ಹಾಲಪ್ಪನ ಅವಾಂತರ

To prevent automated spam submissions leave this field empty.

ಬೆಳ್ಳಂ ಬೆಳಗ್ಗೆ  ಶಿವಮೊಗ್ಗ ಪಟ್ಟಣದಲ್ಲಿ ಪೇಪರ್ ಹಾಕೋ  ಹುಡ್ಗ ಕಿಟಿಕಿ ಇಂದ "ಸಾರ್ ಗೊತ್ತಾ ನ್ಯೂಸ್ , ಹಾಲಪ್ಪ ಹಲ್ಕಾ ಕೆಲಸ ಮಾಡಿ
ಕೊನೆಗೂ ಸಿಗಾಗ್ಕೊಂಡ " ಅಂತ ಕೂಗಿ ಹೇಳ್ದ.

ಯಾರೋ ಕಪಾಳಕ್ಕೆ ಹೊಡೆದು ಎಬ್ಬಿಸಿದಂಗೆ ಆಯಿತು "ಕೂಳಿನ ಬೇಟೆ " ಸಂಪಾದಕ,reporter and reader ಕಣ್ಣಪನಿಗೆ.

ಸದ್ಯ ಪೇಪರ್ ಸುದ್ದಿ ಇನ್ನು ಆಗಿರಲ್ಲಿಲ್ಲ. ಡೆಕ್ಕನ್ ,times ನಲ್ಲಿ ಬರೋಕ್ಕೆ ಮುಂಚೆ ತನ್ನ ಪತ್ರಿಕೆ ನಲ್ಲಿ ಬರಬೇಕು ಅಂತ  ಕಣ್ಣಿನ ಪಿಸ್ರು ತ್ಯಕೊಳದೆ  ಬಾಯನ್ನು ತೊಳಿದೆ, ಕ್ಯಾಮೆರಾ ಕತ್ತಿಗೆ, ಹೆಗಲಿಗೆ ಭುದ್ದಿಜೀವಿಗಳ ಬ್ಯಾಗ್ ಏರಿಸ್ಕೊಂಡು ಹೊರಟ. ದಾರಿ ಉದ್ದಕ್ಕೂ ಜನ ಮೂಗು ಮುಚ್ಕೊಂಡು ಕಣ್ಣಪನಿಂದ ದೂರ ಹೋಗ್ತಿದ್ರು,ಕೆಲವು ಹೆಂಗಸರು ಕಾರ್ಪೋರೇಶನ್ ಲಾರಿ ಬಂತು ಅಂತ  ಕಸ ಹಿಂಡ್ಕೊಂಡು ಹೊರಗೆ ಬಂದ್ರು.
ಕಣ್ಣಪ್ಪ ಬಾಯ್ತೊಳಿದಇದ್ರೆ ಯೆನಾಗೊತ್ತೆ ಅಂತ ಅಲ್ಲಿ ಜನಕ್ಕೆ ಅವತ್ತೇ ಗೊತ್ತಾಗಿದ್ದು .


ದಾರಿಲಿ ಬರಿ ಇದೆ ಸುದ್ದಿ , ಕಣ್ಣಪ ಪೋಲಿಸ್ ಸ್ಟೇಷನ್ ಇಷ್ಟೊತ್ತಿಗಾಗಲೇ ಬರಬೇಕಿತ್ತು ಇವತ್ತು ಯಾಕೋ ಇನ್ನು ದೂರ ದೂರ ಅನ್ಸ್ತಿದೆ  ಅಂತ
ಅನ್ನ್ಕೊಂಡ್ತಿದ್ದ. ಊರಿಗೆ ತುಂಬಾ ಬೇಕಾಗಿರೋ ಹೆಣ್ಣುಮಗಳು ಸು'ಶೀಲ' ದಾರೀಲಿ ಸಿಕ್ಕಿದಳು.ಕಣ್ಣಪ್ಪ ಬಹುಶ ಇವಳಿಗೆ ಹಾಲಪ್ಪನ ವಿಷಯ
ಗೊತ್ತಿರೊತ್ತೆ ಅಂತ ಕೇಳಿದ." ಹಾಲಪ್ಪನ ತಾವ ನನ್ನ ವ್ಯವಾರ ಏನ್ ಇಲ್ಲ ಸಾಮಿ" ಅಂತ ಸ್ಪಷ್ಟವಾಗಿ ಹೇಳಿದಳು.ಕಣ್ಣಪನಿಗೆ ಮುಂಚೆ ಇಂದಲೂ ಇವಳ ಬಗ್ಗೆ ಆಸಕ್ತಿ ಜಾಸ್ತಿ , ಇನ್ಯಾತಿಕ್ಕು ಅಲ್ಲ , ಟೌನ್ ನಲ್ಲಿ first AIDS ಕೇಸ್ ರಿಪೋರ್ಟ್ ಮಾಡೋ ಅಸೆ ಅದ್ದಿಕ್ಕೆ ಸು'ಶೀಲ'
ಫ್ಯಾಮಿಲಿ ಡಾಕ್ಟರಗೆ ಆಗಾಗ ಫೋನ್ ಮಾಡ್ತಿದ್ದ.

