ಗ್ಯಾಸ್ ರಿಲೀಸಿಂಗ್

To prevent automated spam submissions leave this field empty.

ನಾವೆಲ್ಲಾ ಸಾಲೆ ಓದುತ್ತಿದ್ದ ಕಾಲ. ಆಗ ಗೋಡೆ ಬಸವರಾಜಪ್ಪ ಅಂತಾ ಮೇಸ್ಟ್ರು. ಅವರು ಅಲ್ಲಿ ಬತ್ತಿದಾರೇ ಅನ್ನೋದು ನಮಗೆ ಇಲ್ಲೇ ಗೊತ್ತಾಗೋದು. ಅವರ ಸವಂಡ್ ಹಂಗಿತ್ತು. ಢರ್, ಬುರ್ ಅಂತಲೇ ಎಂಟ್ರಿ. ಸೀಮೆ ಸುಣ್ಣ ಹಿಡಿದು ಆ ಕಡೆ ತಿರುಗಿದರೆ ಅಂದಾಕ್ಷಣ ದೇಹದ ವಾಯುವೆಲ್ಲಾ ಹೊರಗೆ ಹೋಗೋದು. ಢರ್್್್್್ ಫರ್ ಅಂತ. ಪಂಚೆ ಹಂಗೇ ಸಣ್ಣಗೆ ಹಾರೋದು. ಮುಂದುಗಡೆ ಇದ್ದ ಹೆಣ್ಣು ಐಕ್ಳು, ಮುಖಕ್ಕೆ ಕರ್ಚೀಫ್ ಇಟ್ಕಂಡು ಥೂ ಅನ್ನೋವು. ವಾಸನೆ ಬರಕ್ಕಿಲ್ಲಾ ಬುಡಿ ಅನ್ನೋರು ಮೇಸ್ಟ್ರು. ಇದೇನಲಾ ಈ ವಯ್ಯ ಹಿಂಗೆ ಸಬ್ದ ಮಾತ್ತಾನಲ್ಲಾ. ಒಂದು ಬಾರಿ ವಾಹನಗಳಿಗೆ ಮಾಡಿಸ್ದಂಗೆ ವಾಯುಮಾಲಿನ್ಯ ಟೆಸ್ಟ್ ಮಾಡಿಸಿ. ಆರ್.ಟಿ.ಒ ಇಂದ ಪರಿಮಿಸನ್ ತಗೊಂಡು ಆಮೇಲೆ ಓಡಾಡೋಕ್ಕೆ  ಬಿಡಬೇಕು ಕಲಾ ಅಂದ ಸುಬ್ಬ. ಸುಮ್ಕಿರಲಾ ಕಡೆಗೆ ನಿನ್ನನ್ನು ಮುಂದು ಕೂರಿಸಿದರೆ ಏನಲಾ ಮಾತ್ತೀಯಾ. ಏ ಥೂ ಅಂದ. ಸರಿ ಪಾಠ ಸುರುವಾತು ಮಧ್ಯ, ಮಧ್ಯ ಕೆಲವೊಮ್ಮೆ ಟೈರ್ ಪಂಚರ್ ಆದಂಗೆ, ಸ್ಕೂಟರ್ ಕೆಟ್ಟಾಗ ಬರೋ ಸೌಂಡಂಗೆ ಸಬ್ದ ಬತ್ತಾನೇ ಇತ್ತು. ಕಡೆ ಕಡೆಗೆ ಪಾಠಕ್ಕಿಂತ ಸಬ್ದನೇ ಜಾಸ್ತಿ ಆಗೋದು. ಕಾಲು ಸೈಡಿಗೆ ಹೋತು ಅಂದರೆ ಸವಂಡ್ ಗ್ಯಾರೆಂಟಿಯಾ. ಕೆಲವೊಮ್ಮೆ ವಾಸನೆ ಜೊತೆ ಸವಂಡ್. ಗೋಡೆ ಬಸವರಾಜಪ್ಪ ಅನ್ನುವುದಕ್ಕಿಂತ ಸವಂಡ್ ಬಸವ ಅಂದ್ರೆನೇ ಪೇಮಸ್.

