KFCC ನಿಯಮಗಳನ್ನು ಗಾಳಿಗೆ ತೂರಿ ಬಿಡುಗಡೆಯಾದ ಎಂಧಿರನ್

To prevent automated spam submissions leave this field empty.

ಎಂದಿರನ್ ಬಗ್ಗೆ ಮೈ ಮೇಲೆ ದೆವ್ವ ಬಂದವರಂತೆ ಪ್ರಚಾರ ಕೊಟ್ಟ ಕನ್ನಡ ಮಾಧ್ಯಮಗಳ ಬಗ್ಗೆ, ಅವುಗಳಿಂದಾಗಿ ಕನ್ನಡ ನೆಲದಲ್ಲೇ ಕನ್ನಡ ಚಿತ್ರೋದ್ಯಮ ಬಡವಾಗುತ್ತಿರುವ ಬಗ್ಗೆ ಈ ಹಿಂದಿನ ಲೇಖನದಲ್ಲಿ (link) ಬರೆದಿದ್ದೆ.  
ಈಗ ಇವರೆಲ್ಲರ ಈ ಹುಚ್ಚುತನಕ್ಕೆ ತನ್ನದು ಒಂದಿಷ್ಟು ಕೊಡುಗೆ ಇರಲಿ ಅನ್ನುವಂತೆ ಅಮೇರಿಕದಲ್ಲಿ ಕನ್ನಡದ ತೇರು ಎಳೆಯುತ್ತ, ಇಡೀ ಕರ್ನಾಟಕದ, ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿದ್ದ ’ಅಕ್ಕ’ ಕೂಡ ತನ್ನ ಸ್ಥಾಪನೆಯ ಧ್ಯೇಯೋದ್ದೇಶಗಳನ್ನೇ ಮರೆತು ಅಮೇರಿಕದಲ್ಲಿ "ಎಂದಿರನ್" ನೋಡಿ ಪ್ರೋತ್ಸಾಹಿಸಿ ಅನ್ನುವ ಮಿಂಚೆಯನ್ನು ಅಕ್ಕದ ಅಧಿಕೃತ ಈಮೇಲ್ ವಿಳಾಸದಿಂದ ಅಕ್ಕದ ಸಾವಿರಾರು ಸದಸ್ಯರಿಗೆ ಕಳಿಸಿರುವ ಆಘಾತಕಾರಿ ಸುದ್ದಿ ಹೊರ ಬಂದಿದೆ.
ಕನ್ನಡ ಚಿತ್ರಗಳ ಬಗ್ಗೆ "ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು" ಎಂಬಂತೆ ವಿಮರ್ಷೆ ಬರೆಯುವ ಕನ್ನಡ ಮಾಧ್ಯಮಗಳು, ಎಂದಿರನ್ ಬಗ್ಗೆ ಅತಿರೇಕದ ಪ್ರಚಾರ ಕೊಟ್ಟಿದ್ದು ಒಂದೆಡೆಯಾದರೆ, ಅಮೇರಿಕದಲ್ಲಿ ಹರಡಿಕೊಂಡಿರುವ ಕನ್ನಡಿಗರಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಇತಿಹಾಸ, ಪರಂಪರೆ, ಭಾಷೆ, ಸಂಸ್ಕೃತಿಯ ಅರಿವು ಬೆಳೆಸುವುದು, ನಮ್ಮತನದ ಉಳಿವು, ಬೆಳೆವಿಗಾಗಿ ಕೆಲಸ ಮಾಡುವುದೇ ತಮ್ಮ ಧ್ಯೇಯೋದ್ದೇಶ ಅನ್ನುವ ಮಾತನ್ನು ತನ್ನ ಸಂವಿಧಾನದಲ್ಲೇ ಬರೆದುಕೊಂಡಿರುವ ಅಕ್ಕ ತಮ್ಮ ಯಾವುದೇ ಒಬ್ಬ ಅಜೀವನ ಪರ್ಯಂತ ದೇಣಿಗೆ ಕೊಡುವವರ ಮಾತಿಗೆ ಕಟ್ಟು ಬಿದ್ದು ಇಂತಹ ಕನ್ನಡ ವಿರೋಧಿ ಕೆಲಸ ಮಾಡಿದೆ.
ಯಾರೋ ದೇಣಿಗೆ ಕೊಡುವವರು ಹೇಳಿದ್ರೂ ಅಂತ ಇವತ್ತು ತಮಿಳು ಚಿತ್ರ ನೋಡಿ ಅನ್ನುವವರು, ನಾಳೆ ದಿನ ಇನ್ಯಾರೋ ದೇಣಿಗೆ ಕೊಡುವವರು ತೆಲುಗು, ಹಿಂದಿ, ಮಲಯಾಳಿ ಚಿತ್ರ ತೋರಿಸಿ ಅಂದರೆ ಹೀಗೆ ಮಾಡದೇ ಇರುತ್ತಾರೆಯೇ? ಅಥವಾ ಇನ್ಯಾರೋ ಬಂದು ದೇಣಿಗೆ ಕೊಡ್ತಿನಿ ಇನ್ ಮೇಲೆ ಅಕ್ಕ ಕಾರ್ಯಕ್ರಮದಲ್ಲಿ ಹಿಂದಿ ಹಾಡಿಗೆ ಡ್ಯಾನ್ಸ್ ಮಾಡಿ ಅಂದರೆ ಮಾಡುತ್ತಾರೆಯೇ? ದೇಣಿಗೆ ಕೊಡುವ ಯಾರೋ ಒಬ್ಬರ ವೈಯಕ್ತಿಕ ಸ್ವಾರ್ಥಕ್ಕೆ ಕನ್ನಡದ ಹೆಸರಲ್ಲಿ ಕರ್ನಾಟಕ ಸರ್ಕಾರದಿಂದಲೂ ಹಣ ಪಡೆಯುವ ’ಅಕ್ಕ’ ಈ ರೀತಿ ಕನ್ನಡದ ಬುಡಕ್ಕೆ ಕೊಳ್ಳಿ ಇಡುವ ಕೆಲಸ ಮಾಡಿದ್ದು ಸರಿಯೇ?
ಅಮೇರಿಕದಲ್ಲಿ ಎರಡರಿಂದ ಮೂರು ಲಕ್ಷ ಕನ್ನಡಿಗರಿದ್ದು, ಸರಿಯಾಗಿ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಬೆಳೆಸುವ ಪ್ರಯತ್ನ ಮಾಡಿದರೆ ನಿಜಕ್ಕೂ ಕನ್ನಡ ಚಿತ್ರೋದ್ಯಮಕ್ಕೆ ಕರ್ನಾಟಕದಾಚೆ ಅತ್ಯಂತ ದೊಡ್ಡ ಮಾರುಕಟ್ಟೆಯಾಗುವ ಎಲ್ಲ ಅವಕಾಶವಿದೆ. ಸುಮ್ಮನೆ ಲೆಕ್ಕ ಹಾಕಿ, 2 ಲಕ್ಷ ಕನ್ನಡಿಗರು ವರ್ಷಕ್ಕೆ 4 ಕನ್ನಡ ಚಿತ್ರಗಳನ್ನು ಬರೀ 10 ಡಾಲರ್ ಕೊಟ್ಟು ನೋಡುವ ಹಾಗೇ ಮಾಡಿದರೆ, ಅದೊಂದೇ ಹೆಜ್ಜೆಯಲ್ಲಿ (2,00,000 X 4 X 10 = 80,00,000 X 50rs) 40 ಕೋಟಿಯಷ್ಟು ದೊಡ್ಡ ಮಾರುಕಟ್ಟೆಯನ್ನು ಅಲ್ಲಿ ಕಟ್ಟಿಕೊಳ್ಳಬಹುದು. ಇದೆಲ್ಲ ಎಲ್ಲಿ ಆಗುತ್ತೆ, ಇದೆಲ್ಲ ಕಷ್ಟ ಅಂತೆಲ್ಲ ಹೇಳಬಹುದು. ಆದರೆ ಯಾವ ಬದಲಾವಣೆಯೂ ತಾನೇ ತಾನಾಗಿ ಆಗುವುದಿಲ್ಲ. ಶ್ರಮ, ಹಣ ಎಲ್ಲವನ್ನೂ ಹಾಕಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರೆ ಇದು ಖಂಡಿತ ಸಾಧ್ಯವಾಗುವ ಮಾತು. "ಅಕ್ಕ" ಇಂತಹದೊಂದು ಕನ್ನಡ-ಕರ್ನಾಟಕದ ಹಿತಕ್ಕೆ ಪೂರಕವಾದ ದೂರದೃಷ್ಟಿಯ ಕೆಲಸದ ಕಡೆ ಗಮನ ಹರಿಸುವುದನ್ನು ಬಿಟ್ಟು "ರಜನಿ, ಐಶ್ವರ್ಯ ಎಲ್ಲ ನಮ್ಮವರು, ಅದಕ್ಕೆ ಎಂದಿರನ್ ನೋಡಿ" ಅನ್ನುವಂತಹ ಚೀಪ್ ಕೆಲಸಕ್ಕೆ ಕೈ ಹಾಕಿದ್ದನ್ನು ಕನ್ನಡಿಗರೆಲ್ಲರೂ ಖಂಡಿಸಬೇಕು. 
ಇನ್ನು ಇದೇ ಸಮಯದಲ್ಲಿ ಎಂದಿರನ್ ನ ಕರ್ನಾಟಕ ವಿತರಣಾ ಹಕ್ಕು ಪಡೆದವರು ವಾಣಿಜ್ಯ ಮಂಡಳಿಯ ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿರುವ ಸುದ್ದಿಯೂ ಅಲ್ಲಲ್ಲಿದೆ (please put that chitraloka link). ಹೊರದೇಶದಲ್ಲಿ, ಇಲ್ಲಿ ಹೀಗೆ ಎಲ್ಲೆಡೆ ಕನ್ನಡ ಭಾಷೆಯ ಮೇಲೆ ಮನರಂಜನೆಯ ರೂಪದಲ್ಲಿ ನಡೆಯುತ್ತಿರುವ ಈ ಭಾಷಿಕ ದಾಳಿಗೆ ಪರಿಹಾರವೆಂದರೆ ಡಬ್ಬಿಂಗ್ ಮೇಲಿನ ನಿಷೇಧ ಹಿಂಪಡೆಯುವುದು. ಯಾವ ಭಾಷೆಯ ಎಂತಹುದೇ ಚಿತ್ರವಿರಲಿ ಅದು ಕರ್ನಾಟಕದಲ್ಲಿ ಕನ್ನಡದಲ್ಲೇ ನೋಡಬೇಕು ಅನ್ನುವ ಸ್ಥಿತಿ ನಿರ್ಮಾಣವಾದರೆ ನಿಧಾನವಾಗಿಯಾದರೂ ಸರಿ ಕರ್ನಾಟಕದಲ್ಲಿ ಕನ್ನಡಿಗರ ಮನರಂಜನೆಯ ಮೊದಲ ಆಯ್ಕೆಯ ಭಾಷೆಯಾಗಿ ಕನ್ನಡ ಉಳಿಯುತ್ತೆ. ಇವತ್ತು ಕರ್ನಾಟಕದ ಚಿಕ್ಕ ಚಿಕ್ಕ ಊರುಗಳನ್ನು ಹಿಂದಿ, ತೆಲುಗು, ತಮಿಳು ಚಿತ್ರಗಳು ಆಕ್ರಮಿಸಿಕೊಳ್ಳುತ್ತಿವೆ. ಚಲನಚಿತ್ರದಂತಹ ಅತ್ಯಂತ ಪ್ರಭಾವಿ ಮಾಧ್ಯಮದ ಮೂಲಕ ಕನ್ನಡಿಗರ ಮನದಿಂದ ಕನ್ನಡವನ್ನು ಮರೆಯಾಗಿಸುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಇವೆಲ್ಲವುದರ ಪ್ರಭಾವವನ್ನು ಈಗಾಗಲೇ ಕಿರುತೆರೆಯ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಬಹುದು. ಕನ್ನಡ ಚಾನೆಲ್ ಗಳಲ್ಲಿ ಹಿಂದಿ ಹಾಡು, ಡ್ಯಾನ್ಸ್ ಮಾಡಿಸುವುದು, ತೆಲುಗು ಹಾಡು ಹಾಕುವುದು ಮುಂತಾದ ಮೂರ್ಖತನ ಈಗಾಗಲೇ ಕಾಣಿಸುತ್ತಿದೆ. ಕನ್ನಡಿಗರ ಮನರಂಜನೆಯ ಮೊದಲ ಆಯ್ಕೆಯ ಭಾಷೆಯಾಗಿ ಕನ್ನಡ ಉಳಿಯದೇ ಹೋದರೆ ಇನ್ನೊಂದು ಪೀಳಿಗೆಯ ಅವಧಿಯಲ್ಲಿ ಕನ್ನಡದ ಸ್ಥಿತಿ ಹೀನಾಯವಾಗುವುದರಲ್ಲಿ ನನಗಾವ ಅನುಮಾನವೂ ಇಲ್ಲ. ಅಂತಹ ದುರ್ದಿನಗಳು ಬರುವ ಮೊದಲು ಡಬ್ಬಿಂಗ್ ಮೇಲಿನ ಪರದೆ ಸರಿಯಲಿ.