 

ಬೇತಾಳನ ಕಟ್ಟೇಲಿ ಇಬ್ರು ಹೆಂಗಸರು ಮಾತಾಡ ಇದ್ದರು, "ಅವತ್ತೇ ಹಾಲಪ್ಪ ಕದ್ದು ಮುಚ್ಚಿ  ಮಾಡೋ ಕೆಲಸ ನ ನಾನು ನೋಡಿದೆ , ಎಲ್ಲಾ ಹೆಣ್ಣು ಮಕ್ಕಳುಗೂ ಹೇಳ್ದೆ , ಯಾರು ನಂಬಲಿಲ್ಲ". ಓಹೋ ... ಏನೋ ಜ್ಯೋರಾಗೆ ನಡದಿದೆ ಅಂತ ಮನಸಿನಲ್ಲೇ ಖುಷಿ ಪಟ್ಕೊಂಡ ಕಣ್ಣಪ್ಪ.

 

ಅಂತು ಬಂತು ಪೋಲಿಸ್ ಸ್ಟೇಷನ್. ಹಾಲಪ್ಪನ ಕುಟುಂಬ ದವರು ಹೊರಗಡೆ ಅಳುತ್ತಿದ್ರು .


Inspector ಬುಲ್ಲಯ್ಯ ಮೀಸೆ ತಿರುವಿ ಬಾಯಿಗೆ ಬಂದಂತೆ ಹಾಲಪ್ಪನ ಸಂಬಂಧಿಗಳಿಗೆ ರೇಶನ ಕಾರ್ಡ್ ನಲ್ಲಿ ಇರೋರ್ ಹೆಸರೆಲ್ಲ ಹೇಳ್ತಾ ಬೈತಿದ್ದ
" ಅಮ್ಮ " ಅಕ್ಕ" ತಂಗಿ " ಹೀಗೆ .

 

ಕಣ್ಣಪ್ಪ , inspector ಯಾಕೋ ಶಾನೆ ಕೋಪದಲ್ಲಿ ಇದ್ದಾನೆ ಇವನ್ನ ಕೇಳೋದ್ ಬೇಡ ಅಂತ ಅನ್ನ್ಕೊಂಡ.  lockup ಕಿಟಕಿ ಸ್ಟೇಷನ್ ಹಿಂಬಾಗಕ್ಕೆ ಇತ್ತು , ಸಂಪಿಗೆ ಮರದ ರೆಂಬೆ  ಕಿಟಕಿ ಮುಂದೆ ಸಾಗಿತ್ತು. ಕಣ್ಣಪ್ಪ ಕಾಳಿದಾಸನ ತರಹ ಮರ ಹತ್ತಿ ರೆಂಬೆ ಮೇಲೆ ಕೂತ್ಕೊಂಡ. ಹಾಲಪ್ಪ ನ ನೋಡಿದ. "ಹಾಲಪ್ಪ ನಾನು ನಿಂಗೆ ಸಹಾಯ ಮಾಡ್ತೀನಿ" ಅಂತ ಹೇಳ್ದ ಆದ್ರೆ ನಡೆದ ಸಂಗತಿ ತಿಳಿಸು ಎಂದ.

