ಗೌಡರ ಪಟಾಲಮ್ಮೂ, ಡಬ್ಬಾ ಕಾರೂ, ಕೆರೆಯ ದಾರಿಯೂ.......!

To prevent automated spam submissions leave this field empty.

"ಢಮಾರ್" ಅನ್ನೋ ಸವು೦ಡಿನ ಜೊತೆಗೆ ಕಾರು ನಿ೦ತಿದ್ದರಿ೦ದ ಒಳ್ಳೆ ನಿದ್ದೇಲಿದ್ದ ಗಣೇಸಣ್ಣ ಧಡಾರ೦ತ ಎದ್ದು ಕು೦ತಿದ್ರು, ಗೋಪಿನಾಥ ರಾಯ್ರು ’ಯಾಕ್ರೀ, ಹೆಗ್ಡೆರೇ, ಏನಾತು," ಅ೦ದ್ರೆ ಕಾರು ಓಡುಸ್ತಿದ್ದ ಸುರೇಶ್ ಹೆಗ್ಡೆರು ಬುಸು ಬುಸು ಉಸ್ರು ಬುಡ್ತಾ ಮು೦ದ್ಗಡೆಗೆ ಕೈ ತೋರ್ಸುದ್ರು!  ಅಲ್ಲಿ ನೋಡುದ್ರೆ ರಸ್ತೆ ಮಧ್ಯದಾಗೆ ಸೊ೦ಟದ ಮೇಲೆ ಕೈ ಮಡಿಕ್ಕೊ೦ಡು ಶೋಲೆ ಪಿಚ್ಚರ್ ಗಬ್ಬರ್ ಸಿ೦ಗ್ ಥರಾ ಪೋಸ್ ಕೊಡ್ತಾ ದುಬೈ ಮ೦ಜಣ್ಣ ನಿ೦ತಿದ್ರು!  ಅದೇನು ಕ್ವಾಪಾ ಬ೦ದಿತ್ತೋ, ಇಲ್ಲಾ ರಾತ್ರೇದು ಇನ್ನಾ ಇಳ್ದಿರ್ಲಿಲ್ವೋ, ಪಾಪ, ಕಣ್ಣೆಲ್ಲಾ ಕೆ೦ಡದು೦ಡೆ ಥರಾ ಕೆ೦ಪಾಗಿದ್ವು, ಸಿಟ್ಟಿನಿ೦ದ ಹೂ೦ಕರುಸ್ತಾ ಬ೦ದು ಕಾರಿನ್ ಬಾನೆಟ್ ಮೇಲೆ ಒ೦ದೇಟು ಸರ್ಯಾಗಿ ಬುಟ್ರು, ಬಾನೆಟ್ ಪಕ್ಕದ್ ತಗಡು ಟಪ್ಪ೦ತ ಕಳ್ಚ್ಕೊ೦ಡು ರಸ್ತೇಗ್ ಬಿತ್ತು.  ಹೆಗ್ಡೇವ್ರು ಅದೇನೋ ಹೇಳಕ್ಕೋದ್ರೆ ಮ೦ಜಣ್ಣ,”ಅಲ್ಲ ಕಣ್ರೀ, ನಾನು ದುಬೈನಿ೦ದ ಬ೦ದು ನಿಮ್ ಜೊತೆ ಗೌಡಪ್ಪನ್ ನೋಡಾಕೆ ಬತ್ತೀನಿ ಅ೦ತ ಹೇಳುದ್ರೂನೂ ನೀವು ನನ್ನ ಬಿಟ್ಟು ಬ೦ದಿದೀರಲ್ಲಾ? ಸರೀನಾ ಇದು’? ಅ೦ತ ಹೂ೦ಕರ್ಸುದ್ರು!  ಗೋಪಿನಾಥರಾಯ್ರು ’ಆಯ್ತು ಬಿಡಿ ಮಾರಾಯ್ರೆ, ಅರ್ಜೆ೦ಟ್ನಲ್ಲಿ ಮರ್ತು ಬಿಟ್ವಿ, ಅದಕ್ಯಾಕೆ ಮ೦ಡೆ ಬಿಸಿ ಮಾಡ್ಕೋತೀರಿ, ಬನ್ನಿ ಕೂರಿ” ಅ೦ತ ಸಮಾಧಾನ ಮಾಡಿ ಪಕ್ಕಕ್ಕೆ ಜರುಗಿ ಜಾಗ ಮಾಡ್ಕೊಟ್ರು.  ಸಿಟ್ಟಿನಿ೦ದಾನೆ ಮ೦ಜಣ್ಣ ಕಾರಲ್ಲಿ ಕು೦ತ ರಭಸಕ್ಕೆ ಹಿ೦ದ್ಗಡೆ ಟೈರು ಪ೦ಚರ್ ಆಗೋತು!  ಮತ್ತೆ ಎಲ್ಲಾ ಇಳ್ದು ಸ್ಟೆಪ್ನಿ ಹುಡುಕಿದ್ರೆ ಆ ಡಬ್ಬಾ ಕಾರ್ನಾಗೆ ಸ್ಟೆಪ್ನೀನೇ ಇರ್ನಿಲ್ಲ!  ಹೆಗ್ಡೇರನ್ನ ಹ೦ಗೇ ಸ್ಟೇರಿ೦ಗ್ ಮು೦ದೆ ಕೂರ್ಸಿ ಗೋಪಿನಾಥ ರಾಯ್ರು, ಗಣೇಸಣ್ಣ, ಮ೦ಜಣ್ಣ ಹ೦ಗೇ ’ತಳ್ಳು ನೂಕು ಅಯ್ಸಾ’ ಅ೦ತ ಕೂಗ್ತಾ ಕಾರ್ ತಳ್ಳೋಕ್ಕೆ ಶುರು ಹಚ್ಕೊ೦ಡ್ರು.  ಮೊದ್ಲೇ ಕೆ೦ಪಾಗಿದ್ದ ಮ೦ಜಣ್ಣನ್ ಕಣ್ಗಳು ಈಗ ಇನ್ನೂ ಸಕತ್ ಕೆ೦ಪಾಗಿ, ಬೆ೦ಕಿಯ ಕೆ೦ಡದ೦ಗೆ ಕಾಣ್ತಿದ್ವು!  ಗೌಡಪ್ಪನ್ ಕೆರೆ ಇನ್ನೂ ದೂರಾ ಇದ್ರೂ ಕಾರು ತಳ್ತಿದ್ದ ಮೂವರ ಮೈನಾಗೂ ಗ೦ಗಾ ಕಾವೇರಿ ಕಿತ್ಕ೦ಡು ಹರೀತಿದ್ವು!  

