ಮೇಲೆ ಇವರೆಲ್ಲ ಯಾರಿಗೆ ಸಿನೆಮಾ ಮಾಡ್ತಾರೆ? ನನ್ ಮಾತಲ್ಲಿ ನಿಮಗೆ ಪೂರ್ತಿ ನಂಬಿಕೆ ಬಂದಿಲ್ಲ ಅಂದ್ರೆ ಸುಮ್ನೆ ಒಂದ್ ಸಲಿ ಬೀದರ್ ನಿಂದ ಬೆಂಗಳೂರಿನವರೆಗಿನ ಯಾವುದಾದ್ರೂ ಕಾಲೇಜಿಗೆ ಹೋಗಿ, ಆ ಹುಡುಗ್ರು ನೋಡ್ತಾ ಇರೋ ಸಿನೆಮಾ ಯಾವುದು, ಕೇಳ್ತಾ ಇರೋ ಹಾಡು ಯಾವ ಭಾಷೆದು ಅಂತ ಒಮ್ಮೆ ಚೆಕ್ ಮಾಡಿ, ಸತ್ಯ ಏನೆಂಬುದು ನಿಮ್ಮ ಅರಿವಿಗೂ ಬಂದೀತು ಸರ್.. ಒಂದು ನುಡಿ, ಆ ನುಡಿಯ ಭವಿಷ್ಯವಾದ ಯುವಕರ ಮನಸ್ಸಿಂದ ನಿಧಾನಕ್ಕೆ ಮರೆಯಾಗಲು ಶುರುವಾದರೇ ಆ ನುಡಿಗೆ ಭವಿಷ್ಯವಿದೆಯಾ ಅನ್ನುವ ಗಾಬರಿ ನನ್ನದು.

ಗಾಳಿಯಲ್ಲಿ ಮಾತನಾಡಬಾರದು ಅಂತ ದೊಡ್ಡವರು ಹೇಳಿದ್ದರೆ. ಇವತ್ತಿನ ಪರಿಸ್ಥಿತಿಯಲ್ಲಿ ಸ್ಪೈಡರ್ ಮ್ಯಾನ್, ಅವತಾರ್ ಅಂತಹ ಚಿತ್ರಗಳನ್ನು ಮಾಡುವ ತಂತ್ರಜ್ಞಾನವಾಗಲಿ ಅದಕ್ಕೆ ತಗುಲುವ ವೆಚ್ಚವನ್ನು ಭರಿಸುವ ಶಕ್ತಿಯಾಗಲಿ ಕನ್ನಡ ಚಿತ್ರರಂಗಕಿಲ್ಲ. ಅದಕ್ಕಿಂತ ಒಳ್ಳೆಯ ಚಿತ್ರ ಮಾದನ ಅಂದಿರಲ್ಲ? ಇವತ್ತಿನ ಮಟ್ಟಿಗೆ ಆ ಸಾಮರ್ಥ್ಯ ಇದ್ಯಾ? ಅವತಾರ್ ಬಡ್ಜೆಟ್ $300 ಮಿಲ್ಲಿಯನ್ .ಅಂದರೆ ಸುಮಾರು 1350,00,00,000, ಅಂದರೆ 1350 ಕೋಟಿ ರೂಪಾಯಿಗಳು. ಇದು ಕನ್ನಡ ಚಿತ್ರರಂಗದ ವಾರ್ಷಿಕ ಬಂಡವಾಳಕ್ಕಿಂತ 7 ಪಟ್ಟು ಹೆಚ್ಚು. ಇದು ಸಾಧ್ಯನಾ? ದುಡ್ಡು ಯಾವನು ಕೊಡ್ತಾನೆ? ಹಾಗಂತ ಕನ್ನಡ ಜನ ಅಂತಹ ಒಳ್ಳೆಯ ಚಿತ್ರಗಳನ್ನು ನೋಡಲೇ ಬಾರದಾ? ಇದು ಪ್ರಜಾಪ್ರಭುತ್ವ ಸ್ವಾಮಿ.ಜನರಿಗೆ ಏನು ಬೇಕೋ ಅದನ್ನು ಕೊಡಲ್ಲ ಅನಕ್ಕೆ ಈ ಡಬ್ಬಿಂಗ್ ಬೇಡ ಅನ್ನೋವ್ರು ಕನ್ನಡಿಗರನ್ನ ಗುತ್ತಿಗೆ ತಗೊಂಡಿದ್ದಾರ? ಡಬ್ಬಿಂಗ್ ಬಿಡ್ಲಿ. ಅದನ್ನ ಕನ್ನಡ ಜನ ತಿರಸ್ಕರಿಸಿದರೆ, ಮುಂದೆ ಯಾವನು ಡಬ್ಬಿಂಗ್ ಮಾಡಲ್ಲ ಅಷ್ಟೇ. ಡಬ್ಬಿಂಗ್ ಮಾಡಬಾರದು ಅಂತ ಯಾವ ಕಾನೂನು ಇಲ್ಲದಿದ್ದಾಗ ಅದು ಮಾಡಬೇಡಿ ಅಂತ ಹೇಳಕ್ಕೆ ಇವರ್ಯಾರು? ನಾನು ಗ್ರಾಹಕನಾನಿ ಇದು ಬೇಕು ಅಂತ ಕೆಲ್ತಿದ್ದೆನಿ. ಅದನ್ನ ತದ್ಯೋದು ಪ್ರಜಾಪ್ರಭುತ್ವಕ್ಕೆ ಮಾರಕ. ಇದು ಹೆಂಗಿದೆ ಗೊತ್ತ. ನಾನು ಹೊಂಡಾ ಕಾರು ಬೇಕು ಅಂತ ಆಸೆ ಪಟ್ಟರೆ, ನೀನು ಹೊಂಡಾ ಕೊಂದ್ಕೊಬಾರ್ದು. ಅದು ನಿಷಿದ್ಧ. ಹಳೆಯ ಪ್ರಿಮಿಯರ್ ಪದ್ಮಿನಿ ಕಾರ್ ನ ಮಾತ್ರ ತಗೋಬೇಕು ಅಂದಂಗಿದೆ.

