ದೀಪಾವಳಿ ಆಚರಿಸಿ . ದಿವಾಳಿ ಆಗಬೇಡಿ

To prevent automated spam submissions leave this field empty.

 

ಗೆಳೆಯರೇ,
ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದಂತೆ ಏರ್ಟೆಲ್ ಅವರು ಬೆಂಗಳೂರಿನ ಹಲವೆಡೆ ಜಾಹಿರಾತು ಫಲಕಗಳನ್ನು ಹಾಕ್ತಿದ್ದಾರೆ.
ಹಿಂದಿಯನ್ನು ರೋಮನ್ ಲಿಪಿಯಲ್ಲಿ "khushiyon ki diwali" ಅಂತ ಹಾಕಿದ್ದಾರೆ.
ಇದು ಎಷ್ಟು ಜನರಿಗೆ ಅರ್ಥವಾಗುವುದೋ ದೇವರೇ ಬಲ್ಲ. 
ಕರ್ನಾಟಕದಲ್ಲಿ ನಿಮಗಿರುವ ಹೆಚ್ಚಿನ ಗ್ರಾಹಕರು ಕನ್ನಡಿಗರಾಗಿದ್ದು ಕನ್ನಡದಲ್ಲೇ ಜಾಹಿರಾತು ಕೊಡಿ ಎಂದು ಇವರಿಗೆ ಹೇಳಬೇಕಾಗಿದೆ.
ಜೊತೆಗೆ, ಕನ್ನಡದಲ್ಲಿ ದಿವಾಳಿ ಎಂದರೆ ಇರುವ ಅರ್ಥವನ್ನು ಇವರು ಅರಿತಂತೆ ಕಾಣುತ್ತಿಲ್ಲ. ದಿವಾಳಿ ಎಂದು ಹೇಳುತ್ತಾ ಜಾಹೀರಾತು ನೀಡಿದರೆ, ಜನರು ನಿಮ್ಮ ಸಂದೆಶವನ್ನೇ ತಪ್ಪಾಗಿ ತಿಳಿಯಬಹುದು ಎಂಬುದನ್ನು ಇವರಿಗೆ ತಿಳಿಸಬೇಕಾಗಿದೆ.
ಕನ್ನಡದಲ್ಲಿ ದಿವಾಳಿ ಅಂದರೆ ಏನು ಅರ್ಥ ಅಂತ ಇವರಿಗೆ ಹೇಳಿ, ಮುಂದಿನ ದಿನಗಳಲ್ಲಿ ಬೆಳಕಿನ ಹಬ್ಬವನ್ನು ದೀಪಾವಳಿ ಎಂದೇ ಕರೆಯುವಂತೆ ಒತ್ತಾಯಿಸೋಣ.
ನಮ್ಮ ಸಂಸ್ಕೃತಿಗೆ ಬೆಲೆ ಕೊಡುವ ಮೂಲಕ ನಮ್ಮ ನಾಡಿನ ಜನರ ಮನ ಗೆಲ್ಲಬಹುದು ಎಂದು ಏರ್ಟೆಲ್ ಗೆ ಹೇಳಬೇಕಿದೆ.  
ಅವರಿಗೆ ಮಿಂಚೆ ಬರೆಯಬೇಕಾದ ವಿಳಾಸ - 121@airtelindia.com

ಗೆಳೆಯರೇ,
ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದಂತೆ ಏರ್ಟೆಲ್ ಅವರು ಬೆಂಗಳೂರಿನ ಹಲವೆಡೆ ಜಾಹಿರಾತು ಫಲಕಗಳನ್ನು ಹಾಕ್ತಿದ್ದಾರೆ.
ಹಿಂದಿಯನ್ನು ರೋಮನ್ ಲಿಪಿಯಲ್ಲಿ "khushiyon ki diwali" ಅಂತ ಹಾಕಿದ್ದಾರೆ.ಇದು ಎಷ್ಟು ಜನರಿಗೆ ಅರ್ಥವಾಗುವುದೋ ದೇವರೇ ಬಲ್ಲ. ಕರ್ನಾಟಕದಲ್ಲಿ ನಿಮಗಿರುವ ಹೆಚ್ಚಿನ ಗ್ರಾಹಕರು ಕನ್ನಡಿಗರಾಗಿದ್ದು ಕನ್ನಡದಲ್ಲೇ ಜಾಹಿರಾತು ಕೊಡಿ ಎಂದು ಇವರಿಗೆ ಹೇಳಬೇಕಾಗಿದೆ.ಜೊತೆಗೆ, ಕನ್ನಡದಲ್ಲಿ ದಿವಾಳಿ ಎಂದರೆ ಇರುವ ಅರ್ಥವನ್ನು ಇವರು ಅರಿತಂತೆ ಕಾಣುತ್ತಿಲ್ಲ. ದಿವಾಳಿ ಎಂದು ಹೇಳುತ್ತಾ ಜಾಹೀರಾತು ನೀಡಿದರೆ, ಜನರು ನಿಮ್ಮ ಸಂದೆಶವನ್ನೇ ತಪ್ಪಾಗಿ ತಿಳಿಯಬಹುದು ಎಂಬುದನ್ನು ಇವರಿಗೆ ತಿಳಿಸಬೇಕಾಗಿದೆ.ಕನ್ನಡದಲ್ಲಿ ದಿವಾಳಿ ಅಂದರೆ ಏನು ಅರ್ಥ ಅಂತ ಇವರಿಗೆ ಹೇಳಿ, ಮುಂದಿನ ದಿನಗಳಲ್ಲಿ ಬೆಳಕಿನ ಹಬ್ಬವನ್ನು ದೀಪಾವಳಿ ಎಂದೇ ಕರೆಯುವಂತೆ ಒತ್ತಾಯಿಸೋಣ.

 

 

 

ನಮ್ಮ ಸಂಸ್ಕೃತಿಗೆ ಬೆಲೆ ಕೊಡುವ ಮೂಲಕ ನಮ್ಮ ನಾಡಿನ ಜನರ ಮನ ಗೆಲ್ಲಬಹುದು ಎಂದು ಏರ್ಟೆಲ್ ಗೆ ಹೇಳಬೇಕಿದೆ.  ಅವರಿಗೆ ಮಿಂಚೆ ಬರೆಯಬೇಕಾದ ವಿಳಾಸ - 121@airtelindia.com

ಇಲ್ಲಿಯೂ ಪ್ರತಿಕ್ರಿಯೆ ಬರೆಯಿರಿ : http://www.facebook.com/Airtel?v=app_2373072738

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕನ್ನಡಿಗರ ಮೇಲೆ ಹಿಂದಿ ಹೇರಲು ಕಂಪನಿಗಳೂ ಪಾಲ್ಗೊಳ್ಳುತ್ತಿರುವುದು ಬೇಸರದ ಸಂಗತಿ. ಕನ್ನಡಿಗ ಗ್ರಾಹಕರ ಒತ್ತಾಯವೇ ಇಂತಹ ಹೇರಿಕೆ ನಿಲ್ಲಿಸಲು ಸಾಧ್ಯ.

<<ಕರ್ನಾಟಕದಲ್ಲಿ ನಿಮಗಿರುವ ಹೆಚ್ಚಿನ ಗ್ರಾಹಕರು ಕನ್ನಡಿಗರಾಗಿದ್ದು ಕನ್ನಡದಲ್ಲೇ ಜಾಹಿರಾತು ಕೊಡಿ ಎಂದು ಇವರಿಗೆ ಹೇಳಬೇಕಾಗಿದೆ.>> ಒಂದು ಮಟ್ಟಕ್ಕೆ ಸರಿ. ಆದರೆ ಬೆಂಗಳೂರಿನಲ್ಲಿ, ಕನ್ನಡದ ಜೊತೆ ಜೊತೆಗೆ, ಬೇರೆ ಭಾಷಿಗರನ್ನೂ ತಲುಪುವ ಜಾಹೀರಾತುಗಳನ್ನು ನಿಷೇಧಿಸಬೇಕೆ ಅನ್ನುವುದೂ ಪ್ರಶ್ನೆಯೇ. <<ಜೊತೆಗೆ, ಕನ್ನಡದಲ್ಲಿ ದಿವಾಳಿ ಎಂದರೆ ಇರುವ ಅರ್ಥವನ್ನು ಇವರು ಅರಿತಂತೆ ಕಾಣುತ್ತಿಲ್ಲ. ದಿವಾಳಿ ಎಂದು ಹೇಳುತ್ತಾ ಜಾಹೀರಾತು ನೀಡಿದರೆ, ಜನರು ನಿಮ್ಮ ಸಂದೆಶವನ್ನೇ ತಪ್ಪಾಗಿ ತಿಳಿಯಬಹುದು ಎಂಬುದನ್ನು ಇವರಿಗೆ ತಿಳಿಸಬೇಕಾಗಿದೆ. ಕನ್ನಡದಲ್ಲಿ ದಿವಾಳಿ ಅಂದರೆ ಏನು ಅರ್ಥ ಅಂತ ಇವರಿಗೆ ಹೇಳಿ, ಮುಂದಿನ ದಿನಗಳಲ್ಲಿ ಬೆಳಕಿನ ಹಬ್ಬವನ್ನು ದೀಪಾವಳಿ ಎಂದೇ ಕರೆಯುವಂತೆ ಒತ್ತಾಯಿಸೋಣ.>> ನಿಮಗೂ ಈ ಪದದ ಅರ್ಥ ಪೂರ್ತಿಯಾಗಿ ಗೊತ್ತಿಲ್ಲ ಎನ್ನುವುದನ್ನು ತೋರಿಸಿಕೊಂಡಿರಿ. ಇಲ್ಲಿದೆ ನೋಡಿ. ಬರಹ ಡಾಟ್ ಕಾಂ ನ ನಿಘಂಟಿಲ್ಲಿ ಸಿಕ್ಕಿದ ಪದ ಮತ್ತದರ ಅರ್ಥ. ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು ದಿವಾಳಿ ನಾಮಪದ (<ಮರಾ. ದಿವಾಳೂ) ೧ ಎಲ್ಲವನ್ನೂ ಕಳೆದುಕೊಳ್ಳುವಿಕೆ, ನಿರ್ಗತಿಕನಾಗುವಿಕೆ, ಪಾಪರು ೨ ದೀಪಾವಳಿ ಹಬ್ಬ

