ಮಗುವಿನ ನಗುವಿಗೆ ಬೆಲೆಕಟ್ಟಲಾದೀತೆ?? / ಎಳೆಯ ಕಂದಮ್ಮಗಳ ಕರುಳ ಕಾಡುವ ಅಪರೂಪದ ಖಾಯಿಲೆ = ಹರ್ಶ್ಸ್ ಸ್ಪ್ರುಂಗ್ಸ್

To prevent automated spam submissions leave this field empty.


  ಮದುವೆಯಾಗಿ ೨ ವರುಶಗಳ ನಂತರ ಮನೆಗೆ ಪುಟಾಣಿ ಪಾಪು ಬರುವ ಸಂತಸ, ಆ ದಂಪತಿಗಳ ಮೊಗದಲ್ಲಿ ಹೊಳಪು, ಉತ್ಸಾಹ ತಂದಿತ್ತು. ಮಗುವಿನ ಕನಸನ್ನೇ ಕಾಣುತ್ತ ಹಗಲಿರುಳ ಕಳೆಯುತಳಿದ್ದಳು ಆ ಭಾವಿ ತಾಯಿ.ಆಕೆಯ ಬಯಕೆ ತೀರಿಸುವುದೇ ತನ್ನ ಸದ್ಯದ ಗುರಿ ಎಂಬಂತೆ ಪತಿ. ಹಾಲಿನೊಂದಿಗೆ ಕೇಸರಿ ತಪ್ಪದೇ, ಕುಡಿಯಲೇ ಬೇಕೆಂಬ ಪತಿಯ ಆಶಯ, ಆಜ್ನೆ ಯಂತೆ. ನಡೂರಾತ್ರಿ ಕೆಲಸ ಮುಗಿಸಿ ಬಂದು, ಆಗಲು ಹಣ್ಣು ತಿನ್ನ ಬೇಕು,ನಿನಗಲ್ಲ ನನ್ನ ಪಾಪುಗೆ ಇದು ಎಂದು ಹೇಳುತ್ತಿದ್ದ ಆತ. ಆಕೆಯ ಬಯಕೆಯ ಮಾವಿನಕಾಯಿಯನ್ನ ೯ ತಿಂಗಳೊಳಗೆ ತಿಂದೇ ತಿನ್ನಿಸುವೆ ಎಂಬ ಪ್ರೊಜೆಕ್ಟ್ ಬೇರೆ, ಕೊನೆಗೂ ಯಶಸ್ವಿ, ಆದರೂ ಬಯಕೆಯ ನೇರಳೆ ಹಣ್ಣು  ತಿನ್ನಿಸಲಾಗಲಿಲ್ಲವಲ್ಲ ಎಂಬ ನಿರಾಸೆ ಒಂದೆಡೆ ಆತನಿಗೆ.
 
ಆ ದಿನ ಬಯಕೆ ಶಾಸ್ತ್ರ, ಅವಳಾಸೆಯ ದುಂಡು ಮಲ್ಲಿಗೆ ಮೊಗ್ಗಿನ ಜಡೆ ಗಾಗಿ ೩ ಗಂಟೆ ಕಾದು ಹೂಗಾರನ ಬಳಿ ಚಂದದಿ ಫೋಣಿಸಿ ತಂದಿದ್ದ ಪತಿರಾಯರು, ಚೋಟುದ್ದ ಜುಟ್ಟಿಗೆ ಮಾರುದ್ದದ ಜಡೆ ಹೆಣೆದು ,ಹಸಿರ ರೇಶಿಮೆ ಸೀರೆ ಉಡಿಸಿ,ಅಲಂಕರಿಸಿ, ನೆಂಟರಿಸ್ತರನ್ನೆಲ್ಲಾ ಸೇರಿಸಿ, ಮನೆಗೆ ಬರಲಿದ್ದ ಹೊಸ ಅತಿಥಿ ಗೆ ಅದ್ದೂರಿ ಸ್ವಾಗತ. ಆ ದಿನ ಸುಧಿನ.

ನವ ಮಾಸಗಳು ತುಂಬಿದವು, ಇಂದೋ, ನಾಳೆಯೋ, ಬೇಗ ಬರಬಾರದೇ ಆ ದಿನ?
ವಲ್ಲದ ಮನಸ್ಸಲ್ಲು ಕೆಲಸಕ್ಕೆ ಹೋಗಬೇಕು, ಮನೆಯಿಂದ ಯಾವಾಗಲಾದರು ಕರೆ ಬರಬಹುದು ಎಂಬ ಆತಂಕ ಪತಿಗಾದರೆ, ಅವರಿಲ್ಲದೆ ಒಂದು ಕ್ಶಣ ಕಳೆಯುವುದೂ ಕಸ್ಟ. ದಿನ ಕಳೆದಂತೆ, ಏನೋ ಭಯ, ಕಾತುರ, ಹೆರಿಗೆಯ ಸಮಯದಲ್ಲಿ ಅವರಿದ್ದರೆ ನೂರಾನೆ ಭಲ ಎಂಬಂತೆ, ಆಕೆಗೆ!!
  ಆ ದಿನ ಬಂದೇ ಬಿಟ್ಟಿತು.ಗರ್ಭ ಚೀಲದ ನೀರೊಡೆದು, ಆಕೆ ಆಸ್ಪತ್ರೆಗೆ ದಾಖಲು. ಅವಸರದಿಂದ ಧಾವಿಸಿದ ಪತಿ, ಮುಖದಲ್ಲಿ ಎಲ್ಲಿಲ್ಲದ ಆತಂಕ. ಕೊನೆಗೆ ಸಿಸೀರಿಯನ್ ಮಾಡಲೇ ಬೇಕಾದ ಅಗತ್ಯ ತಿಳಿಸಿದರು ವೈದ್ಯೆ!.
ಅದು ಬೆಳಗಿನ ಜಾವ ಸುಮಾರು ೬ ಗಂಟೆ, ಪತ್ನಿಯ ಕೈ ಹಿಡಿದು ಧೈರ್ಯ ಹೇಳುತ್ತಿದ್ದ ಅವನ ಕೈ ನಡುಗುತ್ತಿತ್ತು, ತಣ್ಣಗೆ ಕೊರೆಯುತ್ತಿತ್ತು. ಕೊನೆಗೆ ಪತಿಗೇ ಧೈರ್ಯ ಹೇಳಿ ಶಸ್ತ್ರ ಚಿಕಿತ್ಸಾ ಕೊಟಡಿಯೊಳಗೆ ಹೊರಟ ಮಡದಿಯ ಕೈಗೆ ದೇವರ ಫೋಟೊ ಇಟ್ಟ ಆತನ ಮನದಲ್ಲೇನೋ ತವಕ, ತಳಮಳ. ಧೈರ್ಯಸ್ತೆಯಂತೇ ಒಳ ಹೋದ ಆಕೆ ನನಗೇನೂ ಭಯವಿಲ್ಲ ವೆಂದಳಾದರೂ ಅವಳ ಹ್ರುದಯ ಮಾತ್ರ ಲಬ್ ಡ್ಬ್ ಲಬ್ ಡ್ಭ್!

