ಹಿಂದಿಗೆ ಬೆಣ್ಣೆ ಉಳಿದ ಭಾಷೆಗಳಿಗೆ ಸುಣ್ಣ

To prevent automated spam submissions leave this field empty.

 

ನಮ್ಮ ಭಾರತ ದೇಶವು ಅನೇಕ ಜಾತಿ, ಭಾಷೆ, ಧರ್ಮ, ಸಂಸ್ಕೃತಿಗಳ ವೈವಿಧ್ಯತೆಯಿಂದ ಕೂಡಿದ ದೇಶ ಅನ್ನುವುದನ್ನು ಇಡೀ ಪ್ರಪಂಚವೇ ಒಪ್ಪುತ್ತದೆ. ಭಾರತದ ಸಂವಿಧಾನದಲ್ಲಿ ಇಂಗ್ಲೀಷ್ ಹಾಗು ಹಿಂದಿ ಭಾಷೆಗಳನ್ನು ಕೇಂದ್ರ ಸರ್ಕಾರದ ಅಧಿಕೃತ ಭಾಷೆಗಳು ಎಂದು ಹೇಳಲ್ಪಟ್ಟಿದೆ. ಇದರ ಜೊತೆಗೆ ಪ್ರತ್ಯೇಕ ರಾಜ್ಯಗಳು ತಮ್ಮ ಭಾಷೆಗಳಲ್ಲಿ ಆಡಳಿತ ನಡೆಸಿಕೊಳ್ಳಬಹುದು ಎನ್ನುವುದನ್ನು ಸಹ ಹೇಳಿದೆ. ಒಟ್ಟಾರೆಯಾಗಿ ಭಾರತದ ಸಂವಿಧಾನದಲಿ ೨೨ ಭಾಷೆಗಳನ್ನು ದೇಶದ ಅಧಿಕೃತ ಆಡಳಿತ ಭಾಷೆಗಳು ಎಂದು ದಾಖಲಗಿದೆ.
ಸಂವಿಧಾನದಲ್ಲಿ ಎಲ್ಲಿಯೂ ಹಿಂದಿ "ರಾಷ್ಟ್ರ ಭಾಷೆ" ಅಂತ ಉಲ್ಲೇಖಿಸಿಲ್ಲ. ಹೀಗಿರುವಾಗ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿಯ ಅನುಷ್ಠಾನ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ನೋಡಿ ಅಳಬೇಕೋ, ನಗಬೇಕೊ ತಿಳಿಯದಾಗಿದೆ.
ಕಳೆದ ವರ್ಷ ಅಧಿಕೃತ ಭಾಷೆಯ ನಿರ್ದೇಶನಾಲಯ(Department of Official Language) ೩೬ ಕೋಟಿ ರುಪಾಯಿಗಳಲ್ಲಿ ಹಿಂದಿ ಭಾಷೆಯನ್ನು ಹಿಂದಿಯೇತರ  ಜನರ ಮೇಲೆ ಹೇರಲು ಖರ್ಚು ಮಾಡಿತ್ತೆಂದು ಸಾಕ್ಷಿಗಳಿವೆ. ಕಳೆದ ೧೦ ವರ್ಷಗಳಲ್ಲಿ ಅಧಿಕೃತ ಭಾಷೆಯ ನಿರ್ದೇಶನಾಲಯವು ೨೦೦ ಕೋಟಿಯಷ್ಟು  ಹಣವನ್ನು ಖರ್ಚು ಮಾಡಿ ಹಿಂದಿಯ ಪಟ್ಟಭಿಶೇಕವನ್ನು ಮಾಡುತ್ತಿದ್ದಾರೆ. ಪ್ರತಿ ವರ್ಷ ಈ ಮೊತ್ತ ಹೆಚ್ಚುತ್ತಿದೆ ಎಂದೂ ಸಹ ದಾಖಲುಗಳಿವೆ. ದೇಶವ ವಿವಿಧ ಭಾಗಗಳ ಜನರು ಕಟ್ಟುವ ತೆರಿಗೆ ಹಣವನ್ನು ಕೇಲವ ಒಂದು ಭಾಷೆಯ ಅಭಿವೃದ್ಧಿಗೆ ಬಳಸುವುದು ಭಾರತದ ಒಕ್ಕೂಟದ ವ್ಯವಸ್ಥೆಗೆ ಮಾಡುತ್ತಿರುವ ಅನ್ಯಾಯವಲ್ಲದೆ ಮತ್ತೇನು? ಕೇಂದ್ರ ಸರ್ಕಾರ ಪ್ರತಿ ವರ್ಷ ಸೆಪ್ಟಂಬರ್ ೧೪ ರಂದು "ಹಿಂದಿ ದಿವಸ್" ಆಚರಣೆಯ ಹೆಸರಿನಲ್ಲಿ ಕೋಟ್ಯಾಂತರ ರುಪಾಯಿಗಳನ್ನು ಖರ್ಚು ಮಾಡಿ ಹಿಂದಿ ಕಾರ್ಯಾಗಾರಗಳು, ಪರೀಕ್ಷೆಗಳು, ಸ್ಪರ್ಧೆಗಳು ಮತ್ತು ಮನರಂಜನೆಗಳನ್ನು  ಆಯೋಜಿಸುವ ಮೂಲಕ ವ್ಯಾಪಕವಾಗಿ ಎಲ್ಲೆಡೆ ಹಿಂದಿ ಪ್ರಚಾರಗಳನ್ನು ಕೈಗೊಳ್ಳುತ್ತಿರುವುದು ಖಂಡನೀಯ.  
