ನೀತಿ ಕಥೆ

To prevent automated spam submissions leave this field empty.

ಒಂದು ಊರಲ್ಲಿ ಕೂಚಂ ಭಟ್ಟ ಎಂಬ ಮಹಾನ್ ಬುದ್ದಿವಂತ ಇದ್ದ. ಹಾಗಂತ ದಡ್ಡನೇನೂ ಅಲ್ಲ ಬುದ್ದಿವಂತನೇ. ಆದರೆ ಅದನ್ನು ಎಲ್ಲರಿಗೂ ಪ್ರದರ್ಶನ ಮಾಡಬೇಕೆಂಬ ಹಂಬಲ. ತನ್ನಿಂದಲೇ ಲೋಕ ಬೆಳಗಾಗುವುದು, ಎಲ್ಲರ ಮನೆಗೆ ಬೆಳಕು ಹರಡುವುದು ಎಂದುಕೊಂಡಿದ್ದ. ಅವನಿಗಂತೆಯೇ ಕೆಲವೊಂದಿಷ್ಟು ಶಿಷ್ಯರು ಕೂಡ ಇದ್ದರು. ಗ್ರಾಮದ ಪ್ರತಿಯೊಂದು ತೀರ್ಮಾನವೂ ಈತನಿಂದಲೇ ನಡೆಯುತ್ತಿತ್ತು. ಕೆಲವೊಮ್ಮೆ ತಪ್ಪಾದರೂ ಅನಿವಾರ್ಯವಾಗಿ ಸರಿ ಎನ್ನಲೇ ಬೇಕಾಗಿತ್ತು. ತಾನು ಹೇಳಿದರೆ ಮಾತ್ರ ಕೋಳಿ ಕೂಗುವುದು, ಬೆಳಕು ಆಗುವುದು ಎಂದು ಹೆಮ್ಮೆ ಪಡುತ್ತಿದ್ದ. ಹಾಗಾಗಿ ವಿಶೇಷ ಗೌರವ.

ಆ ಗ್ರಾಮದಲ್ಲಿ ಈತನಿಗಿಂತ ಬುದ್ದಿವಂತರು ಇದ್ದರೂ ಕೂಡ ಯಾರು ಕೂಚಂ ಭಟ್ಟನನ್ನು ವಿರೋಧಿಸುತ್ತಿರಲಿಲ್ಲ. ಯಾಕೆ ಬೇಕು ತೊಂದರೆ ಎನ್ನುವ ಕಾರಣಕ್ಕೆ. ಇವನು ಹೇಳಿದ ಎಂದಾಕ್ಷಣ ಅಲ್ಲಿದ್ದಂತವರು ಬಹು ಪರಾಕ್ ಅನ್ನಲೇಬೇಕು. ಇಲ್ಲವೆಂದರೆ ಅವರಿಗೆ ಗ್ರಾಮದಿಂದ ಬಹಿಷ್ಕಾರ. ಇದು ಅಲ್ಲಿನ ಮಾತಾಗಿತ್ತು. ಇವನ ನೈಜ ಬಣ್ಣವನ್ನು ಹೇಗಾದರೂ ಗ್ರಾಮಕ್ಕೆ ತಿಳಿಸಲೇಬೇಕೆಂದು ಕೆಲವೊಂದಿಷ್ಟು ಯುವಕರು ಉಪಾಯ ಹೂಡಿದರು. ಒಂದು ದಿನ ಗ್ರಾಮದ ಕೋಳಿಯನ್ನೆಲ್ಲಾ ಬಚ್ಚಿಟ್ಟರು. ಕೂಚಂ ಭಟ್ಟ ಹೇಳಿದ ನಂತರವೂ ಯಾವುದೇ ಕೋಳಿ ಕೂಗಲಿಲ್ಲ. ಕೆಲ ಸಮಯಕ್ಕೆ ಬೆಳಕೂ ಹರಿಯಿತು. ಆಗ ಗ್ರಾಮಸ್ತರಿಗೆ ಕವಿದಿದ್ದ ಮಂಕು ಬದಿಗೆ ಸರಿಯಿತು. ಯಾರಿಂದಲೂ ಬೆಳಗಾಗುವುದಿಲ್ಲ. ಬದಲಾಗಿ ಇದು ಪ್ರಕೃತಿಯ ನಿಯಮ ಎಂದು. ಆಗ ಗ್ರಾಮಸ್ತರು ಕೂಚಂ ಭಟ್ಟರೆ ನೀವು ನಮಗಿಂತ ಹಿರಿಯರು, ಬುದ್ದಿವಂತರು ಆದರೆ ನೀವು ಆಡುತ್ತಿರುವ ರೀತಿಯಿಂದಾಗಿ ಹೀಗೆ ಮಾಡಿದೆವೆ ಹೊರತು ಮತ್ತಿನ್ಯಾವುದಕ್ಕೂ ಅಲ್ಲಾ ಅಂದ ಮೇಲೆ. ಕೂಚಂ ಭಟ್ಟನಿಗೂ ಜ್ಞಾನೋದಯವಾಯಿತು. ಇದೀಗ ಗ್ರಾಮದಲ್ಲಿ ಎಲ್ಲರೂ ಒಬ್ಬರನೊಬ್ಬರು ಅರಿತು ಸುಖವಾಗಿ ಬಾಳುತ್ತಿದ್ದಾರೆ.

