ಸಿದ್ದೇಸ ಟಿವಿ - ಜಾತಕ ಫಲ

To prevent automated spam submissions leave this field empty.

ಮಾನ್ಯ ವೀಕ್ಷಕರೆ, ಎಂದಿನಂತೆ ಇವತ್ತೂ ಕೂಡ ನಮ್ಮೊಂದಿಗೆ ಅರುಣ್ ಜೈನ್್ರವರು ಜಾತಕದ ಫಲ ಹೇಳುತ್ತಿದ್ದಾರೆ. ಇದನ್ನು ಕೇಳಿ ನಿಮಗೆ ಒಳ್ಳೆಯದಾದರೆ ನನ್ನ ಅಕೌಂಟ್ ನಂಬರ್ ನೀಡುತ್ತೇನೆ, ಅಲ್ಲಿಗೆ ನಿಮ್ಮ ಹಣ ಸಂದಾಯ ಮಾಡಿ. ಏನಾದರೂ ಉಲ್ಟಾ ಹೊಡೆದರೆ ಜೈನ್್ರವರ ಮನೆಯ ವಿಳಾಸ ಹಾಗೇ ಅವರ ಸ್ಥಿರ ಮತ್ತು ಚರ ದೂರವಾಣಿಯ ನಂಬರ್ ನೀಡುತ್ತೇನೆ. ಹುಡುಕಿಕೊಂಡು ಹೋಗಿ ಹೊಡೆದು ಬನ್ನಿ.ನೀವೂ ಪ್ರಶ್ನೆಗಳನ್ನು ಕೇಳಿ. ಆ ನಂತರ ನಿಮಗೆ ಸಿದ್ದೇಸ ಟಿವಿಯಿಂದ ಕರೆನ್ಸಿ ಹಾಕಿಸುತ್ತೇವೆ. ಜೈನ್ ಸಂಭಾವನೆಯಲ್ಲಿ ಕಟ್ ಮಾಡಿ.

ಸಿದ್ದೇಸ ಟಿವಿ : ನಮಸ್ಕಾರ ಅರುಣ್ ಜೈನ್್ರವರೆ, ಇವತ್ತಿನ ಫಲಾಫಲಗಳ ಬಗ್ಗೆ ನಮ್ಮ ವೀಕ್ಸಕರಿಗೆ ತಿಳಿಸಿ

ಅರುಣ್ ಜೈನ್ : ನೋಡಿಪ್ಪಾ, ಇವತ್ತು ಸೂರ್ಯ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುವುದರಿಂದ ಸಾಕಷ್ಟು ತೊಂದರೆಯಿದೆ. ಹಾಗಾಗಿ ಎಲ್ಲರೂ ತಮ್ಮ ಮನೆಯ ಹತ್ತಿರ ಇರುವ ದೇವಸ್ಥಾನಗಳಿಗೆ ಎಳ್ಳು ದೀಪ ಹಚ್ಚಬೇಕು. ಅದರಲ್ಲೂ ಹೆಣ್ಣು ಮಕ್ಕಳು ನೈಟಿಯ ಬದಲು ಸೀರೆಯನ್ನು ಉಟ್ಟಿಕೊಂಡು ಹಚ್ಚಿದರೆ ಮತ್ತಷ್ಟು ಒಳ್ಳೆಯದು. ಮೋಡ ಕವಿದ ವಾತವರಣ ಇರುವ ಕಾರಣ ಅಲ್ಲಲ್ಲಿ ಮಳೆಯಾಗುವ ಸಂಭವವಿದೆ. ಇದನ್ನ ಬೆಳಗ್ಗೆ ರೇಡಿಯೋದಲ್ಲೇ ಹೇಳವ್ರೆ ಬುಡಿ.

