ಮಂಜಣ್ಣ ಕಾಸು ಕೊಟ್ಟಿಲ್ಲ

To prevent automated spam submissions leave this field empty.

ಅರೆ ಕ್ಯಾರೇ ನಮ್ದೂಕೆ ಎಲ್ಲಾ ಊರಿಗೆ ಸುತ್ತಿಸ್ಬಿಟಿ. ಮಂಜಣ್ಣ ಇಲ್ಲಾ ಅದೇ ದುಬೈ ಮಂಜಣ್ಣ, ಪೈಸಾಗೆ ದಿಯಾ ನಯಿರೇ. ಕೇಳಬೇಕಾಗಿತ್ತು ಇಸ್ಮಾಯಿಲ್ ಅಂದ ಸುಬ್ಬ. ಆ ವಯ್ಯ ಬೆಳಗ್ಗೆ ಒಂತರಾ ಇರ್ತದೆ. ಆತ್ರಿ 8 ಆದ್ ಮ್ಯಾಕೆ ಮಾತಾಡಸಕ್ಕೆ ಆಗಕ್ಕಿಲ್ಲಾ ಕಲಾ. ಫುಲ್ ಹುಯ್ಯಕೊಂಡು ಅವರದೂಗೆ ಅಕ್ಕ, ದೋಸ್ತ್ ಇಂದು ಕಥೆಗೆ ಹೇಳ್ತಾರೆ. ಇಲ್ಲಾ ಅಂದ್ರೆ ಸಾವಿತ್ರಿ ಧಾರವಾಹಿಯದು 3 ಎಪಿಸೋಡು ಸ್ಟೋರಿಗೆ ಹೇಳ್ತಾರೆ. ಅದಕ್ಕೆ ನಮ್ಮನೇ ಟಿವಿ ತೆಗೆದು ಇಟ್ಟಿದೀನಿ. ಕ್ಯೂಂ ಮಾಲೂಂ. ಮಂಜಣ್ಣ ಕತೆಗೆ ಹೇಳಿದ ಮ್ಯಾಕೆ ಟಿವಿ ಯಾಕೆ ಬೇಕು.  ಸಯಿ ಬೊಲಾ. ಮಂಜಣ್ಣಕೋ ಪೈಸೆ ಪೂಚಾತು ನಾಳೆಗೆ ಇಸ್ಕೊ ಅಂತಾರೆ. ಏ ಕ್ಯಾ ಭೀ. ಇನ್ ಮ್ಯಾಕೆ ನಾನು ಡಿಸೈಡ್ ಮಾಡ್ಬಿಟ್ಟೆ ಪೈಸಾ ದಿಯಾ ತೋ ನಾನು ಹೋಗ್ತೀನಿ ಇಲ್ಲಾಂದ್ರೆ ಹೋಗಕ್ಕಿಲ್ಲಾ ಅಂತ. ನಮ್ಮ ಮನೇಲಿ ಚಿಕನ್ ಗೆ ಎಲ್ಲಾಗೆ ರೆಡಿ ಮಾಡಿಕೊಂಡು ಖಾರಾಗೆ ಕಾಯ್ತಾ ಇದಾರೆ. ನಮ್ದೂಕೆ ಬೇಗಂ ಸಬಾನಾ ಅರೆ ಸುವರ್ ಖಾರಾಗೆ ಎಲ್ಲಲೇ ಅಂತಾರೆ.  ಸುರೇಶ್ ಹೆಗ್ಡೆಗೆ ಕೇಳಬೇಕಾಗಿತ್ತು ಅಂದ ಸುಬ್ಬ. ಉನಕೊ ಭೀ ಪೂಚಾರೆ. ನಾನು ನಿನಗೆ ಬರಕ್ಕೆ ಹೇಳಿದ್ನಾ. ಅಂದು ಒಂದು 10ಪೇಜ್ ಕವನ, ಅಂಗೇ ಒಂದು ನಾಕು ದ.ರಾ.ಬೇಂದ್ರೆ, ಬಸವಣ್ಣ ಪುಸ್ತಕ ಕೊಟ್ಟರು ಭಯ್ಯಾ. ಅದ್ರಾಗೆ ಸಾನೇ ನಮಗೆ ಉಗಿದಿದ್ರು. 