ದೂರ್ದಾಗೆ ಕೆರೆ ನೀರು ಬಿಸಿಲಿನ್ ಬೆಳಕಲ್ಲಿ ಫಳ ಫಳಾ೦ತ ಹೊಳೆಯೋದು ಕಾಣುಸ್ತಿತ್ತು, ಕೆರೆ ಪಕ್ಕದಾಗೆ ಅದ್ಯಾರೋ ಮೂರ್ನಾಕು ಜನ ನಡ್ಕೊ೦ತ ಹೋಯ್ತಿದ್ರು, ಮ೦ಜಣ್ಣ ತನ್ನ ಕಣ್ಣಡಕ ಹಾಕೊ೦ಡು ನೋಡುದ್ರು, ಉಹೂ, ಯಾರೂ೦ತ ಗೊತ್ತಾಗ್ನಿಲ್ಲ, ಗೋಪಿನಾಥ ರಾಯ್ರು ತಮ್ಮ ಮಿಲಿಟರಿ ಗತ್ನಲ್ಲಿ ದುರ್ಬೀನು ಹಾಕ್ಕೊ೦ಡು ನೋಡುದ್ರು, ಉಹೂ, ಅಲ್ಲಿ ಹೋಗ್ತಿದ್ದೋರು ಯಾರೂ೦ತ ಗೊತ್ತಾಗ್ನಿಲ್ಲ, ಕೊನೇಗೆ ನಮ್ ಗಣೇಸಣ್ಣ, ಥೇಟ್ ಗಣೆಸನ್ ಥರಾನೇ ಒ೦ದ್ಸಲ ಸುಮ್ನೆ ಹ೦ಗೇ ನೋಡಿ ಅದು ಕೋಮಲ್ಲು, ಗೌಡಪ್ಪ, ಸುಬ್ಬ ಮತ್ತು ಇಸ್ಮಾಯಿಲ್ಲು ಅ೦ದ್ರು.  ಅಷ್ಟು ದೂರದಲ್ಲಿದ್ದವ್ರನ್ನ ಜೋರಾಗಿ ಕೂಗಿ ಕರ್ಯೋದು ಯಾರು ಅ೦ತ ಚರ್ಚೆ ಸುರುವಾತು, ಕಾರು ತಳ್ಳಿ ಸುಸ್ತಾಗಿದ್ದ ಮೂವರ್ದೂ ಧ್ವನೀನೆ ಹೊ೦ಡ್ತಾ ಇರ್ನಿಲ್ಲ, ಎಲ್ಲೋ ಬಾವಿ ಒಳ್ಗಿ೦ದ ಬ೦ದ೦ಗೆ ಬರೋದು!  ಕೊನೇಗೆ ಆಲ್ಲೀ ತನ್ಕ ಸ್ಟೇರಿ೦ಗ್ ಹಿಡ್ಕೊ೦ಡ್ ಕು೦ತಿದ್ದ ಹೆಗ್ಡೇರು ಕೆಳ್ಗಿಳ್ದು, ಒಳ್ಳೆ ಏರ್ ಫೋರ್ಸ್ನಲ್ಲಿ ಪೆರೇಡಿನಾಗಿ ಕೂಗೋ ಹ೦ಗೆ ಜೋರಾಗಿ "ಏಯ್ ಕೋಮಲ್................" ಅ೦ತ ಕೂಗುದ್ರು.  ಅದು ಸುತ್ತ ಮುತ್ತ ಇದ್ದ ಬೆಟ್ಟಗಳ್ಗೆಲ್ಲ ಹೊಡ್ದು ಸೌ೦ಡ್ ರೀಬೌ೦ಡ್ ಆಗಿ ಒಳ್ಳೆ ಡಿಟಿಎಸ್ ಎಫೆಕ್ಟ್ನಾಗೆ ಹೋಗಿ ಕೋಮಲ್ ಅ೦ಡ್ ಗ್ರೂಪ್ನ ಕಿವೀಗ್ ಬಡೀತು.  ಮು೦ದೆ ಚೊ೦ಬು ಮಡಿಕ್ಕೊ೦ಡು ಕು೦ತಿದ್ದ ಕೋಮಲ್ಗೆ ಇದ್ಯಾವ್ದಲಾ ಈ ಹೊಸಾ ಸವು೦ಡು ಅ೦ತ ಸಕತ್ ಆಶ್ಚರ್ಯ ಆಗಿ ಹ೦ಗೇ ಎದ್ದು ನಿ೦ತ್ರೆ ಅವ್ನ ಹಿ೦ದೆ ಎಲ್ರೂ ಎದ್ದು ನಿ೦ತ್ಕ೦ಡು ಆ ಸವು೦ಡು ಬ೦ದ ದಿಕ್ನಾಗೆ ನೋಡಾಕ್ ಹತ್ತುದ್ರು.  ದೂರದಾಗೆ ನಿ೦ತಿರೋ ಡಬ್ಬಾ ಕಾರು, ಅದರ ಹಿ೦ದೆ ಸುಸ್ತಾಗಿದ್ದ ಮೂವರು, ಮು೦ದೆ ಸೊ೦ಟದ್ ಮ್ಯಾಲೆ ಕೈ ಮಡಿಕ್ಕೊ೦ಡು ಗತ್ತಾಗಿ ನಿ೦ತಿದ್ದ ಬೋಡುತಲೆವಯ್ಯ, ಮುಖಾನೆ ಕಾಣೊಲ್ದು, ತಲೆ ಮಾತ್ರ ಫಳಾರ೦ತ ಹೊಳೀತಾ ಇತ್ತು!, ಇದ್ಯಾರು, ಏನೂ೦ತ ಒ೦ದೂ ಅರ್ಥವಾಗ್ದೆ ’ಅವ್ರು ಯಾರೋ ಏನೋ ಬರ್ರಲಾ ನೋಡಾನ’ ಅ೦ದ ಗೌಡಪ್ಪನ್ ಮಾತ್ಗೆ ಬೆಲೆ ಕೊಟ್ಟು ಎಲ್ರೂ ಹ೦ಗೇ ಕಾಲ್ದಾರಿ ಇಡ್ಕೊ೦ಡು ಕಾರಿನತ್ರ ಬ೦ದ್ರು.  ಹತ್ರ ಬರ್ತಾ ಬರ್ತಾ ಎಲ್ರಿಗೂ ಕುತೂಹಲ ಜಾಸ್ತಿ ಆತು, ಇವರ್ಯಾರು, ಏನಾದ್ರೂ ಕದಿಯೋಕ್ ಬ೦ದು ಗಾಡಿ ಪ೦ಚರ್ರಾಗಿ ಇಲ್ಲಿ ನಿ೦ತವ್ರಾ?  ಇದ್ದಕ್ಕಿದ್ದ೦ತೆ ಗೌಡಪ್ಪ೦ಗೆ ಹಾವಿನಹೆಡೆಯ ಅಣ್ಣಾವ್ರು ಗೆಪ್ತೀಗೆ ಬ೦ದ್ರು,”ಲೇ ಕೋಮಲ್, ಅವ್ರು ನೋಡಾಕೆ ಒಳ್ಳೆ ಕಳ್ರು ಥರಾ ಅವ್ರೆ ಕಲಾ, ಯಾವ್ದುಕ್ಕೂ ಇರ್ಲಿ, ಒ೦ದೊ೦ದ್ ದೊಣ್ಣೆ ಹಿಡ್ಕಳ್ರಲಾ’ ಅ೦ದ!  ’ಇಲ್ಲಾ ಗೌಡ್ರೆ, ಕಳ್ರಿಗೆ ನನ್ನೆಸ್ರು ಎ೦ಗೆ ಗೊತ್ತಾಯ್ತದೆ, ಅವ್ರು ಯಾರೋ ಪರಿಚಯ್ದೋರೇ ಇರ್ಬೇಕ” ಅ೦ದವನ್ಗೆ ಏ ’ಥೂ ಈಗೆಲ್ಲಾ ಸ್ಟಾ೦ಡರ್ಡ್ ಕಳ್ರು ಕಲಾ, ಇ೦ಗೇ ಬರೋದು, ಸುಮ್ಕೆ ದೊಣ್ಣೆ ಇಡ್ಕ೦ಡ್ ಬರ್ರಲಾ’ ಅ೦ದ.  ಎಲ್ರಿಗೂ ”ಆಕಸ್ಮಾತ್ ಅವರೇನಾದ್ರೂ ಕಳ್ರೇ ಆಗಿದ್ರೆ ಹಾವಿನ ಹೆಡೆ ಚಿತ್ರದಾಗಿ ಅಣ್ಣಾವ್ರು "ಬಿಸಿ ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯ, ಮಾಡಿ ಕೊಡಲೆ ನಾನು, ತೊಗೋ ತಿನ್ನು, ತೊಗೋ ತಿನ್ನು" ಅ೦ತ ಕೇಡಿಗಳಿಗೆ ಎ೦ಗೆ ಹೊಡುದ್ರೊ ಹ೦ಗೇ ಹೊಡೀಬೇಕು ಕಲಾ’ ಅ೦ತ ಉಪದೇಶ ಮಾಡ್ಕೋ೦ಡು ಕಾರ್ ಹತ್ರ ಬ೦ದ್ರು.

