ಇದನ್ನ ಹೀಗೆ ಹೇಳಿದ್ರೆ ಹೇಗೆ?

To prevent automated spam submissions leave this field empty.

ಇದನ್ನ ಹೀಗೆ ಹೇಳಿದ್ರೆ ಹೇಗೆ?
ಮುಚ್ಚಿದ್ದ ಬಾಗಿಲ ಮೇಲೆ ಮೃದುವಾಗಿ ತಟ್ಟಲೋ ಬೇಡವೋ ಎಂಬಂತೆ ’ಟಕ್ ಟಕ್’ ಎಂದು ಬಾರಿಸಿದ ಯುವಕ.
ಬಾಗಿಲು ತೆರೆದು ಇಣುಕಿ ನೋಡಿದ ಹೆಣ್ಣು, ನಂತರ ಪೂರ್ಣವಾಗಿ ಬಾಗಿಲು ತೆರೆದಳು.
ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಿದ್ದರು. ಮನದಲ್ಲೇ ಮಾತುಗಳು ಹರಿದಾಡುತ್ತಿತ್ತು.
’ನಿಮ್ಮೊಂದಿಗೆ ಮಾತನಾಡಬೇಕಿತ್ತು’ ಎಂದಿತಾ ಯುವಕನ ಮನ.
’ಇಷ್ಟು ದಿನ ಇಲ್ಲದ ಧೈರ್ಯ ಈಗೆಲ್ಲಿಂದ ಬಂತೋ? ಅಲ್ಲಾ, ನೆನ್ನೆ ನಿನ್ ಜೊತೆ ಮಾತಾಡಬೇಕು ಅಂತ ಕಾಫಿಗೆ ಕರೆದುಕೊಂಡು ಹೋಗಿ, ಏನೂ ಮಾತಾಡಲೇ ಇಲ್ಲಾ?’
’ಮೂಡ್ ಔಟಾಗಿತ್ತು. ನಾಳೆ ಹೇಳ್ತೀನಿ ಅಂತ ಹೇಳಿದ್ದೆನಲ್ಲಾ? ... ಏಕೆ ನನ್ನ ಮೇಲೆ ಮುನಿಸೇ?’
’ಬೇಡ, ಬೇಡಾ .. ಹಾಗೆ ನೋಡಬೇಡ. ನೀನು ಹಾಗೇ ನೋಡುತ್ತಿರೆ ನನಗೆ ಮಾತೇ ಹೊರಡುವುದಿಲ್ಲ. ನಿನ್ನ ಬಾಯಿಂದ ಮುಂದೆ ಬರುವ ಮಾತುಗಳಿಗೆ ಮರುಳಾಗಿ, ಕರಗಿ ನೀರಾಗಿ ಹೋಗುವೆ’
’ಏನು? .... ಬೀದೀಲ್ಲೇ ಮಾತೇನು? ಒಳಗೂ ಕರೆಯುವುದಿಲ್ಲವೇ? ನಾನು ಮಾಡಬಾರದ್ದೇನು ಮಾಡಿದ್ದೇನೆ?’
