ಹಳೇ ಪೇಪರ್.....ಖಾಲಿ ಬಾಟ್ಲಿ

To prevent automated spam submissions leave this field empty.

ನಿಂಗನ ಫ್ರೆಂಡ್ ಮಹಮ್ಮದ್ ಒಂದು ಸಾರಿ ಪೇಟೆಯಿಂದ ನಮ್ಮ ಹಳ್ಳಿಗೆ ಬಂದಿದ್ದ. ಅದೇನೋ ಹೊಸ ವ್ಯಾಪಾರ ಕಲಿಸ್ತೀನಿ ಅಂತಾ, ನಿಂಗ ಇವನು ನಿಂಗೆ ಹೆಂಗಲಾ ಫ್ರೆಂಟ್. ಹೇ ಸಾನೆ ವರ್ಷದಿಂದ ನಮ್ಮ ಅಂಗಡಿ ಹಳೇ ಪಾತ್ರೆ ಇವನೇ ಒಯ್ಯೋದು ಕಲಾ ಅಂದ. ಕೊಟ್ಟೋನು ದರ್ಬೇಸಿ ಇದ್ದಂಗೆ ಇದಿಯಾ, ತಗೊಂಡೋನು ಹೆಂಗ ಅವ್ನೆ ನೋಡಲಾ ಅಂದಾ ಸುಬ್ಬ.  ಚಾ ಅಂಗಡಿ ನಿಂಗಂಗೆ ಬರೀ ಚಾ ಹಾಕಿ ನಿನ್ನ ಜೀವನ ಚಲ್ಟದ ತರಾ ಆಗೈತೆ ಅಂದ. ಕಟ್ಟಿಗೆ ಕಿಸ್ನಂಗೆ ಲೇ ಕಾಡು ನಾಶ ಆದ ಮ್ಯಾಕೆ ಏನಲಾ ಮಾತ್ತೀಯಾ, ಲೇ ಸುಬ್ಬ ಹಿಂಗೆ ಸುಮ್ನೆ ಕೂತಿರೋ ಬದಲು ಒಂದು ಗೋಣಿ ಚೀಲ ಕೊಡಿಸ್ತೀನಿ ವ್ಯಾಪಾರ ಮಾಡುವಂತೆ ಬಾ ಅಂದ. ಗೋಣಿ ಚೀಲದಾಗೆ ಏನಲಾ ಯಾಪಾರ. ಹಳೇ ಕಬ್ಬಿಣ, ಪ್ಲಾಸ್ಟಿಕ್, ಪೇಪರ್, ಖಾಲಿ ಬಾಟ್ಲಿ ಅಂದ ಮಹಮ್ಮದ್. ಲೇ ಏನ್ಲಾ ಇವನು ಹಳ್ಯಾಗೆ ನನ್ನ ಇಮೇಜ್ ಹಾಳು ಮಾಡ್ತಾನೆ ಕಲಾ ಅಂದಾ ಸುಬ್ಬ. ಆಮೇಲೆ ರಂಗಿ ಮದುವೆ ಆಗಕ್ಕಿಲಾ ಕಲಾ ಅಂದ. ಲೇ ಇವರ ಅಪ್ಪ ಏನ್ ಮಾಡ್ತಾ ಇದಾನೆ ಅಂದ ಸುಬ್ಬ. ಅವರಪ್ಪ ಗುಜರಿ ಅಂಗಡಿ ಮಡಗಿದಾನೆ ಅಂದ ನಿಂಗ. ಮಗಾ ಅದಕ್ಕೆ ಬಿಸಿನೆಸ್ ಮಾಡಕ್ಕೆ ಬಂದಾವ್ನೆ ಅಂದೆ.

ರೀ ಮಹಮ್ಮದ್, ಏ ನಿನ್ ಅಪ್ಪನ್ ಗುಜರಿ ದುಖಾನ್ ಎಲ್ಲಿದೆ, ಕಲಾಸಿಪಾಳ್ಯ ಮಸೀದಿ ಪಕ್ಕದಾಗೆ  ಐತೆ. ಬೆಂಗಳೂರೆಲ್ಲಾ ಗುಡಿಸಿ ಗುಂಡಾಂತರ ಮಾಡಿದೀವಿ. ಅದಕ್ಕೆ ಇಲ್ಲಿ ಬಂದಿದೀನಿ. ನಿಮಗೂ ಕಾಸು ಆಯ್ತದೆ. ಹಂಗೇ ನಮಗೂ ಆಯ್ತದೆ , ಏನು. ಕಾಸು ಅಂದ ಮಹಮ್ಮದ್.  ಯಡಿಯೂರಪ್ಪನ ಮನೆ ಪಕ್ಕಾ ನಮದ್ಊಕೆ ಘರ್ ಐತೆ ಅಂದ ಮಹಮ್ಮದ್. ಅಯ್ಯೋ ನಿನ್ ಮಕ್ಕೆ ನಾಟಿ ಕೋಳಿ ಹಾಫ್ ಬಾಯ್ಲಡ್ ಆಮ್ಲೇಟ್ ಹುಯ್ಯಾ. ನಮಗೂ ಹೇಳ್ ಕೊಡಲಾ ಬಿಸಿನೆಸ್ ಅಂದಾ ಸುಬ್ಬ.