ನಮಸ್ಕಾರ ಸುರೇಶ್, ನಿಮ್ಮ ಈ ಅನಿಸಿಕೆಗೆ ನನ್ ಉತ್ತರ: <<ಆದರೆ ಬೆಂಗಳೂರಿನಲ್ಲಿ, ಕನ್ನಡದ ಜೊತೆ ಜೊತೆಗೆ, ಬೇರೆ ಭಾಷಿಗರನ್ನೂ ತಲುಪುವ ಜಾಹೀರಾತುಗಳನ್ನು ನಿಷೇಧಿಸಬೇಕೆ ಅನ್ನುವುದೂ ಪ್ರಶ್ನೆಯೇ.>> ಹಿಂದಿಯಲ್ಲಿ ಜಾಹೀರಾತು ನೀಡುವುದು ಬೆಂಗಳೂರಿನ ಎಷ್ಟು ಮಂದಿಯನ್ನು ತಲುಪಬಹುದೋ, ಅದಕ್ಕಿಂತಾ ಹೆಚ್ಚು ಮಂದಿಯನ್ನು ಕನ್ನಡದಲ್ಲಿ ಜಾಹೀರಾತು ನೀಡುವುದರಿಂದ ತಲುಪಬಹುದು. ಜಾಹೀರಾತು ಫಲಕಗಳಲ್ಲಿ ಕನ್ನಡಕ್ಕೆ ಮೇರುಸ್ಥಾನ ನೀಡಬೇಕು ಎಂಬ ಕಾನೂನು ಬಿ.ಬಿ.ಎಂ.ಪಿ ಜಾರಿ ಮಾಡಿದೆ. ಕಾನೂನನ್ನೂ ಗಾಳಿಗೆ ತೂರಿ, ಹೆಚ್ಚು ಜನರನ್ನೂ ತಲುಪಲಾಗದ ಇಂತಹ ಜಾಹೀರಾತುಗಳನ್ನು ಯಾಕೆ ಮಾಡುತ್ತಾರೆ ಎಂಬುದು ಪ್ರಶ್ನೆ. ಹಿಂದಿಯು ಕನ್ನಡಕ್ಕೆ ಸಹಜವಾಗಿ ಸಿಗಬೇಕಾದ ಜಾಗವನ್ನು ತೆಗೆದುಕೊಂಡಿರುವುದು ಸರಿಯಾದ ಬೆಳವಣಿಗೆಯಲ್ಲ. ಇಂತಹ ಒಂದು ನಡೆಯನ್ನು ಕನ್ನಡಿಗರು ಪ್ರಶ್ನಿಸಬೇಕಾಗಿದೆ. -- ಪ್ರಿಯಾಂಕ್

ನಿಮ್ಮದು ದ್ವಿಪಾತ್ರವೇ? ದಿವಾಳಿಯ ಅರ್ಥ ಗೊತ್ತಿಲ್ಲದೇ "ಕನ್ನಡಿಗ"ನೆಂಬ ಹೆಸರಿಟ್ಟುಕೊಂಡವರು ಬರೆದ ವಿಚಾರದ ಬಗ್ಗೆ ಮಾತಿಲ್ಲ ಏಕೆ? ಅಲ್ಲದೆ ಆತ ಬರೆಯುವ ಕನ್ನಡ ಭಾಷೆ ಹೇಗಿದೆ ನೋಡಿದ್ರಾ? ನಮ್ಮ ಭಾಷೆ ನಮಗೇ ಸರಿಯಾಗಿ ಬಾರದೇ ಇರುವಾಗ ಇವೆಲ್ಲಾ ಹಾಸ್ಯಾಸ್ಪದ. ನಿಮ್ಮ ಇನ್ನಿತರ ವೈಯಕ್ತಿಕ ಅನಿಸಿಕೆಗಳು, ನನ್ನ ವೈಯಕ್ತಿಕ ಅನಿಸಿಕೆಗಳಂತೆ ಸ್ವಾಗತಾರ್ಹ.

ಇಲ್ಲಿ ಗಂಭೀರ ವಿಷಯ ಯಾವುದು? ಬಿಡಿಸಿ ಹೇಳ್ತೀರಾ? ಕನ್ನಡದ ಬಗ್ಗೆ ಬರೆಯುವವರಿಗೆ ಕನ್ನಡ ಪದದ ಅರ್ಥ ತಿಳಿಯದೇ ಇರುವುದೇ? ಅಲ್ಲಾ ಏರ‍್ಟೆಲ್ ಸಂಸ್ಥೆಗೆ ನಷ್ಟ ಆಗುತ್ತಿದೆ ಎನ್ನುವುದೇ?

ನನ್ನ ತಿಳುವಳಿಕೆಯ ಪ್ರಕಾರ ದಿವಾಳಿ ಪದದ ಅರ್ಥ ಎಲ್ಲವನ್ನು ಕಳೆದುಕೊಳ್ಳುವುದು. ದೀಪಾವಳಿ ಹಬ್ಬಕ್ಕೂ ದಿವಾಳಿ ಅಂತ ಒಂದು ನಿಘಂಟಿನಲ್ಲಿ ಹೇಳಿದ ಮಾತ್ರಕ್ಕೆ ಅದನ್ನು ಒಪ್ಪಲೇಬೇಕು ಅನ್ನುವ ನಿಯಮವಿದೆಯೇ. ನಾನು ಅದನ್ನು ಖಂಡಿತ ಪ್ರಶ್ನಿಸುತ್ತೇನೆ.

:) ನಿಘಂಟನ್ನೇ ಪ್ರಶ್ನಿಸುವ ನಿಮ್ಮ ಜ್ಞಾನಕ್ಕೆ ನನ್ನ ನಮಸ್ಕಾರ ನಿಮ್ಮ ಬರಹಗಳಿಗೆ ಪ್ರತಿಕ್ರಿಯಿಸಿ ನನ್ನ ಕಾಲಹರಣ ಆಗಿರುವುದಕ್ಕೆ ನನ್ನನ್ನು ನಾನೇ ದೂಷಿಸಿಕೊಳ್ಳುತ್ತಿದ್ದೇನೆ. ಮುಂದುವರಿಸಿ. ಶುಭವಾಗಲಿ. ಜೈ ಕನ್ನಡಾಂಬೆ!

ಸಾಮಾನ್ಯವಾಗಿ ಕನ್ನಡದಲ್ಲಿ ದಿವಾಳಿ ಅಂದರೆ ಎಲ್ಲ ಕಳೆದು ಕೊಂಡಿರುವ ಸ್ಥಿತಿ ಎಂಬ ಅರ್ಥವೇ ಹೆಚ್ಚು ಬಳಕೆಯಲ್ಲಿರುವುದು. ಕನ್ನಡ ಬರವಣಿಗೆಯಲ್ಲಿ ಎಲ್ಲೂ ನಾನು ಇದುವರೆಗೂ ಈ ಪದವನ್ನೂ 'ದೀಪಾವಳಿ'ಯ ಬದಲಾಗಿ ಬಳಸಿದ್ದು ನೋಡಿಲ್ಲ. ಹಾಗೆಯೇ, ಆಡುನುಡಿಯಲ್ಲೂ ಸಹ ಇದರ ಬಳಕೆ ಬಹಳ ವಿರಳವೆ. ಕನ್ನಡಿಗರು ಇಂಗ್ಲಿಷ್, ಹಿಂದಿ ಮಾತಾಡುವಾಗ ಈ ಪದ ಬಳಸಿದರೂ ಕನ್ನಡ ಮಾತಾಡುವಾಗ 'ದೀಪಾವಳಿ' ಎಂದೇ ಹೇಳುತ್ತಾರೆ. 'ಖುಷಿಯೋ ಕಿ ದಿವಾಳಿ' ಎಂದ್ದಾಗ ಸಂದರ್ಭಕ್ಕೆ ತಕ್ಕಂತೆ ಇದರ ಅರ್ಥ ದೀಪಾವಳಿ ಅಂತ ಎಲ್ಲ ಕನ್ನಡಿಗರು ಅರ್ಥ ಮಾಡಿಕೊಳ್ಳಬಲ್ಲರಾದರೂ ನಮಗೆಲ್ಲ ಮೊದಲು ಎದ್ದು ತೋರುವುದು ಇದರ ಇನ್ನೊಂದು ಅರ್ಥವೇ, ಹಾಗಾಗಿ ನಗು ಬರದೇ ಇರದು.

ಸುರೇಶ್, ಇಲ್ಲಿ ಗಂಭೀರ ವಿಷಯ, ಕನ್ನಡ ನಾಡಿನಲ್ಲಿ ಕನ್ನಡೇತರ ಭಾಷೆಯನ್ನು ಜಾಹೀರಾತಿಗಾಗಿ ಬಳಸಿಕೊಳ್ಳುವುದು. ಕನ್ನಡಕ್ಕೆ ಸಹಜವಾಗಿ ಸಿಗಬೇಕಾದ ಸ್ಥಾನವನ್ನ ಇನ್ನೊಂದು ಭಾಷೆಗೆ ಕೊಡಲಾಗಿರುವುದು. -- ಪ್ರಿಯಾಂಕ್

ಬೆಂಗಳೂರಿನಲ್ಲಿ ಯಾವೊಂದು ಕನ್ನಡಪರ ಸಂಘಟನೆಗಳೂ ಪರಭಾಷಾ ಜಾಹೀರಾತು ಫಲಕಗಳನ್ನು ಕಿತ್ತು ಹಾಕಿ ಪ್ರತಿಭಟನೆ ನಡೆಸಿದ್ದು ನನಗೆ ಗೊತ್ತಿಲ್ಲ. ಆ ಕನ್ನಡಪರರಿಗೆ ಇದು ಗಂಭೀರ ಅಲ್ವೇ? ಕನ್ನಡ ಪದಗಳ ಅರ್ಥ ತಿಳಿಯದ, ಮತ್ತು ಕನ್ನಡ ಪದಗಳನ್ನು ಯದ್ವಾ ತದ್ವಾ ಬರೆದು ಬಿಸಾಕುವ ಅಂತರ್ಜಾಲದಲ್ಲಿನ ನಮ್ಮ ನಿಮ್ಮಂತಹ ಕೆಲವೇ ಕೆಲವು ಕನ್ನಡಿಗರಿಗೆ ಮತ್ತು ತಪ್ಪು ಬರೆಯುವುದೇ ಸರಿ, ತಪ್ಪು ತಪ್ಪಾಗಿ ಕನ್ನಡ ಬರೆಯುವುದು, ಕನ್ನಡದ ಮೇಲೆ ಅತ್ಯಾಚಾರ ಮಾಡುವುದು ಇವೆಲ್ಲಾ ಒಂದು ಗಂಭೀರ ವಿಷಯವೇ ಅಲ್ಲ, ಎಂದು ವಾದಿಸುವವರಿಗೆ ಮಾತ್ರ, ಇವೆಲ್ಲಾ ಗಂಭೀರ ವಿಷಯವಾಗಿಯೇ ಇರಬೇಕೇ?

