ಟೈಮ್ ಎಷ್ಟು, ಹೇಳಣ್ಣೋ ?

To prevent automated spam submissions leave this field empty.

ಟೈಮ್ ಎಷ್ಟು ?
ಬಹಳ ಹಿಂದೆ ಕೇಳಿದ ಕಥೆಯಿದು. ಒಬ್ಬಾತ ಬಸ್ಸಿನಲ್ಲಿ ಕುಳಿತ. ಸ್ವಲ್ಪ ಹೊತ್ತಾದ ಮೇಲೆ ಪಕ್ಕದವನನ್ನು ಮೆಲ್ಲಗೆ ’ಸ್ವಾಮಿ ಟೈಮ್ ಎಷ್ಟು’ ಎಂದ. ಆ ಪಕ್ಕದಾತ ಏನೂ ಕೇಳಿಸಿದವನಂತೆ ಕುಳಿತಿದ್ದ. ಈತ ಸ್ವಲ್ಪ ಜೋರಾಗಿ ಮತ್ತದೇ ಪ್ರಶ್ನೆ ಕೇಳಿದ. ಏನೂ ಉತ್ತರವಿಲ್ಲ. ಬೇರೆ ಯಾರನ್ನಾದರೂ ಕೇಳೋಣವೆಂದರೆ ಏನೋ ಬಿಗುಮಾನ. ಹತ್ತು ನಿಮಿಷ ಕಳೆದ ಮೇಲೆ ಮತ್ತದೇ ಪ್ರಶ್ನೆ ಕೇಳಿದ ಪಕ್ಕದವನಿಗೆ. ಏನೇನೂ ಉತ್ತರವಿಲ್ಲ. ಹಾಳಾಗಿ ಹೋಗಲಿ ಎಂದು ಸುಮ್ಮನೆ ಕುಳಿತ.
ತಾನಿಳಿವ ಸ್ಟಳ ಬಂತು. ಇಳಿಯುತ್ತಿದ್ದಂತೆಯೇ, ಆ ಪಕ್ಕದವನೂ ಇವನ ಹಿಂದೆಯೇ ಇಳಿದ. "ನೀವು ಟೈಮ್ ಎಷ್ಟು ಅಂದಿರಲ್ಲ ಈಗ ಹೇಳ್ತೀನಿ ಕೇಳಿ ’ಐದೂವರೆ’ " ಅನ್ನೋದೇ ! ಇವನಿಗೆ ರೇಗಿ ಹೋಯ್ತು. ಕೇಳಿದ ’ಅಲ್ರೀ, ಆಗ್ಲೇ ಹೇಳೋಕ್ಕೇನಾಗಿತ್ತು?’
"ನೋಡೀ ಸ್ವಾಮೀ, ನೀವು ಮೊದಲು ಟೈಮ್ ಕೇಳ್ತೀರಾ. ನಾನು ಹೇಳ್ತೀನಿ. ಆಮೇಲೆ, ಎಲ್ಲಿಗೆ ಹೋಗ್ತಿರೋದೂ ಅಂತ ಕೇಳ್ತೀರಾ. ನಾನು ಹೇತೀನಿ. ಹಾಗೇ ನನ್ನ ಮನೆ ಜನರ ಬಗ್ಗೆ ತಿಳಿದುಕೊಳ್ತೀರ. ನನಗೆ ಬೇಡದೇ ಇದ್ರೂ ನಿಮ್ಮ ಬಗ್ಗೆ, ನಿಮ್ಮ ಮನೆ ಜನರ ಬಗ್ಗೆ ಹೇಳ್ತೀರಾ. ಇಬ್ರೂ ಒಂದೇ ಸ್ಟಾಪು ಅಂದ ಮೇಲೆ ನನ್ನ ಜೊತೆ ಮನೆವರೆಗೂ ಬರ್ತೀರಾ. ಹಾಗೆ ಬಂದವರು ನನ್ನ ಮಗಳನ್ನು ನೋಡ್ತೀರಾ. ರೂಪಸಿ ಅಂತ ಅವಳ ಹಿಂದೆ ಬೀಳ್ತೀರಾ. ಆಮೇಲೆ ಒಂದು ದಿನ ಮನೆಗೆ ಬಂದು ’ನಿಮ್ಮ ಮಗಳನ್ನು ಮದುವೆ ಮಾಡಿಕೊಡಿ’ ಅಂತ ಕೇಳ್ತೀರಾ.... ಅಲ್ರೀ, ಕೈಯಲ್ಲಿ ಒಂದು ಗಡಿಯಾರ ಇಲ್ಲದವನಿಗೆ ನನ್ನ ಮಗಳನ್ನು ಕೊಡಲೇನು ????" ಮುಂದೇನಾಯಿತು ಅನ್ನೋದು ಮುಖ್ಯವಲ್ಲ ಬಿಡಿ.
