ಹುಟ್ಟು ಹಬ್ಬದ ದಿನ

To prevent automated spam submissions leave this field empty.

ಮೂರು ವರ್ಷಗಳ ಹಿಂದೆ ನಡೆದಿದ್ದು, ಇಂದಿನಂತೆ ಅಂದು ಸಹ ನಾನು ಕುವೈತ್ ನಲ್ಲಿ ಕೆಲಸ ಮಾಡುತಿದ್ದೆ. ಮನೆಯವರೊಟ್ಟಿಗೆ ಸಾಮನ್ಯವಾಗಿ ನಾನು ಯಾಹೂ ವಾಯ್ಸ್ ಮತ್ತು ವೀಡಿಯೊ ಚಾಟ್ ನಲ್ಲಿ ಮಾತನಾಡುತ್ತೇನೆ.  ಅಂದು ಸೆಪ್ಟೆಂಬರ್ ೯ ನೇ ತಾರಿಖು ನನ್ನ ಮೊದಲನೆ ಮಗನ ಹುಟ್ಟು ಹಬ್ಬದ ದಿನ.   ಮಧ್ಯರಾತ್ರಿಯಂದೆ ನಾನು ಎಸ್ ಎಮ್ ಎಸ್ ಮಾಡಿ ಶುಭಾಶಯ ತಿಳಿಸಿದ್ದೆ. ಅವನಿಗೆ ನನ್ನ ಜತೆ ಮಾತನಾಡಬೇಕು ಹಾಗು ನೋಡಬೇಕು ಅನ್ನುವ ಬಹಳ ಬಯಕೆ. ಬೆಳಿಗ್ಗೆಯಿಂದಾನೆ ಮಿಸ್ಸ್ಡ್ ಕಾಲ್ಸ್ ಬರೋದಿಕ್ಕೆ ಶುರುವಾಯಿತು. ನಮ್ಮ್ ಮಿಸ್ಸ್ ಕಾಲ್ ಗಳ ಅರ್ಥ ಏನಪ್ಪ ಅಂದರೆ ಆನ್ ಲೈನ್ ಗೆ ಬರಬೇಕು ಅಂತ. 
ಅವನು ಬೆಳಿಗ್ಗೆ ಅವರಮ್ಮನೊಟ್ಟಿಗೆ ದೇವಸ್ಥಾನಕ್ಕೆ ಹೋಗಿ ಬಂದು ಶಾಲೆಗೆ ಹೋಗಬೇಕಾಗಿತ್ತು, ಹೋಗುವ ಮುನ್ನ ನನ್ನ ಜತೆ ಮಾತಾನಾಡಬೇಕು ಅನ್ನುವ ಕಾತುರ. ಭಾರತಕ್ಕೆ ಹಾಗು ಕುವೈತ್ ಗೆ ಎರಡುವರೆ ಗಂಟೆ ವ್ಯತ್ಯಾಸ, ಇಲ್ಲಿ ೬ ಗಂಟೆ ಅಂದರೆ ಭಾರತ ದಲ್ಲಿ ೮:೩೦, ಅದು ಅವನು ಶಾಲೆಗೆ ಹೊರಡುವ ಸಮಯ, ನನಗೆ ಹಾಸಿಗೆಯಿಂದ ಏಳುವ ಸಮಯ . ಅಂತೂ ಅವರ ಅಮ್ಮನ ಜತೆ ಆನ್ ಲೈನ್ಗೆ ಬಂದು "ಪಪ್ಪ ನೀವು ಕಳುಹಿಸಿದ ಮೆಸ್ಸೇಜ್ ನೋಡಿದೆ,  ವಿಶ್ ಮಾಡಿದ್ದಕ್ಕೆ ಥ್ಯಾಂಕ್ಸ್. ಈ ಸಾರಿ ನೀವಿಲ್ಲದೆ ಹುಟ್ಟಿದ ಹಬ್ಬ ಆಚರಣೆ ಮಾಡೊಕೆ ಬೇಸರ ಆಗ್ತಾಯಿದೆ,.. ನಿಮ್ಮನ್ನು ನೋಡಬೇಕು ಆದಷ್ಟು ಬೇಗ ಬನ್ನಿ ಎಂದ..  