ಕಿರುದಾರಿಗಳಿವೆ ಗಮನಿಸಿ!

To prevent automated spam submissions leave this field empty.

ಅ.ರಾ. ಮಿತ್ರರು ತಮ್ಮ ಪ್ರಬಂಧದವೊಂದರಲ್ಲಿ ಕಿರುದಾರಿಗಳ ಬಗ್ಗೆ ಎಚ್ಚರಿಸಿದ್ದಾರೆ (ಕಿರುದಾರಿಗಳಿವೆ ಎಚ್ಚರಿಕೆ). ಆದರೆ ಈಗ ಗಣಕಯಂತ್ರದಲ್ಲಿ ವೇಗವಾಗಿ ಸಾಗಲು ಕಿರುದಾರಿಗಳು ಬೇಕೇ ಬೇಕು.

 

ಉದಾಹರಣೆಗೆ ವಿಂಡೋಸ್‌ನಲ್ಲಿ ಬರಹ IMEಯನ್ನು ಓಡಿಸ (run/execute) ಬೇಕಾಗಿದೆ. ಅದಕ್ಕೆ ಸಾಧಾರಣವಾಗಿ ಕಡಿಮೆಯಂದರೂ ಮೌಸ್‌ನಿಂದ ೪ ಚಿಟುಕು (click) ಬೇಕು. ಇದಕ್ಕೆ shortcut ಮಾಡಿದರೆ ಕೆಲಸ ಸುಲಭ.

 

shortcutನ್ನು ಮಾಡುವದಕ್ಕೆ ತುಂಬಾ ವಿಧಾನಗಳಿವೆ. ಅದರಲ್ಲಿ ಇಲ್ಲಿ ಎರಡು ವಿಧಾನಗಳನ್ನು ಕೊಟ್ಟಿದೆ.

 

ಮೊದಲನೆಯ ವಿಧಾನ:

 

೧. ಮೆನುವಿನಲ್ಲಿ ನಿಮಗೆ ಬೇಕಾದ application ಮೇಲೆ right click ಮಾಡಿ. ಲಿಸ್ಟ್ ಬರುತ್ತೆ.

ಉದಾ: Start -> All Programs -> BarahaIME 1.0 -> BarahaIME 1.0

 

Properties


೨. ಅದರಲ್ಲಿ “Pin to Start menu”ನ್ನು ಚಿಟುಕಿಸಿ.

 

೩. Start ಗುಂಡಿಯನ್ನು ಚಿಟುಕಿಸಿ. Recent Programs ಮೇಲುಗಡೆ application ಹೆಸರು ಬಂದಿರುತ್ತೆ.

 

Pin 

 

ಎರಡನೇ ವಿಧಾನ:


೧. ಮೊದಲಿನಂತೆ ಮೆನುವಿನಲ್ಲಿ ನಿಮಗೆ ಬೇಕಾದ application ಮೇಲೆ right click ಮಾಡಿ. ಲಿಸ್ಟ್ ಬರುತ್ತೆ.

ಉದಾ: Start -> All Programs -> BarahaIME 1.0 -> BarahaIME 1.0

 

೨. ಅದರಲ್ಲಿ Propertiesನ್ನು ಚಿಟುಕಿಸಿ

 

೩. Properties ಕಿಟಕಿ ಬರುತ್ತೆ.

 

KB

 

೪. ಅದರಲ್ಲಿ Shortcut Key: ಎದುರಿನ ಡಬ್ಬಿ(box)ಯನ್ನು ಚಿಟುಕಿಸಿ.

 

೫. ಈಗ ನಿಮಗೆ ಬೇಕಾದ ಅಕ್ಷರ (key) ಒತ್ತಿ. ಆ ಅಕ್ಷರ CTRL+ALT ಜೊತೆ ಕಾಣಿಸುತ್ತೆ

ನಾನು B ಒತ್ತಿದಾಗ, ಚಿತ್ರದಲ್ಲಿ ತೋರಿಸಿರುವಂತೆ “CTRL + ALT + B” ಬಂತು.

 

೬. OK ಒತ್ತಿ.

 

ಇನ್ನು ಮೇಲೆ ನಿಮಗೆ application ಓಡಿಸಬೇಕಾದರೆ ಈ shortcut key (ಉದಾ: CTRL+ALT+B) ಒತ್ತಿದರೆ ಸಾಕು, application ತಟ್ಟಂತ ಪ್ರತ್ಯಕ್ಷ!