ಸಿದ್ದೇಸ ಟಿವಿ : ಸರ್ ನಿಮಗೆ ಪೋನ್ ಬಂದಿದೆ

ಜೈನ್ : ಯಾರು, ಸುರೇಶ್ ಹೆಗ್ಡೆಯವರಾ. ನೋಡಿ ಸಾರ್ ನಿಮ್ಮ ಜಾತಕದಲ್ಲಿ 8ನೇ ಮನೆಯಲ್ಲಿ ಶನಿ, 9ನೇ ಮನೆಯಲ್ಲಿ ಗುರು ಇರುವುದರಿಂದ ಈ ತಿಂಗಳು ಕವನ ಬರೆಯದೇ ಆದಷ್ಟು ಕಥೆಗಳನ್ನು ಬರೆದರೆ ನೀವು ಸಾಕಷ್ಟು ಪ್ರಸಿದ್ದಿ ಹೊಂದುತ್ತೀರಿ. ಹಾಗೆ ಹೊರಗೆ ಪ್ರಯಾಣ ಮಾಡುವಾಗ ಕಣ್ಣಿಗೆ ಗ್ಲಾಸ್ ಹಾಕುವುದು, ಊಟಕ್ಕೆ ಉಪ್ಪಿನ ಕಾಯಿ ಬಳಸುವುದರಿಂದ ಒಳ್ಳೆಯದು. ಆದಷ್ಟು ಬೇಗ ನೀವು ಮನೆಯಲ್ಲಿ ಕಾಳಿ ಶಾಂತಿ ಮಾಡಿಸಿದರೆ ಒಳ್ಳೆಯದು.

ಸಿದ್ದೇಸ ಟಿವಿ : ಗುರುಗಳೆ ಮತ್ತೊಂದು ಕಾಲ್ ನಿಮಗೆ

ಜೈನ್ : ಯಾರು ಗೋಪಿನಾಥರ, ನೋಡಿ ನಿಮಗೆ ಪಕ್ಕದ ಮನೆಯಲ್ಲೇ ಶನಿ ಹಾಗೇ ಹಿಂದಗಡೆ ಮನೆಯಲ್ಲಿ ಬುಧ ಇರುವುದರಿಂದ ನೀವು ಹೆಲಿಮೆಟ್ ಬಳಸಿದರೆ ಉತ್ತಮ, ಇಲ್ಲದೇ ಹೋದಲ್ಲಿ ನಿಮಗೆ ಯಾವಾಗಬೇಕಾದರೂ ಆಕ್ರಮಣ ಆಗಬಹುದು. ಅದು ನಿಮ್ಮ ಹೆಂಡತಿಯಿಂದಲೇ ಆದರೂ ಆಶ್ಚರ್ಯವಿಲ್ಲ. ಯಾವುದಕ್ಕೂ ಕಣಿಗೆ ಶಾಂತಿ ಮಾಡಿಸಿ. ಒಂದು ನಾಲ್ಕು ಬ್ರಾಹ್ಮಣರಿಗೆ ದಕ್ಷಿಣೆ ನೀಡಿದರೆ ಉತ್ತಮ. ಸರ್ ನಾನು ಜಯಂತ್, ನೋಡಿಪ್ಪಾ, ನಿಮ್ಮಾ ಎಲ್ಲಾ ಮನೆಯಲ್ಲೂ ಶನಿ ಗ್ರಹಗಳೇ ಇರುವುದರಿಂದ ಹೆಚ್ಚಾಗಿ ಗೋಡೆ, ಬಂಡೆಗೆ ಒರಗಿ ನಿಂತುಕೊಳ್ಳಬೇಡಿ. ಆದಷ್ಟು ಅದರಿಂದ ದೂರವಿರಿ. ನಿಮ್ಮ ಮೇಲೆ ಇವುಗಳು ಯಾವಾಗ ಬೇಕಾದರೂ ಬೀಳಬಹುದು. ಹಾಗಾಗಿ ನೀವು ಗೋಡೆ ಶಾಂತಿ ಮಾಡಿಸಿದರೆ ಒಳ್ಳೆಯದು. ಏನ್ರಪ್ಪಾ ನೀವು ಒಂದೇ ಮೊಬೈಲ್ನಾಗೆ ಇಬ್ಬಿಬ್ಬರು ಪೋನ್ ಮಾತ್ತೀರಾ. ಇದೇನು ಬೈಟು ಚಾನ

ಸಿದ್ದೇಸ ಟಿವಿ : ಸರ್ ಮತ್ತೊಂದು ಕಾಲ್.