’ಇದರಲ್ಲಿ ನಿನ್ನ ತಪ್ಪೇನಿಲ್ಲ. ತಪ್ಪೆಲ್ಲ ನನ್ನದೇ. ಈಗಲೂ ನೆನಪಿದೆ ಆ ಸಂಜೆ. ನಾನು ಅಂದು ಮನೆಯಲ್ಲಿ ಒಂಟಿಯಾಗಿದ್ದೆ. ಮುಂಬಾಗಿಲು ತೆರೆದಿತ್ತು. ತಂಪಾದ ಗಾಳಿಗೆ ಮೈ ಒಡ್ಡಿ, ಆರಾಮವಾಗಿ ಮುಂಬಾಗಿಲ ಮೆಟ್ಟಿಲಿನ ಮೇಲೆ ಕುಳಿತು ಕಾಫೀ ಕುಡಿಯುತ್ತಿದ್ದೆ. ಆಗ, ನೀ ನೆಡೆದು ಬರುತ್ತಿರುವುದನ್ನು ಕಂಡು, ನನ್ನದೆಯಲ್ಲಿ ಏನೋ ತಳಮಳ. ಎದೆ ನಡುಗಿದಂತಾಗಿ ಕೈಯಲ್ಲಿದ್ದ ಕಾಫೀ ಲೋಟ ಜಾರಿ ಬಿತ್ತು’
’ವಾವ್! ಈ ಮಾತಿಗೆ ಒಂದು ವರ್ಷವಾದರೂ, ಒಂದೊಂದು ವಿಷಯವನ್ನೂ ಇನ್ನೂ ನೆನ್ನೆ ನೆಡೆದ ಘಟನೆಯಂತೆ ಎಳೆ ಎಳೆಯಾಗಿ ಎಷ್ಟು ಸೊಗಸಾಗಿ ಹೇಳುತ್ತಿದ್ದೀಯ. ಕೇಳಲು ಚೆನ್ನಾಗಿದೆ. ಮುಂದುವರೆಸು’
’ಆಯ್ತು.... ಮುಂದೆಲ್ಲ ನಿನ್ನದೇ ಮಾತು. ಮಂತ್ರಮುಗ್ದಳಾಗಿ ಕೇಳುತ್ತ ಕುಳಿತಿದ್ದೆ ನಾ. ನನಗೇ ಅರಿವಿಲ್ಲದೆ ಒಪ್ಪಿಗೆ ಕೊಟ್ಟಿದ್ದೇ ನಾನು ಮಾಡಿದ ತಪ್ಪು. ನನ್ನನ್ನು ಮತ್ತೊಮ್ಮೆ ತಪ್ಪು ಮಾಡಲು ಬಿಡಬೇಡ. ನಿನ್ನನ್ನು ಒಳಗೆ ಕರೆದರೆ, ನಿನ್ನ ಮಾತಿನ ಮೋಡಿಗೆ ಸಿಲುಕಿ ನಿನ್ನ ಪ್ರಸ್ತಾವನೆಗೆ ’ಅಸ್ತು’ ಎಂದು ಬಿಡುತ್ತಾರೆ ನನ್ನ ಅಪ್ಪ-ಅಮ್ಮ. ಬೇಡ ... ನೀನು ಏನು ಹೇಳ ಹೊರಟಿದ್ದೀಯ ಅದನ್ನು ಇಲ್ಲಿಯೇ ಹೇಳಿ ಜಾಗ ಖಾಲಿ ಮಾಡು.’
’ಅಂದರೇ ನಾನೊಬ್ಬ ಮೋಸಗಾರ. ಬರೀ ಮಾತುಗಾರ ಎಂದೇ ನಿನ್ನ ಭಾವನೆಯೇ ?’
’ಅದನ್ನು ಬಾಯಿಬಿಟ್ಟು ಬೇರೇ ಹೇಳಲೇನು ? ನೀನು ಆ ಸಂಜೆ ಹೇಳಿದ್ದೇನು? ಆದರೆ ಇಂದು ನೀನು ಮಾಡುತ್ತಿರುವುದೇನು? ಕೊಟ್ಟ ಮಾತಿಗೆ ತಪ್ಪಿದ್ದು ನೀನೋ ಇಲ್ಲ ನಾನೋ?’
’ನಿಜ. ಆಡಿದ ಮಾತಿಗೆ ತಪ್ಪಬಾರದಿತ್ತು.... ಒಪ್ಪಿಕೊಳ್ಳುತ್ತೇನೆ ನನ್ನದೇ ತಪ್ಪು ಎಂದು..... ಒಮ್ಮೆ ಕ್ಷಮಿಸಲಾರೆಯಾ ?’
’ಒಮ್ಮೆ? ನಿನಗೆ ಲೆಕ್ಕ ಬರುತ್ತಾ? ಈ ’ಒಮ್ಮೆ’ಗಳು ಎಷ್ಟಾಗಿವೆ ಗೊತ್ತಾ?’
’ಪ್ಲೀಸ್?’
’ನೋಡು .. ನೋಡು. ಅದೇ ನಾನು ಹೇಳಿದ್ದು. ನಿಧಾನವಾಗಿ ನಿನ್ನ ಮಾತಿನ ಮೋಡಿಗೆ ನನ್ನನ್ನು ಸಿಲುಕಿಸದಿರು. ಹೀಗೇ ಮಾತಾನಾಡುತ್ತಿದ್ದರೆ ನಾನು ನಿಜಕ್ಕೂ ಕರಗಿ ಬಿಡುತ್ತೇನೆ.’