ಪ್ರತಿ ವರ್ಷ ನಾವೆಲ್ಲ ತುಂಬಾ ಗ್ರಾಂಡ್ ಆಗಿ ಸೆಲೆಬ್ರೇಟ್ ಮಾಡ್ತಾ ಯಿದ್ದಿವಿ ಈ ವರ್ಷ ಮಾಡೋಕೆ ಆಗ್ತಾ ಇಲ್ಲ ಅಂತಾ ನೆನೆಸಿಕೊಂಡು ಬೇಜಾರಾಯಿತು, ಆಮೇಲೆ ಅವನು "ಪಪ್ಪ ಶಾಲೆಗೆ ಹೋಗಬೇಕು ಟೈಮ್ ಆಯಿತು, ಆರ್ಶಿವಾದ ಮಾಡಿ" ಎಂದ, ನಾನು ಆಯಿತು ಪುಟ್ಟ ದೇವರು ನಿನ್ನ ನೂರ್ಕಾಲ ಚೆನ್ನಾಗಿಟ್ಟರಲಿ, ದೇವರು ನಿನಗೆ ಒಳ್ಳೇದು ಮಾಡಲಿ, ಯಾವಾಗಲು ಸುಖ ಸಂತೋಷದಿಂದ ನೆಮ್ಮದಿಯಾಗಿರಲಿ ನಿನ್ನ ಬದುಕು" ಎಂದೆ. ಇಷ್ಟೆಲ್ಲ  ಹೇಳುತ್ತಿರಬೇಕಾದರೆಆ ಕಡೆ ಯಿಂದ ಸದ್ದೆ ಬರ್ತಾ ಯಿರಲಿಲ್ಲ. ನಾನು ಹಲೋ ಹಲೋ ಅಂತಾ ಯಿದ್ದಿನಿ. ಏನು ಉತ್ತರನೇ ಬರಲಿಲ್ಲ, ಸ್ವಲ್ಪ ಹೊತ್ತಾದಮೇಲೆ, ನನ್ನ ಶ್ರೀಮತಿ ಹೆಡ್ ಫೋನ್ ತೆಗೆದುಕೊಂಡು ಮಾತಾನಾಡುತ್ತ "ನೋಡ್ರಿ ನಿಮ್ಮ ಮಗ ಕಂಪ್ಯೂಟರ್ ಮುಂದೆ ಅಡ್ಡ ಬಿದ್ದು ನಮಸ್ಕಾರ ಮಾಡ್ತಾಯಿದ್ದಾನೆ" ಎಂದಾಗ, ಒಮ್ಮೆಲೆ ಆಶ್ಚರ್ಯ ವಾಯಿತು ಹಾಗು ಅವನ ಬಗ್ಗೆ ಬಹಳ ಹೆಮ್ಮೆ ಯಾಯಿತು. ತಂದೆ ಎದುರಿಗೆ ಇರಲೇಬೇಕು ಅವರಿಗೆ ನಮಸ್ಕಾರ ಮಾಡೊದಿಕ್ಕೆ ಅನ್ನುವ ಭಾವನೆ ಇಲ್ಲದೆ, ಹತ್ತಿರ ಇದಾರೊ ಇಲ್ಲವೋ ಒಟ್ಟಿನಲ್ಲ್ ಕಂಪ್ಯೂಟರ್ ಮುಂದೆ ಕಾಣಿಸ್ತಾಯಿದಾರೆ ಅಷ್ಟು ಸಾಕು ನಂಗೆ ಅನ್ನುವ ಭಾವ ದೊಂದಿಗೆ ಕಂಪ್ಯೂಟರ್ ಗೆ ಅಡ್ಡ ಬಿದ್ದಿದ್ದ. 
ಮನೆಯವರಿಗೆಲ್ಲರಿಗೂ ಬಹಲ ಖುಷಿಯಾಗಿತ್ತು ಅಂದು.
ಮಕ್ಕಳಿಗೆ ನಾವು ಹೇಳಿಕೊಡೋ ಸಂಪ್ರದಾಯ ಸಂಸ್ಕಾರ ಆಚಾರ ವಿಚಾರ ಪದ್ದತಿಗಳು ಅವರ ಮೇಲೆ ಯಾವ ರೀತಿ ಒಳ್ಳೆಯ ಪರಿಣಾಮ ಬೀರುತ್ತವೆ ಅವನ ಈ ಪರಿಶುದ್ದವಾದ ಪ್ರೀತಿನೇ ಸಾಕ್ಷಿ. ಅದೊಂದು ಮರೆಯಲಾರದ ಸನ್ನಿವೇಶ ನನ್ನ ಜೀವನದಲ್ಲಿ. ಇಂದು ನನ್ನ ಎರಡನೇ ಮಗಳ ಹರ್ಷಿಣಿ ಹುಟ್ಟಿದ ದಿನ ನಾಡಿದ್ದು ನನ್ನ ಮಗನ ಹುಟ್ಟಿದ ದಿನ, ಈ ಸಾರಿಯು ಅವರೆಲ್ಲರನ್ನು ಮಿಸ್ ಮಾಡ್ಕೋತಿದ್ದೀನಿ.