ಗೋಪಿನಾಥರಾವ್್ಗೆ ಕೇಳಬೇಕಿತ್ತು. ಉನೇ ಕ್ಯಾ ಬೋಲಾ ಹೊಯ್ ನಾವೆಲ್ಲಿ ಹೇಳಿದ್ದೆವು ಮಾರಾಯಾ. ಇದೆಲ್ಲಾ ಮಾಡಿದ್ದು ದುಬೈ ಮಂಜಣ್ಣ. ಅವರನ್ನ ಕೇಳಿ. ನನ್ನ ಬಾಬ್ತನ್ನು ನೀಡಿದ್ದೇನೆ. ಗೊತ್ತುಂಟಲ್ಲೋ. ಜಾಸ್ತಿಗೆ ಕೇಳಿದ್ರೆ ಆ ವಯ್ಯ ಗನ್ ತೆಗಿತಾರೆ ಕಲಾ. ಅವರ ಹೆಂಡರು ಬಲೆಟ್ ಷೋ ಕೇಸ್್ಲ್ಲಿ ಇದೇ ನೋಡ್ರೀ ಅಂತಾರೆ ಕಲಾ ಅಂದ ಇಸ್ಮಾಯಿಲ್. ಲೇ ನಿನ್ನ ಟೇಂ ಸರಿಯಿಲ್ಲ ಕಲಾ. ನೀನು ಗೌಡಪ್ಪಂಗೆ ಸಾನ ಮಾಡಿಸಿದಾರಲ್ಲಾ ಶಾನಿಗೆ ಕೇಳ್ಬೇಕಿತ್ತು. ಹೂ ಕಲಾ ಅವರಿಗೂ ಕೇಳಿದೆ. ಇದೇ ಬ್ಯೂಟಿ ಪಾರ್ಲನ್ನಾಗೆ ಮಾಡಿದ್ರೆ 100ರೂಪಾಯಿ ಆಗ್ತಿತ್ತು. ನಾನು ಪುಕ್ಸಟ್ಟೆ ಮಾಡಿದೀನಿ ಅಂಗೇ ಅಂಟು ರೋಗಗಳನ್ನ ನಿಮ್ಮ ಹಳ್ಳಿಗೆ ಬರೋದು ತಪ್ಪಿಸಿದೀನಿ ಕಲಾ ಅಂದ್ರು. ಮತ್ತೆ ನಾವಡರು, ಏ ಅವರ ಹತ್ರ ನಮ್ದೂಕೆ ಬೇಟ ರಹೀಮ್್ಗೆ ಕಳ್ಸಿದ್ದೆ. ಒಂದು ಪ್ಯಾಕೆಟ್ ಕಲ್ಲು ಸಕ್ಕರೆ, ದ್ರಾಕ್ಷಿ, ಉತ್ತುತ್ತೆ ಕೊಟ್ಟು ಅನ್ನಪೂರ್ಣೇಶ್ವರಿ ದೇವಸ್ಥಾನದ ಪ್ರಸಾದ ಒಳ್ಳೇದು ಆಯ್ತದೆ ಅಂತಾ ಆ ವಯ್ಯ ಎರಡು ರೂಪಾಯಿನಾಗೆ ಕೈ ತೊಳ್ಕಂಡ್ರು. ನೋಡಲಾ ಎಲ್ಲಿ ಡಾಕಟರಿಗೆ ಕಾಸು ಕೊಡಬೇಕಾಯ್ತದೆ ಅಂತಾ ಅವರೇ ಹಲ್ಲು ಕಿತ್ತುಕೊಂಡಿದ್ದಾರೆ. ಇನ್ನು ನಮಗೆಲ್ಲಿ ಕಾಸು ಕೊಡ್ತಾರಲಾ ಅಂದ.

ಸರಿ ಭಾಸ್ಕರ್ ಇಲ್ಲಾ ಮಹೇಶ್್ಗೆ ಕೇಳಬೇಕಾಗಿತ್ತು. ಹೂ ಭಯ್ಯಾ ಅವರಿಗೂ ಪೈಸಾ ದೇ ಭಯ್ಯಾ ಅಂದ್ರೆ. ಒಂದು ನಾಕು ಲಿಂಕ್ ಕೊಟ್ಟು ಇಲ್ಲಿ ಹೋಗಿ ಸಿಗ್ತದೆ. ಅಂದ್ರು. ಇನ್ನು ಗಣೇಶಣ್ಣನ ಕೇಳವಾ ಅಂದ್ರೆ ಆ ವಯ್ಯ ಬಯಾಲಜಿ ಹೇಳಿ ತಲೇ ತಿಂತಾರೆ. ಅದಕ್ಕೆ ಕಾಸು ಇಲ್ಲದೆ ಪರೆದಾಡ್ತಾ ಇದೀನಿ ಅಂದ ಇಸ್ಮಾಯಿಲ್. ಅಟ್ಟೊತ್ತಿಗೆ ಅವನ ಮೂರನೇ ಹೆಂಡರು ರಹಮುನ್ನೀಸಾ ಅರೆ ಖಾರಾ ಎಲ್ಲಲೇ ಅಂತು. ಬಂದೇ ತಡೆಯವಾ ಅಂತಾ ಹೊಂಟ. ಹಿಂದೆ ಸುಬ್ಬನೂ ಹೊಂಟ.