ಇಷ್ಟೆಲ್ಲ ಕಥೆ ಯಾಕೆ ಬಂತು ಅಂದಿರಾ? ನನಗೂ ಅಂಥದೇ ಒಂದು ಪ್ರಸಂಗ ಎದುರಾಯಿತು. ಹೇಳ್ತೀನಿ ಕೇಳಿ.
ನನ್ನನ್ನು ಕೇಳಿದರೆ ಈ ನಡುವೆ ಕೈ-ಗಡಿಯಾರಗಳ ಕಂಪನಿಗಳೆಲ್ಲ ದಿವಾಳಿ ಎದ್ದು ಹೋಗಿದೆ. ಯಾಕೆ ಅಂತೀರ ?
ಬೆಳಿಗ್ಗೆ ಡಿಜಿಟಲ್ ಅಲಾರಂ ಗಡಿಯಾರ ಹಾಡು ಹೇಳುತ್ತಿದ್ದಂತೆ ಬೆಳಿಗ್ಗೆ ಆರು ಘಂಟೆ ಅಂತ ತೋರಿಸುತ್ತಿರುತ್ತದೆ. ಮಧ್ಯದಲ್ಲಿ ಎಚ್ಚರವಾಗಿ ಟೈಮೆಷ್ಟು ಎಂದು ನೋಡಬೇಕೂ ಎಂದರೂ ಅಡ್ಡಿ ಇಲ್ಲ. ಅಲಾರಂ ಗಡಿಯಾರದ ನಂಬರ್’ಗಳಿಗೆ ಲೈಟ್ ಇದೆ. ಕೆಲವು ಇನ್ನೂ ಅಧುನಿಕ ಗಡಿಯಾರಗಳಿವೆಯಂತೆ! ಹಾಸಿಗೆ ಮೇಲೆ ಅಂಗಾತ ಮಲಗಿದ್ದರೆ, ಸಮಯದ ಸಂಖ್ಯೆಗಳನ್ನು ಮಂದವಾದ ಬೆಳಕಿನಲ್ಲಿ ರೂಫ್ ಮೇಲೆ ಬೀಳುವಂತೆ ಮಾಡಿರುತ್ತದೆ. ಸುಮ್ಮನೆ ಕಣ್ಣು ಬಿಟ್ಟರೆ ಸಾಕು, ಅಲ್ಲಿ ಸಮಯ ಮೂಡಿರುತ್ತದೆ.
ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಅಡಿಗೆ ಮನೆಗೆ ಕಾಫಿಗೆಂದು ಹೋದರೆ, ಅಡುಗೆ ಒಲೆಯ ಮೇಲೆ ಒಂದು ಡಿಜಿಟಲ್ ಗಡಿಯಾರ ಮತ್ತು ಕಾಫಿ ಮೇಕರ್ ಮೇಲೊಂದು ಡಿಜಿಟಲ್ ಗಡಿಯಾರ. ಕಾಫೀ ಹೀರುತ್ತ ಟೀವಿ ನೋಡುತ್ತಿರೆ ಅಲ್ಲಿ ಎಡಬದಿಯ ಮೂಲೆಯಲ್ಲಿ ಕಾಣುವ ಗಡಿಯಾರ, ಕೇಬಲ್ ಡಬ್ಬದ ಮೇಲೆ ಗಡಿಯಾರ. ಮನೆಯ ಹ್ಯಾಂಡ್ ಸೆಟ್ ಫೋನಿನ ಮೇಲೆ ಗಡಿಯಾರ, ಮೋಡಮ್ ಮೇಲೆ ಗಡಿಯಾರ.
ಈ-ಮೈಲ್ ನೋಡಲು ಲ್ಯಾಪ್-ಟಾಪ್ ತೆರೆದರೆ ಅಲ್ಲೇ ಬಲಬದಿ ಮೂಲೆಯಲ್ಲಿ ಗಡಿಯಾರ. ಹೆಚ್ಚು ಕಮ್ಮಿ ಇಡೀ ದಿನದಲ್ಲಿ ನನ್ನೊಂದಿಗಿರುವ ಗಡಿಯಾರವದು. ಕೆಲಸಕ್ಕೆ ಸಿದ್ದವಾಗಿ ಸೊಂಟಕ್ಕೆ ಒಂದೆಡೆ ಪೇಜರ್ ಮತ್ತೊಂದೆಡೆ ಮೊಬೈಲ್ ಸಿಕ್ಕಿಸಿಕೊಂಡರೆ ಎರಡೂ ಕಡೆ ಗಡಿಯಾರ.