ಒಂದು ಸಾರಿ ಇವರನ್ನ ಗೌಡಪ್ಪ ಕಾರ್ಯಕ್ರಮಕ್ಕೆ ಕರೆಸಿ ಸಾಕಾಗಿ ಹೋಗಿದ್ದ. ಮೈಕ್ನಾಗೆ 123 ಟೆಸ್ಟಿಂಗ್ ಬಂದಂಗೆ ಬರೋದು. ಕೊನೆಗೆ ಗೌಡಪ್ಪನ್ನ ಆಸ್ಪತ್ರೆಗೆ ಹಾಕಿದ್ವಿ. ಅಂತಾ ವಾಸನೆ ಕಲಾ. ಯಾಕಾದ್ರೂ ಇವನಿಗೆ ಬೆಳ್ಳುಳ್ಳಿ ಹಾಕಿದ್ದು ಫಲಾವು ಕೊಟ್ನೋ ಅನ್ನೋನು. ಈಗ ಯಾರೇ ಕಾರ್ಯಕ್ರಮಕ್ಕೆ ಬಂದರೂ ಬರೀ ಚಾ ಮಾತ್ರ.

ನೋಡ್ರಲಾ ನೀವೆಲ್ಲಾ ಟ್ಯೂಸನ್ ಬರ್ರಿ. ಅಂದ್ರೂ. ಸರಿ ಬೆಳಗ್ಗೆ 5ಕ್ಕೆ ಚಾ ಕುಡಿದು ಹೋಯ್ತಾ ಇದ್ವಿ. ಹೊಟ್ಟೆಯೆಲ್ಲಾ ಗುಳು ಗುಳು ಅನ್ನೋದು. ಹುಡುಗಿಯರು ಎಲ್ಲಿ ನೋಡ್ತಾರೋ ಅಂತಾ ಗುಳು ಸಬ್ದ ಬರ್ತಿದ್ದಾಗನೇ ಕೆಮ್ತಾ ಇದ್ವಿ. ಹುಡುಗಿಯರು ಸಣ್ಣಗೆ ಸಬ್ದ ಮಾಡೋವು ನಮಗೆ ಕೇಳಿಸ್ತಾ ಇರ್ಲಿಲ್ಲ. ಅವರು ನಮ್ಮ ಕಡೆ ನೋಡಿದರೂ ಅಂದ್ರೆ ಏನೋ ಸವಂಡ್ ಎಫೆಕ್ಟ್ ಆಗೈತೇ ಅಂತಾ. ಲೇ ಮೇಸ್ಟ್ರು ಬಂದ್ರಲಾ ಅಂದಾ ಸುಬ್ಬ. ಎಲ್ಲಲಾ. ಲೇ ಸವಂಡ್ ಕೇಳ್ತಾ ಐತೆ ನೋಡಲಾ. ಅಂಗಂದು ಎರಡೇ ನಿಮಿಷಕ್ಕೆ ಮೇಸ್ಟ್ರು ಬಂದ್ರು. ಸಣ್ಣ ಮನೆ. ಜಾಗ ಇಲ್ಲಾ. ಮುಂದುಗಡೆ ಹೆಣ್ಣು ಐಕ್ಳು. ನಾವು ಹಿಂದುಗಡೆ.

