ಅಯೋಧ್ಯೆ ತೀರ್ಪು: 3ರ ಮಹಾತ್ಮೆ...!

To prevent automated spam submissions leave this field empty.

 


ನೆನ್ನೆ ಬಂದ ಅಯೋಧ್ಯೆ ಐತೀರ್ಪಿಗೆ ಸಂಬಂಧ ಪಟ್ಟಂತೆ ಸಂಖ್ಯೆ 3 ಮಹತ್ವದ ಸ್ಥಾನವನ್ನ ಗಳಿಸಿದೆ.


3 ಜನ ನ್ಯಾಯಾಧೀಶರು ತೀರ್ಪು ನೀಡಿದ ದಿನಾಂಕ 30ರಂದು.  


ಸಮಯ ಸಂಜೆ 3.30ಕ್ಕೆ.


(ಇಸವಿ ೨೦೧೦ ಕೂಡಿಸಿದರೆ ಬರುವುದು 3). 


ಅರ್ಜಿದಾರರು ಇದ್ದದ್ದು ಒಟ್ಟು ಮೂವರು.


ಭೂಮಿಯನ್ನು ಹಂಚಿದ್ದು 3 ಭಾಗಗಳಾಗಿ. 


ನ್ಯಾಯಾಧೀಶರು ಹೇಳಿದ್ದಾರೆ ಎಲ್ಲರಿಗೂ ಕಾಯಲಿಕ್ಕೆ 3 ತಿಂಗಳು...!!!


 


 


 


 


 


 


 


 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮೂರಕ್ಷರದ “ಅಯೋಧ್ಯೆ” ಸಮಸ್ಯೆ ಗೆ ಕಾರಣ ಮೂರರಕ್ಷರದ “ಬಾಬರ್” ಎಂದು ಸಂಶಯ. ಮೂರಕ್ಷರದ ಸಂಘನೆಯೊಂದಕ್ಕೆ ಮೂರಕ್ಷರದ “ಸಮಸ್ಯೆ” ಬಗ್ಗೆ ಅತೀವ ಆಸಕ್ತಿ. ಈ ವಾಕ್ಯದಲ್ಲಿರುವ ಬಹುತೇಕ ಪದಗಳು ಮೂರಕ್ಷರಗಳಿಂದ ಕೂಡಿದ್ದು.