ಇತ್ತೀಚಿಗೆ ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ಹಿಂದಿ ರಾಷ್ಟ ಭಾಷೆ ಅಲ್ಲ ಎನ್ನುವು ಮಹತ್ತರವಾದ ತೀರ್ಪು ಹೊರಬಂದಿರುವುದು ನಮಗೆಲ್ಲರಿಗೂ ತಿಳಿದೇ ಇದೆ. 
ಇನ್ನಾದರೂ ಕನ್ನಡ ಮಕ್ಕಳ ಮೇಲೆ ನಡೆಯುತ್ತಿರುವ ಈ ಅನಿಯಂತ್ರಿತ ಹಿಂದಿ ಹೇರಿಕೆಯನ್ನು ತಡೆಯಬೇಕಿದೆ. ನಮ್ಮದಲ್ಲದ, ನಮ್ಮ ಪ್ರಯೋಜನಕ್ಕೆ ಬಾರದ, ಹೊಟ್ಟೆಗೆ ಹಿಟ್ಟು ಕೊಡಲು ಸಾಧ್ಯವಿಲ್ಲದ ಹಿಂದಿ ಭಾಷೆಯನ್ನು ಹೇರುವುದನ್ನು ನಿಲ್ಲಿಸುವಂತೆ ನಾವು ಕೇಂದ್ರ ಹಾಗು ರಾಜ್ಯ ಸರ್ಕಾರಗಳನ್ನು ಆಗ್ರಹಿಸಬೇಕಿದೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೆ ತಂದು "ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ" ಎಂದು ನಿರೂಪಿಸಲಿ ಎನ್ನುವುದು ಪ್ರತಿಯೊಬ್ಬ ಕನ್ನಡಿಗನ ಆಶಯ,

ನಮ್ಮ ಭಾರತ ದೇಶವು ಅನೇಕ ಜಾತಿ, ಭಾಷೆ, ಧರ್ಮ, ಸಂಸ್ಕೃತಿಗಳ ವೈವಿಧ್ಯತೆಯಿಂದ ಕೂಡಿದ ದೇಶ ಅನ್ನುವುದನ್ನು ಇಡೀ ಪ್ರಪಂಚವೇ ಒಪ್ಪುತ್ತದೆ. ಭಾರತದ ಸಂವಿಧಾನದಲ್ಲಿ ಇಂಗ್ಲೀಷ್ ಹಾಗು ಹಿಂದಿ ಭಾಷೆಗಳನ್ನು ಕೇಂದ್ರ ಸರ್ಕಾರದ ಅಧಿಕೃತ ಭಾಷೆಗಳು ಎಂದು ಹೇಳಲ್ಪಟ್ಟಿದೆ. ಇದರ ಜೊತೆಗೆ ಪ್ರತ್ಯೇಕ ರಾಜ್ಯಗಳು ತಮ್ಮ ಭಾಷೆಗಳಲ್ಲಿ ಆಡಳಿತ ನಡೆಸಿಕೊಳ್ಳಬಹುದು ಎನ್ನುವುದನ್ನು ಸಹ ಹೇಳಿದೆ. ಒಟ್ಟಾರೆಯಾಗಿ ಭಾರತದ ಸಂವಿಧಾನದಲಿ ೨೨ ಭಾಷೆಗಳನ್ನು ದೇಶದ ಅಧಿಕೃತ ಆಡಳಿತ ಭಾಷೆಗಳು ಎಂದು ದಾಖಲಗಿದೆ.ಸಂವಿಧಾನದಲ್ಲಿ ಎಲ್ಲಿಯೂ ಹಿಂದಿ "ರಾಷ್ಟ್ರ ಭಾಷೆ" ಅಂತ ಉಲ್ಲೇಖಿಸಿಲ್ಲ. ಹೀಗಿರುವಾಗ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿಯ ಅನುಷ್ಠಾನ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ನೋಡಿ ಅಳಬೇಕೋ, ನಗಬೇಕೊ ತಿಳಿಯದಾಗಿದೆ.