’ನನ್ನನ್ನು ಮಾತನಾಡಲೂ ಬಿಡದೆ ಬಾಯಿ ಕಟ್ಟುತ್ತಿರುವೆ. ನೋಡು ನಿಮ್ಮಪ್ಪ ಬಂದರು. ಅವರಿಗೇ ಹೇಳುತ್ತೇನೆ’
’ನಮ್ಮಪ್ಪನ ಮೂಡು ಮೊದಲೇ ಸರಿ ಇಲ್ಲ ... ಕೈ ಕಾಲು ಮುರಿದಾರು ಹುಷಾರು.’
’ಶುಭ ನುಡಿಯೇ ಶಕುನದ ಹಕ್ಕಿ! ಬರೀ ಎಡವಟ್ಟೇ ಮಾತಾಡ್ತೀಯಲ್ಲಾ ? ...’
{ಈಗ ಮಾತುಗಳು ಮಾಮೂಲಿನಂತೆ .... ಮನದಲ್ಲಿ ಅಲ್ಲ !}
ಅವಳಪ್ಪ ಜೋರು ದನಿಯಲ್ಲಿ ’ಏನಪ್ಪ ಸತೀಶ. ಏನು ವಿಷಯಾ? ’
ಸತೀಶ ನುಡಿದ ’ನಿಮ್ಮ ಜೊತೆ ಮಾತಾನಾಡಬೇಕು ಅಂತ ಬಂದೆ ಅಂಕಲ್.... ಅಬ್ಬಬ್ಬ ... ಏನ್ ಅಂಕಲ್, ಒಂದೇ ವಾರದಲ್ಲಿ ಸಕತ್ ಸ್ಲಿಮ್ ಆಗಿರೋ ಹಾಗಿದೆ? ಏನು? ಜೋರಾಗಿ ವ್ಯಾಯಾಮ ಮಾಡುತ್ತಿದ್ದೀರೋ ಹೇಗೆ?’
ಅವಳಪ್ಪ ’ಹಾಗೇನಿಲ್ಲಯ್ಯ. ಸ್ವಲ್ಪ ಜಾಗ್ ಮತ್ತು ವಾಕ್ ಅಷ್ಟೇ. ವಯಸ್ಸಾಯಿತು ನೋಡು’
ಸತೀಶ ’ಏನ್ ಅಂಕಲ್ ... ಯಾರಿಗೆ ವಯಸ್ಸಾಗಿರೋದೂ ... ನಿಮ್ಮ ಮಗಳಿಗಿಂತ ನೀವೇ ಚಿಕ್ಕವರಾಗಿ ಕಾಣ್ತಿದ್ದೀರಾ !’
ಮಗಳು ಒಳಗಿನಿಂದಲೇ ದುರುಗುಟ್ಟಿ ನೋಡುತ್ತಿದ್ದಳು (ಅಯ್ಯೋ ಮನೆಹಾಳಾ .. ಬಂದ ಕೆಲಸ ಮುಗಿಸಿ ಹೊರಡು .. ಇಲ್ಲದೇ ಇದ್ರೆ ನಾನೇ ನಿನ್ನ ಕೈ-ಕಾಲು ಮುರೀಬೇಕಾಗುತ್ತದೆ )
ವಿಷಯ ಬದಲಿಸುತ್ತ ’ಅದೆಲ್ಲ ಬಿಡಯ್ಯ ... ಬಾಡಿಗೆ ಎಲ್ಲಿ? ಅದರ ವಿಷಯ ಬಿಟ್ಟು ಮಿಕ್ಕೆಲ್ಲ ಹರಟುತ್ತಾ ಇದ್ದೀಯಲ್ಲ? ನೀನೂ ಇಲ್ಲಿ ಬಂದು ವಕ್ಕರಿಸಿ ಒಂದು ವರ್ಷ ಆಗ್ತಾ ಬಂತು. ನೆಟ್ಟಗೆ ಆರು ತಿಂಗಳು ಬಾಡಿಗೆ ಕೊಡಲಿಲ್ಲ. ನಾವು ಹಿರಿಯರು ಮನೆಯಲ್ಲಿ ಇಲ್ಲದೇ ಇದ್ದಾಗ ಬಂದು ಬೆಣ್ಣೆಯಲ್ಲಿ ಕೂದಲು ತೆಗೆಯೋ ಹಾಗೆ ಮಾತನಾಡಿ, ಮನೆ ಬಾಡಿಗೆಗೆ ಅಂತ ಬಂದಿ. ಬೆಳಿಗ್ಗೆ ನಾನಿಲ್ಲದೇ ಇರೋವಾಗ ನೀನು ಬಿದ್ಗೊಂಡಿರ್ತೀ. ಸಂಜೆಗೆ ನಾನು ಬರೋ ವೇಳೆಗೆ ನಿನ್ನ ಕಾಲ್ ಸೆಂಟರ್ ಕೆಲಸ. ಅಪ್ಪಿ ತಪ್ಪಿ ಸಿಕ್ಕರೂ ಏನೋ ಮಾತಾಡಿ ತಪ್ಪಿಸಿಕೊಂಡು ಓಡ್ತೀಯಾ.’