ಮೇಸ್ಟ್ರು ಎಂಟ್ರಿ ಕೊಟ್ಟು ಎರಡೇ ನಿಮಿಸಕ್ಕೆ ಢರ್್್್್್್್್್್ ಅಂತು. ಮುಂದುಗಡೆ ಇದ್ದ ಕಮಲನ ಕೂದಲು ಹಾರಿತು. ಕಿಟಿಕಿಯಿಂದ ಎಲ್ಲೋ ಗಾಳಿ ಬಂದಿರಬೇಕು ಅಂದ್ರೆ. ಅಲ್ಲಾ ಅದು ಮೇಸ್ಟ್ರು ವಾಯು ಎಫೆಕ್ಟ್. ಮೇಸ್ಟ್ರು ತೊಡೆ ಮೇಲೆ ಕೂರಿಸಿಕೊಂಡು ವಿಮಲಂಗೆ ಹಂಗಲ್ಲಾ ಹಿಂಗೆ ಅಂತಾ ಹೇಳ್ಕೊಡೋರು. ವಿಮಲ ಎದ್ದ ಮೇಲೆ ಲಂಗ ಕೊಡಿವಕಂಡು ಎದ್ದು ಬರೋಳು. ನೋಡ್ರಲಾ ಢರ್ಂ ಬುರ್ಂ ಸಬ್ದಂ, ಟಯ್ಂ ಪುಯಂ ವಾಸನಂ ಅದ್ರು. ಇದೇನಲಾ ಗ್ಯಾಸ್ ಬಗ್ಗೆ ಪಾಠ ಮಾಡ್ತಾ ಇದಾರೆ ಅಂದ ಸುಬ್ಬ. ನೀವು ನಿಮ್ಮ ದೇಹದ ಗಾಳಿಯನ್ನು ಯಾವುದೇ ನಾಚಿಕೆಯಿಲ್ಲದೆ ಹೊರ ಹಾಕಿ ಅಂದ್ರು. ಅಂಗಂದಿದ್ದೇ ಸರಿ, ಬೆಳಗ್ಗೆ ಹೊತ್ತು ಮೇಸ್ಟ್ರು ಮನೆ ಭೂಪಾಲ್ ಅನಿಲ ದುರಂತದ ತರಾ ಆಗಿರೋದು. ಹೊರಗೆ ಬಂದ್ರೆ ಏನೋ ಸಂತೋಸ. ಅಲ್ಲಲಾ ಇವನ ಹೆಂಡರು ಈವರೆಗೂ ಬದಕಿರೋದು ಗ್ರೇಟ್ ಬುಡಲಾ ಅಂದ ನಿಂಗ. ಲೇ ಯಮ್ಮಂಗೆ ಅಸ್ತಮ ಹಂಗೇ ಎರಡೂ ಸ್ಪೀಕರ್ ಢಮಾರ್ ಆಗೈತೆ, ಅದಕ್ಕೆ ಅದು ಬದುಕೈತೆ ಅಂದೆ.

ಸರಿ ನಮ್ಮ ತರಗತಿ ಒಂದು ಸಣ್ಣ ಪಟಾಕಿ ಸಾಲೆ ಆದಂಗೆ ಆಗಿತ್ತು. ಗ್ಯಾಸ್ ಬರದೇ ಹೋದ್ರು ಕಾಮಟೇಸನ್ಗೆ ಆದ್ರೂ ಬಲವಂತದಿಂದ ಬಿಡೋಡು. ನಾವು ಏನು ಕಮ್ಮಿಯಿಲ್ಲಾ ಅಂತಾ ಹೆಣ್ಣು ಐಕ್ಳು ನಮ್ಮ ಜೊತೆ ಸೇರ್ಕಂಡ್ವು. ಢರ್,ಪುಯ್ ಹಿಂಗೆ ವಿಧವಿಧವಾದ ಡಿಜಿಟಲ್ ಎಫೆಕ್ಟ್. ಫುಲ್ ಸರೌಂಡ್. ಲೇ ಮೇಸ್ಟ್ರು ಬಂದ್ರು. ಅಂತಾ ಸವಂಡ್ ನಾಗೆ ಹೇಳಿದ್ರೆ. ಬಂದ್ ಮ್ಯಾಕೆ ಗೊತ್ತಾಗಿದ್ದು ಸತ್ಯ. ಅದು ಕಮಲ. ಮೇಸ್ಟ್ರು ಮಟ್ಟಕ್ಕೆ ಬೆಳೆದಿದಾಳೆ. ಅಂತಾ. ಸ್ವಲ್ಪ ಕಡಲೆ ಜಾಸ್ತಿ ತಿಂದಿದ್ದೇ ಅದಕ್ಕೆ ಹಿಂಗಾಯ್ತು ಕಣೇಮ್ಮಾ ಅಂದ್ಲು. ಮತ್ತೆ ಮೇಸ್ಟರು ಬಂದ್ರು ಸುಮ್ಕಿರಲಾ. ಅಂದ್ರೆ ಮಗಾ ಸುಬ್ಬ ಎಂಟ್ರಿ ಕೊಟ್ಟಿದ್ದ. ಯಾಕಲಾ ಹೆಂಗೆಯ್ತೆ ನಮ್ಮ ಎಫೆಕ್ಟ್. ನೀವು ಲೂಸ್ ಚಡ್ಡಿ ಹಾಕಳ್ರಲಾ ನಿಮ್ಮದೂ ಹಿಂಗೆ ಬತ್ತದೆ ಸೌಂಡ್ ಅಂದ. ಒಂದು ದಿನ ಶಿಕ್ಷಣಾಧಿಕಾರಿ ನಮ್ಮ ತರಗತಿಗೆ ಬಂದಿದ್ರು.