ಕಳೆದ ವರ್ಷ ಅಧಿಕೃತ ಭಾಷೆಯ ನಿರ್ದೇಶನಾಲಯ(Department of Official Language) ೩೬ ಕೋಟಿ ರುಪಾಯಿಗಳಲ್ಲಿ ಹಿಂದಿ ಭಾಷೆಯನ್ನು ಹಿಂದಿಯೇತರ  ಜನರ ಮೇಲೆ ಹೇರಲು ಖರ್ಚು ಮಾಡಿತ್ತೆಂದು ಸಾಕ್ಷಿಗಳಿವೆ. ಕಳೆದ ೧೦ ವರ್ಷಗಳಲ್ಲಿ ಅಧಿಕೃತ ಭಾಷೆಯ ನಿರ್ದೇಶನಾಲಯವು ೨೦೦ ಕೋಟಿಯಷ್ಟು  ಹಣವನ್ನು ಖರ್ಚು ಮಾಡಿ ಹಿಂದಿಯ ಪಟ್ಟಭಿಶೇಕವನ್ನು ಮಾಡುತ್ತಿದ್ದಾರೆ. ಪ್ರತಿ ವರ್ಷ ಈ ಮೊತ್ತ ಹೆಚ್ಚುತ್ತಿದೆ ಎಂದೂ ಸಹ ದಾಖಲುಗಳಿವೆ. ದೇಶವ ವಿವಿಧ ಭಾಗಗಳ ಜನರು ಕಟ್ಟುವ ತೆರಿಗೆ ಹಣವನ್ನು ಕೇಲವ ಒಂದು ಭಾಷೆಯ ಅಭಿವೃದ್ಧಿಗೆ ಬಳಸುವುದು ಭಾರತದ ಒಕ್ಕೂಟದ ವ್ಯವಸ್ಥೆಗೆ ಮಾಡುತ್ತಿರುವ ಅನ್ಯಾಯವಲ್ಲದೆ ಮತ್ತೇನು? ಕೇಂದ್ರ ಸರ್ಕಾರ ಪ್ರತಿ ವರ್ಷ ಸೆಪ್ಟಂಬರ್ ೧೪ ರಂದು "ಹಿಂದಿ ದಿವಸ್" ಆಚರಣೆಯ ಹೆಸರಿನಲ್ಲಿ ಕೋಟ್ಯಾಂತರ ರುಪಾಯಿಗಳನ್ನು ಖರ್ಚು ಮಾಡಿ ಹಿಂದಿ ಕಾರ್ಯಾಗಾರಗಳು, ಪರೀಕ್ಷೆಗಳು, ಸ್ಪರ್ಧೆಗಳು ಮತ್ತು ಮನರಂಜನೆಗಳನ್ನು  ಆಯೋಜಿಸುವ ಮೂಲಕ ವ್ಯಾಪಕವಾಗಿ ಎಲ್ಲೆಡೆ ಹಿಂದಿ ಪ್ರಚಾರಗಳನ್ನು ಕೈಗೊಳ್ಳುತ್ತಿರುವುದು ಖಂಡನೀಯ.  ಇತ್ತೀಚಿಗೆ ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ಹಿಂದಿ ರಾಷ್ಟ ಭಾಷೆ ಅಲ್ಲ ಎನ್ನುವು ಮಹತ್ತರವಾದ ತೀರ್ಪು ಹೊರಬಂದಿರುವುದು ನಮಗೆಲ್ಲರಿಗೂ ತಿಳಿದೇ ಇದೆ. ಇನ್ನಾದರೂ ಕನ್ನಡ ಮಕ್ಕಳ ಮೇಲೆ ನಡೆಯುತ್ತಿರುವ ಈ ಅನಿಯಂತ್ರಿತ ಹಿಂದಿ ಹೇರಿಕೆಯನ್ನು ತಡೆಯಬೇಕಿದೆ. ನಮ್ಮದಲ್ಲದ, ನಮ್ಮ ಪ್ರಯೋಜನಕ್ಕೆ ಬಾರದ, ಹೊಟ್ಟೆಗೆ ಹಿಟ್ಟು ಕೊಡಲು ಸಾಧ್ಯವಿಲ್ಲದ ಹಿಂದಿ ಭಾಷೆಯನ್ನು ಹೇರುವುದನ್ನು ನಿಲ್ಲಿಸುವಂತೆ ನಾವು ಕೇಂದ್ರ ಹಾಗು ರಾಜ್ಯ ಸರ್ಕಾರಗಳನ್ನು ಆಗ್ರಹಿಸಬೇಕಿದೆ.ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೆ ತಂದು "ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ" ಎಂದು ನಿರೂಪಿಸಲಿ ಎನ್ನುವುದು ಪ್ರತಿಯೊಬ್ಬ ಕನ್ನಡಿಗನ ಆಶಯ.