ಎಂದಿರನ್ ಬಗ್ಗೆ ಮೈ ಮೇಲೆ ದೆವ್ವ ಬಂದವರಂತೆ ಪ್ರಚಾರ ಕೊಟ್ಟ ಕನ್ನಡ ಮಾಧ್ಯಮಗಳ ಬಗ್ಗೆ, ಅವುಗಳಿಂದಾಗಿ ಕನ್ನಡ ನೆಲದಲ್ಲೇ ಕನ್ನಡ ಚಿತ್ರೋದ್ಯಮ ಬಡವಾಗುತ್ತಿರುವ ಬಗ್ಗೆ ಈ ಹಿಂದಿನ ಲೇಖನದಲ್ಲಿ (http://sampada.net/article/28294) ಬರೆದಿದ್ದೆ.  
ಈಗ ಇವರೆಲ್ಲರ ಈ ಹುಚ್ಚುತನಕ್ಕೆ ತನ್ನದು ಒಂದಿಷ್ಟು ಕೊಡುಗೆ ಇರಲಿ ಅನ್ನುವಂತೆ ಅಮೇರಿಕದಲ್ಲಿ ಕನ್ನಡದ ತೇರು ಎಳೆಯುತ್ತ, ಇಡೀ ಕರ್ನಾಟಕದ, ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿದ್ದ ’ಅಕ್ಕ’ ಕೂಡ ತನ್ನ ಸ್ಥಾಪನೆಯ ಧ್ಯೇಯೋದ್ದೇಶಗಳನ್ನೇ ಮರೆತು ಅಮೇರಿಕದಲ್ಲಿ "ಎಂದಿರನ್" ನೋಡಿ ಪ್ರೋತ್ಸಾಹಿಸಿ ಅನ್ನುವ ಮಿಂಚೆಯನ್ನು ಅಕ್ಕದ ಅಧಿಕೃತ ಈಮೇಲ್ ವಿಳಾಸದಿಂದ ಅಕ್ಕದ ಸಾವಿರಾರು ಸದಸ್ಯರಿಗೆ ಕಳಿಸಿರುವ ಆಘಾತಕಾರಿ ಸುದ್ದಿ ಹೊರ ಬಂದಿದೆ.
ಕನ್ನಡ ಚಿತ್ರಗಳ ಬಗ್ಗೆ "ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು" ಎಂಬಂತೆ ವಿಮರ್ಷೆ ಬರೆಯುವ ಕನ್ನಡ ಮಾಧ್ಯಮಗಳು, ಎಂದಿರನ್ ಬಗ್ಗೆ ಅತಿರೇಕದ ಪ್ರಚಾರ ಕೊಟ್ಟಿದ್ದು ಒಂದೆಡೆಯಾದರೆ, ಅಮೇರಿಕದಲ್ಲಿ ಹರಡಿಕೊಂಡಿರುವ ಕನ್ನಡಿಗರಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಇತಿಹಾಸ, ಪರಂಪರೆ, ಭಾಷೆ, ಸಂಸ್ಕೃತಿಯ ಅರಿವು ಬೆಳೆಸುವುದು, ನಮ್ಮತನದ ಉಳಿವು, ಬೆಳೆವಿಗಾಗಿ ಕೆಲಸ ಮಾಡುವುದೇ ತಮ್ಮ ಧ್ಯೇಯೋದ್ದೇಶ ಅನ್ನುವ ಮಾತನ್ನು ತನ್ನ ಸಂವಿಧಾನದಲ್ಲೇ ಬರೆದುಕೊಂಡಿರುವ ಅಕ್ಕ ತಮ್ಮ ಯಾವುದೇ ಒಬ್ಬ ಅಜೀವನ ಪರ್ಯಂತ ದೇಣಿಗೆ ಕೊಡುವವರ ಮಾತಿಗೆ ಕಟ್ಟು ಬಿದ್ದು ಇಂತಹ ಕನ್ನಡ ವಿರೋಧಿ ಕೆಲಸ ಮಾಡಿದೆ.
ಯಾರೋ ದೇಣಿಗೆ ಕೊಡುವವರು ಹೇಳಿದ್ರೂ ಅಂತ ಇವತ್ತು ತಮಿಳು ಚಿತ್ರ ನೋಡಿ ಅನ್ನುವವರು, ನಾಳೆ ದಿನ ಇನ್ಯಾರೋ ದೇಣಿಗೆ ಕೊಡುವವರು ತೆಲುಗು, ಹಿಂದಿ, ಮಲಯಾಳಿ ಚಿತ್ರ ತೋರಿಸಿ ಅಂದರೆ ಹೀಗೆ ಮಾಡದೇ ಇರುತ್ತಾರೆಯೇ? ಅಥವಾ ಇನ್ಯಾರೋ ಬಂದು ದೇಣಿಗೆ ಕೊಡ್ತಿನಿ ಇನ್ ಮೇಲೆ ಅಕ್ಕ ಕಾರ್ಯಕ್ರಮದಲ್ಲಿ ಹಿಂದಿ ಹಾಡಿಗೆ ಡ್ಯಾನ್ಸ್ ಮಾಡಿ ಅಂದರೆ ಮಾಡುತ್ತಾರೆಯೇ? ದೇಣಿಗೆ ಕೊಡುವ ಯಾರೋ ಒಬ್ಬರ ವೈಯಕ್ತಿಕ ಸ್ವಾರ್ಥಕ್ಕೆ ಕನ್ನಡದ ಹೆಸರಲ್ಲಿ ಕರ್ನಾಟಕ ಸರ್ಕಾರದಿಂದಲೂ ಹಣ ಪಡೆಯುವ ’ಅಕ್ಕ’ ಈ ರೀತಿ ಕನ್ನಡದ ಬುಡಕ್ಕೆ ಕೊಳ್ಳಿ ಇಡುವ ಕೆಲಸ ಮಾಡಿದ್ದು ಸರಿಯೇ?
ಅಮೇರಿಕದಲ್ಲಿ ಎರಡರಿಂದ ಮೂರು ಲಕ್ಷ ಕನ್ನಡಿಗರಿದ್ದು, ಸರಿಯಾಗಿ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಬೆಳೆಸುವ ಪ್ರಯತ್ನ ಮಾಡಿದರೆ ನಿಜಕ್ಕೂ ಕನ್ನಡ ಚಿತ್ರೋದ್ಯಮಕ್ಕೆ ಕರ್ನಾಟಕದಾಚೆ ಅತ್ಯಂತ ದೊಡ್ಡ ಮಾರುಕಟ್ಟೆಯಾಗುವ ಎಲ್ಲ ಅವಕಾಶವಿದೆ. ಸುಮ್ಮನೆ ಲೆಕ್ಕ ಹಾಕಿ, 2 ಲಕ್ಷ ಕನ್ನಡಿಗರು ವರ್ಷಕ್ಕೆ 4 ಕನ್ನಡ ಚಿತ್ರಗಳನ್ನು ಬರೀ 10 ಡಾಲರ್ ಕೊಟ್ಟು ನೋಡುವ ಹಾಗೇ ಮಾಡಿದರೆ, ಅದೊಂದೇ ಹೆಜ್ಜೆಯಲ್ಲಿ (2,00,000 X 4 X 10 = 80,00,000 X 50rs) 40 ಕೋಟಿಯಷ್ಟು ದೊಡ್ಡ ಮಾರುಕಟ್ಟೆಯನ್ನು ಅಲ್ಲಿ ಕಟ್ಟಿಕೊಳ್ಳಬಹುದು. ಇದೆಲ್ಲ ಎಲ್ಲಿ ಆಗುತ್ತೆ, ಇದೆಲ್ಲ ಕಷ್ಟ ಅಂತೆಲ್ಲ ಹೇಳಬಹುದು. ಆದರೆ ಯಾವ ಬದಲಾವಣೆಯೂ ತಾನೇ ತಾನಾಗಿ ಆಗುವುದಿಲ್ಲ. ಶ್ರಮ, ಹಣ ಎಲ್ಲವನ್ನೂ ಹಾಕಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರೆ ಇದು ಖಂಡಿತ ಸಾಧ್ಯವಾಗುವ ಮಾತು. "ಅಕ್ಕ" ಇಂತಹದೊಂದು ಕನ್ನಡ-ಕರ್ನಾಟಕದ ಹಿತಕ್ಕೆ ಪೂರಕವಾದ ದೂರದೃಷ್ಟಿಯ ಕೆಲಸದ ಕಡೆ ಗಮನ ಹರಿಸುವುದನ್ನು ಬಿಟ್ಟು "ರಜನಿ, ಐಶ್ವರ್ಯ ಎಲ್ಲ ನಮ್ಮವರು, ಅದಕ್ಕೆ ಎಂದಿರನ್ ನೋಡಿ" ಅನ್ನುವಂತಹ ಚೀಪ್ ಕೆಲಸಕ್ಕೆ ಕೈ ಹಾಕಿದ್ದನ್ನು ಕನ್ನಡಿಗರೆಲ್ಲರೂ ಖಂಡಿಸಬೇಕು. 
ಇನ್ನು ಇದೇ ಸಮಯದಲ್ಲಿ ಎಂದಿರನ್ ನ ಕರ್ನಾಟಕ ವಿತರಣಾ ಹಕ್ಕು ಪಡೆದವರು ವಾಣಿಜ್ಯ ಮಂಡಳಿಯ ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿರುವ ಸುದ್ದಿಯೂ ಅಲ್ಲಲ್ಲಿದೆ (http://ic-technews.com/entertainment/1627-endhiran-to-dominate-more-than-60-screens-in-karnataka). ಹೊರದೇಶದಲ್ಲಿ, ಇಲ್ಲಿ ಹೀಗೆ ಎಲ್ಲೆಡೆ ಕನ್ನಡ ಭಾಷೆಯ ಮೇಲೆ ಮನರಂಜನೆಯ ರೂಪದಲ್ಲಿ ನಡೆಯುತ್ತಿರುವ ಈ ಭಾಷಿಕ ದಾಳಿಗೆ ಪರಿಹಾರವೆಂದರೆ ಡಬ್ಬಿಂಗ್ ಮೇಲಿನ ನಿಷೇಧ ಹಿಂಪಡೆಯುವುದು. ಯಾವ ಭಾಷೆಯ ಎಂತಹುದೇ ಚಿತ್ರವಿರಲಿ ಅದು ಕರ್ನಾಟಕದಲ್ಲಿ ಕನ್ನಡದಲ್ಲೇ ನೋಡಬೇಕು ಅನ್ನುವ ಸ್ಥಿತಿ ನಿರ್ಮಾಣವಾದರೆ ನಿಧಾನವಾಗಿಯಾದರೂ ಸರಿ ಕರ್ನಾಟಕದಲ್ಲಿ ಕನ್ನಡಿಗರ ಮನರಂಜನೆಯ ಮೊದಲ ಆಯ್ಕೆಯ ಭಾಷೆಯಾಗಿ ಕನ್ನಡ ಉಳಿಯುತ್ತೆ. ಇವತ್ತು ಕರ್ನಾಟಕದ ಚಿಕ್ಕ ಚಿಕ್ಕ ಊರುಗಳನ್ನು ಹಿಂದಿ, ತೆಲುಗು, ತಮಿಳು ಚಿತ್ರಗಳು ಆಕ್ರಮಿಸಿಕೊಳ್ಳುತ್ತಿವೆ. ಚಲನಚಿತ್ರದಂತಹ ಅತ್ಯಂತ ಪ್ರಭಾವಿ ಮಾಧ್ಯಮದ ಮೂಲಕ ಕನ್ನಡಿಗರ ಮನದಿಂದ ಕನ್ನಡವನ್ನು ಮರೆಯಾಗಿಸುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಇವೆಲ್ಲವುದರ ಪ್ರಭಾವವನ್ನು ಈಗಾಗಲೇ ಕಿರುತೆರೆಯ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಬಹುದು. ಕನ್ನಡ ಚಾನೆಲ್ ಗಳಲ್ಲಿ ಹಿಂದಿ ಹಾಡು, ಡ್ಯಾನ್ಸ್ ಮಾಡಿಸುವುದು, ತೆಲುಗು ಹಾಡು ಹಾಕುವುದು ಮುಂತಾದ ಮೂರ್ಖತನ ಈಗಾಗಲೇ ಕಾಣಿಸುತ್ತಿದೆ. ಕನ್ನಡಿಗರ ಮನರಂಜನೆಯ ಮೊದಲ ಆಯ್ಕೆಯ ಭಾಷೆಯಾಗಿ ಕನ್ನಡ ಉಳಿಯದೇ ಹೋದರೆ ಇನ್ನೊಂದು ಪೀಳಿಗೆಯ ಅವಧಿಯಲ್ಲಿ ಕನ್ನಡದ ಸ್ಥಿತಿ ಹೀನಾಯವಾಗುವುದರಲ್ಲಿ ನನಗಾವ ಅನುಮಾನವೂ ಇಲ್ಲ. ಅಂತಹ ದುರ್ದಿನಗಳು ಬರುವ ಮೊದಲು ಡಬ್ಬಿಂಗ್ ಮೇಲಿನ ಪರದೆ ಸರಿಯಲಿ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಮ್ಮ ಕಾಳಜಿ ಒಪ್ಪತಕ್ಕದ್ದೇ. ಆದರೂ ಐಶ್ವರ್ಯ ನಮ್ಮವಳಲ್ಲದಿದ್ರೂ, ರಜನಿ ನಮ್ಮವನೇ ಅಲ್ಲವೇ? ನಾವೇ ಸರಿ ಇಲ್ಲದಿದ್ದಾಗ, ಇನ್ನೊಬ್ಬರು ನಮ್ಮ ಮನೆಯನ್ನು ಲೂಟಿ ಮಾಡಿದರೆನ್ನುವುದು ತಪ್ಪು. ಕನ್ನಡವನ್ನು ಬೆಳೆಸುವ ಭಾವನೆಯನ್ನು ಮೊದಲು ನಾವು ಬೆಳೆಸಿಕೊಳ್ಳಬೇಕು.ಆನ೦ತರ ಬೇರೆಯವರ ಬಗ್ಗೆ. ಅಲ್ಲವೇ? ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