ಜೈನ್ : ಹಲೋ ಹೇಳಿಮ್ಮಾ, ಸಾರ್ ನಾನು ಕಮಲಾ ಅಂತ, ಸಂಬಳ ಹೆಚ್ಚಾಗುವುದಕ್ಕೆ ಏನು ಮಾಡಬೇಕು. ನೋಡಿಮ್ಮಾ ಮೊದಲು ನೀವು ನಿಮ್ಮ ಕೆಲಸ ಸರಿಯಾಗಿ ಮಾಡಿ. ಹಾಗೇ ನಿಮ್ಮ ಬಾಸಿಗೆ ಅವಾಗವಾಗ ತಲೆ ಮೇಲೆ ಮಟುಕುತ್ತಾ ಇರಿ. ಅದಕ್ಕೂ ಬಗ್ಗದೆ ಹೋದರೆ ಕೊಳ್ಳೇಗಾಲಕ್ಕೆ ಹೋಗಿ ಮಾಟ ಮಾಡಿಸಿ. ಅಮ್ಮಾ. ಅದು ನಂಗೂ ಗೊತ್ತು. ಈಗ ಏನು ಮಾಡಬೇಕು ಹೇಳಿ ಅಂದ್ರು ಕಮಲಾ. ನೋಡಿಮ್ಮಾ ನೀವು ನಿಮ್ಮ ಕಂಪ್ಯೂಟರ್್ನ್ನು ಬಲಭಾಗಕ್ಕೆ ತಿರುಗಿಸಿ, ಎಡಗಡೆಯಿಂದ ಟೈಪ್ ಮಾಡಿ. ಆಗ ವಾಸ್ತು ಸರಿಹೋಗುತ್ತದೆ. ಆದಷ್ಟು ಬ್ಯಾಗಿನಲ್ಲಿ ನಿಂಬೆಹಣ್ಣು ಇಟ್ಟುಕೊಳ್ಳಿ. ತಲೆ ಸುತ್ತು ಬಂದಾಗ ನೆತ್ತಿಗೆ ಹಾಕಿ ತಿಕ್ಕಬಹುದು ಹಾಗೇ ಇದು ವಿಘ್ನ ನಿವಾರಕ.

ಸರ್ ನಾನು ಶಾನಿ ಅಂತ, ನೋಡಮ್ಮಾ ನೀನು ಗೌಡಪ್ಪಂಗೆ ಸ್ನಾನ ಮಾಡಿಸ್ದಾಗಿನಿಂದ ಅವನ ದರಿದ್ರ ನಿನಗೆ ಬಂದಿದೆ. ಹಾಗಾಗಿ ಗಂಗೆ ಶಾಂತಿ ಜೊತೆಗೆ ಗೌಡಪ್ಪನ ಶಾಂತಿ ಮಾಡಿಸಮ್ಮಾ. ಒಳ್ಳೆಯದಾಗಲಿ

ಸಾರ್ ನಾನು ವೆಂಕಟೇಶ್ ಕಾಮತ್ ಕುಂಬ್ಳೆ ಅಂತ, ನೋಡಿ ನಿಮ್ಮಲ್ಲಿ ಮೂರು ಹೆಸರು ಇದೆ, ಒಂದು ಕಾಮತ್. ಅಂದರೆ ಹೋಟೆಲ್.ಇನ್ನೊಂದು ಕುಂಬ್ಳೆ. ಇವೆರೆಡು ನಿಮ್ಮ ಆರೋಗ್ಯಕ್ಕೆ ಹಾನಿಕರ. ಇದಕ್ಕೆ ಪುನರ್ವಸು ನಕ್ಷತ್ರ, ಮೀನ ರಾಷಿ ಬರುವುದರಿಂದ ಆಸ್ಪತ್ರೆಯಲ್ಲಿ  ಮತ್ಸ್ಯ ಶಾಂತಿ ಮಾಡಿಸಿದರೆ ಉತ್ತಮ.