ಡಬ್ಬಿಂಗ್ ಬಂದ ತಕ್ಷಣ ಎಲ್ಲ ಮುಳುಗಿ ಹೋಗಲ್ಲ. ಈಗಿರುವ 21 ಪ್ರಿಂಟ್ ಗಿಂತ ಹೆಚ್ಚು ಪ್ರತಿ ಬಿಡಬಾರದು ಅನ್ನೋ ನಿಯಮ ಆಗಲೂ ಇರುತ್ತೆ. ಆಗ 21 ರಲ್ಲಿ 15 ಆದ್ರೂ ಕನ್ನಡ ದಲ್ಲಿ ಬರ್ಬೆಕು. ಉಳಿದ 6 ಅದೇ ಭಾಷೆಯಲ್ಲಿ ಬರಲಿ. ಒಮ್ಮೆ ಇದು ಆದ್ರೆ, ನಿಧಾನಕ್ಕೆ ಹಳ್ಳಿ ಹಳ್ಳಿಯಲ್ಲೂ ಕನ್ನಡದಲ್ಲೇ ಸಿನೆಮಾ ನೋಡುವುದು ನಡೆಯುತ್ತೆ. ಭಾಷೆ ಉಳಿಯುತ್ತೆ. ಆಗ ಗುಣಮಟ್ಟದಲ್ಲಿ ಏರ್ಪಡುವ ಸ್ಪರ್ಧೆಯಿಂದ ನಮ್ಮಲ್ಲೂ ಹೊಸ ಹೊಸ ಕತೆಗಳಿಗೆ, ಹೊಸತನದ ಚಿತ್ರಗಳಿಗೆ ಕೆಲಸ ನಡೆಯುತ್ತೆ. ನಾವು ದೇಶದಲ್ಲೇ ಯಾರಿಗೂ ಕಮ್ಮಿ ಇಲ್ಲದಂತಹ ಚಿತ್ರ ನಿರ್ಮಿಸುವ ಹಾಗಾಗುತ್ತದೆ. ಡಬ್ಬಿಂಗ್ ಒಪ್ಕೊಂಡಿರೋ ತೆಲುಗು , ತಮಿಳ್ , ಹಿಂದಿ ಇಂಡಸ್ಟ್ರಿ ಎಲ್ಲ ಏನಾಗಿದೆ ? ಏನು ಆಗಿಲ್ಲ ತಾನೇ ?,, they are doing perfectly fine, infact, they have improved their market share owing to the fact that all the non-natives in these states learn the respective state's language to get their entertainment needs fulfilled. Go back to 1960s, when dubbed movies were ruling the roost in Karnataka. When KFI started making nice movies under the leadership of annavru, didn't kannadigas overwhelmingly support those kannada movies? Think why ? Because none of those dubbed movies could ever portray our nativity, our kannadatana, our emotions and that's the reason the original kannada movies did fantastically.

ಬೆಂಗಳೂರಿನ ಇಂಗ್ಲಿಷ್ ಮೀಡಿಯಂ ವಾತಾವರಣದಲ್ಲಿ ಬೆಳೆಯೋ ಮಕ್ಕಳಿಗೆ ಪೊಗೊ, ಕಾರ್ಟೂನ್ ನೆಟವರ್ಕ್, ಡಿಸ್ನಿ ಚಾನಲ್ ನಲ್ಲಿ ಬರುವ ಕಾರ್ಟೂನ್ ಕಾರ್ಯಕ್ರಮವನ್ನು ಇಂಗ್ಲಿಷ್ ಅಲ್ಲಿ ನೋಡಿ ಆನಂದಿಸಬಹುದು. ಆದರೆ ಅದೇ, ಕರ್ನಾಟಕದ ಚಿಕ್ಕ ಚಿಕ್ಕ ಊರಲ್ಲಿರುವ ಕನ್ನಡದ ಕಂದಮ್ಮಗಳು ಮಾತ್ರ ಅರ್ಥ ಆಗದೇ ಇದ್ರೂ ಇಂಗ್ಲಿಷ್, ಹಿಂದಿಯಲ್ಲೇ ನೋಡಬೇಕು. ಅರ್ಥ ಆಗುವ ಕನ್ನಡದಲ್ಲಿ ನೋಡಬಾರದು ಅನ್ನುವುದು ಅವರಿಗೆ ಮಾಡ್ತಿರೋ ವಂಚನೆಯಲ್ಲವೇ? ಇಷ್ಟು ಚಿಕ್ಕ ವಯಸ್ಸಿನ್ನಲ್ಲೇ ಮಕ್ಕಳನ್ನು ಕನ್ನಡದಿಂದ ದೂರ ಮಾಡಿ, ಆಮೇಲೆ ಮಕ್ಕಳು, ಯುವಕರು ಕನ್ನಡ ಮರೆಯುತ್ತಾ ಇದ್ದಾರೆ ಅಂತ ಬೊಬ್ಬೆ ಹೊಡೆಯುವುದು ತಮಾಷೆಯಲ್ವ?

Just check this link and understand how the entire world is into Dubbing one anothers art work and enjoying the art http://en.wikipedia.... ಒಂದು ಕಾರ್ಟೂನ್ ಶೋ ಇರಲಿ, ಇಲ್ಲ ಒಂದು ಸೈ ಫೈ ಚಿತ್ರವಿರಲಿ, ಇಲ್ಲ ಜ್ಞಾನ, ವಿಜ್ಞಾನದ ಯಾವುದೇ ವಿಷಯವಿರಲಿ,, ಒಬ್ಬ ಕನ್ನಡಿಗ ತನ್ನ ನುಡಿಯಲ್ಲಿ ನೋಡುವ ಹಾಗಿಲ್ಲ ಅಂದರೆ ಅವನು ಮಾಡಿರುವ ಪಾಪವೇನು ?

ವಸಂತ್ ಹೇಳೋದು ಸರಿಯಾಗಿ ಕಾಣಿಸ್ತಿದೆ. ಡಬ್ಬಿಂಗ್ ಬಿಡೋದ್ರಿಂದಾ, ನಮ್ ಜನರ ಮೇಲೆ ಈಗ ಆಗ್ತಿರೋ ಇತರ ಭಾಷಾ ಪ್ರಯೋಗಗಳು ನಿಲ್ತವೆ. ನಮ್ ಊರಿನ ಪುಟಾಣಿ ಮಕ್ಕಳಿಗೆ ಮನರಂಜನೆ, ಪಾಟ, ಎಲ್ಲವೂ ತಮ್ಮ ಭಾಷೆಯಲ್ಲೇ ಸಿಕ್ಕುತ್ತವೆ. ನಮ್ ಜನರ ಬುದ್ಧಿಮಟ್ಟ ಇನ್ನೂ ಹೆಚ್ಚಲು ಕಾರಣವಾಗಬಹುದು.