ಬಸವರಾಜಪ್ಪ ಮೇಸ್ಟ್ರು ತಡಕ್ಕೊಂಡಿದ್ರು. ಸವಂಡ್ ಕೇಳಿ ಎಲ್ಲಿ ಇನ್ ಕ್ರಿಮೆಂಟ್ ಕಟ್ ಮಾಡ್ತಾರೆ ಅಂತಾ. ನಮಗೇನು ಗೊತ್ತು. ಸುರು ಹಚ್ಕಂಡಿದ್ವಿ. ಏನ್ರೀ ನಿಮ್ಮ ಮಕ್ಕಳು ಮಾನ ಮರ್ವಾದೆ ಇಲ್ಲದೆ ಹಿಂಗೆ ಹೂಸು ಬಿಡ್ತಾರಲ್ರೀ ನಾಚಿಕೆನೇ ಇಲ್ವಲ್ರೀ. ಅಂದ್ರೂ. ಸರ್ ಅದೂ ಅಂತ ಗೋಡೆ ಹೇಳ್ತಿದ್ದಾಗೆನೇ ಗ್ಯಾಸ್ ರಿಲೀಸ್ ಆಗೋ ಹೋಯ್ತು. ನಾನ್ ಸ್ಟಾಪ್. ನಿಮ್ಮ ಶಾಲೆಗೆ ಒಂದಿಷ್ಟು ಬೆಂಕಿಹಾಕ ಅಂತಾ ಶಿಕ್ಷಣಾಧಿಕಾರಿ ಎದ್ದು ಹೋದ್ರು. ಹಂಗೇ ಮೇಸ್ಟ್ರು ಸಂಬಳ ಕಟ್ ಮಾಡಿದ್ರು. ಈಗ ಸಾಲೆ ಮುಗಿದ ಮಾಲೆ ರಸ್ತೇಲಿ ಪಟಾಕಿ ಹಾರಸ್ಕಂತಾ ಮೇಸ್ಟ್ರು ಮನೆಗೆ ಹೋಯ್ತಾರೆ. ಹಿಂದಗಡೆ ನಾಯಿ ಬೊಗಳ್ತಾ ಇರ್ತದೆ.  ಗ್ಯಾಸ್ ಸಿಲಿಂಡರ್ ಖಾಲಿ ಆದ್ರೆ ಮೇಸ್ಟರು ಮನೆಗೆ ಹೋಗ್ರಿ ಅನ್ನೋ ಮಾತು ಆಗ ನಮ್ಮ ಹಳ್ಯಾಗೆ ಚಾಲ್ತಿಯಲ್ಲಿತ್ತು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಆಫೀಸ್ ನಲ್ಲಿ ನಾತಮಯದಂತೆ ಗ್ಯಾಸ್ ರಿಲೀಸಿಂಗ್ ಸಕತ್ತಾಗಿದೆ. ಆ ಮೇಸ್ಟ್ರಗೆ ನನ್ನದೊಂದು ನಮಸ್ಕಾರ.