ಎದುರುಗಡೆ ಕವಿ ನಾಗರಾಜರು ಬಂದ್ರು. ಸಾರ್ ನನ್ನ ಮೂರು ದಿನದ ಬ್ಯಾಟಾ ಅಂದ ಇಸ್ಮಾಯಿಲ್. ನೋಡಪ್ಪಾ. ನನ್ನ ತುರ್ತು ಪರಿಸ್ಥಿತಿ ಕೇಸಗಳಿಗೆ ನನ್ನ ಮನೆ ತೋಟ ಮಾರ್ಕಂಡಿದ್ದೀನಿ. ನನ್ನ ಹತ್ತಿರ ಬೇಕಾದ್ರೆ 2ರೂಪಾಯಿ ಐತೆ ಅಂದ್ರು. ಅದನ್ನೇ ಕೊಡಿ ಸಾ. ಮೆಣಸಿನ ಕಾಯಿ ಮಿಲ್್ಗೆ ಹಾಕ್ಸಕ್ಕೆ ಆಯ್ತದೆ ಅಂತ ಇಸ್ಕಂಡ. ಏ ಥೂ. ದೂರದಾಗೆ ಒಬ್ಬ ಹುಡುಗ ಬತ್ತಾ ಇದ್ದ. ನೋಡಿದ್ರೆ ಪ್ರಸನ್ನ. ನೋಡಲಾ ನೀನಾದ್ರೂ ಕಾಸು ವ್ಯವಸ್ಥೆ ಮಾಡಲಾ. ಏಯ್ ನಾನು ಇನ್ನೂ ಓದ್ತಾ ಇದೀನಿ. ನನಗೆ 60 ಬೇಕೂ ಅಂದ್ರೆ ನಮ್ಮ ಅಪ್ಪನ ಹೆಸರಲ್ಲಿ ಕುಡಿದು ಬರ್ತೀನಿ ಅಂದ್ರು ಪ್ರಸನ್ನ. ಏನಪ್ಪಾ 60. ಬ್ಲಾಕ್ ಕಾಫಿ.ಬರೇ ಡಿಕಾಕ್ಸನ್.

ನೋಡಲಾ ಗಂಡಸರಿಗೆ ಕೇಳಿದ್ರೆ ಏನೂ ಆಗಕ್ಕಿಲ್ಲಾ. ಮಾಲತಿ ಕೇಳುವಾ ನಡೆಯಲಾ. ಅಯ್ಯಯ್ಯೋ ಇಸ್ಮಾಯಿಲ್ ನಿನ್ನೆ ಬರಬಾರದಿತ್ತೇನಪ್ಪಾ. ಯಾಕವ್ವಾ, ಶಿವಮೊಗ್ಗದಿಂದ ಸಂಬಂಧಿಕರು ಬಂದಿದ್ರು. ಅವರಿಗೆ ಅಂತಾ ಎಲ್ಲಾ ಖರ್ಚು ಮಾಡಿಬಿಟ್ಟೆ ಕಣ್ಣಪ್ಪಾ ಅಂತು ಕಲಾ. ಸರಿ ಅಶ್ವಿನಿ ಹತ್ರ ಹೋದ್ರೆ. ಪ್ರೇಮ ಪಿರುತಿ ಬಗ್ಗೆ ಪಾಠ ಮಾಡಿದ್ರೇ ಹೊರೆತು ಪೈಸಾ ದಿಯಾ ನಯೀ. ಇನ್ನು ವಾಣಿ ಹತ್ರ ಹೋದ್ರೆ ಮೀಸೆ ಅಂಗಿರಬೇಕು ಹಿಂಗಿರಬೇಕು ಅಂದ್ರು. ಕಮಲಾ, ರೂಪ ತಾವ ಹೋದರೆ ನಾವು ಟೂರಿಗೆ ಬಂದಿಲ್ಲಾ ಕೊಡಲ್ಲಾ ಹೋಗ್ತೀಯೋ ಇಲ್ಲಾ ಜಾನಿ ಬಿಡಲೋ ಅಂದ್ರು. ಜಾನಿ ಯಾರವ್ವಾ, ನಮ್ಮನೇ ನಾಯಿ.