 

ಈ ಲೇಖನ ಕರ್ಮವೀರ ಪುಸ್ತಕವೊಂದರಲ್ಲಿ ಓದಿದ್ದೆ.

ಕ್ರೆಡಿಟ್ಸ್ ಏನಿದ್ದರೂ ಅದರ ಸಂಪಾದಕರಿಗೆ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

:-) ಇದೇ ಅರ್ಥದ ತನ್ನ ಕೋಳಿ ಕೂಗಿದರೇ ಬೆಳಗಾಗುತ್ತೆ ಎನ್ನುತ್ತಿದ್ದ ಜಂಬದ ಅಜ್ಜಿಯ ಕಥೆ ನಮ್ಮ ಪ್ರಾಥಮಿಕ ಶಾಲೆಯ ಪಠ್ಯಪುಸ್ತಕದಲ್ಲಿತ್ತು.

ಒಂದು ಕನ್ನಡ ಸಿನಿಮ ಹಾಡು ಕೂಡ ಇದರಮೇಲೇ ಆದಾರಿತವಾಗಿದೆ... :)

ಏನೇ ಆಗಲಿ ಈ ನೀತಿಕತೆಯಿ೦ದ ತಿಳಿಯುವ ನೀತಿಯೆ೦ದರೆ ನಾಡಿಗರೇ, ಮತ್ಸರಕ್ಕೆ ಅಲೋಪತಿಯಲ್ಲಾಗಲೀ, ಹೋಮಿಯೋಪತಿ ಯಲ್ಲಾಗಲೀ ಹಾಗೂ ಆಯುರ್ವೇದ ಔಷಧ ಪದ್ಢತಿಗಳಲ್ಲಾಗಲೀ ಯಾವುದೇ ಮದ್ದಿಲ್ಲ! ನಮಸ್ಕಾರಗಳೊ೦ದಿಗೆ,

<<ಒಂದು ದಿನ ಗ್ರಾಮದ ಕೋಳಿಯನ್ನೆಲ್ಲಾ ಬಚ್ಚಿಟ್ಟರು. ಕೂಚಂ ಭಟ್ಟ ಹೇಳಿದ ನಂತರವೂ ಯಾವುದೇ ಕೋಳಿ ಕೂಗಲಿಲ್ಲ. ಕೆಲ ಸಮಯಕ್ಕೆ ಬೆಳಕೂ ಹರಿಯಿತು. >> ಕೋಳಿಗಳು ಸಮಯಕ್ಕೆ ಸರಿಯಾಗಿ ಕೂಗುತ್ತವೆಯೇ ವಿನಃ, ಬೆಳಕನ್ನು ನೋಡಿ ಕೂಗುವುದಲ್ಲ ಎನ್ನುವ ಪರಿಜ್ಞಾನವೂ ಬೇಡವೇ ಅವಿವೇಕಿ ಯುವಕರುಗಳಿಗೆ? ಕೋಳಿಗಳನ್ನು ಎಲ್ಲಿ ಬಚ್ಚಿಟ್ಟರೂ ಕೂಗುತ್ತವೆ. ಏಕೆಂದರೆ ಜಾಮ ಜಾಮಕ್ಕೆ ಕೂಗುವುದು ಅವುಗಳ ಜಾಯಮಾನ. ಕೂಗುವ ಪ್ರಾಣಿಗಳು ಕೂಗುತ್ತವೆ, ಬೊಗಳುವ ಪ್ರಾಣಿಗಳು ಬೊಗಳುತ್ತವೆ, ರಾತ್ರಿ ಹಗಲೆನ್ನುವ ಪರಿಜ್ಞಾನವಿಲ್ಲದೆಯೇ. ಬಹುಷ: ನೀವಂದಂತೆ ಅದು ಕರ್ಮವೀರ ಎನ್ನುವ ಯಾವುದೋ ಪುಸ್ತಕವಿರಬೇಕು. ನಿಯತಕಾಲಿಕವಾಗಿರಲಾರದು. ಏಕೆಂದರೆ ಕರ್ಮವೀರದಂಥ ಪ್ರಬುದ್ಧ ನಿಯತಕಾಲಿಕದಲ್ಲಿ ಇಂಥ ನೀತಿ ಕಥೆಯೇ? ನಮಸ್ಕಾರಗಳೊ೦ದಿಗೆ,

