ಮಿತ್ರರೆಲ್ಲರಿಗೂ ಧನ್ಯವಾದಗಳು

To prevent automated spam submissions leave this field empty.


ಚಿತ್ರದಲ್ಲಿ ಇರುವವರು ಪತ್ರಕರ್ತ ಮಿತ್ರರಾದ ಇ.ಹೆಚ್. ಬಸವರಾಜ್, ಅರುಣ್ ಕುಮಾರ್, ಸುರೇಶ್ ನಾಡಿಗ್ , ಧನಂಜಯ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಗಿಡ್ಡಪ್ಪ, ವಿನೋದ ಹಾಗೂ ಅವರ ತಾಯಿ ಹಾಜರಿದ್ದಾರೆ.
ಮಾನ್ಯರೆ ಸಂಪದದಲ್ಲಿ ಪ್ರಕಟವಾದ "ಜೈ ಎಂದ ಬಾಲಕ ಅಂಗವಿಕಲ" ಲೇಖನಕ್ಕೆ ಮೆಚ್ಚುಗೆ ಹಾಗೂ ಕಳಕಳಿ ವ್ಯಕ್ತವಾದ ಹಿನ್ನಲೆಯಲ್ಲಿ ಸಹೃದಯಿ ಸಂಪದಿಗ ಮಿತ್ರರು ಸೇರಿದಂತೆ ಹಲವರು ವಿನೋದನಿಗೆ ಆರ್ಥಿಕ ಸಹಾಯಕ್ಕೆ ಮುಂದಾಗಿದ್ದು. ಅವರುಗಳ ಹೃದಯ ವೈಶಾಲ್ಯತೆಯನ್ನು ತೋರಿದೆ. ಹಾಗೇ ಶಿಕಾರಿಪುರದ ಕರ್ನಾಟಕ ಬ್ಯಾಂಕಿನ ರವೀಶ್ ಸೇರಿದಂತೆ ಮತ್ತಿತತರು ಕೂಡ ವಿವಿಧ ರೀತಿಯಲ್ಲಿ ಸಹಾಯ ಹಸ್ತ ಚಾಚಿದ್ದಾರೆ.  ಬಂದಂತಹ ಹಣವನ್ನು ನಿಷ್ಠೆಯಿಂದ ಎಲ್ಲಾ ಗೆಳೆಯರ ಸಮ್ಮುಖದಲ್ಲಿ ಫಲಾನುಭವಿ ವಿನೋದನಿಗೆ ತಲುಪಿಸುವ ಕಾರ್ಯ ಮಾತ್ರ ನಾನು ಮಾಡಿದ್ದೇನೆ. ಹಣವನ್ನು ಆತನ ಹೆಸರಿನಲ್ಲಿ ಬ್ಯಾಂಕಿನಲ್ಲಿ ಖಾತೆಯನ್ನು ತೆರೆದು ಕೇವಲ ಶಿಕ್ಷಣಕ್ಕೆ ಮಾತ್ರ ಬಳಕೆಯಾಗುವಂತೆ ಎಚ್ಚರ ವಹಿಸಲಾಗಿದೆ. ಸಹೃದಯಿಗಳಾದ ಸಂಪದಿಗ ಮಿತ್ರರಿಗೆ, ಸಂಪದದ ಸಂಪಾದಕರಾದ ಶ್ರೀಯುತ ಹರಿಪ್ರಸಾದ್ ನಾಡಿಗರಿಗೆ ಹಾಗೇ ಸಹಾಯ ಹಸ್ತ ಚಾಚಿದ ಎಲ್ಲರಿಗೂ ಮತ್ತೊಮ್ಮೆ ಅನಂತ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ನಿಮ್ಮಗಳ ಸಹಕಾರ ಪ್ರೀತಿ ಸದಾಹೀಗೆ ಇರಲಿ.
ಸುರೇಶ್ ನಾಡಿಗ್.
9741476838

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಅ೦ಗವಿಕಲ ಬಾಲಕನಿಗೆ ನೀವು ಹಾಗೂ ಸ೦ಪದಿಗರು ಹಾಗೂ ಇತರೆ ವ್ಯಕ್ತಿಗಳು ಮಾಡಿರುವ ಸಹಾಯ ಕಾರ್ಯ ಸ್ತುತ್ಯಾರ್ಹವಾದುದು. ನಿಮ್ಮೆಲ್ಲರ ಪ್ರೋತ್ಸಾಹ ಬಡ ಹುಡುಗರತ್ತ, ನೊ೦ದವರತ್ತ ಸದಾ ಹೀಗೇ ಇರಲಿ ಎ೦ಬ ಶುಭಕಾಮನೆಗಳನ್ನು ವ್ಯಕ್ತಪಡಿಸುತ್ತೇನೆ.ನಿಮಗೆಲ್ಲರಿಗೂ ದೇವರು ಒಳ್ಳೆಯದನ್ನು ಮಾಡಲಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.