ಸರಿ ಜಯಂತ್, ಡಾ.ಮಂಜುನಾಥ್, ಶ್ರೀ,ಶ್ರೀನಾಥ್ ಭಲ್ಲೆ ಯಾರು ಕಾಸು ಕೊಡಲಿಲ್ಲಾ ಅಂದ. ಶ್ರಿಕಾಂತ್ ಕೇಳಿದ್ರೆ ಚೀನಾ ರೂಪಾಯಿ ಕಳಿಸ್ತೀನಿ ಅಂದ್ರು, ಸರಿ ಬೇಜಾರಿಂದ ಮನೆಗೆ ಹೋದ ಇಸ್ಮಾಯಿಲ್. ಸಂಜೆ ಮನೆತಾವ ಹೋದ್ರೆ ಕೋಳಿ ಮೂಳೆ ಎಲ್ಲಾ ಕಡೆ ಬಿದ್ದಿತ್ತು. ಲೇ ಯಾರು ಕಾಸು ಕೊಡ್ರಲ್ಲಾ ಅಂದ ಸುಬ್ಬ. ಲೇ ಲಾಸ್ಟಿಗೆ ಹರಿ ಪ್ರಸಾದ್ ನಾಡಿಗರಿಗೆ ಹೇಳಿದೆ. ನಮ್ಮ ಮರ್ವಾದೆ ತೆಗೆಯಕ್ಕೆ ಅಂತಾ ಸಂಪದ ಹೆಸರು ಹೇಳ್ಕಂಡು ಟೂರ್ ಹೋಗ್ತಾರೆ. ಕಾಸು ಮಾತ್ರ ಕೊಡಲ್ಲ. ಏ ಥೂ ಅಂದು 500ರೂಪಾಯಿ ಕೊಟ್ಟರು ಕಲಾ. ಆದ್ರೆ ಸುರೇಶ್ ನಾಡಿಗರಿಗೆ ಮಾತ್ರ ಹೇಳ್ಬೇಡಿ ಅಂದ್ರು. ಯಾಕ್ ಸಾ. ನಾಳೆ ಪೇಪರ್ನಾಗೆ ಸಂಪದದಿಂದ ಡ್ರೇವರ್್ಗೆ ವಂಚನೆ ಅಂತ ಹಾಕ್ತಾರೆ ಅಂದ್ರು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಹೀ ಭೀ. ತುಮ್ನೆ ಏಕ್ ಲಡಿಕಿ ಕೇ ಸಾಥ್ ಪೀಚೇ ಬೈಟಥೇನಾ, ನಮ್ದೂಕೆ ನೋಡೈತೆ. ತಕರಾರು ಮಾಡಿದ್ರೆ ಜಯಂತ್ ಹಗರಣ ಆಯ್ತದೆ. ಜಲ್ದಿ ಪೈಸೆ ದೇದೋ ಭಯ್ಯಾ. ಅಮ್ಮಾ ದೇಖ್ ಅಮ್ಮಾ ದೇಖ್.

ಪಸನ್ನ ಎಲ್ಲಾರೂ ಇಸ್ಮಾಯಿಲ್ ನ್ನ ಗೋಳು ಹುಯ್ಯಕಂತಾ ಇದಾರೆ. ಮಗಾ ಸಿಟ್ಟಿಗೆ ಯಾವ ಗುಂಡಿಗೆ ಹಾಕ್ತಾನೋ ಗೊತ್ತಿಲ್ಲ. ಯಾವುದಕ್ಕೂ ಉಸಾರಾಗಿರಿ.

ಗೋಪಾಲ್ ಧನ್ಯವಾದಗಳು. ನಿಮ್ಮ ಗೌಡಪ್ಪನ ಸರಣಿ ಕೂಡ ಹಾಸ್ಯ ಭರಿತವಾಗಿದೆ. ಹಾಗೇ ಈ ಕಥೆಯನ್ನು ನಿಮ್ಮ ಮಂಜನಿಗೂ ಹೇಳಿ. ಹಂಗೇ ಕಲಾ ಬಗ್ಗೆ ನಿಮ್ಮ ಹೆಂಡ್ತಿಗೆ ನೀವೇ ಹೇಳ್ತೀರೋ ಇಲ್ಲಾ ನಾನೇ ಹೇಳಲಾ. ಬೇಡ ಬುಡಿ. ಯಾಕೆ ಕಡ್ಡಿ ಗೀರೋದು. :)