<ಬೆಂಗಳೂರಿನಲ್ಲಿ ಯಾವೊಂದು ಕನ್ನಡಪರ ಸಂಘಟನೆಗಳೂ ಪರಭಾಷಾ ಜಾಹೀರಾತು ಫಲಕಗಳನ್ನು ಕಿತ್ತು ಹಾಕಿ ಪ್ರತಿಭಟನೆ ನಡೆಸಿದ್ದು ನನಗೆ ಗೊತ್ತಿಲ್ಲ.> ನಿಮಗೆ ಗೊತ್ತಿಲ್ಲ ಎಂದರೆ ಪ್ರತಿಭಟನೆ ನಡೆದೇ ಇಲ್ಲ ಎಂದಲ್ಲವಲ್ಲ.

ಎಲ್ಲಿ ಯಾವಾಗ ನಡೀತು ಹೇಳಿರಲ್ಲಾ... ಎಂದಿರನ್‍ ತಮಿಳು ಚಿತ್ರದ ಬಗ್ಗೆ ಸಿರಿಗನ್ನಡ ಸಂಪದದಲ್ಲಿ ಬರೆದು ಪರೋಕ್ಷವಾಗಿ ಇಷ್ಟು ಪುಕ್ಕಟೆ ಪ್ರಚಾರ ನೀಡಿದವರು ಕನ್ನಡಿಗರ ಆ ಪ್ರತಿಭಟನೆಗೆ ಏಕೆ ಪ್ರಚಾರ ನೀಡಿಲ್ಲ? ನೀವೂ ಕನ್ನಡಿಗರಿಗೆ ಪ್ರಚಾರ ನೀಡೋಲ್ಲ ಅಂದ ಹಾಗಾಯ್ತು. :)

ನಾನು ಕೇಳಿದ್ದು ಜಾಹೀರಾತು ಫಲಕಗಳ ಬಗ್ಗೆ... ನಾಮಫಲಕಗಳ ಬಗ್ಗೆ ಅಲ್ಲ... ಪೂರ್ತಿ ಓದ್ಕೊಂಡು ...ಸಾಧ್ಯ ಅದ್ರೆ ಪೂರ್ತಿಯಾಗಿ ಪ್ರತಿಕ್ರಿಯಿಸಿ... ಇಲ್ಲಾಂದ್ರೆ ಆರಾಮವಾಗಿರಿ...

ಸುರೇಶ್ ಅವರೇ, ಜಾಹೀರಾತು ಫಲಕಗಳ ಬಗ್ಗೆ, ಪ್ರತಿಭಟನೆ ನಡೆದದ್ದು ಪತ್ರಿಕೆಗಳಲ್ಲಿ ಬಂದಿದೆ. ತಾವು ಓದಿಲ್ಲದಿದ್ದರೆ ನಿಮ್ಮನ್ನು ದೂರುವ ಕೆಲಸಕ್ಕೆ ನಾನು ಇಳಿಯುವುದಿಲ್ಲ. ಕಣ್ತಪ್ಪಿರುವ ಸಾಧ್ಯತೆಯಿರುತ್ತದೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. "ಜಾಹೀರಾತು ಫಲಕಗಳು ಯಾವ ಭಾಷೆಯಲ್ಲಿದ್ದರೇನು" ಅನ್ನೋದು ತಮ್ಮ ನಿಲುವಾದರೆ ತೊಂದರೆಯೇನಿಲ್ಲ, ಅರಾಮಾಗಿರಿ. ಅಂತಹ ನಿಲುವು ತಮ್ಮದಲ್ಲದಿದ್ದರೆ, ಇನ್ನೂ ಒಳ್ಳೆಯದು. ಕಾಳಜಿಯುಳ್ಳ ಕನ್ನಡಿಗರು ಇಂತಹ ತಪ್ಪುಗಳನ್ನು ಎಸಗುವ ಕಂಪನಿಗಳಿಗೆ ತಿಳಿಹೇಳುವ ಕೆಲಸ ಮಾಡುತ್ತಾರೆ. ಅಂತಹ ಕನ್ನಡಿಗರಿಗೆ ಇಂದು ನಡೆಯುತ್ತಿರುವ ಒಂದು ತಪ್ಪನ್ನು ತೋರಿಸುವ ಕೆಲಸ ಈ ಬ್ಲಾಗು ಮಾಡಿದೆ. ಇವತ್ತು ಕನ್ನಡ ನಾಡಿನಲ್ಲಿ ಕನ್ನಡದ ಮೇಲಾಗುತ್ತಿರುವ ಹಲವಾರು ತರದ ಆಕ್ರಮಣಗಳನ್ನು ಕನ್ನಡಿಗರಿಗೆ ತೋರಿಸಿಕೊಡುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ. (ಆಕ್ರಮಣವೇ ಸರಿಯಾದ ಪದ ಎಂದು ನನಗನ್ನಿಸಿದೆ) ಇನ್ನು ನೀವಂದುಕೊಂಡಂತೆ ಇಲ್ಲಿ ದ್ವಿಪಾತ್ರವೇನಿಲ್ಲ. -- ಪ್ರಿಯಾಂಕ್

ಪ್ರತಿಯೊಬ್ಬರಿಗೂ ತಮ್ಮದೇ ಆದ ಬರವಣಿಗೆ ಶೈಲಿ ಇರುತ್ತದೆ. ನನಗೆ ಗೊತ್ತಿರುವ, ಇಷ್ಟವಿರುವ ಶೈಲಿಯಲ್ಲಿ ಬರೆಯುವ ಸ್ವಾತಂತ್ರ್ಯ ನನಗಿದೆ. ನನ್ನ ಬ್ಲಾಗಿನಲ್ಲಿ ನನಗೆ ಸರಿ ಅನ್ನಿಸಿದನ್ನು ಬರೆಯುವ ಹಕ್ಕು ನನಗಿದೆ. ತಮ್ಮ ಬ್ಲಾಗಿನಲ್ಲಿ ತಮಗೆ ಇಷ್ಟ ಆಗುವ ರೀತಿಯಲ್ಲಿ ಕನ್ನಡ ಪಾಂಡಿತ್ಯ ಪ್ರದರ್ಶನ ಮಾಡಿಕೊಂಡು ಬರೆಯಬಹುದು. ನಮ್ಮ ಅಭ್ಯಂತರವೇನು ಇಲ್ಲ.

ಶ್ರೀಯುತ ಕನ್ನಡಿಗರೇ,

ನಿಮ್ಮ ವಿಚಾರಧಾರೆಗೆ ನನ್ನ ಅಡ್ಡಿಯಿಲ್ಲ. ಹೆಚ್ಚಿನದಕ್ಕೆ ನನ್ನ ಒಪ್ಪಿಗೆಗೂ ಅಡ್ಡಿಯಿಲ್ಲ...

ಆದರೆ,

[quote=Kannadiga]"ಪ್ರತಿಯೊಬ್ಬರಿಗೂ ತಮ್ಮದೇ ಆದ ಬರವಣಿಗೆ ಶೈಲಿ ಇರುತ್ತದೆ. ನನಗೆ ಗೊತ್ತಿರುವ, ಇಷ್ಟವಿರುವ ಶೈಲಿಯಲ್ಲಿ ಬರೆಯುವ ಸ್ವಾತಂತ್ರ್ಯ ನನಗಿದೆ. ನನ್ನ ಬ್ಲಾಗಿನಲ್ಲಿ ನನಗೆ ಸರಿ ಅನ್ನಿಸಿದನ್ನು ಬರೆಯುವ ಹಕ್ಕು ನನಗಿದೆ." 
[/quote]

ಕ್ಷಮಿಸಿ, ನಮ್ಮ ಸಮಸ್ಯೆ, ನಿಮ್ಮ ತಪ್ಪು ತಪ್ಪಾದ ಕನ್ನಡ ಪದಗಳನ್ನ ಓದುವುದರ ಬಗ್ಗೆ. ನೀವು ಅಷ್ಟು ಕನ್ನಡ ಇಷ್ಟಪಡುವವರಾಗಿ, ಕನ್ನಡವನ್ನೇ ನೆಟ್ಟಗೆ ಬರೆಯುವಲ್ಲಿ, ನಿಮ್ಮೀ ಉದಾಸೀನ ನಿಮಗೇ ಸರಿ ಅನ್ನಿಸುತ್ತದೆಯೇ? ಅಥವಾ ಯಾರಿಗಾದರೂ ಸರಿ ಅನ್ನಿಸುತ್ತದೆಯೇ?

ಹಾಗೇ ಇನ್ನೊಂದು ಮಾತು, ತಪ್ಪಿರುವ ಪದಗಳನ್ನ ಮೆದುಳಿಗೆ ಕೆಲಸ ಕೊಟ್ಟು ಸರಿಯಾಗಿ ಅರ್ಥ ಮಾಡಿಕೊಂಡು ಓದುವಷ್ಟರಲ್ಲಿ ನಮಗೂ ಕಿರಿಕಿರಿ ಉಂಟಾಗಿರುತ್ತದೆ. ಸಹನೆ ಮೀರಿರುತ್ತದೆ. ದಯವಿಟ್ಟು ನಮ್ಮೀ ಕೋರಿಕೆಗೆ ಗಮನ ನೀಡಿ. ತಿದ್ದಿಕೊಳ್ಳಿ. ನಿಮ್ಮ ವಿಚಾರಧಾರೆಗೆ ಬಹುಜನರ ಸಹಮತ ಇದೆಯೋ ಇಲ್ಲವೋ, ಅದು ನಂತರದ ವಿಚಾರ.