ಸಮಯ ೭. ೧೭.ಆಸ್ಪತ್ರೆಗೇ ಕೇಳಿಸುವಂತೆ ಅವ್ವಾವ್ವ್ವಾ ಆವ್ವಾ ಏಂದು ಕಿರುಚುತಾ ಅಮ್ಮನ ಹೊಟ್ಟೆ ಸೀಳಿ ಭೂಮಿಗೆ ಬಂತು ಮುದ್ದಾದ  ಪುಟಾಣಿ ಹೆಣ್ಣು ಮಗು.ತಿದ್ದಿ ತೀಡಿದಂತಿದ್ದ ಹುಬ್ಬು, ಉದ್ದನೆಯ ಮೂಗು, ಕೈ ಕಾಲು ಬೆರಳುಗಳು ,ಕೆಂಪಾದ ತುಟಿ, ನೋಡಿ ಸಂತಸದಿಂದುಬ್ಬಿದ ಅಪ್ಪ ತನ್ನ ಕಂದನನ್ನ ಕರೆದದ್ದು ಏಂಜೆಲ್ ಅಂತ.ಸಧ್ಯ ಎಲ್ಲ ಕ್ಶೇಮವಾಗಿ ಆಯಿತಲ್ಲ ಎಂದು ಮನೆಯವರೆಲ್ಲರೂ ನಿಟ್ಟುಸಿರಿಟ್ಟರು, ಎಲ್ಲರಿಗೂ ಸಿಹಿ ಹಂಚಿದರು.

ಆ ಕೂಸೋ ಬಹಳ ಸಮಾಧಾನಿ, ಮೊದಮೊದಲು ಅಳುತ್ತಿದ್ದ ಕೂಸು ಅಳುವುದನ್ನೂ ಕಡಿಮೆ ಮಾಡುತ ಚನ್ನಾಗಿ ನಿದ್ರೆ ಮಾಡಲಾರಂಭಿಸಿತು.ಎಸ್ಟು ಒಳ್ಳೆಯ ಮಗು, ತಾಯಿ ಗೆ ಕೊಂಚವೂ ಕಾಡಿಸುವುದಿಲ್ಲ ಎಂದು ಕೊಂಡಾಡಿದರು.
ಎರಡನೆಯ ದಿನ ಆಯಿತು, ಮಗು ಇನ್ನು ಕಕ್ಕ ಮಾಡಿಲ್ಲ, ವಂದ ಮಾಡುವುದೂ ಕಡಿಮೆ, ಪದೇ ಪದೇ ನ್ಯಾಪಿ ಬದಲಿಸುವ ಕೆಲಸವೂ ಇಲ್ಲ, ಎಸ್ಟೂ ಓಳ್ಳೇ ಮಗು ಎಂದು ಉಧ್ಘರಿಸಿದ್ದೂ ಅಯಿತು.ಯಾಕೋ ಕುಡಿದ ಹಾಲನ್ನೆಲ್ಲ ವಾಂತಿ ಮಾಡುತ್ತಿದೆಯೆಲ್ಲಾ ಎಂದರೆ, ಕಕ್ಕಿದ ಮಕ್ಕಳೂ ದಕ್ತಾವೆ, ಅನ್ನೋ ಹಿರಿಯರ ಮಾತು ಬೇರೆ?
ಆದರು ಒಮ್ಮೆ ಡ್ಯೂಟೀಡಾಕ್ಟರ್ ಗೆ , ದಾದಿಯರಿಗೆ ವಿಶಯ ತಿಳಿಸಿದ್ದಾಯಿತು, ಮಕ್ಕಳು ೪ ದಿನ ಕಕ್ಕ ಮಾಡದೇ ಹೋದರೂ ಏನು ಆಗಲ್ಲ, ಅದು ಸಮಸ್ಯೆ ಅಲ್ಲ, ಮಾಡತ್ತೆ ಬಿಡೀ ಏಂದಾಗ, ಎಲ್ಲರು ನಿರಾಳ. ೩ ನೆಯ ದಿನ ಆಸ್ಪತ್ರೆ ಯಿಂದ ಮನೆಗೆ ಕಳುಹಿಸಿದ್ದಾಯಿತು. ಪುಟಾಣಿ ಯೊಂದಿಗೆ ಮನೆಗೆ, ತಮ್ಮ ಕನಸಿನ ಮನೆಗೆ ಬಂದರಾ ದಂಪತಿ.

 ಮಗು ಹಾಯಾಗಿ ನಿದ್ರೆ ಮಾಡಿದ್ದನ್ನ ನೋಡಿ, ಅಂದು ಮನೆಯವರೆಲ್ಲ ಬೇಗ ಮಲಗಿದರು. ಮಧ್ಯ ರಾತ್ರಿ ಮಗು ಏಕೋ ಉಸಿರಾಡಲು ತುಂಬಾ ಕಸ್ಟ ಪಡ್ತಿತ್ತು .ಹೊಟ್ಟೆಯೆಲ್ಲ ಉಬ್ಬರಿಸಿ, ಕಲ್ಲಿನಂತಾಗಿತ್ತು. ಹೊಟ್ಟೆ ಯ ನರಗಳೆಲ್ಲ ಹಸಿರಾಗಿ, ಮಗು ತುಂಬ ಸುಸ್ತಾದಂತೆ ಕಾಣುತ್ತಿತ್ತು. ಗಾಬರಿಗೊಂಡ ತಾಯಿ ವಿಶಯ ತಿಳಿಸಿದಳು, ಬೆಳಗ್ಗೆ ವೈದ್ಯರ ಬಳಿ ಹೋಗೋಣ ಎಂದು ಹೇಳಿ ಎಲ್ಲ ಮಲಗಿದರು. ಆದರೆ ಆ ತಾಯಿ ಮಲಗಲು ಸಾಧ್ಯಾವೇ???