ನನಗೆ ಇಲ್ಲಿಯವರೆಗೂ ಅರ್ಥವಾಗದ ಸಂಗತಿಯೊಂದಿದೆ. ಆ ಪ್ರಶ್ನೆಯನ್ನು ಯಾರೂ ಮಾದ್ಯಮಗಳಲ್ಲೂ ಕೇಳಿದ ನೆನಪಿಲ್ಲ. ಮುಸಲ್ಮಾನರು ಹಾಗೂ ಹಿಂದೂಗಳು ಒಟ್ಟಾಗಿ ಬಾಳಬೇಕು ಎಂಬುದು ಬಹಳ ಹಿಂದಿನಿಂದಲೂ ನಮ್ಮ ಅನೇಕ ಹಿರಿಯರ ಅಪೇಕ್ಷೆ. ಮುಸಲ್ಮಾನರೇ ಪ್ರತ್ಯೇಕ ರಾಷ್ಟ್ರ; ಹಿಂದೂಗಳ ಜೊತೆ ಬಾಳಲು ಸಾಧ್ಯವಿಲ್ಲ; ಇತ್ಯಾದಿ ವಾದಗಳನ್ನಿಟ್ಟು ತಾಯಿ ಭಾರತಿಯನ್ನು ಕತ್ತರಿಸಿ ತುಂಡು ಮಾಡಿ ಪಾಕಿಸ್ತಾನವನ್ನು ದಕ್ಕಿಸಿಕೊಂಡಾಗಲೂ, ನಮ್ಮೊಡನೆಯೇ ಇರಿ, ಅಣ್ಣ-ತಮ್ಮಂದಿರಂತೆ ಬಾಳೋಣ ಎಂದವರು ನಮ್ಮ ದೇಶದ ಹಿರಿಯರು. ಪ್ರಾರಂಭದಿಂದಲೇ ನಮ್ಮೊಡನೆ ಕತ್ತಿ ಮಸೆಯುತ್ತಿದ್ದ ಪಾಕಿಸ್ತಾನಕ್ಕೂ ಸಹಾಯ ಮಾಡಬೇಕೆಂದು ಉಪವಾಸ ಕುಳಿತ ಹಿರಿಯರ ದೇಶಕ್ಕೆ ಸೇರಿದವರು ನಾವು. ಹೀಗಾಗಿ ಹಿಂದೂಗಳು ಹಾಗೂ ಮುಸಲ್ಮಾನರು ಅಣ್ಣ-ತಮ್ಮಂದಿರಂತೆ ಬಾಳಬೇಕೆಂಬ ಅವರ ಇಚ್ಚೆ ಪ್ರಾಮಾಣಿಕವಾದದ್ದೇ ಎನಿಸುತ್ತದೆ. ಹೀಗಿದ್ದಾಗ್ಯೂ ಎಂದೂ ಈ ಎರಡೂ ಕೋಮುಗಳು ಒಂದಾಗಿ ಬಾಳಿದ್ದು ಕಂಡುಬರುವುದಿಲ್ಲ (ಒಂದೆರಡು ಅಲ್ಲೊಂದು ಇಲ್ಲೊಂದು ಉದಾಹರಣೆಗಳನ್ನು ಬದಿಗಿಟ್ಟು). ಪ್ರಾಯಶಃ ಮಹಮ್ಮದ್ ಆಲಿ ಜಿನ್ನಾ ಹೇಳಿದ್ದೇ ಸರಿಯೇನೋ ಎನಿಸಿಬಿಡುತ್ತದೆ (ಮುಸಲ್ಮಾನರೇ ಪ್ರತ್ಯೇಕ ರಾಷ್ಟ್ರ). ಇನ್ನು ಅಯೋಧ್ಯೆಯ ವಿಚಾರವಂತೂ ಶತಮಾನಗಳಿಂದ ಎರಡು ಕೋಮುಗಳ ನಡುವೆ ಕಂದಕವನ್ನೇ ನಿರ್ಮಿಸಿಬಿಟ್ಟಿದೆ. ಈ ಅಯೋಧ್ಯಯಲ್ಲಿದ್ದ ಬಾಬರೀ ಕಟ್ಟಡದ ಕುರಿತಾಗಿ ನನ್ನ ಒಂದು ಸಂದೇಹ. ಹಿಂದೂಗಳು ಹೇಳುವಂತೆ, ಬಾಬರ್ ಅಲ್ಲೊಂದು ದೇವಸ್ಥಾನವನ್ನು ಒಡೆಯಲಿಲ್ಲ ಎಂದಿಟ್ಟುಕೊಳ್ಳೋಣ. ಅಲ್ಲಿ ಆತ ಕಟ್ಟಿಸಿದ್ದು ಮಸೀದಿ ಎಂದೇ ಇಟ್ಟುಕೊಳ್ಳೋಣ. ಆದರೆ, ಬಾಬರ್‌ನ ಕುರಿತಾಗಿ ಹಾಗೂ ಮೊಗಲರ ಕುರಿತಾಗಿ ನಮ್ಮ ಭಾರತೀಯ ಮುಸಲ್ಮಾನರಿಗೆ ಏಕಿಷ್ಟು ಪ್ರೀತಿ? ನಮ್ಮ ಮುಸಲ್ಮಾನರು ಇಲ್ಲಿನ ರಾಷ್ಟ್ರೀಯರು. ಈ ದೇಶದ ಒಳಿತು ಕೆಡಕುಗಳಲ್ಲಿ ಒಂದಾಗಿರುವವರು. ಸಮಾನ ಶತೃ-ಮಿತ್ರ ಭಾವನೆ ಹೊಂದಿರುವವರು. ಇತಿಹಾಸದ ಕುರಿತಾಗಿ ಸಮಾನ ದೃಷ್ಟಿಕೋನವುಳ್ಳವರು. ಬಾಬರ್ ಒಬ್ಬ ಆಕ್ರಮಣಕಾರ ಎಂಬುದು ಎಲ್ಲರೂ ಒಪ್ಪುವ ಸಂಗತಿ. ಅರ್ಥಾತ್ ಆತ ಈ ದೇಶದ ಶತೃ. ಅಂದರೆ, ಈ ದೇಶದ ಪ್ರತಿಯೊಬ್ಬ ರಾಷ್ಟ್ರೀಯನಿಗೂ ಆತ ಶತೃವೇ. ಆತನ ಕುರಿತಾಗಿ ಇಲ್ಲಿನ ಮುಸಲ್ಮಾನರಲ್ಲಿ ಇಷ್ಟೊಂದು ಪ್ರೀತಿ ನನಗೆ ಅರ್ಥವಾಗದ ಸಂಗತಿ. ಬಾಬರ್ ಒಬ್ಬ ಮಹಾಪುರುಷನಾದರೆ, ನಮ್ಮ ದೇಶಕ್ಕಾಗಿ ಹೋರಾಡಿದ ರಾಣಾ ಸಂಗ, ಹೇಮು ಇತ್ಯಾದಿಗಳೆಲ್ಲಾ ಏನಾಗುತ್ತಾರೆ? ಮೊಗಲರು ಎಂದೂ ಈ ದೇಶದವರಾಗಲು ಸಾಧ್ಯವಿಲ್ಲ. ಅವರ ಮನಸ್ಸಿನಲ್ಲೂ ಆ ಭ್ರಮೆ ಇರಲಿಲ್ಲ. ಅವರ ಮತ್ತು ನಮ್ಮ ಮುಸಲ್ಮಾನರ ಜಾತಿ ಒಂದೆನ್ನುವುದನ್ನು ಬಿಟ್ಟರೆ, ಇಬ್ಬರಲ್ಲೂ ಯಾವ ಸಮಾನ ಅಂಶವೂ ಇಲ್ಲ. ಅವರ ಕುರಿತಾಗಿ ನಮ್ಮ ಮುಸಲ್ಮಾನರಲ್ಲಿ ಮಿತ್ರತ್ವದ ಭಾವನೆ ಏಕೆ? ನಮ್ಮಲ್ಲಿರುವ ಮುಸಲ್ಮಾನರಲ್ಲಿ ಹಾಗೂ ಹಿಂದೂಗಳಲ್ಲಿ ಹರಿಯುತ್ತಿರುವುದು ಒಂದೇ ರಕ್ತ. ಇಬ್ಬರ ಪೂರ್ವಜರೂ ಒಬ್ಬರೇ. ಮತ ಬದಲಾವಣೆಯಾದ ಕೂಡಲೇ ಪೂರ್ವಜರಾಗಲೀ, ಇತಿಹಾಸವಾಗಲೀ ಬದಲಾವಣೆಯಾಗಲು ಸಾಧ್ಯವಿಲ್ಲವಲ್ಲ? ಇದರ ಕುರಿತಾಗಿ ಯಾರೂ ಏತಕ್ಕಾಗಿ ಪ್ರಶ್ನಿಸುತ್ತಿಲ್ಲ? ಸೋಮನಾಥದಲ್ಲಿದ್ದ ಬೃಹತ್ ಮಸೀದಿಯನ್ನು ಸ್ವತಃ ಸರ್ದಾರ್ ಪಟೇಲ್, ಮಹಾತ್ಮಾ ಗಾಂಧೀಜಿ, ಡಾ|| ಅಂಬೇಡ್ಕರ್ ಇತ್ಯಾದಿ ಮಹಾಮಹಿಮರೇ ಸೇರಿ ಕೆಡವಿ ಮಂದಿರ ನಿರ್ಮಾಣ ಮಾಡಿದ್ದು ನಿಮಗೆ ತಿಳಿದಿರಬೇಕು. ಅದನ್ನು ಯಾರೂ ವಿರೋಧಿಸಲಿಲ್ಲ. ಮಹಾತ್ಮಾ ಗಾಂಧೀಜಿಯವರೂ ಅದನ್ನು ಬೆಂಬಲಿಸಿದರೆಂದರೆ ಆಶ್ಚರ್ಯವಲ್ಲವೇ? ಅವರಾರೂ ಅದನ್ನು ಮುಸಲ್ಮಾನ ವಿರೋಧಿ ಎಂದು ತಿಳಿಯಲಿಲ್ಲ. ಏಕೆಂದರೆ, ಅಲ್ಲಿದ್ದ ದೇವಸ್ಥಾನವನ್ನು ಕೆಡವಿ ಮಸೀದಿ ಕಟ್ಟಿಸಿದ್ದು ಔರಂಗಜೇಬ್; ಆತ ಈ ದೇಶದ ಶತೃ; ಈ ದೇಶವನ್ನು ಗೆದ್ದೆನೆಂಬುದನ್ನು ಸಾಬೀತುಪಡಿಸಲು, ಈ ದೇಶಕ್ಕೆ ಅಪಮಾನ ಮಾಡಲು ಮಾಡಿದ ಕೃತ್ಯ ಅದಾಗಿತ್ತು. ಸ್ವಾತಂತ್ರ್ಯ ಬಂದಕೂಡಲೇ ನಮಗಾದ ಅಪಮಾನಗಳನ್ನು ತೊಳೆದುಕೊಳ್ಳುವುದು ನಮ್ಮ ಕರ್ತವ್ಯವೆಂದು ಅಂದಿನ ಲೋಕಸಭೆ ಭಾವಿಸಿತು; ಗಾಂಧೀಜಿಯವರೂ ಭಾವಿಸಿದರು. ಅದೇ ಸೂತ್ರ ಅಯೋಧ್ಯೆಗೂ ಹೊಂದಬೇಕಲ್ಲವೇ? ಬಾಬರ್‌ನ ಹೆಸರಿನ ಜೊತೆ ನಮ್ಮ ಮುಸಲ್ಮಾನರನ್ನು ಜೋಡಿಸುತ್ತಿರುವುದು, ನಮ್ಮ ಮುಸಲ್ಮಾನರಿಗೆ ಮಾಡುತ್ತಿರುವ ಅಪಮಾನ. ಅದನ್ನು ಸರ್ವದಾ ವಿರೋಧಿಸಬೇಕೆಂದು ನಮ್ಮ ವಿದ್ಯಾವಂತ ಮುಸಲ್ಮಾನರಿಗೂ ಅನ್ನಿಸದಿರುವುದು ಆಶ್ಚರ್ಯ.