ಕೋಮಲ್, ಇನ್ನೂ ನಮ್ಮ ಪ್ರವಾಸ ಮುಗಿದೇ ಇಲ್ಲ, ಬೆಳ್ಗೊಳದ ಬೆಟ್ಟ ಹತ್ತಲಿಲ್ಲ, ಗೊಮ್ಮಟನನ್ನು ನೋಡಲೂ ಇಲ್ಲ! ಕಾಸು ಎ೦ಗೆ ಕೊಡೋದು ಇಸ್ಮಾಯಿಲ್ಗೆ?? :-)

<ಆದ್ರೆ ಸುರೇಶ್ ನಾಡಿಗರಿಗೆ ಮಾತ್ರ ಹೇಳ್ಬೇಡಿ ಅಂದ್ರು. ಯಾಕ್ ಸಾ. ನಾಳೆ ಪೇಪರ್ನಾಗೆ ಸಂಪದದಿಂದ ಡ್ರೇವರ್್ಗೆ ವಂಚನೆ ಅಂತ ಹಾಕ್ತಾರೆ ಅಂದ್ರು.>..ನಿಜಕ್ಕು ಅಧ್ಬುತ ಕಣ್ರಿ ನಿಮ್ಮ ಬರಹ..ನಕ್ಕು ನಕ್ಕು ಸಾಕಾಯ್ತು..ಅಂತು ನಮಿಗೆಲ್ಲ ನಿಮ್ಮ ಹಳ್ಳಿಯವರನ್ನ ಭೇಟಿ ಮಾಡ್ಸಿದ್ರಿ....

>>>ಅಯ್ಯೋ! ಸ೦ಪದದ ತು೦ಬಾ "ಮ೦ಜಣ್ಣ ಕಾಸು ಕೊಟ್ಟಿಲ್ಲ", "ತಿಮ್ಮಪ್ಪ ಕಾಸು ಬಿಡ, ಮಂಜು ಮಾತು ಬಿಡ":) ಗಾದೆ ಇದೆಯಲ್ಲಾ. ಈಗ ತಾನೆ ಮಂಜು ದುಬೈ ಗರಿಗರಿ ನೋಟು ( ಖೋಟಾ?) ಇಸ್ಮಾಯಿಲ್‌ಗೆ ಕೊಟ್ಟದ್ದು ನೋಡಿ ಬಂದೆ. http://sampada.net/a... ಕೋಮಲ್, ಇಸ್ಮಾಯಿಲ್ ನನ್ನ ಬಳಿ ಬಂದು ಗೋಪೀನಾಥರ ಬಗ್ಗೆ ದೂರಿದ-" ಬಾಟಾ ಬೋಲೇ ತೊ.. ಬಂಧೂಕ ದಿಕಾಯೆ" ಅಂದನು. ಅದಕ್ಕೆ "ಬಂಧೂಕ ಅಲ್ಲ ಬಂದೂಕ. ಬಂಧೂಕ ಎಂದರೆ ಒಂದು ಹೂವು." ಎಂದು ನಿಮ್ಮ ತೋಟದಿಂದ ತಂದ ಬಂಧೂಕ ಹೂವಿನ ನೆನಪಾಗಿ ಕಿಸೆಗೆ ಕೈ ಹಾಕಿದೆ.(ಎಲ್ಲಾ ದೂರ ಓಡಿ ಹೀಗಿ ನಿಂತರು!?) ಕೊನೆಗೆ ಅಂಗಿಯ ಬಲ ಕಿಸೆಯಲ್ಲಿ ಬಂಧೂಕ ಹೂ ( http://www.flickr.co... ) ಸಿಕ್ಕಿತು. "ಇದರ ಬಾಟನಿಕಲ್ ಹೆಸರು-........................................"ಎಂದೆಲ್ಲಾ ಹೇಳಿ ಮುಗಿಸಿ ಸುತ್ತಲೂ ನೋಡಿದಾಗ ಯಾರೂ ಇರಲಿಲ್ಲ ಸಿವಾಯ್ ಕೆಲ ಹುಳುಹುಪ್ಪಟೆಗಳು. ಅವನ್ನೆಲ್ಲ ಪುನಃ ಕಿಸೆಗೆ ಹಾಕಿಕೊಂಡು, ನಾವಡರನ್ನು ಹುಡುಕಿಕೊಂಡು ಹೊರಟೆ.. -ಗಣೇಶ. ಕೋಮಲ್, "ಮಂಜಣ್ಣ ಕಾಸು ಕೊಟ್ಟಿಲ್ಲ" ಸೂಪರ್.