ಬೆಳಗ್ಗೆಯೇ ಎದ್ದು ವೈಧ್ಯರ ಬಳಿ ಮಗುವನ್ನು ಕರೆದೊಯ್ದರು. ಏನಾಯ್ತು ಎಂದಾಗ, ಮಗು ೪ ದಿನವಾದರು ಕಕ್ಕ ಮಾಡಿದ್ದನ್ನ ನಾವು ನೋಡೇ ಇಲ್ಲ, ವಂದ ಮಾಡುವ ಪ್ರಮಾಣವು ತೀರ ಕಡಿಮೆ, ಹೊಟ್ಟೆ ಉಬ್ಬರಿಸಿದೆ, ಉಸಿರಾಡಲು ಪ್ರಯಾಸಪಡುತ್ತಿದೆಯೆಂದರು. ಮಗುವನ್ನ ಪರೀಕ್ಶಿಸಿದ ಅವರು ಮಗುವಿನ ಹೊಟ್ಟೇಲಿ ಏನೋ ತೊಂದರೆ ಇದೆ, ನುರಿತ, ಮಕ್ಕಳ ಶಸ್ತ್ರ್ ಚಿಕಿತ್ಸಾ ವೈದ್ಯರ ಕಾಣವ ಅಗತ್ಯವಿದೆ, ತಕ್ಶಣ ಸುಸಜ್ಜಿತ ಆಸ್ಪತ್ರೆಗೆ ಕರೆದೊಯಲು ತಿಳಿಸಿದರು.
ಸರಿ ನಿಮ್ಮ ಫೀಜು ಏಸ್ಟು  ಡಾಕ್ಟರ್ ಏಂದಾಗ,ಫೀಜು ಕೊಡುವಸ್ಟು ಸಮಯ ನಿಮ್ಮ ಮಗುವಿಗಿಲ್ಲ ಆದಸ್ಟು ಬೇಗ ಕರೆದೊಯಿರಿ!!!! ಎಂದಾಗಲೆ ಅವರಿಗೆ ಪರಿಸ್ಥಿತಿಯ ತೀವ್ರತೆ ಅರ್ತವಾಗಿದ್ದು!
ಆ ದಂಪತಿಗಳ ಆಶಾಗೋಪುರವೇ ಕಳಚಿಬಿತ್ತು, ಕಂಗಳು ತೇವವಾದವು, ಮುಂದೇನೋ, ಏನೂ ತೋಚದಂತಾಯಿತು, ಮಗು?????
ಮಗುವನ್ನು ಸುಸಜ್ಜಿತ ಆಸ್ಪತ್ರೆಗೆ  ಕರೆತಂದರು, ಕೊಂಚವೂ ತಡ ಮಾಡದೆ ಅಲ್ಲಿಯ ವೈದ್ಯರು ತಾವೇ ಅಲ್ಪ ಸಮಯದಲ್ಲೇ  ಹಲವು ಪರೀಕ್ಶೆಗಳನ್ನು ನಡೆಸಿ ತಕ್ಶಣ ಮಗುವನ್ನು ಚಿಕಿತ್ಸೆಗಾಗಿ ನವಜಾತ ಶಿಶು ತೀವ್ರ ನಿಘಾ ಘಟಕಕ್ಕೆ  ದಾಖಲಿಸಿದರು.
 ಆ ದಂಪತಿಗಳಿಂದ ಯಾವ ಆರ್ಜಿಯನ್ನೂ ತುಂಬಿಸದೆ, ಅದನ್ನು ತಾವೆ ಮಾಡೀ, ಮುಂಗಡ ಯಾವ ಹಣವನ್ನೂ ಕೇಳದೆ, ಹಿಡಿ ಜೀವ ಹಿಡಿದಿದ್ದ ಕೂಸಿನ ಅಮೂಲ್ಯ ಸಮಯವನ್ನು ವ್ಯರ್ತ ಮಾಡದೇ ಆ ಪುಟ್ಟ ಕೂಸಿನ ಜೀವ ಉಳಿಸುವ ಪಣ ತೊಟ್ಟು ಮಾನವೀಯತೆ ಮೆರೆದರು.
.
ವೈದ್ಯರು ಭೂ ಲೋಕದ ದೇವರು ಏಂದರೆ ತಪ್ಪಾಗದು.

ನಮ್ಮ ಮಗುವಿಗೆ ಏನಾಗಿದೆ, ಎಂದಾಗ, ನಿಮ್ಮ ಮಗು ೪ ದಿನದಿಂದ ಉಪವಾಸವಿದೆ. ಕುಡಿದ ಹಾಲೆಲ್ಲ ವಾಂತಿಯಾಗಿ ಮಗುವಿಗೆ  ಸಂಪೂರ್ಣ ನಿರ್ಜಲೀಕರಣವಾಗಿದೆ, ಅದರ ಪರಿಣಾಮ ಕಿಡ್ನಿ ಕೆಲಸ ನಿಲ್ಲಿಸುವ ಹಂತ ತಲುಪಿದೆ. ದೇಹದ ಎಲ್ಲ ರಾಸಾಯನಿಕಗಳು ಏರುಪೇರಾಗಿವೆ. ಮಗು ಅಪಾಯದ ಹಂತದಲ್ಲಿದೆ ಎಂದರು. ಮುಖ್ಯ ವಾಗಿ ಮಗುವಿನ ಕರುಳಿನಲ್ಲಿ ಏನೋ ತೊಂದರೆ ಇರುವ ಸಂಶಯ ವ್ಯಕ್ತಪಡಿಸಿದರು. ಅದಕ್ಕಾಗಿ ಹಲವು ಪರೀಕ್ಶೆಗಳನ್ನು ಮಾಡಬೇಕಾಗುವುದು ಎಂದರು.
ಹೇಗಾದರು ಸರಿ ತಮ್ಮ ಕನಸಿನ ಕೂಸನ್ನ ಉಳಿಸಿಕೊಡಿ  ಎಂದು ಅಂಗಲಾಚಿದರಾ ದಂಪತಿ ??//??//??

ಆ ಮಗುವಿಗೇನಾಗಿತ್ತು?
ಆ ಕನಸಿನ ಕೂಸು  ಹರ್ಶ್ಸ್ ಸ್ಪ್ರುಂಗ್ಸ್ ಎಂಬ ಅಪರೂಪದ ಕರುಳಿನ ಖಾಯಿಲೆ ಇಂದ ಬಳಲುತ್ತಿತ್ತು.

               ಹರ್ಶ್ಸ್ ಸ್ಪ್ರುಂಗ್ಸ್ HIRSCHSPRUNG’S DISEASE
ಎಳೆಯ ಕಂದಮ್ಮಗಳ ಕರುಳ ಕಾಡುವ ಅಪರೂಪದ ಖಾಯಿಲೆ .

ಏನಿದು ಹರ್ಶ್ಸ್ ಸ್ಪ್ರುಂಗ್ಸ್?
 ಇದೊಂದು ನವಜಾತ ಶಿಶುಗಳ (ಕೆಲವೊಮ್ಮೆ ಬೆಳೆದ ಮಕ್ಕಳನ್ನೂ) ಕಾಡುವ ಅಪರೂಪದ ಖಾಯಿಲೆ.                                  
ಸಾಮಾನ್ಯವಾಗಿ, ಆರೋಗ್ಯವಂತ ಮಕ್ಕಳ ಕರುಳಿನಲ್ಲಿ ಗ್ಯಾಂಗ್ಲಿಯಾನ್ ಕೋಶ (GANGLION NERVE CELLS)ಗಳೆಂಬ ವಿಶೇಶವಾದ ನರಕೋಶಗಳಿದ್ದು ಇವು ಮಲವಿಸರ್ಜನೆಗೆ ಸಹಾಯ ಮಾಡುತ್ತವೆ. ಆದರೆ  ಹರ್ಶ್ಸ್ ಸ್ಪ್ರುಂಗ್ಸ್ ಖಾಯಿಲೆ ಇರುವ ಮಕ್ಕಳ ದೊಡ್ಡ\ಸಣ್ಣ  ಕರುಳಿನ ಪೂರ್ತಿ\ಕೆಲವು ಭಾಗಗಳಲ್ಲಿ ಗ್ಯಾಂಗ್ಲಿಯಾನ್ ಕೋಶಗಳ ಬೆಳವಣಿಗೆ ಸಮರ್ಪಕವಾಗಿ ಆಗಿರುವುದಿಲ್ಲ. ಈ ಕಾರಣದಿಂದಾಗಿ ಕರುಳು ಪಂಪ್ ಮಾಡಲು ಸಾಧ್ಯವಾಗದೇ ಮಲವಿಸರ್ಜನೆ ಆಗುವುದಿಲ್ಲ. ಅಥವಾ ಅದರೂ ಪ್ರಯಾಸದ್ದಾಗಿರುತ್ತದೆ. ಹಾಗೆ ತೀವ್ರ ಮಲಬದ್ದತೆ ಇರುತ್ತದೆ.

