ನೆಲೆನಾಡಿಗಾಗಿ - ನೃತ್ಯ ಮಿಲನ!

To prevent automated spam submissions leave this field empty.

ಮೊದಲಿಗೆ ಒಂದು ವಿವಾದಾತ್ಮಕ ಪ್ರಶ್ನೆ:  ಬೆಂಗಳೂರಿನಲ್ಲಿ ತಮಿಳರು ಒಂದು charity  ಕಾರ್ಯಕ್ರಮ ಮಾಡ್ತಾರೆ. ಅದರ ಸಂಗ್ರಹಣೆಯೆಲ್ಲಾ ತಮಿಳು ನಾಡಿನ ಶಾಲೆಗಳಿಗೆ ಹೋಗುತ್ತದೆ. ಇದು ಸರಿಯೇ, ತಪ್ಪೇ?

 

ಅವರು ಹುಟ್ಟಿ ಬೆಳೆದ ಊರಿನ ಬಗ್ಗೆ ಅವರಿಗೆ ಅಭಿಮಾನ ಇರುವುದು ಸಹಜ. ಆದರೆ ತಮ್ಮ ಇಂದಿನ ಅನ್ನವನ್ನು ನೀಡುತ್ತಿರುವ ಕನ್ನಡ ನಾಡಿನ ಶಾಲೆಗಳಲ್ಲೂ ಓದುತ್ತಿರುವ ಬಡ ಮಕ್ಕಳ ಕಷ್ಟಕ್ಕೂ ಅವರು ಒಂಚೂರು ನೆರವಾದಲ್ಲಿ ಒಳ್ಳೆಯದಲ್ಲವೇ? ಇದೇ ಯೋಚನಾಲಹರಿಯಲ್ಲಿದ್ದ ನನಗೆ ಇತ್ತೀಚೆಗೆ ಕೇಳಿದ ಪದ "ನೆಲೆನಾಡು" ಬಹಳ ಹಿಡಿಸಿತು.

 

ಉತ್ತರ ಕ್ಯಾಲಿಫ಼ೋರ್ನಿಯಾ ಕನ್ನಡ ಕೂಟ ತಾಯ್ನಾಡಿಗಾಗಿ ಬಹಳ ಶ್ರಮಿಸಿದೆ. ದೂರದೇಶದಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಾ, ಕನ್ನಡದ ಕಲಾವಿದರು, ಸಾಹಿತಿಗಳನ್ನು ಈ ದೇಶಕ್ಕೆ ಪರಿಚಯಿಸುತ್ತಲೇ, ಆ ಮೂಲಕ ಸಂಗ್ರಹವಾದ ಧನವನ್ನು ಭಾರತದ, ಕರ್ನಾಟಕದ ಸಂಸ್ಥೆಗಳಿಗೆ ಸಹಾಯ ಮಾಡಲು ಬಳಸಿದೆ. ಆದರೆ ಇಲ್ಲಿನ ಕನ್ನಡಿಗರು ತಮ್ಮ ನೆಲೆನಾಡಿಗೆ ಕೂಡ ಸಹಾಯ ಮಾಡಬೇಕೆಂಬ ಉದ್ದೇದಿಂದ ಹಮ್ಮಿಕೊಂಡ ಕಾರ್ಯಕ್ರಮ - ನೃತ್ಯ ಮಿಲನ.

 

ನೃತ್ಯ ಮಿಲನ ಕಾರ್ಯಕ್ರಮದಿಂದ ಸಹಾಯ ಲಭ್ಯವಾಗುತ್ತಿರುವುದು ಸ್ಟಾನ್ಫ಼ೋರ್ಡ್ ನಲ್ಲಿರುವ ಲ್ಯುಸಿಲ್-ಪ್ಯಾಕರ್ಡ್ ಮಕ್ಕಳ ಆಸ್ಪತ್ರೆಯ ಕ್ಯಾನ್ಸರ್ ವಿಭಾಗಕ್ಕೆ. ವಿಶ್ವದ ಅತ್ಯುನ್ನತ ಆಸ್ಪತ್ರೆಗಳಲ್ಲಿ ಒಂದಾದ ಲ್ಯುಸಿಲ್-ಪ್ಯಾಕರ್ಡ್ ಮಕ್ಕಳ ಆಸ್ಪತ್ರೆಯ ಬಗ್ಗೆ ಒಂದು ನೆನಪು - ನಮ್ಮ ಆತ್ಮೀಯರೊಬ್ಬರ ಕಂದಮ್ಮ ತನ್ನ ಕೊನೆಯುಸಿರೆಳೆದದ್ದು ಇಲ್ಲಿ. ಆ ಮಗುವಿನ ಕೊನೆಯ ದಿನಗಳಲ್ಲಿ ಆಸ್ಪತ್ರೆಯು ವೈದ್ಯಕೀಯ ಸಿಬ್ಬಂದಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ರೀತಿ, ಆ ಕಂದಮ್ಮಗಳ ತಂದೆ-ತಾಯಿ-ಬಳಗಕ್ಕೆ ನೀಡುತ್ತಿದ್ದ ಆಸರೆ, ಅಲ್ಲಿನ ಸೌಲಭ್ಯಗಳ ಪರಿಚಯವಾಯಿತು. ಅಲ್ಲಿ ಪ್ರತಿಯೊಬ್ಬರಿಗೂ ಲಭಿಸುವ ಅತ್ಯಂತ ಹೈ-ಟೆಕ್ ಸೌಲಭ್ಯದ ಜೊತೆಗೆ, ಅಲ್ಲಿನ ಸಿಬ್ಬಂದಿಯ ಮಾನವೀಯ ನಡವಳಿಕೆ, ಅವರು ತೋರಿಸುವ ಪ್ರೀತಿ ನಿಜಕ್ಕೂ ಮರೆಯಲಸಾಧ್ಯ. 

 

ಇಂತಹ ಒಂದು ಸಂಸ್ಥೆಗೆ ಸಹಾಯ ಮಾಡಲು ಆಶಯವಿದ್ದಲ್ಲಿ, ನೀವು ಬೇ-ಏರಿಯಾಕ್ಕೆ ಹತ್ತಿರವಿದ್ದಲ್ಲಿ, ಅಕ್ಟೋಬರ್ ೩೦ರ ಸಂಜೆ ಹೇವರ್ಡ್ ಗೆ ಬನ್ನಿ. ಒಂದು ಸಂಜೆ ಚೇತೋಹಾರಿ ವಿವಿಧ ಭಾರತೀಯ ನೃತ್ಯ ಪ್ರಾಕಾರಗಳ ಸಮ್ಮಿಲನವನ್ನು ನೋಡಿ ಆನಂದಿಸಿ. ವಿವರಗಳು http://kknc.org ನಲ್ಲಿ ಲಭ್ಯ.

 

 

ಲೇಖನ ವರ್ಗ (Category):