ಚುರ್ಮುರಿ - ೯

To prevent automated spam submissions leave this field empty.

೨೫) ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳಿಗೆ ಪ್ರಸ್ತುತ ಸರ್ಕಾರದಿಂದ ಸಿಕ್ಕಿರುವ ರಜೆಗಳ ಕೊಡುಗೆ ಬೇರ್ಯಾವುದೇ ಸರ್ಕಾರದಿಂದ ದಕ್ಕಿಲ್ಲ.

 

೨೬) ಅಪ್ಪ ಕೃಷಿಕ, ಮಗ ಸಾಫ್ಟ್ವೇರ್ ಇಂಜಿನಿಯರ್. ಅಪ್ಪ ಕಷ್ಟಪಟ್ಟು ದುಡಿದು ಹೊಲ-ಗದ್ದೆ, ತೋಟಗಳನ್ನು ಮಾಡಿದ. ಮಗ ೪೫ ವರ್ಷವಾದರೂ ತೆಗೆದುಕೊಂಡ ಒಂದು ಅಪಾರ್ಟ್ಮೆಂಟಿಗೆ ಸಾಲವನ್ನು ಕಟ್ಟುತ್ತಲೇ ಇದ್ದಾನೆ.

 

೨೭) ಅವಳಿಗೆ ವಯಸ್ಸು ೨೬, ಒಳ್ಳೆಯ ವರ ಬಂದರೂ ಇನ್ನೂ ೨ ವರ್ಷವಾದರೂ ಮದುವೆಯಾಗಲಿಲ್ಲವೆಂದಳು. ೨ ವರ್ಷದ ಖುಷಿಗಾಗಿ ಮುಂದಿನ ಜೀವನವನ್ನು ತನಗಿಷ್ಟವಿಲ್ಲದವನ ಜೊತೆ ಕಳೆಯಬೇಕಾಯಿತು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಯಡ್ಯೂರಪ್ಪನವರೇನು "ರಜಾಕಾಲದ ಮುಖ್ಯಮಂತ್ರಿ"ಯೇ? (ರಜಾಕಾಲದ ನ್ಯಾಯಾಧೀಶರಂತೆ!) ***** ಅಪ್ಪನಿಗೆ ಒಂದು ದೃಢವಾದ ಗುರಿ ಇತ್ತು. ಈತನಿಗೆ "ವಿಷನ್" ಮತ್ತು "ಪ್ಲಾನ್" ಇವೆಯೆಂಬ ಭ್ರಮೆ ಇದೆ. ***** ಆ ಎರಡು ವರ್ಷದಲ್ಲೇ ಜೀವನದ ಖುಷಿಯೆಲ್ಲವನ್ನೂ ಅನುಭವಿಸಿಬಿಟ್ಟಳೇ?

<ಯಡ್ಯೂರಪ್ಪನವರೇನು "ರಜಾಕಾಲದ ಮುಖ್ಯಮಂತ್ರಿ"ಯೇ? (ರಜಾಕಾಲದ ನ್ಯಾಯಾಧೀಶರಂತೆ!)> ಇರಬಹುದು, ಒಳ್ಳೆಯ ಹೆಸರು. <ಆ ಎರಡು ವರ್ಷದಲ್ಲೇ ಜೀವನದ ಖುಷಿಯೆಲ್ಲವನ್ನೂ ಅನುಭವಿಸಿಬಿಟ್ಟಳೇ? > ಇಲ್ಲ ಅನ್ಸತ್ತೆ ಅವಳು ಅಂದ್ಕೊಂಡಿದ್ದು ಹಾಗೆ :) ಪ್ರತಿಕ್ರಿಯೆಗೆ ಧನ್ಯವಾದ ಹೆಗಡೆಯವರೇ

೨೬ ನೆಯದು ಹಾಸ್ಯಭರಿತವಾಗಿದ್ದರೂ ಚಿ೦ತನಾರ್ಹವಾಗಿದೆ ಚಿಕ್ಕು. ಚುರ್ಮುರಿ ಇನ್ನಷ್ಟಿದ್ದರೆ ಒಳ್ಳೆಯದಿತ್ತೆ೦ಬ ನನ್ನ ಬೇಡಿಕೆಗೆ ತಿ೦ಗಳುಗಳು ತು೦ಬುತ್ತಾ ಬ೦ದಿವೆ. ಕೊನೇ ಪಕ್ಷ ೫ ಕ್ಕಾದರೂ ಏರಿಸಬಹುದಲ್ವೇ? ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