ನಾವಡ ಅವರೇ, ನಿಮ್ಮ ಪ್ರತಿಕ್ರಿಯೆ ನನಗೆ ಅರ್ಥವಾಗಲಿಲ್ಲ. "ಕನ್ನಡವನ್ನು ಉಳಿಸಲು ಏನು ಮಾಡಬೇಕು" ಅಂತ ತಾನೇ ಈ ಬ್ಲಾಗು ಹೇಳುತ್ತಿರುವುದು. ನಮ್ಮಲ್ಲಿ ಡಬ್ಬಿಂಗ್ ಬಿಡದೇ ಇರುವುದರಿಂದಾ, ಈ ರೀತಿಯ ತೊಂದರೆಗಳು ಎದ್ದು ಬರುತ್ತಿವೆ. ಈ ತೊಂದರೆಗಳನ್ನು ನಿವಾರಿಸಲು, ಕನ್ನಡದಲ್ಲಿ ಡಬ್ಬಿಂಗ್ ಬಿಟ್ಟುಕೊಳ್ಳುವುದೊಳಿತು ಎಂದು ಈ ಬ್ಲಾಗು ಹೇಳುತ್ತಿದೆ. ಇದು ಬರಹಗಾರರ ಕನ್ನಡವನ್ನು ಬೆಳೆಸುವ ಭಾವನೆಯನ್ನೇ ತೋರಿಸುತ್ತದೆ ಅಲ್ಲವೇ? ದಯವಿಟ್ಟು ನಿಮ್ಮ ಪ್ರತಿಕ್ರಿಯೆ ವಿವರಿಸಿ ಹೇಳಿ. -- ಪ್ರಿಯಾಂಕ್

<<ಅಮೇರಿಕದಲ್ಲಿ ಕನ್ನಡದ ತೇರು ಎಳೆಯುತ್ತ, ಇಡೀ ಕರ್ನಾಟಕದ, ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿದ್ದ ’ಅಕ್ಕ’ ಕೂಡ ...> ಅಕ್ಕ...ಕನ್ನಡಿಗರ ಹೆಮ್ಮೆಯ ಸಂಸ್ಥೆ...? ಇದು ಶುದ್ಧ ಸುಳ್ಳು. ಅವರ ಮಕ್ಕಳ ಮೋಜಿಗಾಗಿ ಮತ್ತು ಮತ್ತವರ ಜ್ಞಾನಾಭಿವೃದ್ಧಿಗಾಗಿ ಈ ಸಮಾವೇಶಗಳನ್ನು, ಜಾತ್ರೆಗಳನ್ನು ಆಯೋಜಿಸುತ್ತಿದ್ದರೆಂದು, "ಅಕ್ಕ" ದ ಸದಸ್ಯೆಯೋರ್ವರು ಇತ್ತೆಚೆಗೆ ಸುವರ್ಣ ಸುದ್ದಿವಾಹಿನಿಯಲ್ಲಿ ಹೇಳಿದ ನೆನಪು ಇನ್ನೂ ಹಸಿರಾಗೇ ಇದೆ...

ನನ್ನ ಪ್ರತಿಕ್ರಿಯೆಯಲ್ಲಿ ಅರ್ಥ ಮಾಡಿಕೊಳ್ಳದೇ ಇರುವ೦ಥದ್ದು ಏನೂ ಇಲ್ಲ. ನಾವು ಅ೦ದರೆ ನೀವೊಬ್ಬರೇ ಅಲ್ಲ! ಇದರಲ್ಲಿ ನಾನೂ ಸೇರುತ್ತೇನೆ. ನಿಮ್ಮ ಬ್ಲಾಗ್ ಹೇಳಿದುದಕ್ಕೆ ನಾನು ಮೊದಲೇ ಹೇಳಿದ್ದೇನೆ_ “ ನಿಮ್ಮ ಮಾತು ಒಪ್ಪತಕ್ಕದ್ದೇ“ ಎ೦ದು ಅಲ್ಲವೇ? ಎ೦ದೀರನ್ ನಾನಿನ್ನೂ ನೋಡಿಲ್ಲ. ಆದರೆ ಒಳ್ಳೆಯದು ಯಾವ ಭಾಷೆಯಲ್ಲಿದ್ದರೇನು? ನೋಡೋಣ, ಅದರಲ್ಲಿನ ಸ೦ದೇಶವನ್ನು ತಿಳಿಯೋಣ ಎ೦ಬ ಮನಸ್ಥಿತಿಯವನು ನಾನು. ನನಗೆ ಸ೦ದೇಶ ಮುಖ್ಯವೇ ಹೊರತು ಭಾಷೆಯಲ್ಲ. ಇನ್ನು ನಮ್ಮ ಮಾತೃಭಾಷೆಯ ಏಳಿಗೆಗಾಗಿ ಸಕಾರಾತ್ಮಕ ಕಾರ್ಯಗಳಲ್ಲಿ ಪ್ರತಿಯೊಬ್ಬ ಕನ್ನಡಿಗನೂ ತೊಡಗಿಕೊಳ್ಳಬೇಕೆ೦ಬುದು ನನ್ನ ನಿಲುವು ಅಷ್ಟೇ. ಬೇರೇನಿಲ್ಲ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

ನಿಮ್ಮ ಪ್ರತಿಕ್ರಿಯೆ ವಿವರಿಸಿದ್ದಕ್ಕಾಗಿ ಧನ್ಯವಾದಗಳು. ಕನ್ನಡದಲ್ಲಿ ಡಬ್ಬಿಂಗ್‍ಗೆ ಅವಕಾಶ ಮಾಡಿಕೊಟ್ಟರೆ, ಒಳ್ಳೆಯದೆಲ್ಲಾ ಕನ್ನಡಿಗರಿಗೆ ಕನ್ನಡದಲ್ಲೇ ಸಿಗುವಂತಾಗುತ್ತದೆ. ಗೊತ್ತಿಲ್ಲದ ಭಾಷೆಯಲ್ಲಿ ನೋಡಿ, ಅರ್ಧಂಬರ್ಧ ಅರ್ಥವಾಗದೇ ಪರದಾಡುವುದಕ್ಕಿಂತ, ತಮ್ಮದೇ ಭಾಷೆಯಲ್ಲಿ ನೋಡಿ ಆನಂದಿಸುತ್ತಾರೆ. ಇದು ಕನ್ನಡದ ಏಳಿಗೆಗಾಗಿ ಮಾಡಬಹುದಾದ ಸಕಾರಾತ್ಮಕ ಕಾರ್ಯಗಳಲ್ಲಿ ಒಂದು. ಅಲ್ಲವೇ? ಬರಹಗಾರರು ಇಂತಹ ಒಂದು ಸಕಾರಾತ್ಮಕ ಕೆಲಸವಾಗಬೇಕು ಎಂದು ಹೇಳಿರುವಾಗ, ಅದಕ್ಕುತ್ತರವಾಗಿ "ನಾವೇ ಸರಿ ಇಲ್ಲದಿದ್ದಾಗ, ಇನ್ನೊಬ್ಬರು ನಮ್ಮ ಮನೆಯನ್ನು ಲೂಟಿ ಮಾಡಿದರೆನ್ನುವುದು ತಪ್ಪು. ಕನ್ನಡವನ್ನು ಬೆಳೆಸುವ ಭಾವನೆಯನ್ನು ಮೊದಲು ನಾವು ಬೆಳೆಸಿಕೊಳ್ಳಬೇಕು.ಆನ೦ತರ ಬೇರೆಯವರ ಬಗ್ಗೆ. ಅಲ್ಲವೇ?" ಎಂದು ನೀವು ಹೇಳಿದ್ದು ನನಗೆ ಅರ್ಥವಾಗಲಿಲ್ಲ. ಡಬ್ಬಿಂಗ್ ಬೇಕು ಎಂಬುದು ನಿಮ್ಮ ಮನಸ್ಸಿನಲ್ಲೂ ಇರುವ ಆಲೋಚನೆಯೇ?

<<<"ರಜನಿ, ಐಶ್ವರ್ಯ ಎಲ್ಲ ನಮ್ಮವರು, ಅದಕ್ಕೆ ಎಂದಿರನ್ ನೋಡಿ" ಅನ್ನುವಂತಹ ಚೀಪ್ ಕೆಲಸಕ್ಕೆ ಕೈ ಹಾಕಿದ್ದನ್ನು ಕನ್ನಡಿಗರೆಲ್ಲರೂ ಖಂಡಿಸಬೇಕು. >> ನಿನ್ನೆ (ಹಿಂದೆಯೂ) ಮೈಸೂರು ದಸರಾದಲ್ಲಿ ಸೋನು ನಿಗಮ್ ಅನ್ನುವ ದೆಹಲಿಯ ಗಾಯಕನಿಂದ ಕನ್ನಡ ಹಾಡುಗಳನ್ನು ಹಾಡಿಸಿ, ಆತನಿಗೆ ಕನ್ನಡಿಗರ ತೆರಿಗೆ ಹಣವನ್ನು ಕೊಡಮಾಡಿದ್ದು ಎಷ್ಟು ಸರಿ? ಅಲ್ಲಿ ಯಾಕೆ ಯಾವ ಕನ್ನಡ ಸಂಘಟನೆಗಳೂ ಪ್ರತಿಭಟಿಸುತ್ತಿಲ್ಲ? ಕನ್ನಡ ಚಿತ್ರರಂಗದಲ್ಲಿ ಪರಭಾಷಾ ಗಾಯಕಿಯರು, ಗಾಯಕರು ಹಾಗೂ ನಾಯಕಿಯರನ್ನು ಬಳಸುವುದು ಏಕೆ? ಅಲ್ಲಿ ಯಾಕೆ ಪ್ರತಿಭಟನೆಗಳಿಲ್ಲ? ಕನ್ನಡದ ಪ್ರತಿಭೆಗಳನ್ನು ನಿರ್ಲಕ್ಷಿಸಿ ಕೀಳಾಗಿ ಕಂಡರೆ ಯಾರೂ ಪ್ರತಿಭಟಿಸುವುದಿಲ್ಲ. ತನ್ನ ಮನರಂಜನೆಗೆ ಓರ್ವ ವ್ಯಕ್ತಿ ತನಗಿಷ್ಟವಾದ ಭಾಷೆಯ ಚಿತ್ರ ನೋಡಿದರೆ ಪ್ರತಿಭಟಿಸಬೇಕು ಅಲ್ವೇ? ಒಂಥರಾ ವಿಚಿತ್ರ ಅನಿಸುತ್ತೆ.

ಸುರೇಶ್, ಬರಹಗಾರರು ಹೇಳಿರುವುದು, ಒಳ್ಳೆಯದೆಲ್ಲವೂ ಕನ್ನಡಿಗರಿಗೆ ಕನ್ನಡದಲ್ಲೇ ಸಿಗುವಂತಾಗಬೇಕು ಎಂದು. ಡಬ್ಬಿಂಗ್ ಬೇಕು ಎನ್ನುವುದೂ ಇದೇ ಆಶಯದ ಮೇಲೆ ನಿಂತಿದೆ. ಕನ್ನಡಿಗರಿಗೆ ಡಿಸ್ಕವರಿ ಚಾನಲ್‍ನಲ್ಲಿ ಮೂಡಿ ಬರುವ ಒಳ್ಳೆಯ ಕಾರ್ಯಕ್ರಮಗಳಿಂದ ಹಿಡಿದು, ಒಳ್ಳೊಳ್ಳೆ ತಮಿಳು, ತೆಲುಗು ಹಿಂದಿ ಚಿತ್ರಗಳೂ ತಮ್ಮ ಭಾಷೆಯಲ್ಲೇ ಸಿಗುವಂತಾಗಬೇಕು. ಆಗ, ಹೆಚ್ಚಿನ ತೊಂದರೆಗಳು ನಿವಾರಣೆಯಾಗುತ್ತದೆ. ಕನ್ನಡ ಭಾಷೆಯನ್ನು ಅನ್ನ ಕೊಡುವ ಭಾಷೆಯನ್ನಾಗಿ ಮಾಡುವಲ್ಲಿ ಒಂದೊಳ್ಳೆ ಹೆಜ್ಜೆ ಕೂಡ ಆಗುತ್ತದೆ. ಕನ್ನಡದ ಪ್ರತಿಭೆಗಳನ್ನು ನಿರ್ಲಕ್ಷಿಸಿ ಕೀಳಾಗಿ ಕಂಡರೆ ಪ್ರತಿಭಟಿಸಬೇಕಾದ್ದೇ. ಬೆಂಗಳೂರು ಹಬ್ಬದಲ್ಲಿ ಪರಭಾಷಾ ಪ್ರತಿಭೆಗಳಿಗೆ ಮಣೆ ಹಾಕಿ ಕನ್ನಡದ ಪ್ರತಿಭೆಗಳನ್ನು ಕಡೆಗಣಿಸಿದ್ದನ್ನು ಸಂಪದದಲ್ಲಿ ಹಲವರು ಪ್ರತಿಭಟಿಸಿದ್ದು ನೀವು ಗಮನಿಸಿರಬಹುದು. ಮೈಸೂರು ದಸರಾದಲ್ಲಿ, ಕನ್ನಡ ಹಾಡುಗಳೇ ಕೇಳದಂತಾಗಿರುವುದರ ಬಗ್ಗೆ ಕೆಲವು ಪುಸ್ತಕಗಳಲ್ಲಿ ಮೂಡಿ ಬಂದಿದೆ - ನೀವು ಓದಿರಬಹುದು. "ತನ್ನ ಮನರಂಜನೆಗೆ ಓರ್ವ ವ್ಯಕ್ತಿ ತನಗಿಷ್ಟವಾದ ಭಾಷೆಯ ಚಿತ್ರ ನೋಡಿದರೆ ಪ್ರತಿಭಟಿಸಬೇಕು ಅಲ್ವೇ?" - ಈ ನಿಮ್ಮ ಮಾತುಗಳನ್ನು ನೋಡುತ್ತಾ ನನ್ನ ಅನಿಸಿಕೆ. ಇಲ್ಲಿ ’ಅಕ್ಕ’ ಎನ್ನುವ ಸಂಘಟನೆಯು ಕನ್ನಡಿಗರಿಗೆ ಪರಭಾಷಾ ಚಿತ್ರಗಳನ್ನು ನೋಡಿ ಎಂದು ಹೇಳುತ್ತಿರುವುದರ ಬಗ್ಗೆ ಆಕ್ಷೇಪಣೆ ಎತ್ತಲಾಗಿದೆ. "ಅಕ್ಕ" ಸಂಘಟನೆಯಷ್ಟೇ ಅಲ್ಲದೇ, ಕನ್ನಡ ದಿನಪತ್ರಿಕೆಗಳೂ ಪ್ರಚಾರದಲ್ಲಿ ಪಾಲ್ಗೊಂಡಿವೆ. ಇದರ ಬಗ್ಗೆ ಆಕ್ಷೇಪಣೆ ಎತ್ತಲಾಗಿದೆ. ಯಾವುದೇ ಒಬ್ಬ ವ್ಯಕ್ತಿ ತನಗಿಷ್ಟವಾದ ಚಿತ್ರ ನೋಡಿದ ಎಂದು ಪ್ರತಿಭಟಿಸಲಾಗುತ್ತಿಲ್ಲ. ಗುಂಪುಗಳ, ಪತ್ರಿಕೆಗಳ ಉದ್ದೇಶದ ಬಗ್ಗೆ ಪ್ರಶ್ನೆ ಎತ್ತಲಾಗಿದೆ. ವ್ಯತ್ಯಾಸ ನಿಮಗೆ ಕಾಣುವುದು ಎಂದುಕೊಂಡಿದ್ದೇನೆ. -- ಪ್ರಿಯಾಂಕ್