<<ಆ ವರದಿಯಲ್ಲಿ ಹೇಳಿದ್ದ ಡಬ್ಬಿಂಗ್ ಪರವಾದ ನಿಲುವಿನ ಬಗ್ಗೆ ಹಲವರಿಗೆ ಪ್ರಶ್ನೆ ಇದ್ದಂತಿದೆ.>> ಈ ನಿಲುವು ಮತ್ತು ಅವರು ನೀಡಿರುವ ಕಾರಣಗಳು ಏನು ಅನ್ನುವುದನ್ನು ಅರಿತುಕೊಂಡಾಗಲೇ, ನಿಮ್ಮ ಅನಸಿಕೆಗಳಿಗೆ ನಾನೂ ದನಿಗೂಡಿಸಬಹುದೇನೋ ಅಂತ ನನ್ನ ಅನಿಸಿಕೆ. ಈ "ಅವೈಜ್ಞಾನಿಕ" ಅನ್ನುವ ಪದಬಳಕೆ ಯಾಕೆ?. ನಮ್ಮ ದಿನಚರಿಯಲ್ಲಿ ಎಲ್ಲವೂ ವೈಜ್ಞಾನಿಕವಾಗಿಯೇ ಇರಬೇಕೇ? ಇದೆಯೇ? - ಆಸು ಹೆಗ್ಡೆ

ತುಂಬ ಸರಿ ಈ ವಿಷಯ ತಲೆಯಲ್ಲಿ ಹಾದುಹೋಗಿತ್ತು ಅಮರ್. ನನಗೆ ಇಷ್ಟವಾಗುವಂತ ಎಷ್ಟೋ ಇಂಗ್ಲೀಶ್ ಚಿತ್ರಗಳು ಹಳ್ಳಿಯಲ್ಲಿರುವ ನನ್ನಣ್ಣ ಅತ್ತಿಗೆಗೆ ತೋರಿಸಬೇಕೆಂಬ ಆಸೆಯಿದೆ. ಆದರೆ ಭಾಷಾ ಸಮಸ್ಯೆ.ಇಂಗ್ಲೀಶ್ ನಲ್ಲಿ ತೆರೆಕಾಣುವಂತಹ ಎಷ್ಟೋ ವೈಜ್ಞಾನಿಕ ಧಾರವಾಹಿಗಳೂ ಸಹ. Dr House, Man vs Wild.. ಅವರುಗಳು ನೋಡುವ ಕೆಲವು ಧಾರವಾಹಿಗಳನ್ನು ನೋಡಿದರೆ ಮರುಕವೆನಿಸುತ್ತೆ. ನನ್ನ ಸ್ನೇಹಿತರೆಷ್ಟೋ ಜನ ಚೂರು ಪಾರು ತೆಲುಗು ಕಲಿತಿದ್ದೇ ಸಿನಿಮಾಗಳಿಂದ.ಅದೇ ಚಿತ್ರಗಳು ಕನ್ನಡದಲ್ಲಿ ಬಂದಿದ್ದರೆ ಈ ಸಮಸ್ಯವಿರಲಿಲ್ಲವೇನೋ? ಕಮಲ್ ಹಾಸನ್ ಪ್ರತಿ ತಮಿಳು ಚಿತ್ರ ಆಂದ್ರದಲ್ಲಿಯೂ ಬಿಡುಗಡೆಗೊಳ್ಳುತೆ.ಆದರೆ ತೆಲುಗಿನಲ್ಲಿ.ಇಷ್ಟಾದರೂ ತೆಲುಗು ಭಾಷೆಗೆ ಧಕ್ಕೆಯಾಗಿಲ್ಲ.ಅವರು ತಮಿಳು ಕಲಿಯುವದೂ ಇಲ್ಲ ಅದರ ಅವಶ್ಯಕತೆಯೂ ಇಲ್ಲ. ನಾನೂ ಕಮಲ್ ಚಿತ್ರಗಳ ಅಭಿಮಾನಿ ಆದರೆ ತಮಿಳು ತೆಲುಗಿನಲ್ಲಿ ನೋಡೋ ಧೌರ್ಭಾಗ್ಯ. :( ಬೇರೆ ಚಿತ್ರಗಳು ಡಬ್ ಬೇಡ ಆದರೆ ನಮ್ಮ ಬುದ್ದಿವಂತ,ರಕ್ತಕಣ್ಣೀರು ಡಬ್ ಆಗಿ ಅಲ್ಲಿ ತೆರೆ ಕಾಣುತ್ವೆ.ಇದು ಎಷ್ಟ್ ಸರಿ ನನ್ನ ಅನಿಸಿಕೆಯಷ್ಟೆ. --ಮನು

[quote]ಅವರುಗಳು ನೋಡುವ ಕೆಲವು ಧಾರವಾಹಿಗಳನ್ನು ನೋಡಿದರೆ ಮರುಕವೆನಿಸುತ್ತೆ.[/quote]

ನೀವು ನೋಡುವ ಸಿನಿಮಾಗಳನ್ನು ಅವರು ನೋಡಿದರೆ, ನಿಮ್ಮ ಬಗ್ಗೆಯೂ ಅವರಿಗೆ ಮರುಕ ಹುಟ್ಟಬಹುದು. ಅಭಿರುಚಿ ಅನ್ನುವುದು ವೈಯುಕ್ತಿಕ.

[quote]ನನ್ನ ಸ್ನೇಹಿತರೆಷ್ಟೋ ಜನ ಚೂರು ಪಾರು ತೆಲುಗು ಕಲಿತಿದ್ದೇ ಸಿನಿಮಾಗಳಿಂದ.ಅದೇ ಚಿತ್ರಗಳು ಕನ್ನಡದಲ್ಲಿ ಬಂದಿದ್ದರೆ ಈ ಸಮಸ್ಯವಿರಲಿಲ್ಲವೇನೋ?[/quote]

ಅದೇ ಚಿತ್ರಗಳು ಕನ್ನಡದಲ್ಲಿ ಬಂದಿದ್ದರೆ ಅವರು ತೆಲುಗು ಕಲಿಯುತ್ತಲೇ ಇರಲಿಲ್ಲ ಅಲ್ಲವೇ? :-)

 