ಈ ಖಾಯಿಲೆಯ ಲಕ್ಶಣಗಳೇನು?
೧. ಮಗು ಜನಿಸಿ ಎರೆಡು ದಿನಗಳಾದರೂ ಮಲವಿಸರ್ಜನೆ (meconium) ಮಾಡದಿರುವುದು.
೨.ಹಾಲೂಡಿಸಿದ ಕೂಡಲೇ ಹಸಿರು ಬಣ್ನದಿಂದ (GREEN BILE) ಕೂಡಿದ ವಾಂತಿ ಮಾಡುವುದು.
೩.ಹೊಟ್ಟ ಉಬ್ಬರಿಸಿರುವುದು.
೪.ಕೆಲವು ಮಕ್ಕಳಲ್ಲಿ ಸ್ವಲ್ಪ ಬೆಳೆದ ಮೇಲೆ ಖಾಯಿಲೆ ಕಾಣಿಸಬಹುದು ಅಂತವರಲ್ಲಿ ಮಲವಿಸರ್ಜನೆ ಆದರೂ,ರಬ್ಬರ್ ನಂತೆ ಇದ್ದು, ತೀವ್ರ ಮಲಬದ್ದತೆ ಇರುವುದು, ಪ್ರಯಾಸದ್ದಾಗಿರುವುದು, ನಿಧಾನವಾಗಿ ತೂಕ ಹೆಚ್ಹಳವಾಗುವುದು, ಅನೀಮಿಯಾ ಲಕ್ಶಣಗಳಿರುವುದು.ಕಂಡುಬರುತ್ತದೆ.
೫.ಎಂನ್ಟ್ರೊಕೊಲೈಟಸ್ (ENTEROCOLITUS) ಎಂಬ ಜೀವಕ್ಕೆ ಸಂಚಕಾರ ತರಬಲ್ಲ ಕರುಳಿನ ಸೋಂಕು.
೬.ಬೇದಿ
 ಈ ಖಾಯಿಲೆ ಪತ್ತೆ ಹಚ್ಹುವ ಪರೀಕ್ಶೆಗಳು-
೧. ಕಾಂಟ್ರಾಶ್ಟ್ ಏನಿಮಾ (CONTRAST ENEMA) ಮೂಲಕ ಗ್ಯಾಂಗ್ಲಿಯಾನ್ ಕೋಶಗಳು ಇರದ ಭಾಗವನ್ನು ಪತ್ತೆ ಹಚ್ಹುವುದು
೨. ಬೈಯಾಪ್ಸಿ(BIOPSY) ಮೂಲಕ ಪತ್ತೆ ಹಚ್ಹುವುದು.

ಚಿಕಿತ್ಸೆ ಏನು?
ಈ ಖಾಯಿಲೆಗೆ ಶಸ್ತ ಚಿಕಿತ್ಸೆ ಯೊಂದೇ ಮದ್ದು.( ಮಕ್ಕಳ ಶಸ್ರ ಚಿಕಿತ್ಸಾತಜ್ನರು ಈ ಚಿಕಿತ್ಸೆ ನೀಡುವರು.)
ಕರುಳಿನ ಯಾವ ಭಾಗದಲ್ಲಿ ಗ್ಯಾಂಗ್ಲಿಯಾನ್ ಕೋಶಗಳು ಇರುವುದಿಲ್ಲವೋ ಅಂತಹ ಭಾಗವನ್ನುಶಸ್ತ ಚಿಕಿತ್ಸೆ ಮೂಲಕ ಕತ್ತರಿಸಿ ತೆಗದುಹಾಕಲಾಗಿ, ಉಳಿದ ಒಳ್ಳೆಯ ಭಾಗವನ್ನು ಮರು ಜೋಡಿಸಲಾಗುತ್ತದೆ.
ಈ ಶಸ್ತ ಚಿಕಿತ್ಸೆಯನ್ನು ೨ ರೀತಿ ಮಾಡಲಾಗುವುದು.
೧. ಒಂದೇ ಶಸ್ತ ಚಿಕಿತ್ಸೆಯ ಮೂಲಕ, ಲ್ಯಾಫ್ರೊಸ್ಕೋಫಿಕ್ ಉಪಕರಣಗಳ ಸಹಾಯಾದಿಂದ ಎನಸ್ ಮೂಲಕ, ಯಾವುದೆ ಗಾಯವಿಲ್ಲದೆ ಮಾಡಲಾಗುವುದು.(SINGLE STAGE –TRANSANAL ENDORECTAL PULL THROUG)

೨. ಕೆಲವು ಮಕ್ಕಳಿಗೆ ಎರೆಡು ಶಸ್ತ ಚಿಕಿತ್ಸೆಯ ಮೂಲಕ ಮಾಡಲಾಗುವುದು.
  ಮೊದಲು ನರಕೋಶಗಳಿಲ್ಲದ ಭಾಗವನ್ನು ಕತ್ತರಿಸಿ ತೆಗೆದು, ತಾತ್ಕಾಲಿಕ ಸ್ಟೋಮ (STOMA) ಮಾಡಲಾಗುವುದು.ಸ್ಟೊಮ ಮೂಲಕ ಮಲವಿಸರ್ಜನೆಯನ್ನು ಹೊಟ್ಟೆಯ ಮೇಲ್ಭಾಗದಿಂದಲೇ ಹೋಗುವಂತೆ ತಾತ್ಕಾಲಿಕವಾಗಿ ಅನುವು ಮಾಡಿ ಕೊಡುವುದು, ಹಾಗು  ಕೆಲವು ತಿಂಗಳ ನಂತರ ಮತ್ತೊಂದು ಶಸ್ತ ಚಿಕಿತ್ಸೆಯ ಮೂಲಕ ಸ್ಟೋಮ ಮುಚ್ಹಿ ಮುಖ್ಯ ಚಿಕಿತ್ಸೆ ಮಾಡುವುದು. ಎಸ್ಟು ಬೇಗ ಸಾಧ್ಯವೊ ಅಸ್ತ್ಟೂ ಬೇಗ ಚಿಕಿತ್ಸೆ ಮಾಡಿದರೆ ಸೋಂಕಿನ ಅಪಾಯ ಕಡಿಮೆ.