<<ಒಳ್ಳೆಯದೆಲ್ಲವೂ ಕನ್ನಡಿಗರಿಗೆ ಕನ್ನಡದಲ್ಲೇ ಸಿಗುವಂತಾಗಬೇಕು ಎಂದು.>> ನಾನು ಒಪ್ಪುತ್ತೇನೆ. ಆದರೆ, "ಎಂದಿರನ್" ಒಳ್ಳೆಯದು ಎಂದು ನೀವು ಒಪ್ಪಿಕೊಂಡಾಗಿದೆಯೇ? <<ಕನ್ನಡಿಗರಿಗೆ ಡಿಸ್ಕವರಿ ಚಾನಲ್‍ನಲ್ಲಿ ಮೂಡಿ ಬರುವ ಒಳ್ಳೆಯ ಕಾರ್ಯಕ್ರಮಗಳಿಂದ ಹಿಡಿದು...>, ಇದನ್ನು ಒಪ್ಪಬಹುದು. <<ಕನ್ನಡ ಭಾಷೆಯನ್ನು ಅನ್ನ ಕೊಡುವ ಭಾಷೆಯನ್ನಾಗಿ ಮಾಡುವಲ್ಲಿ ಒಂದೊಳ್ಳೆ ಹೆಜ್ಜೆ ಕೂಡ ಆಗುತ್ತದೆ.>> ಮೊದಲು ಇದನ್ನು ಸರಕಾರ ಮಾಡಬೇಕು. ಮುಖ್ಯಮಂತ್ರಿಯವರು ವಿಧಾನಸಭಾಪತಿಗಳವರಿಗೆ ಆಂಗ್ಲದಲ್ಲಿ ಪತ್ರ ಬರೆಯುಯುತ್ತಾರೆ. ವಿಧಾನಸಭಾಪತಿಯವರು ಶಾಸಕರಿಗೆ ಆಂಗ್ಲದಲ್ಲಿ ಪತ್ರಬರೆಯುತ್ತಾರೆ. ಇನ್ನು ಅನ್ನ ಕೊಡುವ ಕನ್ನಡವನ್ನು ಎಲ್ಲಿಹುಡುಕಬೇಕು? <<ಇಲ್ಲಿ ’ಅಕ್ಕ’ ಎನ್ನುವ ಸಂಘಟನೆಯು ಕನ್ನಡಿಗರಿಗೆ ಪರಭಾಷಾ ಚಿತ್ರಗಳನ್ನು ನೋಡಿ ಎಂದು ಹೇಳುತ್ತಿರುವುದರ ಬಗ್ಗೆ ಆಕ್ಷೇಪಣೆ ಎತ್ತಲಾಗಿದೆ. "ಅಕ್ಕ" ಸಂಘಟನೆಯಷ್ಟೇ ಅಲ್ಲದೇ, ಕನ್ನಡ ದಿನಪತ್ರಿಕೆಗಳೂ ಪ್ರಚಾರದಲ್ಲಿ ಪಾಲ್ಗೊಂಡಿವೆ. ಇದರ ಬಗ್ಗೆ ಆಕ್ಷೇಪಣೆ ಎತ್ತಲಾಗಿದೆ.>> ಆಕ್ಷೇಪಣೆ ಇಲ್ಲ. ಅಕ್ಕ ನನ್ನ ಪಾಲಿಗೆ ನಗಣ್ಯ. ನನ್ನದು ನಿರ್ಲಕ್ಷ್ಯ ಅಷ್ಟೇ. ಅದು ಅವರವರ ಸ್ವಾತಂತ್ರ್ಯಕ್ಕೆ ಬಿಟ್ಟದ್ದು. ಅವರ ಮಾತಿಗೆ ನಾನೇನೂ ಮಣೆಹಾಕುವವನಲ್ಲ. ಓರ್ವ ವಿದ್ಯಾವಂತ ಓದುಗ, ಈ ತರಹದ ಪ್ರಚಾರಕ್ಕೆ ಮಾರುಹೋಗುತ್ತಾನೆಂದೂ ನಾನು ಭಾವಿಸಲಾರೆ.

ಸುರೇಶ್ ಅವರೇ, ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ ನನ್ನಿ. ಎಂದಿರನ್ ಒಳ್ಳೆಯದು ಎಂದು ನಾನು ತೀರ್ಪು ಕೊಟ್ಟಿಲ್ಲ. ಅದು ಕನ್ನಡದಲ್ಲಿ ಬಂದಾಗ ಕನ್ನಡಿಗರೇ ತೀರ್ಮಾನಿಸುತ್ತಾರೆ. ನೀವು ಹೇಳಿದಂತೆ, ವಿಧಾನಸಭಾಪತಿಯವರು ಶಾಸಕರಿಗೆ ಇಂಗ್ಲಿಷ್‍ನಲ್ಲಿ ಪತ್ರ ಬರೆಯುತ್ತಾರೆಂದರೆ, ಆಡಳಿತದಲ್ಲಿ ಕನ್ನಡದ ಅನುಷ್ಟಾನ ಎಷ್ಟಾಗಿದೆ ಎಂಬುದನ್ನು ತೋರಿಸುತ್ತಿದೆ. ಆಡಳಿತದಲ್ಲಿ ಕನ್ನಡ ಅನುಷ್ಟಾನವಾಗುವುದು ಒಳಿತು. ಆದರೆ, ಇಲ್ಲಿ ಮೊದಲು ಎರಡನೆಯದು ಎಂದು ನಿರ್ಧರಿಸಲು ಕೂರುವುದು ಬೇಕಾಗಿಲ್ಲ ಎನ್ನುವುದು ನನ್ನ ಭಾವನೆ. ಎಲ್ಲಾ ಕಡೆಗಳಲ್ಲೂ ಕೆಲಸವಾಗಬೇಕು. ವಿದ್ಯಾವಂತ ಓದುಗನು ಪ್ರಚಾರಕ್ಕೆ ಮಾರುಹೋಗುತ್ತಾನೋ ಬಿಡುತ್ತಾನೋ ನಾವು ತೀರ್ಮಾನಿಸಲಾಗುವುದಿಲ್ಲ. ಮಾರುಹೋಗಬಹುದು, ಹೋಗದೆಯೂ ಇರಬಹುದು. ಇಲ್ಲಿ ಪ್ರಶ್ನೆ ಇರುವುದು, ಆ ಸಂಘಟನೆಗಳ ಮತ್ತು ಪತ್ರಿಕೆಗಳ ಉದ್ದೇಶದ ಬಗ್ಗೆ. ಅಲ್ಲವೇ?

ರಾಘವೇಂದ್ರ ಅವರೇ, "ಆದರೆ ಒಳ್ಳೆಯದು ಯಾವ ಭಾಷೆಯಲ್ಲಿದ್ದರೇನು? ನೋಡೋಣ, ಅದರಲ್ಲಿನ ಸ೦ದೇಶವನ್ನು ತಿಳಿಯೋಣ ಎ೦ಬ ಮನಸ್ಥಿತಿಯವನು ನಾನು" ಇದನ್ನೇ ನಾವು ಹೇಳುತ್ತಿರುವುದು :) ಒಳ್ಳೆಯದು ಏನೇ ಇದ್ದರು ಅದನ್ನು ಕನ್ನಡದಲ್ಲಿ ನೋಡೋಣ ಅಂತ. ಕನ್ನಡ ಮಕ್ಕಳು ಎಂಧಿರನ್ ಚಿತ್ರ ನೋಡಕ್ಕೋಸ್ಕರ ತಮಿಳು ಕಲೆತುಕೊಳ್ಳಬೇಕಾ? ಕನ್ನಡದಲ್ಲಿ ನೋಡಿದರೆ ಮಕ್ಕಳಾಗಲಿ, ದೊಡ್ಡವರಾಗಲಿ ಚಿತ್ರ ಇನ್ನು ಹೆಚ್ಚು ಮಜಾ ಮಾಡ್ಕೊಂಡು ನೋಡಬಹುದು ಅಲ್ಲವೇ? "ಆದರೂ ಐಶ್ವರ್ಯ ನಮ್ಮವಳಲ್ಲದಿದ್ರೂ, ರಜನಿ ನಮ್ಮವನೇ ಅಲ್ಲವೇ? ನಾವೇ ಸರಿ ಇಲ್ಲದಿದ್ದಾಗ, ಇನ್ನೊಬ್ಬರು ನಮ್ಮ ಮನೆಯನ್ನು ಲೂಟಿ ಮಾಡಿದರೆನ್ನುವುದು ತಪ್ಪು. ಕನ್ನಡವನ್ನು ಬೆಳೆಸುವ ಭಾವನೆಯನ್ನು ಮೊದಲು ನಾವು ಬೆಳೆಸಿಕೊಳ್ಳಬೇಕು" ನಮ್ಮವರು ಅನ್ನುವ ಪದಕ್ಕೆ ಶಬ್ದಕೋಶದಲ್ಲಿ ಬಹಳಷ್ಟು ಅರ್ಥಗಳಿವೆ. ಕೇವಲ ಹುಟ್ಟಿನಿಂದ(ಇಷ್ಟಕ್ಕೂ ಐಶ್ ಗೆ ಕನ್ನಡ ಬರಲ್ಲ, ಅಥವ ಬಂದರೂ ಪಬ್ಲಿಕ್ ನಲ್ಲೆಲ್ಲೂ ಮತನಾಡಿರೋದು ನನು ಕೇಳಿಲ್ಲ. ರಜನಿ ಗೆ ಕನ್ನಡ ಬರೋದನ್ನ ಒಪ್ಪೋಣ) ಕನ್ನಡಿಗರಾದರೇ ಎನು ಬಂತು ಪ್ರಯೋಜನ? ಕನ್ನಡ ಸಮಾಜಕ್ಕೆ, ಕನ್ನಡ ಭಾಷೆಯ ಏಳಿಗೆಗೆ ಯಾರು ಶ್ರಮಿಸುತ್ತಾರೋ ಅವರೆ ನನ್ನ ಅರ್ಥದಲ್ಲಿ ನಿಜವಾದ ಕನ್ನಡಿಗರು. ಈ ಎಂಧಿರನ್ ಚಿತ್ರ ಕರ್ನಾಟಕದ ಚಿತ್ರಮಂದಿರಗಳಲ್ಲಿ ಕಿತ್ತುಕೊಳ್ಳುವುದನ್ನು ಬಿಟ್ಟರೆ, ಕನ್ನಡಿಗರಿಗೆ, ಕರ್ನಾಟಕಕ್ಕೆ, ಕನ್ನಡ ಭಾಷೆಗೆ ಯಾವ ಉಪಕಾರವೂ ಇಲ್ಲ. ಡಬ್ಬಿಂಗ್ ಮೇಲಿನ ನಿರ್ಬಂಧವನ್ನು ಕಿತ್ತೊಗೆಯಬೇಕು. ಪ್ರಪಂಚದ ಯಾವುದೇ ಒಳ್ಳೆಯ ಚಿತ್ರವಾಗಲೀ, ಅದು ಕನ್ನಡದಲ್ಲಿ ನಮಗೆ ಸಿಗುವಂತೆ ಆಗಬೇಕು. ಹಳ್ಳಿ ಹಳ್ಳಿಗೆ ತಮಿಳು, ತೆಲುಗು ನುಗ್ಗುತ್ತಿರುವುದನ್ನು ತಡೆಯಲು ಡಬ್ಬಿಂಗ್ ಒಂದೇ ಪರಿಹಾರ

>ಇಷ್ಟಕ್ಕೂ ಐಶ್ ಗೆ ಕನ್ನಡ ಬರಲ್ಲ, ಅಥವ ಬಂದರೂ ಪಬ್ಲಿಕ್ ನಲ್ಲೆಲ್ಲೂ ಮತನಾಡಿರೋದು ನನು ಕೇಳಿಲ್ಲ.< ತುಳುವಿನಲ್ಲಿ ಮಾತನಾಡಿದ್ದರ ಕೊಂಡಿ ಇಲ್ಲಿದೆ ನೋಡಿ..fyi http://www.youtube.c...