 

ನಿಮ್ಮೊಲವಿನ,

ಸತ್ಯ..:-)

ಸತ್ಯಚರಣ ಅವರೇ, ಇಂಗ್ಲಿಷ್ ಕೀಬೋರ್ಡ್ ನಲ್ಲಿ ಬರೆಯುವಾಗ ಕೆಲವೊಮ್ಮೆ ತಪ್ಪುಗಳಾಗುತ್ತದೆ. ಕಣ್ಣಿಗೆ ಕಂಡ ತಪ್ಪುಗಳನ್ನು ಖಂಡಿತ ತಿದ್ದಿಕೊಳ್ಳೋಣ. ಇನ್ನು ಮುಂದಕ್ಕೆ ಜಾಗರೂಕತೆಯಿಂದ ಟೈಪ್ ಮಾಡುವೆ. ಧನ್ಯವಾದಗಳು, ಆದರೆ ಕೆಲವು ತಪ್ಪುಗಳನ್ನು ಕಂಡುಹಿಡಿಯುವುದಕ್ಕೆ ಅಂತಾನೆ ಓದುತ್ತಾರೆ. ಅವರಿಗೆ ನಾನು ಏನನ್ನು ಹೇಳಲಾರೆ. :)

<<ಕಾನೂನನ್ನೂ ಗಾಳಿಗೆ ತೂರಿ, ಹೆಚ್ಚು ಜನರನ್ನೂ ತಲುಪಲಾಗದ ಇಂತಹ ಜಾಹೀರಾತುಗಳನ್ನು ಯಾಕೆ ಮಾಡುತ್ತಾರೆ ಎಂಬುದು ಪ್ರಶ್ನೆ.>> ಹೆಚ್ಚು ಜನರಿಗೆ ತಲುಪಲಾಗದ ಜಾಹೀರಾತಿನಿಂದ, ಒಂದು ಕಂಪನಿ ನಷ್ಟ ಅನುಭವಿಸಿದರೆ ನನಗೇನೂ ಅನಿಸೋಲ್ಲ. ಕಾನೂನು ಉಲ್ಲಂಘನೆ ಪದೇ ಪದೇ ಆದಾಗ ಅದರ ವಿರುದ್ಧ ದೂರು ದಾಖಲಿಸುತ್ತೀರೋ, ಉಲ್ಲಂಘಿಸಿದವರಿಗೆ ಸಂದೇಶ ಕಳುಹಿಸಿ, ಹಾಗೆಲ್ಲಾ ಮಾಡಿದ್ರೆ ನಿಮಗೇ ನಷ್ಟ ಕಣ್ರೀ, ನೀವು ಹಾಗೆ ಮಾಡಿದ್ರೆ ನಿಮಗೆ ತುಂಬಾ ಲಾಭ ಬರುತ್ತೇ, ಅಂತ ಬುದ್ಧಿಮಾತು ಹೇಳ್ತೀರಾ?

ಬುದ್ಧಿಮಾತು ಹೇಳಿದೀನಿ. ಕಾಳಜಿಯುಳ್ಳ ಕನ್ನಡಿಗರೆಲ್ಲಾ ಕೊನೇ ಪಕ್ಷ ಬುದ್ಧಿಮಾತು (ಮಿಂಚೆ ಮೂಲಕ) ಹೇಳಿದರೂ ಸಾಕು. ಬೆಂಗಳೂರಿನಲ್ಲಿ ಕನ್ನಡಕ್ಕೆ ಸಹಜವಾಗಿ ಸಿಗಬೇಕಾದ ಸ್ಥಾನ ಬೇರೊಂದು ಭಾಷೆ ಕಿತ್ತುಕೊಳ್ಳುವುದು ತಪ್ಪುತ್ತದೆ.

ಬಹುಸಂಖ್ಯಾತ ಕನ್ನಡಿಗರೇ ಇರುವ ಕನ್ನಡ ನಾಡಿನಲ್ಲಿ ಕನ್ನಡವಲ್ಲದೆ ಬೇರೊಂದು ಭಾಷೆಯಲ್ಲಿ ಜಾಹಿರಾತು ಹಾಕುವುದು ಆ ಕಂಪನಿಗೆ ಖಂಡಿತ ನಷ್ಟ. ಖಾಸಗಿ ಕಂಪನಿಗಳು ಕೆಲವೊಮ್ಮೆ ಕೊಡುವ ವಿಶೇಷ ಕೊಡುಗೆಗಳನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೆ, ಅದು ಕನ್ನಡಿಗರಿಗೆ ನಷ್ಟ. ಕರ್ನಾಟಕದಲ್ಲಿ ಕನ್ನಡದಲ್ಲಿ ಜಾಹಿರಾತು ಕೊಡಬೇಕು. ಹಾಗೆಯೇ ತಮಿಳುನಾಡಿನಲ್ಲಿ ತಮಿಳಿನಲ್ಲಿ, ಕೆರಳದಲಿ ಮಲಯಾಳದಲ್ಲಿ ಕೊಡಬೇಕು. ಆಯಾ ರಾಜ್ಯಗಳಲ್ಲಿ ಅಲ್ಲಿನ ಭಾಷೆಯಲ್ಲಿ ಜಾಹಿರಾತುಗಳನ್ನು ಕೊಡುವುದೇ ನ್ಯಾಯ .

ಈ ಒಂದು ಸಂಗತಿಯನ್ನು ಮಾತ್ರ ನೋಡಿದಾಗ ನಷ್ಟ ಕಂಪನಿಯವರಿಗೆ ನಿಜ. ಆದರೆ ಎಲ್ಲ ಕಂಪನಿಗಳೂ ಇದೇ ಚಾಳಿ ಹಿಡ್ಕೊಂಡು ಬೆಂಗಳೂರಿನಲ್ಲಿ ಕನ್ನಡದಲ್ಲಿ ಗ್ರ್ರಾಹಕ ಸೇವೆ ಸಿಗುತ್ತಲೇ ಇಲ್ಲ. ಇದರಿಂದ ಕನ್ನಡದವರಿಗೇ ಹೆಚ್ಚು ನಷ್ಟ. ಇದನ್ನು ನಾವು ಕಂಪನಿಗಳಿಗೆ ತಿಳಿಸಿ ಹೇಳಬೇಕಾಗಿದೆ. ಇಂತಹದೇ ತಪ್ಪು ನಮ್ಮ FM ವಾಹಿನಿಗಳೂ ಮಾಡುತ್ತಿದ್ದವು. ಆದರೆ ಈಗ ಕನ್ನಡದಿಂದ ಲಾಭವೇ ಇದೆ ಅಂತ ತಿಳಿದ ಮೇಲೆ ಒಬ್ಬರ ಮೇಲೊಬ್ಬರು ಪೋಟಿಯ ಮೇಲೆ ಕನ್ನಡ ಹಾಡುಗಳನ್ನು ಪ್ರಸಾರ ಮಾಡ್ತಿದಾರೆ.

ಸುರೇಶ್ ಹೆಗ್ಡೆ ಅವ್ರೆ, ನಿಮ್ಮ ವಿತಂಡ ವಾದದಿಂದ ನಿಮಗಾಗುತ್ತಿರುವ "ಕಾಲ ಹರಣ" ಇನ್ನೂ ಸಾಲದು ಎಂದರೆ ಇದನ್ನೂ ಓದಿ. ಸಂಪದದಲ್ಲಿ ಇದುವರೆಗೂ ನೀವು ಹಾಕಿರುವ ಎಲ್ಲಾ ಅನಿಸಿಕೆಗಳನ್ನು ನೋಡಿದರೆ ಮೊದಲಿಗೆ ದುಡುಕಿ ಒಂದು ಅನಿಸಿಕೆ ಹಾಕಿ, ಬಳಿಕ ತಪ್ಪಾಯಿತು ಎಂದು ವಿಚಾರ ಮಾಡಿ, ಸುಮ್ಮನಾಗಿರುವುದು ನಾನು ಕಂಡಿದ್ದೇನೆ. ಆದರೆ ಇಲ್ಲಿ ಹಾಗಾಗಿರುವುದು ನಾನು ಕಂಡಿಲ್ಲ. ನಿಮ್ಮ ಅನಿಸಿಕೆಯನ್ನು ಇನ್ನೂ ಸಮರ್ಥಿಸಿಕೊಳ್ಳುವ ಹಾಗೆ ಮಾತಾಡುತ್ತಿದ್ದೀರ. ಆದರೆ ನಿಜಕ್ಕೂ ನಿಮ್ಮ ಎಲ್ಲಾ ಅನಿಸಿಕೆಗಳನ್ನು ಕೂಡುವುದಾದರೆ ನಿಮ್ಮದು ಅಂತ ಒಂದು ನಿಲುವೇ ಕಾಣುವುದಿಲ್ಲ. ಈ ಪುಟದಲ್ಲಿ "ಕನ್ನಡಿಗ" ಅವರು ಬರೆದಿರುವ ವಸ್ತುವಿನ ಕುರಿತು ನಿಮ್ಮ ನಿಲುವೇನು ಎಂಬುದನ್ನು ಒಂದು ವಾಕ್ಯದಲ್ಲಿ ತಿಳಿಸಿ. ಇನ್ನು, ಮೇಲೆ ಕೇಳಿರುವ ಪ್ರಶ್ನೆ ನಗೆ ಮೂಡಿಸುವಂತದ್ದು. ಇದಕ್ಕೆ ನಿಮಗೆ ಉತ್ತರ ತಿಳಿದಿದೆಯೆಂದು ನೀವು ಭಾವಿಸಿದ್ದರೆ ತಪ್ಪು ಮಾಡುತ್ತಿದ್ದೀರಿ. ಆದರೂ ನೀವು ಪ್ರಶ್ನಿಸಿರುವ ರೀತಿ ನೋಡಿದರೆ ಈ ವಿಚಾರದಿಂದ ನಿಮ್ಮ ಅಸ್ಪೃಶ್ಯತೆ ಗೋಚರವಾಗುತ್ತೆ. ಆದರೆ ನಿಜಕ್ಕೂ ಇದು ಪ್ರತಿಯೊಬ್ಬ ಕನ್ನಡಿಗನಿಗೂ ತಿಳಿಯಬೇಕಾದ ವಿಷಯ - ಇಂತಹ ಜಾಹಿರಾತುಗಳಿಂದ ಇಂದು ಏರ್ಟೆಲ್ ನಂತಹ ಕಂಪನಿಗಳು ಪಡೆವ ಲಾಭ ಕಡಿಮೆಯೇ ಆದರೂ, ಕಾಲ ಕಳೆದಂತೆ ಅದರಿಂದ ದೂರದಲ್ಲಿ ಹೆಚ್ಚು ಹಾನಿ ಕನ್ನಡಿಗರದ್ದೇ. ನಿಮ್ಮದೇ, ನನ್ನದೇ. ಆದರೆ ನೀವು ಎಂತಹವರು ಎಂದು ತೋರಿಸಿಕೊಂಡಿದ್ದೀರಿ ಎಂದರೆ ನಿಮ್ಮ ಹಾನಿ ಕಡಿಮೆ ಮಾಡಿಕೊಳ್ಳಲು ನೀವು ಕನ್ನಡವನ್ನೇ ತ್ಯಜಿಸಿ ಹಿಂದಿಯ ಕಡೆ ಹಾರಲೂ ಹೇಸೊಲ್ಲ. ಅವಶ್ಯವಾದರೆ ಅದಕ್ಕೆ ಇನ್ನೊಂದು ಪಿಳ್ಳೆ ನೆವ ಕೊಟ್ಟೂಬಿಡುತ್ತೀರಿ (ಬರವಣಿಗೆಯಲ್ಲಿ ತಪ್ಪು ಇದ್ದ ತಕ್ಷಣ ಲೇಖನದ ಅರ್ಥವನ್ನೇ hijack ಮಾಡಿದ್ದೀರಿ ನೀವು) ಆ ರೀತಿಯ ಜನ ಇಲ್ಲಿ ಸಂಪದದಲ್ಲಿ ಹೆಚ್ಚಿಲ್ಲ. ನೀವು ಮುಂದೆ ಹೋದರೆ ಒಳಿತು. ನಿಮ್ಮೊಡನೆ ವಿತಂಡ ವಾದದಿಂದ ಇಲ್ಲಿ ಮಿಕ್ಕೆಲ್ಲರ ಕಾಲವೇ ದಂಡವಾಗುತ್ತಿದೆ ಎಂಬುದು ನನ್ನ ಲೆಕ್ಕ.