ನಿಮ್ಮ ಮನದಲ್ಲಿರುವ ಅನುಮಾನ ಬಹುಶಃ ಈ ದೇಶದ ಪ್ರತಿಯೊಬ್ಬ ಪ್ರಜ್ಞಾವ೦ತನದ್ದೂ ಆಗಿದೆ ಎ೦ದರೆ ಅತಿಶಯೋಕ್ತಿಯಾಗಲಾರದು. ಮಹಾತ್ಮ ಗಾ೦ಧಿ, ಸರ್ದಾರ್ ಪಟೇಲರು ಮು೦ದೆ ನಿ೦ತು ಗುಜರಾತಿನಲ್ಲಿ ಔರ೦ಗಜೇಬ ಕಟ್ಟಿಸಿದ ಮಸೀದಿಯನ್ನು ಕೆಡವಿ ದೇವಸ್ಥಾನ ಕಟ್ಟಿಸಬೇಕಾದರೆ ಅಯೋಧ್ಯೆಯಲ್ಲಿ ಏಕೆ ಸಾಧ್ಯವಿಲ್ಲ? ಮಿಲಿಯನ್ ಡಾಲರ್ ಪ್ರಶ್ನೆ! ಆದರೆ ಇದೆಲ್ಲಾ ಇ೦ದಿರಮ್ಮ ಕೃಪಾ ಪೋಷಿತ ನಾಟಕ ಮ೦ಡಳಿಯ ಆಡಳಿತದ ಫಲ, ಮುಸ್ಲಿಮರನ್ನು ಓಟ್ ಬ್ಯಾ೦ಕ್ ಮಾಡಿಕೊ೦ಡು ಮುಖ್ಯವಾಹಿನಿಯಿ೦ದ ಹೊರಗಿಟ್ಟು, ಅವರಿಗೆ ಇಲ್ಲ ಸಲ್ಲದ ಸವಲತ್ತುಗಳನ್ನೆಲ್ಲ ಕೊಟ್ಟು, ೧೮ ವರ್ಷ ಸತತವಾಗಿ ಈ ದೇಶದ ಪ್ರಧಾನಿಯಾಗಿರಲು ಮಾಡಿದ ಸ೦ಚು, ಇ೦ದಿನ ಸ೦ದಿಗ್ಧ ಪರಿಸ್ಥಿತಿಗೆ ಕಾರಣ ಎ೦ದರೆ ತಪ್ಪಾಗಲಾರದು.