ಅಮರನಾಥರ ನಿಲುವಿಗೆ ನನ್ನ ಸಂಪೂರ್ಣ ಸಹಮತಿಯಿದೆ. ಡಬ್ಬಿಂಗ್ - ದೃಶ್ಯ ಮಾಧ್ಯಮದಲ್ಲಿ, ಅನುವಾದ - ಸಾಹಿತ್ಯ ಮಾಧ್ಯಮದಲ್ಲಿ ಇವಕ್ಕೆ ಉತ್ತೇಜನ ದೊರಕಿದಲ್ಲಿ ಕನ್ನಡಿಗರಿಗೆ "ಅವರದೇ ಭಾಷೆಯಲ್ಲಿ " ಇನ್ನಿತರ ಭಾಷೆ - ಸಂಸ್ಕೃತಿಗಳ ಪರಿಚಯವಾಗಲು ಸಹಾಯವಾಗುತ್ತದೆ. <ಅದೇ, ಕರ್ನಾಟಕದ ಚಿಕ್ಕ ಚಿಕ್ಕ ಊರಲ್ಲಿರುವ ಕನ್ನಡದ ಕಂದಮ್ಮಗಳು ಮಾತ್ರ ಅರ್ಥ ಆಗದೇ ಇದ್ರೂ ಇಂಗ್ಲಿಷ್, ಹಿಂದಿಯಲ್ಲೇ ನೋಡಬೇಕು> ಇದು ಅಕ್ಷರಶಃ ನಿಜ. ನಾನು ಹರ್ಯಾಣದ ಫರೀದಾಬಾದ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿ ಡಿಸ್ಕವರಿ, ನ್ಯಾಶನಲ್ ಜಿಯೋಗ್ರಫಿಕ್, ಕಾರ್ಟೂನ್ ನೆಟ್ ವರ್ಕ್ ಇವೆಲ್ಲಾ ಬರುತ್ತಿದ್ದುದು ಹಿಂದಿಯಲ್ಲೇ! ಅದರಿಂದ ಅಲ್ಲಿಯ ಜನ ಆ ಚಾನೆಲ್ ಗಳು ಇಂಗ್ಲಿಷ್ ನಲ್ಲಿ ಲಭ್ಯವಿದ್ದರೂ ಹಿಂದಿಯಲ್ಲೇ ನೋಡಿ ಆನಂದಿಸುತ್ತಿದ್ದರು, ಇದ್ದಾರೆ ಕೂಡ. ಲಂಕೇಶ್ ಸುಪುತ್ರರ ಅರ್ಧ ತಮಿಳು ಅರ್ಧ ತೆಲುಗಿನಿಂದ ಕದ್ದು ಮಾಡಿದ "ಐಶ್ವರ್ಯಾ" ಎಂಬ ತೇಪೆ ಹಚ್ಚಿದ ಚಿತ್ರಕ್ಕಿಂಥ ಡಬ್ಬಿಂಗ್ ಗೊಂಡ "ಅವಟಾರ್" ಚಿತ್ರ ನೋಡುವುದು ಉತ್ತಮ! ಸುದೀಪ್ ರ "ಆಟೋಗ್ರಾಫ್", ರಮೇಶ್ ರ "ರಾಮ ಭಾಮ ಶ್ಯಾಮ" ಎಂಬ ರೀಮೇಕ್ ಗಳಿಂದ ಕನ್ನಡದ ಉದ್ಧಾರವಾಯಿತೆ? ಡಬ್ಬಿಂಗ್ ಬೇಡ ಎನ್ನುವವರು ಚಿತ್ರರಂಗದ ದಿಢೀರ್ ಪ್ರತಿಭಾವಂತರಷ್ಟೆ! ಡಬ್ಬಿಂಗ್ ಮಾಡುವುದಕ್ಕೂ ಕನ್ನಡಿಗರೇ ಮೂಲಕೃತಿಗಳ ಹಕ್ಕು ಖರೀದಿಸಿ ವ್ಯಾಪಾರ ಮಾಡಲಿ ಬಿಡಿ. ಸಿನಿಮಾ ನೋಡಿ ಜನ ಕೊಡಗು ಯಾಣ ನೋಡುವುದಕ್ಕೆ ಹೋಗುತ್ತಾರೆಂಬುದು ಹಾಸ್ಯಾಸ್ಪದ! ಕನ್ನಡ ಪ್ರೇಕ್ಷಕನ ಆಯ್ಕೆಯ ಹಕ್ಕನ್ನು ಕಸಿದುಕೊಳ್ಳಲು ಕನ್ನಡದ ಹೆಸರಿನಲ್ಲಿ ತಮ್ಮ ಜೇಬು ತುಂಬಿಸಿಕೊಳ್ಳುವ ಚಿತ್ರರಂಗದ ಗಣ್ಯರಲ್ಲಿ ಎಷ್ಟು ಮಂದಿ ಕನ್ನಡದವರಿದ್ದಾರೆ ಹೇಳಿ? ಹೆಚ್ಚಿನವರು ಹಣವಂತ ರೆಡ್ಡಿಗಳು, ಮಾರ್ವಾಡಿಗಳು ಹೀಗೆ. ಇನ್ನು ಶ್ರೀಕಾಂತರವರೇ, ಕನ್ನಡ ಚಿತ್ರಗಳಿಗೆ ಸೀಮಿತ ಮಾರುಕಟ್ಟೆ ಇದೆ. ಆದ್ದರಿಂದ ಎಲ್ಲರೂ ಅತಿಹೆಚ್ಚು ಬಂಡವಾಳ ಹೂಡಿ ತಾಂತ್ರಿಕವಾಗಿ ಇಂಗ್ಲಿಷ್ ಚಿತ್ರಗಳ ಗುಣಮಟ್ಟಕ್ಕೆ ಸರಿಯಾಗಿ ಚಿತ್ರ ತೆಗೆಯಬೇಕೆನ್ನುವುದು ಆಶಾವಾದದ ಅತಿರೇಕ ಎನ್ನಿಸುತ್ತದೆ! ಕೇಶವ ಮೈಸೂರು