<<<ಎಂದಿರನ್ ನ ಕರ್ನಾಟಕ ವಿತರಣಾ ಹಕ್ಕು ಪಡೆದವರು ವಾಣಿಜ್ಯ ಮಂಡಳಿಯ ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿರುವ ಸುದ್ದಿ>>> ಹೆಚ್ಚಿನ ಲಾಭದ ಉದ್ದೇಶದಿನ್ದ ವಾಣಿಜ್ಯ ಮಂಡಳಿಯ ನಿಯಮಗಳನ್ನು ಧಿಕ್ಕರಿಸಿ ಬಿಡುಗಡೆ ಮಾಡಿರುವುದು ತಪ್ಪು. ಆದರೆ 'ನೋಡಿ' ಎನ್ದ ತಪ್ಪಿಗಾಗಿ ಅವರನ್ನೂ ಇವರನ್ನೂ ಖಣ್ಡಿಸುವುದರಲ್ಲಿ ಅರ್ಥವಿಲ್ಲ. ನಿಯಮಗಳ ಉಲ್ಲಂಘನೆಯಾಗಿರುವುದು ಚರ್ಚಿಸಬೇಕಾದ ವಿಷಯ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಡಿರುವ ನಿಯಮದ ಉಲ್ಲಂಘನೆ ಬಗ್ಗೆ ತಾವು ಒಪ್ಪಿದ್ದೀರಿ. ಹಾಗಾಗಿ ಅದರ ಬಗ್ಗೆ ಚರ್ಚೆ ಅವಶ್ಯಕವಿಲ್ಲ. ಅಕ್ಕ ಮಾಡಿರುವು ತಪ್ಪಿನ ಬಗ್ಗೆ ತಮ್ಮ ಪ್ರಶ್ನೆಗೆ ನನ್ನ ಪ್ರತಿಕ್ರಿಯೆ ಹೀಗಿದೆ:- ಅಮೇರಿಕಾ ದೇಶದಲ್ಲಿ ಕನ್ನಡ-ಕರ್ನಾಟಕ-ಕನ್ನಡಿಗರ ಏಳಿಗೆಗಾಗಿ(ಹಾಗಂತ ಸ್ವತಹ ಅವರೆ ಹೇಳಿಕೊಂಡಿರುತ್ತಾರೆ) ದುಡಿಯುವ ಸಂಸ್ಥೆ ಅಕ್ಕ ಆಗಿದೆ. ಇದುವರೆಗೂ ಕೆಲವು ನಿರ್ಮಾಪಕರು/ನಿರ್ದೇಶಕರು ತಮ್ಮ ಸ್ವಂತ ಪ್ರಯತ್ನದಿಂದ ಬೆರಳೆಣಿಕೆಯಷ್ಟು ಕನ್ನಡ ಚಿತ್ರಗಳನ್ನು ಅಮೇರಿಕಾ ದಲ್ಲಿ ಬಿಡುಗಡೆ ಮಾಡಿದ್ದಾರೆ. ಅಮೇರಿಕಾದಲಿರುವ ಲಕ್ಷಾಂತರ ಕನ್ನಡಿಗರು ಕನ್ನಡ ಚಿತ್ರ ನೋಡುವಂತೆ ಮಾಡುವ ನೈತಿಕ ಹೊಣೆ ಅಕ್ಕ ದಾಗಿದೆ. ನನ್ನ ಲೇಖನದಲ್ಲಿ ಹೇಳಿರುವ ವಿಶ್ಲೇಷಣೆಯಂತೆ ಅಮೇರಿಕ್ಕನ್ನಡಿಗರು ಕನ್ನಡ ಚಿತ್ರ ನೋಡಿದರೆ, ಕನ್ನಡ ಚಿತ್ರರಂಗಕ್ಕೆ ಬಹಳ ಲಾಭ ಬರುತ್ತದೆ. ಅಕ್ಕ ಇಲ್ಲಿ ಮಡಿರುವುದಾದರು ಏನು? ಯಾರೊ ಒಬ್ಬ ತಮಿಳಿನವನು ಅಕ್ಕ ಗೆ ಒಳ್ಳೆಯ ಮೊತ್ತದ ದೇಣಿಗೆ ನೀಡಿದ ಮಾತ್ರಕ್ಕೆ ತಮಿಳು ಚಿತ್ರ ನೋಡಿ ಎನ್ನುವುದು ಸರಿಯಲ್ಲ. ಅವನು ದೇಣಿಗೆ ಕೊಟ್ಟಿರುವ ಮುಖ್ಯ ಉದ್ದೇಶ ಕನ್ನಡಿಗರನ್ನು ಎಂಧಿರನ್ ಚಿತ್ರ ನೋಡುವಂತೆ ಮಾಡಿ ಅಮೇರಿಕಾ ದಲ್ಲಿ ವಿತರಣಾ ಹಕ್ಕುಗಳನ್ನು ತೆಗೆದುಕೊಂಡಿರುವವರ ಜೇಬು ತುಂಬಿಸುವ ಹುನ್ನಾರವಿರಬಹುದಲ್ಲವೇ? ನಳೆ ಇನ್ಯಾರೋ ತೆಲುಗಿನವನೋ, ಹಿಂದಿಯವನೋ ಅಕ್ಕಗೆ ಸ್ವಲ್ಪ ದೇಣಿಗೆ ಕೊಟ್ಟು ನಮ್ಮ ಚಿತ್ರಗಳಿಗು ಬೆಂಬಲಿಸಿ ಎಂದರೇ, ಅಕ್ಕ ಅದನ್ನು ಮಾಡಬಹುದೇ? ಅದಿರಲಿ. ಅಕ್ಕ ತಮಿಳು ಚಿತ್ರ ನೋಡಿ ಅನ್ನುವಂತೆ ಯಾವುದಾದರೂ ತೆಲುಗು/ತಮಿಳು ಅಥವಾ ಯಾವುದೇ ಭಾಷೆಯ ಸಂಘ ಸಂಸ್ಥೆಗಳು ಕನ್ನಡ ಚಿತ್ರ ನೋಡಿ ಎಂದಿದ್ದಾರಾ? ಸ್ವತಹ ಅಕ್ಕ ಕನ್ನಡ ಚಿತ್ರಗಳ ಬಗ್ಗೆ ಆಸಕ್ತಿ ತೋರದಿದ್ದರೆ, ಬೇರೆ ಭಾಷೆಯವರು ಇನ್ನೆಷ್ಟು ಆಸಕ್ತಿ ತೋರಿಸಬಲ್ಲರು? ಅಕ್ಕ ಗೆ ಅರ್ಥವಾಗಬೇಕಿದೆ. ತನ್ನ ಬೆರುಗಳಿರುವ ಕನ್ನಡ ನಾಡಿನಲ್ಲಿ ಕನ್ನಡ ಚಿತ್ರಗಳು ಸೋಲುಂಡು ನೆಲ ಕಚ್ಚುತ್ತಿವೆ. ಅದಕ್ಕೆ ಮೂಲ ಕಾರಣ ತಮಿಳು, ತೆಲುಗು ಚಿತ್ರಗಳು ಕರ್ನಾಟಕದ ಮೂಲೆ ಮೂಲೆಗೆ ನುಗ್ಗಿತ್ತಿವೆ. ಕರ್ನಾಟಕದಲ್ಲೇ ಕನ್ನಡ ಚಿತ್ರಗಳು, ಕನ್ನಡ, ಕನ್ನಡಿಗರು ಅಸ್ತಿತ್ವ ಕಳೆದುಕೊಂದರೆ, ಅಕ್ಕ(ಅಮೇರಿಕಾ ಕನ್ನಡ ಕೂಟಗಳ ಆಗರ) ಕ್ಕೆ ಅಸ್ತಿತ್ವ ಇರುವುದಿಲ್ಲ.

ಕನ್ನಡಿಗ, <<<ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಡಿರುವ ನಿಯಮದ ಉಲ್ಲಂಘನೆ ಬಗ್ಗೆ ತಾವು ಒಪ್ಪಿದ್ದೀರಿ.>>> ನನ್ನ ಒಪ್ಪಿಗೆ ಪ್ರಸ್ತುತವಲ್ಲ, ಯಾಕೆನ್ದ್ರರೆ ವಾಣಿಜ್ಯ ಮಂಡಳಿಯೊನ್ದಿಗೆ ಯಾವುದೇ ತೆರನಾದ ಸಂಬನ್ಧ ನನಗಿಲ್ಲ. ನಿಯಮಗಳ ಉಲ್ಲಂಘನೆಯಾಗಿರುವುದರ ಕುಱಿತಾಗಿ ಇನ್ನೂ ವಿವರವಾದ ಚರ್ಚೆ ನಡೆಯಲಿಲ್ಲ. ನಿಜವಾಗಿ ನೋಡಿದರೆ ಮೂಱು ಭಾಷೆಯವೂ ಸೇರಿ 'ಯಂತ್ರನ್' ಚಿತ್ರದ ಒಟ್ಟು ೭೫ ಪ್ರತಿಗಳು ಕರ್ನಾಟಕದಲ್ಲಿ ತೆರೆಕಾಣುತ್ತಿವೆ. ಇಷ್ಟು ಸಂಖ್ಯೆಯಲ್ಲಿ ಒನ್ದು ಚಿತ್ರದ ಪ್ರತಿಗಳನ್ನು ಬಿಡುಗಡೆ ಮಾಡುವ ಅವಕಾಶವಿದೆಯೇ? ... ಮಱುಗೆಯ್ಮೆ ಚಿತ್ರಗಳಿಗೆ ಅವಕಾಶವಿದ್ದರೆ ಮಾತುಪಲ್ಲಟ ಚಿತ್ರಗಳಿಗೂ ಅವಕಾಶವಿರಬೇಕೆನ್ನುವುದು ನನ್ನ ಅಭಿಪ್ರಾಯ. 'ಎನ್ದಿರನ್' ಎಲ್ಲಿದೆ? ಅದು 'ಯಂತ್ರನ್'. ನೀವು ಗಮನಿಸಿರುವುದಾದರೆ 'ಯಂತ್ರಂ' ಎನ್ನುವುದನ್ನು ತಮಿೞು ಭಾಷೆಯಲ್ಲಿ 'ಎನ್ದಿರಂ' ಎನ್ದು ಬರೆಯುತ್ತಾರೆ. 'ಯಜಮಾನ' ಎಂಬ ಶಬ್ದವನ್ನು 'ಎಜಮಾನ' ಎನ್ದು ಬರೆಯುತ್ತಾರೆ. 'ದ್ರಾವಿಡ'ವನ್ನು 'ತಿರಾವಿಡ'ವೆನ್ದು ಬರೆಯುತ್ತಾರೆ. ಅಕ್ಕ ಮಾಡಿರುವ ತಪ್ಪಿನ ಕುಱಿತಾಗಿ ನಾನೇನೂ ಹೇೞಲಾಱೆನು. ಅದರ ಬಗೆಗಿನದ್ದು ನಿಮ್ಮದು ಕಠೋರವಾದ ನಿಲುವು, ನನಗೆ ಅದು ಸರಿಯೆನಿಸದು. ಕಠೋರವಾದ ನಿಲುವುಗಳು ಭಾಷೆಯ ವಿಚಾರದಲ್ಲಿ ಬೇಕಾಗುತ್ತದೆ ಮತ್ತು ನಮ್ಮವರಿಗೆ ಇಲ್ಲವೆನ್ನುವುದು ಹೊಸ ವಿಚಾರವಲ್ಲ. ಭಾಷೆಯ ಕುಱಿತಾಗಿ ಇಟ್ಟುಕೊಳ್ಳಬಹುದಾದ ಇನ್ನೊನ್ದು ಕಠೋರವಾದ ನಿಲುವು ಱ ಮತ್ತು ೞ ಅಕ್ಷರಗಳ ಬೞಕೆಯ ಕುಱಿತಾದುದು.

<<<ಇಷ್ಟು ಸಂಖ್ಯೆಯಲ್ಲಿ ಒನ್ದು ಚಿತ್ರದ ಪ್ರತಿಗಳನ್ನು ಬಿಡುಗಡೆ ಮಾಡುವ ಅವಕಾಶವಿದೆಯೇ?>>> ಇಷ್ಟು ಸಂಖ್ಯೆಯಲ್ಲಿ ಕನ್ನಡದ್ದಲ್ಲದ ಒನ್ದು ಚಿತ್ರದ ಪ್ರತಿಗಳನ್ನು ಬಿಡುಗಡೆ ಮಾಡುವ ಅವಕಾಶವಿದೆಯೇ? - ಎನ್ದಾಗಬೇಕಾಗಿತ್ತು.