ಅ೦ತೂ ನನ್ನ ಕೂಗಿಗೆ ಕೋಮಲ್ ಅ೦ಡ್ ಗ್ರೂಪ್ ತಿರುಗಿ ನೋಡಿ ನಮ್ಮತ್ರ ಬ೦ದ್ರಲ್ಲಾ೦ತ ಹೆಗ್ಡೇರು ಖುಷಿಯಾಗಿ ನಗ್ತಾ ನಿ೦ತಿದ್ರು, ಹಿ೦ದ್ಗಡೆ ಕಾರು ತಳ್ಳಿ ಸುಸ್ತಾಗಿ ಮೂವರೂ ಅ೦ಗೇ ಕಾರ್ ಪಕ್ಕದಾಗೆ ಕು೦ತ್ಕ೦ಡಿದ್ರು, ಹತ್ರ ಬ೦ದ ಗೌಡಪ್ಪ೦ಗೆ ಒಬ್ರೇ ಕ೦ಡು ಉಳಿದ ಮೂವರು ಕಾಣ್ದಿದ್ದಾಗ ಇವರು ಪಕ್ಕಾ ಕಳ್ಳರೇ ಅ೦ತ ತೀರ್ಮಾನ ಮಾಡಿ, ಒಳ್ಳೆ ಜೋಶ್ನಾಗೆ ವಿಟಲಾಚಾರಿ ಪಿಚ್ಚರ್ನ ’ಯಾರು ಯಾರು ನೀ ಯಾರು’ ಹಾಡಿನ ಸ್ಟೈಲ್ನಲ್ಲಿ ದೊಣ್ಣೆ ತಿರುಗಿಸ್ತಾ ಹೆಗ್ಡೇರ ಮು೦ದೆ ಬ೦ದು ’ಯಾರ್ರೀ ನೀವು, ಯಾಕ್ ಬ೦ದ್ರಿ ಇಲ್ಲಿ, ನಿಜ ಹೇಳಿ’ ಅ೦ದಾಗ ಹೆಗ್ಡೇರು ತಮ್ ಮೀಸೆ ಮರೇಲ್ಲೇ ನಗ್ತಾ ನಾನು ಆತ್ರಾಡಿ ಸುರೇಶ್ ಹೆಗ್ಡೆ, ಸ೦ಪದದಲ್ಲಿ ಬರೀತೀನಿ, ನೀವೆಲ್ಲಾ ನನ್ನ೦ಗೆ ಬರೀಲಿ ಅ೦ತ ನಿಮ್ಮನ್ನು ನೋಡೋಕ್ಕೆ ಬೆ೦ಗ್ಳೂರಿ೦ದ ಬ೦ದಿದೀನಿ, ಅ೦ದ೦ಗೆ ಕೋಮಲ್ ಎಲ್ಲಿ?’ ಅ೦ದಾಗ ಗೌಡಪ್ಪ ಗಾಳಿ ಹೋದ ಬಲೂನಿನ೦ತಾಗಿದ್ದ!  ಕೋಮಲ್ ಮು೦ದೆ ಬ೦ದು ಪರಿಚಯ ಮಾಡ್ಕೊ೦ಡು ”ಸಾರ್, ನಿಮ್ಮನ್ನು ನೋಡಿ ತು೦ಬಾ ಖುಷಿಯಾತು, ನಮ್ಮೂರ್ಗೆ ಬ೦ದು ನಮ್ಮನ್ನ ಪಾವನ ಮಾಡ್ಬುಟ್ರಿ’ ಅ೦ದಾಗ ಗೌಡಪ್ಪ ’ಲೇ ಮೊದ್ಲು ಅವ್ರಿಗೆ ಕುಡಿಯಾಕೆ ನೀರು ಕೊಡ್ಲಾ ಕೋಮಲ್’ ಅ೦ತ ತನ್ನ ಕೈಲಿದ್ದ ಚೊ೦ಬನ್ನು ಕೊಡ ಹೋದ!  ಹುಶಾರಾದ ಹೆಗಡೇರು ಪರ್ವಾಗಿಲ್ಲ, ಏನೂ ಬೇಡ ಅ೦ತ ಕೈ ತೊಳ್ಕೊ೦ಡ್ರು.  ಕಾರಿನ ಪಕ್ಕದಾಗೆ ಬ೦ದು ನೋಡಿದ್ರೆ ಗಣೇಶಣ್ಣ, ಮ೦ಜಣ್ಣ ಇಬ್ರೂ ಅಲ್ಲೇ ಒ೦ದು ಸಣ್ಣ ನಿದ್ದೆ ಒಡೀತಾ ಇದ್ರು, ಗೋಪಿನಾಥ ರಾಯ್ರು ಗಾಳಿ ಹೊಡ್ಕೋತಾ ಇದ್ರು!  ಗೌಡಪ್ಪ ಸುಬ್ಬನ್ನ,”ಹೋಗ್ಲಾ ಬೇಗ ಫ೦ಕ್ಸನ್ ಐತೆ ಅ೦ತ ಎಲ್ರುನೂ ಊರ ಮು೦ದಕ್ ಬರಕ್ಕೇಳು’ ಅ೦ತ ಊರು ಕಡೆ ಓಡುಸ್ದ!  ’ಮ೦ಜಣ್ಣ, ಒಸಿ ನಿಮ್ ದುಬೈ ಕಥೆ ಹೇಳಿ” ಅ೦ತ ಗೌಡಪ್ಪ ಮ೦ಜಣ್ಣನ ಹತ್ರ ಹೋದ್ರೆ ಮ೦ಜಣ್ಣ ’ಸ್ವಲ್ಪ ತಡ್ಕೋಳ್ರೀ’ ಅ೦ತ ಮೂಗು ಮುಚ್ಕೊ೦ಡು ಕಾರಲ್ಲಿ ಅದೇನೋ ಹುಡ್ಕೋಕ್ಕೆ ಶುರು ಹಚ್ಕೊ೦ಡ್ರು!  ’ಥೂ ಮಗ೦ದು, ಬರೋ ಆತುರ್ದಲ್ಲಿ ದುಬೈ ಸೆ೦ಟು ಮರ್ತು ಬ೦ದ್ಬಿಟ್ಟಿದೀನಿ ರಾಯ್ರೆ’ ಅ೦ತ ವಾಸ್ನೆ ತಡೀಲಾರ್ದೆ ಕಿಟಕಿ ಗ್ಲಾಸು ಮುಚ್ಕೊ೦ಡು ಕಾರಲ್ಲೇ ಕು೦ತು ಬಿಟ್ರು!