ಮೂರು ವರ್ಷಗಳ ಹಿಂದೆ ನಡೆದಿದ್ದು, ಇಂದಿನಂತೆ ಅಂದು ಸಹ ನಾನು ಕುವೈತ್ ನಲ್ಲಿ ಕೆಲಸ ಮಾಡುತಿದ್ದೆ. ಮನೆಯವರೊಟ್ಟಿಗೆ ಸಾಮನ್ಯವಾಗಿ ನಾನು ಯಾಹೂ ವಾಯ್ಸ್ ಮತ್ತು ವೀಡಿಯೊ ಚಾಟ್ ನಲ್ಲಿ ಮಾತನಾಡುತ್ತೇನೆ.  

ಅಂದು ಸೆಪ್ಟೆಂಬರ್ ೯ ನೇ ತಾರಿಖು ನನ್ನ ಮೊದಲನೆ ಮಗನ ಹುಟ್ಟು ಹಬ್ಬದ ದಿನ.  ಮಧ್ಯರಾತ್ರಿಯಂದೆ ನಾನು ಎಸ್ ಎಮ್ ಎಸ್ ಮಾಡಿ ಶುಭಾಶಯ ತಿಳಿಸಿದ್ದೆ. ಅವನಿಗೆ ನನ್ನ ಜತೆ ಮಾತನಾಡಬೇಕು ಹಾಗು ನೋಡಬೇಕು ಅನ್ನುವ ಬಹಳ ಬಯಕೆ. ಬೆಳಿಗ್ಗೆಯಿಂದಾನೆ ಮಿಸ್ಸ್ಡ್ ಕಾಲ್ಸ್ ಬರೋದಿಕ್ಕೆ ಶುರುವಾಯಿತು. ನಮ್ಮ್ ಮಿಸ್ಸ್ ಕಾಲ್ ಗಳ ಅರ್ಥ ಏನಪ್ಪ ಅಂದರೆ ಆನ್ ಲೈನ್ ಗೆ ಬರಬೇಕು ಅಂತ. 

ಅವನು ಬೆಳಿಗ್ಗೆ ಅವರಮ್ಮನೊಟ್ಟಿಗೆ ದೇವಸ್ಥಾನಕ್ಕೆ ಹೋಗಿ ಬಂದು ಶಾಲೆಗೆ ಹೋಗಬೇಕಾಗಿತ್ತು, ಹೋಗುವ ಮುನ್ನ ನನ್ನ ಜತೆ ಮಾತಾನಾಡಬೇಕು ಅನ್ನುವ ಕಾತುರ. ಭಾರತಕ್ಕೆ ಹಾಗು ಕುವೈತ್ ಗೆ ಎರಡುವರೆ ಗಂಟೆ ವ್ಯತ್ಯಾಸ, ಇಲ್ಲಿ ೬ ಗಂಟೆ ಅಂದರೆ ಭಾರತ ದಲ್ಲಿ ೮:೩೦, ಅದು ಅವನು ಶಾಲೆಗೆ ಹೊರಡುವ ಸಮಯ, ನನಗೆ ಹಾಸಿಗೆಯಿಂದ ಏಳುವ ಸಮಯ .

