ನನಗೊಬ್ಬಳು ಹೊಸ ತಂಗ್ಯವ್ವ…

To prevent automated spam submissions leave this field empty.

  

 

ನಾನ್ ಹಾಗೇನೆ, ನಂಗೆ, ನನ್ನ ಮನಸ್ಸಿಗೆ ಯಾರಾದ್ರು ಇಷ್ಟ ಆದ್ರೆ ಪಟ್ ಅಂತ ಹೇಳಿ ಪಟ್ ಅಂತ ಅವರನ್ನ ಹತ್ತಿರ ಮಾಡ್ಕೊಂಡು ಬಿಡ್ತೀನಿ. ಅವರು ಯಾವ್ದಾದ್ರು ಒಂದು ರೀತಿಯಲ್ಲಿ ನನ್ನ ಜೊತೆಗೆ ಇರಬೇಕಷ್ಟೇ… `ಈಗ್ಯಾಕೋ ಈ ತರ ಕುಯ್ತಾ ಇದಿಯ ದೊಡ್ಡ ಫ್ಲರ್ಟ್ ನಾನ್ ಮಗ ನೀನು’ ಅನ್ನೋರಿಗೆ ನಾನೇನು ಹೇಳಕ್ಕಾಗಲ್ಲ. ಎಲ್ಲಾ ಟೈಮ್ ಅಲ್ಲೂ ನನ್ನ ಮನಸು ಫ್ಲರ್ಟ್ ಮಾಡ್ತಿರಲ್ಲ.. ಅದರಲ್ಲೂ ಒಂದಷ್ಟು ಭಾವನೆಗಳಿವೆ, ಅದಕ್ಕೂ ಒಂದಷ್ಟು ಅರ್ಥ ಮಾಡ್ಕೊಳೋ ಮನಸು ಬೇಕು ಅನ್ಸುತ್ತೆ. ಸಾಮಾನ್ಯವಾಗಿ ನಾನು ಯಾರನ್ನಾದ್ರೂ ನನ್ನ ತಂಗಿಯಾಗ್ತಿಯ?  ಅಂತ ಕೇಳೋದು ತುಂಬಾ ಕಮ್ಮಿ. ಆದ್ರೆ ಕೆಲವರನ್ನ ನೋಡಿದಾಗ, ಕೆಲವರ ಜೊತೆ ಮಾತಾಡಿದಾಗ, ಕೆಲವರ ಮನಸ್ಸು ಅರಿತುಕೊಂಡಾಗ, ಇವಳೂ ನನ್ನ ತಂಗಿ ತರಾನೆ. ಇವಳೂ ನಂಗೆ ತಂಗಿಯ ಹಾಗೇ ಜೊತೆಗಿರಬೇಕು ಅನ್ಸುತ್ತೆ. ಹಾಗೇ ನಿನ್ನೆ ಇಂದ ನಾನು ಒಂದು ಜೀವವನ್ನ ತಂಗಿಯಾಗಿ ಸ್ವೀಕರಿದಿದ್ದೇನೆ. ಆ ಜೀವದ ಹೆಸರು successವಿನಿ…ನೋಡೋಕೆ ಹುಂಬ ಅನ್ಸುತ್ತೆ, ಆದ್ರೆ ಸಕ್ಕತ್ ಮುಗ್ಧ. ಜಿರಾಫೆಯ ಎತ್ತರ, ಮನಸಿಗೆ ತುಂಬಾ ಹತ್ತಿರ. ಮೊಬೈಲ್ ಅವಳ ಚಡ್ಡಿ ದೋಸ್ತ್, ಅದನ್ನ ಯೂಸ್ ಮಾಡಬೇಡ ಅಂತ ಹೇಳೋದು ಡೆಡ್ ವೇಸ್ಟ್.