ನನ್ನ ನೆಂಟನೊಬ್ಬ ತನ್ನ ಮಕ್ಕಳ ಎದುರಿಗೆ ಕೆಟ್ಟ ಕೆಟ್ಟ ಹೂಸುಗಳನ್ನು ಬಿಟ್ಟು ಎಷ್ಟು ಹೆಸರನ್ನು ಕೆಡಿಸಿಕೊಂಡ ಎಂದರೆ ಈಗ ಯಾರೇ ಬಿಟ್ಟರೂ, ಎಲ್ಲಿಂದಲೇ ದುರ್ನಾತ ಬಂದರೂ, ಕೇಕೆ ಹಾಕುತ್ತವೆ ಅವನ ಮಕ್ಕಳು, ಅಪ್ಪಾ, ಹೂಸ್ ಬಿಟ್ಟ ಎಂದು.

[[ಒಂದು ಬಾರಿ ವಾಹನಗಳಿಗೆ ಮಾಡಿಸ್ದಂಗೆ ವಾಯುಮಾಲಿನ್ಯ ಟೆಸ್ಟ್ ಮಾಡಿಸಿ. ಆರ್.ಟಿ.ಒ ಇಂದ ಪರಿಮಿಸನ್ ತಗೊಂಡು ಆಮೇಲೆ ಓಡಾಡೋಕ್ಕೆ ಬಿಡಬೇಕು ಕಲಾ ಅಂದ ಸುಬ್ಬ]] ಆಫೀಸಿನ ನಾತದ ಎಫೆಕ್ಟ್ ಚೆನ್ನಾಗಿ ಮುಂದುವರೆದಿದೆ. ಎಲ್ಲರೂ ಹೀಗೇ ಶುರು ಹಚ್ಕೊಂಡ್ರೆ?

ಕವಿಗಳೇ ನೀವು ಎರಡು ವರ್ಗಾವರಣಗಳ(square brackets[]) ನಡುವೆ ಏನೇ ಬರೆದರೂ ಅದು ವಿಕಿಪೀಡಿಯಾದಲ್ಲಿನ ಆ ಕಂಟೆಂಟ್‌‌ಗೆ ಲಿಂಕ್ ಆಗುತ್ತದೆ. ಉದಾ: [[india]] ಸುಮ್ಮನೆ ಮಾಹಿತಿಗಾಗಿ. -ಪ್ರಸನ್ನ.ಎಸ್.ಪಿ

[quote]ಒಂದು ಬಾರಿ ವಾಹನಗಳಿಗೆ ಮಾಡಿಸ್ದಂಗೆ ವಾಯುಮಾಲಿನ್ಯ ಟೆಸ್ಟ್ ಮಾಡಿಸಿ. ಆರ್.ಟಿ.ಒ ಇಂದ ಪರಿಮಿಸನ್ ತಗೊಂಡು ಆಮೇಲೆ ಓಡಾಡೋಕ್ಕೆ ಬಿಡಬೇಕು ಕಲಾ ಅಂದ ಸುಬ್ಬ.[/quote]

ಕವಿಗಳು ಮೇಲಿನ ಸಾಲನ್ನು quote ಮಾಡಲು ಎರಡು ಸತತ ವರ್ಗಾವರಣಗಳನ್ನು ಬಳಸಿದ್ದಾರೆ. ಅದಕ್ಕೇ ಆ ಸಾಲುಗಳು wikiಗೆ ಲಿಂಕ್ ಆಗಿದೆ.