ತಪ್ಪನ್ನು ತಿದ್ದಿದವರಿಗೊಂದು ನಮನ.....

To prevent automated spam submissions leave this field empty.

 


ಚಿಕ್ಕ ಮಗುವಾಗಿದ್ದಾಗ ನಾನು ಕೊಳಚೆಯಲ್ಲಿ ಆಟ ಆಡುತ್ತಿದ್ದಾಗ ಅಕ್ಕ ಪಕ್ಕದ ಜನ ಬೈಯುತ್ತಿದ್ದರು ಏ ಹೋಗೇ....ಮನೆಗೆ ಹೋಗಿ ಕೈ, ಕಾಲು ಶುಚಿ ಮಾಡ್ಕೊ ಅಂತಾ ಆವತ್ತು ಆ ತಪ್ಪು ತಿದ್ದಿಕೊಳ್ಳದಿದ್ದರೆ ಈವತ್ತೂ ಹಾಗೇ ಇರ್ತಿದ್ದೆ.


ಶಾಲೆಯಲ್ಲಿ ಗುರುಗಳು ಘಳಿಗೆಗೊಮ್ಮೆ ಅವಮಾನಿಸುತ್ತಿದ್ದರು "ಕನ್ನಡ ಬರೆಯೋಕೇ ಬರಲ್ಲಾ" ಅಂತಾ


ಆವತ್ತು ನಾನು ಗುರುಗಳ ಮೇಲೆ ಕೋಪ ಮಾಡಿಕೊಂಡಿದ್ದರೆ...ಈವತ್ತೂ ಹಾಗೆ ಇರ್ತಿದ್ದೆ.


ಅತ್ತೆಯ ಮನೆಯಲ್ಲಿ ತೆಗಳುತ್ತಿದ್ದರು "ಅಡುಗೆಗೆ ಉಪ್ಪು ಖಾರ ಸರಿ ಹಾಕೊಲ್ಲಾ ಅಂತಾ, ಆವತ್ತು ತಿದ್ದಿಕೊಳ್ಳದಿದ್ದರೆ ಈವತ್ತು...ಈವತ್ತೂ ಹಾಗೇ ಇರ್ತಿದ್ದೆ.....


ನೌಕರಿ ಸೇರಿದ ಮೇಲೆ ಮೇಲಧಿಕಾರಿ ಕ್ಷಣ ಕ್ಷಣಕೂ ತಪ್ಪು ಹುಡುಕುತ್ತಿದ್ದರು ಆವತ್ತು ಸಹಿಸಿಕೊಂಡು ಸರಿಪಡಿಸಿಕೊಳ್ಳದಿದ್ದರೆ ಈವತ್ತೂ ಹಾಗೇ ಇರ್ತಿದ್ದೆ....


ತಪ್ಪುಗಳನ್ನು ತಿದ್ದಿಕೊಂಡು ವ್ಯಕ್ತಿತ್ವ ಸರಿಪಡಿಸಿಕೊಳ್ಳುವದರಲ್ಲೇ ದೇವರನ್ನು ಕಂಡುಕೊಳ್ಳ ಬಹುದು.


 


 


 


 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಂದಕರಿರಬೇಕಣ್ಣ....... ಎಂದು ಪುರಂದರದಾಸರೇ ಹೇಳಿದ್ದರಲ್ಲ.... :) ಇದು ನಿಜ... ಆದರೆ ಬರೇ ನಿಂದಿಸಿಕೊಂಡೇ ಬದುಕುವ ಬದುಕು ಬೆಳೆಯಲು ಅವಕಾಶ ಕೊಡಲ್ಲ....