ಪಾಪ ನಿಮಗೆ ಕರ್ಮವೀರದ ಬಗ್ಗೆ ಗೊತ್ತಿಲ್ಲ ಅಂತಾ ಕಾಣುತ್ತೆ. ಅದೇ ರೂಪತಾರಾ, ತರಂಗ ಆಗಿದ್ದರೆ ಗೊತ್ತು ಎನ್ನುತ್ತಿದ್ದರೇನೋ. ಸಂಯುಕ್ತ ಕರ್ನಾಟಕದಿಂದ ಪ್ರಕಟವಾಗುವ ಪಾಕ್ಷಿಕ ಇದು. ನಿಮ್ಮ ಕಡೆ ಸಿಗುವುದಿಲ್ಲ ಎಂದು ಕಾಣುತ್ತದೆ. ಅಥವಾ ನೀವು ತೆಗೆದುಕೊಂಡಿಲ್ಲ ಅಂತಾ ಕಾಣುತ್ತದೆ. ಮುಂಗಡ ಹಣ ಪಾವತಿಸಿದರೆ ಮನೆಗೇ ಬರುತ್ತದೆ. ವಿಳಾಸ ಬೇಕಾದರೆ ನೀಡುತ್ತೇನೆ. ಇನ್ನು ವಿಷಯಕ್ಕೆ ಬರೋಣ, ಯುವಕರಿಗೆ ಬೆಳಕು ಹರಿಯುವುದರ ಬಗ್ಗೆ ಗೊತ್ತಿತ್ತು. ಆದರೆ ಕೂಚಂ ಭಟ್ಟನ ಅಹಂಕಾರವಿತ್ತಲ್ಲಾ ಅದನ್ನ ಇಳಿಸಬೇಕೆಂದು ಅವರು ಮಾಡಿದ್ದು. ಇನ್ನೊಮ್ಮೆ ಓದಿ. ನೀವು ಹೇಳಿದ್ದು ಸತ್ಯ. ಬೊಗಳುವ ಪ್ರಾಣಿಗಳು ಬೊಗುಳುತ್ತಾ ಇರುತ್ತದೆ. ಅದಕ್ಕೆ ಹೆದರುವವರು ಕೆಲವೇ ಮಂದಿ ಅಂತಾ ಕಾಣುತ್ತೆ. ನಿಮ್ಮ ಅಮೂಲ್ಯ ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು.