ಚಿಕಿತ್ಸೆಯ ನಂತರ -
ಚಿಕಿತ್ಸೆಯ ನಂತರ ಮಗುವನ್ನು ಸ್ವಲ್ಪ ಸೂಕ್ಶ್ಮ ವಾಗಿ ನೋಡೀಕೊಳ್ಳಬೇಕಾಗುತ್ತದೆ, ಮಗು ಮತ್ತೆ ಆಹಾರ ತೆಗೆದುಕೊಂಡು ಮಲವಿಸರ್ಜನೆ ಮಾಮುಲಿನಂತೆ ಮಾಡಿದರೆ ಆಸ್ಪತ್ರೆಯಿಂದ ಕಳುಹಿಸಲಾಗುವುದು. ಹಾಗೆ, ಮಗುವಿಗೆ ಕೆಲವು ಚಿಕ್ಕ ಪುಟ್ಟ ಸಮಸ್ಯೆ ಬಿಟ್ಟರೆ ಉಳಿದಂತೆ ಬೇರೆ ಮಕ್ಕಳಂತೆ ಆರೋಗ್ಯವಂತ ಜೇವನ ನಡೆಸ ಬಹುದು.
ಆದರೆ, ಮಗುವಿನ ಕರುಳಿನ ಭಾಗ ಕತ್ತರಿಸುವುದರಿಂದ, ಮಗುವಿನ ದೇಹ ಹೆಚ್ಹು ನೀರು ಸಂಗ್ರಹಿಸಲು ಆಗದೆ ಇರಬಹುದು. ಆದ್ಧರಿಂದ ಹೆಚ್ಹು ನೀರನ್ನು ಕುಡಿಸಬೇಕಾಗುವುದು ಹಾಗು ನಾರಿನಾಂಶ ದ ಅಹಾರವನ್ನು ಹೆಚ್ಹು ತಿನ್ನಿಸಬೇಕಾಗುತ್ತದೆ.
--------------------------------------------------------------------------------------------
ಹಾ! ಆ ಕನಸಿನಾ ಕೂಸನ್ನ ಮರೆತೇ ಬಿಟ್ಟೇ!!
ಆ ಮಗುವಿಗೂ ಹರ್ಶ್ಸ್ ಸ್ಪ್ರುಂಗ್ಸ್ ಧ್ರುಡಪಟ್ಟ ಮೇಲೆ ಶಸ್ತ್ರ ಚಿಕಿತ್ಸೆ ಮಾಡಲಾಯಿತು, ಮಗು ಗುಣಹೊಂದಿತು.
ಆ ಹಂತದಲ್ಲಿ ಮಗು ಸಾಕಸ್ಟು ನೋವು ತಿಂದು, ಭೂಮಿಯೇ ಬಾಯಿ ಬಿಡುವಂತೆ ಅಳುತ್ತಿದ್ದದ್ದು ಮಾತ್ರ !!!!!!!!!!
ಇಂತಹ ಕಸ್ತ್ಟ ಇನ್ಯಾವ ಮಗುವಿಗೂ ಬರುವುದು ಬೇಡಪ್ಪಾ ಏಂದು ಮಾತ್ರ ಆ ದೇವರಲ್ಲಿ ಬೇಡಿದಳಾ ತಾಯಿ!!!!!
ಈಗ ಮಗುವಿಗೆ ೭ ನೆಯ ತಿಂಗಳು. ಮಗು ತನ್ನೆಲ್ಲ್ಲ ತುಂಟಾಟ ಗಳ ನಡುವೆ ಆರೋಗ್ಯವಾಗಿ ಬೆಳೀತಾ ಇದೆ.
ತನ್ನ ಮುಗ್ಧ ನಗೆಯಿಂದ ಎಲ್ಲರನ್ನ ನಗಿಸುತ್ತಾ ಇದೆ.ಸಧ್ಯಕ್ಕೆ ಅಮ್ಮನ ಬೆಚ್ಹನೆ ಮಡಿಲಲ್ಲಿ, ಅಜ್ಜಿ ತಾತ ನ ಆರೈಕೆಯಲ್ಲಿದೆ.
 ಆಕೆ ತನ್ನ ಮಗುವಿನೊಂದಿಗೆ ತನ್ನ ಕನಸಿನಾ ಮನೆಗೆ ಹೋಗುವ ದಿನಗಳನ್ನ ಏಣಿಸುತ್ತಿದ್ದಾಳೆ, ಇತ್ತ ತನ್ನ ಪ್ರೀತಿಯ ಮಡದಿ, ಕರುಳಿನ ಕುಡಿ ಯ ಬರುವಿಕೆಯನ್ನೇ ಆತ  ಕಾದಿದ್ದಾನೆ..

ನಗುತಾ ನಗುತಾ ಬಾಳೂ ನೀನು ನೂರು ವರುಶ
ಎಂದೂ ಹೀಗೇ ಇರಲೀ ಇರಲೀ  ಹರುಶ ಹರುಶ

ಎಂದು ಹಾರೈಸುವ ಈ ತಾಯಿಯೇ ಆ ತಾಯಿ
ಆ ಮಗು ನನ್ನದೇ...ಬೇಬಿ ಆಫ್ ಸೌಮ್ಯ.

ಇದು ನನ್ನ ಮೊದಲ ಲೇಖನ, ಬರೀ ಲೇಖನ ಅಲ್ಲ ನನ್ನ ಭಾವನ.
ನನಗಾದ ನೈಜ ಅನುಭವವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದೀನೆ.ಹಾಗೆಯೇ ಆಪರೂಪದ ಖಾಯಿಲೆಯ ಬಗ್ಗೆ ನಾನು ತಿಳ್ಲಿದದ್ದನ್ನ ತಿಳಿಸುವ ಚಿಕ್ಕ ಪ್ರಯತ್ನವನ್ನು  ಮಾಡಿದ್ದೇನೆ..ತಫ್ಫಿದ್ದಲ್ಲಿ ತಿದ್ದಿ,
 ಸಾವನ್ನೆ ಜಯಿಸಿಬಂದ ನನ್ನ ಮುದ್ದು ಮಗಳಿಗೊಂದು ಅರ್ಥ ಗರ್ಭಿತ ಹೆಸರ ಸೂಚಿಸುವಿರಾ???

ಧನ್ಯವಾದಗಳೊಂದಿಗೆ.
ಸೌಮ್ಯ ಬಿ. ಎಸ್


 
    ದಾರಿ ದೀಪ
 ನಮಗೆ ಮೊದಲು ಸೂಕ್ತ ದಾರಿ ತೋರಿದ್ದು -
ಡಾ.ಗೋಪಾಲ್ (ಮಕ್ಕಳ ತಜ್ನ್ ರು. ಮಣಿಫಾಲ್ ಆಸ್ಪತ್ರೆ, ಬೆಂಗಳೂರು.)
ಇನ್ನೇನು ಆರಿಯೇ ಹೋಗುತ್ತಿದ್ದ ದೀಪವನ್ನ ಆರದಂತೆ ಕಾದದ್ದು - 
ಡಾ. ಸಾಯಿಪ್ರಸಾದ್ (ಮಕ್ಕಳ ಶಸ್ತ್ರ ಚಿಕಿತ್ಸಾ ತಜ್ನರು, ಕೊಲೊಂಬಿಯಾ ಏಶಿಯಾ ಆಸ್ಪತ್ರೆ, ಮಲ್ಲೇಶ್ವರಮ್,ಬೆಂಗಳುರು)
ದೀಪಕ್ಕೆ ಮತ್ತೆ ಹೊಸ ಬತ್ತಿ ಎಣ್ಣೆ ಹಾಕಿ ನೂರ್ಕಾಲ ಬೆಳಗುವಂತೆ ಮಾಡಿದ್ದು -
ಡಾ. ಕಾನಿಶ್ಕಾ ದಾಸ್ (ಮಕ್ಕಳ ಶಸ್ತ್ರ ಚಿಕಿತ್ಸಾ ತಜ್ನರು,ಸೇಂಟ್ ಜಾನ್ಸ್ ಆಸ್ಪತ್ರೆ, ಕೋರಮಂಗಲ, ಬೆಂಗಳೂರು)
  




.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪ್ರಥಮ ಯತ್ನ ಅತ್ಯಂತ ಉತ್ತಮವಾಗಿದೆ, ವೈದ್ಯಕೀಯ ಮಾಹಿತಿ ಜತೆಗೆ ಹಾರ್ಟ್ ಟಚಿಂಗ್ ಲೈನ್ಸ್- ಧನ್ಯವಾದಗಳು ಸೌಮ್ಯಳ ಮಗಳು ಸೌಜನ್ಯ ವೇ ಸಮರ್ಪಕ