ಡಬ್ಬಿಂಗ್ ನಿಷೇಧ ಮಾಡಿದ್ದು ಯಾಕೆ? ಹಿಂದೆ ಕನ್ನಡ ಚಿತ್ರರಂಗ ತನ್ನೆಲ್ಲಾ ಕೆಲಸಗಳಿಗಾಗಿ ಚನ್ನೈ ಮೇಲೆ ಅವಲಂಬಿತವಾಗಿದ್ದಾಗ, ಕನ್ನಡ ಸಿನಿಮಾ ತೆಗೆಯೋ ನಿರ್ಮಾಪಕರು ಶ್ರಮ ಪಡೋ ಬದಲು ಡಬ್ಬಿಂಗ್ ತಂತ್ರಜ್ಞಾನಾನ ಬಳಸಿ ತೆಲುಗು, ತಮಿಳು ಸಿನಿಮಾಗಳನ್ನು ಕನ್ನಡದಲ್ಲಿ ತರಲು ಮುಂದಾದ್ರು. ಇದು ಹೀಗೇ ನಡೆದರೆ ಮುಂದೆ ಕನ್ನಡ ಚಿತ್ರಗಳು ಅಂದ್ರೆ ಹಿಂದಿ, ತಮಿಳು, ತೆಲುಗು ಚಿತ್ರಗಳ ಡಬ್ಬಾ (ಡಬ್ಬ್ ಆಗಿರೋದು) ಅಂತಾ ಆಗಿಬಿಡುತ್ತೆ ಅನ್ನೋ ಬೆದರಿಕೆ ಹುಟ್ಕೊಳ್ತು. ಆಗ ಡಬ್ಬಿಂಗ್ ವಿರೋಧಿ ಚಳವಳಿ ನಡೀತು. ಅಂತೇಯೇ ಡಬ್ಬಿಂಗ್ ಮೇಲೆ ನಿಷೇಧ ಹೇರಲಾಯ್ತು. ನಿಷೇಧದ ಪರಿಣಾಮಗಳೇನಾಯ್ತು? ಡಬ್ಬಿಂಗ್ ನಿಷೇಧದ ನಂತರ ಕನ್ನಡ ಚಿತ್ರರಂಗ ವರನಟ ಡಾ.ರಾಜ್ ಕುಮಾರ್ ನೇತೃತ್ವದಲ್ಲಿ ಗಟ್ಟಿ ನೆಲೆ ಕಂಡುಕೊಂಡಿತು.ಕೆಲ ವರ್ಷಗಳಲ್ಲೇ ಸಾಕಷ್ಟು ಸ್ವಾವಲಂಬನೆ ಸಾಧಿಸಿದ ಚಿತ್ರರಂಗ ಚೆನ್ನೈನಿಂದ ಬೆಂಗಳೂರಿಗೆ ಬಂದು ಬೆಂಗಳೂರಿನಲ್ಲೇ ಕನ್ನಡದಲ್ಲಿ ಅಧ್ಬುತ ಚಿತ್ರಗಳನ್ನು ತಯಾರಿಸುವತ್ತ ಮುನ್ನಡೆಯಿತು, ಹಾಗೆಯೇ ಕನ್ನಡ ಜನತೆಯ ಅಪಾರ ಮನ್ನಣೆಗೂ ಪಾತ್ರವಾಯಿತು. ಕನ್ನಡ ನಾಡಿನ ಜನರೆಲ್ಲರನ್ನೂ ಭಾವನಾತ್ಮಕವಾಗಿ ಬೆಸೆಯುವಲ್ಲಿಯೂ, ಕನ್ನಡಕ್ಕಾಗಿ ಹೋರಾಟಗಳನ್ನು ಜನಾಂದೋಲನವಾಗಿಸುವಲ್ಲಿಯೂ ನೆರವಾಯಿತು. ಇವತ್ತಿನ ಕನ್ನಡ ಚಿತ್ರರಂಗದ ಸ್ಥಿತಿ ಏನು? ಇವತ್ತು ಕನ್ನಡ ಚಿತ್ರರಂಗ ಸ್ಟುಡಿಯೋ, ತಂತ್ರಜ್ಞರು, ಕಲಾವಿದರು, ನಿರ್ದೇಶಕರು, ಧ್ವನಿಮುದ್ರಣ ಕೇಂದ್ರ, ತಂತ್ರಜ್ಞಾನ, ಹಂಚಿಕೆ, ಚಿತ್ರಮಂದಿರ... ಹೀಗೆ ಎಲ್ಲಾ ವಿಭಾಗದಲ್ಲಿ ತನ್ನ ಕಾಲ ಮೇಲೆ ತಾನು ನಿಂತಿದೆ. ವರ್ಷಕ್ಕೆ ೧೫ ಚಿತ್ರಗಳನ್ನು ನಿರ್ಮಿಸುತ್ತಿದ್ದ ದಿನಗಳಿಂದ ವರ್ಷಕ್ಕೆ ನೂರಕ್ಕೂ ಹೆಚ್ಚು ಚಿತ್ರ ನಿರ್ಮಿಸುವಷ್ಟು ದೊಡ್ಡ ಗಾತ್ರದ ಉದ್ಯಮವಾಗಿ ಕನ್ನಡ ಚಿತ್ರರಂಗ ಬೆಳೆದು ನಿಂತಿದೆ. ಇವತ್ತು ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್ ಆದ್ರೆ ಕನ್ನಡ ಚಿತ್ರರಂಗ ಮುಳುಗಿ ಹೋಗುತ್ತೆ ಅನ್ನೋ ಪರಿಸ್ಥಿತಿ ಇಲ್ಲ. ಡಬ್ಬಿಂಗ್ ಮೇಲಿನ ನಿಷೇಧ ತೆಗೆದರೆ ಪರಭಾಷಾ ಚಿತ್ರಗಳ ದಾಳಿಯಾಗುವುದಿಲ್ಲವೇ? ಡಬ್ ಮಾಡುವ ಅವಕಾಶ ಸಿಕ್ಕಿದ ತಕ್ಷಣ ಇಲ್ಲಿಗೆ ಸುನಾಮಿ ಹಾಗೆ ಅನೇಕ ಕೆಟ್ಟ ಕೊಳಕು, ಥಳಕು ಬಳುಕು, ಒಳ್ಳೇ ಸಿನಿಮಾಗಳು ನುಗ್ಗಬಹುದು. ಆದರೆ ಅವುಗಳಾವುವು ನಮ್ಮ ನೆಲದ ಸೊಗಡಿನ, ನಮ್ಮ ಆಚರಣೆ, ನಂಬಿಕೆಗಳನ್ನು ಒಟ್ಟಾರೆ ನಮ್ಮ ನೇಟಿವಿಟಿಯನ್ನು ತೋರಿಸದೆ ಇದ್ರೆ ಹೆಚ್ಚು ಕಾಲ ಉಳಿಯಲಾರವು. ಹಾಗೆ ನಮ್ಮತನವನ್ನ ಬೇರೆ ಸಂಸ್ಕೃತಿಯ ಚಿತ್ರಗಳು ತೋರಿಸುವುದು ಅಸಾಧ್ಯವೇ ಹೌದು. ಇನ್ನೊಂದು ಹತ್ತಿಪ್ಪತ್ತು ವರ್ಷ ಕರ್ನಾಟಕದಲ್ಲಿ ಬರೀ ಕನ್ನಡದ ಚಿತ್ರಗಳೇ ಓಡೋದಾದ್ರೆ, ಆಮೇಲೆ ಅದ್ಯಾವ ಭಾಷೆಯ ಸಿನಿಮಾನೇ ಆಗಿದ್ರೂ ನಮಗೆ ಕನ್ನಡದಲ್ಲಿ ಇಲ್ಲದಿದ್ದರೆ ನೋಡಲು ಆಗಲ್ಲಾ ಅನ್ನೋ ಸ್ಥಿತಿ ಹುಟ್ಟುವುದು ಖಂಡಿತ. ಹಾಗಾದಲ್ಲಿ ಕನ್ನಡದ ಕಲಾವಿದರಿಗೆ, ಚಿತ್ರರಂಗಕ್ಕೆ ಬಲ ಬಂದ ಹಾಗಾಗುತ್ತೆ. ಡಬ್ಬಿಂಗ್ ನಿಷೇಧ ತೆಗೆದರೆ ಹೆಚ್ಚು ಲಾಭವಿದೆಯಾ? ಈಗಿರೋ ಕೆಲಸದ ಜೊತೆ ಡಬ್ಬಿಂಗ್ ಕಲಾವಿದರಿಗೆ, ಸಾಹಿತಿಗಳಿಗೆ ಹೆಚ್ಚು ಅವಕಾಶ ಸಿಗುತ್ತೆ. ಟಿ.ವಿ. ಡಿ.ಟಿ.ಎಚ್, ಇಂಟರ್ನೆಟ್, ಮೊಬ್ಯಲ್ ನಿಂದ ಮನೊರಂಜನೆಯ ವ್ಯಾಖ್ಯೆಯೇ ಬದಲಾಗಿ ಹೊಗಿದೆ. ಇಂದು ಪ್ರಶ್ನೆ ಕೇವಲ ಕನ್ನಡದ ಉಳಿವಿನದು. ತಂತ್ರಗ್ನ್ಯಾನದ ಪ್ರತಿ ಬದಲಾವಣೆಯೊಂದಿಗೆ ಕನ್ನಡ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕು--ಇದೇ ಅತಿ ಮುಖ್ಯ. ಇಂದು ಆಂಧ್ರದಲ್ಲಿ ತೆಲುಗು ಉಳಿಯಲು ಕಾರಣ ಅವರು ಜಗತ್ತಿನ ಎಲ್ಲ ಭಾಶೆಯ ಎಲ್ಲಾ ಒಳ್ಳೆಯ, ಎಲ್ಲಾ ಕೆಟ್ಟ, ಎಲ್ಲಾ ಅಸಹ್ಯ ಚಿತ್ರಗಳನ್ನೂ ಬಿಟ್ಟೂ ಬಿಡದೆ ತಮ್ಮ ಭಾಶೆಗೆ ಡಬ್ ಮಾಡ್ತಾರೆ. ಇದರಿಂದ ಎಲ್ಲಾ ರೀತಿಯ, ಎಲ್ಲ ವರ್ಗದ ಜನರಿಗೂ choice ಇದೆ. ಚಿತ್ರ ಚೆನ್ನಾಗಿದ್ರೆ ಜನಾ ಮಜಾ ಮಡ್ತಾರೆ, ಇಲ್ಲ ಅಂದ್ರೆ ೧ ವಾರದಲ್ಲಿ ಕಿತ್ತು ಹಾಗ್ತಾರೆ. ಇದೆಲ್ಲದರ ಮಧ್ಯದಲ್ಲಿ“ಗೆಲುವು ಮಾತ್ರ ತೆಲುಗು ಭಾಶೆಗೆ". ಇಶ್ಟಾಗಿಯೂ ಮೂಲ ತೆಲುಗು ಚಿತ್ರಗಳು ಜಗತ್ತಿನಾದ್ಯಂತ ದುಡ್ಡು ಮಾಡುತ್ತವೆ. ಕನ್ನಡದಲ್ಲೂ ಡಬ್ಬಿಂಗ್ ಶುರು ಮಾಡಿ. ಕೆಲವೇ ವರ್ಶಗಳಲ್ಲಿ ಕರ್ನಾಟಕದಾದ್ಯಂತ ಎಲ್ಲ ಪರಭಾಶೆಯ ಜನರ ಬಾಯಿಯಲ್ಲಿ ಕನ್ನಡ ನಲಿದಾಡುತ್ತದೆ.