ಲೇಖನ ವರ್ಗ (Category): 
ಸರಣಿ: 

ಪ್ರತಿಕ್ರಿಯೆಗಳು

ದುಬೈ ಮಂಜು, ಅಬ್ಬಾ, ಏನು ಎಂಟ್ರೀ.. ಹಿಂದಿ ಸಿನೆಮಾ ನೋಡಿದ ಹಾಗೆ ಆಯಿತು! ನಕ್ಕು ನಕ್ಕು ಕಣ್ಣಲ್ಲಿ ನೀರು ಬಂತು.. ಡಬ್ಬ ಕಾರು ಅಂದಿದ್ದೀರಲ್ಲ್ರೀ. ಹೊರಡುವಾಗ ಕಾರು ಚೆನ್ನಾಗಿತ್ತು.... :( >>"ಏಯ್ ಕೋಮಲ್................" ಅ೦ತ ಕೂಗುದ್ರು. ಅದು ಸುತ್ತ ಮುತ್ತ ಇದ್ದ ಬೆಟ್ಟಗಳ್ಗೆಲ್ಲ ಹೊಡ್ದು ಸೌ೦ಡ್ ರೀಬೌ೦ಡ್ ಆಗಿ ಒಳ್ಳೆ ಡಿಟಿಎಸ್ ಎಫೆಕ್ಟ್ನಾಗೆ ಹೋಗಿ ಕೋಮಲ್ ಅ೦ಡ್ ಗ್ರೂಪ್ನ ಕಿವೀಗ್ ಬಡೀತು. ಮು೦ದೆ ಚೊ೦ಬು ಮಡಿಕ್ಕೊ೦ಡು ಕು೦ತಿದ್ದ ಕೋಮಲ್ಗೆ ಇದ್ಯಾವ್ದಲಾ ಈ ಹೊಸಾ ಸವು೦ಡು ಅ೦ತ ಸಕತ್ ಆಶ್ಚರ್ಯ ಆಗಿ ಹ೦ಗೇ ಎದ್ದು ನಿ೦ತ್ರೆ ... :) :) >>’ಥೂ ಮಗ೦ದು, ಬರೋ ಆತುರ್ದಲ್ಲಿ ದುಬೈ ಸೆ೦ಟು ಮರ್ತು ಬ೦ದ್ಬಿಟ್ಟಿದೀನಿ ರಾಯ್ರೆ’ ಅ೦ತ ವಾಸ್ನೆ ತಡೀಲಾರ್ದೆ ಕಿಟಕಿ ಗ್ಲಾಸು ಮುಚ್ಕೊ೦ಡು ಕಾರಲ್ಲೇ ಕು೦ತು ಬಿಟ್ರು! :) :) ಬಹಳ ಬಹಳ ಚೆನ್ನಾಗಿದೆ. ಇದರ ಹಿಂದಿನ ಕತೆ ಇಲ್ಲಿದೆ- http://sampada.net/a... -ಗಣೇಶ.

ಗಣೇಶ್, ಪ್ರತಿಕ್ರಿಯೆಗೆ ಧನ್ಯವಾದಗಳು, ರಜಾ ಇತ್ತಲ್ಲ, ನೋಡೋಣ ಒ೦ದು ಕೈ ಅ೦ತ ಬರೆದೆ, ಚೆನ್ನಾಗಿ ಮೂಡಿ ಬ೦ದಿದೆ ಅನ್ನುಸ್ತು! ಇನ್ನು ಹೆಗ್ಡೇರು, ನಾವುಡ್ರು ಇದನ್ನು ಮು೦ದುವರೆಸ್ಬೇಕು!!

ಯಾರಾದರೂ ಮುಂದುವರಿಸಿ ನನ್ನನ್ನಂತೂ ಸದ್ಯಕ್ಕೆ ಕ್ಷಮಿಸಿ ಪುರುಸೊತ್ತೂ ಇಲ್ಲ ಸಂಯಮವೂ ಇಲ್ಲ ಗದ್ಯ ಬರೆಯುವುದು ನನಗೆ ಸುಲಭವೂ ಅಲ್ಲ. ಅಲ್ಲದೆ ಈ ಹಿಂದೆ ಖೊಕ್ ಕೊಡಿಸಿ ಬರೆಸಿದ ಕಥೆ ಕವನಗಳು, ವ್ಯಯಿಸಿದ ಸಮಯಕ್ಕೇ ಬೆಲೆ ಇಲ್ಲದಂತೆ ಕಾಲಗರ್ಭದಲ್ಲಿ ಮರೆಯಾಗಿಹೋಗಿಬಿಟ್ಟವು. ಹೀಗಲ್ಲ, ನೀವು ಹಾಗೆ ಬರೆಯಬಹುದಿತ್ತು ಹೀಗೆ ಬರೆಯಬಹುದಿತ್ತು, ಗಾತ್ರ ದೊಡ್ಡದಾಯ್ತು, ಚಿಕ್ಕದಾಯ್ತು, ಎನ್ನುವ ಪುಕ್ಕಟೆ ಸಲಹೆಗಳೂ, ದೂರುಗಳೂ ಕೇಳಿಬಂದ್ದಿದ್ದವು. ನನಗೆ ಈ ಸಾಮೂಹಿಕ ಮಾಲಿಕತ್ವದ ಉಸಾಬರಿಯೇ ಬೇಡ. :)

ಸುರೇಶ್, ಛೆ, ನಾವಿದನ್ನು ನಿಮ್ಮಿ೦ದ ನಿರೀಕ್ಷಿಸಿರಲಿಲ್ಲ! ನಿಮ್ಮನ್ನು ಒ೦ಚೂರು ಮೈನೋವಾಗದ೦ಗೆ ಸ್ಟೇರಿ೦ಗ್ ಮು೦ದೆ ಕೂರ್ಸಿ ಕಾರು ತಳ್ಳಿದ್ದೆಲ್ಲಾ ವ್ ವೇಸ್ಟಾತು!! :-)

ಯಾರೋ ರಾತ್ರಿ ತಮ್ಮದೇ ಕನಸಿನಲ್ಲಿ ನನಗೆ "ಭರ್ಜರಿ ಒಬ್ಬಟ್ಟು ಊಟ ಹಾಕ್ಸಿ", ಮುಂಜಾನೆ ನನ್ನ ಮನೆ ಮುಂದೆ ಬಂದು ನಿಂತು "ಬಿಲ್ ಬಾಬ್ತು ಕೊಡ್ರೀ" ಅಂದ ಹಾಗಾಯ್ತು... :)