ಸೌಮ್ಯ ರವರೆ , ಓದುತ್ತಾ ಮೊದಲು ತಳಮಳ ಅನ್ನಿಸಿದರೂ ಕೊನೆಗೆ ಸುಖಾಂತಕ್ಕೆ ಮನಸ್ಸು ಖುಷಿಗೊಂಡಿತು... ಉಪಯುಕ್ತ ಬರಹ... ಫ್ರೆಂಡ್ಸ್ ಚರ್ಚೆ ಮಾಡಿ ಕೆಲವು ಹೆಸರನ್ನು ಸೂಚಿಸ್ತೀನಿ...ಅಷ್ಟರೊಳಗೆ ನಿಮಗೆ ಯಾವ್ದಾದ್ರೂ ಹೆಸರು ಸಿಕ್ಕಿದ್ರೆ ಏನ್ ಹೆಸರಿಟ್ರಿ ಅಂತ ಹೇಳಿ ಆಯ್ತಾ.. ನಿಮ್ಮ ವಾಣಿ

ಸೌಮ್ಯ, ನಿಮ್ಮ ಮಗುವಿಗೆ ಸುದೀರ್ಘ ಆರೋಗ್ಯವಂತ ಬಾಳನ್ನು ಹಾರೈಸುತ್ತೇನೆ. ದಯವಿಟ್ಟು ಆ ವೈದ್ಯ ಮಹಾಶಯರುಗಳ ಮತ್ತು ಆಸ್ಪತ್ರೆಗಳ ಹೆಸರುಗಳನ್ನೂ ಬರೆದು ಪುಣ್ಯಕಟ್ಟಿಕೊಳ್ಳಿ. ವ್ಯಾಪಾರಿ ಮನೋವೃತ್ತಿಯ ವೈದ್ಯರುಗಳೇ ಹೆಚ್ಚುತ್ತಿರುವ ಈಗಿನ ಕಾಲದಲ್ಲಿ, ಇಂಥ ವೈದ್ಯರುಗಳ ಪರಿಚಯ ಇದ್ದರೆ, ಇನ್ನಿತರರಿಗೂ ಅನುಕೂಲವಾದೀತು. ಒಂದು ಜೀವವನ್ನು ಉಳಿಸಿ, ನಮಗೆ ಉಪಕಾರ ಮಾಡಿದವರ ಹೆಸರನ್ನು ಬಹಿರಂಗಪಡಿಸಿದರೆ ತಪ್ಪಾಗಲಾರದು ಎನ್ನುವುದು ನನ್ನ ಅಭಿಪ್ರಾಯ. ಹೆಸರು... ಯೋಚಿಸಬೇಕು. - ಆಸು ಹೆಗ್ಡೆ

ಆಕೆಯ ನಗುವನ್ನು ಕಂಡು ಸ್ಮಿತಾ ಎನ್ನುವ ಹೆಸರನ್ನೇ ಸೂಚಿಸುವ ಆಸೆ ನನಗೆ. ಆದರೆ, ಸದಾ ನಗುತ್ತಿದ್ದ ನನ್ನ ಮಗಳನ್ನು ಕಂಡು "ಸ್ಮಿತಾ" ಎಂಬ ಹೆಸರಿಟ್ಟಿದ್ದ ನಾನು, ಈಗ ನಿಮ್ಮ ಮಗಳಿಗೂ ಅದೇ ಹೆಸರನ್ನು ಸೂಚಿಸಿದರೆ ಅದಕ್ಕೆ ಅರ್ಥ ಇರದು. ಹಾಗಾಗಿ "ಸುಹಾಸಿನಿ" ಎನ್ನುವ ಹೆಸರನ್ನು ಸೂಚಿಸಿದ್ದೇನೆ.

ಧನ್ಯವಾದಗಳು. ಅದೇ ಹೆಸರನ್ನೇ ಖಾಯಂ ಮಾಡುತ್ತೀರೆಂದು ಆಶಿಸಲೇ? ನಿಮ್ಮ ಮಗಳಿಗೆ ದೀರ್ಘಾಯುಷ್ಯ ಮತ್ತು ಆರೋಗ್ಯವನ್ನು ಹರಸಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಬ್ಲಾಗ್ ಆಸುಮನದಲ್ಲಿ "ನಾನ್ಯಾರು" ಪುಟದಲ್ಲಿರುವ ನನ್ನ ಚರವಾಣಿಸಂಖ್ಯೆಗೆ ಒಂದು ಕರೆಮಾಡಿ ಎಂಬುದು ನನ್ನ ಬೇಡಿಕೆ.

ವೈದ್ಯ ರ ಹೆಸರಿಲ್ಲದೆ ಈ ಲೇಖನ ಅಸಂಫೂರ್ಣ ಎಂದು ನನಗು ಆನಿಸುತ್ತಿತ್ತು, ಆದರೂ ಆವರ ಹೆಸರ ಸೂಚಿಸುವುದು ಸಮಂಜಸವೆ ಎಂಬ ಪ್ರಶ್ನೆ ಕಾಡಿ ತಿಳಿಸಲಿಲ್ಲ.ನಿಮ್ಮ ಪ್ರತಿಕ್ರಿಯೆ ಓದಿ ಅದು ಸಮಂಜಸವೆನಿಸಿತು,ಲೇಖನದಲ್ಲಿ ಸೇರಿಸಿದ್ದೀನಿ.ಧನ್ಯವಾದಗಳು. ಸೌಮ್ಯ

ಸೌಮ್ಯ ಅವರೇ ಈ ಪರಿಸ್ಥಿತಿಯಲ್ಲಿದ್ದ ಯಾವುದೇ ತಂದೆ ತಾಯಿಯರ ನೋವೂ ವರ್ಣನಾತೀತ ದೇವರು ನಿಮ್ಮನ್ನು ಮತ್ತು ನಿಮ್ಮ ಮಗಳನ್ನು ಆ ಪರಿಸ್ಥಿತಿಯಿಂದ ಮೇಲೆತ್ತಿದನಲ್ಲ ವೈದ್ಯರು ನಿಜವಾಗಿಯೂ ವಂದನಾರ್ಹರು "ಮೃತ್ಯುಂಜಯಿ"

ಸೌಮ್ಯ, ನಿಮ್ಮ ಅನುಭವ ಕಥನ ಕೇಳಿ ಇಂಥದೊಂದು ಖಾಯಲೆ ಇದೆ ಎಂದು ತಿಳಿಯಿತು. ಪುಟ್ಟು ಕಂದನಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ. ಹೆಸರು: ಅಮೂಲ್ಯ / ಅನರ್ಘ್ಯ / ಸ್ಮೃತಿ ಸುರೇಶ್ ಹೆಗಡೆಯವರು ತಿಳಿಸಿದಂತೆ ವೈದ್ಯರ ಹೆಸರನ್ನು ಹಾಕಿ. ಕಮಲ

ಕೆಲವೊಮ್ಮೆ ನಾವು ಇಂತಹ ಅಪರೂಪದ ಖಾಯಿಲೆಗಳ ಬಗ್ಗೆ ತಿಳಿದಿದ್ದರೆ ನಮ್ಮ ಸುತ್ತ ಮುತ್ತಲಿನ ಯಾರಿಗಾದರೂ ಉಪಯೋಗಕ್ಕೆ ಬರಬಹುದಲ್ಲವೇ.? (ಈ ಲೇಖನ ಸಧ್ಯ ಯಾರ ಉಪಯೋಗಕ್ಕೆ ಬಾರದಿರಲೀ ಏಂಬುದೇ ನನ್ನ ಆಶಯ) ಲೇಖನದಲ್ಲಿ ವೈಧ್ಯರ ಹೆಸರನ್ನ ಸೇರಿಸಿದ್ದೀನಿ. ಧನ್ಯವಾದಗಳು. ಸೌಮ್ಯ