ಪರಭಾಷಾ ಚಿತ್ರಗಳ "ಡಬ್ಬಿಂಗ್" ಬೇಕೋ ಬೇಡವೋ ಎನ್ನುವುದನ್ನು ಪ್ರೇಕ್ಷಕನೇ/ವೀಕ್ಷಕನೇ ನಿರ್ಧರಿಸಬೇಕು. ಅದಲ್ಲವಾದರೆ, ಸೆನ್ಸಾರಿ ಮಂಡಳಿ ನಿರ್ಧರಿಸಬೇಕು. ಚಲನ ಚಿತ್ರಮಂಡಳಿಯಂತೂ ಖಂಡಿತಕ್ಕೂ ಅಲ್ಲವೇ ಅಲ್ಲ.

ಸರಿಯಾಗಿ ಹೇಳಿದ್ದೆರ ಸಾರ್. ಪ್ರೇಕ್ಷಕ ನಿರ್ಧರಿಸಬೇಕಾದದನ್ನು ಕೆಲವು ಸ್ವಾರ್ಥಿಗಳು ನಿರ್ಧರಿಸುತ್ತಿರುವುದು ನಿಜಕ್ಕೂ ಜನರ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತೆ. ಡಬ್ಬಿಂಗ್ ನಿಷೇಧ ತೆಗೆಯಲಿ. ಬೇರೆ ಭಾಷೆಯ ಉತ್ತಮ ಚಿತ್ರಗಳು ಡಬ್ಬ್ ಆಗಲಿ. ಜನ ಬೇಡ ಎಂದು ನಿರ್ಧರಿಸಿದ್ದಾರೆ ನಿಲ್ಲಿಸಲಿ ಅಷ್ಟೇ.

ವಸಂತ್, >>ನಾನು ನಮ್ಮ ಉದ್ಯಮದ ಉಳಿವನ್ನು ಗಮನದಲ್ಲಿಟ್ಟುಕೊಂಡು ಡಬ್ಬಿಂಗ್ ಗೆ ಅನುಮತಿ ಕೊಡಬೇಕು ಅನ್ನುವವನು.<< >>ಇವತ್ತು ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್ ಆದ್ರೆ ಕನ್ನಡ ಚಿತ್ರರಂಗ ಮುಳುಗಿ ಹೋಗುತ್ತೆ ಅನ್ನೋ ಪರಿಸ್ಥಿತಿ ಇಲ್ಲ.<< ಡಬ್ ಆದ್ರೆ ಹಾಳಾಗಲಾರದಷ್ಟು ಉದ್ಯಮ ಗಟ್ಟಿ ಇದೆ ಅಂದಮೇಲೆ ಉದ್ಯಮದ ಉಳಿವಿಗೆ ಡಬ್ಬಿಂಗ್ ಯಾಕೆ ಬೇಕು..? ನೀವು ಏನು ಹೇಳ್ಬೇಕು ಅಂತ ಮಾಡಿದ್ದೀರಾ ಅದನ್ನ ಮೊದಲು ನಿರ್ಧರಿಸಿ.. ಆಮೇಲೆ ಉಳಿದ ಪ್ರಶ್ನೆ.. ನಮಸ್ಕಾರ