ತಪ್ಪುಗಳಾದಾಗ ತಪ್ಪುಗಳನ್ನು ತಿದ್ದುವವನಿಗೆ ವಂದಿಸಿ ತಿದ್ದಿಕೊಳ್ಳುವವರು ಹಲವರು ತಿದ್ದುವವರನ್ನೇ ನಿಂದಕರೆಂದು ಜರೆಯುವರು ತಪ್ಪುಗಳನ್ನೇ ಮಾಡುತ್ತಿರುವ ಕೆಲವರು ತಪ್ಪುಗಳು ಆದರೆ, ಆ ತಪ್ಪುಗಳಿಗೆ ಇಲ್ಲ ಯಾರೂ ಜವಾಬ್ದಾರ ಅರಿತರಿತು ತಪ್ಪುಗಳನ್ನು ಮಾಡಿದರೆ, ಅವುಗಳಾತನಿಗೇ ಭಾರ ನಿಂದನೆಯೇ ಬೇರೆ, ತಿದ್ದಿ ತೀಡುವ ಮಾರ್ಗದರ್ಶನವೇ ಬೇರೆ ಮಾರ್ಗದರ್ಶಕನನೇ ನಿಂದಕನೆಂದರೆ, ಬೇಕಿಲ್ಲ ನಿಂದನೆ ಬೇರೆ ಎಲ್ಲವೂ ಒಳ್ಳೆಯದೇ ಇರಲಿ, ಜಳ್ಳು ಇರದಿರಲಿ ಎಂಬಾಶಯ ಬೇಕು ಜಳ್ಳು ಕಂಡಾಗಲೆಲ್ಲಾ, ಅದ ಕಿತ್ತೊಗೆಯಲು ಎಲ್ಲರೂ ಶ್ರಮ ಪಡಬೇಕು - ಆಸು ಹೆಗ್ಡೆ

ನೀವು ಹೇಳುವುದೂ ಸರಿ ಇದೆ ಕೌಶಿಕ್ ಅವ್ರೇ... ತುಂಬಾ ತೆಗಳಿಸಿಕೊಂಡು ಉದ್ಧಾರವೇ ಆಗದ ನೂರಾರು ಜನರು ನನ್ನ ಕಣ್ಮುಂದೆಯೇ ಇದ್ದಾರೆ... ಅತೀ ಹೆಚ್ಚಾದರೆ ಅಮೃತವೂ ವಿಷವೇ....ಅನ್ನುವ ಗಾದೆಯೂ ಇದೆ. ಪ್ರತಿ.....

ಆತ್ಮೀಯ ಅದು ತೆಗಳಿಸಿಕೊಳ್ಳುವವನ ಮೇಲೆ ಅವಲ೦ಬಿತವಾಗಿದೆ. ತನು ಉದ್ಧಾರವಾಗಬೇಕೆ೦ಬ ಮನಸ್ಸು ಇದ್ದವನು ಅದನ್ನು(ತೆಗಳಿಕೆ) ತನ್ನುದ್ಧಾರಕ್ಕೆ೦ದು ತಿಳಿದರೆ ಆಗ ಅವನು ಉದ್ಧಾರವಾಗಬಹುದು.. ಹಾಗೆ೦ದ ಮಾತ್ರಕ್ಕೆ ತೆಗಳುವವನು ತೆಗಳುವುದನ್ನೇ ಚಟ ಮಾಡಿಕೊಳ್ಳಬಾರದು. ಹರಿ

ತಿದ್ದುಪಡಿ ಮಾಡುವುದು ಮತ್ತು ತೆಗಳಿಕೆ ಅಥವಾ ನಿಂದನೆ, ಇವೆರಡೂ ಬೇರೆ ಬೇರೆ. ಆದ್ದರಿಂದ ತಿದ್ದುವವರು ಮತ್ತು ನಿಂದಕರೂ ಬೇರೆ ಬೇರೆ. ಈ ವರ್ಗಗಳಿಗೆ ತಾಜಾ ಉದಾಹರಣೆಗಳು ಇಲ್ಲೇ ಈ ಸಂಪದದಂಗಳದಲ್ಲೇ ಇದ್ದಾರೆ. ತಿದ್ದುವವರು ಉಪಕಾರ ಮಾಡುತ್ತಾರೆ. ನಿಂದಕರು ಅಪಕಾರವೆಸಗುತ್ತಾರೆ! ತಿದ್ದುವವರನ್ನು ಸದಾ ಸ್ವಾಗತಿಸೋಣ ನಿಂದಕರನ್ನು ದೂರವಿಸೋಣ.

ನನ್ನ ಬಂಧು ಮಿತ್ರ ಕಳಿಸಿದ ಒಂದು ಮಿಂಚಂಚೆ ನೋಡಿದ ಮೇಲೆ ಒಳ್ಲೆ ಮಾತುಗಳಿಗೂ, ತೆಗಳು ಮಾತಿನಿಂದ ಆಗುವ ಪರಿಣಾಮಗಳ ಬಗ್ಗೆ ಸ್ವಲ್ಪ ತಿಳಿದುಕೊಂಡೆ. ತೆಗಳು ಭಟರಿರುವುದಕ್ಕಿಂತ ಮಾರ್ಗದರ್ಶಕರಿರಬೇಕೆಂದು ನನ್ನ ಅನಿಸಿಕೆ... ಉದ್ದಾರ ಆಗುವುದು ಬಿಡುವುದು ಅವರವರಿಗೆ ಬಿಟ್ಟ ವಿಚಾರ... ಕೆಲವರು ತಮ್ಮ ಕೆಲಸ ಮಾಡಿಸಿಕೊಳ್ಲಲು ಹೊಗಳುವುದೂ, ತೆಗಳುವುದೂ ಮಾಡುತ್ತಾರೆ... ನಿಜ, ತಂದೆ ತಾಯಿ, ಹತ್ತಿರದವರು, ಗುರುಗಳು ತೆಗಳಿದರೆ ಅದಕ್ಕೆ ಅರ್ಥ ಇರುತ್ತದೆ. ಆದರೆ ನನ್ನ ಅನುಭವದ ಪ್ರಕಾರ ಅವರೆಲ್ಲ ಮೊದಲಬಾರಿಯೇ ತೆಗಳುವುದಿಲ್ಲ. ಹೇಳಿಯೂ ಕೇಳದಿದ್ದರೆ ಮಾತ್ರ ತೆಗಳುತ್ತಾರೆ.. ಅದಲ್ಲದೆ ಒಳ್ಲೆಯಮಾತು ಹಾಗೂ ನಮ್ಮದು ತಪ್ಪು ಎಂದೆನಿಸಿದರೆ ಎರಡನೇ ಬಾರಿ ಹೇಳಿಸಿಕೊಳ್ಲುವ ಅವಶ್ಯಕತೆಯಾದರೂ ಏಕೆ. ಅಲ್ಲದೇ ನಾವೇ ತಪ್ಪು ಮಾಡಿ ತೆಗಳಿಸಿಕೊಂಡು ಉದ್ದಾರ ಆಗಬೇಕು ಅನ್ನುವುದೇನಿದೆ? ಬೇರೆಯವರ ತಪ್ಪುಗಳನ್ನು ನೋಡಿ ತಪ್ಪೆನಿಸಿದರೆ, ಅದೇ ತಪ್ಪನ್ನು ನಾವು ಮಾಡದಿದ್ದರೂ ಸ್ವ ಲ್ಪ ಉದ್ದಾರ ಆದಹಾಗೇ ತಾನೆ? ಒಳ್ಲೆಯ ಮಾತುಗಳಿಂದ ಸಾಯುತ್ತಿರುವ ಗಿಡವನ್ನೂ ಬದುಕಿಸುತ್ತರಂತೆ. ಕೆಟ್ಟ ಹಾಗೂ ತೆಗಳಿಕೆಯ ಮಾತುಗಳಿಂದ ದಸ್ಟ ಪುಸ್ಟ ಮರಗಳನ್ನೂ ಸಾಯಿಸ್ತಾರಂತೆ. ಇದು ವೈಜ್ನಾನಿಕವಾಗಿಯೂ ಸಾಬೀತಾಗಿದೆಯಂತೆ...