ಅಂತೂ ಅವರ ಅಮ್ಮನ ಜತೆ ಆನ್ ಲೈನ್ಗೆ ಬಂದು "ಪಪ್ಪ ನೀವು ಕಳುಹಿಸಿದ ಮೆಸ್ಸೇಜ್ ನೋಡಿದೆ,  ವಿಶ್ ಮಾಡಿದ್ದಕ್ಕೆ ಥ್ಯಾಂಕ್ಸ್. ಈ ಸಾರಿ ನೀವಿಲ್ಲದೆ ಹುಟ್ಟಿದ ಹಬ್ಬ ಆಚರಣೆ ಮಾಡೊಕೆ ಬೇಸರ ಆಗ್ತಾಯಿದೆ,.. ನಿಮ್ಮನ್ನು ನೋಡಬೇಕು ಆದಷ್ಟು ಬೇಗ ಬನ್ನಿ ಎಂದ..  ಪ್ರತಿ ವರ್ಷ ನಾವೆಲ್ಲ ತುಂಬಾ ಗ್ರಾಂಡ್ ಆಗಿ ಸೆಲೆಬ್ರೇಟ್ ಮಾಡ್ತಾ ಯಿದ್ದಿವಿ ಈ ವರ್ಷ ಮಾಡೋಕೆ ಆಗ್ತಾ ಇಲ್ಲ ಅಂತಾ ನೆನೆಸಿಕೊಂಡು ಬೇಜಾರಾಯಿತು,

ಆಮೇಲೆ ಅವನು "ಪಪ್ಪ ಶಾಲೆಗೆ ಹೋಗಬೇಕು ಟೈಮ್ ಆಯಿತು, ಆರ್ಶಿವಾದ ಮಾಡಿ" ಎಂದ, ನಾನು ಆಯಿತು ಪುಟ್ಟ ದೇವರು ನಿನ್ನ ನೂರ್ಕಾಲ ಚೆನ್ನಾಗಿಟ್ಟರಲಿ, ದೇವರು ನಿನಗೆ ಒಳ್ಳೇದು ಮಾಡಲಿ, ಯಾವಾಗಲು ಸುಖ ಸಂತೋಷದಿಂದ ನೆಮ್ಮದಿಯಾಗಿರಲಿ ನಿನ್ನ ಬದುಕು" ಎಂದೆ. ಇಷ್ಟೆಲ್ಲ  ಹೇಳುತ್ತಿರಬೇಕಾದರೆಆ ಕಡೆ ಯಿಂದ ಸದ್ದೆ ಬರ್ತಾ ಯಿರಲಿಲ್ಲ. ನಾನು ಹಲೋ ಹಲೋ ಅಂತಾ ಯಿದ್ದಿನಿ. ಏನು ಉತ್ತರನೇ ಬರಲಿಲ್ಲ.

ಸ್ವಲ್ಪ ಹೊತ್ತಾದಮೇಲೆ, ನನ್ನ ಶ್ರೀಮತಿ ಹೆಡ್ ಫೋನ್ ತೆಗೆದುಕೊಂಡು ಮಾತಾನಾಡುತ್ತ "ನೋಡ್ರಿ ನಿಮ್ಮ ಮಗ ಕಂಪ್ಯೂಟರ್ ಮುಂದೆ ಅಡ್ಡ ಬಿದ್ದು ನಮಸ್ಕಾರ ಮಾಡ್ತಾಯಿದ್ದಾನೆ" ಎಂದಾಗ, ಒಮ್ಮೆಲೆ ಆಶ್ಚರ್ಯ ವಾಯಿತು ಹಾಗು ಅವನ ಬಗ್ಗೆ ಬಹಳ ಹೆಮ್ಮೆ ಯಾಯಿತು. ತಂದೆ ಎದುರಿಗೆ ಇರಲೇಬೇಕು ಅವರಿಗೆ ನಮಸ್ಕಾರ ಮಾಡೊದಿಕ್ಕೆ ಅನ್ನುವ ಭಾವನೆ ಇಲ್ಲದೆ, ಹತ್ತಿರ ಇದಾರೊ ಇಲ್ಲವೋ ಒಟ್ಟಿನಲ್ಲ್ ಕಂಪ್ಯೂಟರ್ ಮುಂದೆ ಕಾಣಿಸ್ತಾಯಿದಾರೆ ಅಷ್ಟು ಸಾಕು ನಂಗೆ ಅನ್ನುವ ಭಾವ ದೊಂದಿಗೆ ಕಂಪ್ಯೂಟರ್ ಗೆ ಅಡ್ಡ ಬಿದ್ದಿದ್ದ. ಮನೆಯವರಿಗೆಲ್ಲರಿಗೂ ಬಹಳ ಖುಷಿಯಾಗಿತ್ತು ಅಂದು.

