ಮತ್ತೆ ಮುಂಗಾರು - ಅದ್ಭುತವಾದ ಚಿತ್ರ

To prevent automated spam submissions leave this field empty.

ಮುಂಗಾರು ಮಳೆ ಹಾಗು ಮೊಗ್ಗಿನ ಮನಸ್ಸು ಗಳಂತಹ ಅದ್ಭುತ ಚಿತ್ರಗಳನ್ನು ನಿರ್ಮಿಸಿದ್ದ ಇ.ಕೃಷ್ಣಪ್ಪ ಮತ್ತೆ ಮುಂಗಾರು ಅಂತಹ ಮತ್ತೊಂದು ಉತ್ತಮ ಚಿತ್ರವನ್ನು ಕನ್ನಡ ಪ್ರೇಕ್ಷಕರಿಗೆ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಮಲ್ಲೇಶ್ವರದ ಮಂತ್ರಿ ಐನಾಕ್ಸ ನಲ್ಲಿ ಇವತ್ತು ಈ ಚಿತ್ರ ನೋಡಿ ನಿಜಕ್ಕೂ ಸಂತೋಷವಾಯಿತು. ಕನ್ನಡದಲ್ಲಿ ಒಳ್ಳೆಯ ಚಿತ್ರ ಬರಲ್ಲ ಅಂತ ಬೊಬ್ಬೆ ಹೊಡೆಯುವವರಿಗೆ ಇದು ತಕ್ಕ ಉತ್ತರ. ಎಂಭತ್ತರ ದಶಕದಲ್ಲಿ ನಡೆದ ನೈಜ ಕಥೆಯನ್ನಾಧರಿಸಿ ಮಾಡಿರುವ ಚಿತ್ರ "ಮತ್ತೆ ಮುಂಗಾರು". ಅರೇಬಿಯಾ ಸಮುದ್ರದಲ್ಲಿ ಪ್ರಕೃತಿಯ ವಿಕೋಪಕ್ಕೆ ಸಿಕ್ಕ ಹಡಗೊಂದು ಪಾಕಿಸ್ತಾನದ ಸರಹದ್ದನ್ನು ದಾಟುವ ಮೂಲಕ ಚಿತ್ರ ನಟ ಶ್ರೀನಗರ ಕಿಟ್ಟಿ ಹಾಗು ಅವನ ಗೆಳೆಯರು ಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ಆ ಕಷ್ಟ ಕಾರ್ಪಣ್ಯಗಳನ್ನು ಹೇಗೆ ಎದುರಿಸುತ್ತಾರೆ, ಅವರ ಮುಂದಿನ ಜೀವನ ಹೇಗೆ ನಡೆಯುತ್ತದೆ ಅನ್ನುವುದನ್ನು ಅತ್ಯದ್ಭುತವಾಗಿ ಚಿತ್ರಿಸಿದ್ದಾರೆ. ಚಿತ್ರ ನಿರ್ಮಾಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ತಂತ್ರಜ್ಞರು ಚಿತ್ರಕ್ಕೆ ಮತ್ತಷ್ಟು ಜೀವ ತುಂಬಿದ್ದಾರೆ. ಒಟ್ಟಾರೆಯಾಗಿ ತಪ್ಪದೆ ನೋಡಬೇಕಾದ ಚಿತ್ರ "ಮತ್ತೆ ಮುಂಗಾರು"

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕನ್ನಡ ಚಿತ್ರರಂಗಕ್ಕೆ "ಮತ್ತೆ ಮುಂಗಾರು" ಜೋರಾಗಿದೆ. ಒಳ್ಳೆಯ ಚಿತ್ರದ ನೀರಿಕ್ಷೆಯಲ್ಲಿದ್ದ, ಕನ್ನಡ ಪ್ರೇಕ್ಷಕನಿಗೆ ಹಬ್ಬದೂಟ ಆಗಬೇಕೆಂದರೆ ಚಿತ್ರಮಂದಿರದಲ್ಲೇ ಹೋಗಿ ಆನಂದಿಸಿ. ಒಳ್ಳೆಯ ಚಿತ್ರ ಬಂದಾಗ ಬೆನ್ನು ತಟ್ಟದಿದ್ದರೆ, ಚಿತ್ರರಂಗದ ಬಗ್ಗೆ ಮಾತನಾಡುವ ಹಕ್ಕನ್ನು ಕಳೆದುಕೊಂಡಂತೆ......