"ಬಾಬರ್‌ನ ಕುರಿತಾಗಿ ಹಾಗೂ ಮೊಗಲರ ಕುರಿತಾಗಿ ನಮ್ಮ ಭಾರತೀಯ ಮುಸಲ್ಮಾನರಿಗೆ ಏಕಿಷ್ಟು ಪ್ರೀತಿ? ನಮ್ಮ ಮುಸಲ್ಮಾನರು ಇಲ್ಲಿನ ರಾಷ್ಟ್ರೀಯರು." >> ಪಾಕಿಸ್ತಾನ ಕ್ರಿಕೆಟ್ ನಲ್ಲಿ ಗೆದ್ದಾಗ ಇಲ್ಲಿನ ಗಲ್ಲಿ ಗಲ್ಲಿಗಳಲ್ಲಿ ಪಟಾಕಿ ಸಿಡಿಸಿದವರು, ಕಾಶ್ಮೀರದಲ್ಲಿ ಹಸಿರಿನ ಬಾವುಟ ಹಾರಿಸುತ್ತಿರುವವರು, ಭಾರತದ ಬಾವುಟ ಸುಟ್ಟವರು, ಭಾರತದ ಕಾನೂನೆ ಬೇಡ ಎಂದು ಪ್ರತ್ಯೇಕ ಕಾನೂನು ಪಾಲಿಸುವವರನ್ನು ಒಮ್ಮೆ ಗಮನದಲ್ಲಿ ಇಟ್ಟುಕೊಂಡು , ಇನ್ನೊಮ್ಮೆ ತಮ್ಮ "ರಾಷ್ಟ್ರೀಯರು" ಪದವನ್ನು ಮಾರ್ಪಡಿಸಿ ಪ್ಲೀಸ್..