ಆ ಪುಣ್ಯಾತ್ಮ ವೈದ್ಯರ ಹೆಸರನ್ನು ಹಾಕಿ. ಇ೦ಥಹವರಿ೦ದಲೇ “ವೈದ್ಯೋ ನಾರಾಯಣ ಹರಿ:“ ಎ೦ಬ ನಾಣ್ಣುಡಿಗೆ ಇನ್ನೂ ಬಲ ಬರುವುದು. ಒಳ್ಳೆಯ ಮಾಹಿತಿಪೂರ್ಣ ಹಾಗೂ ಕಣ್ಣು ತೇವಗೊಳಿಸಿದ ಹಾಗೂ ಕೊನೆಗೂ ಸುಖಾ೦ತ್ಯ ಕ೦ಡ ಲೇಖನ. ಮಗುವಿಗೆ ಶ್ರೀಮಾತೆಯು ಇನ್ನೂ ಹೆಚ್ಚಿನ ಆಯುರಾರೋಗ್ಯ ವನ್ನು ಕೊಟ್ಟು ಅನುಗ್ರಹಿಸಲೆ೦ಬ ಶುಭಕಾಮನೆಗಳನ್ನು ವ್ಯಕ್ತಪಡಿಸುತ್ತೇನೆ. ಪ್ರಥಮ ಪ್ರಯತ್ನ ಚೆನ್ನಾಗಿದೆ. ಪ್ರಯತ್ನ ಮು೦ದುವರೆಯಲಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

ನೂರು ವರುಷ ಚೆನ್ನಾಗಿ ಬಾಳಿ ಬದುಕಲಿ. ನಿಮ್ಮಿಬ್ಬರ ಬಾಳಿಗೆ ಖುಷಿಯ ಸಿಂಚನ ಮಾಡಿದ ಈ ಪೋರಿಗೆ " ಸಿಂಚನ " ಅಂತಲೇ ಕರೆಯಬಹುದೇನೋ

ಮನಮುಟ್ಟಿದ ಲೇಖನ .. ಅಯ್ಯೊ ಅಂತ ಶುರುವಿನಲ್ಲಿ ಅನ್ಸಿದ್ದು ಸಂತೋಷದಲ್ಲಿ ಕೊನೆಯಾದದು ನಿಜಕ್ಕು ಸಮಾಧಾನಕರ. ವೈದ್ಯಕೀಯ ಮಾಹಿತಿಗಳನ್ನು ನೀಡಿದ್ದಕ್ಕೆ ಧನ್ಯವಾದಗಳು ... ಅಂದ ಹಾಗೆ ನಿಮಗೆ ಸಹಾಯ ಮಾಡಿದ ವೈದ್ಯ ಮಹಾಶಯರ ಮಾಹಿತಿಯನ್ನು ನೀಡಿ ನಿಮ್ಮ ಮಗುವಿಗೆ ... " ಅನಾಮಿಕ " :)

ಈ ಲೇಖನವನ್ನ ಇಲ್ಲಿ ಸೇರಿಸುವ ಮುನ್ನ, ಅಯ್ಯೋ ಇಸ್ಟುದ್ದದ ನನ್ನ ಹರಿಕತೆಯನ್ನ ಯಾರು ಓದುತ್ತಾರೆ ಎಂದು ಅನ್ನಿಸಿದ್ದು ಸುಳ್ಳಲ್ಲ.!! ಆದರೇ ನೀವೆಲ್ಲಾ ಸಹ್ರುದಯಿಗಳು ತಾಳ್ಮೆಯಿಂದ ಓದಿದಿರಿ,ನನ್ನ ಕಂದನ ಹರಸಿದಿರಿ. ನನ್ನ ಮೊದಲ ಪ್ರಯತ್ನವನ್ನ ತುಂಬು ಹ್ರುದಯದಿಂದ ಮೆಚ್ಹಿ, ಪ್ರೋತ್ಸಾಹಿಸಿದಿರಿ. ನಿಮ್ಮೆಲ್ಲರ ಹಾರೈಕೆಗಳು ನೊಂದ ನನ್ನ ಮನಸ್ಸಿಗೆ ಸಾಂತ್ವಾನದ ಸಿಂಚನವನ್ನೆಸಗಿದಂತಾಯಿತು. ನಿಮಗೆಲ್ಲರಿಗೂ ಧನ್ಯವಾದಗಳು. ಸೌಮ್ಯ

ತನ್ನ ಒಡಲೊಳು ಬೆಂಕಿಯ ಜ್ವಾಲೆಯನ್ನೆ ಇಟ್ಟುಕೊಂಡೂ, ಮೇಲೆ ನಿರಾಳವಾಗಿ, ಧ್ರುಡವಾಗಿದ್ದು ಸಕಲ ಜೇವ ಸಂಕುಲವನ್ನೇ ಫೋಶಿಸುತ್ತಿರುವ ಭೂಮಿತಾಯಿಯ ನೆನೆಯುತ ಭೂಮಿ ಎಂದು ಕರೆಯಲೇ ಈ ನನ್ನ ಕೂಸಿಗೆ?? ಭೂಮಿ ಹೆಸರು ಹೇಗಿದೆ? ಅಭಿಪ್ರಾಯ ತಿಳಿಸಿ ಮರೆಯದೇ

ಸೌಮ್ಯ ಅವರೇ, "... ಮಗು ಗುಣಹೊಂದಿತು." ಎಂಬುದನ್ನು ಓದಿ ಸಮಾಧಾನವಾಯಿತು.ಮಗುವಿಗೆ ಹರ್ಶ್ ಸ್ಪ್ರಂಗ್ ಕಾಯಿಲೆಯ ಹೊರತಾಗಿ ಬೇರೆ ತೊಂದರೆಗಳಿರಲಿಲ್ಲ ಎಂದು ಆಶಿಸುತ್ತೇನೆ. ಮಗುವಿಗೆ ಹುಶಾರಿಲ್ಲದಾಗ ತಂದೆ-ತಾಯಂದಿರು ಅನುಭವಿಸುವ ನೋವನ್ನು ನಿಮ್ಮ ಬರಹ ಸಮರ್ಥವಾಗಿ ಸೆರೆಹಿಡಿದಿದೆ. ಮಗು ಹುಶಾರಾಗಿದ್ದಕ್ಕೆ ಮತ್ತು ಸಂಪದದಲ್ಲಿ ನಿಮ್ಮ ಮೊದಲ ಬರಹಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಹರ್ಶ್ ಸ್ಪ್ರಂಗ್ ಕಾಯಿಲೆಗೆ ಕಾರಣವಾಗುವ ಜೆನೆಟಿಕ್ ಮ್ಯುಟೇಶನ್ ಗಳ ಕುರಿತು ಭಾರತೀಯ ಮೂಲದ ಅರವಿಂದ್ ಚಕ್ರವರ್ತಿ ಎನ್ನುವವರೊಬ್ಬರು ಅಮೆರಿಕಾದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ ಎಂದು ಬಲ್ಲೆ. ಈ ಸಂಶೋಧನೆಯಲ್ಲಿ ಭಾಗವಹಿಸುವ ಮನಸ್ಸಿದ್ದರೆ, ಇಲ್ಲೊಮ್ಮೆ ಭೇಟಿ ಕೊಡಿ: http://www.clinicalt... ನಿಮ್ಮ ಬರಹದಲ್ಲಿ ಕಾಗುಣಿತದ ತಪ್ಪುಗಳು ಕ್ರಮೇಣ ಕಡಿಮೆಯಾಗುವುದೆಂದು ನಂಬುವೆ. :-)