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

<<ಪ್ರತಿ ವರ್ಷ ಈ ಮೊತ್ತ ಹೆಚ್ಚುತ್ತಿದೆ ಎಂದೂ ಸಹ ದಾಖಲುಗಳಿವೆ. ದೇಶವ ವಿವಿಧ ಭಾಗಗಳ ಜನರು ಕಟ್ಟುವ ತೆರಿಗೆ ಹಣವನ್ನು ಕೇಲವ ಒಂದು ಭಾಷೆಯ ಅಭಿವೃದ್ಧಿಗೆ ಬಳಸುವುದು ಭಾರತದ ಒಕ್ಕೂಟದ ವ್ಯವಸ್ಥೆಗೆ ಮಾಡುತ್ತಿರುವ ಅನ್ಯಾಯವಲ್ಲದೆ ಮತ್ತೇನು? ಕೇಂದ್ರ ಸರ್ಕಾರ ಪ್ರತಿ ವರ್ಷ ಸೆಪ್ಟಂಬರ್ ೧೪ ರಂದು "ಹಿಂದಿ ದಿವಸ್" ಆಚರಣೆಯ ಹೆಸರಿನಲ್ಲಿ ಕೋಟ್ಯಾಂತರ ರುಪಾಯಿಗಳನ್ನು ಖರ್ಚು ಮಾಡಿ ಹಿಂದಿ ಕಾರ್ಯಾಗಾರಗಳು, ಪರೀಕ್ಷೆಗಳು, ಸ್ಪರ್ಧೆಗಳು ಮತ್ತು ಮನರಂಜನೆಗಳನ್ನು ಆಯೋಜಿಸುವ ಮೂಲಕ ವ್ಯಾಪಕವಾಗಿ ಎಲ್ಲೆಡೆ ಹಿಂದಿ ಪ್ರಚಾರಗಳನ್ನು ಕೈಗೊಳ್ಳುತ್ತಿರುವುದು ಖಂಡನೀಯ. >> ಹಿಂದಿ ಈ ರಾಷ್ಟ್ರದ ಒಂದು ಭಾಷೆ. ಹಾಗಿರುವಾಗ ಅದರ ಮೇಲೆ ಖರ್ಚು ಮಾಡುವುದು ಖಂಡನೀಯ ಅನಿಸುವುದಿಲ್ಲ. ತೆರಿಗೆ ಹಣ ಪೋಲು ಆಗುತ್ತಿರುವುದು ಭಾಷೆಯ ಮೇಲಿನ ಖರ್ಚೊಂದರಿಂದಲೇ ಅಲ್ಲ. ಇದಕ್ಕಿಂತ ಹೆಚ್ಚಿನ ಹಣ ಇನ್ನೂ ಎಲ್ಲೆಡೆ ಪೋಲಾಗುತ್ತಿದೆ. <<ಇತ್ತೀಚಿಗೆ ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ಹಿಂದಿ ರಾಷ್ಟ ಭಾಷೆ ಅಲ್ಲ ಎನ್ನುವು ಮಹತ್ತರವಾದ ತೀರ್ಪು ಹೊರಬಂದಿರುವುದು ನಮಗೆಲ್ಲರಿಗೂ ತಿಳಿದೇ ಇದೆ. ಇನ್ನಾದರೂ ಕನ್ನಡ ಮಕ್ಕಳ ಮೇಲೆ ನಡೆಯುತ್ತಿರುವ ಈ ಅನಿಯಂತ್ರಿತ ಹಿಂದಿ ಹೇರಿಕೆಯನ್ನು ತಡೆಯಬೇಕಿದೆ. ನಮ್ಮದಲ್ಲದ, ನಮ್ಮ ಪ್ರಯೋಜನಕ್ಕೆ ಬಾರದ, ಹೊಟ್ಟೆಗೆ ಹಿಟ್ಟು ಕೊಡಲು ಸಾಧ್ಯವಿಲ್ಲದ ಹಿಂದಿ ಭಾಷೆಯನ್ನು ಹೇರುವುದನ್ನು ನಿಲ್ಲಿಸುವಂತೆ ನಾವು ಕೇಂದ್ರ ಹಾಗು ರಾಜ್ಯ ಸರ್ಕಾರಗಳನ್ನು ಆಗ್ರಹಿಸಬೇಕಿದೆ.ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೆ ತಂದು "ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ" ಎಂದು ನಿರೂಪಿಸಲಿ ಎನ್ನುವುದು ಪ್ರತಿಯೊಬ್ಬ ಕನ್ನಡಿಗನ ಆಶಯ.>> ಈ ಮಾತಂತೂ ನಿಜ. ನನ್ನ ಸಂಪೂರ್ಣ ಸಹಮತ ಇದೆ. ನಮ್ಮ ರಾಜ್ಯ ಸರಕಾರ, ಕನ್ನಡವೊಂದನ್ನೇ ಆಡಳಿತ ಭಾಷೆಯಾಗಿ ಜಾರಿಗೊಳಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಸರಕಾರವೇ ತನ್ನ ಇಚ್ಛಾಶಕ್ತಿಯನ್ನು ತೋರಿಸದೇ ಇರುವಾಗ ಕೇಂದ್ರ ಸರಕಾರವನ್ನು ದೂರಲಾಗದು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏನು ಮಾಡುತ್ತಿದೆಯೋ ದೇವರೇ ಬಲ್ಲ. ಅಲ್ಲೂ ಓರ್ವ ಮುಖ್ಯಮಂತ್ರಿ ಇದ್ದಾರಲ್ಲಾ...! ಇಬ್ಬರು ಮುಖ್ಯಮಂತ್ರಿಗಳಿದ್ದೂ ಏನೂ ಮಾಡುತ್ತಿಲ್ಲ. :(

@ ಭಾರತದ ಸಂವಿಧಾನದಲ್ಲಿ ಇಂಗ್ಲೀಷ್ ಹಾಗು ಹಿಂದಿ ಭಾಷೆಗಳನ್ನು ಕೇಂದ್ರ ಸರ್ಕಾರದ ಅಧಿಕೃತ ಭಾಷೆಗಳು ಎಂದು ಹೇಳಲ್ಪಟ್ಟಿದೆ. @ ಕೇಂದ್ರ ಸರ್ಕಾರ ಪ್ರತಿ ವರ್ಷ ಸೆಪ್ಟಂಬರ್ ೧೪ ರಂದು "ಹಿಂದಿ ದಿವಸ್" ಆಚರಣೆಯ ಹೆಸರಿನಲ್ಲಿ ಕೋಟ್ಯಾಂತರ ರುಪಾಯಿಗಳನ್ನು ಖರ್ಚು ಮಾಡಿ ಹಿಂದಿ ಕಾರ್ಯಾಗಾರಗಳು, ಪರೀಕ್ಷೆಗಳು, ಸ್ಪರ್ಧೆಗಳು ಮತ್ತು ಮನರಂಜನೆಗಳನ್ನು ಆಯೋಜಿಸುವ ಮೂಲಕ ವ್ಯಾಪಕವಾಗಿ ಎಲ್ಲೆಡೆ ಹಿಂದಿ ಪ್ರಚಾರಗಳನ್ನು ಕೈಗೊಳ್ಳುತ್ತಿರುವುದು ಖಂಡನೀಯ. ಹಿಂದೀ ಕೇಂದ್ರ ಸರ್ಕಾರದ ಅಧಿಕೃತ ಭಾಷೆ, ಅದಕ್ಕೆ ಖರ್ಚು ಮಾಡಿದರೆ ತಪ್ಪೇನು ಇಲ್ಲ ಅನ್ನುವುದು ನನ್ನ ಅಭಿಮತ. ಕರ್ನಾಟಕ ಕನ್ನಡಕ್ಕಾಗಿ ಹಣ ಖರ್ಚುಮಾಡುವುದು ತಪ್ಪು ಅಂತ ನಿಮ್ಮ ಅಭಿಪ್ರಾಯನಾ?