ಸರ್ ನಾನು ದುಬೈ ಮಂಜಣ್ಣ ಅಂತಾ. ನೋಡಿ ಮಂಜುರವರೆ ನಿಮ್ಮ ಮನೆ ಉತ್ತರ ಮುಖಾಭಿಯಾಗಿರುವುದರಿಂದ ನಿಮಗೆ ಆನೆ ಕಾಟ ಹೆಚ್ಚಿದೆ. ಹಾಗೇ ನಿಮ್ಮ ಮಗಳು ಸಾವಿತ್ರಿ ಧಾರಾವಾಹಿಯಲ್ಲಿ ನಟನೆ ಮಾಡುತ್ತಿರುವುದರಿಂದ 9ನೇ ಮನೆಯಲ್ಲಿ ಗುರು, 10ನೇ ಮನೆಯಲ್ಲಿ ಬುಧ ಇರುವುದರಿಂದ ನೀವು ದಿನ ನಿತ್ಯ ಸಿದ್ದೇಸನ ಜಪ ಮಾಡಿದರೆ ಒಳಿತು ಆಗುತ್ತದೆ. ಆಮೇಲೆ ರಾತ್ರಿಹೊತ್ತು ತಿರುಗುವುದನ್ನು ಕಡಿಮೆ ಮಾಡಿ, 8ಗಂಟೆಯೊಳಗೆ ಮನೆ ಸೇರಿ. ಇದಕ್ಕೆ ಶ್ವಾನ ಶಾಂತಿ ಮಾಡಿದರೆ ಉತ್ತಮ. ಹಾಗೇ ಗೌತಮಿಗೆ ಜೀ ಶಾಂತಿ ಮಾಡಿಸಿ.

ಸಾರ್ ನನ್ನ ಹೆಸರು ಹನಮಂತು ಅಂತಾ, ಸಂಪದ ನಿರ್ವಾಹಕ ತಂಡದಲ್ಲಿ ಕೆಲಸ ಮಾಡುತ್ತಿದ್ದೇನೆ,. ಸಂಬಳ ಜಾಸ್ತಿಯಾಗಬೇಕು ಏನು ಮಾಡಲಿ ಸಾರ್. ಸರ್ ಇವರು ನಮ್ಮ ಊರಿನೋರು ಸ್ವಲ್ಪ ಸರಿಯಾಗಿ ಹೇಳಿ ಸಾ. ನೋಡಿ ಹನುಮಂತು. ನಿಮ್ಮ ಹೆಸರಲ್ಲೇ ಆಂಜನೇಯ ಇರುವುದರಿಂದ ಮೆಟ್ಟಿಲು ಇಳಿಯುವಾಗ ಕಡೆಯ ಮೂರು ಮೆಟ್ಟಿಲನ್ನು ಜಂಪ್ ಮಾಡಿ ಲಾಗ ಹಾಕುವುದರಿಂದ 7ನೇ ಮನೆಯ ಶನಿ ಹಾಗೇ 9ನೇ ಮನೆಯ ಬುಧ ಸರಿಯಾಗುತ್ತಾರೆ. ಹಾಗೇ ನಿಮ್ಮ ಕಂಪ್ಯೂಟರ್್ಗಳನ್ನು ಮೇಲೆ ತೂಗು ಹಾಕಿ ಕೆಳಗಿನಿಂದ ನೋಡಿ ವಾಸ್ತು ಸರಿಯಾಗುತ್ತದೆ.

ಸರ್ ನಾಡಿಗರ ಪೋನ್. ಸರ್ ಈಗತಾನೆ ಹನುಮಂತು ಪೋನ್ ಮಾಡಿದ್ದರಲ್ಲಾ. ಅವರು ನಮ್ಮ ಆಫೀಸಿನಲ್ಲೇ ಇರೋದು. ಅಂತಹ ಐಡಿಯೆಲ್ಲಾ ಕೊಡಬೇಡಿ ಸಾರ್. ಕಡೆಗೆ ಅಂಗೇ ಮಕ್ಕೊಂತಾರೆ ಅಂದ್ರು,.