ಅಮರನಾಥರೆ, ತಾವು ಏನು ಹೇಳಲು ಹೊರಟಿದ್ದೀರಿ ಎ೦ದೇ ಅರ್ಥವಾಗುತ್ತಿಲ್ಲ, "ಅಕ್ಕ"ದವರು ಯಾವ ರೀತಿ ಕನ್ನಡದ, ಕರ್ನಾಟಕದ ಪ್ರತಿನಿಧಿಗಳು ಎ೦ದು ನನಗೆ ಅರ್ಥವಾಗುತ್ತಿಲ್ಲ! ಅವರು ಆ ರೀತಿಯ ಒ೦ದು ಸ೦ಘಟನೆ ಏತಕ್ಕಾಗಿ ಮಾಡಿಕೊ೦ಡಿದ್ದಾರೆ೦ದು ಈಗಾಗಲೇ ಕನ್ನಡ ನಾಡಿನ ಉದ್ಧಗಲಕ್ಕೂ ಎಲ್ಲರಿಗೂ ಅರ್ಥವಾಗಿದೆ. ಇನ್ನು ಎ೦ಧಿರನ್ ಚಿತ್ರ ನೋಡುವಲ್ಲಿ ನಿಮಗಿರುವ ಅಭ್ಯ೦ತರವೇನು? ಕನ್ನಡದ ಯ೦ತ್ರನು = ತಮಿಳಿನಲ್ಲಿ ಯ೦ತ್ರನ್, ಬಳಕೆಯಲ್ಲಿ ಅವರ ಮಾಮೂಲಿನ ಅಪಭ್ರ೦ಶಕ್ಕೆ ತುತ್ತಾಗಿ ಎ೦ಧಿರನ್, ಈ ಚಿತ್ರದಲ್ಲಿ ವಿಒಜೃ೦ಭಿಸಿರುವುದು ಕೇವಲ ತಾ೦ತ್ರಿಕತೆ, ರಜನಿಯೂ ಅಲ್ಲ, ಐಶ್ವರ್ಯಳೂ ಅಲ್ಲ! ಹೆಸರು ಅವರದು, ಆದರೆ ನಿಜವಾದ ಕರಾಮತ್ತು ತಾ೦ತ್ರಿಕತೆಯದ್ದು! ಇಲ್ಲಿ ಯಾವ ಭಾಷೆಯವನು ಆ ಚಿತ್ರವನ್ನು ನೋಡಿದರೂ ವ್ಯತ್ಯಾಸವೇನೂ ಆಗದು, ಅವನು ಆ ತಾ೦ತ್ರಿಕತೆಯ ವೈಭವೀಕರಣವನ್ನು ಆನ೦ದಿಸುತ್ತಾನೆ. ಇದೇ ಕಲಾನಿಧಿ ಮಾರನ್ ಕೃಪಾ ಪೋಷಿತ "ಉದಯ ಟಿವಿ"ಯನ್ನು ಕರ್ನಾಟಕದ ಮನೆ ಮನೆಗಳಲ್ಲಿ ಜನ ಉಸಿರು ಬಿಗಿ ಹಿಡಿದು ನೋಡುತ್ತಿದ್ದಾರೆ, ನಿರ್ಮಾಪಕ ತಮಿಳನೆ೦ದ ಮಾತ್ರಕ್ಕೆ, ನಟ ನಟಿಯರು ಕನ್ನಡಿಗರಾಗಿದ್ದರೂ ಈಗ ಅವರು ಇಲ್ಲಿ ಚಾಲ್ತಿಯಲ್ಲಿಲ್ಲ ಅನ್ನುವ ಕಾರಣಕ್ಕೆ ಒ೦ದು ಚಿತ್ರವನ್ನು ಇಲ್ಲಿ೦ದ ಹೊರದಬ್ಬಬೇಕೇ? ನೋಡಲಿ ಬಿಡಿ, ಬೀದಿಗಳಲ್ಲಿ ಮಚ್ಚು ಹಿಡಿದು ಸಿಕ್ಕವರನ್ನು ಕತ್ತರಿಸುತ್ತಾ ಬಾಳುವ, ಕಾಲೇಜಿಗೆ ಹೋಗುವುದೇ ಲವ್ ಮಾಡುವುದಕ್ಕೆ೦ದು ತೋರಿಸಿ ಒ೦ದಿಡೀ ಸಮಾಜದ ಸ್ವಾಸ್ಥ್ಯವನ್ನೇ ಕೆಡಿಸಿರುವ, ನಮ್ಮ ಸಮಾಜದ ಸ೦ಸ್ಕೃತಿಯ ಬೇರುಗಳನ್ನೇ ಅಲುಗಾಡಿಸಿ ಸ೦ಚಲನ ಹುಟ್ಟಿಸಿ, ಕೇವಲ "ಮಚ್ಚಾ - ಮಚ್ಚು" ಸ೦ಸ್ಕೃತಿಯನ್ನು ಹುಟ್ಟು ಹಾಕುತ್ತಿರುವ ಇ೦ದಿನ ಕುಲಗೆಟ್ಟ ಕನ್ನಡ ಚಿತ್ರಗಳನ್ನು ನೋಡುವುದಕ್ಕಿ೦ತ ತಾ೦ತ್ರಿಕತೆಯನ್ನು ವೈಭವೀಕರಿಸಿರುವ "ಎ೦ಧಿರನ್" ಅ೦ತಹ ಒ೦ದು ಚಿತ್ರವನ್ನು, ಅದು ಯಾವ ಭಾಷೆಯದೇ ಆಗಿರಲಿ, ನೋಡುವುದು ಅದೆಷ್ಟೋ ಒಳಿತು. ಧಿಕ್ಕಾರವಿರಲಿ ಇ೦ದಿನ ನಿಮ್ಮ ಕುಲಗೆಟ್ಟ ಕನ್ನಡ ಚಿತ್ರಗಳಿಗೆ! ಇದು ಒಬ್ಬ ಕನ್ನಡಿಗನಾಗಿ, ಒ೦ದು ಪ್ರಭಾವಿ ಮಾಧ್ಯಮವಾದ ಚಲನಚಿತ್ರ, ಸಮಾಜದ ಅನಾರೋಗ್ಯಕ್ಕೆ ಕಾರಣವಾಗುತ್ತಿರುವುದನ್ನು ನೋಡಿ ಮೂಡಿ ಬ೦ದ ನನ್ನ ನೋವಿನ ನುಡಿ.

ಮಂಜುನಾಥರಿಗೆ, <<<ಬೀದಿಗಳಲ್ಲಿ ಮಚ್ಚು ಹಿಡಿದು ಸಿಕ್ಕವರನ್ನು ಕತ್ತರಿಸುತ್ತಾ ಬಾಳುವ, ಕಾಲೇಜಿಗೆ ಹೋಗುವುದೇ ಲವ್ ಮಾಡುವುದಕ್ಕೆ೦ದು ತೋರಿಸಿ ಒ೦ದಿಡೀ ಸಮಾಜದ ಸ್ವಾಸ್ಥ್ಯವನ್ನೇ ಕೆಡಿಸಿರುವ, ನಮ್ಮ ಸಮಾಜದ ಸ೦ಸ್ಕೃತಿಯ ಬೇರುಗಳನ್ನೇ ಅಲುಗಾಡಿಸಿ ಸ೦ಚಲನ ಹುಟ್ಟಿಸಿ, ಕೇವಲ "ಮಚ್ಚಾ - ಮಚ್ಚು" ಸ೦ಸ್ಕೃತಿಯನ್ನು ಹುಟ್ಟು ಹಾಕುತ್ತಿರುವ ಇ೦ದಿನ ಕುಲಗೆಟ್ಟ ಕನ್ನಡ ಚಿತ್ರಗಳನ್ನು ನೋಡುವುದಕ್ಕಿ೦ತ ತಾ೦ತ್ರಿಕತೆಯನ್ನು ವೈಭವೀಕರಿಸಿರುವ ಚಿತ್ರವನ್ನು, ಅದು ಯಾವ ಭಾಷೆಯದೇ ಆಗಿರಲಿ, ನೋಡುವುದು ಅದೆಷ್ಟೋ ಒಳಿತು. ಧಿಕ್ಕಾರವಿರಲಿ ಇ೦ದಿನ ನಿಮ್ಮ ಕುಲಗೆಟ್ಟ ಕನ್ನಡ ಚಿತ್ರಗಳಿಗೆ!>>> ಭಾಷೆಯ ಕುಱಿತಾಗಿ ಪ್ರೀತಿ ಇಟ್ಟುಕೊಣ್ಡವರು ಆಡುವ ಮಾತು ಮತ್ತು ನನಗೆ ಅದು ಅರ್ಥವಾಯಿತು.

ಮಂಜುನಾಥರಿಗೆ <<<ಕನ್ನಡದ ಯ೦ತ್ರನು = ತಮಿಳಿನಲ್ಲಿ ಯ೦ತ್ರನ್, ಬಳಕೆಯಲ್ಲಿ ಅವರ ಮಾಮೂಲಿನ ಅಪಭ್ರ೦ಶಕ್ಕೆ ತುತ್ತಾಗಿ ಎ೦ಧಿರನ್>>> ಅದು ಕನ್ನಡ ಶಬ್ದವೆಂಬ ಅಪಾರ್ಥ ನಿಮಗೆ ನನ್ನ ಮಾತಿನಿನ್ದ ಉಣ್ಟಾಯಿತೇ? ತಮಿೞು ಉಚ್ಚರಿಸುವ ರೀತಿಯಲ್ಲೇ ಕನ್ನಡ ಬರೆಯಬೇಕಾಗದೆನ್ದು ನಾನು ಹೇೞಿದ್ದು. ಕನ್ನಡದಲ್ಲಿ ಸ್ವತಂತ್ರವಾದ ಉಚ್ಚಾರವನ್ನು ಕಾಯ್ದುಕೊಳ್ಳಬಹುದು.

ನಮಸ್ಕಾರ ಮಂಜು. ಒಳ್ಳೆಯ ತಾಂತ್ರಿಕತೆಯಿರುವ ಚಿತ್ರಗಳು, ಕನ್ನಡಕ್ಕೆ ಡಬ್ ಆಗಿ ಬಂದರೆ, ಕನ್ನಡಿಗರೆಲ್ಲರೂ ಅಂತಹ ತಾಂತ್ರಿಕತೆಯನ್ನು ಆನಂದಿಸುತ್ತಾರೆ. ಎಂದಿರನ್ ಅಷ್ಟೇ ಯಾಕೆ, ಅವತಾರ್, ಟೈಟಾನಿಕ್‍ನಂತಹ ಚಿತ್ರಗಳನ್ನೂ ನೋಡಿ, ತಾಂತ್ರಿಕತೆಯನ್ನು ಆನಂದಿಸುತ್ತಾರೆ. -- ಪ್ರಿಯಾಂಕ್

ಬಾಯ್ ಬಾಯಿ ಬಿಟ್ಟುಕೊಂಡು ಬರಿ ದೃಶ್ಯ ನೋಡಿದ್ರೆ ಸಾಕಾ? ಸಂಭಾಷಣೆ ಅರ್ಥ ಆಗೋದು ಬೇಡ್ವಾ? ಇದ್ಯಾಕೋ ನೀವು ಹೇಳಿರೋ ಮಹಾನ್ ಹಾಸ್ಯಕ್ಕಿಂತ ಮಿಗಿಲಾದ ಹಾಸ್ಯವಾಗಿದೆ

ಮಂಜು ಅವರೇ, ನಿಮಗೆ ಕನ್ನಡ ಚಿತ್ರಗಳ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಕಿಂಚಿತ್ತು ಗೊತ್ತಿಲ್ಲ ಅನ್ನೋದು ಸ್ಪಷ್ಟವಾಗಿದೆ. ಇತ್ತೀಚಿಗೆ ಬಿಡುಗಡೆ ಆದ ಎಷ್ಟು ಕನ್ನಡ ಚಿತ್ರಗಳನ್ನು ನೋಡಿದ್ದಿರಿ? ಮನಸಾರೆ ನೋಡಿದ್ರಾ? ಮತ್ತೆ ಮುಂಗಾರು ನೋಡಿದ್ರಾ? ಪಂಚರಂಗಿ? ಜಾಕಿ? ಮಚ್ಚಾ-ಮಚ್ಚು ಸಂಸ್ಕೃತಿ ಇರೋದು ಕನ್ನಡದಲ್ಲಿ ಮಾತ್ರ ಅನ್ನೋದು ನಿಮ್ಮ ಬ್ರಮೆ ಅಷ್ಟೇ. ತಮಿಳಿನ ವಿಜಯ್, ವಿಜಯಕಾಂತ್ ತೆಲುಗಿನ ಬಾಲಕೃಷ್ಣ , ಜು||ಏನ್.ಟಿ.ಆರ್,ಪವನ್ ಕಲ್ಯಾಣ್ ಚಿತ್ರಗಳು ನೋಡಿ. ಆಗ ಗೊತಾಗತ್ತೆ ಮಚ್ಚಿನ ಪ್ರಯೋಗ ಯಾವ ಭಾಷೆಯಲ್ಲಿ ಹೆಚ್ಚಿದೆ ಅಂತ. ಸ್ವಾಮಿ - ಎಲ್ಲ ಚಿತ್ರರಂಗಗಳಲ್ಲೂ ಕೇವಲ ೫-೬% ಚಿತ್ರಗಳು ಗೆಲ್ಲುತ್ತವೆ. ತಮಿಳು ತೆಲುಗಿನಲ್ಲಿ ವರ್ಷಕ್ಕೆ ಸುಮಾರು ೧೨೦ ಚಿತ್ರಗಳಿಗೂ ಅಧಿಕ ಚಿತ್ರಗಳು ಬಿಡುಗಡೆ ಆಗುತ್ತದೆ. ಅದರಲ್ಲಿ ಕರ್ನಾಟಕಕ್ಕೇ ಬರೋದು ಸುಮಾರು ೩೦-೪೦ ಚಿತ್ರಗಳು. ಹಾಗಾಗಿ ನಿಮ್ಮ ಕಾಣಿಗೆ ಹೊರಗಿನಿಂದ ಬಂದಿದೆಲ್ಲಾ ಒಳ್ಳೆಯದು ಅಂತ ಕಾಣ್ಸತ್ತೆ. ನಾನೆಲ್ಲೂ ಎಂಧಿರನ್ ಚಿತ್ರ ಚೆನ್ನಾಗಿಲ್ಲ ಅಂತ ಹೇಳಿಲ್ವಲ್ಲಾ? ಮೇಲಾಗಿ ಅಂತಹ ಮೇಲು ತಂತ್ರಜ್ಞಾನ ಅಳವಡಿಸಿರೋ ಚಿತ್ರ ಕನ್ನಡಿಗರ ಪಾಲಾಗಬೇಕು ಅನ್ನೋದೇ ನನ್ನ ಆಶಯ. ಅದಕ್ಕೆ ಡಬ್ಬಿಂಗ್ ಮೇಲಿನ ನಿಷೇದ ರದ್ದಾಗಬೇಕು. ಈ ಚಿತ್ರ ನೋದಕ್ಕೊಸ್ಕರ ಪ್ರತಿಯೊಬ್ಬ ಕನ್ನಡಿಗನು ತಮಿಳು ಕಳೆತುಕೊಲ್ಲಬೇಕು ಅನ್ನೋದು ಹಾಸ್ಯಾಸ್ಪದ. ನಮ್ಮ ಭಾಷೆಯಲ್ಲಿ ಮಾಡಲು ಸಾಧ್ಯವಿಲ್ಲದ ಉತ್ತಮ ಪರಭಾಷೆ ಚಿತ್ರಗಳನ್ನು ಕನ್ನಡ ಪ್ರೇಕ್ಷಕರು ಕನ್ನಡದಲ್ಲಿ ನೋಡುವಂತಾಗಬೇಕು. ಇಂಗ್ಲಿಷಿನ ಅವತಾರ್, ೨೦೧೨, ಜುರಾಸಿಕ್ ಪಾರ್ಕ್ ಮುಂತಾದ ಚಿತ್ರಗಳು ಕನ್ನಡಕ್ಕೆ ಡಬ್ಬ್ ಆದರೆ, ಕೇವಲ ಕನ್ನಡ ಅರ್ಥವಾಗುವ ಜನರಿಗೂ ಸಹಾಯವಾಗತ್ತೆ. ಕಾರ್ಟೂನ್ ಕಾರ್ಯಕ್ರಮಗಳನ್ನು ನಮ್ಮ ಮಕ್ಕಳು ಕನ್ನಡದಲಿ ನೋಡಿದರೆ, ಇನ್ನು ಹೆಚ್ಚು ಆನಂದಿಸುತ್ತಾರೆ ಅನ್ನುವ ಅಚಲವಾದ ನಂಬಿಕೆ ನನ್ನದು.