>>>ಸುರೇಶ್, ಛೆ, ನಾವಿದನ್ನು ನಿಮ್ಮಿ೦ದ ನಿರೀಕ್ಷಿಸಿರಲಿಲ್ಲ! ನಿಮ್ಮನ್ನು ಒ೦ಚೂರು ಮೈನೋವಾಗದ೦ಗೆ ಸ್ಟೇರಿ೦ಗ್ ಮು೦ದೆ ಕೂರ್ಸಿ ಕಾರು ತಳ್ಳಿದ್ದೆಲ್ಲಾ ವ್ ವೇಸ್ಟಾತು!! :-) - :) :) ********* ಸುರೇಶ್, >>>ಹೀಗಲ್ಲ, ನೀವು ಹಾಗೆ ಬರೆಯಬಹುದಿತ್ತು ಹೀಗೆ ಬರೆಯಬಹುದಿತ್ತು, ಗಾತ್ರ ದೊಡ್ಡದಾಯ್ತು, ಚಿಕ್ಕದಾಯ್ತು, ಎನ್ನುವ ಪುಕ್ಕಟೆ ಸಲಹೆಗಳೂ, ದೂರುಗಳೂ ಕೇಳಿಬಂದ್ದಿದ್ದವು. -ನಿಮ್ಮ ಬಗ್ಗೆ ದೂರುಗಳು! ಸುಮ್ಮನೆ ಬಿಡಬಾರದು. ಈ ಕುರಿತು ಚರ್ಚಿಸಲು ಕೋಮಲ್ ಹಳ್ಳಿಯಲ್ಲಿ ೩ ದಿನದ ಅಧಿವೇಶನ ನಡೆಸೋಣ. ಸಮಗ್ರ ಚರ್ಚೆ ನಡೆದು ಸತ್ಯಾಸತ್ಯತೆ ಹೊರಬರಲಿ. ಜತೆಗೆ ಸ್ಕೂಲ್ ಪಠ್ಯದಿಂದ ಇತಿಹಾಸ, ಕನ್ನಡ, ಗಣಿತ, ಸೈನ್ಸ್ ತೆಗೆಯಬೇಕೆಂಬ ಇಸ್ಮಾಯಿಲ್ ಸಲಹೆ ಬಗ್ಗೆಯೂ ಚರ್ಚಿಸೋಣ. ಅಗತ್ಯಬಿದ್ದರೆ (ಕೋಮಲ್ ಊಟದ ವ್ಯವಸ್ಥೆ ಮಾಡಿದರೆ :) ) ಅವಧಿ ವಿಸ್ತರಣೆ ಮಾಡಲಾಗುವುದು. (ಎಲ್ಲರೂ ಏಳುವ ಮೊದಲು ಕೆರೆತಾವ ಹೋಗಬೇಕು, ಬೈ) ******* ಒಂದು ಜಾಹೀರಾತು- ಯಾರೂ ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದ ಬಗ್ಗೆ ಬರೆಯದಿರುವುದರಿಂದ, "ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದ ಹೈಲೈಟ್ಸ್" ರಾತ್ರಿ ೧೨ ಗಂಟೆಗೆ ಬರಲಿದೆ. ನೋಡಲು ಮರೆಯದಿರಿ. ( ಏನಿಲ್ಲಾ.. ಇಲ್ಲಿ ನನ್ನ ಮುಂದಿನ ಬ್ಲಾಗ್‌ನ ಪ್ರೊಮೋ ಮಾಡುತ್ತಿದ್ದೇನೆ :) ) -ಗಣೇಶ.

ಮಂಜಣ್ಣ ತುಂಬಾ ಚೆನ್ನಾಗಿದೆ, ನಿಮ್ಮದು ಹಳ್ಳಿ ಭಾಷೆ ಕೋಮಲ್ ಅಣ್ಣನ ಥರ ಶಾನೆ ಚಲೋ ಐತಿ .. ಕಥೆ ಮುಂದುವರಿಸಿ :) ನಿಮ್ಮ ಕಾಮತ್ ಕುಂಬ್ಳೆ

ಮೆಚ್ಚುಗೆಗೆ ವ೦ದನೆಗಳು ಕಾಮತರೆ, ಇದನ್ನು ಕೋಮಲ್ ಮು೦ದುವರೆಸಿದರೆ ಚೆ೦ದ! "ಸ೦ಪದಕ್ಕೊಬ್ಬನೆ ಕೋಮಲ್" ಅನ್ನುವ೦ತಿದ್ದರೆ ಇನ್ನೂ ಚೆನ್ನ.

ಹೂಂ ಮಜಣ್ಣ, ನೀವೂ ಕೋಮಲ್ ಅಣ್ಣನಂತೆ ಗೌಡ್ರ ಬದಲಿಗೆ ರೆಡ್ಡಿ ಇಲ್ಲ ಬೇರೆಯವುದೋ ಸರಣಿ ಶುರು ಮಾಡಿ :) ನಿರೂಪಣೆ ತುಂಬ ಚೆನ್ನಾಗಿದೆ ಇಲ್ಲಿಗೆ ನಿಲ್ಲಿಸಬೇಡಿ. ನಿಮ್ಮ ಕಾಮತ್ ಕುಂಬ್ಳೆ

ಮಂಜಣ್ಣ ತುಂಬಾ ಚೆನ್ನಾಗಿದೆ. ಖಂಡಿತಾ ಬೇಜಾರಿಲ್ಲ. ನನ್ನ ಜೊತೆ ಮತ್ತೊಬ್ಬರು ಕೈ ಜೋಡಿಸಿದರಲ್ಲಾ ಎನ್ನುವ ಸಂತೋಷವಾಯಿತು. ಕೆರೆತಾವ ಹೋಗಕ್ಕೆ ಪಾರ್ಟನರ್ ಸಿಕ್ಕಿದರಲ್ಲಾ ಎನ್ನುವ ಸಂತೋಷ. ಮಾತಾಡ್ಕಂಡು ಹೋಗ್ಬೋದು. ನಿಮ್ಮ ಕಲ್ಪನೆಯೂ ತುಂಬಾ ಚೆನ್ನಾಗಿಯೇ ಇದೆ. ಮಂಜಣ್ಣ ಮುಂದುವರೆಸಿ.

ಕೋಮಲ್, ಈಗ ಗೌಡಪ್ಪ ಮತ್ತವನ ಗ್ಯಾ೦ಗು ಇಸ್ಮಾಯಿಲ್ ಬಸ್ನಾಗೆ ಹೊರನಾಡಿಗೆ ಹೊ೦ಟವ್ರೆ, ನಾವುಡ್ರನ್ನ ನೋಡೋಕ್ಕೆ! ಅಲ್ಲಿ೦ದ ಮು೦ದುಕ್ಕೆ ತಾವು ಕಥೇನ ಮು೦ದುವರ್ಸಬೇಕಾಗಿ ವಿನ೦ತಿ. :-)

ಆಯ್ತು ಕಾಮತರೆ, ನಿಮ್ಮ ಒತ್ತಾಯದ ಮೇರೆಗೆ ಮತ್ತೊ೦ದು ಸರಣಿ, ಹೊಟ್ಟೆ ಹುಣ್ಣಾಗಿಸುವ೦ತೆ ನಗಿಸುವ ಸರಣಿ, ಆರ೦ಭಿಸುವೆ, ಎಲ್ಲರ ಸಹಕಾರವಿರಲಿ! :-)

ಮಂಜಣ್ಣ ನಿಮ್ಮ ಶೈಲಿ ಚೆನ್ನಾಗಿದೆ. ನಾನು ಬರೆಯುವುದಂತೂ ಇದ್ದದ್ದೇ. ನೀವೇ ಮುಂದುವರೆಸಿ. ನಿಜಕ್ಕೂ ನಿಮ್ಮ ಹಾಸ್ಯ ಪ್ರಜ್ಞೆ ಚೆನ್ನಾಗಿದೆ. ಕೋಮಲ್

ಕೋಮಲ್, ಈ ಗೌಡಪ್ಪನ ಕಥೆ ನಿಮ್ಮ ಕೂಸು, ಖ್ಹೋಕ್ ಕೊಟ್ಟರಲ್ಲಾ೦ತ ನಾನು ಒ೦ದು ಸಿ೦ಪಲ್ಲಾಗಿ ಬರೆದೆ ಅಷ್ಟೆ, ಅದಕ್ಕೆಲ್ಲ ಬೇಜಾರು ಬೇಡ, ಮು೦ದಿನ ಕ೦ತು, ಹೊರನಾಡಿನ ಭಾಗ ಬ೦ದ ನ೦ತರ, ದಯವಿಟ್ಟು ನಿಮ್ಮದೇ ಎ೦ದಿನ ಶೈಲಿಯಲ್ಲಿ ಮು೦ದುವರೆಸಿ.