ಸಾರ್ ನಾನು ಕೊಟ್ಟಿಗೆಹಳ್ಳಿಯಿಂದ ಗಣೇಶ್ ಅಂತ ಸಾರ್ ಸಾನೇ ಗ್ಯಾಸ್ ಪ್ರಾಬ್ಲಮ್ ಏನು ಮಾಡಬೇಕು ಸಾ. ರೀ ಅದಕ್ಕೆ ಬೆಳಗ್ಗೆ ಆರೋಗ್ಯ ಕಾರ್ಯಕ್ರಮ ಬತ್ತದೆ ಅದ್ರಾಗೆ, ಡಾ.ತಿಪ್ಪೇಸಿ ಅಂತ ಇರ್ತಾರೆ ಅವರಿಗೆ ಕೇಳಿ. ಸಾರ್ ಸಾ.

ಸಾರ್ ನಾನು ಪ್ರಸನ್ನ ಅಂತಾ ಈ ಪಿಯುಸಿ ಪ್ರಶ್ನೆಪತ್ರಿಕೆ ಎಲ್ಲಿ ಸಿಗುತ್ತೆ ಗೊತ್ತ ಸಾ. ಸಾರ್ ಇವನು ಓದಿ ಬರೆಯೋ ಆಸಾಮಿಯಲ್ಲಿ. ನಂಬರ್ ಇಸ್ಕಳ್ಳಿ. ಬೋರ್ಡಿಗೆ ಪೋನ್ ಮಾಡುವಾ. ಹಲೋ ಹಲೋ . ಕಟ್ ಮಾಡಿಬಿಟ್ರು.

ಸರ್ ನಾನು ಆನಂದ್ ಶಾಸ್ತ್ರಿ ಅಂತ. ನೋಡಿ ಶಾಸ್ತ್ರಿಗಳೆ ನಿಮಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯ ಇದೆ. ಆದಷ್ಟು ನೀವು ಆಡಳಿತ ಪಕ್ಷದ ವಿರೋಧ ಬರೆದರೆ ಉತ್ತಮ ಭವಿಷ್ಯ ಇದೆ. ಹಾಗೇ ಇದನ್ನು ಕ್ರೆಡಿಟ್, ಡೆಬಿಟ್ ಮಾಡಿಸಿ ಆಡಿಟ್ ಗೆ ಹಾಕಿದರೆ ಉತ್ತಮ.

ಸರ್ ನಾನು ನಾವಡ ಅಂತ. ನಾವಡ ಮೂರು ಶಬ್ದಗಳು ಇರುವುದರಿಂದ ನಿಮಗೆ ಹಲ್ಲು ನೋವು, ಬೆನ್ನು ನೋವಿನಂತಹ ಭಾದೆಗಳು ಇದ್ದೇ ಇರುತ್ತದೆ. ಇದಕ್ಕೆ ಹಮ್ಜಾ ಮುಲಾಮ್ ಬಳಸಿ. ಹಾಗೇ ನೋವು ಶಾಂತಿ ಮಾಡಿಸಿ ಒಳ್ಳೆಯದು.

ಸಾರ್ ನಾನು, ಶರ್ಮಾ ಅಂತ. ನೋಡಿ ಶರ್ಮರವರೆ ನಿಮಗೆ ಈಗ 7ಶನಿ ಕಾಟ ಇರುವುದರಿಂದ ಜೇನು ಹಿಡಿಯುವುದನ್ನು ನಿಲ್ಲಿಸಿದರೆ ಉತ್ತಮ. ಇಲ್ಲದೇ ಹೋದಲ್ಲಿ ನಿಮಗೆ ಪ್ರಾಣಾ ಹಾನಿಯಾಗಬಹುದು. ಹಾಗಾಗಿ ದಿನ ನಿತ್ಯ ಶಿವನ ತಲೆ ಮೇಲೆ ಒಂದು ಬಾಟಲ್ ಜೇನು ತುಪ್ಪ ಹಾಕಿ. ಜೊತೆಗೆ ಮನೆಯಲ್ಲಿ ಒಂದು ತಿಂಗಳ ಕಾಲ ವಿಶೇಷ ಪೂಜೆಗಳನ್ನು ನಡೆಸುವುದರಿಂದ ನಿಮಗೆ ಒಳ್ಳೆಯದಾಗುತ್ತದೆ. ಆದಷ್ಟೂ ಮುಖದ ಮೇಲೆ ಕೈ ಇಡಬೇಡಿ. ಕುಜ ದೋಷವಾಗುತ್ತದೆ. ಹಾಗೇ ರಾಹು ಶಾಂತಿ ಮಾಡಿಸಿ.