ಸರಿ ಬೆಳಗ್ಗೆನೆ ಸುಬ್ಬಂಗೆ ಹಳೇ ಸೈಕಲ್ ಆ ಕಡೆ, ಈ ಕಡೆ ಹರಿದಿರೋ ಗೋಣಿ ಚೀಲ. ಚೈನ್ ಆವಾಗವಾಗ ಕಳಚೋದು. ಚಕ್ಕೆ ತಗೊಂಡು ಎಲ್ಲಿ ಬೇಕಂದ್ರೆ ಅಲ್ಲಿ ಹಾಕೋನು. ರಂಗಿ ನೋಡಿ ಏ ಥೂ. ನಿನ್ನ ಜನ್ಮಕ್ಕೆ ಒಂದಿಷ್ಟು ಬೆಂಕಿಹಾಕ ಅನ್ನೋಳು. ನಿನ್ನ ಮದುವೆ ಆದ್ರೆ ನಂಗೂ ಗುಜರಿಗೆ ಹಾಕ್ತೀಯಾ ಬಡ್ಡೆ ಐದ್ನೆ ಅಂದ್ಲು. ಬೇಜಾರಾಗಿ ಒಂದು ಫುಲ್ ಬಾಟಲ್ ಸುಕ್ಕಾ ಹೊಡೆದಿದ್ದ. ಸೈಕಲ್ ಗೆ  ಪೆಡ್ಲ್ ಇಲ್ಲ. ಹವಾಯಿ ಚಪ್ಪಲಿ ಬೇರೆ, ಕಾಲು ಜಾರಿ, ಜಾರಿ ಮಗಂದು ಕಾಲು ಅನ್ನೋದು ನಾಯಿ ನಾಲಗೆ ಆದಂಗೆ ಆಗಿತ್ತು. ಮನೆಗೆ ಬಂದು 100ಗ್ರಾಂ ಅರಿಸಿನ ಬಳಿಯೋನು. ಅಡುಗೆಗೆ ಅಂತಾ ಇಟ್ಟಿದ್ದು ಅರಿಸಿನ ಎಲ್ಲಲಾ ಅಂದ್ರೆ ಅವರ ಅವ್ವ. ಮಗಂದು ಕಾಲ್ನಾಗೆ. ಸೈಕಲ್ನಾಗೆ ತಕ್ಕಡಿ ಬೇರೆ. ಬಟ್ಟಿನ ತೂಕನೇ ಸುಮಾರು 30ಕೆಜಿ ಇತ್ತು. ಗರುಡ ಇದ್ದಂಗೆ ಇದ್ದ ಸುಬ್ಬ ನಾಕೇ ದಿನಕ್ಕೆ ಕಸಾಯಿ ಖಾನೆಗೆ ಹಾಕೋ ರೋಗ ಬಂದ ಬಡಕಲು ಎತ್ತು ಆದಂಗೆ ಆಗಿದ್ದ.  ಸರಿ ಬೆಳಗ್ಗೆ 6ಕ್ಕೆ ಹೋಗೋನು. ಹಳೇ ಪೇಪರ್..

ಒಂದು ದಿನ ಸುಬ್ಬ ಸೈಕಲ್ ನ್ನು , ಒಂದು ಸೈಡ್ ಬ್ಲೇಡ್ ಸೆಟ್ ಹೋದ ಬಸ್ ತರಾ ತರ್ತಿದ್ದ. ಯಾಕಲಾ ಸುಬ್ಬ. ಮಗಾ ಇಸ್ಮಾಯಿಲ್ ಅವನ ಬಸ್ಸಿಂದು ಎರಡು ರಿಮ್ ಹಾಕವ್ನೆ, ಹಂಗೇ ಕುಲುಮೆ ಕರಿಯ  ಎತ್ತಿನ ಗಾಡಿದು ದಪ್ಪದ್ದು ಎರಡು ಕಬ್ಬಿಣ ಹಾಕವ್ನೆ ಭಾರ ತಡೆಯಕ್ಕೆ ಆಯ್ತಾ ಇಲ್ಲಾ ಕನ್ಲಾ ಅಂದ. ಇದನ್ನೆಲ್ಲಾ ಮಹಮ್ಮದ್ಗೆ ಕೊಟ್ರೆ ನೂರು ರೂಪಾಯಿ ಒಂದು ಪ್ಯಾಕೆಟ್ ಮತ್ತು ಉಪ್ಪಿನಕಾಯಿಗೆ ಆಗೋ ವಷ್ಟು ಹಣ ಕೊಟ್ಟು ತಾನು ಸಾನೇ ಕಾಸು ಮಾಡೋನು.