 

ಕೊ: ನಿಮಗೆ ಬೇರೆ ಸೇರಿಕೆ(combination) , ಉದಾ: CTRL+SHIFT shortcut ಬೇಕಾದರೆ, ಆ ಸೇರಿಕೆ ಒತ್ತಬೇಕು.
ಹಾಗೆ Function keyಗಳನ್ನೂ ಬಳಸಬಹುದು.

 

ಕೊಕೊ: ಬೇರೆ applicationನ ಸೇರಿಕೆ, ನೀವು ಕೊಟ್ಟ ಸೇರಿಕೆ ಜೊತೆ ಸಂದಿಗ್ಧತೆ ಇರದಂತೆ ಎಚ್ಚರವಹಿಸಿ.

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾನು ಸುಮಾರಾಗಿ ಎಲ್ಲಾ ಅಪ್ಲಿಕೇಷನ್‌ಗಳಿಗೂ ಶಾರ್ಟ್‌ಕಟ್ ಬಳಸುತ್ತೇನೆ. ಲೇಖನ ಚೆನ್ನಾಗಿ ಬರೆದಿದ್ದೀರ ಶ್ರೀನಿವಾಸ. ನೀವು ಬಳಸುವ ವಿಂಡೋಸ್‌‌ನ ವರ್ಷನ್ ಯಾವುದು? ಸ್ಟಾರ್ಟ್ ಮೆನುವಿನಲ್ಲಿ ಐಕಾನ್‌ಗಳು ಬೇರೆ ರೀತಿ ಕಾಣುತ್ತಿವೆ. -ಪ್ರಸನ್ನ.ಎಸ್.ಪಿ

ಮೇಲಿನ ಚಿತ್ರದಲ್ಲಿ icon ಬದಲಾಯಿಸಿದ್ದು Crystal clearನಿಂದ.

ಇದನ್ನು ಅಳವಡಿಸುವ (install) ಮೊದಲು System Restore Point ರಚಿಸಿ(create)ದರೆ ಒಳ್ಳೆಯದು. ಯಾಕೆಂದರೆ ಇದನ್ನು ಪೂರ್ತಿಯಾಗಿ uninstall ಮಾಡುವುದು ಕಷ್ಟ.

XP ಥೀಮ್‌ನ್ನು ಬದಲಾಯಿಸಬೇಕಾದರೆ System DLL ಕಡತಗಳನ್ನು ಬದಲಾಯಿಸಬೇಕಾಗುತ್ತದೆ.

 

ವಿಂಡೋಸ್ xp ಥೀಮ ಬದಲಿಸೋದು ಹೇಗೆ? ಕೆಳಗಿನ ಕೊಂಡಿಯಲ್ಲಿದೆ ಹಂತ-ಹಂತವಾದ ಮಾರ್ಗದರ್ಶನ http://www.microsoft... ಉಚಿತ ಥಿಮ ಗಳನ್ನು ಇಲ್ಲಿಂದ ಇಳಿಸಿಕೊಳ್ಳಬಹುದು. ಇವು ಪೂರ್ಣವಾಗಿ ನಂಬಲರ್ಹ ತಾಣಗಳು : http://www.technospo... http://www.pcworld.c... http://graphicstyles... http://www.xmarks.co...

ಥ್ಯಾಂಕ್ಸ್ ವಿಜಯ್. ನನಗೆ ಥೀಮ್ ಮತ್ತು msstyles ನಡುವೆ ಗೊಂದಲವಾಯಿತು. ನೀವು ಕೊಟ್ಟಿರುವ ಕೊಂಡಿಯಲ್ಲಿರುವಂತೆ .theme ಕಡತಗಳಿಂದ ಥೀಮ್‌ ಅಳವಡಿಸಿಕೊಳ್ಳಬಹುದು. ಅಥವಾ ಕೆಲವೊಂದು theme installer(.exe)ಗಳಿಂದ. ಆದರೆ ಎರೆಡನೇ ವಿಧಾನದಿಂದ ವೈರಸ್ ಬರುವ ಸಾಧ್ಯತೆ ತುಂಬಾ ಇದೆ, ಹುಷಾರಾಗಿರಬೇಕು.