ಸ್ವಾಮಿ, ಉದ್ಯಮದ ಉಳಿವಿಗೆ ಡಬ್ಬಿಂಗ್ ಬೇಕು ಅನ್ನುವುದರರ್ಥ ನಾವು ಎಷ್ಟೋ ವರ್ಷಗಳಿಂದ ೧೫೦-೨೦೦ ಕೋಟಿ ಬಂಡವಾಳವನ್ನು ದಾಟದೆ ನಿಂತ ನಿರಾಗಿದ್ದೇವೆ. ಅವತಾರ್ ಹಾಗು ೨೦೧೨ ಚಿತ್ರಗಳು ತೆಲುಗು/ತಮಿಳಿನಲ್ಲಿ ತಲಾ ೬ ೬ ಕೋಟಿ ಹಣ ಗಳಿಸಿದವು. ಆ ಡಬ್ಬಿಂಗ್ ಹಕ್ಕು ಪಡೆಯಲು ಮಾಡಿದ ಖರ್ಚು ಅತಿ ಸ್ವಲ್ಪ. ಹಾಗಾಗಿ ಆ ಪೂರ್ತಿ ೧೩-೧೪ ಕೋಟಿ ಕೂಡ ಬೋನಸ್ ಇದ್ದಂತೆ. ನಮ್ಮ ಜನ ಡಬ್ಬಿಂಗ್ ಇಲ್ಲ ಅಂತ ಸುಮ್ನೆ ಕೂತಿದ್ದರೆ ಅನ್ಕೋಬೇಡಿ. ತಮಿಳು, ತೆಲುಗು, ಹಿಂದಿ ಚಿತ್ರಗಳಿಗೆ ಹೋಗುವವರಲ್ಲಿ ನಮ್ಮವರೇ ಇರ್ತಾರೆ. ಶಿವಮೊಗ್ಗ, ಹುಬ್ಬಳ್ಳಿ, ಚಿಕ್ಕಮಗಳೂರು ಮುಂತಾದ ಅಪ್ಪಟ ಕನ್ನಡ ಜಿಲ್ಲೆಗಳಲ್ಲಿ ತೆಲುಗು,ತಮಿಳು, ಹಿಂದಿ ಚಿತ್ರಗಳು ಮೆರಿಟ ಇವೆ. ನಮ್ಮ ಜನರಿಗ್ಯಾರಿಗೂ ಕನ್ನಡ ಬಿಟ್ಟು ಬೇರೆ ಭಾಷೆ ಅರ್ಥ ಆಗಲ್ಲ. ಹಾಗಿದ್ರೂ "on the screen" ಮನರಂಜನೆಗೋಸ್ಕರ ಪರಭಾಷೆ ಚಿತ್ರಗಳನ ನೋಡ್ತಾರೆ. ಕನ್ನಡದಲ್ಲೇ ಡಬ್ಬಿಂಗ್ ಮಾಡಿದ್ರೆ ನಮ್ಮ ಭಾಷೆಯಲ್ಲೇ ನೋಡಬಹುದಲ್ವಾ?

ಡಬ್ಬಿಂಗ್ ವಿಷಯ ಬಂದಾಗ ಭಾಷೆ,ನೆಲ ಅಂತ ಮಾತಾಡೋ ಬದಲು, ಕೇವಲ ಚಿತ್ರ ರಂಗವೊಂದನ್ನ ಗಮನವಿಟ್ಟು ನೋಡಿದರೆ, ರಿಮೇಕ್ ಚಿತ್ರಗಳಿಗೆ ಅನುಮತಿ ಕೊಟ್ಟ ಮೇಲೆ ಬರುತ್ತಿರುವ ಬಹುತೇಕ ಎಲ್ಲ ಚಿತ್ರಗಳು ರಿಮೇಕ್ಗಳೇ ಆಗಿವೆ.(ಅವು ಗೆದ್ದಿವೆಯೋ ಬಿಟ್ಟವೋ ಅದು ಬೇಡ), ನಮ್ಮ್ ಚಿತ್ರರಂಗದ ಹಲವಾರು ಜನ ಕತೆ-ಚಿತ್ರಕತೆ ಬರೆಯುವುದನ್ನೇ ಬಿಟ್ಟು ಕಾಯಂ ರಿಮೇಕ್ ಚಿತ್ರಗಳ ಹಿಂದೆ ಬಿದ್ದಿದ್ದಾರೆ.ಇಂತ ಜನರ ಕೈಗೆ ಹೋಗಿ 'ಡಬ್ಬಿಂಗ್' ಮಾಡ್ಕೋಳ್ರಪ್ಪ ಅಂದ್ರೆ ಏನಾಗಬಹುದು ಯೋಚಿಸಿ ನೋಡಿ.ಆಮೇಲೆ ಕನ್ನಡದಲ್ಲಿ ತಯಾರಾಗುವ ಚಿತ್ರಗಳು ಅಷ್ಟೇ.ವಸಂತ್,ಅವ್ರು ತಮಿಳು,ತೆಲುಗು ಚಿತ್ರ ರಂಗಗಳು ಏನು ಮುಳುಗಿಲ್ವಲ್ಲ ಅಂದಿದ್ದಾರೆ, ನಿಜ.ಅಲ್ಲ್ಲಿಯವರ ಮನಸ್ಥಿತಿಯೇ ಬೇರೆ ,ನಮ್ಮ ಚಿತ್ರ ರಂಗದವರ ಮನಸ್ಥಿತಿಯೇ ಬೇರೆ.ನಾವು ಅದನ್ನ ಯೋಚಿಸಿ ನಿರ್ಧರಿಸುವುದು ಒಳ್ಳೆಯದು. ನನ್ನ ಅನಿಸಿಕೆಯೆಂದರೆ,ಸದ್ಯ ಹಾಲಿವುಡ್ ಚಿತ್ರಗಳಿಗೆ ಮತ್ತೆ ಟೀ.ವಿ ಕಾರ್ಯಕ್ರಮಗಳಿಗೆ ಡಬ್ಬಿಂಗ್ ಅವಕಾಶ ನೀಡಬೇಕು.ಭಾರತೀಯ ಭಾಷೆಗಳಲ್ಲಿ ಬರುವ ಒಳ್ಳೆ ಚಿತ್ರಗಳನ್ನ ಹೇಗಿದ್ದರೂ ರಿಮೇಕ್ ಮಾಡುತ್ತಾರಲ್ಲ,ಅದು ಹಾಗೆ ಮುಂದುವರೆಯಲಿ.ಇಲ್ಲದಿದ್ದರೆ ಬಂದಿರೋ ಯಾವುದೋ ಪರಭಾಷಾ ಚಿತ್ರವನ್ನ ರಿಮೇಕ್ ಮಾಡಲು ಒಬ್ಬ ಹೊರಡುವಷ್ಟರಲ್ಲಿ ಇನ್ನೊಬ್ಬ ಅದನ್ನ ಡಬ್ಬ ಮಾಡಿ ಇನ್ನೊಂದಿಷ್ಟು ಕಿರಿಕ್ಗಳಾಗುತ್ತವೆ ಅಷ್ಟೇ.ಭಾರತೀಯ ಭಾಷೆಗಳ ಚಿತ್ರಗಳನ್ನ ಕಿರುತೆರೆಯಲ್ಲಿ ಡಬ್ಬಿಂಗ್ ಮಾಡಲು ಬಿಡಬೇಕು, ಇದರಿಂದ ಕೇವಲ ಕಿರುತೆರೆಯವರಿಗೆ ಮಾರಲೆಂದೇ ರೀಲು ಸುತ್ತಿ ಕನ್ನಡ ಚಿತ್ರರಂಗದ ಮಾನ ತೆಗೆಯುವ ಡಬ್ಬಾ ಚಿತ್ರಗಳಿಗಾದರು ತೆರೆ ಬೀಳುತ್ತದೆ.ಸಂಪೂರ್ಣ ಡಬ್ಬಿಂಗ್ಗೆ ಅವಕಾಶ ನೀಡಬೇಕು ಅನ್ನುವುದು ನನಗೇನೋ ಬೇಡ ಅನ್ನಿಸುತ್ತದೆ.