ಮಕ್ಕಳಿಗೆ ನಾವು ಹೇಳಿಕೊಡೋ ಸಂಪ್ರದಾಯ ಸಂಸ್ಕಾರ ಆಚಾರ ವಿಚಾರ ಪದ್ದತಿಗಳು ಅವರ ಮೇಲೆ ಯಾವ ರೀತಿ ಒಳ್ಳೆಯ ಪರಿಣಾಮ ಬೀರುತ್ತವೆ ಅವನ ಈ ಪರಿಶುದ್ದವಾದ ಪ್ರೀತಿನೇ ಸಾಕ್ಷಿ. ಅದೊಂದು ಮರೆಯಲಾರದ ಸನ್ನಿವೇಶ ನನ್ನ ಜೀವನದಲ್ಲಿ.

ಇಂದು ನನ್ನ ಎರಡನೇ ಮಗಳ ಹರ್ಷಿಣಿ ಹುಟ್ಟಿದ ದಿನ ನಾಡಿದ್ದು ನನ್ನ ಮಗನ ಹುಟ್ಟಿದ ದಿನ, ಈ ಸಾರಿಯು ಅವರೆಲ್ಲರನ್ನು ಮಿಸ್ ಮಾಡ್ಕೋತಿದ್ದೀನಿ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮಕ್ಕಳಿಬ್ಬರ, ಒಲವಿನ ಮಡದಿಯ, ಆತ್ಮೀಯ ಗೆಳೆಯರ ಹುಟ್ಟು ಹಬ್ಬಗಳು, ತಮ್ಮ೦ದಿರಿಬ್ಬರ ಮದುವೆ, ಆರು ಹಿರಿಯ ಜೀವಗಳ ಸಾವು, ಎಲ್ಲದರಿ೦ದಲೂ ದೂರ, ಬಹುದೂರವಿದ್ದೆ ನಾನೂ ಸಹ! ಗಲ್ಫ್ ರಾಷ್ಟ್ರಗಳ ವಾಸ ಹಣವನ್ನು ತ೦ದರೂ ಅತ್ಯಮೂಲ್ಯವಾದ ನೆಮ್ಮದಿಯನ್ನು ಕಳೆದು ಬಿಡುತ್ತದೆ. ಆದಷ್ಟು ಬೇಗನೆ ನೀವು ಮಕ್ಕಳೊಡನೆ ಕಲೆತು ಅವರ ಜನ್ಮದಿನವನ್ನಾಚರಿಸುವ ದಿನ ಬರಲೆ೦ದು ಹಾರೈಸುವೆ.

ಇತ್ತೀಚಿಗೆ ನನ್ನ ೩ ವರ್ಷದ ಮಗಳ ಹತ್ತಿರ ಫೋನಿನಲ್ಲಿ ಮಾತನ್ನಾಡುವಾಗ, ಚಿನ್ನು ನಾನು ನಿನ್ನನ್ನು ತಬ್ಬಿ ಕೊಳ್ಳಬೇಕು ಅಂತ ಅನ್ನಿಸುತ್ತಾಯಿದೆ ಯಮ್ಮ, ಅಂತ ಹೇಳಿದೆ. ಅದಕ್ಕೆ ಹೌದ ಪಪ್ಪ ಅಂತ ಹೇಳಿ ಫೋನ್ ತಗೊಂಡು ಎದೆ ಮೇಲೆ ಗಟ್ಟಿಯಾಗಿ ಅಪ್ಪಿಕೊಂಡಿದ್ದಾಳೆ, ಅದನ್ನು ಗಮನಿಸಿ ನನ್ನ ಶ್ರೀಮತಿ ಚಿನ್ನು ಲೈನ್ ಕಟ್ ಆಗುತ್ತೆ ಅಂಗೆ ಒತ್ತಬಾರದು ಮಾತಾಡು ಅಂತ ಹೇಳಿದಾರೆ. ಮಗಳು, ಇಲ್ಲಮ್ಮಾ ಪಪ್ಪನೇ ಹೇಳಿದರು ನನ್ನ ಅಪ್ಪಿಕೊಬೇಕು ಅಂತ" ಎಂದಾಗ ಎಲ್ಲರಿಗು ನಗು.. ಮಕ್ಕಳೆ ಹೀಗೆ, ಆದರೆ ಅದೆನ್ನಲ್ಲ ಮಿಸ್ ಮಾಡ್ಕೋತಿದಿವಿ ಅಂತ ಬೇಜಾರು, ಅನಿವಾರ್ಯ ಕಾರಣ, ಪರಿಸ್ಥಿತಿ ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದಿದೆ. ಒಂದು ಬೇಕು ಅಂದರೆ ಇನ್ನೊಂದನ್ನು ಬಿಡಲೆ ಬೇಕು. ನಮಸ್ಕಾರಗಳು ರಂಗನಾಥ