ಸತೀಶ ಪೆಚ್ಚು ನಗೆ ನಗುತ್ತ ’ಏನ್ ಅಂಕಲ್. ತಮಾಷೆ ಮಾಡ್ತೀರಾ? ನನ್ನ ಸೈಜು ನೋಡಿ, ಓಡೋಕ್ಕೆ ಆಗುತ್ತ?’
ಅವಳಪ್ಪ ’ನಿನಗೆ ಕೆಲಸದಲ್ಲಿ ಕುಳಿತ ಕಡೆ ಪಿಜ್ಜಾ, ಕೋಕ್ ಎಲ್ಲ ತಂದು ಕೊಡ್ತಾ ಇದ್ರೆ, ಸೈಜು ಜಾಸ್ತಿ ಆಗದೆ ಕಡಿಮೇನಾ ಆಗುತ್ತೆ?’
ಮಗಳು ಒಳಗಿನಿಂದಲೇ ’ಹಾಗೆ ಹೇಳಿ ಅಪ್ಪ. ಆ ದೊಡ್ಡ ಸೈಜಿನ ದೇಹ ನೋಡಿ ತಾನೇ ನನ್ನೆದೆಯಲ್ಲಿ ಏನೋ ತಳಮಳವಾಗಿ, ಕೈಯಲ್ಲಿದ್ದ ಕಾಫೀ ಲೋಟ ಜಾರಿ ಬಿದ್ದಿದ್ದು. ರ್ರೀ, ಈಗ ಬಾಡಿಗೆ ವಿಷಯ ಹೇಳ್ರಿ’
ಸತೀಶ ’ಏನ್ ಅಂಕಲ್, ನಿಮ್ಮ ಮಗಳು ಅಷ್ಟು ಜೋರು ಮಾಡ್ತಾರೆ. ಏನೋ ನನಗಿಂತಾ ದೊಡ್ಡವರು ಜೊತೆಗೆ ನೀವಿದ್ದೀರಾ ಅಂತ ಸುಮ್ಮನೆ ಇದ್ದೀನಿ ಅಷ್ಟೇ !
ಅವಳಪ್ಪ ’ಸುಮ್ಮನೆ ಇರಮ್ಮಾ .. ಅವನು ಏನು ಹೇಳ್ತಾನೋ ಮೊದಲು ಕೇಳೋಣ’
ಸತೀಷ ’ನಿಮ್ಮ ಬಾಡಿಗೆ ಪೂರಾ ಚುಕ್ತ ಮಾಡಲಿಕ್ಕೇ ನಾನು ಬಂದಿರೋದು ಅಂಕಲ್. ಸುಮ್ಮನೆ ಸತಾಯಿಸಿದ್ದಕ್ಕೆ ಸಾರಿ ಆಯ್ತಾ. ನಮ್ಮ ಕೆಲಸದ ಟೈಮಿಂಗ್ ಹಾಗಿದೆ ಅಷ್ಟೇ! ಮುಂದಿನ ವಾರಾನೇ ಮನೆ ಖಾಲಿ ಮಾಡುತ್ತಿದ್ದೀನಿ. ರಾತ್ರಿ ಶಿಫ್ಟ್ ಕೆಲ್ಸ ಸಾಕಾಯ್ತು. ಊರಿಗೆ ವಾಪಸ್ ಹೋಗ್ತಿದ್ದೀನಿ. ಅವತ್ತು ಚೆಲ್ಲಿದ ಕಾಫಿಯನ್ನು ನೆನ್ನೆ ನಿಮ್ಮ ಮಗಳಿಗೆ ಕೊಡಿಸಿಬಿಟ್ಟೆ. ನೆನ್ನೇನೇ ಅವರಿಗೆ ’ಬಾಡಿಗೆ ಚುಕ್ತಾ’ ವಿಷಯ ಹೇಳೋಣಾ ಅಂತ ಅಂದುಕೊಂಡಿದ್ದೆ. ನನ್ನ ಮಾತಿಗೆ ಮತ್ತೆಲ್ಲಿ ಕಾಫಿ ಚೆಲ್ಲಿಕೊಳ್ತಾರೋ ಅಂತ ಹೇಳಲಿಲ್ಲ.’