ಡಬ್ಬಿಂಗ್ ಬೇಕು ಎಂಬುದನ್ನು ನಾನು ಬೆಂಬಲಿಸುತ್ತೇನೆ. ವಸಂತ್ , ರಾಕೇಶ್ ಹೇಳಿರುವ ಅಂಶಗಳು ಸರಿಯಾಗಿವೆ. ಆದರೆ ಡಬ್ಬಿಂಗ್ ಗೆ ಕೆಲವು ನೀತಿ ನಿಯಮಗಳನ್ನು ಅಳವಡಿಸಿ ಅನುಮತಿ ಕೊಡಬೇಕು.

ಮೊದಲಿಗೆ ಡಬ್ಬಿಂಗ್ ಮಾಡುವುದನ್ನು ವಿರೋಧಿಸುತ್ತೇನೆ ಎಂದಿದ್ದೆ.ಆದರೆ ಇಲ್ಲಿನ ಕೆಲವು ಪ್ರತಿಕ್ರಿಯೆಗಳಲ್ಲಿ ಬಂದ ಅಭಿಪ್ರಾಯಗಳ ಪ್ರಕಾರ ಯೋಚಿಸಿದಾಗ,ಹಾಗೂ ನನ್ನ ಕೆಲ ಮಿತ್ರರೊಡನೆ ವಿಚಾರ ವಿನಿಮಯ ಮಾಡಿಕೊಂಡ ನಂತರ ,ಯಾವುದೋ 'ತುಟಿ'ಗಳಿಗೆ ಕನ್ನಡದ ಭಾಷಾ 'ಲೇಪನ' ವನ್ನು ಮನಸ್ಸು ಪೂರ್ತಿ ಒಪ್ತಾ ಇಲ್ಲವಾದರೂ ಉತ್ತಮ ಚಿತ್ರಗಳು ಹೆಚ್ಚಿನ ಜನರಿಗೆ ಮಾತೃಭಾಷೆಯಲ್ಲಿಯೇ ಸವಿಯಲು,ಅರಿತುಕೊಳ್ಳಲು ಸಿಕ್ಕರೆ ನಿಜವಾಗಲೂ ಉತ್ತಮ ಎಂಬ ಒಂದು ಪಾಯಿಂಟ್ನಿಂದ ಡಬ್ ಮಾಡಿದರೆ ಅಡ್ಡಿ ಇಲ್ಲ ಎನಿಸುತ್ತಿದೆ. ಹಾಗೆಂದು ಡಬ್ ಮಾಡಿದರೆ ಮಾತ್ರ ಕನ್ನಡ ಉಳಿಯುತ್ತೆ ,ಕನ್ನಡಿಗರು ಕನ್ನಡವನ್ನೇ ಮಾತನಾಡುತ್ತಾರೆ ಎನ್ನುವ ವಾದ ಯಾಕೋ ಸರಿ ಅನಿಸ್ತಾ ಇಲ್ಲ.ಭಾಷಾ ಪ್ರೇಮ ಎನ್ನುವುದು ಒಳಗಿಂದ ಹುಟ್ಟಿ ಬರಬೇಕು ಅಷ್ಟೇ. ಡಬ್ಬಿಂಗ್ಗೆ ಕೆಲವೊಂದು ನಿಯಮಗಳನ್ನು ಮಾಡಿ ಹದ್ದುಬಸ್ತಿನಲ್ಲಿ ಇಟ್ಟಿರಬೇಕು.ರಿಮೇಕ್ ಗಳು ಆದ ಹಾಗೇ ಡಬ್ಬಿಂಗ್ ಎನ್ನುವುದು ಅತಿರೇಕ ವಾಗಬಾರದು.ಮುಂದೆ ಡಬ್ಬಿಂಗ್ ನೋಡುವ ಜನರು ಕನ್ನಡದಲ್ಲಿ ಚಿತ್ರ ಮಾಡಲು ಕಥೆಗಳಿಲ್ಲ,ಹೊಸದನ್ನು ವಿಚಾರ ಮಾಡುವ ತಲೆಗಳಿಲ್ಲ,ಸಾಹಿತ್ಯಗಾರರಿಲ್ಲ,ಬಂಡವಾಳ ಹೂಡಲು ಜನರಿಲ್ಲ.ಇವರೆಲ್ಲರಿಗೆ ಕನ್ನಡ ಚಿತ್ರ ಓಡುತ್ತೆ ಅಂತ ನಂಬಿಕೆ ಇಲ್ಲ ಎಂದಾದ ಮೇಲೆ ಇತರ ಭಾಷೆ ಚಿತ್ರವನ್ನು ಕಲಿತಾದರೂ ಸರಿ ನೇರವಾಗಿ ನೋಡುವುದೇ ಉತ್ತಮ ಎಂಬ ಮನಸ್ಥಿತಿಯೂ ಬರಬಹುದು .ಅಷ್ಟೇ ಅಲ್ಲ ಆ ಚಿತ್ರದಲ್ಲಿನ ನಾಯಕರ ದೊಡ್ಡ ದೊಡ್ಡ ಕಟೌಟ್ ಗಳು ನಮ್ಮ ನೆಲದ ಮೇಲೆ ರಾರಾಜಿಸಿ ಅವರ ಜನಪ್ರೀಯತೆ ಹೆಚ್ಚಿ ರಾಜಕಾರಣಕ್ಕೆ ನುಗ್ಗಿದರೆ ಅಧೋಗತಿ!! ಕನ್ನಡಿಗರಿಗಾಗಿಯೇ,ಕನ್ನಡಕ್ಕಾಗಿಯೇ ಇರುವ 'ಸಂಪದ'ದಲ್ಲೇ ತಮಿಳು ಹಾಡುಗಳ,ಚಿತ್ರಗಳ ವಿಮರ್ಶೆ ನಡೆಯುತ್ತಿರುವಾಗ ಡಬ್ ಮಾಡುವುದು ಒಳ್ಳೆಯದೇನೋ !ಕೊನೆಗೆ ಇಲ್ಲಿಯಾದರೂ ಅವುಗಳ ನೇರ ಹಾವಳಿ ತಪ್ಪೀತು.!! ನನ್ನ ವಿಚಾರಗಳನ್ನು ಮತ್ತೆ ಪ್ರಶ್ನಿಸಿಕೊಳ್ಳಲು ಅನುವು ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳು. ಅಮರನಾಥರೆ, ನಮ್ಮ ಪರ ವಿರೋಧ ವಿಚಾರಗಳನ್ನು 'ನಿರ್ಧಾರ' ತೆಗೆದುಕೊಳ್ಳುವ ಮಂಡಳಿಗೆ ಹೇಗೆ ತಿಳಿಸಬೇಕು? ಮಿಂಚೆಯ ವಿಳಾಸ ಏನಾದರೂ ಇದೆಯೇ?