ನಿಮ್ಮ ಪುಕ್ಕಟೆ ಬುದ್ಧಿವಾದ ನನಗೆ ಬೇಕಿಲ್ಲ. ನಿಮ್ಮ ಕಾಲದಂಡವಾಗುತ್ತದಾದರೆ ಬೇರೆ ಕಡೆ ಹೋಗಿ, ಬೇರೆ ಕೆಲಸ ನೋಡಿಕೊಳ್ಳಿ. ನಿಮ್ಮ ಲೆಕ್ಕ ನಿಮಗೆ. ನನ್ನ ಲೆಕ್ಕ ನನಗೆ. ನನ್ನ ಪ್ರತಿಕ್ರಿಯೆ ಸರಿಯಿಲ್ಲ ಎನಿಸಿದರೆ ನಿರ್ವಾಹಕರಿಗೆ ತಿಳಿಸಿ.

ಹೆಗ್ಡೆ ಅವ್ರೆ, ನಾನು ನನ್ನ ಅನಿಸಿಕೆಯಲ್ಲಿ ಒಂದು ಪ್ರಶ್ನೆಯನ್ನೂ ಕೇಳಿದ್ದೆ. ನಿಮ್ಮ ನಿಲುವು ಏನೆಂಬುದನ್ನು ಇಲ್ಲಿ ಒಂದು ವಾಕ್ಯದಲ್ಲಿ ಪ್ರಕಟಗೊಳಿಸಿ ಅಂತ. ಅದನ್ನು ಮೊದಲು ಮಾಡಿದರೆ ನೀವು ಏನು ಹೇಳಲು ಬಯಸುತ್ತಿದ್ದೀರ ಈ ಪುಟದಲ್ಲಿ ಎಂದು ಎಲ್ಲರಿಗೂ ಅರ್ಥವಾದರು ಆದೀತು. ಅದನ್ನೂ ಮಾಡಲಾಗದೇ ಹೋದರೆ ನಿಮ್ಮದು ಅಂತ ಯಾವುದೂ ನಿಲುವೇ ಇಲ್ಲವೆಂದು ತಿಳಿಸಿರುತ್ತೀರ. ಅಂದ ಹಾಗೆ, ಕಾಲ ದಂಡವಾಗುತ್ತಿದೆಯೆಂದು ಹೇಳಿದವರಲ್ಲಿ ಮೊದಲಿಗರು ನೀವು. ಯಾರು ಎಲ್ಲಿ ಹೋಗಬೇಕು ಎಂಬುದು ಚರ್ಚೆಯ ಮೂಲಕ ನಿರ್ಧಾರವಾಗಲಿ. ಅದಕ್ಕಾಗಿಯೇ ಈ ನನ್ನ ಪ್ರಶ್ನೆ.

ಇದು ಈ ಮೂಲಬರಹಕ್ಕೆ ನಾ ಬರೆದಿದ್ದ ಪ್ರಪ್ರಥಮ ಪ್ರತಿಕ್ರಿಯೆ (ನನ್ನ ನಿಲುವು ಇದೇ ಆಗಿದೆ.) <<ಕರ್ನಾಟಕದಲ್ಲಿ ನಿಮಗಿರುವ ಹೆಚ್ಚಿನ ಗ್ರಾಹಕರು ಕನ್ನಡಿಗರಾಗಿದ್ದು ಕನ್ನಡದಲ್ಲೇ ಜಾಹಿರಾತು ಕೊಡಿ ಎಂದು ಇವರಿಗೆ ಹೇಳಬೇಕಾಗಿದೆ.>> ಒಂದು ಮಟ್ಟಕ್ಕೆ ಸರಿ. ಆದರೆ ಬೆಂಗಳೂರಿನಲ್ಲಿ, ಕನ್ನಡದ ಜೊತೆ ಜೊತೆಗೆ, ಬೇರೆ ಭಾಷಿಗರನ್ನೂ ತಲುಪುವ ಜಾಹೀರಾತುಗಳನ್ನು ನಿಷೇಧಿಸಬೇಕೆ ಅನ್ನುವುದೂ ಪ್ರಶ್ನೆಯೇ. ----------------- ಮುಂದಿನೆಲ್ಲಾ ಮಾತುಗಳು " "ದಿವಾಳಿ" ಪದಕ್ಕೆ ದೀಪಾವಳಿ ಎಂಬ ಅರ್ಥ ಇಲ್ಲ, ನಿಘಂಟಿನಲ್ಲಿ ಇದ್ದರೂ ಅದನ್ನು ಪ್ರಶ್ನಿಸುತ್ತೇವೆ" ಎಂಬ ಮಾತುಗಳಿಂದ ಬೆಳೆದವುಗಳು. ನನ್ನ ಪ್ರಶ್ನೆ ಇದ್ದುದು, ಕನ್ನಡಿಗರೇ ಕನ್ನಡದ ಸರಿಯಾದ ಬಳಕೆ ಮಾಡದೇ ಇದ್ದರೆ ಹೇಗೆ ಅನ್ನುವುದು. ಅಲ್ಲದೇ ಮೂಲಬರಹದ ಆಶಯ ಕನ್ನಡೇತರ ಭಾಷಾಬಳಕೆಯದ್ದು. ಅಲ್ಲಿ ಎರಡೂ ಹಿಂದೀ ಪದಗಳನ್ನು ಆಂಗ್ಲದಲ್ಲಿ ಬರೆದಿದ್ದಾರೆ. ಹಾಗಾಗಿ ಕನ್ನಡ ಪದದ (ಯಾರೋ ಅಂದಂತೆ ಸಾಮಾನ್ಯವಾಗಿ ಬರುವ) ಅರ್ಥವನ್ನು ಕಲ್ಪಿಸಿಕೊಂಡು, ಆಕ್ಷೇಪ ಎತ್ತಿದರೆ ಸಮಂಜಸವೇ? ಅಲ್ಲಿ ಬಳಕೆಯಾದ ಪದಗಳ ಬಗ್ಗೆ ಆಕ್ಷೇಪ ಅಲ್ಲ, ಬಳಸಿದ ಭಾಷೆಯ ಬಗ್ಗೆ ಇರಬೇಕಾಗಿತ್ತು. ಆಂಗ್ಲಭಾಷೆಯಲ್ಲಿ ಕನ್ನಡ ಪದಗಳನ್ನು ಬರೆದರೂ ಹಿಂದಿ ಪದಗಳನ್ನು ಬರೆದರೂ ಒಂದೇ ತೆರನಾದ ಆಕ್ಷೇಪ ಇರಬೇಕು. ದಿವಾಳಿ ಎನ್ನುವ ಪದ ನಗುಬರಿಸುತ್ತದಾದರೆ, "ಖುಶಿಯೋಂಕಿ" ಅನ್ನುವ ಪದಕ್ಕೆ ಕನ್ನಡಿಗರು ಯಾವ ಅರ್ಥವನ್ನೂ ನೀಡಲಾರರು ಎನ್ನುವ ಮಾತು ಇರಬೇಕಾಗಿತ್ತು, ಮೂಲ ಬರಹದಲ್ಲಿ. ಅದು ಇದೆಯೇ? ಅದನ್ನು ಹಿಂದಿಯ ಪದ ಎಂದು ಒಪ್ಪಿ ಅರ್ಥೈಸಿಕೊಂಡು, ದಿವಾಳಿ ಪದಕ್ಕೆ ಕನ್ನಡದ ಅರ್ಥ ಹುಡುಕೋದು ಸರಿಯೇ? ಪರಭಾಷಾ ಪದಕ್ಕೆ ನಮ್ಮ ಭಾಷೆಯಲ್ಲಿ ಬೇರೇನೋ ಅರ್ಥ ಬರುತ್ತದೆಯಾದ್ದರಿಂದ ನಾವು ನಗುತ್ತೇವೆ ಅಂದರೆ, ನಾವು ಪರಭಾಷೆಗಳಿಗೆ ಅಗೌರವ ಸೂಚಿಸಿದಂತೆ. ಇಂಥಹ ತಮಾಷೆ ಮಾಡುವ ವಿಷಯಗಳು, ಆಶಯಗಳು ಗಂಭೀರವೆಂದು ಸಾರಲ್ಪಟ್ಟಿರುವ ಮೂಲ ಬರಹದಲ್ಲಿ ಬರುವುದೆಷ್ಟು ಸಮಂಜಸ? ------------------------- ಒಂದು ಜಾಹೀರಾತು ಗ್ರಾಹಕರನ್ನು ತಲುಪಲು ವಿಫಲವಾದರೆ ನನಗೇನೂ ನಷ್ಟ ಇಲ್ಲ. ಇದೂ ಕೂಡ ನನ್ನ ನಿಲುವೇ. ------------ ಗೋಹತ್ಯೆ ನಿಷೇಧ ಕಾಯಿದೆ ಜಾರಿಮಾಡಬಹುದಾದ ನಮ್ಮ ಕನ್ನಡ ನಾಡಿನಲ್ಲಿ ಪರಭಾಷಾ ಜಾಹೀರಾತು ನಿಷೇಧ ಕಾಯಿದೆ ಜಾರಿಮಾಡಲಾಗದೇ? ------------- ನಿಘಂಟನ್ನೇ ಪ್ರಶ್ನಿಸುತ್ತೇನೆ ಅಂದ ಜ್ಞಾನಿಗಳ ಜೊತೆಗೆ ಕಾಲಹರಣ ಮಾಡಿದುದಕ್ಕೆ ನನ್ನನ್ನು ನಾನು ದೂಷಿಸುತ್ತೇನೆ ಅಂದಿದ್ದೆ. ನಿಮ್ಮಂತೆ ಪರರನ್ನು ದೂಷಿಸಿಲ್ಲ. -------- - ಆಸು ಹೆಗ್ಡೆ