ಮಗುವಿಗೆ ಬೇರೆ ಇನ್ನಾವ ತೊಂದರೆಯು ಇಲ್ಲ. ಬರಹ ತಂತ್ರಾಂಶ ನನಗೆ ಇನ್ನೂ ಹೊಸದು,ತಪ್ಪು ಗೊತ್ತಿದ್ದೂ ಕೆಲವೊಮ್ಮೆ ಸರಿಯಾಗಿ ಟ್ತೈಪ್ ಮಾಡಲಾಗುತ್ತಿಲ್ಲ. ಕ್ಶಮಿಸಿ, ತಿದ್ದಿ ಕೊಳ್ಳುವೆ. ವಿಳಾಸಕ್ಕಾಗಿ ಧನ್ಯವಾದಗಳು. ಸೌಮ್ಯ.

[ಮಗುವಿಗೆ ಬೇರೆ ಇನ್ನಾವ ತೊಂದರೆಯು ಇಲ್ಲ.] ತುಂಬಾ ಖುಶಿಯ ಹಾಗೂ ನೆಮ್ಮದಿಯ ವಿಚಾರ. [ಬರಹ ತಂತ್ರಾಂಶ ನನಗೆ ಇನ್ನೂ ಹೊಸದು,ತಪ್ಪು ಗೊತ್ತಿದ್ದೂ ಕೆಲವೊಮ್ಮೆ ಸರಿಯಾಗಿ ಟ್ತೈಪ್ ಮಾಡಲಾಗುತ್ತಿಲ್ಲ. ಕ್ಶಮಿಸಿ, ತಿದ್ದಿ ಕೊಳ್ಳುವೆ.] ಗೂಗಲ್ ನ ಟ್ರಾನ್ಸ್ಲಿಟರೇಶನ್ ಇಷ್ಟವಾಗುತ್ತೋ ನೋಡಿ. http://www.google.co... [ವಿಳಾಸಕ್ಕಾಗಿ ಧನ್ಯವಾದಗಳು.] ಸಂಪರ್ಕಿಸಿದಿರಾ?

ಗೂಗಲ್ ನ ಟ್ರಾನ್ಸ್ಲಿಟರೇಶನ್ ಇಷ್ಟವಾಗುತ್ತೋ ನೋಡಿ. http://www.google.co... ಈ ಲಿಂಕು ತುಂಬಾ ಸುಲಭ ವಾಗಿದೆ, ಅದರೆ ಇದನ್ನ ಡೌನ್ ಲೋಡ್ ಮಾಡಲಾಗುತ್ತಿಲ್ಲ, ಸಹಕರಿಸಿ.

ಡಾ. ಗೋಪಾಲ್, ಡಾ. ಸಾಯಿಪ್ರಸಾದ್ ಹಾಗೂ ಡಾ. ಕನಿಶ್ಕಾ ದಾಸ್ ಈ ಮೂವರಿಗೂ ಹಾರ್ದಿಕ ಅಭಿವಂದನೆಗಳು ಮತ್ತು ಅಭಿನಂದನೆಗಳು! ತಜ್ಞ - taj~ja ನೊರ್ಕಾಲ ಬೆಳಗುವಂತೆ ಮಾಡಿದ್ದು ----> ನೂರ್ಕಾಲ ಬೆಳಗುವಂತೆ ಮಾಡಿದ್ದು. ತಜ್ಞ ವೈದ್ಯರು ----> ತಜ್ಞರು. (ತಜ್ಞರು ಅಂದರೆ ಸಾಕು)

ಡಾ.ಗೋಪಾಲ್ (ಮಕ್ಕಳ ತಜ್ನ್ಯ ವೈದ್ಯರು. ಮಣಿಫಾಲ್ ಆಸ್ಪತ್ರೆ, ಬೆಂಗಳೂರು.) ಇನ್ನೇನು ಆರಿಯೇ ಹೋಗುತ್ತಿದ್ದ ದೀಪವನ್ನ ಆರದಂತೆ ಕಾದದ್ದು - ಡಾ. ಸಾಯಿಪ್ರಸಾದ್ (ಮಕ್ಕಳ ಶಸ್ತ್ರ ಚಿಕಿತ್ಸಾ ತಜ್ನ ವೈದ್ಯರು, ಕೊಲೊಂಬಿಯಾ ಏಶಿಯಾ ಆಸ್ಪತ್ರೆ, ಮಲ್ಲೇಶ್ವರಮ್,ಬೆಂಗಳುರು) ದೀಪಕ್ಕೆ ಮತ್ತೆ ಹೊಸ ಬತ್ತಿ ಎಣ್ಣೆ ಹಾಕಿ ನೊರ್ಕಾಲ ಬೆಳಗುವಂತೆ ಮಾಡಿದ್ದು - ಡಾ. ಕಾನಿಶ್ಕಾ ದಾಸ್ (ಮಕ್ಕಳ ಶಸ್ತ್ರ ಚಿಕಿತ್ಸಾ ತಜ್ನ ವೈದ್ಯರು,ಸೇಂಟ್ ಜಾನ್ಸ್ ಆಸ್ಪತ್ರೆ, ಕೋರಮಂಗಲ, ಬೆಂಗಳೂರು) ಎಲ್ಲಾ ವೈದ್ಯರಿಗೂ ನನ್ನ ಅಭಿನ೦ದನೆಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

ಸೌಮ್ಯರವರೇ, ನೀವು ಕೊಟ್ಟಿರುವ ಗೂಗ್ಲ್ ಲಿಂಕ್ ಅಪೂರ್ಣವಾಗಿದೆ. ಪೂರ್ಣ ಲಿಂಕ್ ಶಿವರಾಮ ಶಾಸ್ತ್ರಿಯವರು ನೀಡಿದ್ದಾರೆ. ಆ ಪುಟದಲ್ಲಿ ಬಲಭಾಗದ ಮೇಲ್ತುದಿಯಲ್ಲಿರುವ "New! Download Google Transliteration IME" ಲಿಂಕ್ ಒತ್ತಿದರೆ ಟ್ರಾನ್ಸಲಿಟರೇಟರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ನೀವು ಮೊಜಿಲ್ಲಾ ಫೈರ್ ಫಾಕ್ಸ್ ಬಳಸುವವರಾದರೆ, ಭಾರತೀಯ ಭಾಷೆಗಳಲ್ಲಿ ಟೈಪಿಸಲು ಕೆಲವು add-on ಗಳು ಸಹ ಲಭ್ಯವಿವೆ. ಗೂಗ್ಲ್ ಮಾಡಿ ನೋಡಿ. ಕನ್ನಡ ಬಳಕೆಯ ಇತರೇ ವಿಧಾನಗಳ ವಿವರ ಇಲ್ಲಿವೆ (ಈ ಲೇಖನಗಳಿಗಿರುವ ಪ್ರತಿಕ್ರಿಯೆಗಳನ್ನೂ ನೋಡಿ) http://sampada.net/f... http://sampada.net/b...