<ಚುರ್ಮುರಿ ಇನ್ನಷ್ಟಿದ್ದರೆ ಒಳ್ಳೆಯದಿತ್ತೆ೦ಬ ನನ್ನ ಬೇಡಿಕೆಗೆ ತಿ೦ಗಳುಗಳು ತು೦ಬುತ್ತಾ ಬ೦ದಿವೆ > :) :) ಆಯ್ತು ಇನ್ನು ಮುಂದೆ ತಲೆ ಓಡಿದರೆ ೫ ಖಂಡಿತ :) ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದ ಪ್ರತಿಕ್ರಿಯೆಗೆ ಧನ್ಯವಾದ ನಾವಡವ್ರೆ

೨೬) ಎಲ್ಲಾ ಸಾಫ್ಟ್ ವೇರ್ ಇಂಜಿನಿಯರುಗಳ ಅವಸ್ತೆ ಇದೇನೇ... ಸದ್ಯಕ್ಕೆ ನಾನೊಬ್ಬ exception. ನಾವಡರ ಮಾತಿಗೆ ನನ್ನ ಸಹಮತವಿದೆ. ಶುರುವಾಗೋ ಮೊದ್ಲೇ ಮುಗಿಯತ್ತೆ :)

ಇನ್ನೂ ಇದೆ ಅದೇ....ಕೊಡುಗೆ ಚೇತೂ ಚುರ್ಮುರಿ ಚಟ್ಪಟಾ ಆಗಿದೆ ಮಸ್ತ್.......ಇದೆ

ಚುರುಮುರಿ ಚೆನ್ನಾಗಿದೆಯೆಂದು ನೀವೇ ತಿನ್ನುತ್ತಿದ್ದೀರಾ? ನಿಮ್ಮ ಫೋಟೋ ನೋಡಿ ಹಾಗನ್ನಿಸಿತು.

ಇಲ್ಲ ಇಲ್ಲ ನಿಮಗೆಲ್ಲ ಹಂಚುತ್ತಿದ್ದೇನಲ್ಲ :):) ಧನ್ಯವಾದ ನಾಗರಾಜವ್ರೆ

ಚೇತನ್... ಬರೀ ಚುರ್ಮುರಿ ಹಂಚ್ತೀರಿ.... ಕಾಫಿ ಮಾತ್ರ ಅದೆಷ್ಟು ತಿಂಗಳುಗಳಿಂದಾನೋ ಅದೇ ಪುಟಾಣಿ ಲೋಟದಲ್ಲಿ.... ಒಬ್ಬರೇ ಕುಡೀತಾನೇ ಇದೀರಲ್ಲಾ.... !!! ಚುರ್ಮುರಿ ಚೆನ್ನಾಗಿದೆ........... :-) ಶ್ಯಾಮಲ

ಒಂದು ವರ್ಷದಿಂದ ಎಷ್ಟು ಸೊಳ್ಳೆಗಳು ನೊಣಗಳು ಬಿದ್ದಿದ್ದಾವೋ ಆ ಲೋಟದಲ್ಲಿ!!! ಇನ್ನೂ ಕುಡಿತಿದ್ದೀರಲ್ಲಾ!!! :)

ಹೊಸ ವರ್ಷಕ್ಕೆ ಹೊಸ ಲೋಟದೊ೦ದಿಗೆ, ಹೊಸ ಗೆಟಪ್ ನಲ್ಲಿ ಕುಡಿಯುತ್ತಿರುವ ಫೋಟೋ ಹಾಕೋಣ ಅ೦ತ ಕಾಯ್ತಿದ್ದಾರೆ ಅನ್ಸುತ್ತೆ ಆಚಾರ್ಯರೇ.

ಯಾವುದೇ ಫೋಟೋ ಹಾಕಿದರೂ.. ಕಾಫಿ ಕಪ್ ಜೊತೆಗೆ ಕಾಫಿ ಎರಡೂ ಬಿಡಬೇಡಿ... ಚೇತನ್.. ಸರಿಯೇ ನಾವಡರೆ..? ನಿಮ್ಮೊಲವಿನ, ಸತ್ಯ..:-)

ನಾವಡವ್ರೆ ಹೊಸ ಲೋಟ ಇಷ್ಟ ಆದ್ರೆ ಮಾತ್ರ ಇಲ್ಲಾಂದ್ರೆ ಹಳೇ ಲೋಟವೇ ಗತಿ :)

ಯಪ್ಪ್ಪಾ, ನನ್ನ ಕಾಫ್ಹೀ ಲೋಟಕ್ಕೆ ಯಾಕೆ ಎಲ್ಲರ ಕಣ್ಣು :( :( ಇಲ್ರೀ ಸಂತೋಷ್, ಕಾಫಿ ಕುಡಿದ ತಕ್ಷಣ ತೊಳೆದು ಮಕಾಡೆ ಹಾಕಿಬಿಡ್ತೀನಿ :)