ಅವಳಪ್ಪ ’ಬಹಳ ಸಂತೋಷ ಕಣಯ್ಯಾ... ಕೊಡು ಕೊಡು ... ಮುಂದೆ ಯಾವಾಗಲಾದರೂ ಮನೆ ಬೇಕಿದ್ರೆ ಈ ಕಡೆ ಬಾ. ಬೇರೆ ಎಲ್ಲಾದ್ರೂ ಬಾಡಿಗೆ ಮನೆ ಕೊಡಿಸ್ತೀನಿ’ ಎಂದರು ದೇಶಾವರಿ ನಗೆ ಬೀರುತ್ತ.
ಸತೀಶ ಬಾಗಿಲ ಒಳಗೆ ಬಗ್ಗಿ ನೋಡುತ್ತ ’ರ್ರೀ, ಈಗ್ಲಾದ್ರೂ ಒಳಗೆ ಕರೀರ್ರೀ! ’
{ಒಂದು ಸಾಮಾನ್ಯ ವಿಷಯವನ್ನೇ ಸ್ವಲ್ಪ ದಿಫೆರಂಟಾಗಿ ಹೇಳೋಣವೆನ್ನಿಸಿತು ... ಬರೆದೆ ... ನಿಮಗೆ ಏನೆನ್ನಿಸಿತು, ಹೇಳಿ ...}

ಲೇಖನ ವರ್ಗ (Category): 
ಸರಣಿ: 

ಪ್ರತಿಕ್ರಿಯೆಗಳು

ಚೆನ್ನಾಗಿದೆ <<ಸತೀಶ ಬಾಗಿಲ ಒಳಗೆ ಬಗ್ಗಿ ನೋಡುತ್ತ ’ರ್ರೀ, ಈಗ್ಲಾದ್ರೂ ಒಳಗೆ ಕರೀರ್ರೀ! ’>> ಅಂದ್ರೆ ಸತೀಶ ಹುಡುಗಿ ಅಪ್ಪನ ಜೊತೆ ಮನೆ ಒಳಗೆ ಹೋಗಲಿಲ್ಲವೆ .

ಶುರುವಿನಲ್ಲೇ ಗೊತ್ತಾಗಿ ಹೋಯಿತು. ನೀವು ಯಾವಾಗಲೂ ಡಿಫರೆಂಟ್ ಅಂತಾ ನಾನು ಡಿಫರೆಂಟಾಗಿ ಯೋಚಿಸಿದೆ :-). ನೀವು ಸೀರಿಯಸ್ ವಿಷಯಗಳನ್ನು ಬರೆಯಬೇಕು ಇನ್ನು ಮುಂದೆ.

:-)) ಈ ಹಿಂದಿನ ಬರಹ 'ಅಪೂರ್ಣನಾದ ಪೂರ್ಣಚಂದ್ರ' ಸೀರಿಯಸ್ ಆದ್ದರಿಂದ ಲಘು ಹಾಸ್ಯ ಬರೆದೆ ಈ ಬಾರಿ ... ಮುಂದಿನದು ಸೀರಿಯಸ್ ಕವನ ಎಂದುಕೊಂಡಿದ್ದೇನೆ. ನೋಡೋಣ