ಇವಳ ವಿಚಾರದಲ್ಲಿ ನಂಗೆ ಸಕ್ಕತ್ ಖುಷಿ ಇದೆ, ಅವಳಪ್ಪನ ಆಸೆಯಂತೆ ನಾನು ಐಎಎಸ್ ಆಫಿಸರ್ ಆಗ್ಬೇಕು ಅನ್ನೋ ಆಸೆ ಅವಳಿಗೆ. ಹೆಂಗಾದ್ರೂ ಅವಳಪ್ಪನ ಆಸೆ ಈಡೇರಲಿ ಅನ್ನೋ ಬಯಕೆ ನಂಗೆ.. ಆದ್ರೆ ಜೀವನದಲ್ಲಿ ಸೀರಿಯಸ್ ನೆಸ್ ಅನ್ನೋದು ದೇವರು ಇವಳಿಗೆ ಕೊಡ್ಲೇ ಇಲ್ವೇ.. ಏನೇ ಹೇಳು, ಡೋಂಟ್ ಕೇರ್… ಏನಾಗಲಿ ಮುಂದೆ ಸಾಗು ನೀ ಅನ್ನೋ ವೆರಿ ವಿಚಿತ್ರ ಪಾರ್ಟಿ ಅದು. ಹಂಗಂತಾ ಜೀವನದ ಬಗ್ಗೆ ಕನಸುಗಳೇ ಇಲ್ಲ, ಕನಸುಗಳನ್ನ ನನಸಾಗಿಸೋ ಛಲ ಇಲ್ಲ ಅಂತಲ್ಲ. ಹಟಕ್ಕೆ ಬಿದ್ರೆ ಏನಾದ್ರೂ ಮಾಡಿಬಿಡೋ ಗೂಬೆ ಅದು. ಆದ್ರೆ  ಹಠಕ್ಕೆ ಬೀಳೋದೇ ಇಲ್ಲ ಅಂತಾಳಲ್ಲ ಏನ್ ಮಾಡ್ತೀರಿ???
ಇಷ್ಟ್ ದಿನ ಅವಳು ಹೆಂಗಿದ್ಲೋ ನಂಗೆ ಗೊತ್ತಿಲ್ಲ. ಆದ್ರೆ ಇನ್ನು ಯಾರ್ ಬಿಡ್ತಾರೆ ಅವಳನ್ನ. ನನ್ನ ತಂಗಿಯಾಗೋ ಗ್ರಹಚಾರ ಯಾವ ಹೆಣ್ ಮಕ್ಕಳಿಗೂ ಬೇಡಪ್ಪ. ಅದೃಷ್ಟವಶಾತ್ ಅವಳಿಗೆ ಆ ದುರಾದೃಷ್ಟ ವಕ್ಕರಿಸಿಕೊಂಡಿದೆ. ನನ್ನ ಸಹಿಸ್ಕೊಳೋ ಶಕ್ತಿ ಆ ದೇವರು ಅವಳಿಗೆ ಕೊಡ್ಲಿ ಅನ್ನೋದು ನನ್ನ ಕೋರಿಕೆ…
ಅಂದ ಹಾಗೇ ಅಪ್ಪು, ಇನ್ ಮೇಲೆ ನಾನ್ ನಿನ್ನ ಅಣ್ಣನಾಗಿ ಜೋತೆಗಿರ್ತೀನಿ. ನನ್ನ ಬಗ್ಗೆ ನಿಂಗೆ ಯಾವುದೇ ಕ್ಷಣದಲ್ಲಿ ಸಿಟ್ ಬಂದ್ರೆ ಕೊಳಪಟ್ಟಿ ಹಿಡ್ಕೊಂಡು` ಯಾಕೋ ಅಣ್ಣ ಹಿಂಗಾಡ್ತಿಯ’ ಅಂತ ಕೇಳಿಬಿಡು… ಆದ್ರೆ ಏನೂ ಹೇಳದೆ ಮಾತು ಬಿಡಬೇಡ. ಮನಸಿಗೆ ಬೇಜಾರಾಗುತ್ತೆ. ನನ್ನ ತಂಗಿಯಷ್ಟೇ ನಿನ್ನನ್ನೂ ಪ್ರೀತಿಸ್ತೀನಿ , ಅವಳಷ್ಟೇ ಕೇರ್ ಮಾಡ್ತೀನಿ… ಇವತ್ತು ನೀನು ನನ್ನ ಜೊತೆಗಿದಿಯ, ಆದ್ರೆ 2 -3 ದಿನದಲ್ಲಿ ನನ್ನ ಬಿಟ್ಟು ಹೊರಟು ಬಿಡ್ತೀಯ. ಯಾಕೋ ಬೇಜಾರಾಗ್ತಿದೆ.. ಆದ್ರೂ ಇದು ಅನಿವಾರ್ಯ… ಇಲ್ಲಿಂದ ಹೋದ ಮೇಲೂ ನಿನ್ನಣ್ಣನ ನೆನಪಿರಲಿ. ಹೆಸರಿಗೆ ಮಾತ್ರ ಅಣ್ಣ ಅಲ್ಲ ನಾನು. ಅಣ್ಣಾ ಅಂದ್ರೆ ಅಣ್ಣ ಅಷ್ಟೇ… ಸ್ವಂತ, ಬಾಡಿಗೆ, ಲೀಸು ಅಂತೆಲ್ಲ ಇಲ್ಲ. ಅದೆಲ್ಲ ನಂಗೆ ಗೊತ್ತೂ ಇಲ್ಲ. ಅರ್ಥ ಆಯ್ತಾ ಗೂಬೆ…