ನಿಮ್ಮ ನಿಲುವನ್ನು (ನಿಲುವುಗಳನ್ನು) ವ್ಯಕ್ತಪಡಿಸಿದ್ದಕ್ಕೆ ನನ್ನಿ. ನೀವು ಹೇಳಿರುವ ಸುಮಾರು ಎಲ್ಲಾ ಅಂಶಗಳಲ್ಲಿ ಅರ್ಥವಿದೆ, ಮತ್ತು ಗಮನಿಸಬೇಕಾದ್ದೇ. ಆದರೆ ಲೇಖಕ ಬರೆದಿರುವ ವಸ್ತುವಿನ ಹಿಂದೆ ಇಶ್ಟೋಂದು ಆಳವಾಗಿ, ಬಗೆ-ಬಗೆಯಾಗಿ ಅರ್ಥ ಮಾಡಲು ಮುಂದಾಗಿರುವ ನೀವು ಅದರ ಹಿಂದಿರುವ ಉದ್ದೇಶವನ್ನೇ ಚರ್ಚೆಗೆ ತರದೆ, ಬರೀ ಲೇಖಕನ ಭಾಷಾ ಬಳಕೆಯಲ್ಲಿನ ತಪ್ಪುಗಳನ್ನು ಎತ್ತುಹಿಡಿದಿದ್ದು ಈ ಪ್ರಕರಣದ ಉದ್ದೇಶಕ್ಕೆ ಮಾರಕವಾಗಿ ಇಲ್ಲಿ ಕಾಣಿಸಿಕೊಂಡಿದೆ. ಇಲ್ಲಿ ಲೇಖಕ ಎತ್ತಿರುವ ವಿಷಯ ಇಷ್ಟೆ. ಏರ್ಟೆಲ್ (ಒಂದು ಉದಾಹರಣೆಯಷ್ಟೇ) ಬೆಂಗಳೂರಿನಲ್ಲಿ (ಉದಾಹರಣೆಯಷ್ಟೇ) ಈ ರೀತಿ ಹಿಂದಿಯನ್ನು ಬಳಸಿ ಜಾಹಿರಾತು ಮೂಡಿಸುತ್ತಿರುವುದು ಹೊಸದೇನಲ್ಲ. ಈ ವರೆಗೂ ಈ ರೀತಿಯ ಹಲವು ಪ್ರಕರಣಗಳು ನಡೆದಿರುವುದು ನನಗೇ ತಿಳಿದಿದೆ, ಕೆಲವೆಡೆ ಹೀಗೆ ಗ್ರಾಹಕರೇ ಏರ್ಟೆಲ್ ಗೆ ಮಿಂಚೆ ಹಾಕಿ ಬದಲಾವಣೆ ಮೂಡಿಸಿರುವ ಸನ್ನಿವೇಶಗಳೂ ಇವೆ. ಇಂದು ಏರ್ಟೆಲ್ ನವರು ಕೊಡುವ ಬಿಲ್ ಒಳಗೆ ಕನ್ನಡ ಆಯ್ಕೆ ಬಂದಿರುವುದಕ್ಕೂ ಈ ರೀತಿಯ ಗ್ರಾಹಕ ಒತ್ತಾಯವೇ ಕಾರಣವೆಂದು ನಿಮಗೆ ತಿಳಿದಿರಲಿ. ಈಗ ನಿಮ್ಮ ಒಂದು ವಿಶೇಷ ನಿಲುವಿಗೆ ಬರೋಣ. ಬೆಂಗಳೂರಿನಲ್ಲಿ ಬೇರೆ ಭಾಷಿಕರಿಗೂ ಅರ್ಥವಾಗಬೇಕು ಎಂದು ಈ ರೀತಿ ಜಾಹಿರಾತು ಹಾಕುವುದು ಸಮಂಜಸವೆಂದು ನಿಮ್ಮ ನಿಲುವಾದರೆ, ಅದು ವಿಚಿತ್ರವೆಂದು ನಾನು ಹೇಳುವೆ. ಯಾಕೆ ಅಂದರೆ ನಿಮ್ಮ ನಿಲುವಿನ ಪ್ರಕಾರವೇ ಹೋದರೆ ಬೆಂಗಳೂರಿನಲ್ಲಿ ಎಷ್ಟು ಭಾಷೆಯ ಜನರಿದ್ದಾರೋ ಅಷ್ಟು ಭಾಷೆಗಳಲ್ಲೂ ಈ ರೀತಿಯ "ದಿವಾಳಿ" ಜಾಹಿರಾತುಗಳು ಮೂಡಬೇಕು. ಹಾಗೇನಾಗಿಲ್ವಲ್ಲ? ಎಲ್ಲಿ ನೋಡಿದರೂ ಇದೇ ಮೂರು ಹಿಂದಿ ಪದಗಳು (ಇಂಗ್ಲಿಷ್ ಲಿಪಿಯಲ್ಲಿ) ಕಾಣುತ್ತವೆ. ಹಾಗಾಗಿ ಇಲ್ಲಿ ಏರ್ಟೆಲ್ ನವರು ಬಹಳ ಸರಳವಾಗಿ ಹೇಳೋದಾದ್ರೆ ಹಿಂದಿಯೊಂದನ್ನೇ ಹಿಡಿದು ಜಾಹಿರಾತು ಮಾಡಿರುವುದು ತಿಳಿಯುತ್ತೆ. ಇದರಿಂದ ಯಾರಿಗೆ ನಷ್ಟ, ಅದರ ಪರಿಣಾಮ ನಮ್ಮ ಮೇಲೆ ಎಂತದ್ದು ಅವನ್ನೆಲ್ಲಾ ನಂತರ ನೋಡೋಣ. ಒಟ್ಟಿನಲ್ಲಿ ನಿಮ್ಮ ಈ ವಿಶ್ವ ಮಾನವ ನಿಲುವು ಕಾರ್ಯರೂಪಕ್ಕೆ ತರುವುದು ಸಾಧ್ಯವಲ್ಲವೆಂದು ನಂಬಿಯೇ ಏರ್ಟೆಲ್ ನೋರು ಒಂದು ಭಾಷೆಯಲ್ಲಿ ಜಾಹಿರಾತು ಹಾಕಿದ್ದಾರೆ ಎಂಬುದು ನಿಮಗೆ ಈಗ ಅರ್ಥವಾಗಿದೆ ಅನ್ಸತ್ತೆ. ಆದರೆ ಇಲ್ಲಿ ದೊಡ್ಡ ತಪ್ಪು ಆಗಿರುವುದು ಆ ಒಂದು ಭಾಷೆ ಬೆಂಗಳೂರಿನಲ್ಲಿ ಕನ್ನಡ ಆಗಬೇಕಿತ್ತು, ಹಿಂದಿ ಆಗೋಗಿದೆ. ಇದು ಬದಲಾಗಬೇಕು. ಬೇರೆ ಭಾಷಿಕರನ್ನು ಗುರಿಯಾಗಿಟ್ಟುಕೊಂಡು ಪ್ರತ್ಯೇಕ ಜಾಹಿರಾತು ಮಾಡುತ್ತಾ ಹೋಗಲು ಆಗುವುದಿಲ್ಲ, ಅದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಇನ್ನು "ದಿವಾಳಿ" ಪದವನ್ನೇ ಆಯ್ಕೆ ಮಾಡುವುದರಲ್ಲಿ ಅರ್ಥವೇನಿದೆಯೆಂಬ ನಿಮ್ಮ ಪ್ರಶ್ನಾರ್ಥಕ ನಿಲುವು - ಇಲ್ಲಿ ನನಗೆ ಕಂಡ ಕಾಳಜಿ ಏನೆಂದರೆ ಈ ಮಾತು ಒಂದು ಜನಾಂಗದ ಭಾಷೆಯ ಬಳಕೆ ಆಗಿಲ್ಲವೆಂಬುದಕ್ಕೇ ಸೀಮಿತವಾಗಿಲ್ಲ ಸ್ವಾಮಿ. ಇಲ್ಲಿ ಪ್ರಶ್ನೆ ಒಂದು ಜನಾಂಗ ಆಚರಿಸುವ ಹಬ್ಬದ ಹೆಸರನ್ನೇ ಏರ್ಟೆಲ್ ನೋರು ತಪ್ಪಾಗಿ ಅರ್ಥ ಮಾಡಿಕೊಂಡಿರುವುದರ ಕುರಿತಾಗಿದೆ. ನಿಮ್ಮ ಹೆಸರನ್ನು ತಪ್ಪು-ತಪ್ಪಾಗಿ ಹಾಕಿ ನಿಮಗೆ ಬಿಲ್ ಕಳಿಸಿದರೆ ನಿಮ್ಮತನವನ್ನು ಚುಚ್ಚಿದ ಹಾಗೆ ನಿಮಗೆ ಅನಿಸುವುದಿಲ್ಲವೇ? ಹಾಗೇ, ಇಲ್ಲಿ ಕನ್ನಡಿಗ ಆಚರಿಸುವ ದೀಪಾವಳಿಯನ್ನು ಹಿಂದಿ ಭಾಷಿಕರು ಆಚರಿಸುವ ದಿವಾಳಿಯೊಂದಿಗೆ confuse ಮಾಡಿಕೊಂಡಿರುವುದನ್ನು ಎತ್ತು ಹಿಡಿಯಲು ಈ ಮಾತು ಬಂದಿದೆ. ಅಂದ ಹಾಗೆ ಇಲ್ಲಿ ದಿವಾಳಿ ಎಂದ ಕೂಡಲೆ ನಕ್ಕಿದರೆ ಅದು ಪರಭಾಷೆಯನ್ನು ಅವಮಾನ ಮಾಡಿದಂತೆ ಏನಲ್ಲ. ಅದು ಕನ್ನಡ ನಾಡಿನಲ್ಲಿ, ಈ ಸಂದರ್ಭದಲ್ಲಿ ಆ ಪದದ ಬಳಕೆ ಕುರಿತು ನಕ್ಕಂತೆ ಮತ್ತು ಆ ಬಳಕೆಯನ್ನು ದೂಶಿಸಿದಂತೆಯಷ್ಟೇ. ಲೇಖನದ ಬಗ್ಗೆ ಮೊದಲೇ ಒಂದು ಅಭಿಪ್ರಾಯ ಇಟ್ಟೂಕೊಂಡು ಓದಿದಂತೆ ನಿಮ್ಮ ವಾಕ್ಯಗಳು ಕಾಣುತ್ತಿವೆಯಲ್ಲಾ.. ಇನ್ನು ಏರ್ಟೆಲ್ ನೋರು ಈ ರೀತಿಯ ನಷ್ಟಕರ ಜಾಹಿರಾತು ಹಾಕುವುದರಿಂದ ನನಗೇನು ನಷ್ಟವಿಲ್ಲ ಎಂಬ ನಿಲುವು. ಇದು ಪ್ರತಿಯೊಬ್ಬನ ಸ್ವಂತ ನಿಲುವು ಎಂಬುದು ನನಗೂ ತಿಳಿದಿದೆಯಾದರೂ, ಇಲ್ಲಿ ಕಂಪನಿಗಳಿಗೆ ಮಿಂಚೆಯಲ್ಲಿ ಸಲಹೆ ನೀಡುವುದರಿಂದ ಅವರೊಡನೆ ಒಳ್ಳೆಯ ವ್ಯಾಪಾರಿ-ಗ್ರಾಹಕ ಸಂಬಂಧ ಬೆಳೆಸುವ ಪ್ರಕ್ರಿಯೆ ಶುರುವಾಗಿದೆಯಷ್ಟೇ. ಒಂದು ಸುಲಲಿತ ಮಾರುಕಟ್ಟೆಯ ಪರಿಸ್ಥಿತಿಯಲ್ಲಿ ಹೀಗೇ ವ್ಯಾಪಾರಿ-ಗ್ರಾಹಕರ ನಡುವೆ ಒಳ್ಳೆಯ ಸಂಬಂಧವಿರುತ್ತದೆ. ನಾನು ಗ್ರಾಹಕ, ವ್ಯಾಪಾರಿ ಮಾಡಿದ ತಪ್ಪಿನಿಂದ ಅವನು ಹಾಳಾಗಲಿ, ನನಗೇನು ಎಂಬುದನ್ನು ಬಿಟ್ಟು, ಸಾಧ್ಯವಾದ ಮಟ್ಟಗೆ ವ್ಯಾಪಾರಿ ನಮ್ಮ ಮಾರುಕಟ್ಟೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವತ್ತ ಬುದ್ಧಿ ಹೇಳೋಣ. ಸರಿ ಮಾಡಿಕೊಂಡರೆ ಸರಿ, ಇಲ್ಲವೇ ಅವಣ ಹಣೆ-ಬರಹ ಎಂದು ಆಗ ಬಿಡೋಣ. ಮಿಂಚೆ ಕಳಿಸದೇ ಸುಮ್ಮನೆ ಕೂತರೆ ಅವರು ಮಾಡಿದ್ದೇ ಸರಿಯೆಂಬ ಸಂದೇಶವನ್ನೂ ನೀವು ಕಳಿಸಿದಂತೆ ಆಗುತ್ತದೆ, ಜೋಕೆ. ಇದಕ್ಕೆ ಸುಲಭ ಉದಾಹರಣೆಯೆಂದರೆ ಇತ್ತೀಚೆಗೆ ಎಲ್ಲಾ ಕಂಪನಿಗಳೂ facebook ಅಲ್ಲಿ ಒಂದು ಪುಟ ರಚಿಸಿವೆ. ಏಕೆ? ತಮ್ಮ ಗ್ರಾಹಕರು ತಮ್ಮ ಬಗ್ಗೆ ಏನೇನು ಮಾತಾಡುತ್ತಿದ್ದಾರೆ ಎಂಬುದನ್ನು ಆಲಿಸಲು. ಆಲಿಸಿ ಏನು ಮಾಡ್ತಾರೆ? ಆಲಿಸಿ ತಮ್ಮ ಕಾರ್ಯ-ವೈಖಿರಿಯನ್ನು ಸರಿಪಡಿಸುವ ದಾರಿ ಕಂಡುಕೊಳ್ಳುತ್ತಾರೆ. ನಾವು ಬಾಯಿ-ಮುಚ್ಚಿಕೊಂಡು ಕೂರುವ ಕಾಳ ಹೋಯ್ತು.. ಗ್ರಾಹಕರು ಎದ್ದು ಮಾತಾಡಿದರೆ ಬದಲಾವಣೆ ಸಿದ್ದ ಎಂಬ ಕಾಲ ಇದು. ಎದ್ದೇಳಿ!