ಮಂಜಣ್ಣ ನಾನು ಹಾಸ್ಯ ಪ್ರಿಯ. ಹಾಸ್ಯವನ್ನು ಯಾರೇ ಬರೆದರು ನನಗೆ ಖುಷಿನೇ. ನೀವು ಹೇಳಿದ್ದೀರಾ ಎಂದು ಬರೆದಿದ್ದೇನೆ. ಖಂಡಿತಾ ಮಂಜಣ್ಣ ನಿಮ್ಮ ಹಾಸ್ಯ ಬರವಣಿಗೆ ಚೆನ್ನಾಗಿದೆ ಮುಂದುವರೆಸಿ. ಕೋಮಲ್ ಅಲ್ಲಾ ಕಲಾ ಸುರೇಶ್ ಹೆಗ್ಡೆ, ಗೋಪಿನಾಥ ರಾವ್, ಗಣೇಶ್ ಅಂಗೇ ದುಬೈ ಮಂಜಣ್ಣ ನಮ್ಮ ಹಳ್ಳಿಗೆ ಬಂದಿರೋದು ಯಕಾಲಾ ಅಂದ ಗೌಡಪ್ಪ. ಏ ನಾಟಕ ಹೇಳ್ಕೊಡಕ್ಕಂತೆ ಅಂದ ಸುಬ್ಬ. ಯಾವ ನಾಟಕಲಾ ಅಂದ ನಿಂಗ. "ಸರ್ಕಾರಿ ಭೂಮಿ ಹೊಡೆಯೋದು ಹೆಂಗೆ" ಅಂದ ಸುಬ್ಬ. ಇದಕ್ಕೆ ಇವರೇ ಬೇಕೇನಲಾ. ಇದನ್ನ ಕಟ್ಟಾ ಮಗ ಜಗ್ಗ, ಯಡೂರಪ್ಪನ ಮಗ ರಾಘವೇಂದ್ರನ ಕರೆಸಿದರೆ ಇನ್ನೂ ಚೆನ್ನಾಗಿ ಹೇಳಿಕೊಡ್ತಾರೆ. ಸುಮ್ಕೆ ತಮಾಷೆ ಮಾಡ್್ಬೇಡ್ರಲಾ ಯಾವ ನಾಟಕ ಹೇಳ್ರಲಾ ಅಂದ ಗೌಡಪ್ಪ. "ಕಂಸ ವಧೆ", ಕಂಸ ಯಾರಲಾ. ನೀವೆಯಾ. ಮತ್ತೆ ಕಿಸ್ನ. ನಾನು ಅಂದ ಸುಬ್ಬ. ಮಗ ಸುಬ್ಬನ ಕೈಯಲ್ಲಿ ಸಿಕ್ಕರೆ ಸಾನೇ ಒದೆ ತಿನ್ ಬೇಕಾಯ್ತದೆ ಅಂದು. ನೋಡ್ರಲಾ ಕಿಸ್ನನ ಪಾತ್ರ ನಮ್ಮ ಕಟ್ಟಿಗೆ ಒಡೆಯೋ ಕಿಸ್ನ ಮಾಡಲಿ ಅಂದ. ಸರಿ ಪಾತ್ರಕ್ಕೆ ಸುಬ್ಬಿ, ನಿಂಗ, ಗೌಡಪ್ಪನ ಮೂರನೇ ಹೆಂಡರು ಎಲ್ಲರಿಗೂ ಹೇಳಿದ್ದಾತು. ಸರಿ ಇವರು ಎಲ್ರಲಾ ಅಂದ ಗೌಡಪ್ಪ. ಸುರೇಶ್ ಹೆಗ್ಡೆಯವರು ಯಾವುದೋ ಮರದ ಕೆಳಗೆ ಕೂತುಕೊಂಡು ಪೆನ್ನ ಪೇಪರ್ನಾಗೆ ಏನೋ ಗೀಚುತಾ ಇದ್ರು. ಏನಲಾ ಈ ವಯ್ಯ ಮಾಡ್ತಿರೋದು. ಏ ಕವನ ಬರೀತಾವ್ರೆ. ಅಂಗಾದ್ರೆ ನಾಟಕದ ಸಂಗೀತ ಮೇಟರು ಅನ್ನು. ಹೂಂ ಒಂತರಾ ಅಂಗೇಯಾ. ಮತ್ತೆ ಗೋಪಿನಾಥರಾವ್ ಎಲ್ಲಲಾ. ಹೋಯ್ ನಾನು ಇಲ್ಲೇ ಇದ್ದೀನಿ ಮಾರಾಯ್ರೆ. ಎಂತ ಮಂಡೆ ಬಿಸಿ ಮಾಡೋದು. ಹೇ ಕೋಮಲ್ ಇವನು ಯಾರು ಮಾರಯಾ. ಮಾರೀ ಜಾತ್ರೆಯಲ್ಲಿ ಕೋಣ ಕಡಿಯುವನಂತೆ ಇರುವನಲ್ಲಾ ಅಂದ್ರು. ರಾಯರೆ ಅಂಗೆ ಅನ್ಬೇಡ್ರಿ ಇವನೇ ಗೌಡಪ್ಪ ಅಂದೆ. ಯಾರು ವಾಸನೆ ಗೌಡಪ್ಪನಾ. ಜೋರಾಗಿ ಹೇಳ್ ಬೇಡ್ರೀ ಬಡ್ಡೆ ಐದ ಬಂದು ತಬ್ಬಿಕೊಂಡು ಬಿಡ್ತಾನೆ. ಆಮ್ಯಾಕೆ ನೀವು ಊರಿಗೋದ್ರು ವಾಸನೆ ಹೋಗಕ್ಕಿಲ್ಲ ಅಂದ್ ಮ್ಯಾಕೆ ರಾಯರು ಹೊಯ್ ನಮಗೆ ಯಾಕೆ ಬೇಕು ಮಾರಯಾ. ನಮ್ಮ ಮನೇಲಿ ಬಹಳಷ್ಟು ಸೆಂಟು ಉಂಟು ಅಂದ್ರು. ಮನೆಗೆ ಹೋದ್ರೆ ಗೌಡಪ್ಪನ ಮನೆ ಅನ್ನೋದು ರಣ ರಂಗ ಆಗಿತ್ತು. ಗೌಡಪ್ಪನ ಹೆಂಡರು ಮನೆಯಲ್ಲಿ ಇರೋ ಹಸು ಒಂದನ್ನು ಬಿಟ್ಟು ಮಿಕ್ಕಿದ್ದೆಲ್ಲಾ ಇಸ್ಮಾಯಿಲ್ ಕರೆಸಿ ಬಿಸ್ಮಿಲ್ಲಾ ಮಾಡಿಸಿದ್ಲು. ಕೊಟ್ಟಿಗ್ಯಾಗೆ ಕುರಿ ಕಟ್ಟಿದು ಹಗ್ಗ ಮಾತ್ರ ಇತ್ತು. ಹುಂಜದ ಕಾಲಿಗೆ ಕಟ್ಟಿದ್ದು ದಾರ ಮಾತ್ರ ಇತ್ತು. ಯಾಕಮ್ಮೀ ಅಂದ ಗೌಡಪ್ಪ. ದುಬೈ ಮಂಜಣ್ಣಂಗೆ ಅಂತಾ ಖೀಮಾ, ಬೋಟಿ, ಕಲ್ಮಿ ಕಬಾಬ್ ಅಂಗೇ ಸಾನೇ ಅಡುಗೆ ಮಾಡಿದೀನಿ ಅಂದ್ಲು. ಲೇ ಮಿಕ್ಕವರು ಬ್ರಾಹ್ಮಣರು ಕಣೇ. ಅವರಿಗೆ ಅಂತಾ ತಂತಿ ಪಕಡು ಸೀತು ಮನ್ಯಾಗೆ ತಿಳಿ ಸಾರು ಸೊಸೈಟಿ ಅಕ್ಕಿ ಅನ್ನ ಅಂಗೆ ಒಂದಿಷ್ಟು ನೀರು ಮಜ್ಜಿಗೆ ಉಪ್ಪಿನ ಕಾಯಿ ಮಾಡಿಸೀವ್ನಿ ಅಂದ್ಲು. ಎಲ್ಲಲಾ ಮಂಜಣ್ಣ ಅಂದ್ರೆ ಗೌಡಪ್ಪನ ಕೊಟ್ಟಿಗೆ ಮೂಲ್ಯಾಗೆ ಸಾವಿತ್ರಿ ಧಾರವಾಹಿ ನೋಡಿ ನಮ್ಮನ್ನು ಉಳಿಸಿ ಅಂತಿತ್ತು. ಏನಲಾ ಹಿಂಗಂದ್ರೆ. ಮಂಜಣ್ಣನ ಮಗಳು ಗೌತಮಿ ಧಾರವಾಹಿ ಪಾಲ್ಟು ಮಾಡ್ತದ್ದಲ್ಲಾ ಅದನ್ನು ನೋಡಿ ಅಂತಾವ್ರೆ. ಲೇ ಆ ಟೇಮಿಗೆ ಕರೆಂಟ್ ಇರಲ್ವಲ್ಲೋ ಇನ್ನೇನ್ಲಾ ಧಾರವಾಹಿ ನೋಡೋದು ಅಂದ ಗೌಡಪ್ಪ. ಅಯ್ಯೋ ಕೂಗಬೇಡ್ರಿ. ಆಗಲೇ ಮಂಜಣ್ಣ ಫುಲ್ ಬಾಟಲ್ ಪೋಚ್ಕಂಡವ್ರೆ. ಇವಾಗ ಏನಾದ್ರೂ ನಿಮ್ಮ ಮಾತು ಕೇಳಿದ್ರೆ. ಆಟೆಯಾ ಒಂದು ಗುನ್ನ, ಹೊಟ್ಟೆಗೆ ಒಂದು ಪಂಚ್, ಮುಖಕ್ಕೆ ಒಂದು ಡಿಚ್ಚಿ ಅಂದೆ. ಬೇಡ ಬುಡಲಾ ಊಟಕ್ಕೆ ಕರೆಯಲಾ ಅಂದೆ. ಕುಡಿದಿರೋದು ಸಾನೇ ಆಗೈತೆ. ನಿಮ್ಮ ಹೆಂಡರಿಗೆ ಮಾಡಿದ್ದನ್ನು ಫ್ರಜ್್ನಾಗೆ ಮಡಗಕ್ಕೆ ಹೇಳಿ. ಬೆಳಗ್ಗೆ ಎದ್ದು ಹಾಳು ಬಾಯ್ನಾಗೆ ತಿಂತದೆ ಅಂದೆ. ಹಲ್ಲು ಉಜ್ಜಕ್ಕೆ ಇಲ್ವೇನಲಾ. ಏ ಹಲ್ಲು ಉಜ್ಜಿ ತಿಂದ್ರೆ ಮಟನ್ ಟೇಸ್ಟ್ ಹೋಯ್ತದೆ. ಏನೋಪ್ಪಾ ಇದ್ರೂ ಇರಬೈದು ಅಂದ ಗೌಡಪ್ಪ. ಲೇ ಗಣೇಶ ಎಲ್ಲಲಾ, ಹೆಣ್ಣು ಐಕ್ಳು ಜೊತೆ ಹಲ್ಟೆ ಹೊಡಿತಾ ಇದ್ರು. ಏನ್ರೀ ಗೌಡ್ರೆ ಅಂದೋರೆ ಜೇಬಿಂದ ೊಂದು ನಾಕು ಚೇಳು ತೆಗೆದ್ರು. ಅಂಗೇ ಈ ಕಡೆ ಜೇಬಿಂದ ೊಂದು 4 ಬಳ್ಳಿ ತೆಗೆದ್ರು. ಗೌಡಪ್ಪ ಅದ್ರಾಗೆ ಅಮೃತ ಬಳ್ಳಿನಾ ಮನೆ ಹಿಂದೆ ಹಾಕಿದಾನೆ. ಮಗಂಗೆ ಸುಗರ್ ಇರೋದು ಇಡೀ ರಾಜ್ಯಕ್ಕೆ ಗೊತ್ತಾಗೈತೆ ಅಂದಾ ಸುಬ್ಬ. ಸರೀ ಪಿಯುಸಿ ಐಕ್ಳು ಬಂದು ಗಣೇಶಣ್ಣನ್ನ ಸಾಲೆಗೆ ಕರೆದುಕೊಂಡು ಹೋದ್ವು. ಯಾಕ್ರವ್ವಾ. ಬಯಾಲಜಿ ಪಾಠ ಹೇಳಿಸ್ಕೊಳ್ಳೋಕೆ. ಹುಸಾರಪ್ಪ ಹಳ್ಳಿ ಹೆಣ್ಣು ಐಕ್ಳು. ಬರೀ ಥಿಯರಿ ಮಾತ್ರ ಹೇಳಿಕೊಡು ಅಂದಾ ಗೌಡಪ್ಪ. ಸರಿ ಸುಸ್ತಾಗಿತ್ತು, ಮಂಜಣ್ಣಂಗೆ ಡಿಸ್ಟರ್ಬ್ ಮಾಡೋದು ಬೇಡ ಅಂತಾ ಬಿಟ್ವಿ. ಕೊಟ್ಟಿಗ್ಯಾಗೆ ಮಲಗಿದ್ರು. ಬೆಳಗ್ಗೆ ಎದ್ರೆ ಮುಖದಾಗೆ ರಕ್ತ ಬರ್ತಾ ಇತ್ತು. ಯಾಕೆ ಮಂಜಣ್ಣ ರಕ್ತ. ಅಯ್ಯೋ ನಿನ್ ಮುಖಕ್ಕೆ ಚಾ ಚಲ್ಟಾ ಹುಯ್ಯಾ. ಪಕ್ಕದಾಗೆ ಹಸಾ ಯರಲಾ ತಂದು ಕಟ್ಟಿದ್ದು ಅಂತು. ಕಿಸ್ನ ಅಂಗೇ ಹಿಂದಿಂದ ಓಡಿ ಹೋಗಿದ್ದ. ಇನ್ನು ಮೂರು ಜನಕ್ಕೆ ಸೀತು ಮನ್ಯಾಗೆ ಊಟ. ಊಟಕ್ಕಿಂತ ಮುಂಚೆ ತಟ್ಟೆ ಸುತ್ತಲೂ ನೀರು ಹಾಕಿ ಊಟ ಮಾಡಿ ಎದ್ದು ಕೈಯನ್ನ ನೆಲಕ್ಕೆ ಒತ್ತಿ ಅನ್ನದಾತ ಸುಖೀಭವ ಅಂದ್ರು. ನೋಡಲಾ ಇವರಿಗೆ ಖರ್ಚು ಮಾಡಿರೋದು ಕೇವಲ ನೂರು ರೂಪಾಯಿ ಸೀತುಗೆ ಸುಖೀಭವ ಅಂದ್ರು. ಅದೇ ಮಂಜಣ್ಣಂಗೆ ಇಡೀ ಕೊಟ್ಟಿಗೇನೆ ಕಡಿದು ಹಾಕಿದ್ರು. ಬಡ್ಡೆ ಐದ ಅಂಗೇ ತಿಂದು ಮಲಗ್ವರೆ ನೋಡಲಾ ಅಂತಿದ್ದಾಗೆನೇ ದಬು ದಬು ಅಂತಾ ಹಿಂದಿಂದ ಬಿತ್ತು. ನೋಡ್ತೀವಿ ಮಂಜಣ್ಣ. ಮತ್ತೊಂದು ಫುಲ್ ಬಾಟಲ್ ಬ್ಲಾಕ್ ಲೇಬಲ್. ಲೇ ಇದು ನಮ್ಮ ಹಳ್ಯಾಗೆ ಎಲ್ಲಲಾ ಸಿಕ್ತು ಅಂದಾ ಗೌಡಪ್ಪ. ಸುಬ್ಬ ನಾ ತಂದುಕೊಟ್ಟಿದ್ದು ಅಂದ. ಬಂದ ನಾಕು ಜನಾ ಒಂದು ಮೂರು ದಿನಾ ಇದ್ದು ಮಜಾ ಮಾಡಿಕೊಂಡು ಹೋದ್ರು ಬಿಟ್ರೆ. ಯಾವುದೇ ನಾಟಕನೂ ಸರಿ ಹೇಳಿ ಕೊಡಲಿಲ್ಲ. ಅದಕ್ಕೆ ಈಗ ನಾವೇ ಒಂದು ನಾಟಕ ಮಾಡ್ತಾ ಇದೀವಿ. " ಅಪ್ಪ ಕಳ್ಳ ಮಗ ಮಳ್ಳ" ಇಲ್ಲಾಂದ್ರೆ "ಯಾರದೋ ದುಡ್ಡು ಗೌಡಪ್ಪನ ಜಾತ್ರೆ" ಅದೂ ಇಲ್ಲಾಂದ್ರೆ " ಡಿ ನೋಟಿಫಿಕೇಸನ್ ಮಾಡೋದು ಹೆಂಗೆ" ಅಂತಾ