ಸರ್ ನಾನು ರಾಗೋಶಾ ಅಂತಾ, ನೋಡಿ ನಿಮ್ಮ ಹೆಸರಿನಲ್ಲೇ ಸಮಸ್ಯೆ ಇದೆ. ರಾ ಧಾತು ಮೇಲೆ ಗೋಶಾ ಹಾಕಿರಿವುದರಿಂದ ನೀವು ಬುರ್ಖಾ ಶಾಂತಿ ಮಾಡಿಸಿ. ಈರುಳ್ಳಿಯ ಬಜ್ಜಿ ಜೊತೆಗೆ ಬೋಂಡಾ ದಿನ ನಿತ್ಯ ಮಾಡಿದರೆ ನಿಮಗೆ ಎಣ್ಣೆ ದೋಷ ಹೋಗುತ್ತದೆ.

ಇನ್ನೂ ನಾಳೆ ನಮ್ಮ ನಿಮ್ಮ ಭೇಟಿ ಸಿದ್ದೇಸ ಟಿವಿಯಲ್ಲಿ

ಈಗ ನೋಡಿ ಯೋಗಾಸನ ಕಾರ್ಯಕ್ರಮ,. ಚಾಪೆ ಹಾಕ್ಕೊಂಡು ಸಿದ್ದರಾಗಿರಿ. ವ್ಯಾಯಾಮ ಮಾಡಕ್ಕೆ

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕೋಮಲ್ ಅಣ್ಣ ಎಲ್ಲಿಂದೆಲ್ಲ ಆಲೋಚನೆ ಬರುತ್ತಪ್ಪಾ ನಿಮಗೆ ಅಂತ ತಿಳಿಯುವುದಿಲ್ಲ !!! ಲೇಖನ ಸೂಪರ್... ಅಂದಹಾಗೆ ಮತ್ಸ್ಯ ಶಾಂತಿ ಮಾಡಲು ಒಂದು ಒಳ್ಳೆ ಪುರೋಹಿತರನ್ನು ನಿಯೋಜಿಸಿದರೆ ಒಳ್ಳೇದಿತ್ತು !!! ಕಾಮತ್ ಕುಂಬ್ಳೆ

ಕಾಮತರೆ ಮತ್ಸ್ಯ ಶಾಂತಿ ಮಾಡಕ್ಕೆ ಮೀನು ಹಿಡಿಯೋರನ್ನೇ ಕರೆದುಕೊಂಡು ಬರಬೇಕು. ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು

ಕೋಮಲ್, ನಕ್ಕು ಸುಸ್ತಾಯಿತು. ಅನಿವಾರ್ಯವಾಗಿ ಸುಮಾರು ದಿನಗಳಿಂದ ಬಿಡುವಿರಲಿಲ್ಲ. ನಿಮ್ಮ ಕೆಲವು ಹಳೆಯ ಹಾಸ್ಯಬರಹಗಳನ್ನೂ ಓದಿದೆ. ನೀವು ಮತ್ತು ಗೌಡಪ್ಪನ ಟೀಮಿನಿಂದ ನನಗೂ ಸನ್ಮಾನ ಮಾಡಿದ್ದ ಕುರಿತು ಓದಿ ಸಂತಸಪಟ್ಟೆ.

ಕೋಮಲ್ ಅವರೇ ನೀವು ನನ್ನ ಬಗ್ಗೆ ತಪ್ಪು ತಿಳಿದುಕೊಂಡಿದ್ದೀರಿ ಅನ್ನಿಸುತ್ತೆ , ನನಗೆ "ಮಾನವ ಕುಲವೊಂದೆ" ಎನ್ನುವ ಧರ್ಮದಲ್ಲಿ ನಂಬಿಕೆಯಿದ್ದರೂ ನಾನು ಬುರ್ಖಾವಾಲೀ ಅಲ್ಲ ನಾನು "ಸಸ್ಯಾಹಾರಿ ಹಿಂದೂ ಕುಟುಂಬದವಳು!!!! " ನಿಮ್ಮ ಹಾಸ್ಯ ಬರಹ ಚೆನ್ನಾಗಿದೆ