LG ಅಂದರೆ ಏನು?

To prevent automated spam submissions leave this field empty.

ಇಲೆಕ್ಟ್ರಾನಿಕ್ ವಸ್ತುಗಳ ತಯಾರಕ ಕಂಪೆನಿ LG ಗೊತ್ತಲಾ? LG ಅಂದರೆ ಏನು ಎಂದು ನನಗಂತೂ ಗೊತ್ತಿರಲಿಲ್ಲ. ಮೊನ್ನೆ ಅಂಗಡಿಯೊಂದರಲ್ಲಿ LG ಆಂದರೆ life is good ಎಂದು ನೋಡಿದೆ. ಇವರ ಉತ್ಪನ್ನಗಳು ಕೈಕೊಡದೆ ಕೆಲಸ ಮಾಡಿದರೆ LG ಆಗಬಹುದು!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

[:http://en.wikipedia.org/wiki/LG_Group|ವಿಕಿಪೀಡಿಯ ಪುಟದಿಂದ]...

Created in 1947 as "Lucky-Goldstar", it assumed the abbreviated name of "LG" in 1995. LG is also an abbreviation of "Lucky Geumseong" (럭키금성) in South Korea, which is translated into English as Lucky Venus (Goldstar)

ಈ ಬಗ್ಗೆ ಮುಂಚೆ ಒಬ್ಬ ಸದಸ್ಯರು ಉತ್ತರ ನೀಡಿ ಕಾಮೆಂಟು ಹಾಕಿದ್ದರು. ಇಂಗ್ಲಿಷಿನಲ್ಲಿದ್ದದ್ದರಿಂದ ಅಳಿಸಿಹಾಕಲ್ಪಟ್ಟಿತು. ಉತ್ತರ ದೊರೆತದ್ದು ಮುಖ್ಯವಾಯಿತು ಎಂದು ನಂಬುತ್ತೇನೆ.

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ಯುಗಾದಿಯ ಶುಭಾಶಯದೊಂದಿಗೆ ಧನ್ಯವಾದಗಳು.
Life's Good ಎನ್ನುವುದು LG ಕಂಪೆನಿಯ ಧ್ಯೇಯವಾಕ್ಯ ಅನ್ನಿಸುತ್ತೆ.
LG ಅಂತರ್ಜಾಲ ತಾಣ ನೋಡಿ.
LG Globalದಲ್ಲಿ LG Electronics was established on October 1, 1958 (As a private Company) and in 1959 ಎಂದಿದೆ. LGE ಇದು LGಯ ಸಹಕಂಪೆನಿ.

ಒಂದಿಷ್ಟು ತರಲೆ:

LG ಅಂದರೆ Local Guardian. ನನ್ನ ಅಕ್ಕನ (ಕಸಿನ್, ಖಾಸಾ ಅಕ್ಕ ಅಲ್ಲ; ಆದರೆ ನನಗೆ ಕಸಿನ್ ಪದ ಹಿಡಿಸುವುದಿಲ್ಲ) ಮಗಳು ಬೆಂಗಳೂರಿಗೆ ಎಂಎಸ್‌ಸಿ ಓದಲು ಬಂದಾಗ ಅವಳಿಗೆ ನಾನು LG ಆಗಿದ್ದೆ. ಅವಳಿಗೆ ಹಾಸ್ಟೆಲಿನಿಂದ ನನ್ನ ಮನೆಗೆ ಅಥವಾ ಊರಿಗೆ ಹೋಗಬೇಕಿದ್ದರೆ ನಾನು ಹಾಸ್ಟೆಲಿನ ವಾ‍ರ್ಡನಿಗೆ ಪತ್ರ ಕೊಡಬೇಕಿತ್ತು. ಎರಡನೆ ವರ್ಷ ಅವಳು ಹಾಸ್ಟೆಲು ಬಿಟ್ಟಳು. ಆಗ ಆಕೆ ಹೇಳಿದಳು -"ಮಾವ, ಇನ್ನು ನೀನು LG ಅಲ್ಲ, Samsung" :)

ಜಗತ್ತಿನ ಕೆಲವು ಖ್ಯಾತ ಕಂಪೆನಿಗಳ ಹೆಸರುಗಳ ಉಗಮದ ಬಗ್ಗೆ ವಿವರ ಬೇಕಿದ್ದಲ್ಲಿ ಓದಿ - [http://www.anvari.org/fun/Computer/How_Company_Names_Came_About.html|http://www.anvari.org/fun/Computer/How_Company_Names_Came_About.html]. Oracle ಬಗ್ಗೆ ಕೊಟ್ಟ ತರಲೆ ವಿವರಣೆ ಓದಿ :)

ಹಾಗೆಯೇ -

IBM = I Blame Microsoft

-ಪವನಜ
-----------
[http://www.vishvakannada.com/|Vishva Kannada]
Think globally, Act locally