ಪೊರಕೆ

To prevent automated spam submissions leave this field empty.


ಕಸ ಗುಡಿಸುವುದು ಕಷ್ಟದ ಕೆಲಸ. ಅದರಲ್ಲೂ ದಿನವಿಡೀ ಅದೇ ಉದ್ಯೋಗವಾದರೆ - ಪೌರ ಕಾರ್ಮಿಕರಂತೆ - ದೇವರೇ ಗತಿ. ಅವರಿಗೆ ಬೆನ್ನು ನೋವು ಸೊಂಟ ನೋವು ಕಟ್ಟಿಟ್ಟ ಬುತ್ತಿ. ಬೆಂಗಳೂರಿನ ಪೌರ ಕಾರ್ಮಿಕರಿಗೆ ರಸ್ತೆ ಗುಡಿಸಲು ಬರಿ ಕೈ ಪೊರಕೆ ಕೊಟ್ಟಿರುತ್ತಾರೆ. ಅದನ್ನು ಬಳಸಬೇಕಾದರೆ ಬಗ್ಗಿಯೇ ಕೆಲಸ ಮಾಡಬೇಕು. ಸುಮಾರು ೫೦ ವರ್ಷದ ಹಿಂದೆ ನಿಂತು ಕಸಗುಡಿಸುವ ಸಾಧನವನ್ನು ನಾನು ನೋಡಿದ್ದೆ. ಬೀದಿ ಗುಡಿಸುವವರನ್ನು ನೋಡಿದಾಗಲೆಲ್ಲಾ ಅದರ ನೆನಪು ಬರುತ್ತಿತ್ತು. ಹೇಗೆ ಆ ಸಾಧನ ಕಣ್ಮರೆಯಾಯಿತು ಅಂತ ನನ್ನನ್ನು ಕಾಡುತ್ತಿತ್ತು. ಹೋದ ವರ್ಷ ಪಂಚಲಿಂಗದರ್ಶನಕ್ಕೆ ತಲಕಾಡಿಗೆ ಹೋಗಿದ್ದಾಗ ಹಳೆ ನಿಲುವು-ಪೊರಕೆ (ನಾನು ಕೊಡುತ್ತಿರುವ ಹೆಸರು) ಕಣ್ಣಿಗೆ ಬಿತ್ತು. ಅದನ್ನು ನನ್ನ ಚಿತ್ರ ಗ್ರಾಹಕದಿಂದ ಸೆರೆಹಿಡಿದಿದ್ದೆ. ಆದರೆ ಅದು ಎಲ್ಲೋ ಹುದುಗಿಕೊಂಡು ಬಿಟ್ಟಿತ್ತು. ಈಗಷ್ಟೇ ಕಣ್ಣಿಗೆ ಬಿತ್ತು ಅದಕ್ಕೆ ಹುಟ್ಟಿತು ಈ ಬರಹ.


ಲೇಖನ ವರ್ಗ (Category): 

ಪ್ರತಿಕ್ರಿಯೆಗಳು