ಕಾರಿನಲ್ಲಿ ಕುಳಿತು ಕೆಲಸಕ್ಕೆ ಹೊರಟರೆ ಡ್ಯಾಶ್ ಬೋರ್ಡ್ ಬಳಿ ಗಡಿಯಾರ. ನ್ಯೂಸ್ ಮಧ್ಯೆ ಆಗಾಗ ರೇಡಿಯೋ ಜನ ಒದರುವ ಸಮಯ ಬೇರೆ.
ಕೆಲಸದ ಮಧ್ಯೆ ಕಾಫಿ ರೂಮಿಗೆ ಹೋದರೆ, ಯಥಾ ಪ್ರಕಾರ ಗೋಡೆ ಮೇಲಿನ ಟಿವಿ ಮೇಲೆ ಗಡಿಯಾರ, ಮೈಕ್ರೋ ವೇವ್ ಮೇಲೆ ಗಡಿಯಾರ. ಸಂಜೆ ಮನೆ ಹಾದಿ ಹಿಡಿದಾಗ ಪೇಜರ್, ಮೊಬೈಲ್, ಕಾರಿನ ಡ್ಯಾಶ್ ಬೋರ್ಡ್ ಅಂತ ಎಲ್ಲೆಲ್ಲೂ  ಗಡಿಯಾರ ಇದ್ದೇ ಇರುತ್ತೆ.
ಇದಿಷ್ಟೂ ಯೋಚನೆ ಮಾಡಿಯೇ ನಾನು ಕೈ ಗಡಿಯಾರ ಕಟ್ಟೋದು ಬಿಟ್ಟಿದ್ದು ! ಯಾವಾಗ ನನ್ನೆರಡೂ ಕೈ-ಗಡಿಯಾರದ ಸೆಲ್’ಗಳು ಸತ್ತವು. ಮುಳ್ಳುಗಳು ’ಹೋರಾಟಾ ಹೋರಾಟ, ಎಲ್ಲಿಯವರೆಗೂ ಹೋರಾಟ, ಸೆಲ್ ಹಾಕೋವರೆಗೂ ಹೋರಾಟ ... ಬೇಕೇ ಬೇಕು’ ಎಂದೆಲ್ಲ ಮುಷ್ಕರ ಹೂಡಿದರೂ, ರಾಜ್ಯ ಸರಕಾರದಂತೆ ಕಿವಿಗೊಡದೆ ಸುಮ್ಮನಾದೆ.
ನನ್ನೆರಡೂ ಕೈಗಡಿಯಾರದ ಸೆಲ್’ಗಳು ಭಗವಂತನ ಮೊರೆ ಹೊಕ್ಕವು. ನನ್ನ ನಿಲುವನ್ನು ಬದಲಾಯಿಸಿಕೊಳ್ಳುವಂತೆ ಬುದ್ದಿ ಬರಲು ಪ್ರಾರ್ಥಿಸಿದವು.
ಶುದ್ದ ಸೋಮವಾರದಂದು ಮತೊಬ್ಬನಿಗೆ ಪೇಜರನ್ನು ವರ್ಗಾಯಿಸಿದೆ ! ಭಾನುವಾರ ಮೊಬೈಲ್ ಕಡೆ ತಿರುಗಿ ನೋಡದಿದ್ದುದರಿಂದ ಚಾರ್ಜ್ ಮಾಡುವುದು ಮರೆತಿದ್ದೆ. ಹಾಗಾಗಿ ಮಧ್ಯಾನ್ನದ ವೇಳೆಗೆ ಮಕಾಡೆ ಮಲಗಿತ್ತು !! ಸಂಜೆ ಮನೆಗೆ ಹೊರಡುವ ಮುನ್ನ ಹೊರಗೆ ನೋಡಿದರೆ ಭೀಕರ ಗಾಳಿ ಮತ್ತು ಮಳೆ. ಕಾರಿಗೆ ಅಂತ ದಾಪುಗಾಲು ಹಾಕುತ್ತಾ ಹೋದಾಗಲೋ ಇಲ್ಲ ಓಡುವಾಗಲೋ ಕೆಳಗೆ ಬಿದ್ದು, ಕೇಸ್’ನಲ್ಲಿದ್ದರೂ ಕಂಪನಿಯ ಲ್ಯಾಪ್-ಟಾಪ್ ಒಡೆದು ಹೋದರೆ? ಫಜೀತಿಯೇ ಬೇಡ ಎಂದುಕೊಂಡು ದಿನವೂ ಮನೆಗೆ ಒಯ್ಯುವ ಲ್ಯಾಪ್-ಟಾಪನ್ನು ನನ್ನ ಡೆಸ್ಕಿನ ಕಪಾಟಿನಲ್ಲೇ ಭದ್ರವಾಗಿರಿಸಿ ಹೊರಗೆ ಹೊರಟೆ.