<<ಮಚ್ಚಾ-ಮಚ್ಚು ಸಂಸ್ಕೃತಿ ಇರೋದು ಕನ್ನಡದಲ್ಲಿ ಮಾತ್ರ ಅನ್ನೋದು ನಿಮ್ಮ ಬ್ರಮೆ ಅಷ್ಟೇ. ತಮಿಳಿನ ವಿಜಯ್, ವಿಜಯಕಾಂತ್ ತೆಲುಗಿನ ಬಾಲಕೃಷ್ಣ , ಜು||ಏನ್.ಟಿ.ಆರ್,ಪವನ್ ಕಲ್ಯಾಣ್ ಚಿತ್ರಗಳು ನೋಡಿ.>> ಅವುಗಳನ್ನು ಆಯಾ ಭಾಷೆಗಳಲ್ಲೇ ನೋಡ್ಬೇಕೇ ಅಥವಾ "ಡಬ್" ಮಾಡಿಸ್ಕೊಂಡು ನೋಡ್ಬೇಕೇ? ಆ ಸಲಹೆಯನ್ನೂ ನೀಡಿದರೆ ಓದುಗರಿಗೆ ಸಹಕಾರಿಯಾಗುತ್ತದೆ. <<ಈ ಚಿತ್ರ ನೋದಕ್ಕೊಸ್ಕರ ಪ್ರತಿಯೊಬ್ಬ ಕನ್ನಡಿಗನು ತಮಿಳು ಕಳೆತುಕೊಲ್ಲಬೇಕು ಅನ್ನೋದು ಹಾಸ್ಯಾಸ್ಪದ.>> ನಿಮ್ಮ ಈ ಮಾತೇ ಹಾಸ್ಯಭರಿತವಾಗಿದೆ. <<ನಮ್ಮ ಭಾಷೆಯಲ್ಲಿ ಮಾಡಲು ಸಾಧ್ಯವಿಲ್ಲದ ಉತ್ತಮ ಪರಭಾಷೆ ಚಿತ್ರಗಳನ್ನು ಕನ್ನಡ ಪ್ರೇಕ್ಷಕರು ಕನ್ನಡದಲ್ಲಿ ನೋಡುವಂತಾಗಬೇಕು.>> ನಮ್ಮ ಭಾಷೆಯಲ್ಲಿ ಮಾಡಲು ಯಾಕೆ ಸಾಧ್ಯವಿಲ್ಲ ಅಂತ ಬಿಡಿಸಿ ಹೇಳ್ತೀರಾ? <<ಇಂಗ್ಲಿಷಿನ ಅವತಾರ್, ೨೦೧೨, ಜುರಾಸಿಕ್ ಪಾರ್ಕ್ ಮುಂತಾದ ಚಿತ್ರಗಳು ಕನ್ನಡಕ್ಕೆ ಡಬ್ಬ್ ಆದರೆ, ಕೇವಲ ಕನ್ನಡ ಅರ್ಥವಾಗುವ ಜನರಿಗೂ ಸಹಾಯವಾಗತ್ತೆ.>> ಇದು ಕಣ್ರೀ ಮಹಾನ್ ಹಾಸ್ಯ! ಈ ಚಿತ್ರಗಳನ್ನು ನೋಡಿ ಅರ್ಥ ಆಗಿಲ್ಲ ಅಂದವರು ಅದೆಷ್ಟು ಮಂದೀನೋ? <<ಕಾರ್ಟೂನ್ ಕಾರ್ಯಕ್ರಮಗಳನ್ನು ನಮ್ಮ ಮಕ್ಕಳು ಕನ್ನಡದಲಿ ನೋಡಿದರೆ, ಇನ್ನು ಹೆಚ್ಚು ಆನಂದಿಸುತ್ತಾರೆ ಅನ್ನುವ ಅಚಲವಾದ ನಂಬಿಕೆ ನನ್ನದು.>> ಯಾವುದಾದ್ರೂ ಮಕ್ಕಳನ್ನು ಕೇಳಿ ನೋಡಿ. ಆಮೇಲೆ ಹೇಳಿ. ನಿಮ್ಮ ಅಚಲವಾದ ನಂಬಿಕೆ ಬದಲಾಗಿ ಚಲಿಸಲು ಆರಂಭಿಸುತ್ತದೆ. ಮಕ್ಕಳಿಗೆ ಕಾರ್ಟೂನು ಚಿತ್ರಗಳ ಭಾಷೆ ಅಡ್ಡಿಯಾದದ್ದಿದೆಯೇ? :)

ಎಲ್ಲ ಚಿತ್ರ ಗಳನ್ನು ಡಬ್ಬ್ ಮಾಡಿ ಅಂತ ನಾನೆಲ್ಲಿ ಬರೆದಿದ್ದೀನಿ ತೋರಿಸಿ. ಒಳ್ಳೆಯ ಚಿತ್ರವನ್ನು ಮಾತ್ರ ಡಬ್ಬ್ ಮಾದನ ಅಂದಿದ್ದು. ಮಚ್ಚ-ಮಚ್ಚು ಚಿತ್ರಗಳು ಒಳ್ಳೆಯ ಚಿತ್ರಗಳದಿ ಬರತ್ತಾ ನಿಮ್ಮ ಪ್ರಕಾರ? ಚಿತ್ರ ನೋಡೋದು ಅಂದರೆ, ಕೇವಲ ದೃಷ್ಟ ನೋಡೋದು ಅನ್ಸತ್ತೆ ನಿಮ್ಮ ಪ್ರಕಾರ ನಮ್ಮ ಪ್ರಕಾರ ಚಿತ್ರ ನೋಡೋದು ಅಂದರೆ, ಚಿತ್ರದ ಸಂಭಾಷಣೆಯನ್ನು ಸಹ ಅರ್ಥ ಮಾಡಿಕೊಂಡು ದೃಶ್ಯ ನೋಡೋದು ಅಂತ. ನೀವೇನೋ ಪಟ್ಟಣದಲ್ಲಿದ್ದು ಇಂಗ್ಲಿಶ್ ಕಳೆತಿದ್ದೆರ. ಹಾಗಂತ ಇಂಗ್ಲಿಷ್ ಬರದವರು ಚಿತ್ರ ನೋಡಿ ಅರ್ಥ ಮಾಡಿಕೊಲ್ಲಲೆಬಾರದಾ? ನನ್ನ ಸುತ್ತಲು ಇರುವ ಸುಮಾರು ಕನ್ನಡ ಮಕ್ಕಳನ್ನು ಕೇಳಿಯೇ ಈ ಮಾತು ಹೇಳಿರುವುದು. ನಿಮ್ಮ ಸುತ್ತ ಇರುವ ಇಂಗ್ಲಿಶ್ ಮಕ್ಕಳಿಗೆ ಅದು ಅಸಮಂಜಸ ಬಿಡಿ :)

ನಿಮ್ಮ ಪ್ರತಿಯೊಂದು ಮಾತೂ ನೂರಕ್ಕೆ ನೂರು ಸತ್ಯ ಖುಷಿ ಆಯ್ತು. ನಿಮ್ಮ ಆಶಯ, ನೀವು ಬಳಸುವ ಭಾಷೆ ಮತ್ತು ಪ್ರತಿಕ್ರಿಯೆಗಳಿಗೆ ಉತ್ತರಿಸುವ ಪರಿ ಕಂಡು ಮೂಕವಿಸ್ಮಿತನಾದೆ. ಈ ಕಾಯಕವನ್ನು ಇದೇ ರೀತಿ ಮುಂದುವರಿಸಿ. ನಮ್ಮಿಂದಾದ ಸಹಕಾರ ಇದ್ದೇ ಇದೆ.

ನಿಮ್ಮಂತವರ ಸಹಕಾರ ಇಲ್ಲದೆ ನಮ್ಮಿಂದ ಒಂದು ಹುಲ್ಲು ಕಡ್ಡಿಯನ್ನು ಅಲ್ಲಾಡಿಸಲಾಗುವುದಿಲ್ಲ ನಿಮ್ಮಂತಹ ಮೇಧಾವಿಗಳ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ :)

ಕನ್ನಡಿಗರೇ, ನಾನು ಈ ಲೇಖನಕ್ಕೆ ಸ೦ಬ೦ಧಿಸಿದ ನನ್ನ ಮೊದಲಿನ ಪ್ರತಿಕ್ರಿಯೆಯಲ್ಲಿ ಹೇಳಿದ್ದೆ: ಮೊದಲು ನಾವು ಸರಿಯಾಗಬೇಕು. ಮೊದಲು ನಾವು ತಪ್ಪಿಲ್ಲದೆ ಕನ್ನಡವನ್ನು ಬರೆಯುವ ಮತ್ತು ಓದುವ ಅಭ್ಯಾಸವನ್ನು ಮಾಡಬೇಕು. ಆನ೦ತರ ಇನ್ನೊಬ್ಬರಿಗೆ ಅದನ್ನು ತಿಳಿ ಹೇಳುವ ಕೆಲಸವಾಗಬೇಕು. ಈಗ ನಿಮ್ಮ ಮೇಲಿನ ಪ್ರತಿಕ್ರಿಯೆಯಲ್ಲಿಯೇ ನೋಡಿ, ಎಷ್ಟೊ೦ದು ತಪ್ಪುಗಳಿವೆ! ಈ ಬ್ಲಾಗ್ ಕನ್ನಡದ ಏಳಿಗೆಯ ಕುರಿತಾದದ್ದು, ಆದರೆ ನಿಮ್ಮ ಪ್ರತಿಕ್ರಿಯೆಗಳಲ್ಲಿ ಇಷ್ಟೊ೦ದು ತಪ್ಪುಗಳು ನುಸುಳಿದರೆ, ಓದುಗರಿಗೆ ಈ ಬ್ಲಾಗ್ ನ ಮೇಲೆ ಉ೦ಟಾಗುವ ತಪ್ಪು ಅಭಿಪ್ರಾಯಗಳನ್ನು ದೂರ ಮಾಡುವರಾರು? ಪ್ರತಿಕ್ರಿಯೆಯನ್ನು ಒಮ್ಮೆ ಓದಿ, ಆ ನ೦ತರ ತಪ್ಪಾಗಿದ್ದಲ್ಲಿ ಅವುಗಳನ್ನು ಮರು ಪ್ರತಿಕ್ರಿಯೆಯ ಮೂಲಕ ಸರಿಪಡಿಸಬಹುದಲ್ಲವೇ?

