ಚುರ್ಮುರಿ - ೧೦

To prevent automated spam submissions leave this field empty.

೨೮) ನಮ್ಮ ದೇಶದಲ್ಲಿ ಮಹಾತ್ಮರಾಗುವುದರಿಂದ ಆಗುವ ಲಾಭಕ್ಕಿಂತ ನಷ್ಟಗಳೇ ಹೆಚ್ಚು.

 

೨೯) ಅವರಿಬ್ಬರೂ ಸಹೋದ್ಯೋಗಿಗಳು, ಒಬ್ಬ ಬ್ರಾಹ್ಮಣ, ಇನ್ನೊಬ್ಬ ದಲಿತ. ಬ್ರಾಹ್ಮಣ ಮೊದಲ ದರ್ಜೆಯ ಕ್ಲರ್ಕ್ ಆಗಿದ್ದ, ಆಮೇಲೆ ಸೇರಿದ ದಲಿತ ಎರಡನೇ ದರ್ಜೆಯ ಕ್ಲರ್ಕ್ ಆಗಿ ಬ್ರಾಹ್ಮಣನ ಕೈಕೆಳಗೆ ಕೆಲಸ ಮಾಡುತ್ತಿದ್ದ. ಸ್ವಲ್ಪ ವರ್ಷಗಳ ನಂತರ ದಲಿತ ಸುಪರಿಟೆನ್ಡೆಂಟ್ ಆದ. ಬ್ರಾಹ್ಮಣ ಇನ್ನೂ ಅದೇ ಹುದ್ದೆಯಲ್ಲಿದ್ದಾನೆ ಆದರೆ ದಲಿತನ ಕೈಕೆಳಗೆ.

 

೩೦) ಮಲ್ಲಿಕಾ ಶೆರಾವತಳನ್ನು ದೇವಸ್ಥಾನಕ್ಕೆ ಸೀರೆ ಯಾಕೆ ಹಾಕಿಕೊಂಡು ಹೋದಳೆಂದು ಯಾರೋ ಕೇಳಿದ್ದಾರೆ. ಆ ಪುಣ್ಯಾತ್ಗಿತ್ತಿ ಅಲ್ಲಾದರೂ ಬಟ್ಟೆಯಲ್ಲಿರಲು ಬಿಡಿ.

 

೩೧) ಆಗೆಲ್ಲ ಬೆಳಗ್ಗೆ ಬಹುತೇಕ ಮನೆಗಳಲ್ಲಿ ಬೆಳಗ್ಗೆ ಕೌಸಲ್ಯ ಸುಪ್ರಜಾ ರಾಮ. ಈಗ ಬೆಳಗ್ಗೆ ಸಕತ್ ಹಾಟ್ ಮಗಾ, ಮಸ್ತ್ ಮಜಾ ಮಾಡಿ, ಕೇಳಿ ಕೇಳಿಸಿ.

 

೩೨) ಅವಳು ೫.೫ ಅಡಿ ಎತ್ತರ ಇದ್ದರೂ ಹೈ ಹೀಲ್ಡ್ ಚಪ್ಪಲಿ ಹಾಕಿಕೊಂಡಿದ್ದಳು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಎಲ್ಲಾ ಐದೂ ಸೂಪರ್.. ಚಿಕ್ಕು.. ಈಗಿನ ಥರಾ ಹೇಳೋದಾದ್ರೆ, ಲೇಟಾದ್ರೂ ಸಕ್ಕತ್ ಹಾಟಾಗಿದೆ!!! ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

:) ನೀವು ಹೇಳಿದ್ರಲ್ಲ ಕನಿಷ್ಠ ೫ ಅಂತ ಹಾಗಾಗಿ ಸ್ವಲ್ಪ ಲೇಟ್. ಧನ್ಯವಾದ ನಾವಡವ್ರೆ

<<೩೨) ಅವಳು ೫.೫ ಅಡಿ ಎತ್ತರ ಇದ್ದರೂ ಹೈ ಹೀಲ್ಡ್ ಚಪ್ಪಲಿ ಹಾಕಿಕೊಂಡಿದ್ದಳು.>> ಏರಿದಷ್ಟೂ ಇನ್ನೂ ಏರುವಾಸೆ! ಆತನ ಎತ್ತರಕ್ಕೆ ಸಾಟಿಯಾಗಬೇಡವೇ? ಆತ ಎತ್ತರ ಎಷ್ಟೆಂದು ಯಾರಿಗೆ ಗೊತ್ತು...! :)

:) :) ನಂಗೆ ಗೊತ್ತಿತ್ತು ಈ ಪ್ರಶ್ನೆ ಬರತ್ತೆ ಅಂತ. <ಆತನ ಎತ್ತರಕ್ಕೆ ಸಾಟಿಯಾಗಬೇಡವೇ?> ನಿಜ ನಿಜ ಧನ್ಯವಾದ ಹೆಗಡೆಯವರೇ

ಚಿಕ್ಕೂ, ಚುರುಮುರಿ ರುಚಿಯಾಗಿದೆ. 29ನೆಯ ಕಾಳು ಸತ್ಯ, ನನ್ನ ವಿಷಯದಲ್ಲೂ ಸಹ!

:) ಧನ್ಯವಾದ ನಾಗರಾಜವ್ರೆ ನಮ್ಮ ಅಪ್ಪನೂ ಸರ್ಕಾರಿ ನೌಕರನಾಗಿರುವುದರಿಂದ ಅವರು ಅವರ ಕಚೇರಿಯಲ್ಲಿ ನಡೆದ ಈ ಪ್ರಸಂಗ ಹೇಳಿದ್ದರು.