>>ಪಾಪ ನಿಮಗೆ ಕರ್ಮವೀರದ ಬಗ್ಗೆ ಗೊತ್ತಿಲ್ಲ ಅಂತಾ ಕಾಣುತ್ತೆ. ಅದೇ ರೂಪತಾರಾ, ತರಂಗ ಆಗಿದ್ದರೆ ಗೊತ್ತು ಎನ್ನುತ್ತಿದ್ದರೇನೋ. ಸಂಯುಕ್ತ ಕರ್ನಾಟಕದಿಂದ ಪ್ರಕಟವಾಗುವ ಪಾಕ್ಷಿಕ ಇದು. ನಿಮ್ಮ ಕಡೆ ಸಿಗುವುದಿಲ್ಲ ಎಂದು ಕಾಣುತ್ತದೆ. ಅಥವಾ ನೀವು ತೆಗೆದುಕೊಂಡಿಲ್ಲ ಅಂತಾ ಕಾಣುತ್ತದೆ. ಮುಂಗಡ ಹಣ ಪಾವತಿಸಿದರೆ ಮನೆಗೇ ಬರುತ್ತದೆ. ವಿಳಾಸ ಬೇಕಾದರೆ ನೀಡುತ್ತೇನೆ.<< ಪಾಪ ಎನ್ನುವ ಪದದ ಬಳಕೆ ಏಕೋ ಗೊತ್ತಾಗಲಿಲ್ಲ. ಕರ್ಮವೀರದ ಬಗ್ಗೆ ಹೇಳುವುದಾದರೆ, ಹೊರನಾಡಿಗೆ ಬರುವುದಕ್ಕಿ೦ತ ಮು೦ಚೆ ನಾನು ಕರ್ಮವೀರದ ಖಾಯ೦ ಓದುಗ! ಚ೦ದಾದಾರಿಕೆಯನ್ನು ನವೀಕರಿಸಲಿಲ್ಲ, ಅಲ್ಲದೆ ನನಗಿಲ್ಲಿ ಆ ಪುಸ್ತಕ ಸಿಗುವುದೂ ಇಲ್ಲ. ವಿಳಾಸ ನಿಮ್ಮಿ೦ದ ಪಡೆಯುವ ಅವಶ್ಯಕತೆ ಸದ್ಯಕ್ಕಿಲ್ಲ. ಅ೦ತರ್ಜಾಲದಲ್ಲಿ ಹುಡುಕಿದರೆ ಮಾಹಿತಿ ಸಿಗುತ್ತದೆ! ಕರ್ಮವೀರದ೦ಥ ಪಾಕ್ಶಿಕದಲ್ಲಿ ಈ ನೀತಿಕಥೆ ಪ್ರಕಟವಾಗಿದ್ದು ಎ೦ದಿರಲ್ಲ, ಸ೦ಚಿಕೆಯ ಸ೦ಖ್ಯೆ ಹಾಗೂ ಅವಧಿಯನ್ನು ತಿಳಿಸಿದರೆ ಉತ್ತಮವಿತ್ತು. ನಾವೂ ಅದನ್ನು ಓದಬಹುದಲ್ಲ ಎ೦ದಷ್ಟೇ,ದಾಖಲೆಗಲನ್ನು ಒದಗಿಸಿದರೆ ಅದಕ್ಕೆ ಪೂರಕವಾದ ಮಾಹಿತಿಯನ್ನೂ ನೀಡಬೇಕೆನ್ನುವ ಬಗ್ಗೆ ನನ್ನ ಮೇಲಿನ ಪ್ರತಿಕ್ರಿಯೆಯಷ್ತೇ! ನಮಸ್ಕಾರಗಳೊ೦ದಿಗೆ,

>>ಕರ್ಮವೀರದ ಬಗ್ಗೆ ಹೇಳುವುದಾದರೆ, ಹೊರನಾಡಿಗೆ ಬರುವುದಕ್ಕಿ೦ತ ಮು೦ಚೆ ನಾನು ಕರ್ಮವೀರದ ಖಾಯ೦ ಓದುಗ! << >>ನೀವಂದಂತೆ ಅದು ಕರ್ಮವೀರ ಎನ್ನುವ ಯಾವುದೋ ಪುಸ್ತಕವಿರಬೇಕು.<< ಮತ್ತೆ ಈ ಪ್ರತಿಕ್ರಿಯೆ ಯಾಕೆ ಜೋಕಾ.

<<<<ಕೂಗುವ ಪ್ರಾಣಿಗಳು ಕೂಗುತ್ತವೆ, ಬೊಗಳುವ ಪ್ರಾಣಿಗಳು ಬೊಗಳುತ್ತವೆ, ರಾತ್ರಿ ಹಗಲೆನ್ನುವ ಪರಿಜ್ಞಾನವಿಲ್ಲದೆಯೇ.>>>> ನಾವಡರೆ, ನೀವಂದಂತೆ ನಮ್ಮ ಮನೆಯ ಹತ್ತಿರ ಒಂದು ನಾಯಿ ಇತ್ತು. ಅದು ಪ್ರತೀ ಸಲ ಮುಸ್ಲಿಮರು ಪ್ರಾರ್ಥನೆ ಮಾಡುವಾಗಲು ಓssss..ಓssss.. ಊsss... ಎಂದು ಕೂಗುತ್ತಿತ್ತು! :) ;-)

ಪ್ರಸನ್ನ ಬಹುಷಃ ಅದೂ ಪ್ರಾರ್ಥನೆ ಮಾಡುತ್ತಿದೆ ಅಂತಾ ಕಾಣುತ್ತೆ. ನೀವು ಬೊಗಳುತ್ತೆ ಎಂದು ಕೊಂಡಿದ್ದೀರಿ. ಬೊಗಳುವುದು ಎಂದರೆ ಬೌ ಬೌ ಅಂತಾ ಅಲ್ಲವೆ. ಯಾವುದಕ್ಕೂ ಹೀಗೂ ಉಂಠೆಗೆ ತಿಳಿಸಿ. ನಾಯಿಗೆ ಪ್ರಚಾರವಾದರೂ ಸಿಗುತ್ತೆ.