ಖಂಡಿತ, ನಾವು ಕಲಿತ ಸಂಪ್ರದಾಯ ಸಂಸ್ಕಾರ ನಮ್ಮ ಮಕ್ಕಳಿಗೆ ಕಲಿಸಿದರೆ ಅದು ಹಾಗೆ ಬೆಳೆಯುತ್ತಾ ಹೋಗುತ್ತೆ. ಧನ್ಯವಾದ ಗಳು, -- ರಂಗನಾಥ

ನಾವು ಭಾರತೀಯರು, ಮುಖ್ಯವಾಗಿ ಕಲ್ಲು, ಮರ, ಇತ್ಯಾದಿಗಳಿಗೆ ಅಡ್ಡ ಬಿದ್ದು ಬೇಡಿಕೊಳ್ಳುವುದು ಈ ತೆರನ ಮಗ್ಧತೆಯಿ೦ದ. ಅಪ್ಪನ ಆಶೀರ್ವಾದ ತನಗೆ ಒಳ್ಳೆಯದನ್ನು ಮಾಡುತ್ತದೆ ಎ೦ದು ಆ ಬಾಲಕ ನಂಬಿದ೦ತೆ ದೊಡ್ಡವರೂ ದೇವರನ್ನು tv, computer, ಇತ್ಯಾದಿಗಳಲ್ಲಿ ಕಂಡರೂ ನಮಸ್ಕರಿಸುತ್ತಾರೆ. ಇದು ಮೂಢನ೦ಬಿಕೆಯಲ್ಲ; ಹಾಗೆ ತಿಳಿದವರ ಮೌಢ್ಯ. ಹೋಗಲಿ ಬಿಡಿ. ಅವರವರ ಭಾವಕ್ಕೆ, ಅವರವರ ಬಕುತಿಗೆ... ಪುಟ್ಟ ಮತ್ತು ಪುಟ್ಟಿಗೆ ಜನ್ಮದಿನದ ಶುಭಾಶಯಗಳು!

ಪ್ರತಿಕ್ರಿಯೆಯಲ್ಲಿ ತಪ್ಪಿದೆ; ಕ್ಷಮಿಸಬೇಕು. ತಿದ್ದಿದ ಪ್ರತಿಕ್ರಿಯೆ: ನಾವು ಭಾರತೀಯರು, ಮುಖ್ಯವಾಗಿ ಹಿ೦ದೂಗಳು, ಕಲ್ಲು, ಮರ, ಇತ್ಯಾದಿಗಳಿಗೆ ಅಡ್ಡ ಬಿದ್ದು ಬೇಡಿಕೊಳ್ಳುವುದು ಈ ತೆರನ ಮಗ್ಧತೆಯಿ೦ದ. ಅಪ್ಪನ ಆಶೀರ್ವಾದ ತನಗೆ ಒಳ್ಳೆಯದನ್ನು ಮಾಡುತ್ತದೆ ಎ೦ದು ಆ ಬಾಲಕ ನಂಬಿದ೦ತೆ ದೊಡ್ಡವರೂ ದೇವರನ್ನು tv, computer, ಇತ್ಯಾದಿಗಳಲ್ಲಿ ಕಂಡರೂ ನಮಸ್ಕರಿಸುತ್ತಾರೆ. ಇದು ಮೂಢನ೦ಬಿಕೆಯಲ್ಲ; ಹಾಗೆ ತಿಳಿದವರ ಮೌಢ್ಯ. ಹೋಗಲಿ ಬಿಡಿ. ಅವರವರ ಭಾವಕ್ಕೆ, ಅವರವರ ಬಕುತಿಗೆ... ಪುಟ್ಟ ಮತ್ತು ಪುಟ್ಟಿಗೆ ಜನ್ಮದಿನದ ಶುಭಾಶಯಗಳು!