 

ಹಾಲಪ್ಪನಿಗೆ ಈ ಪತ್ರಕರ್ತರು  ಬೇರೆಯವರ ಮನೆಗೆ ಬೆಂಕಿ ಬಿದ್ದರೆ ಅ ಬೆಂಕಿನಲ್ಲಿ ಬೀಡಿ ಹಚ್ಚಿಸಕೊಳ್ತಾರೆ ಅಂತ ಗೊತ್ತಿತ್ತು ಅದ್ರು ಕಣ್ಣಪ್ಪನಿಗೆ ಹೇಳತೊಡಗಿದ, "ಸರ್ ಇನ್ಮೇಲೆ ನಾನು ಹೀಗೆ ಮಾಡೋಲ್ಲ ನನ್ನ ಬಿಟ್ಬಿಡೋಕ್ಕೆ  ಹೇಳಿ ಸರ್ ! ನಾನು ಯಾವಾಗಲು ಮಾಡೋದೇ, ಆದ್ರೆ ಇವತ್ತು inspector ಹೆಂಡ್ತಿಅಂತ ಗೊತ್ತಿಲ್ಲದೇ ......."

 

ಕಣ್ಣಪ ಆಶ್ಚರ್ಯ ದಿಂದ "ಗೊತ್ತಿಲ್ಲದೇ ......" .

 

" ನಾನು ಹಾಲಿಗೆ ನೀರು ಬೆರ್ಸೋದನ್ನ ಅವರ ಹೆಂಡ್ತಿ ನೋಡಿ ಬಿಟ್ಟರು ಸರ್, ನನ್ನ ಬಿಡಿಸಿ ಸರ್ " ಅಂದ ಹಾಲಪ್ಪ .


 ಕಣ್ಣಪ್ಪ ಕೂತಿದ್ದ ಟೊಂಗೆ ಮುರಿತು, ಧಪ್ಪ್ ಅಂತ ಕಳಗೆ ಬಿದ್ದ . inspector ಬುಲ್ಲಯ್ಯ "ಅವನನ್ನ ಬಿಡಿಸೊಕ್ಕೆ ಈ ನನ್ ಮಗ ಬಂದವನೇ !! ತಳ್ರೋ ಒಳ್ಳಿಕ್ಕೆ "ಅಂದ.


ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸಕ್ಕತ್ ಕೆಟ್ನಾಗಿದೆ.. (ಶಿವಮೊಗ್ಗ ಹುಡುಗರ ಭಾಷೆಯಲ್ಲಿ.. ಸಕ್ಕತ್ ಚೆನ್ನಾಗಿದೆ.. ಅಂತ. ನಿಮ್ಗೆ ಗೊತ್ತಿರಬೇಕಲ್ಲಾ .. :)) ನಿಮ್ಮೊಲವಿನ, ಸತ್ಯ.. :)

ತುಂಬಾ ಚೆನ್ನಾಗಿತು, ಏನೋ ಸಿಕ್ತು ಟೈಮ್ ಪಾಸು ಗೆ ಅಂತ ಕುಶಿಯಾಗಿಧೆ, tv9 ಆಫೀಸ್ ನಲ್ಲೆ ಓಪನ್ ಮಾಡೋಣ ಅಂತ ಡಿಸೈಡ್ ಮಾಡಿ ಬ್ರೌಸೆರ್ ಕ್ಲಿಕ್ ಮಾಡ್ತ್ಹಿಧ ಹಾಗೆ ಎಂಡಿಂಗ್ ನೋಡಿ ಎಲ್ಲಾ ಕ್ಲೋಸ್ ಮಾಡಿಧೆ.

ಕ್ಯಾಚಿ ಹೆಡ್ಡಿಂಗ್ ಅಂತ ಓದಕ್ಕೆ ಕುಳಿತ್ರೆ, ಕಾಲೇ ಎಳ್ದ ಅನುಭವ. ಸೂಪರ್ ಭಾಷಾಪ್ರಿಯರೆ ! - ಅರವಿಂದ