ಕಲ್ಲು-ಕೋಟೆಗಳ ನಡುವಲ್ಲೊಂದು ಕಣಿವೆ

To prevent automated spam submissions leave this field empty.
ನಾನು ಇತ್ತೀಚೆಗೆ ಚಿತ್ರದುರ್ಗಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಕಲ್ಲು - ಕೋಟೆಗಳನ್ನು ಕಣ್ಣಾರೆ ಕಂಡು ಅಚ್ಚರಿಪಟ್ಟೆ. 'ನಾಗರಹಾವು' ಚಿತ್ರದ ದೃಶ್ಯಗಳು ಕಣ್ಣ ಮುಂದೆ ಹಾದು ಹೋದವು.ಆದರೆ ಅಲ್ಲೊಂದು( ಚಿತ್ರದುರ್ಗ ಜಿಲ್ಲೆಯಲ್ಲಿ) ಒಂದು ಸುಂದರ ಕಣಿವೆ ಇದೆ ಎಂದು ನಿರೀಕ್ಷಿಸಿರಲಿಲ್ಲ. ಅದೇ ಮಾರಿಕಣಿವೆ.
ಅದರ ರಮಣೀಯತೆ ಕಂಡವರಿಗೆ ಗೊತ್ತು... ಬಯಲು ನಾಡಿನಲ್ಲೊಂದು ಅದ್ಭುತ ಬೆಟ್ಟ ಗುಡ್ಡಗಳ ಶ್ರೇಣಿ. ನಡುವೆ ಹರಿಯುತಿಹಳು ವೇದವತಿ. ಅದಕ್ಕೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟೆ 'ವಾಣಿವಿಲಾಸ ಸಾಗರ'. ಇದನ್ನು ಸುಮಾರು ೧೮೯೬ರಲ್ಲಿ ಆಗಿನ ಮೈಸೂರು ಮಹಾರಾಣಿಯವರು ಕಟ್ಟಿಸಿದರು ಎಂದು ಓದಿದ ನೆನಪು. ಇದು ಚಿತ್ರದುರ್ಗದಿಂದ ಸುಮಾರು ೪೦ ಕಿ.ಮೀ ಇರಬಹುದು. ಇಲ್ಲಿರುವ ಹಿನ್ನೀರಿನ( ಜಲಾಶಯದ ಹಿಂಭಾಗದ ನೀರು) ವಿಸ್ತಾರವನ್ನು ನಾನು ಇನ್ನೆಲ್ಲು ಕಂಡಿಲ್ಲ.

ಬೆಟ್ಟ-ಗುಡ್ಡಗಳ ಮೇಲೆ ಗಾಳಿಯಿಂದ ವಿದ್ಯುತ್ ಉತ್ಪಾದನೆ ಮಾಡುವ ಕಂಬಗಳು ಅಲ್ಲಿನ ಸೌಂದರ್ಯವನ್ನು ಹೆಚ್ಚಿಸಿವೆಯೇನು ಅಂತನ್ನಿಸಿತು. ಇದನ್ನು ನೋಡಿದ ಮೇಲೆ ನಾವು ಪ್ರಕೃತಿಯೊಂದಿಗೆ ಹೊಂದಿಕೊಂಡು( ಅದನ್ನು ಹಾಳು ಮಾಡದೆ) ನಮಗೆ ಬೇಕಾದದ್ದನ್ನು ಪಡೆದುಕೊಳ್ಳಬಹುದು ಅಂತ ಅನ್ನಿಸಿತು. ಪ್ರಕೃತಿ ಎಷ್ಟು ದಯಾಮಯಿ ನೋಡಿ.. ಬಯಲುಸೀಮೆಗೆಲ್ಲ ಇದೇ ಜೀವ ಜಲ.

ಚಿತ್ರಗಳನ್ನು ಇಲ್ಲಿ ನೋಡಿ

- ಜೈ ಕರ್ನಾಟಕ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾನು ಎರಡು ವರ್ಷಗಳ ಹಿಂದೆ ತೆಗೆದಿದ್ದ ಈ ಫೋಟೊ ನೋಡಿ:
Mari Kanive

ವಿಕಿಪೀಡಿಯದಲ್ಲಿ [:http://en.wikipedia.org/wiki/Mari_Kanive|ಮಾರಿ ಕಣಿವೆ ಬಗ್ಗೆ ಪುಟವನ್ನೂ ನಾನು ಪ್ರಾರಂಭಿಸಿದ್ದೆ].

ಇದಲ್ಲದೆ, ವಿಕಿಮ್ಯಾಪಿಯಾದಲ್ಲಿ ಮಾರಿ ಕಣಿವೆಯ ಸ್ಯಾಟಲೈಟ್ ಚಿತ್ರ ಕೂಡ ನೋಡಬಹುದು.

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"