ಬನ್ನಿರಯ್ಯ ದರುಶನಕೆ ಹನುಮನ ನೋಡೋಕೆ..

To prevent automated spam submissions leave this field empty.

ನಮ್ಮೂರ ದೇವರಾದ ಶ್ರೀ ಮುಖ್ಯಪ್ರಾಣ ದೇವರ ಕುರಿತಾಗಿ ಬರೆದ ಎರಡು ಪದ್ಯಗಳು...


 


ಬನ್ನಿರಯ್ಯ ದರುಶನಕೆ ಹನುಮನ ನೋಡೋಕೆ..


ನಮ್ಮ ಮಾರಂಡಹಳ್ಳಿಯ ಹನುಮನ ದರುಶನಕೆ..


 


ನಾನೂರು ವರುಷದ ಇತಿಹಾಸದ ಹನುಮನು..


ವರದರಾಜ ಶ್ರೀದೇವಿ ಭೂದೇವಿ ಸನ್ನಿಧಿಯಲಿ ನಿಂತಿಹನು..


 


ಅಭಯ ಹಸ್ತವ ನೀಡುತ ನಿಂತಿಹನು..


ಭಕ್ತರ ಮೊರೆಗಳ ಆಲಿಸುತ ನಿಂತಿಹನು...


 


ಸೀತಾರಾಮ ಲಕ್ಷ್ಮಣ ಸಮೇತ ಉತ್ಸವಕೆ ಹೊರಟಿಹನು..


ಭಕ್ತರ ಪೂಜೆಯ ಸ್ವೀಕರಿಸುತ ಊರನು ಕಾಯುತಲಿಹನು.. 


 


ಬನ್ನಿರಯ್ಯ ದರುಶನಕೆ ಹನುಮನ ನೋಡೋಕೆ..


ನಮ್ಮ ಮಾರಂಡಹಳ್ಳಿಯ ಹನುಮನ ದರುಶನಕೆ..


 ******************************************


ಹನುಮನ ನಂಬಿರಯ್ಯ ನಮ್ಮ ಹನುಮನ ನಂಬಿರಯ್ಯ..


ಅಂಜನಿ ಸುತನ, ವಾಯುಪುತ್ರನ, ಹನುಮನ ನಂಬಿರಯ್ಯ..


 


ಅಯೋಧ್ಯ ರಾಮನ ನೆಚ್ಚಿನ ಬಂಟನು, ಪಾವನ ಸುತನು ನಮ್ಮೀ ಹನುಮನು,


ಅಪ್ರತಿಮ ಬಲವಂತ ಹನುಮನು, ಗಂಧಮಾದನ ನಿವಾಸಿ ಹನುಮನು,


ಜಾಂಬವ ಪ್ರಿಯನಿವ ಹನುಮನು, ಕಪಿಗಳ ನಾಯಕನಿವನು ಹನುಮನು,


ಸಂಜೀವನಿಯ ತಂದವನಿವನು, ಚಿರಂಜೀವಿಯಾದವನಿವನು ಹನುಮನು..


ಹನುಮನ ನಂಬಿರಯ್ಯ ನಮ್ಮ ಹನುಮನ ನಂಬಿರಯ್ಯ..


 


ಮಾರುತಾತ್ಮಜ ಹನುಮನು ಇವನು, ಲೋಕಪೂಜ್ಯ ಹನುಮನು ಇವನು,


ವಾಗದೀಕ್ಷ ಹನುಮನು ಇವನು, ವಜ್ರನಾಕ್ಷ ಹನುಮನು ಇವನು,


ಸಂಕಟ ವಿಮೋಚನ ಹನುಮನು ಇವನು, ವೀರ ಶೂರ ದೀರ ಹನುಮನು,


ವಾರಿಧಿ ಲಂಘಿಸಿದ ಹನುಮನು ಇವನು, ಸೀತಾನ್ವೇಷಣೆಗೆ ಹೊರಟನು ಹನುಮನು,


ಹನುಮನ ನಂಬಿರಯ್ಯ ನಮ್ಮ ಹನುಮನ ನಂಬಿರಯ್ಯ..


 


ರುದ್ರವೀರ್ಯ ಹನುಮನು ಇವನು, ಪಿಂಗಲಾಕ್ಷ ಹನುಮನು ಇವನು,


ಮಹಾತಪಸ್ವಿ ಹನುಮನು ಇವನು, ಮಹಾತೇಜಸ್ವಿ ಹನುಮನು ಇವನು,


ಕೇಸರಿನಂದನ ಹನುಮನು ಇವನು, ಲಂಕೆಯ ಸುಟ್ಟವ ಹನುಮನು ಇವನು,


 


ಹನುಮನ ನಂಬಿರಯ್ಯ ನಮ್ಮ ಹನುಮನ ನಂಬಿರಯ್ಯ..


ಅಂಜನಿ ಸುತನ, ವಾಯುಪುತ್ರನ, ಹನುಮನ ನಂಬಿರಯ್ಯ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಜಯಂತ್, ಚೆನ್ನಾಗಿದೆ ವರ್ಣನೆ. ನಿಮ್ಮೊರಿನ ಮುಖ್ಯಪ್ರಾಣನ ನೋಡುವ ಆಸೆಯಾಗಿದೆ. ವಿಳಾಸ ತಿಳಿಸಿದರೆ ಹೋಗಣವಂದು. ನನಗೆ ಎಲ್ಲೆಲ್ಲಿ ವ್ಯಾಸರಾಜ ಪ್ರತಿಷ್ಟಿತ ಮುಖ್ಯಪ್ರಾಣನಿದ್ದಾನೋ ಅವೆಲ್ಲವನ್ನು ಆದಷ್ಟು ನೋಡುವಾಸೆ. ನಿಮ್ಮಲ್ಲಿ ಮಾಹಿತಿ ಇದ್ದರೆ ತಿಳಿಸಿ. ವಂದನೆಗಳು. ಮಧ್ವೇಶ್.

ಮಧ್ವೇಶ್ ಅವರೆ ಮೆಚ್ಚುಗೆಗೆ ಧನ್ಯವಾದಗಳು...ಮೇಲೆ ನನ್ನ ಪ್ರೊಫೈಲ್ ನಲ್ಲಿ ನನ್ನ ಬ್ಲಾಗ್ ನ ವಿಳಾಸವಿದೆ..ಅದಕ್ಕೆ ಒಮ್ಮೆ ಭೇಟಿ ಕೊಡಿ..ಅದರಲ್ಲಿ ಸುಮಾರು ೯೦ ವ್ಯಾಸರಾಜ ಪ್ರತಿಷ್ಟಾಪಿತ ಮುಖ್ಯಪ್ರಾಣದೇವರ ಚಿತ್ರಗಳಿವೆ..ಹಾಗೆ ನಮ್ಮೂರಿನ ಪ್ರಾಣದೇವರ ದರ್ಶನಕ್ಕೆ ಬರುವುದಾದರೆ ಅದರಲ್ಲೆ ವಿಳಾಸ ಇದೆ...ನಿಮಗೆ ಸದಾ ಸ್ವಾಗತ..