ಕರ್ನಾಟಕದಲ್ಲಿ ಜಾಹಿರಾತು ಕನ್ನಡದಲ್ಲಿರಬೇಕು. ಅದೇ ಸ್ವಾಭಾವಿಕ . ಬೆಂಗಳೂರಿನಲ್ಲಿ ಹಿಂದಿಯವರಿಗಿಂತ ಹೆಚ್ಚು ಕನ್ನಡಿಗರಿದ್ದಾರೆ ಅನ್ನೋದನ್ನ ಯಾವನಾದರೂ ಒಪ್ಪುವಂತದ್ದು. ಹೀಗಿರುವಾಗ ಕನ್ನಡದಲ್ಲಿ ಹಾಕದೆ ಹಿಂದಿ ಯನ್ನು ಇಂಗ್ಲಿಷ್ ಲಿಪಿಯಲ್ಲಿ ಹಾಕುವುದು ಹುಚ್ಚುತನವಲ್ಲದೆ ಬೇರೇನೂ. ಮೇಲಾಗಿ ಕನ್ನಡ ನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡಿಗನಿಗೆ ಬೇಕಾದ ರೀತಿಯಲ್ಲಿ ಸೇವೆ ಕೊಡಬೇಕಾದದ್ದು ಇವರ ಧರ್ಮ. ಅದನ್ನೇ ನಾವು ಹೇಳಹೊರಟಿರುವುದು.

ರಾಮ ರಾಮಾ! ಇದೆ೦ಥ ಕರ್ಮಕಾ೦ಡ ಸ೦ಪದದಲ್ಲಿ ಇ೦ದು, ಏರ್ ಟೆಲ್ ನವನು ಆ೦ಗ್ಲ ಭಾಷೆಯಲ್ಲಿ ಜಾಹೀರಾತು ಹಾಕಿದರೆ ಅವನು ದಿವಾಳಿಯಾಗುತ್ತಾನೆ, ಕನ್ನಡದಲ್ಲಿ ಜಾಹೀರಾತು ಹಾಕುವ ಟಾಟಾ ಡೊಕೊಮೊದವನು ಉದ್ಧಾರವಾಗುತ್ತಾನೆ, ಅದಕ್ಕೇಕೆ ಇಲ್ಲಿ ಇಷ್ಟೊ೦ದು ದೊಡ್ಡ ಕೋಳಿ ಕಾಳಗ? ಕರ್ಮ ಕಾ೦ಡ!!

manju787 ಅವ್ರೆ, ಬಹಳ ಕಿರಿದಾಗಿಯೇ ಆದರೂ, ಸರಳವಾಗಿ ಮತ್ತು ನಿಖರವಾಗಿ ನಿಮ್ಮ ನಿಲುವು ವ್ಯಕ್ತ ಪಡಿಸಿರುವುದಕ್ಕೆ ನನ್ನಿ. ಈ ರೀತಿ ನಿಲುವು ವ್ಯಕ್ತವಾದರೆ ಚರ್ಚೆಯ ದಾರಿಯಾದರು ಕಂಡೀತು. ಅಂದ ಹಾಗೆ ಇಲ್ಲಿ ನಡೆಯುತ್ತಿರುವುದು ಯಾವ ಕಾಳಗವೂ ಅಲ್ಲ ಸಾರ್. ಕನ್ನಡಿಗರಲ್ಲಿ, ಅದರಲ್ಲೂ ಕೆಲವು ಕನ್ನಡಿಗರಲ್ಲಿ ಜಾಗೃತಿ ಮೂಡುವಾಗ ಈ ರೀತಿಯ ಕೋಲಾಹಲ ಕೇಳಿ ಬರುತ್ತದೆ. ಆದರೆ ಅದರ ಕೊನೆಯಲ್ಲಿ ಸಿಹಿಯಾದ ಅನುಭವ ತಪ್ಪಿದ್ದಲ್ಲ. ಒಟ್ಟಿನಲ್ಲಿ ಕನ್ನಡಿಗರಲ್ಲಿ ಜಾಗೃತಿ ಮೂಡಿದರೆ ಸಾಕು. ಬೆಂಗಳೂರಿನಲ್ಲೇ ಕನ್ನಡವನ್ನು ಮೂಲೆಗೆಸೆದು, ಸಾರ್ವಜನಿಕ ಜಾಗಗಳಲ್ಲಿ ಹಿಂದಿಯನ್ನು ಇಂಗ್ಲಿಷ್ ಲಿಪಿಯಲ್ಲಿ ಬರೆದು ಒಂದು ಜಾಹಿರಾತು ಮಾಡುವ ಅವಶ್ಯಕತೆಯಾದರು ಏನಿದೆ ಎಂಬ ಸರಳ ಪ್ರಶ್ನೆಯನ್ನೇ ನಮ್ಮ ಎಲ್ಲಾ ಕನ್ನಡಿಗ ಗೆಳೆಯರು ಕೇಳಿಕೊಂಡರೆ ಈ ರೀತಿಯ ಪರಿಸ್ಥಿತಿ ಇನ್ನು ಮುಂದೆ ಮತ್ತೆ ಬರದೇ ಹೋಗುವುದು. ಈ ಸರಳ ಸತ್ಯಾಂಶ ನಮಗೆ ತಿಳಿದರೆ ಸಾಕು, ಅಲ್ವ? ಏನಂತೀರ?

ಯಾವುದೇ ಸ೦ಸ್ಥೆ ಜಾಹಿರಾತು ಕೊಡುವುದು ಆದಷ್ಟೂ ಹೆಚ್ಚು ಗ್ರಾಹಕರನ್ನು ಸೆಳೆದು ತನ್ನ ವ್ಯಾಪಾರ ವೃದ್ಧಿ ಮಾಡಿಕೊಳ್ಳಲೇ ಹೊರತು ಸುಮ್ಮನೆ ಹಣ ವ್ಯಯಿಸುವುದಕ್ಕಲ್ಲ! ಏರ್ ಟೆಲ್ ನವರು ಆ೦ಗ್ಲ ಭಾಷೆಯಲ್ಲಿ ಹಿ೦ದಿ ಪದಗಳನ್ನು ಬಳಸಿ ಜಾಹಿರಾತು ನೀಡಿದರೆ, ಅಚ್ಚ ಕನ್ನಡದಲ್ಲಿ ಹೇಳುವುದಾದರೆ "ಚೆನ್ನಾಗಿ ಮು೦ಡಾಯಿಸಿಕೊಳ್ಳುತ್ತಾನೆ". ಅತ್ತ ಹಣವೂ ದ೦ಡ, ಇತ್ತ ಗ್ರಾಹಕರನ್ನೂ ತಲುಪಲಾಗದು, ಅದೇ ಇನ್ನಿತರ ಸ೦ಸ್ಥೆಗಳು ಕನ್ನಡದಲ್ಲಿ ಜಾಹಿರಾತು ನೀಡಿ ಹೆಚ್ಚು ಹೆಚ್ಚು ಗ್ರಾಹಕರನ್ನು ಹೊ೦ದುತ್ತಿವೆ, ಲಾಭ ಮಾಡಿಕೊಳ್ಳುತ್ತಿವೆ. ಇದನ್ನು ಆ ಭಾರ್ತಿ ಸ೦ಸ್ಥೆಯಲ್ಲಿ ಕುಳಿತಿರುವ ಮಹಾನ್ ಮೇಧಾವಿಗಳು ಅರ್ಥ ಮಾಡಿಕೊಳ್ಳದಿದ್ದಲ್ಲಿ ನಾವೇಕೆ ಕಚ್ಚಾಡಬೇಕು? ಸಾಯಲಿ ಬಿಡಿ!

ಸಾಯಲಿ ಬಿಡಿ. ಬಿಟ್ಟೆ! ಆದರೆ, ಅಭಿಪ್ರಾಯ ಅಥವಾ ಮಾತುಗಳ ವಿನಿಮಯ, ಒಂದು ಕಚ್ಚಾಟ ಎಂದು ನನಗನಿಸುವುದಿಲ್ಲ. ಹಾಗನಿಸಿದ್ದಲ್ಲಿ ಎಂದೋ ದೂರವುಳಿದುಬಿಡುತ್ತಿದ್ದೆ. :)

ನಿಮ್ಮ ಈ ಬ್ಲಾಗ್ ಅರ್ಥಪೂರ್ಣವಾಗಿದೆ ಆದರೆ ಏನ್ ಮಾಡ್ತೀರಾ ಎಲ್ಲರು ಆಂಗ್ಲ ಭಾಷೆಗೆ ಮೊರೆಹೋಗಿದ್ದಾರೆ ಆದರೆ ಕರ್ನಾಟಕದಲ್ಲಿ ಇದನ್ನು ಮಿತಿಗೊಳಿಸಬೇಕು. ದೀಪಾವಳಿ ಅಂದರೆ ದೀಪಗಳ ಸಾಲು ಎಂದರ್ಥ.

ಭಾರತದೆಲ್ಲೆಡೆ ಇಂಗ್ಲೀಷ್ ಮಾಧ್ಯಮದ ವಿದ್ಯಾಭ್ಯಾಸವೇ ಮೇಲುಗೈ ಸಾಧಿಸುತ್ತಿರುವುದರಿಂದ ಇತ್ತೀಚಿನ ಪೀಳಿಗೆ (ಅಂದರೆ ಸುಮಾರು ೧೪ವರ್ಷದ ಹಿಂದಿನಿಂದ)ಯ ಶೇಕಡಾ ೫೦ ಜನಕ್ಕೆ ಕನ್ನಡವೂ ಸೇರಿದಂತೆ ತಮ್ಮ ಸ್ಥಾನಿಕ/ಮಾತೃಭಾಷೆಯನ್ನು ಓದಲು ಬರುವುದಿಲ್ಲ. ಕನ್ನಡ ಓದಲು ಬಾರದಿದ್ದರೂ ಮಾತನಾಡುವ ಜನರಿಗಾಗಿ 'mast majja maadi' 'sakhat hot maga' 'namma metro' 'bangalore habba' 'eega nanna number' ಇತ್ಯಾದಿ ಜಾಹೀರಾತುಗಳನ್ನು ಸಂಸ್ಥೆಗಳು ತಯಾರುಮಾಡಿ ನೂರಾರು ಅಡಿ ದೊಡ್ಡ ಫಲಕಗಳನ್ನು ನಿಲ್ಲಿಸುತ್ತವೆ. ಅದೂ ಅಲ್ಲದೆ, ಹೊಟ್ಟೆಪಾಡಿಗಾಗಿ ಪರರಾಜ್ಯಗಳಿಂದ ಬೆಂಗಳೂರಿಗೆ ಬಂದು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವ ಬಹುತೇಕ ಮಂದಿಗೆ ತಿಳಿದಿರುವ ಕನ್ನಡವೆಂದರೆ ಇಂತಹ ಮುಜುಗರ ಹುಟ್ಟಿಸುವ ಪದಪುಂಜಗಳೇ. ಏರ್ಟೆಲ್ ತರಹದ ಕಂಪನಿಗಳಿಗೆ ಆರ್ಥಿಕವಾಗಿ ಸದೃಢರಲ್ಲದ ವರ್ಗದವರೂ ಗ್ರಾಹಕರಾಗಿರುವುದರಿಂದ ಅವರ ಜಾಹೀರಾತಿಗೆ ಹರಿಹರ, ಕೊಪ್ಪಳ ಯಲಬುರ್ಗಿಯಂತಹ ಊರಿಗೆ ಸಂಪೂರ್ಣ ಕನ್ನಡ ಹಾಗು ಬೆಂಗಳೂರಿನ ಹೈ-ಫೈ ಮಂದಿಗಾಗಿ ಇಂಗ್ಲಡವನ್ನು ಉಪಯೋಗಿಸುವ ತಂತ್ರ (strategy) ಅನಿವಾರ್ಯ(?) ಇದಕ್ಕೆ ಹಿಂದೀ ಭಾಷೆಯೇನೂ ಹೊರತಲ್ಲ. ಲಲಿತ್ ಪುರ, ಬಿಜ್ನೋರ್, ಖಾಂಡವಾ ಇತ್ಯಾದಿಗಳಲ್ಲಿ ಈ ರೀತಿಯ ಫಲಕಗಳು ಸಾಮಾನ್ಯ. ಆದರೂ ಇಂಗ್ಲೀಷಿಗೆ ಎಲ್ಲ ಭಾಷೆಗಳನ್ನು ನುಂಗಿ ನೀರುಕುಡಿಯುವಷ್ಟು ಮೇಲುಗೈ ಸಾಧಿಸಲು ಆಗಿಲ್ಲ. ಕನ್ನಡಭಾಷೆಯ ಮೇಲಿನ ಉಪೇಕ್ಷೆ ಇದೇ ರೀತಿ ಮುಂದುವರೆಯುತ್ತ ಹೋದಲ್ಲಿ ಆದರೆ ಕೆಲವೇ ವರ್ಷಗಳಲ್ಲಿ ಇಂಗ್ಲಡವೂ ಹೋಗಿ ಇಂಗ್ಲೀಷೇ ಎಲ್ಲ ಕಡೆ ರಾರಾಜಿಸುವುದು. ಪ್ರತಿಭಟನೆಯೊಂದರಿಂದಲೇ ಇದನ್ನು ನಿವಾರಿಸಲು ಆಗದು. ನಮ್ಮ ನಂತರದ ಪೀಳಿಗೆಗೆ ಕನ್ನಡದಲ್ಲಿ ವ್ಯವಹರಿಸಲು ಪ್ರೀತಿಯನ್ನು ನಾವೇ ಹುಟ್ಟಿಸಿ, ಅವು ಅದನ್ನು ಬೆಳೆಸಿಕೊಂಡು ಹೋದರೆ ಸಾಧ್ಯ.