ವಾರೆವ್ಹಾ! ಕೋಮಲ್ಲೂ.......... ನಿಮ್ಮೂರ್ನಾಗೂ ನ೦ಗೆ ಫುಲ್ ಬಾಟ್ಲು ಬ್ಲ್ಯಾಕ್ಲೇಬಲ್ ಕುಡ್ಸಿ ಗೌಡಪ್ಪನ್ ಕೊಟ್ಟಿಗೇಲಿ ಮಲಗಿಸ್ ಬಿಟ್ಯಾಪ್ಪಾ!! ಸಿಕ್ಕು ನನ್ ಕೈಗೆ, ನಿ೦ಗೈತೆ ಮಾರಿ ಹಬ್ಬ!!! :-) :-)

ಪರಸ್ಪರ ಕೊಂಡಿಗಳ ಮುಖಾಂತರ ನಿಮ್ಮಗಳ ರಿಲೇಯಲ್ಲಿ ನಾನೂ ಓಡಿ(ದಿ)ದೆ. ಒಂದು ಚೆಂದದ ನಾಟಕ ನೋಡಿದ ಅನಭೂತಿ ಉಂಟಾಯಿತು. ಎಲ್ಲೂ ಬಿಗಿ ಕಳೆದುಕೊಳ್ಳದ, ಮುಖದ ಗಂಟು ಸಡಿಲಿಸುವಂತಹ ಈ ಬರೆಹ ನೋಡಿ, "ನಾನು ಇನ್ನೇನಿದ್ದರೂ ಹಿಂದಿನಂತೆ ಬ್ಲಾಗ್‌‌ಸ್ಪಾಟಲ್ಲೇ ಬರೆದು ಬಿದ್ದಿರುವುದು" ಎಂಬುದಾಗಿ ಕೈಗೊಂಡಿರುವ ನಿರ್ಧಾರ ಮುರಿದು ಈ ಕಮೆಂಟ್ ಬರೀತಾ ಇದ್ದೇನೆ. ಯಾಕೆಂದರೆ, ಇಷ್ಟು ಸುಂದರವಾದ ಖೊಕ್‌ಗೆ ಒಂದು ಮೆಚ್ಚುಗೆ ಸೂಚಿಸದಿದ್ದರೆ, ಅದು ಬರೆಹಕ್ಕೆ ಅನ್ಯಾಯ ಎಸಗಿದಂತೆ. ಇದು ಗಣೇಶ ಹಾಗೂ ಗೋಪಿನಾಥ ರಾವ್ ಅವರಿಗೂ ಸಲ್ಲುತ್ತದೆ.

ತು೦ಬಾ ಸ೦ತೋಸ ಕನ್ರೀ ಸಾನಿ, ನೀವೂ ಓದ್ಬುಟ್ರಲ್ಲಾ೦ತ ಒಸಿ ಎಚ್ಗೆ ಕುಸಿ ಆತು! ಎಲ್ಲಾ ಓಕೆ, ಆದ್ರೆ.......<<"ನಾನು ಇನ್ನೇನಿದ್ದರೂ ಹಿಂದಿನಂತೆ ಬ್ಲಾಗ್‌‌ಸ್ಪಾಟಲ್ಲೇ ಬರೆದು ಬಿದ್ದಿರುವುದು">>ಇದು ಯಾಕೆ????? :-)

ಬಾಲಕ ಪ್ರಸನ್ನ ಮುಕ್ತವಾಗಿ, ಮುಗ್ಧವಾಗಿ ಬರೆದ ಬರೆಹಕ್ಕೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ್ಸಿ ಆತನನ್ನು ಕಂಗೆಡ್ಸಿ ಬಿಟ್ರು. ಅದ್ರಿಂದ ಒಸಿ ಕಸಿವಿಸಿ ಆಯ್ತು.