ಸ್ವಲ್ಪ ಮಳೆ ತಗ್ಗಿತು ಎನಿಸಿದೊಡನೆ ಕಾರಿಗೆ ಓಡಿದೆ. ಹುಷಾರಾಗಿ ಡ್ರೈವ್ ಮಾಡಿಕೊಂಡು ಮನೆ ಸೇರಿದೆ. ಮನೆಯ ಒಳಗೆ ಅಡಿ ಇಟ್ಟೆ. ಭೀಕರ ಗಾಳಿ ಪ್ರಯುಕ್ತ ಕರಂಟ್ ಯಾವಾಗ ಹೋಗಿತ್ತೋ ಗೊತ್ತಿಲ್ಲ.
ನನಗೆ ಈಗ ಸಮಯ ಎಷ್ಟಾಗಿದೆ ಎಂದು ತಿಳಿಸಲು ಅಡುಗೆ ಮನೆಯ ಒಲೆ, ಕಾಫಿ ಮೆಷೀನ್, ಟಿವಿ, ಮೋಡೆಮ್, ಕೇಬಲ್ ಡಬ್ಬ, ನನ್ನ ಮೊಬೈಲ್, ಪೇಜರ್ ಯಾವುದೂ ಇಲ್ಲ. ಬೆಳಿಗ್ಗೆ ನನ್ನ ಲ್ಯಾಪ್-ಟಾಪ್’ಗೆ ಪವರ್ ಕನೆಕ್ಷನ್ ಕೊಟ್ಟಿರಲಿಲ್ಲವೋ ಏನೋ ಅದರ ಬ್ಯಾಟರಿಯೂ ಥಣ್ಣಗಾಗಿತ್ತು. ಇಂಟರ್ನೆಟ್ ಫೋನಾದ್ದರಿಂದ ಮನೆಯ ಫೋನು ಕೂಡ ವಿರಮಿಸುತ್ತಿತ್ತು.
ಎಷ್ಟು ಹೊತ್ತು ಸುಮ್ಮನೆ ಒಬ್ಬನೇ ಕುಳಿತಿದ್ದೆನೋ ಗೊತ್ತಿಲ್ಲ. ಆಕಳಿಕೆ ಬರಲು ಶುರುವಾಯ್ತು. ಇದೇನು ನಿದ್ದೆಗೋ ಅಥವಾ ಹಸಿವಿಗೋ ಗೊತ್ತಿಲ್ಲ. ಹಸಿವೆಯೇ ಇರಬೇಕು ಎಂದುಕೊಂಡು, ತಂಪಾದ ಉಪ್ಪಿಟ್ಟನ್ನು ತಿಂದೆ.
ಈಗ ಮಲಗೋ ಟೈಮ್ ಆಗಿದೆಯೋ ಅಥವಾ ಇನ್ನೂ ಟೈಮ್ ಇದೆಯೋ ಗೊತ್ತಿಲ್ಲ. ಹೊರಗೆ ಒಂದೇ ಸಮನೆ ಮಳೆ. ಈಗ ಟೈಮ್ ಎಷ್ಟು ಎಂದು ತಿಳಿದುಕೊಳ್ಳಲು ಏಕ ಮಾತ್ರ ಸಾಧನವೆಂದರೆ ನನ್ನ ಕಾರ್. ಮಳೆಯಲ್ಲಿ ಹೊರಗೆ ಹೋಗಿ, ಗಾಡಿ ಸ್ಟಾರ್ಟ್ ಮಾಡಿ ಟೈಮ್ ನೋಡಿಕೊಂಡು ಬರಬೇಕು. ’ಭೀಕರ ಗಾಳಿಗೆ ತಲೆ ಕೆಟ್ಟ ಟೆಕ್ಕಿ’ ಎಂದು ಬೆಂಗಳೂರಿನ ಪೇಪರ್’ನಲ್ಲಿ ವರದಿಯಾದರೆ? ಸುಮ್ಮನಾದೆ.
