ಭಗ್ನ ಪ್ರೇಮಿ

To prevent automated spam submissions leave this field empty.

(ರಾಗ ಸಂಯೋಜನೆಗಾಗಿ ಮಾತ್ರ ಕಾಮಾಗಳು ಬಳಸಲಾಗಿದೆ.)

ನಾನಂದು ಅಂದೆ ನನಗೆ, ನೀ ಬೇಡವೆಂದು.

ನಾನಿಂದು ಎನುವೆ ನನಗೆ, ನೀ ಸಾಕೆಂದು.

 

ಕುಳಿತಿಹೆನು ನಾನು, ಆ ದಿನವ ನೆನೆದು.

ಕೊಳೆಯುತಿಹದು ಮನಸು, ಆ ಘಳಿಗೆ ನೆನೆದು.

ತಿಳಿಯುತಿಲ್ಲ ನನಗೆ, ಹಾಗೇಕೆ ಅಂದೆನೆಂದು .

ಬಯಸುತಿರುವೆ ನಾನು, ನೀನದನ ಮರೆಯುವೆ ಎಂದು.

 

ಮರೆತಿಹೆನು ಬಾಳುವುದು, ನಾನಿಂದು ಕುಂದು.

ಆದರೆ ಮರೆಯಲಾರನು ನಿನ್ನ, ನಾನೆಂದು.

ಶಿಲೆಯಾಗಿಹೆನು, ನಾನಿಂದು ಬೆಂದು.

ನೀ ನಗಬೇಡ ಇಂದು, ನನ್ನನ್ನು ಕೊಂದು.

 

ನೀನಾಗಿಹುವೆ ನನ ಬಾಳಿನ, ಕೇಂದ್ರ ಬಿಂದು.

ಆದರೆ ಮರೆಯಾಗಿಹುದು, ನನ ಮನಸು ಇಂದು.

ನೀನಿಂದು ಬಾ, ನನ ಮನವ ತಂದು.

ನೀ ತಿರುಗಿಸದನ, ನನಗಿಂದು ಹಿಂದು.

 

ನಿನಗಾಗಿ ಸಾಯಲು ನಾನೆಂದೂ ಮುಂದು.

ಆದರೆ ನಿನಗಾಗಿ ಬದಕಲು ನಾ ಬಯಸುವೆನು ಇಂದು.

 

ನಾನಂದು ಅಂದೆ ನೀ ಬೇಡವೆಂದು, ನಾನಿಂದು ಎನುವೆ ನನಗೆ ನೀ ಸಾಕೆಂದು , ನಾವಿನ್ನು ಬಾಳೋಣ ಜೊತೆಗೆಂದು ಮುಂದು

ಲೇಖನ ವರ್ಗ (Category):