ಈ ರೀತಿ ದೇಶ ವಿರೋಧಿ ಚಟುವಟಿಕೆ ಮಾಡುವವರನ್ನು "ರಾಷ್ಟ್ರೀಯ"ರೆಂದು ನಾನು ಕರೆಯುತ್ತಿಲ್ಲ. ನಾನು ಹೇಳಹೊರಟ ಅಂಶವೆಂದರೆ, ನಮ್ಮ ಮುಸಲ್ಮಾನರ ಪೂರ್ವಜ ಬಾಬರ್ ಅಲ್ಲ; ಇಲ್ಲಿರುವ ಎಲ್ಲಾ ಮುಸಲ್ಮಾನರೂ ಈ ದೇಶಕ್ಕೇ ಸೇರಿದವರು. ಇಲ್ಲಿರುವವರೆಂದ ಮೇಲೆ, ಅವರ ವರ್ತನೆಯೂ ಇಲ್ಲಿನವರಂತೆಯೇ ಇರಬೇಕು. ಆದರೆ, ಬಾಬರ್ ನನ್ನು ಪ್ರೀತಿಸುವುದು, ಪಾಕಿಸ್ತಾನ ಗೆದ್ದಾಗ ಸಂತಸ ಪಡುವುದು, ಕಾಶ್ಮೀರದಲ್ಲಿ ಭಾರತದ ಬಾವುಟ ಸುಡುವುದು, ಇತ್ಯಾದಿಗಳೆಲ್ಲವೂ ಅವರು ತಮ್ಮನ್ನು ಪರಕೀಯರೊಡನೆ ಜೋಡಿಸುತ್ತದೆ. ಹೀಗಾಗಿ ಇಲ್ಲಿನ ರಾಷ್ಟ್ರೀಯರಾದ ಮುಸಲ್ಮಾನರೂ ರಾಷ್ಟ್ರೀಯರಂತೆಯೇ ವರ್ತಿಸಬೇಕೆಂದು ತಿಳಿಸಲು ನಾನು ಪ್ರಯತ್ನಿಸಿದೆ. ಆದರೆ, ಅವರಿಗೆ ಸಿಗುವ ಮದ್ರಸಾ ಶಿಕ್ಷಣ, ಅವರಿಗೆ ಸಿಗುವ ಸಹವಾಸ, ಅವರಿಗೆ ಸಿಗುವ ಮತಾಂಧ ನಾಯಕತ್ವ, ಇತ್ಯಾದಿಗಳು, ಅವರನ್ನು ಇಲ್ಲಿನ ರಾಷ್ಟ್ರೀಯರಾಗಲು ಬಿಡುವುದೇ ಇಲ್ಲ. ಇಸ್ಲಾಂನ ಹೆಸರಿನಲ್ಲಿ, ಅವರನ್ನು ಪಾಕಿಸ್ತಾನ, ಇರಾನ್, ದುಬೈ ಇತ್ಯಾದಿ ದೇಶಗಳ ಜೊತೆ ಸೇರಿಸಿ, ಒಸಾಮಾ ಬಿನ್ ಲಡೇನ್ ಅಂತಹವರನ್ನೇ ಅವರ ಕಣ್ಮುಂದೆ ಹೀರೋಗಳನ್ನಾಗಿ ಮಾಡಿ, ಒಟ್ಟಿನಲ್ಲಿ ಅವರು ಭಾರತದ ಮುಖ್ಯವಾಹಿನಿಯೊಡನೆ ಸೇರಬಾರದು, ಸದಾ ಭಾರತದ ಬಗಲಿನ ಮುಳ್ಳಾಗಿರಬೇಕು, ಎಂಬ ಪಿತೂರಿ ಬಹಳ ಹಿಂದಿನಿಂದಲೂ ನಡೆದಿದೆ. ಇದಕ್ಕೆ ಪರಿಹಾರವೆಂದರೆ, ರಾಷ್ಟ್ರೀಯವಾದಿ ಮುಸಲ್ಮಾನರನ್ನು ಗುರುತಿಸಿ, ಅವರಿಗೆ ಮಹತ್ವ ನೀಡಿ, ಅವರ ನಾಯಕತ್ವವನ್ನು ಮೇಲ್ತರುವುದು. ಆದರೆ, ಇದೆಲ್ಲ ಸಾಧ್ಯವಿಲ್ಲದ ಮಾತು ಎನಿಸುತ್ತದೆ. ಇಸ್ಲಾಂ ಜಗತ್ತು ಇಂದು ನಡೆಯುತ್ತಿರುವ ಆಕ್ರಮಣಕಾರಿ ಹಾದಿ ನೋಡಿದರೆ, ಮತ್ತೊಂದು ಮಹಾಯುದ್ಧ ದೂರದಲ್ಲಿಲ್ಲ ಎನಿಸುತ್ತದೆ.