ಎಲ್ಲ ಚಿತ್ರ ಗಳನ್ನು ಡಬ್ಬ್ ಮಾಡಿ ಅಂತ ನಾನೆಲ್ಲಿ ಬರೆದಿದ್ದೀನಿ ತೋರಿಸಿ. ಒಳ್ಳೆಯ ಚಿತ್ರವನ್ನು ಮಾತ್ರ ಡಬ್ಬ್ ಮಾಡೋಣ ಅಂದಿದ್ದು. ಮಚ್ಚ-ಮಚ್ಚು ಚಿತ್ರಗಳು ಒಳ್ಳೆಯ ಚಿತ್ರಗಳಡಿ ಬರತ್ತಾ ನಿಮ್ಮ ಪ್ರಕಾರ? ಚಿತ್ರ ನೋಡೋದು ಅಂದರೆ, ಕೇವಲ ದೃಷ್ಯಗಳನ್ನು ನೋಡೋದು ಅನ್ಸತ್ತೆ ನಿಮ್ಮ ಪ್ರಕಾರ. ನಮ್ಮ ಪ್ರಕಾರ ಚಿತ್ರ ನೋಡೋದು ಅಂದರೆ, ಚಿತ್ರದ ಸಂಭಾಷಣೆಯನ್ನು ಸಹ ಅರ್ಥ ಮಾಡಿಕೊಂಡು ದೃಶ್ಯ ನೋಡೋದು ಅಂತ. ನೀವೇನೋ ಪಟ್ಟಣದಲ್ಲಿದ್ದು ಇಂಗ್ಲಿಷ್ ಕಲೆತಿದ್ದೀರ. ಹಾಗಂತ ಇಂಗ್ಲಿಷ್ ಬರದವರು ಚಿತ್ರ ನೋಡಿ ಅರ್ಥ ಮಾಡಿಕೊಳ್ಳಲೇಬಾರದಾ? ನನ್ನ ಸುತ್ತಲೂ ಇರುವ ಸುಮಾರು ಕನ್ನಡ ಮಕ್ಕಳನ್ನು ಕೇಳಿಯೇ ಈ ಮಾತು ಹೇಳಿರುವುದು. ನಿಮ್ಮ ಸುತ್ತ ಇರುವ ಇಂಗ್ಲಿಷ್ ಮಕ್ಕಳಿಗೆ ಅದು ಅಸಮಂಜಸ ಬಿಡಿ

" ಮಕ್ಕಳಿಗೆ ಕಾರ್ಟೂನು ಚಿತ್ರಗಳ ಭಾಷೆ ಅಡ್ಡಿಯಾದದ್ದಿದೆಯೇ? " >> ಹಿಂದಿ/ಅಂಗ್ಲ ಭಾಷೆ ಬರದ ಎಷ್ಟೋ ಮಕ್ಕಳು ಕಾರ್ಟೂನು ಅರ್ಥ ಮಾಡಿಕೊಳ್ಲುವುದನ್ನ ನಾನು ನೋಡಿದ್ದೇನೆ.. ನಮ್ಮ ಸೆಕುರಿಟಿ ಗಾರ್ಡ್ ಮಗ ಮನೆಗೆ ಬಂದು ಟಾಮ್ ಅಂಡ್ ಜೆರ್ರಿ ಬರುತ್ತೆ, ಹಾಕಿ ಎಂದು ಹಲವಾರು ಬಾರಿ ಬಂದು ಕೆಳಿದ್ದಾನೆ .. ಅವನಿಗೆ ಇನ್ನು ೩ ವರ್ಷ ದಾಟಿಲ್ಲ.. ಶಾಲೆಗೆ ಈ ವರ್ಷ ಸೇರಿಸುತ್ತಾರೆ... ನಮ್ಮ ತಂದೆ ಊರಿನಲ್ಲಿ ೩ ಜನ ಮೂಗರು ಇದ್ದಾರೆ. ಜುರಾಸಿಕ್ ಪಾರ್ಕ್ ಸಿನೆಮಾ ಕರೆದುಕೊಂಡು ಹೋಗಿದ್ದೆವು.. ಅವರು ಚಿತ್ರ ಚೆನ್ನಾಗಿ ತೆಗೆದಿದ್ದಾರೆ , ಆ ಪ್ರಾಣಿಗಳನ್ನ ಹೇಗೆ ಚಿತ್ರಿಸಿದರು ಎಂದೆಲ್ಲ ಪ್ರಶ್ನೆ ಕೇಳಿದ್ದರು. [ಬರೆದು ತೋರಿಸಿದ್ದರು ಈ ಪ್ರಶ್ನೆಯನ್ನ]. ಇಲ್ಲಿ ಧ್ವನಿಯೆ ಕೇಳಿಸದವರೂ ಇದನ್ನ ಅರ್ಥ ಮಾಡಿಕೊಂಡಿದ್ದಾರೆ ಎಂದಾಗಲಿಲ್ಲವೆ? ಕೊ ಕೊ: ನಾನು ಇಲ್ಲಿ ಕೇವಲ ಕಾರ್ಟೂನು ಭಾಷೆ ಅರ್ಥ ಅಗುತ್ತದೆ ಅನ್ನುವುದರ ಬಗ್ಗೆ ಹೇಳಿದ್ದೇನೆ ಹೊರತು ನನ್ನನ್ನು ಯಾರ ಬೆಂಬಲಿಗ ಎಂದೋ ಅಥವಾ ವಿರೋಧಿಸಿ ಬರೆಯುತ್ತಿದೇನೆ ಎಂದೂ ಭಾವಿಸಬೇಡಿ.

ಅಸು ಹೆಗಡೆಯವರೇ, ನಮ್ಮ ಭಾಷೆಯಲ್ಲಿ ಎಲ್ಲರು ಹಾಡಿಹೊಗಳುತ್ತಿರುವ ಎಂಧಿರನ್ ಗೆ ಹಾಕಿರುವ ೧೬೦ ಕೋಟಿ ಹಣ ಹಾಕುವವರಾರು? ನನ್ನ ಹತ್ತಿರ ಅಷ್ಟು ಹಣವಿಲ್ಲ. ತಮ್ಮ ಬಳಿ ಇದ್ದರೆ ತಮ್ಮ ಚಿತ್ರಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ :)

ನನ್ನ ಹೆಸರು ಆಸು ಹೆಗ್ಡೆ - ದೃಷ್ಟಿ ದೋಷವೇ? ಈ ರೀತಿಯಾಗಿ ತಲೆಬುಡ ಇಲ್ಲದ ಮಾತನ್ನು ಆಡಬೇಡಿ. ನಿಮ್ಮ ಹತ್ತಿರ ಚಿತ್ರ ನಿರ್ಮಾಣ ಮಾಡಿ ಅಂತ ನಾನು ಹೇಳಿಲ್ಲ. ಕನ್ನಡದಲ್ಲಿ ಸಾಧ್ಯ ಇಲ್ಲ ಎಂದು ಖಂಡಿತವಾಗಿ ಹೇಳುವ ನಿಮ್ಮಲ್ಲಿ ಸಕಾರಣಗಳು ಇದ್ದಿರಬೇಕು ಅಂತ ಕೇಳಿದೆ. ಈಗ ನಿಮ್ಮ ಮಾತುಗಳಿಗೆ ಸಕಾರಣಗಳು ಇಲ್ಲ ಎನ್ನುವುದು ತಿಳಿಯಿತು.

ತಮ್ಮ ಹೆಸರು ತಪ್ಪಾಗಿ ಬರೆದಿದಕ್ಕೆ ಕ್ಷಮೆ ಇರಲಿ ಸ್ವಾಮಿ - ಕನ್ನಡದಲ್ಲಿ ಸಾಧ್ಯವಿಲ್ಲ..ಯಾಕೆ ಅಂತ ಕೇಳಿ. ನಮ್ಮ ಕನ್ನಡ ಚಿತ್ರರಂಗದ ಮಾರುಕಟ್ಟೆ ಇವತ್ತಿಗೆ ಸುಮಾರು ೨೬೦-೩೦೦ ಕೋಟಿ ಇದೆ. ಒಂದೊಂದು ಚಿತ್ರಕ್ಕೆ ಸುಮಾರು ೨ ರಿಂದ ೭ ಕೊತಿಯವರೆಗೆ ಖರ್ಚು ಮಾಡುವ ಸಾಮರ್ಥ ನಮಗಿದೆ. ಹೀಗಿರುವಾಗ ಅವತಾರ್ ಅಥವಾ ಜುರಾಸಿಕ್ ಪಾರ್ಕ್ ಅಂತಹ ಚಿತ್ರಗಳನ್ನು ಇವತ್ತಿನ ಮಟ್ಟಿಗೆ ಮಾಡುವುದು ಅಸಾಧ್ಯ. ಹಾಗಿದ್ದ ಮೇಲೆ ಆ ಚಿತ್ರಗಳನ್ನು ನಮ್ಮ ಭಾಷೆಗೆ ತಂದುಕೊಂಡು ಕನ್ನಡದಲ್ಲಿ ನೋಡುವುದರಲ್ಲಿ ತಪ್ಪೇನಿದೆ.

ತಮ್ಮ ಹೆಸರು ತಪ್ಪಾಗಿ ಬರೆದಿದಕ್ಕೆ ಕ್ಷಮೆ ಇರಲಿ ಸ್ವಾಮಿ - ಕನ್ನಡದಲ್ಲಿ ಸಾಧ್ಯವಿಲ್ಲ..ಯಾಕೆ ಅಂತ ಕೇಳಿ. ನಮ್ಮ ಕನ್ನಡ ಚಿತ್ರರಂಗದ ಮಾರುಕಟ್ಟೆ ಇವತ್ತಿಗೆ ಸುಮಾರು ೨೬೦-೩೦೦ ಕೋಟಿ ಇದೆ. ಒಂದೊಂದು ಚಿತ್ರಕ್ಕೆ ಸುಮಾರು ೨ ರಿಂದ ೭ ಕೋಟಿಯವರೆಗೆ ಖರ್ಚು ಮಾಡುವ ಸಾಮರ್ಥ್ಯ ನಮಗಿದೆ. ಹೀಗಿರುವಾಗ ಅವತಾರ್ ಅಥವಾ ಜುರಾಸಿಕ್ ಪಾರ್ಕ್ ಅಂತಹ ಚಿತ್ರಗಳನ್ನು ಇವತ್ತಿನ ಮಟ್ಟಿಗೆ ಮಾಡುವುದು ಅಸಾಧ್ಯ. ಹಾಗಿದ್ದ ಮೇಲೆ ಆ ಚಿತ್ರಗಳನ್ನು ನಮ್ಮ ಭಾಷೆಗೆ ತಂದುಕೊಂಡು ಕನ್ನಡದಲ್ಲಿ ನೋಡುವುದರಲ್ಲಿ ತಪ್ಪೇನಿದೆ

ಮಂಗನಿಂದ ಮಾನವ ಅನ್ನೋದು ನಿಮಗೆ ತಿಳಿದಿದೆ ಅಲ್ಲವೇ? ಹಾಗೆ ಒಂದು ಚಿತ್ರ ಮಾಡಕ್ಕೆ ೨-೭ ಕೋತಿಗಳು ಬೇಕು ಅಂದರೇ, ೨-೭ ಜನ ಬುದ್ದಿವಂತ ಮಾನವರು ಬೇಕು ಅನ್ನೋದು. ಅದು ನಾನಾದರು ಆಗಿರಬಹುದು, ತಾವಾದರೂ ಆಗಿರಬಹುದು :) ಅಲ್ಲ ಸ್ವಾಮಿ - ಲೇಖನದಲ್ಲಿರುವ ವಿಷಯದ ಬಗ್ಗೆ ಚರ್ಚೆ ಮಾಡುವುದರ ಬದಲು, ಕೇವಲ ತಪ್ಪು ಕಂಡುಹಿಡಿಯುವುದಕ್ಕೆ ನಿಮ್ಮ ಬುದ್ದಿವಂತಿಕೆಯನ್ನು ಮೀಸಲಿಟ್ಟಿದ್ದೀರಲ್ಲ, ನಿಮಗೇನು ಹೇಳಬೇಕೊ ತಿಳಿಯದು.

ಕ್ಷಮಿಸಿ,ಕನ್ನಡ ಬಗ್ಗೆ ಇಷ್ಟು ಅಭಿಮಾನ ಇಟ್ಟಿರುವ ತಾವು ಕೋತಿಯನ್ನು ಕೊತಿ ಎಂದೊ, ಕೋಟಿಯನ್ನು ಕೊತಿ ಎಂದೋ ಬರೆಯುವುದಿಲ್ಲ ಎಂದು ನಂಬಿ ಪ್ರಶ್ನೆ ಮಾಡಿದೆ. ತಾವು ಕೋತಿ ಎಂದು ಬರೆದಿದ್ದಲ್ಲಿ, ನಾನು ಪ್ರಶ್ನೆ ಮಾಡುತ್ತಿರಲಿಲ್ಲ. ಕೊತಿ ಎಂದು ಬರೆದಿದ್ದೀರಲ್ಲ ಹಾಗೇನಾದರು ಪದ ಇದೆಯೆ ಎಂದು ತಿಳಿದು ಕೊಳ್ಳುವು ಕುತೂಹಲ ಇತ್ತು ಅಷ್ಟೆ., ನನ್ನ ಬಗ್ಗೆ ನೀವೇನು ಹೇಳುವುದು ಬೇಡ ಬಿಡಿ ಸ್ವಾಮಿ , ಆಮೇಲೆ ನೀವು ಏನೋ ಹೇಳುವುದು, ಅದು ಇನ್ನೋಂದು ಅರ್ಥದಂತೆ ನಮಗೆ ಭಾಸವಾಗುವುದು ಇದೆಲ್ಲಾ ಯಾಕೆ? ಆ ಬುದ್ದಿವಂತ ಮಾನವರು ತಾವೆ ಆಗಿ, ತಾವು ತೆಗೆದ ಚಿತ್ರ ಯಾವುದು ಎಂದು ತಿಳಿಸಿ. ಆ ೨-೭ ಬುದ್ದಿವಂತರು ಮಾಡಿದ "ಉತ್ತಮ" ಚಿತ್ರ ನೋಡುವ ದಡ್ಡರಲ್ಲಿ ಒಬ್ಬನು ನಾನಾಗುವೆ.