ಎನಿವೇ, ನೀನ್ ಇನ್ ಮೇಲೆ ನಾನ್ ಹತ್ರ ನಿಂಗನ್ಸಿದ್ದನ್ನ ಮಾತಾಡ್ಬೋದು, ಯಾವ ಸಮಯದಲ್ಲಾದರೂ ನಾನ್ ನಿಂಗೆ ಲಭ್ಯ, ಕೆಲಸದ ಟೈಮ್ ಹೊರತುಪಡಿಸಿ… ಮೊಬೈಲ್ ಕೀ ಪ್ಯಾಡ್ ಸವೆಸೋದು ಕಮ್ಮಿ ಮಾಡು. ಇಲ್ಲ ಅಂದ್ರೆ ಅದಕ್ಕೊಂದು ಪ್ರಿಂಟರ್ ಹಾಕ್ಸಿ ಮೊಬೈಲ್ ಡಿಟಿಪಿ ಆಪರೇಟರ್ ಮಾಡ್ತೀನಿ ಹುಷಾರು. ಜೀವನದಲ್ಲಿ ಸ್ವಲ್ಪ ಸೀರಿಯಸ್ ಆಗು, ಮಾತು ಮಾತಿಗೆ ಸಿಟ್ ಮಾಡ್ಕೊಳೋದು ಬಿಡು… ನೀನು ಅಮ್ಮಂಗೆ, ನಂಗೆ ಮಾತ್ರ ಪುಟ್ಟ ಹುಡುಗಿ… ಇನ್ನುಳಿದವರ ಕಣ್ಣಿಗೆ ನೀನು ತುಂಬಾ ಬೆಳೆದಿದಿಯ.. ಚೆನ್ನಾಗ್ ಓದು. ಒಳ್ಳೆ ಮಾರ್ಕ್ಸ್ ತೆಗಿ… ನೀನ್ ಜೀವನ ಪೂರ್ತಿ ಯಶಸ್ವಿ ಆಗ್ಬೇಕು ಅನ್ನೋದು ನನ್ನಾಸೆ… ನೀನ್ ಸೂಪರ್ ಸಕ್ಸಸ್ ಆಗ್ತಿಯ ಅನ್ನೋ ಗ್ಯಾರಂಟಿನೂ ನನಗಿದೆ.. ನನ್ನ ನಂಬಿಕೆ ನಿಜಾ ಮಾಡೇ ಮೈ ಡಿಯರ್ ಗೂಬೆ… ಲವ್ ಯು ಎವರ್.. Im lucky to have you as my sweet sister …

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನೀವು ಯಾವ ಸುದ್ದಿ ವಾಹಿನಿಯೊಂದರಲ್ಲಿ ಕಾರ್ಯಕ್ರಮ ನಿರ್ಮಾಪಕ- ನಿರೂಪಕನಾಗಿ ಕೆಲಸ ಮಾಡುತ್ತಿದ್ದಿರಿ ತಿಳಿಸಿ ಆ ಕಾರ್ಯಕ್ರಮನ್ನು ನೋಡುವ ಆಶೆ

ಇಂಥಾ ಬಾವುಕ ಅಣ್ಣ ಎಲ್ಲರಿಗೂ ಸಿಗಲ್ಲ ಕಣ್ರೀ ..ಯಶಸ್ವಿನಿ ಅದೃಷ್ಟ ಮಾಡಿದ್ದಾಳೆ ..ಸಂಬಂಧ ಕೊನೆತನಕ ಹೀಗೆ ಇರಲಿ :) ವಂದನೆಗಳೊಂದಿಗೆ ವಾಣಿ ಶೆಟ್ಟಿ