ಅಬ್ದುಲ್, <<ಮೂರು ನಾಮಗಳು ಕೂಡಿದಾಗ ಆಗುವುದು “ಪಂಗನಾಮ”, ಆಲ್ವಾ ಮಹೇಶ್?>> ನೀವೂ, ಗಾಜಿನ ಮನೆಯಲ್ಲಿ ಕೂತು ಪಕ್ಕದ ಮನೆಗಳಿಗೆ ಕಲ್ಲು ಎಸೆಯುವ ಕರ್ನಾಟಕದ ವಿರೋಧಪಕ್ಷದ ನಾಯಕರುಗಳಂತೆ ಮಾತಾಡ್ತೀರಿ ಒಮ್ಮೊಮ್ಮೆ. "ಅಬ್ದುಲ್ ಲತೀಫ್ ಸಯ್ಯದ್". ಇಲ್ಲಿ ಇರೋದೂ ಮೂರು ನಾಮಗಳೇ ತಾನೇ? ಮೂರು ಅಕ್ಷರಗಳ ಮಾತಿನಿಂದ ಮೂರು ನಾಮಗಳಿಗೆ ವಿಷಯಾಂತರಮಾಡಿ ನಂತರ ಈ ರೀತಿ "ಪಂಗನಾಮ" ಹಾಕಿಸಿಕೊಳ್ಳೋದು ನಿಮಗೆ ಬೇಕಿತ್ತಾ ಹೇಳಿ?

ಅಯೋಧ್ಯೆಯಲ್ಲಿರುವುದು ಮೂರಕ್ಷಗಳೇ? (ಅ+ಯ್+ಓ+ಧ್+ಯ್+ಎ) ಬಾಬರ್ ನಲ್ಲಿರುವುದೂ ಮೂರೇ ಅಕ್ಷರಗಳೇ? (ಬ್+ಆ+ಬ್+ಅ+ರ್) ಹಾಗಾದರೆ "ಮೂರು" ಅಂದರೆ ಎಷ್ಟು? (ಮ್+ಊ+ರ್+ಉ) ಅಲ್ಲದೆ, ಸಂಘನೆ ಅಂದರೆ ಏನು?