ಹ್ಹ...ಹ್ಹ.. ಅದು ಥೇಟ್ ನರಿ ಊಳಿಡುವ ರೀತಿ ಕೇಳಿಸುತ್ತೆ! ನಾಯಿ ಎಂದ ಮೇಲೆ ಬೊಗಳುವ ಪದವೇ ಮೊದಲು ನೆನಪಾಗೋದು! ಹಾಗಾಗಿ ಬೊಗಳುತ್ತೆ ಅಂತ ಅಂದೆ :) ಹೀಗೂ ಉಂಟೆ!?ಗೆ ತಿಳಿಸುತ್ತೇನೆ ಬಿಡಿ, :) :-)

ನಾಡಿಗರೆ ಹಾಗೂ ಪ್ರಸನ್ನರೆ, ನಮ್ಮ ಕಡೆ ನಾಯಿ ಊಊ... ಊಊ.. ಅ೦ಥ ಊಳಿಟ್ಟರೆ, ಅದು ಯಾರ ಮನೆ ಕಡೆ ಮುಖ ಮಾಡಿ ಕೂಗುತ್ತದೋ, ಅವರ ಮನೆಯಲ್ಲಿ ಯಾರಾದರೊಬ್ಬರು ಶಿವನಪಾದ ಸೇರುತ್ತಾರೆ ಎ೦ಬ ಪ್ರತೀತಿ ಇದೆ! ( ಪ್ರತೀತಿ) ಇದನ್ನೂ ಹೀಗೂ ಉ೦ಟೇ! ಗೆ ಸೇರಿಸಬಹುದು!

ಆ ನಾಯಿ ಕೆಲವು ವರ್ಷಗಳಿಂದ ಎದುರು ಮನೆಯ ಕಡೆ ತಿರುಗಿಕೊಂಡು ಕೂಗುತ್ತಿದೆ. ಮೂರು ವರ್ಷದಲ್ಲಿ ಇಬ್ಬರು ಯಮನ ಪಾದ ಸೇರಿದ್ದಾರೆ! :) ಹೀಗೂ ಉಂಟೆ!ಗೆ ನಾಯಿಯ ಜೊತೆ ಇನ್ನೊಂದು ಕುತೂಹಲಕರ ವಿಷಯ! :)

>>ನಾವಡರೆ, ನೀವಂದಂತೆ ನಮ್ಮ ಮನೆಯ ಹತ್ತಿರ ಒಂದು ನಾಯಿ ಇತ್ತು. ಅದು ಪ್ರತೀ ಸಲ ಮುಸ್ಲಿಮರು ಪ್ರಾರ್ಥನೆ ಮಾಡುವಾಗಲು ಓssss..ಓssss.. ಊsss... ಎಂದು ಕೂಗುತ್ತಿತ್ತು! :) ;-)<< ಪ್ರಸನ್ನ ಈ ಕಥೆಯಲ್ಲಿ ಹಾಗೂ ನಿಮ್ಮ ಪ್ರತಿಕ್ರಿಯೆಯಲ್ಲಿ ಧರ್ಮದ ವಿಚಾರ ಏಕೆ ತ೦ದಿದ್ದೀರಿ? ಇದು ವಿಷಯಾ೦ತರ ಅಲ್ಲದೆ, ಮು೦ದೆ ಅನಾವಶ್ಯಕ ಚರ್ಚೆಗೆ ಹಾದಿ ಮಾಡಿಕೊಟ್ಟೀತು!

ನನಗೆ ಅದರಲ್ಲೇನೋ ತಮಾಷೆ ಇದೆ ಅಂತ ಅನಿಸಿತು. ಹಾಗಾಗಿ ಬರೆದೆ. ವಿಷಯಾಂತರವಾಗಿದ್ದರೆ ಕ್ಷಮಿಸಿ. ಹಾಗೆಯೇ ಧರ್ಮದ ವಿಚಾರ ತಂದುದರಿಂದ ಯಾರ ಮನಸ್ಸಿಗಾದರೂ ನೋವಾದರೆ ದಯವಿಟ್ಟು ದಯವಿಟ್ಟು ನನ್ನನ್ನು ಕ್ಷಮಿಸಿ, -ಪ್ರಸನ್ನ.ಎಸ್.ಪಿ

ವಿಷಯಾಂತರವೂ ಇಲ್ಲ. ಏನೂ ಇಲ್ಲ. ನಿಮ್ಮ ಹಾಸ್ಯ ಪ್ರತಿಕ್ರಿಯೆ ಚೆನ್ನಾಗಿಯೇ ಇದೆ. ಅಂತೂ ನಾಯಿಗೂ ಒಂದು ಗತಿ ಕಾಣಿಸಿದರಲ್ಲ. ಟಿವಿ9ಗೆ ಬೇಗ ಹೇಳಿ ಪ್ರಸನ್ನ.