ಒಂದು ದಪಾ ಸುಬ್ಬ ಬೆಳಗ್ಗೆನೇ ಗೌಡನ ಮನೆ ತಾವ ಹೋಯ್ತಾ ಇದ್ದ. ಲೇ ಬಾರಲಾ ಇಲ್ಲಿ ಅಂತಾ ಹಂಡೆ, ಹಂಗೆ ಹಿಂದಗಡೆಗೆ ಹೋಗೋಕ್ಕೆ ಅಂತಾ ಇಟ್ಟಿದ್ದು ತುಕ್ಕು ಹಿಡಿದ, ತೂತು ಆಗಿದ್ದ ಸಣ್ಣ ಕಬ್ಬಿಣದ ಬಕ್ಕಿಟ್ಟು ಹೊರಸಿದ್ದ. ಗೌಡ್ರೆ ನಾನು ಸುಬ್ಬ. ಏ ಥೂ. ನಿಂಗೇನಲಾ ಆತು ಅಂದು ತಬ್ಬುಕೊಂಡು ಮುತ್ತಿಕ್ಕಿದ್ದ. ಮಗಾ ಸುಬ್ಬ ಒಂದು ವಾರದ ತನಕ ಮೈಗೆಲ್ಲಾ ಊದಬತ್ತಿ, ನೀಲಗಿರಿ ಎಣ್ಣೆ ಹಚ್ಕಂಡು ಓಡಾಡೋನು. ವಾಸ್ನೆ ಎಫೆಕ್ಟ್, ಒಂದು ದಿನ ನೋತ್ತೀನಿ ಸುಬ್ಬನ ಬದಲು ಮಹಮ್ಮದ್ ಸೈಕಲ್ ಹೊಡಿತಾ ಇದ್ದ. ಮಗಾ ಸುಬ್ಬಾ ಕಾರ್ನಾಗೆ ಬಂದ. ಇಸ್ಮಾಯಿಲ್ನ ಡ್ರೇವರ್ ಆಗಿ ಇಟ್ಕಂಡಿದ್ದ. ಜರ್್್್್್್ ಅಂತಾ ಬಂದು ಗೌಡಪ್ಪನ ಮುಂದೆ ಬ್ರೇಕ್ ಹಾಕಿದ ಇಸ್ಮಾಯಿಲ್. ಅಲ್ಲಿದ್ದ ಸಗಣಿ ಗೌಡಪ್ಪನ ಮುಖದ ಮ್ಯಾಕೆ. ಥೂ ಥೂ ಅಂದ ಗೌಡಪ್ಪ.ಇದೆಲ್ಲಾ  ಹೆಂಗಲಾ ಸುಬ್ಬ. ಏನ್ ಸಗಣಿನಾ, ಅಲ್ಲಲಾ ಕಾರು. ಮಗಾ ಇವರಪ್ಪ ಎಲ್ಲರಿಗೂ ಮುಂಡಾಯಿಸೋನು. ನಾನು ಇವನ ಅಂಗಡಿಗೆ ಬರೋರಿಗೆಲ್ಲಾ ಕೆಜಿಗೆ 2ರೂಪಾಯಿ ಕಮ್ಮಿ ಕೊಡ್ತೀನಿ ಅಂದೆ. ಎಲ್ಲಾ ಈಗ ನನ್ನ ಕಡೆ ತಿರುಗಾವೆ ಹೆಂಗೆ. ಅಟ್ಟೊತ್ತಿಗೆ ಗೌಡಪ್ಪ ಸುಬ್ಬಾ.......... ಅಂತಾ ಓಡಿ ಬಂದು ಜಾರಿ ದಪ್ ಅಂತಾ ಸುಬ್ಬನ ಮ್ಯಾಕೆ ಬಿದ್ದ. ಅವನ ಸಗಣಿ ಸುಬ್ಬಂಗೂ, ನಮ್ಮ ಮನೆ ಮುಂದೆ ನನ್ನ ಹೆಂಡರು ಅವ್ವ ಒಂದು ವರ್ಷದಿಂದ ಸುಮ್ನೆ ಕೂತೈತೆ. ಅದನ್ನು ಗುಜರಿಗೆ ಹಾಕ್ತೀನಿ ಕೆಜಿಗೆ ಎಷ್ಟಲಾ ಅಂದ. ಸುಬ್ಬ ಮೂರ್ಛೆ ಹೋಗಿದ್ದ. ಹಿಂಗೆ ಬಿಟ್ಟರೆ ಮಗಾ ಗೌಡಪ್ಪ ಹೆಂಡರನ್ನು ಕೆಜಿ ಲೆಕ್ಕದಾಗೆ ಹಾಕೋನೆ ಅಂದ ಕಟ್ಟಿಗೆ ಕಿಸ್ನ.

 

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು