ಪೊರಕೆ

To prevent automated spam submissions leave this field empty.


ಕಸ ಗುಡಿಸುವುದು ಕಷ್ಟದ ಕೆಲಸ. ಅದರಲ್ಲೂ ದಿನವಿಡೀ ಅದೇ ಉದ್ಯೋಗವಾದರೆ - ಪೌರ ಕಾರ್ಮಿಕರಂತೆ - ದೇವರೇ ಗತಿ. ಅವರಿಗೆ ಬೆನ್ನು ನೋವು ಸೊಂಟ ನೋವು ಕಟ್ಟಿಟ್ಟ ಬುತ್ತಿ. ಬೆಂಗಳೂರಿನ ಪೌರ ಕಾರ್ಮಿಕರಿಗೆ ರಸ್ತೆ ಗುಡಿಸಲು ಬರಿ ಕೈ ಪೊರಕೆ ಕೊಟ್ಟಿರುತ್ತಾರೆ. ಅದನ್ನು ಬಳಸಬೇಕಾದರೆ ಬಗ್ಗಿಯೇ ಕೆಲಸ ಮಾಡಬೇಕು. ಸುಮಾರು ೫೦ ವರ್ಷದ ಹಿಂದೆ ನಿಂತು ಕಸಗುಡಿಸುವ ಸಾಧನವನ್ನು ನಾನು ನೋಡಿದ್ದೆ. ಬೀದಿ ಗುಡಿಸುವವರನ್ನು ನೋಡಿದಾಗಲೆಲ್ಲಾ ಅದರ ನೆನಪು ಬರುತ್ತಿತ್ತು. ಹೇಗೆ ಆ ಸಾಧನ ಕಣ್ಮರೆಯಾಯಿತು ಅಂತ ನನ್ನನ್ನು ಕಾಡುತ್ತಿತ್ತು. ಹೋದ ವರ್ಷ ಪಂಚಲಿಂಗದರ್ಶನಕ್ಕೆ ತಲಕಾಡಿಗೆ ಹೋಗಿದ್ದಾಗ ಹಳೆ ನಿಲುವು-ಪೊರಕೆ (ನಾನು ಕೊಡುತ್ತಿರುವ ಹೆಸರು) ಕಣ್ಣಿಗೆ ಬಿತ್ತು. ಅದನ್ನು ನನ್ನ ಚಿತ್ರ ಗ್ರಾಹಕದಿಂದ ಸೆರೆಹಿಡಿದಿದ್ದೆ. ಆದರೆ ಅದು ಎಲ್ಲೋ ಹುದುಗಿಕೊಂಡು ಬಿಟ್ಟಿತ್ತು. ಈಗಷ್ಟೇ ಕಣ್ಣಿಗೆ ಬಿತ್ತು ಅದಕ್ಕೆ ಹುಟ್ಟಿತು ಈ ಬರಹ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪ್ರಸನ್ನ ನಿಮ್ಮ ಬುದ್ದಿ ಚಾರ್ತರ್ಯಕ್ಕೆ ಮೆಚ್ಚಲೇಬೇಕು. ತಕ್ಷಣವೇ ಪೋಟೋ ಹಾಕಿದ್ದೀರಾ.

ಕೋಮಲ್, ಇದರಲ್ಲಿ ನನ್ನ ಬುದ್ಧಿ ಚಾತುರ್ಯವೇನೂ ಇಲ್ಲ. ಸಂಪದ ಚಿತ್ರಪುಟಕ್ಕೆ ಈ ಫೋಟೋವನ್ನು mnsrao ಅವರೇ ಹಾಕಿದ್ದರು. ಆದರೆ ಈ ಲೇಖನದಲ್ಲಿ ಆ ಚಿತ್ರವನ್ನು ಬಳಸಲು ಅವರಿಗೆ ತೊಂದರೆಯಾಗುತ್ತಿದೆ ಅಂತ ಅನಿಸಿ ನಾನೇ ಕಾಮೆಂಟಿನಲ್ಲಿ ಚಿತ್ರ ಹಾಕಿದೆ. :-)

ನನಗೆ ನಿಜವಾಗಿ ತೊಂದರೆ ಆಯಿತು. ನಿಮಗೆ ಬಹಳ ಆಭಾರಿ.