ಮಾಡೋಕ್ಕೆ ಬೇರೆ ಕೆಲಸ ಇಲ್ಲ. ಮಲಗಿದೆ. ಯಾವಾಗಲೋ ಎಚ್ಚರಿಕೆ ಆಯಿತು. ಎದ್ದು, ಕಣ್ಣು ಬಿಟ್ಟೆ. ಎಲ್ಲೆಡೆ ಕತ್ತಲು. ಇನ್ನೂ ಕರಂಟ್ ಬಂದಿರಲಿಲ್ಲ. ಮಧ್ಯರಾತ್ರಿಯೋ ಅಥವಾ ಬೆಳಕು ಮೂಡದ ಮುಂಜಾನೆಯೋ ಒಂದೂ ಗೊತ್ತಿಲ್ಲ. ಆಗ ನೆನಪಿಗೆ ಬಂದದ್ದು ಮೇಲೆ ಹೇಳಿದ ಕಥೆ.
ಮತ್ತೆ ಮಲಗಿದೆ.
ಮತ್ತೊಮ್ಮೆ ಎದ್ದಾಗ ಬೆಳಗಾಗಿತ್ತು .... ಕರಂಟ್ ಬಂದಿತ್ತು. ಗಣೇಶನಿಗೆ ಅಡ್ಡಬಿದ್ದು ಅಲ್ಲೇ ಇದ್ದ ಫೋನಿನ ಮೇಲಿನ ಟೈಮ್ ನೋಡಿದೆ.
ಎಂಟೂವರೆ ಕಣ್ರೀ !!
ಕೇವಲ ಇನ್ನರ್ಧ ಘಂಟೆಗೆ ಮೀಟಿಂಗ್ ಇದೆ .... ಆಮೇಲಿನ ವಿಷಯ ಬಿಡಿ.
ಸಂಜೆ ನನ್ನೆರಡೂ ಕೈ-ಗಡಿಯಾರಕ್ಕೆ ಸೆಲ್ ಹಾಕಿಸಬೇಕು ಅಂತ ಇದ್ದೀನಿ. ನೀವೇನಂತೀರಾ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಖಂಡಿತಾ ರಘು ಅವರೇ. ಈ ವಾರ ಹೋಗಲಾಗಲಿಲ್ಲ. ಹಾಗಾಗಿ ಮುಂದಿನ ವಾರಕ್ಕೆ ಮುಂದೂಡಲಾಗಿದೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

ಕಡೆಗೂ ಬುದ್ದಿ ಬಂತು.:) ಕೈಗಡಿಯಾರದ ದೇವರ ಪ್ರಾರ್ಥನೆ ಫಲಿಸಿತು. :). ಬೇಗೆನೆ ಹಾಕಿಸಿ. ಲೇಖನ ತುಂಬಾ ಚೆನ್ನಾಗಿದೆ ಸರ್,

ಹಾಕಿಸಿಯೇ ಬಿಟ್ಟೆ :-) ನಿಮ್ಮ ಮಾತು ಸತ್ಯ ... ಬುದ್ದಿ ಬಂತು - ಕೈಗಡಿಯಾರಕ್ಕೆ ... ಭಗವಂತನ ಮೊರೆ ಹೋಗಲು :-) ಮೊನ್ನೆ ಫ್ಲೈಟ್’ನಲ್ಲಿ ಕುಳಿತ ಮೇಲೆ ತಾಂತ್ರಿಕೆ ದೋಷ ಎಂದು ಹೇಳಿ ಏನೋ ಸರಿ ಪಡಿಸುತ್ತಿದ್ದರು. ಸ್ವಲ್ಪ ಹೊತ್ತಾದ ಮೇಲೆ, ನನ್ನ ಪಕ್ಕದಲ್ಲಿ ಕುಳಿತಾಕೆ ’ಈಗ ಟೈಮ್ ಎಷ್ಟು’ ಎಂದು ಕೇಳಿದರು. ಹೊಸಾ ಸೆಲ್’ಅನ್ನು ತನ್ನ ಗರ್ಭದಲ್ಲಿ ಹೊತ್ತ ನನ್ನ ಕೈಗಡಿಯಾರಕ್ಕೆ ಏನು ಖುಷಿ ಅಂತೀರಾ?